Wednesday, 11th December 2024

ಆಸ್ತಿ ಅಂತಸ್ತಿನ ಜತೆ ಇರುವ ಅಹಂಕಾರನ ಬಿಟ್ಟುಬಿಡಿ

ಪರಿಶ್ರಮ

ಪ್ರದೀಪ್ ಈಶ್ವರ‍್

parishramamd@gmail.com

ಆಸ್ತಿ, ಅಂತಸ್ತಿನ ಜತೆ ಬಹಳಷ್ಟು ಜನಕ್ಕೆ ಅಹಂಕಾರ ಅನ್ನೋದು ಬೈ ಒನ್ ಗೆಟ್ ಒನ್, ತರಹ ಬಂದು ಬಿಡುತ್ತೆ. ಆಸ್ತಿ ಬೆಳೆದಂತೆ ಅಹಂಕಾರವೂ ಅದರ ಜತೆ ತುಂಬಾ ಬೆಳೆದು ಬಿಡುತ್ತದೆ.

ಆಕಾರಣಕ್ಕಾಗಿಯೇ ಇಂದು ದೇಶದಲ್ಲಿ ತುಂಬಾ ಜನಶ್ರೀಮಂತರು ಇದ್ದಾರೆ ವಿನಃ ಜಾಸ್ತಿ ವಿಜ್ಞಾನಿಗಳಿಲ್ಲ, ಕಾರಣ ಅಹಂಕಾರ ಪಟ್ಟಷ್ಟು ಮನುಷ್ಯನ ಜ್ಞಾನ ಎಲ್ಲೋ ಒಂದು ಕಡೆ ಕಡಿಮೆ ಆಗುತ್ತದೆ. ಈ ಅಹಂಕಾರ, ದುರಹಂಕಾರ ಬಹಳಷ್ಟು ಜನಕ್ಕೆ ಕೇರ್ ಆ- ಅಡ್ರೆಸ್ ತರಹ ಆಗಿರುತ್ತದೆ. ಇನ್ನೂ ಬಹಳಷ್ಟು ಜನಕ್ಕೆ ಅದೊಂದು Habit ತರಹ ಆಗಿರುತ್ತದೆ. ಆ ಅಹಂಕಾರ ಪಟ್ಟರೆ ಜೀವನದಲ್ಲಿ ಅದೋಗತಿಗೆ ಇಳಿದು ಹೋಗಿಬಿಡುತ್ತೀವಿ. ಆದರೆ ಅಹಂಕಾರ ಪಡದೆ, ಶ್ರದ್ಧೆ ಉಳಿಸಿಕೊಂಡು ದುರಹಂಕಾರ ಪಡದೆ, ದರಿದ್ರವನ್ನುನೆನಪಿಸಿಕೊಂಡು ಬದುಕಿನ ಬಗ್ಗೆ ಒಂದು ಹೊಸ ಕಲ್ಪನೆಯನ್ನು ಇಟ್ಟುಕೊಂಡರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸ ಬಹುದು. ನಿಮಗೆ ಒಂದು ಕಥೆ ಹೇಳುತ್ತೀನಿ ಕೇಳಿ.

ಒಬ್ಬ ಯುವಕ ಇಂಗ್ಲೆಂಡಿನಲ್ಲಿ ಓದಿದ್ದ I.C.S ಅಂತ ಪರೀಕ್ಷೆಯನ್ನು ಪಾಸ್ ಆಗಿದ್ದ. ಇವತ್ತು ಅದನ್ನ I.A.S ಅಂತ ಕರೀತೀವಿ I.C.S. ಮುಗಿಸಿದ ಮೇಲೆ ಭಾರತಕ್ಕೆ ವಾಪಸ್ಸು ಆದ. ಗುಜರಾತಿನ ಸಾಬರ್‌ಮತಿ ಆಶ್ರಯದಲ್ಲಿದ್ದಂತಹ ಜತೆ ಮಹಾತ್ಮ ಗಾಂಽಜಿಯವರನ್ನ ಭೇಟಿ ಮಾಡಲು ಹೋದ. ಒಂದು ಸಲ ಗಾಂಧೀಜಿ ಯವರನ್ನು ಭೇಟಿಯಾದ. ಗಾಂಧೀಜಿಯವರ ಹತ್ತಿರ ಹೇಳಿದ ನಾನು ಇಂಗ್ಲೆಂಡಿನಿಂದ ಬಂದಿದ್ದೀನಿ, I.C.S ಪಾಸ್ ಮಾಡಿದ್ದೀನಿ. ನಿಮ್ಮ ಆಶ್ರಮ ದಲ್ಲಿ ಸ್ವಲ್ಪ ಕಾಲ ಉಳಿದು ಕೊಳ್ಳುತ್ತೀನಿ ಅಂತ. ಸರಿ ಎಂದು ಗಾಂಧಿ ಅವರು ಒಪ್ಪಿಕೊಂಡರು. ಆದರೆ ಆಶ್ರಮದಲ್ಲಿ ಉಳಿದುಕೊಳ್ಳುವುದಕ್ಕೆ ಯಾವುದೇ ರೀತಿಯಾದ ಶುಲ್ಕ ಕಟ್ಟ ಬೇಕಾಗಿರಲಿಲ್ಲ. ಆದರೆ ಆಶ್ರಮದಲ್ಲಿ ಚಿಕ್ಕ ಪುಟ್ಟ ಕೆಲಸ ಮಾಡಬೇಕಿತ್ತು.

ಸರಿ ಯಾವುದೋ ಒಂದು ಕೆಲಸ ಮಾಡೋಣ ಅಂತ ಆ ಹುಡುಗ ಅಲ್ಲೇ ಉಳಿದುಕೊಂಡ. ಮರು ದಿನ ಹುಡುಗನಿಗೆ ಬಚ್ಚಲು ತೊಳೆಯುವ ಕೆಲಸ ಕೊಟ್ಟರು. ಅವನಿಗೆ ಬಚ್ಚಲು ತೊಳೆಯುವ ಕೆಲಸಕ್ಕೆ ಹೋದಾಗ ಅಸಹ್ಯ ಪಟ್ಟು, ಗಾಂಧಿಯವರ ಬಳಿ ಹೋಗಿ ಗಾಂಧಿಯವರೇ ನಾನು I.C.S ಪಾಸ್ ಮಾಡಿದ್ದೀನಿ, ಇಂಗ್ಲೆಂಡಿ ನಿಂದ ವಾಪಸ್ ಬಂದಿದ್ದೀನಿ. ಪಾತ್ರೆ ತೊಳೆಯುವ ಕೆಲಸ, ಬಚ್ಚಲು ತೊಳೆಯುವ ಕೆಲಸ ನನ್ನ ಕೈಯಲ್ಲಿ ಆಗುವುದಿಲ್ಲವೆಂದ. ಅವಾಗ ಗಾಂಧೀಜಿ ಹೇಳುತ್ತಾರೆ, ಈ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೇನೇ ಜೀವನದಲ್ಲಿ ನೀನು ಏನಾದರೂ ಸಾಽಸುತ್ತೀಯ ಅಂತ. ಸರಿ ಎಂದು ಗಾಂಧಿ ಮಾತಿಗೆ ಗೌರವ ಕೊಟ್ಟು ಬಚ್ಚಲು ತೊಳೆಯುತ್ತಾನೆ. ಕಸ ಗುಡಿಸುತ್ತಾನೆ.

ಆಶ್ರಮದಲ್ಲಿ ಏನೆಲ್ಲಾ ಸೇವೆ ಮಾಡಬೇಕೋಮಾಡ್ತಾನೆ. ನಂತರ ಒಂದಷ್ಟು ದಿನ ಇದ್ದು ವಾಪಸ್ಸು ಹೊರಟು ಹೋಗುತ್ತಾನೆ. ವಾಪಸ್ಸು ಹೋದ ಮೇಲೆ ಆ ಹುಡುಗ ತುಂಬಾ ಎತ್ತರಕ್ಕೆ ಬೆಳೆಯು ತ್ತಾನೆ. ಯಾವ ಮಟ್ಟಕ್ಕೆ ಬೆಳೆಯುತ್ತಾನೆ ಅಂದರೆ ಕಡೆಗೆ ಬೆಳೆದು ಬೆಳೆದು ರಿಸರ್ವ್ ಬ್ಯಾಂಕ್ ಗೌವರ್ನರ್ ಜನರಲ್ ಆಗಿ ಅಂದರೆ
ರಿಸರ್ವ್ ಬ್ಯಾಂಕಿನ ಅಧ್ಯಕ್ಷನಾಗಿ ಪದವಿಯನ್ನು ಅಲಂಕರಿಸಿ ರಿಸರ್ವ್ ಬ್ಯಾಂಕ್‌ನ ಮೊದಲ ಭಾರತೀಯ ಅಧ್ಯಕ್ಷನಾದ.

ನಂತರ ಆತನಿಗೆ ಪದ್ಮವಿಭೂಷಣ ಪ್ರಶಸ್ತಿಯೂ ಬಂತು ಅಷ್ಟೇ ಅಲ್ಲ ಅದೇ ಶ್ರದ್ಧೆಯಿಂದ ಆತನ ಪತ್ನಿ ದುರ್ಗಾ ಬಾಯಿಗೂ ಪದ್ಮವಿಭೂಷಣ ಪ್ರಶಸ್ತಿ ಬಂತು. ಇಷ್ಟಕ್ಕೂ ಆ ವ್ಯಕ್ತಿಯಾರಂತೀರಾ? ಸಿ. ಡಿ. ದೇಶ್‌ಮುಖ್ ಅಂತ ಚಿಂತಾಮಣಿ ಧಾಮೋದರ್ ದೇಶ್‌ಮುಖ್ ಅಂತ ರಿಸರ್ವ್ ಬ್ಯಾಂಕ್‌ನ ಮೊದಲ ಅಧ್ಯಕ್ಷರು. ಅಷ್ಟೇ ಯಾಕೆ ಜವಾಹರ ಲಾಲ್ ನೆಹರೂರವರ ಸಚಿವ ಸಂಪುಟದಲ್ಲಿ ಮೊದಲ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವತ್ತು ಗಾಂಧಿ ಹೇಳಿದರು ನಾವು ಎಷ್ಟೇ ಬೆಳೆದರೂ ಅಹಂಕಾರ ಇರಬಾರದು ಅಂತ. ಅದನ್ನಮನಸ್ಸಿನಲ್ಲಿ ಇಟ್ಟು ಕೊಂಡಿದ್ದಕ್ಕೆ ರಿಸರ್ವ್ ಬ್ಯಾಂಕ್‌ನ ಗವರ್ನರ್ ಆದ್ರೂ, ಜವಾಹರ ಲಾಲ್ ನೆಹರೂ ಸರಕಾರದಲ್ಲಿ ವಿತ್ತ ಮಂತ್ರಿ ಆದರು, ಪದ್ಮ ವಿಭೂಷಣ ಬಂತು, ಹೆಂಡತಿಗೂ ಪದ್ಮವಿಭೂಷಣ ಬಂತು.

ಅವರಿಗೂ ಆಸ್ತಿ ಇತ್ತು ಆದರೆ ಅಹಂಕಾರ ಮನೆ ಆಚೇನೆ ಇತ್ತು. ಅವರಿಗೂ ದುರಹಂಕಾರ ಇತ್ತು ಅದು ಬಾಗಿಲಿನಿಂದ ತುಂಬಾ ದೂರಾನೇ ಇತ್ತು. ಅವರಿಗೂ ಈ ಗೋಡಾ ಮಿನೇಟ್ ಮಾಡುತ್ತಿತ್ತು. ಅವರಿಗೂ ಎಲ್ಲೋ ಒಂದು ಕಡೆ ಜಲಸ್ ಅನ್ನೋದು ಇತ್ತು ಆದರೆ ಅದು ತುಂಬಾ ದೂರ ಕಾಣಿಸದೆ ಇರುವಷ್ಟು ದೂರ ಜುರಾಸಿಕ್ ಪಾರ್ಕ ತರಹನೇ ಇದ್ದು ಹೋಗುತ್ತಿತ್ತು. ಈ ತರಹ ಜೀವನ ನಡಿಯುತ್ತಾ ಇರುತ್ತದೆ. ಅದೇನೇ ಆಗಲಿ ಇನ್ನು ಮೇಲಾದರೂ ಅಹಂಕಾರ ನಿಲ್ಲಲಿ. ದುರಹಂಕಾರಕ್ಕೆ ಫುಲ್ ಸ್ಟಾಪ್‌ಬೀಳಲಿ, ನಿಮ್ಮ ಬದುಕು ರೂಪುಗೊಳ್ಳಲಿ. ಆಸ್ತಿ ಅಂತಸ್ತು ಅಪ್ಪನದ್ದು ಆದರೆ ಅಹಂಕಾರ ನಿಮ್ಮದು. ಏಕೆ ವಿದ್ಯಾರ್ಥಿಗಳೇ?
ಜೀವನದಲ್ಲಿ ಕಷ್ಟ ಎಲ್ಲರಿಗೂ ಬರುತ್ತೆ, ಆದರೆ ಕೆಲವರು ಕಷ್ಟ ಬಂದ ತಕ್ಷಣ ಕುಗ್ಗಿಹೋಗುತ್ತಾರೆ. ನಲುಗಿ ಹೋಗುತ್ತಾರೆ, ಲೈಫ್ ಮುಗಿದು ಹೊಯ್ತು ಅಂತ ಫುಲ್ ಸ್ಟಾಪ್ ಇಟ್ಟುಕೊಂಡು ಬಿಡುತ್ತಾರೆ.

ಪ್ರತಿ ಕಷ್ಟವೂ ಗೊತ್ತಿಲ್ಲದಿರೋ ಒಂದು ಪಾಠ ಹೇಳಿ ಕೊಟ್ಟಿರುತ್ತೆ. ಪ್ರತಿ ಕಣ್ಣೀರು ನಮಗೆ ಅರ್ಥವಾಗದ ಒಂದು ಅದ್ಭುತವಾದ ಪಯಣಕ್ಕೆ ಮುನ್ನುಡಿ ಬರೆದಿರುತ್ತದೆ.
ಪ್ರತಿ ಕಷ್ಟದ ನಂತರವೂ ಆಗ್ತಕಂತಹ ನಮ್ಮ ಮನಸ್ಸಿನ ಭಾವನೆಗಳ ಬದಲಾವಣೆಯಲ್ಲಿ ಅಧ್ಭುತವಾದ ಭವಿಷ್ಯದ ಕಲ್ಪನೆ ಇರುತ್ತದೆ. ಏನೋ ಸಾಧಿಸಬೇಕು ಅಂತ ಎಷ್ಟೇ ಪ್ರಯತ್ನ ಪಟ್ಟರೂ ಗೊತ್ತಿಲ್ಲದೆ ಇರೋ ಗೊಂದಲ, ಕನ್ ಫ್ಯೂಷನ್ ನಮ್ಮನ್ನಡಾಮಿನೇಟ್ ಮಾಡುತ್ತಿರುತ್ತೆ. ಇಷ್ಟರ ಮಧ್ಯೆ ಕಷ್ಟವನ್ನು ತಟ್ಟುಕೋಬೇಕು. Resist ಮಾಡಬೇಕು, ಕಣ್ಣೀರನ್ನುಕಷ್ಟ ಪಟ್ಟಾದರೂ ತಡೀ ಬೇಕು ಜೀವನದಲ್ಲಿ ಗೆಲುವಿನ ಕಡೆ, ಗಮ್ಯದ ಕಡೆ Concentrate ಮಾಡಬೇಕು ಎಂದು ಆಸೆ ನಿಮಗೆಲ್ಲರಿಗೂ ಇರುತ್ತೆ.

ಪ್ರೀತಿಯ ಸ್ನೇಹಿತರೆ, ಕಷ್ಟ ಯಾರಿಗೆ ಇರಲ್ಲ, ಕೂಲಿ ಮಾಡೋದರಿಂದ,ಬೆಂಝ್ ಕಾರ್‌ನಲ್ಲಿ ಓಡಾಡೋವರೆಗೂ ಅವರದೇ ಆದಂತಹ ಕಷ್ಟ ಅವರನ್ನ ರೂಲ್ ಮಾಡ್ತಿರುತ್ತೆ. ಬಡವರಿಗೆ ಒಂದು ತರಹಕಷ್ಟ, ಶ್ರೀಮಂತರಿಗೆ ಒಂತರಹದ ಕಷ್ಟ, ಮಧ್ಯಮವರ್ಗದವರಿಗೆ ಇನ್ನೊಂದು ರೀತಿಯ ಕಷ್ಟ. ಪ್ರತಿನಿತ್ಯಸಿಗದಿರುವ ಕೂಲಿ ಸಿಗಲಿಲ್ಲವೆಂದರೆ ಅದೇ ದೊಡ್ಡ ಕಷ್ಟ, ಹಾಕಿರೋ ಚೀಟಿ ದುಡ್ಡು ಕೈಗೆ ಬರದೆ ಇದ್ದರೆ ಮಧ್ಯಮವರ್ಗದವರಿಗೆ ಅದೇ ದೊಡ್ಡ ಕಷ್ಟ, ಟ್ಯಾಕ್ಸ್ ಆಫೀಸರ್ ಯಾವಾಗ ರೈಡ್ ಮಾಡುತ್ತಾರೋ ಅನ್ನೋ ಯೋಚನೆಯಲ್ಲೇ ಶ್ರೀಮಂತರು ಬದುಕುತ್ತಾರೆ, ಅದೇ ಅವರಿಗೆ ದೊಡ್ಡ ಕಷ್ಟ.

ನೋಡಿ ಈ ಮೂರು ಜನರ ಲೈಫಲ್ಲೂ ದುಡ್ಡು ಕೆಲಸ ಮಾಡುತ್ತಿರುತ್ತೆ. ಆದರೂ ದುಡ್ಡು ಇಲ್ಲದೆ ಇರುವವನೂ ಕಷ್ಟ ಅಂತಿದ್ದಾನೆ, ಸ್ವಲ್ಪ ಇರೋನು ಕಷ್ಟ ಅಂತಿದ್ದಾನೆ, ಎಲ್ಲ ಇರೋನು ಕಷ್ಟ ಅಂತಿದ್ದಾನೆ. ಅಂದರೆ ಅರ್ಥ ಮಾಡಿಕೊಳ್ಳಬೇಕಾಗಿರೋದು ಕಷ್ಟ ಅನ್ನೋದು ಅವರವರ ಮನಸ್ಥಿತಿಗೆ ತಕ್ಕಂತೆ ಇರುತ್ತದೆ ವಿನಃ ಅದು ದುಡ್ಡಿನಿಂದಾನೋ, ಸ್ಟೇಟಸ್ ಇಂದಾನೋ ಗ್ರೇಟ್ ಆಗಲ್ಲ. ನೆಮ್ಮದಿಯನ್ನು ಹುಡುಕಬೇಕು ಅಂದರೆ ಕಷ್ಟ ಬಂದಾಗಲೂ ಸಹನೆಯಿಂದ ಇರಬೇಕು, ಪೇಷನ್ಸ್ ಇರಬೇಕು, ಗೆದ್ದೇ ಗೆಲ್ಲು ತ್ತೀವಿ ಅನ್ನೋ ಭರವಸೆ ಇರಬೇಕು, ನಿಮಗೆ ಒಂದು ಕಥೆ ಹೇಳ್ತಿನಿ ಕೇಳಿ.

ಒಂದು ದೇವಸ್ಥಾನ ಇರುತ್ತೆ. ಆ ದೇವಸ್ಥಾನದಲ್ಲಿ ದೇವರು ಕಲ್ಲಿನಿಂದ ಆಗಿರುತ್ತಾನೆ. ಆ ದೇವಸ್ಥಾನಲ್ಲಿರು ವಂತಹ ನೆಲ ಸಹ ಕಲ್ಲಿನಿಂದಲೇ ಆಗಿರುತ್ತದೆ. ಕೆಳಗಡೆ ಇರೋ ಕಲ್ಲು ಒಂದು ಸಲ ದೇವರ ಕಲ್ಲನ್ನು ಕೇಳುತ್ತದೆ. ದೇವರೇ  Once up on a time ನೀನು ಕಲ್ಲು, ನಾನು ಕಲ್ಲು, ಆದರೆ ಇವತ್ತು ನಿನ್ನನ್ನು ಪೂಜೆ ಮಾಡುತ್ತಾರೆ, ಅಭಿಷೇಕ ಮಾಡುತ್ತಾರೆ ,ನಿನಗೆ ನೈವೇದ್ಯ ಮಾಡುತ್ತಾರೆ. ನನ್ನನ್ನು ಮಾತ್ರ ಯಾಕೆ ಕಾಲಲ್ಲಿ ತುಳೀತಾರೆ ಅಂತ. ಅವಾಗ ದೇವರು ಕಲ್ಲು ಕೆಳಗಡೆ
ಇರೋ ಕಲ್ಲಿಗೆ ಹೇಳುತ್ತೆ. ಮಗನೆ ಅವತ್ತು ಶಿಲ್ಪಿ ಕೆತ್ತಲು ಬಂದಾಗ ಒಂದು ಏಟಿಗೆ ಪೀಸ್ ಆದೆ, ಎಷ್ಟು ಏಟು ತಟ್ಟುಕೊಂಡಿದ್ರೆ ಇವತ್ತು ನಾನು ದೇವಸ್ಥಾನದಲ್ಲಿರೋ ದೇವರು ಆಗ್ತಿರ್ತೀನಿ ಅಂತ ಇದರ ಅರ್ಥ ಏನು? No Pain, No Gain ಜೀವನದಲ್ಲಿ ಕಷ್ಟ ಬಂದಾಗ ಎಷ್ಟು ಜೀವನದಲ್ಲಿ ಕಷ್ಟಬಂದಾಗ ಎಷ್ಟು ತಡೆದುಕೊಳ್ಳು
ತ್ತೀವೋ, ರೆಸಿಸ್ಟ್ ಮಾಡ್ತೀವೋ ಅಷ್ಟು ಮೇಲೆ ಬೆಳಿತೀವಿ.

ನಡೆಯುವವನೆ ಎಡವುತ್ತಾನೆ, ಓಡುವವನೆ ಬೀಳ್ತಾನೆ, ನಿಂತು ಕೊಂಡಿರುವವನು ಯಾವತ್ತು ಎಡವಲ್ಲ ಡೀಯರ್ಸ್. ಎಷ್ಟೇ ಕಷ್ಟ ಬರಲಿ, ನೋವಾಗಲಿ ಸಹನೆ ಕಳೆದುಕೊಳ್ಳಬೇಡಿ, ತಾಳ್ಮೆ ಕಳ್ಕೊಬೇಡಿ. ಜೀವನದಲ್ಲಿ ಗೆದ್ದೇ ಗೆಲ್ತೀವಿ ಅನ್ನೋ ಭರವಸೆಯನ್ನ ಉಳಿಸಿಕೊಳ್ಳಿ. Be Positive. ಈ ಜಗತ್ತಿನಲ್ಲಿ ನಿನ್ನನ್ನ ಸೋಲಿಸುವ ತಾಕತ್ತು ನಿನಗೆ ಮಾತ್ರ ಇದೆ. ನಿನ್ನನ್ನು ಬಿಟ್ಟು ಈ ಜಗತ್ತಲ್ಲಿ ಸೋಲಿಸುವ ತಾಕತ್ತು ಯಾರಿಗೂ ಇಲ್ಲ. ಸಹನೆ ಇರಲಿ ಕಷ್ಟ ಬಂದಾಗ ಸ್ವಲ್ಪ ದಿನ ಇರುತ್ತೆ. ಅಧ್ಭುತವಾದ ದಿನಬರದೆ ಇರುತ್ತಾ ಎಂಬ ಭರವಸೆ ಇರಲಿ.

ಕತ್ತಲಿನ ಜಗತ್ತಿನಿಂದ ಬೆಳಕಿನ ಕಡೆಗೆ ನಡೆದೇ ನಡೀತೀನಿ ಎನ್ನುವ ಹೋಪ್ ಇರಲಿ, ಜೀವನದಲ್ಲಿ ಚೆನ್ನಾಗಿದ್ದಾಗ ಎಲ್ಲಾ ಚೆನ್ನಾಗಿರುತ್ತೆ ಡೀಯರ್ಸ್, ಒಂದು ಸಲ ಕತ್ತಲಿಗೆ ಹೋಗಿ ನೋಡಿ, ನಿಮ್ಮ ನೆರಳು ಕೂಡ ನಿಮ್ಮನ್ನ ಫಾಲೋ ಮಾಡಲ್ಲ. ಒಂದಂತು ಸತ್ಯ dears ಒಂದು ಕಲ್ಲನ್ನದೇವರು ಮಾಡ್ತಿವಿ ನಾವು. ಆದರೆ ನಮ್ಮ ದುರಂತ ನೋಡಿ ಕಲ್ಲನ್ನ ದೇವರು ಮಾಡ್ತೀವಿ. ಆದರೆ ಮನುಷ್ಯ ನನ್ನ ಮನುಷ್ಯ ಮಾಡಕ್ಕೆ ಆಗ್ತಿಲ್ಲ ಯಾಕೆ? ಏನು? ಗೊತ್ತಿಲ್ಲ ಉತ್ತರ ನೀವೇ ಹೇಳಬೇಕು.