ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
journocate@gmail.com
ಸೀಟಿನಿಂದ ಹೆಚ್ಚು ಹೊತ್ತು ಎದ್ದು ಹೋಗುವ ಸಂದರ್ಭದಲ್ಲಿ ಫ್ಯಾನನ್ನು ಮರೆಯದೆ ಆರಿಸಿ ಹೋಗುವುದು, ಟಾಯಿಲೆಟ್‌ನಲ್ಲಿ ತೊಟ್ಟಿಕ್ಕದಂತೆ ನಿಗಾ ವಹಿಸುವುದು ಮುಂತಾದ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದಕ್ಕೆ ಯಾರೇನೂ ವಿಶ್ವೇಶ್ವರಯ್ಯನವರಷ್ಟು ಅಪ್ಪಟ ಪ್ರಾಮಾಣಿಕರಾಗಿರಬೇಕಿಲ್ಲ.
ಇದು ನೌಕರಿ ಮಾಡುವ ಸಂಸ್ಥೆಗೆ ನಾವು ತೋರಬಹುದಾದ ಅತಿ ಕಡಿಮೆ ಪ್ರಮಾಣದ ನಿಷ್ಠೆ. ಅವು, ಜನಪರ ಕಾಳಜಿಯ ಉದ್ದುದ್ದ ಭಾಷಣ ಮಾಡದೆಯೂ ಕೃತಿಗೆ ಇಳಿಸಬಹುದಾಂತಹ ಸಣ್ಣ ಅವಕಾಶಗಳು. ಕಂಪನಿಯ ಮಾಲೀಕನ ಬಗ್ಗೆ ಏನೇ ಅಸಮಾಧಾನವಿದ್ದರೂ, ಅದನ್ನು ವ್ಯಕ್ತಪಡಿಸಲು ಇಂತಹ ಅವಕಾಶಗಳನ್ನು ಕಳೆದು ಬಾರದು. ಆಟಗಾರನೊಬ್ಬನ ಬದ್ಧತೆಯನ್ನು ಆತನ ಪರಿಚಯವಿಲ್ಲದಿದ್ದರೂ ಆತನ ಆಂಗಿಕ ಭಾಷೆಯಿಂದಲೇ ಹೇಗೆ ಪತ್ತೆ ಹಚ್ಚಬಹುದೋ ಹಾಗೆಯೇ ಕಚೇರಿಯೊಂದರ ಸಿಬ್ಬಂದಿ ವರ್ಗ ಕಂಪನಿಗೆ ನಿಷ್ಠರೋ ಅಲ್ಲವೋ ಎಂಬುದು ಕೂಡ ಸಣ್ಣಪುಟ್ಟ ವಿಷಯಗಳಲ್ಲಿ ಅವರು ವರ್ತಿಸುವ ರೀತಿಯಿಂದಲೇ ತಿಳಿಯುತ್ತದೆ.
1818ರ ಮೊದಲ ದಿನದಂದು ನಡೆದ ಕೋರೆಗಾಂವ್ ಕದನ ಐತಿಹ್ಯ. ಎರಡನೇ ಬಾಜಿ ರಾವ್ ಪೇಶ್ವೆಯ ಮರಾಠಾ ಸೈನ್ಯ ಬ್ರಿಟಿಷ್ ಈ ಇಂಡಿಯಾ ಕಂಪನಿ ಯಿಂದ ಪುಣೆಯನ್ನು ಮತ್ತೆ ಸ್ವಾಽನಕ್ಕೆ ಪಡೆಯಲು ಸಜ್ಜಾಗಿ ರುತ್ತದೆ. ಪರಾಕ್ರಮಿ ಪೇಶ್ವೆಯ ಬೃಹತ್ ಸೈನ್ಯದ ವಿರುದ್ಧ ಕ್ಯಾಪ್ಟನ್ ಸ್ಟಾಂಟನ್ ನೇತೃತ್ವದಲ್ಲಿ ಬಾಂಬೆ ಸೈನ್ಯ ತೋರಿದ ಕೆಚ್ಚೆದೆ ಇಂದಿಗೂ ಬೆರಗು ಮೂಡಿಸುತ್ತದೆ. ಸೈನ್ಯವನ್ನು ಪುಣೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯದಲ್ಲಿ ಎದುರಾದ ಪೇಶ್ವೆಯ ಮುಂಚಲನ ತಂಡ ಎದುರಾಗುತ್ತದೆ. ಎರಡು ಸಾವಿರ ಮರಾಠರ ವಿರುದ್ಧ ತನ್ನೆರಡು ಬೆಟಾಲಿಯನ್ ಸೋಲುಣ್ಣಬಹುದೆಂಬ ಭಯದಲ್ಲಿ ಕರ್ನಲ್ ಬರ್ ಹೆಚ್ಚಿನ ಪಡೆಗಳ ಸಹಾಯ ಕೋರಿ ತುರ್ತು ಸಂದೇಶ ಕಳಿಸುತ್ತಾನೆ.
ನಲವತ್ತೊಂದು ಮೈಲಿ ದೂರದಲ್ಲಿನ ಬಾಂಬೆ ಸೈನ್ಯ ತಕ್ಷಣ ಹೊರಡುತ್ತದೆ. ಇಡೀ ರಾತ್ರಿ ಕಾಲ್ನಡಿಗೆಯ ಪಯಣ. 27 ಮೈಲಿ ಕ್ರಮಿಸಿ ಹೈರಾಣಾದ ಸುಮಾರು 900 ಜನರ ಸೈನ್ಯ ಕೋರೆಗಾಂವ್ ಎಂಬ ಪುಟ್ಟ ಹಳ್ಳಿ ತಲುಪುತ್ತಾರೆ. ಬೆಳಗ್ಗೆ ಸುಮಾರು ಹತ್ತು ಗಂಟೆ. ನಿದ್ದೆ, ವಿರಾಮ, ಅನ್ನ, ನೀರಿಲ್ಲದ ಸೈನ್ಯ ವಿರಮಿಸಲು ಸಿದ್ಧರಾಗುವಷ್ಟರಲ್ಲಿ ಪೇಶ್ವೆ ಸೈನ್ಯ ಧುತ್ತನೆ ಎದುರಾಗುತ್ತಾರೆ. ಎರಡು ಆರು ಪೌಂಡ್ ಸಾಮರ್ಥ್ಯದ ಫಿರಂಗಿ, 100 ಜನರ ಆರ್ಟಿಲರಿ ತುಕಡಿ, 24 ಐರೋಪ್ಯ ಗನ್ನರ್‌ಗಳು, ದೇಸೀ ಚಾಲಕರು ಮತ್ತು ಗನ್ ಲಷ್ಕರ್‌ಗಳು, ಇವರನ್ನು ಬಿಟ್ಟರೆ ಸುಮಾರು 500 ಮಂದಿ ಭಾರತೀಯ ಕಾಲಾಳುಗಳು.
ಅಶ್ವದಳ ಮತ್ತು ಇನ್ಯಾಂಟ್ರಿ ಯೋಧರನ್ನು ಹೊಂದಿದ ಪೇಶ್ವೆ ಸೈನ್ಯ. ಮೊದಲಿಗೆ, ಈರ್ವರೂ ಕಲ್ಲುಕಟ್ಟಡಗಳಲ್ಲಿ ರಕ್ಷಣಾತ್ಮಕ ಸ್ಥಾನಗಳನ್ನು ಆಕ್ರಮಿಸಿಕೊಳ್ಳು ತ್ತಾರೆ. ಮನೆ ಮನೆಯೂ ರಣರಂಗವಾಗಿ ಪರಿವರ್ತಿತವಾಗುತ್ತವೆ. ಕೈಕೈ ಮಿಲಾಯಿಸುತ್ತಾರೆ. ಒಮ್ಮೆ ಇವರು ಮೇಲುಗೈ ಪಡೆದರೆ, ಮರುಕ್ಷಣ ಅವರು. ಅಶ್ವದಳದ ಬಳಕೆ ದುಸ್ತರ, ಇನ್ಯಾಂಟ್ರಿಯ ಕಾಲಾಳುಗಳೇ ಕಾದಾಡುತ್ತಾರೆ. ಆರ್ಟಿಲರಿಯ ಎರಡು ಫಿರಂಗಿಗಳೇ ನಿರ್ಣಾಯಕ ಎನ್ನುವಂಥ ಸನ್ನಿವೇಶ. ಬಾಂಬೆ ಸೈನ್ಯದ ಯೋಧರು ನಿತ್ರಾಣವಾಗಿರುತ್ತಾರೆ. ಹಸಿದ ಹೊಟ್ಟೆ. ಬಾವಿಯವರೆಗೂ ಹೋಗಿ ನೀರು ಕುಡಿಯಲಿಕ್ಕೂ ಚೈತನ್ಯವಿಲ್ಲ. ಅದೇ ಸಮಯಕ್ಕೆ ಆರ್ಟಿಲರಿ ತಂಡದ ಏಕೈಕ
ಆಫೀಸರ್ ಲೆಫ್ಟಿನೆಂಟ್ ಕಿಶೋಮ್‌ನ ತಲೆ ಕಡಿಯಲಾಗುತ್ತದೆ.
ಅವನ ಫಿರಂಗಿ ಮರಾಠಿಗರ ವಶವಾಗುತ್ತದೆ. ಅವನ ರುಂಡಮುಂಡಗಳನ್ನು ದೂರಕ್ಕೆ ಸಾಗಿಸಿ ಫಿರಂಗಿಯನ್ನು ತಮ್ಮ ವಶಕ್ಕೆ ಪಡೆಯುವಾಗ ಶವಗಳ ಸಮೂಹ ದಿಂದ, ಸತ್ತುಹೋದನೆಂದು ನಂಬಲಾಗಿದ್ದ, ಲೆಫ್ಟಿನೆಂಟ್ ಪ್ಯಾಟಿನ್ಸನ್ ಕಷ್ಟಪಟ್ಟು ಲೆದ್ದು ತನ್ನ ಗ್ರೆನೇಡಿಯರ್‌ಗಳನ್ನು ಹುರಿದುಂಬಿಸಿ ಫಿರಂಗಿಯನ್ನು ವಶಪಡಿಸಿ ಕೊಳ್ಳುವುದರಲ್ಲಿ ಸಫಲನಾಗುತ್ತಾನೆ. ನಂತರ ಕೊನೆಯುಸಿರೆಳೆಯುತ್ತಾನೆ. ಸಂಜೆಯಾಗುತ್ತದೆ. ಈ ಇಂಡಿಯಾ ಕಂಪನಿ ಸೈನ್ಯದ 12 ಗನ್ನರ್‌ಗಳು ಮಡಿದಿರು ತ್ತಾರೆ, ಎಂಟು ಮಂದಿ ಗಾಯಗೊಂಡಿರುತ್ತಾರೆ.
ಜರ್ಜರಿತರಾದ ಉಳಿದ ನಾಲ್ವರು ಶಸ್ತ್ರತ್ಯಾಗದ ಸಲಹೆ ನೀಡುತ್ತಾರೆ. ಅದನ್ನು ತಳ್ಳಿಹಾಕುವ ಸ್ಟಾಂಟನ್ನಿನ ಬೆನ್ನೆಲುಬಾಗಿ ಅರೆಜೀವವಾದ ಕಾಲಾಳುಗಳಿರುತ್ತಾರೆ. ಅವರೆಲ್ಲರೂ ಭಾರತೀಯರು. ಭಾರತೀಯರ ಇಂತಹ ವೀರಗಾಥೆ ಅದೆಷ್ಟೊ. ಮುಂದೆಂದಾದರೂ ಅವು ಗಳಲ್ಲಿ ಕೆಲವನ್ನಾದರೂ ಪ್ರಸ್ತಾಪಿಸುವ ಪ್ರಮೇಯ ಬರಬ
ಹುದು. ದೇಶಕ್ಕೆ ಐತಿಹಾಸಿಕ ತಿರುವು ನೀಡಿದ ಕಾರಣಕ್ಕಾಗಿಯಾದರೂ, ಜಾಣಮರೆವಿನ ಪಂಥಬದ್ಧ ಚರಿತ್ರಕಾರರು ಮರೆಮಾಚುವ ಸತ್ಯಗಳನ್ನು ಧೂಳು ಹೊಡೆದು ಹೊರತರಬೇಕು. ಅಂತಹ ಒಂದು ಮಹತ್ವದ ಪ್ರಸಂಗ ಕೋರೆಗಾಂವ್ ಕಾಳಗ. ಆಧುನಿಕ ಭಾರತೀಯ ಮಿಲಿಟರಿ ರೂಪುಗೊಂಡ ಅಂಶಗಳನ್ನು ಪರಿಗಣಿಸುವಾಗ ಈ ಘಟನೆಯನ್ನು ನಿರ್ಲಕ್ಷಿಸುವಂತಿಲ್ಲ.
ಈ ಪ್ರಸಂಗವೂ ಸೇರಿದಂತೆ ಭಾರತೀಯರು ವಿಲಾಯ್ತಿ ಪ್ರಭುಗಳಿಗೆ ತೋರುತ್ತಲೇ ಬಂದಿರುವ ನಿಯತ್ತು, ನಿಷ್ಠೆ ಅವರ ಧೈರ್ಯ-ಸ್ಥೈರ್ಯಕ್ಕಿಂತಲೂ ಬೆರಗು ಗೊಳಿಸುವಂಥಾದ್ದು. ಮನೋವೈಜ್ಞರೂ ಅರ್ಥೈಸಲಾಗದೇ ಬೋಳಾಗುವವರೆಗೂ ಕೂದಲು ಕಿತ್ತುಕೊಂಡು ಮೈಪರಚಿಕೊಳ್ಳಲು ಮುಂದಾಗುವಂಥಾದ್ದು. ನಿದ್ರಾ ಹಾರವಂಚಿತರಾಗಿಯೂ, ಆಯಾಸಗೊಂಡಿzರೂ, ನಿರ್ಬಲರಾಗಿ ಕುಸಿದು ಬೀಳುತ್ತಿದ್ದರೂ ಲೆಕ್ಕಿಸದೆ ಹೋರಾಡಿದ ಆ ಭಾರತೀಯರ ಮನೋಬಲವಾದರೂ ಎಂತಹದ್ದು. ಮೇಲಾಗಿ, ಅವರು ರಕ್ತಚೆಲ್ಲಿ ಜೀವಕೊಡಲು ಸಿದ್ಧರಾಗಿದ್ದುದು ಯಾವುದೊ ಕಂಡು ಕೇಳರಿಯದ ದೇಶದಿಂದ ಬಂದಿದ್ದ ವಿಚಿತ್ರ ವರ್ಣೀಯರಿಗೆ.
ಮನೆತನದ ಗೌರವವೆಂಬ ಪರಿಕಲ್ಪನೆ ಅದಕ್ಕೆ ಮುಂಚೆಯೂ ಇತ್ತು, ನಂತರವೂ ಕಂಡುಬಂದ ಅಂಶ. ಕ್ಯಾಪ್ಟನ್ ಸ್ಟಾಂಟನ್ನಿಗೆ ಅವರು ತೋರಿದ ಬದ್ಧತೆಯನ್ನು ಅವನು ತನ್ನ ಅಸಾಧಾರಣ ಗುಣದಿಂದ ಗಳಿಸಿಕೊಂಡದ್ದೇ? ಅಥವಾ ಅವರಿಗೆ ಅವನ ನಿರ್ದಾಕ್ಷಿಣ್ಯ ಶಿಸ್ತು ಸೃಷ್ಟಿಸಿದ ಭಯವೇ? ಅಥವಾ ಕಷ್ಟ ಸಹಿಷ್ಣುತೆ ಅವರ ರಕ್ತದ ಇತ್ತೇ? ಬಡತನವೆಂಬ ಒಂದೇ ಕಾರಣಕ್ಕಾಗಿ ಹೊಟ್ಟೆ ಹೊರೆಯಲು ಹೋರಾಡಿದ್ದಂತೂ ಅಲ್ಲ.
ಸ್ಟಾಂಟನ್ ಉತ್ತಮ ಆಫೀಸರ್, ಸರಿ. ಅವನ ಸೈನಿಕರೂ ಅವನಿಗೆ ಸರ್ವಸ್ವವನ್ನೂ ಸಮರ್ಪಿಸಿದ್ದರು. ಒಳ್ಳೆಯ ನಾಯಕ, ಅಪ್ರತಿಮ ಸೈನಿಕರು. ಒಳ್ಳೆಯ ಈಡು-ಜೋಡಿ. ಎದ್ದುಕಾಣುವುದು ಅವರ ಸಾಹಸ, ಶೌರ್ಯಗಳಷ್ಟೇ ಅಲ್ಲ, ಸ್ವಾಮಿನಿಷ್ಠೆ. ಜನರಲ್ ಡಯರ್ ಆದೇಶಕ್ಕೆ ಓಗೊಟ್ಟು ಜಲಿಯನ್ ವಾಲಾ ಬಾಗ್‌ನಲ್ಲಿ ಭಾರತೀಯರೇ ಸಹ-ಭಾರತೀಯರನ್ನು ಬಲಿ ತೆಗೆದುಕೊಂಡದ್ದಾದರೂ ಹೇಗೆ, ಬಂದೂಕು ಹಿಡಿದ ಒಬ್ಬನಾದರೂ ಆದೇಶವನ್ನು ಧಿಕ್ಕರಿಸಿ ಡಯರನ್ನು ಗುಂಡಿಕ್ಕಿ ಕೊಲ್ಲಲಿಲ್ಲವೇಕೆ ಎಂಬ ಪ್ರಶ್ನೆ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಕಂಡಿತ್ತು. ಈ ಪ್ರಶ್ನೆಯನ್ನು ಒಂದು ಕ್ಷಣ ಒತ್ತರಿಸೋಣ.
ಇಂದಿಗೂ, ಮಿಲಿಟರಿಯಲ್ಲಿ, ಕಠಿಣಾತಿಕಠಿಣ ತರಬೇತಿ ಕೊಡಲಾಗುತ್ತದೆ. ನಯವಂತಿಕೆಗೆ ಅಲ್ಲಿ ಅವಕಾಶವಿಲ್ಲ. ತಪ್ಪು ಮಾಡಿದರೆ ಶಿಕ್ಷೆ ಉಗ್ರವಾಗಿರುತ್ತದೆ. ಅದೆಲ್ಲ ತರಬೇತಿಯ ಒಂದು ಅವಿಭಾಜ್ಯ ಅಂಗವೇ. ಶಿಕ್ಷಿಸಿದರೆಂದು ಯುದ್ಧದಲ್ಲಿ ಸೈನಿಕನು ಮೇಲಧಿಕಾರಿ ಯತ್ತ ಗನ್ನು ತಿರುಗಿಸುವುದಿಲ್ಲ. ಸ್ವಾಮಿನಿಷ್ಠೆಯ ಜತೆಗೆ
ರಾಷ್ಟ್ರಭಕ್ತಿ ಯೂ ಕೆಲಸ ಮಾಡುತ್ತದೆ. ಉಪ್ಪುಂಡ ಮನೆಗೆ ದ್ರೋಹ ಬಗೆಯಬಾರದೆಂಬ ಭಾರತೀಯ ನಂಬಿಕೆಯೂ ಅದರದ್ದೇ ಪಾತ್ರ ವಹಿಸುತ್ತದೆ. ನಿಷ್ಠೆಯ ಉಗಮಸ್ಥಾನವ ಕುರಿತು ನಾನು ಮೇಲೆತ್ತಿರುವ ಪ್ರಶ್ನೆಗಳು ಸಹಜವಾಗಿ ಭಾರತವನ್ನು ಬಗ್ಗು ಬಡಿದು ಬರಿದು ಮಾಡಿದ ವಸಾಹತುಶಾಹೀ ಶಕ್ತಿಗಳನ್ನೂ ಕಾಡಿತ್ತು. ಬ್ರಿಟಿಷ್ ಇತಿಹಾಸಕಾರ ಫಿಲಿಪ್ ಮೇಸನ್ ತನ್ನ ಅ ಮ್ಯಾಟರ್ ಆಫ್ ಆನರ್ ಪುಸ್ತಕದಲ್ಲಿ ಈ ಪ್ರಶ್ನೆಗಳನ್ನೆತ್ತಿ ಅದಕ್ಕೆ ಉತ್ತರವನ್ನೂ ಕಂಡುಕೊಂಡಿದ್ದಾನೆ.
ಬ್ರಿಟಿಷ್ ಪಕ್ಷಪಾತ ಪುಸ್ತಕದಲ್ಲಿ ಢಾಳಾಗಿ ಕಾಣಿಸಿಕೊಂಡಿದೆ. ಆದರೂ, ನಮ್ಮ ದೇಶದ ರಕ್ಷಣಾ ವ್ಯವಸ್ಥೆಯ ಮೂಲ, ಬ್ರಿಟಿಷರ ಸುದೀರ್ಘ ಆಳ್ವಿಕೆಯಲ್ಲಿ ಅದರ ಐತಿಹಾಸಿಕ ಪಾತ್ರ, ಜಾತಿ ವ್ಯವಸ್ಥೆ, ಸಿಪಾಯಿ ದಂಗೆಯ ಉಗಮ, ಮುಂತಾದ ವಿಷಯಗಳನ್ನು ಓದಿಸಿಕೊಂಡು ಹೋಗುವ ರೀತಿಯಲ್ಲಿ ದಾಖಲಿಸಿದ್ದಾನೆ.
ಭಾರತೀಯ ಸೈನಿಕನ ನಿಷ್ಠೆಯ ಬೇರನ್ನು ಹಿಂದೂ ಧರ್ಮದಲ್ಲಿ ಪ್ರತಿಪಾದಿಸಲ್ಪಟ್ಟ ಆತ್ಮಗೌರವದ ಪರಿಕಲ್ಪನೆಯಲ್ಲಿ ಶೋಧಿಸಲು ಸಮರ್ಥನಾಗಿದ್ದಾನೆ. ಇದಕ್ಕಾಗಿ ಅವನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವ ಮುನ್ನವೇ ಆ ಪರಿಕಲ್ಪನೆ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಗಳಲ್ಲಿ ಪ್ರತಿಪಾದಿಸಲ್ಪಟ್ಟ ಉನ್ನತ ಅಂಶಗಳ ಹತ್ತಿರ-ಹತ್ತಿರ ಬರುತ್ತದೆ ಆ ಕಾರಣಕ್ಕಾಗಿ ಈ ಮೂರೂ ಪ್ರಮುಖ ಮತಸ್ಥರೂ ಒಟ್ಟಿಗೆ ಕೂಡಿ, ಕಲೆತು, ದುಡಿದು, ಜೀವತ್ಯಾಗಕ್ಕೂ ಸಿದ್ಧರಾಗಿ ಬದುಕುವುದಕ್ಕಾಯಿತು ಎಂದು ಪಕ್ಷಪಾತವಾಗಿ ವಿಶ್ಲೇಷಿಸುತ್ತಾನೆ.
ವೀರೋಚಿತವಾಗಿ ಜೀವದ ಹಂಗು ತೊರೆದು ಹೋರಾಡಿದ ಈ ಇಂಡಿಯಾ ಕಂಪನಿಯ ಸೈನಿಕರಲ್ಲಿ ಬಹಳಷ್ಟು ಮಂದಿ ಬಾಬಾ ಸಾಹೇಬ್ ಅಂಬೇಡ್ಕರರ ಮಹರ್
ಸಮುದಾಯಕ್ಕೆ ಸೇರಿದವರು. ಈ ಕಾಳಗ ಸಂಭವಿಸಿ 109 ವರ್ಷಗಳು ಸಂದಿವೆಯೆಂದು ಅಂಬೇಡ್ಕರ್ 1927ರ ಜನವರಿ 1 ರಂದು ಅಲ್ಲಿಗೆ ಭೇಟಿ ನೀಡಿದ್ದರು. ಮೂರುವರ್ಷಗಳ ಹಿಂದೆ, ಭೀಮಾ-ಕೋರೆಗಾಂವ್ ಕಾಳಗ ಘಟಿಸಿ ಎರಡು ಶತಮಾನಗಳಾದವೆಂದೂ, ದಲಿತರು ಮೇಲ್ಜಾತಿಗೆ ಸೇರಿದ ಪೇಶ್ವೆಯ ವಿರುದ್ಧ ಮೆರೆದ ಶೌರ್ಯದ ಸಂಕೇತವೆಂದು ಅದನ್ನು ಸಂಭ್ರಮಿಸಬೇಕೆಂದು ಬೇಕೆಂತಲೇ ವಿವಾದವನ್ನು ಸೃಷ್ಟಿಸಲಾಯಿತು. ಮತ್ತೆ ಮುಖ್ಯಮಂತ್ರಿಯಾದರೆ ಟಿಪ್ಪು ಜಯಂತಿಗೆ ಸರಕಾರಿ ಪ್ರಾಯೋಜತ್ವ ಒದಗಿಸಿಕೊಡುವ ಸಿದ್ದರಾಮಯ್ಯನವರು ಕಿರಿಕ್ ಮಾಡಿದಂತೆ.
ಇತಿಹಾಸದ ಇವೆರಡೂ ಪ್ರಸಂಗಗಳನ್ನು ಮನದೊಳಗಿಳಿಸಿಕೊಂಡು ತೆಪ್ಪಗಿರುವುದು ಬಿಟ್ಟು ಅವಕ್ಕೆ ರಾಜಕೀಯ ಬಣ್ಣ ಬಳಿದು ಅವರವರ ಬೇಳೆ ಬೇಯಿಸಿ ಕೊಳ್ಳುವುದಕ್ಕೆ ಬಳಸಿ ಸಮಾಜದಲ್ಲಿ ರಾಡಿ ಎಬ್ಬಿಸುವುದು ಖಂಡನೀಯ. ಸಮರಾನುಭವಿಲ್ಲದ, ಕಲಹಪ್ರಿಯರಲ್ಲದ ದಲಿತ ಸಮುದಾಯ ವೀರಾವೇಶದಿಂದ ತಮ್ಮ ಉದ್ಯೋಗದಾತರಿಗೆ ನಿಷ್ಠೆಯಿಂದ ನಡೆದುಕೊಂಡದ್ದು ತಪ್ಪಲ್ಲ. ಅದನ್ನು ಮೇಲ್ಜಾತಿ ವಿರುದ್ಧದ ಸಂಘರ್ಷವೆಂದು ವರ್ತಮಾನದಲ್ಲಿ ತಿರುಚಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವುದು ತಪ್ಪು. ಅಂದಿನ ಸಂದರ್ಭದ ಸಂಪೂರ್ಣ ಮಾಹಿತಿ ಇಲ್ಲದೆ, ದಲಿತರೇಕೆ ಈ ಇಂಡಿಯಾ ಕಂಪನಿಗೆ ಸೇರಿದರು, ಆಂಗ್ಲರ ಪರವಾಗಿ
ನಿಂತು ಮರಾಠರ ವಿರುದ್ಧ ಸೆಟೆದು ನಿಂತದ್ದು ದೇಶವಿರೋಧಿ ನಿಲುವೆಂದು ಹೇಳುವುದೂ ತಪ್ಪು.
ಟಿಪ್ಪುವಿಗೆ ಸ್ವಾತಂತ್ರ್ಯ ಯೋಧನೆಂಬ ಹಣೆಪಟ್ಟಿ ಕಟ್ಟುವುದು ಅಷ್ಟೇ ದೊಡ್ಡ ತಪ್ಪು. ವ್ಯಂಗ್ಯವೆಂದರೆ, ಚರಿತ್ರೆಯನ್ನು ವಿಕೃತಿಗೊಳಿಸುವ ಇವರೆಲ್ಲರೂ ಸ್ವಾತಂತ್ರ್ಯೋ ತ್ತರದಲ್ಲೂ ನಿಷ್ಠೆ ತೋರುತ್ತಿರುವುದು ವಿದೇಶಿ ಮಹಿಳೆಯೊಬ್ಬಳಿಗೆ. ಅದೇ ನಿಷ್ಠೆಯನ್ನು ಆಕೆ ಬ್ರಿಟಿಷರಂತೆ ತನ್ನ ಗೂಡನ್ನು ಭದ್ರಮಾಡಿಕೊಳ್ಳಲು ದುರುಪಯೋಗ
ಮಾಡಿಕೊಳ್ಳುತ್ತಿದ್ದಾಳೆ. ಅಂಥದೇ ನಿಷ್ಠೆಯನ್ನು ವೀರಶೈವ ಮಠಾಧಿಪತಿಗಳು ಯಡಿಯೂರಪ್ಪನವರಿಗೆ ತೋರುತ್ತಿದ್ದಾರೆ. ಡಿಕೆ ಶಿವಕುಮಾರ್‌ಗೆ ಕಾವಿಯ ನಿಷ್ಠೆ ದೊರಕಬಹುದಾದರೆ, ಯಡಿಯೂರಪ್ಪನವರೇನು ತಪ್ಪು ಮಾಡಿದ್ದರು,ಪಾಪ? ಇದೀಗ ಒಲಂಪಿಕ್ಸ್‌ನಲ್ಲಿ ಮೆಡಲ್ ಗೆದ್ದವರ ಜಾತಿಯನ್ನು ಗೂಗಲ್ ಮಾಡುವ ಸಮಯ.
ಸುರೇಶ ರೈನಾ, ಎಲ್ಲಿದ್ದೀಯಪ್ಪಾ? ಕೋಕಾ ಕೋಲಾವನ್ನು ವರ್ಜಿಸಿ. ನಮ್ಮ ನೀರನ್ನು ಬಳಸಿ, ನಮಗೆ ಕೋಕ್ ಕುಡಿಸಿ ಅದರಿಂದ ಬಂದ ಲಾಭವನ್ನು ಕಂಪನಿ ಅಮೆರಿಕಗೆ ಕಳಿಸುತ್ತದೆ. ಲಾಭದಿಂದ ತನ್ನ ದೇಶದ ಆದಾಯವನ್ನು ಹೆಚ್ಚಿಸಿಕೊಂಡ ಅಮೆರಿಕ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುತ್ತದೆ.
ಅದನ್ನು ನಮ್ಮ ದೇಶದ ಮೇಲೆ ಪ್ರಯೋಗಿಸುವ ಪಾಕಿಸ್ತಾನ ನಮ್ಮ ಸೈನಿಕರನ್ನು ಕೊಲ್ಲುತ್ತದೆ. ಈ ವಾದಸರಣಿಯನ್ನು ತರ್ಕವನ್ನು ರಾಜೀವ್ ದೀಕ್ಷಿತ್ ಮಂಡಿಸು ತ್ತಿದ್ದರು. ಅವರ ನಿಷ್ಠೆ ಇದ್ದದ್ದು ಭಾರತಕ್ಕೆ. ಕೋಕ್ ಕಂಪನಿಯಲ್ಲಿ ನಿಮ್ಮ ಮಗನಿಗೆ ಉದ್ಯೋಗ ದೊರೆತರೆ ಸೇರಿಕೊಳ್ಳಲು ಉತ್ತೇಜಿಸಿತ್ತೀರೊ ಅಥವಾ ದೇಶ ದ್ರೋಹಕ್ಕೆ ಹೆದರಿ ಬೇರೆ ನೌಕರಿ ನೋಡಿಕೊಳ್ಳಲು ಹೇಳುತ್ತೀರೋ? ಭಾರತದ ಕಡುವೈರಿಯಾದ ದ ನ್ಯೂ ಯಾರ್ಕ್ ಟೈಮ್ಸ ಪತ್ರಿಕೆಯ ಸಂಪಾದಕನನ್ನಾಗಿ ನನಗೆ ಆಹ್ವಾನ ಬಂದರೆ ಸಮ್ಮತಿಸುವುದು ತಪ್ಪೇ? (ಮಾಧ್ಯಮಲೋಕದ ಭಾರತದ ವೈರಿಗಳು ನಮ್ಮ ದೇಶದ ಸಾಕಷ್ಟು ಜನರಿದ್ದಾರೆ, ಆ ಮಾತು ಬೇರೆ!) ಈ
ತರ್ಕವನ್ನು ಬೆಳೆಸುತ್ತಾ ಹೋಗಬಹುದು.