ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
ಐದು ವರ್ಷಗಳ ಹಿಂದೆ ಶಾರ್ಲಿ ಎಬ್ದೊ (Charlie Hebdo) ಪತ್ರಿಕೆಯಲ್ಲಿ ಪ್ರಕಟವಾದ ಪ್ರವಾದಿ ಮೊಹಮದ್‌ರ ವ್ಯಂಗ್ಯಚಿತ್ರ ವನ್ನು ಇತ್ತೀಚೆಗೆ ಮಕ್ಕಳಿಗೆ ತೋರಿಸಿದ್ದಕ್ಕಾಗಿ ಸೆಮ್ಯುಅಲ್ ಪತಿ (Samuel Paty)ಯ ಶಿರಚ್ಛೇದನವಾಗಿದ್ದರಲ್ಲಿ ಒಂದು ಬಗೆಯ ವ್ಯಂಗ್ಯ ಕಾಣಬಹುದು.
ಫ್ರೆಂಚ್ ಕ್ರಾಂತಿಯ ವಿರೋಧಿಗಳನ್ನು ದಮನಿಸಲು ಉಪಯೋಗಿಸುತ್ತಿದ್ದುದೇ ಗಿಲೋಟಿನ್ (guillotine) ಫ್ರೆಂಚ್ ಉಚ್ಚಾರಣೆ
ಗಿಯೊಟಿನ್) ಎಂಬ ಉಪಕರಣವನ್ನು. ರಭಸದಿಂದ ಕೆಳಗೆ ಬೀಳುತ್ತಿದ್ದ ಹರಿತವಾದ ಚಪ್ಪಟೆಯಾಕಾರದ ಮಚ್ಚು ವಿರೋಧಿಗಳ ರುಂಡವನ್ನು ಮುಂಡದಿಂದ ಕ್ಷಣಾರ್ಧದಲ್ಲಿ ತುಂಡರಿಸುತ್ತಿತ್ತು. (ಬಡಜನರು) ಬ್ರೆಡ್ ಇಲ್ಲದಿದ್ದರೆ ಕೇಕ್ ತಿನ್ನಲೆಂದು ಹೇಳಿದ ಮೇರಿ ಅಂಟೊಯ್ನೆಟ್ ಬಲಿಯಾದದ್ದೂ ಗಿಲೋಟಿನ್‌ಗೇ.
ಈ ಭಯಂಕರ ಉಪಕರಣವನ್ನು ವಿನ್ಯಾಸಗೊಳಿಸಿದವನು ಗಿಯೊಟಿನ್ (ಜೋಸೆಫ್ ಇಗ್ನೇಸ್ ಗಿಲೋಟಿನ್; ತಯಾರಿಸಿ
ದವನು ಜರ್ಮನ್), ವೃತ್ತಿಯಲ್ಲಿ ವೈದ್ಯ, ರಾಜಕಾರಣದಲ್ಲೂ ತೊಡಗಿದ್ದವನು. ಅದಕ್ಕೆ ಮುಂಚೆ ಮರಣದಂಡನೆಗೆ ಒಳಗಾ ಗುತ್ತಿದ್ದವರ ಶಿರಚ್ಛೇದನಕ್ಕೆ ಬಳಸುತ್ತಿದ್ದುದು ಖಡ್ಗ ಅಥವಾ ಕೊಡಲಿ. ಕೆಲವೊಮ್ಮೆ ದಂಡಿತರ ತಲೆ ಒಂದೇ ಏಟಿಗೆ ಕಡಿಯ ಲ್ಪಡದೇ ಎಡವಟ್ಟಾಗುತ್ತಿತ್ತು. ಹಿಂಸೆಯ ಪ್ರಮಾಣವನ್ನು ತಗ್ಗಿಸಲು ಬಂದದ್ದೇ ಗಿಲೋಟಿನ್! ಅದನ್ನು ಮೊದಲ ಬಾರಿಗೆ 1792 ರಲ್ಲಿ ಪ್ರಯೋಗಿಸಿದಾಗ ಅದರ ವಿನ್ಯಾಸಕಾರನೇ ಬೀಭತ್ಸಗೊಂಡಿದ್ದ. ಕಳವಳಗೊಂಡ ಆತ ಅದರಿಂದ ತನ್ನ ಹೆಸರನ್ನು ಬೇರ್ಪಡಿಸಲು ಪ್ರಯತ್ನಿಸಿದ್ದೂ ಉಂಟು, ಆದರೆ ಫಲಕಾರಿಯಾಗಲಿಲ್ಲ.
ಅನಂತರ ಅವನ ಕುಟುಂಬ ವರ್ಗದವರೂ ಸರಕಾರಕ್ಕೆ ಅವನ ಹೆಸರನ್ನು ಕೈಬಿಡಲು ಮನವಿ ಮಾಡಿಕೊಂಡರಾದರೂ ಪ್ರಯೋಜನವಾಗಲಿಲ್ಲ. ಫ್ರಾನ್ಸ್‌ನ ರಕ್ತಸಿಕ್ತ ಇತಿಹಾಸದ ಒಂದು ಭಾಗವೇ ಆದ ಗಿಲೋಟಿನ್ ಅಲಗಿಗೆ ಸಾವಿರಾರು ಜನ ಬಲಿ ಯಾದರು. ಅಷ್ಟೇ ದೊಡ್ಡ ದುರಂತವೆಂದರೆ ಆ ನಿತ್ಯ-ನರಬಲಿಯನ್ನು ವೀಕ್ಷಿಸಲೇ ಸಾವಿರಾರು ಜನ ನೆರೆದಿರುತ್ತಿದ್ದರು ಹಾಗೂ ಅತಿ ಶೀಘ್ರದ ಅದೊಂದು ಮನರಂಜನೆಯ ರೂಪ ಪಡೆದುಕೊಂಡಿತು.
ಗಿಲೋಟಿನ್-ಕೇಂದ್ರಿತ ಕವಿತೆಗಳೂ, ಹಾಡುಗಳೂ, ಜೋಕ್‌ಗಳು ಹುಟ್ಟಿಕೊಂಡವು. ಗಿಲೋಟಿನ್ ಮೆಟ್ಟಿಲೇರುವವರ ಹೆಸರುಗಳ ಪಟ್ಟಿಯನ್ನು ಪ್ರಕಟಿಸುವ ಕಾರ್ಯಕ್ರಮಗಳೂ ನೆರವೇರುತ್ತಿದ್ದವು. ಅವರ ನೆನಪಿನ ವಸ್ತುಗಳಿಗೂ ಬೇಡಿಕೆ ಇತ್ತು. ಸಾಯೋ ಆಟವನ್ನು ವೀಕ್ಷಿಸಿದ ನಂತರ ಹತ್ತಿರದ ಕ್ಯಾಬರೆದ ಲಾ ಗಿಲೋಟಿನ್ ರೆಸ್ಟುರಾಗೆ ಭೇಟಿ ನೀಡುವುದೂ ಕ್ರಮಬದ್ಧವಾಗಿ ನಡೆಯು ತ್ತಿತ್ತು.
ತ್ರಿಕೋಟುಸ್ (Tricoteuses) ಎಂಬ ಹೆಸರುವಾಸಿಯಾದ ಒಂದು ಹೆಂಗಸರ ಗುಂಪಂತೂ ಅಲಗು ಕತ್ತನ್ನು ಬೇರ್ಪಡಿಸುವುದನ್ನು
ನೋಡನೋಡುತ್ತಲೇ ನಿರ್ಲಿಪ್ತವಾಗಿ ಸ್ವೆಟರ್ ಹೆಣೆಯುತ್ತಾ ಕುಳಿತಿರುತ್ತಿದ್ದರು. ಈ ದುಃಸ್ವಪ್ನ ವಾಸ್ತವ ದತ್ತೆಯರ ದೃಶ್ಯವನ್ನು ಪೂರ್ಣಗೊಳಿಸುವಂತೆ, ಬಲಿಯಾಗುವ ಮುನ್ನ ಶಿಕ್ಷೆವಿಧಿಸಲ್ಪಟ್ಟವರೂ ವ್ಯಂಗೋಕ್ತಿಯನ್ನೋ ಛಲ-ಭರಿತ ಅಣಿಮುತ್ತನ್ನೋ ಉದುರಿಸಿಯೇ ಶಿರಬಾಗುವ ಪರಿಪಾಠವೂ ಇತ್ತು. ಟಿವಿ ಚಾನೆಲ್ ಅಥವಾ ಡಿಜಿಟಲ್ ಮಾಧ್ಯಮವಿರದಿದ್ದ ಯುಗವದು! ದೈನಂದಿನ ದುರಂತವೇ ಪೂರ್ಣ ಪ್ರಮಾಣದ ಮನರಂಜನೆಯಾಗಿ ಮಾರ್ಪಟ್ಟಿತ್ತು.
ಪತಿಯ ಗುಪ್ತ ವಿವಾಹೇತರ ಸಂಬಂಧ ರಟ್ಟಾಗಿ ಕ್ರುದ್ಧಳಾದ ಹೆಂಡತಿ ಅವನಿಗೆ ತಪರಾಕಿ ನೀಡುವುದನ್ನೋ, ಸತಿಯ ಪರಪುರುಷನ ಸಂಪರ್ಕವನ್ನು ಪತ್ತೆ ಮಾಡಿದ ಗಂಡ ಅವಳ ಮೇಲೆ ತೋರುವ ಕ್ರೌರ್ಯವನ್ನು ಮನರಂಜನೆ ಎಂಬಂತೆ ಗಂಟೆಗಟ್ಟಲೆ ಬಿಂಬಿಸುವ ನಮ್ಮ ಕನ್ನಡ ಚಾನೆಲ್ ಗಳನ್ನು ವೀಕ್ಷಿಸುವವರಿಗೆ ಗಿಲೋಟಿನ್ ಪುರಾಣವೇನೂ ಅಚ್ಚರಿ ಹುಟ್ಟಿಸದಿರಬಹುದು. ಯಾರದ್ದೇ ಖಾಸಗಿ ದುರಂತವನ್ನು ಬಹಿರಂಗಗೊಳಿಸುವ ಪಡೆಯುವ ವಿಕೃತ ಆನಂದ ಸಾಲದೆಂಬಂತೆ ಆ ದುರಂತಮಯ ದೃಶ್ಯಕ್ಕೆ ಸಂಗೀತವನ್ನು ಅಳವಡಿಸುವ ಪರಿಪಾಠವೂ ಸೇರಿಕೊಂಡಿದೆ.
ಗಿಲೋಟಿನ್ ವಿನೋದ ಹದಿನೆಂಟನೇ ಶತಮಾನದ ಕೊನೆಯವರೆಗೂ ಮುಂದುವರೆಯಿತು, ಆದರೆ ಬಹಿರಂಗ ಶಿರಚ್ಛೇದನ
೧೯೩೯ರಲ್ಲಷ್ಟೇ ಕೊನೆಗೊಂಡಿತು. ಅಗ್ಗದ ಮನರಂಜನೆಗೆ ಬೇಡಿಕೆ ನಿಂತರೆ ನಮ್ಮ ಚಾನೆಲ್‌ಗಳೂ ಸುಧಾರಿಸಬಹುದೇನೋ.
ಆ ಸುದಿನ ಬೇಗ ಬರಲಿ ಎಂಬ ಆಶಯ ಆಶಯವಾಗಿಯೇ ಉಳಿದುಬಿಡುತ್ತೇನೋ ಎಂಬಂಥ ಬೆಳವಣಿಗೆ ಪಾಶ್ಚಿಮಾತ್ಯ ಮಾಧ್ಯಮದಲ್ಲಿ ಕಂಡುಬಂದಿದೆ. ಮಾಧ್ಯಮ ವಿಕೃತಿ ಸಾರ್ವಕಾಲಿಕವೇ ಆದ್ದರಿಂದ ಅಚ್ಚರಿಯಾಗಬೇಕಿಲ್ಲ.
ಅಂದೂ ಕೂಡ ಬ್ರಿಟನ್‌ನ ಫೈನಾನ್ಷಿಯಲ್ ಟೈಮ್ಸ, ಕಚೇರಿಯ ಹತ್ಯೆಗೀಡಾದ ಶಾರ್ಲಿ ಎಬ್ದೊ ವ್ಯಂಗ್ಯಚಿತ್ರಕಾರರನ್ನು ಹೆಡ್ಡ ರೆಂದು ಹೀಗರೆಯಿತು (ಆ ಶಬ್ದವನ್ನು ನಂತರ ಕೈಬಿಟ್ಟಿತು.) ವ್ಯಂಗ್ಯವೆಂದರೆ ಬ್ರಿಟನ್ನೇ ಉಗ್ರ ಇಸ್ಲಾಮಿಗರ ಕಪಿಮುಷ್ಠಿಗೆ ಸಿಲುಕಿದೆ. ಮುಸ್ಲಿಂ ಪ್ರತ್ಯೇಕತಾವಾದಿಗಳ ವಿರುದ್ಧದ ಫ್ರಾನ್ಸ್ ನ ನವಉಗ್ರ ಧೋರಣೆ ಆ ದೇಶವನ್ನು ಒಡೆಯುತ್ತದೆ ಎಂದು ಫೈನಾನ್ಷಿಯಲ್ ಟೈಮ್ಸ್ ಬರೆಯಿತು. ಹೆಚ್ಚುತ್ತಿರುವ ಮುಸ್ಲಿಂ ಭಯೋತ್ಪಾದನೆ ಫ್ರಾನ್ಸ್’ನ ಅಧ್ಯಕ್ಷರ ಅಪೇಕ್ಷೆಯಂತೇ ಇದೆ ಎಂದು ಆರೋಪಿಸಿತು. ಪ್ರತಿರೋಧದ ನಡುವೆ ಆನ್‌ಲೈನ್ ಆವೃತ್ತಿಯಿಂದ ಆ ಲೇಖನವನ್ನು ಕೈಬಿಡಲಾಯಿತು. ಪತಿ(Paty) ಶಿರಚ್ಛೇದನವನ್ನು ಗಂಭೀರ ವಾಗಿ ಪರಿಗಣಿಸಲ್ಪಡಲಾಗದ ಪುಟ್ಟ ಇರಿತದ ಪ್ರಕರಣವೆಂಬಂತೆ ಶಿರೋನಾಮೆ ನೀಡಿದ ನ್ಯೂಯಾರ್ಕ್ ಟೈಮ್ಸ್ ತಾನು ಇಸ್ಲಾಮಿ ಗರ ಹಿಡಿತದಲ್ಲಿರುವುದನ್ನು ಮತ್ತೊಮ್ಮೆ ಸಾಬೀತುಪಡಿಸಿತು. ಇದನ್ನು ಥಾಮಸ್ ಚಾಟರ್ಟನ್ ವಿಲಿಯಮ್ಸ ಎಂಬ ಅಮೆರಿಕನ್ ಪತ್ರಕರ್ತ ಭಾಷೆಯ ಮೇಲಿನ ಒಂದು ನಮೂನೆಯ ಕ್ರೌರ್ಯ ಎಂದು ಟೀಕಿಸಿದ.
ಮಿತ್ರರಾಷ್ಟ್ರ ಇಸ್ಲಾಮೀಯ ಹಂತಕರ ಕೈಗೆ ಸಿಕ್ಕಿ ನಲುಗುತ್ತಿರುವಾಗ ಆ ದುಸ್ಥಿತಿಯನ್ನು ಹಗುರವಾಗಿಸಿ ತಿಪ್ಪೆ ಸಾರಿಸುವುದು ಕ್ರೌರ್ಯವಲ್ಲದೆ ಮತ್ತೇನು? (ಸಾರ್ವಜನಿಕವಾಗಿ) ತಾನು ಉಳಿಯದಿದ್ದ ಇಸ್ಲಾಮಿಕ್ ಪ್ರತ್ಯೇಕತಾವಾದ ಶಬ್ದವನ್ನು ತಾನು ಹೇಳಿದ ಇಸ್ಲಾಮಿ ಪ್ರತ್ಯೇಕತಾವಾದದ ಬದಲಾಗಿ ಪ್ರಕಟಿಸಿ -ಂಚ್ ಮುಸ್ಲಿಮರನ್ನು ಕಳಂಕಿತರನ್ನಾಗಿಸುವ ಪ್ರಯತ್ನವನ್ನು ತಾನು ಮಾಡು
ತ್ತಿದ್ದೇನೆಂದೂ ಆ ಮೂಲಕ ರಾಜಕೀಯ ಲಾಭ ಪಡೆಯುವ ಹುನ್ನಾರ ನಡೆಸುತ್ತೀದ್ದೇನೆಂದೂ ಫೈನಾನ್ಷಿಯಲ್ ಟೈಮ್ಸ್ ಅಪ ಪ್ರಚಾರ ಮಾಡುತ್ತಿದೆ ಎಂದು ಅಧ್ಯಕ್ಷ ಇಮಾನ್ಯುಯಲ್ ಮ್ಯಾಕ್ರೋನ್ ಪ್ರತಿಕ್ರಿಯಿಸಿದ ನಂತರ ಸಂಬಂಧಿತ ಲೇಖನವನ್ನು ಕೈ ಬಿಡಲಾಯಿತು.
ನಾನು ಅಧ್ಯಕ್ಷನಾಗುವುದಕ್ಕಿಂತ ಮುಂಚಿನಿಂದಲೂ ಪ್ರತಿಪಾದಿಸುತ್ತಾ ಬಂದಿದ್ದೇನೆ. ನಮ್ಮ ದೇಶದ ಮೌಲ್ಯಗಳ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಿರುವ ಉಗ್ರ ಇಸ್ಲಾಂ ಶಕ್ತಿಗಳು ಪ್ರಬಲಗೊಳ್ಳುತ್ತಿವೆ. ನಮ್ಮ ಗಣರಾಜ್ಯವನ್ನು ಸಡಿಲಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರತವಾಗಿವೆ. ಅದು ಸ್ಪಷ್ಟವಾಗಿ ಪ್ರತ್ಯೇಕತಾವಾದ. ನನ್ನ ಮಾತಿನಲ್ಲಿ ನಂಬಿಕೆ ಇಲ್ಲದಿದ್ದರೆ ಸಾಮಾಜಿಕ ಜಾಲತಾಣ ಗಳಲ್ಲಿ ಪ್ರಕಟವಾಗುತ್ತಿರುವ ಮಾಹಿತಿಯನ್ನು ನೋಡಿ. (-) ವಿರುದ್ಧ ದ್ವೇಷವನ್ನು ಕಾರುತ್ತಿರುವ ವಿಕೃತ-ಇಸ್ಲಾಂ ಅನುಮೋದಿಸು
ತ್ತಿರುವ ಆವಿಚ್ಛಿದ್ರಕಾರೀ ಶಕ್ತಿಗಳೇ ಪತಿಯ ದುರ್ಮರಣಕ್ಕೆ ಕಾರಣವಾಗಿವೆ.
ನಮ್ಮ ದೇಶವನ್ನು ದ್ವೇಷಿಸಲು ಮೂರ್ನಾಲ್ಕು ವರ್ಷದ ಮಕ್ಕಳಿಗೂ ಬೋಧಿಸಲಾಗುತ್ತಿದೆ. ಅವರು ವಾಸಿಸುವ ಪ್ರದೇಶಗಳಿಗೆ ಭೇಟಿ ನೀಡಿ. ಪುಟ್ಟ ಬಾಲಕಿಯರಿಗೂ ಬುರ್ಖಾ ತೊಡಿಸಿ ಮುಖ್ಯವಾಹಿನಿ ಜನಜೀವನದಿಂದ ಪ್ರತ್ಯೇಕಿಸುವ ಪ್ರಯತ್ನ ನಿರಂತರವಾಗಿ
ನಡೆದಿದೆ. ಎಂದು ಮ್ಯಾಕ್ರೋನ್ ನುಡಿದಿದ್ದಾರೆ.ಅದನ್ನೇ ಮುಸ್ಲಿಂ ವಿರೋಧಿ ನಿಲುವೆಂದು ಅಮೆರಿಕನ್ ಮತ್ತು ಬ್ರಿಟಿಷ್ ಮಾಧ್ಯಮ ಗಳು ತಿರುಚುತ್ತಿವೆ. ಮಾಧ್ಯಮದ ಇಂತಹ ನಿಲುವು ಎಡಪಂಥೀಯ ಭಾರತೀಯ ಮಾಧ್ಯಮವನ್ನು ನೋಡುತ್ತಾ (ಅನುಭ ವಿಸುತ್ತಾ) ಬಂದಿರುವವರಿಗೆ ಹೊಸತೇನಲ್ಲ.
ಇದಕ್ಕಿಂತ ದೊಡ್ಡ ವ್ಯಂಗ್ಯವೆಂದರೆ ಅರಬ್ ಮತ್ತು ಮುಸ್ಲಿಂ ರಾಷ್ಟ್ರಗಳು ಮ್ಯಾಕ್ರೋನ್ ನಿಲುವಿಗೆ ವ್ಯಕ್ತಪಡಿಸಿದ್ದಾರೆ. ಉಗ್ರರ ವಿರುದ್ಧ ನಿಲುವು ತೆಗೆದುಕೊಂಡ ಮ್ಯಾಕ್ರೋನನ್ನು ಖಂಡಿಸಿ ಸನ್ನಿವೇಶದ ರಾಜಕೀಯ ಲಾಭ ಪಡೆಯಲು ಧಾವಿಸಿದ ಟರ್ಕಿ ಅಧ್ಯಕ್ಷ ಎರ್ಡೋಗನ್‌ಗೆ ಅರಬ್ ರಾಷ್ಟ್ರಗಳಿಂದಲೇ ವಿರೋಧ ವ್ಯಕ್ತವಾಗಿದೆ. ಅಮೆರಿಕದ ಮಾಧ್ಯಮ ಸಮೂಹವೇ ಉಗ್ರಗಾಮಿ ಗಳಿಂದ ಹೊಡೆತದಿಂದ ತತ್ತರಿಸುತ್ತಿರುವ ಫ್ರೆಂಚರನ್ನೇ ದೂಷಿಸುತ್ತಿರುವ ಸಂದರ್ಭದಲ್ಲಿ ಸೌದಿ ಅರೇಬಿಯಾ, ಟುನೀಸಿಯ ಮುಂತಾದ ದೇಶಗಳ ಇಸ್ಲಾಮಿಕ್ ಪತ್ರಕರ್ತರೇ ಮುಂದುವರಿದ ದೇಶಗಳ ಉಗ್ರ-ಪರ ನಿಲುವನ್ನು ಖಂಡಿಸಿದ್ದಾರೆ.