Saturday, 14th December 2024

ಮಳೆಗಾಲ ಬಂದಾಗ ನಮ್ಮ ದೇಹದಲ್ಲಿ ಏನೇನಾಗುತ್ತೆ ಗೊತ್ತಾ ?

ಸ್ವಾಸ್ಥ್ಯವೆಂಬ ಸ್ವಾತಂತ್ರ‍್ಯ

ಡಾ.ಸಾಧನಶ್ರೀ

ಇತ್ತೀಚಿನ ಸೈಂಟಿಫಿಕ್ ಪೇಪರ್ಸ್ ನೋಡ್ತಾ ಇದ್ದರೆ ‘Epigenetic’ ಅನ್ನೋದು ಜೀವಶಾಸ್ತ್ರದಲ್ಲಿ ಜೀವಕೋಶಗಳ ಗಾಢವಾದ ಅಧ್ಯಯನ. ಇನ್ನೂ ಸೂಕ್ಷ್ಮವಾಗಿ ಹೇಳಬೇಕೆಂದರೆ ಜೀ/ವಂಶವಾಹಿಗಳಿಗೆ ಸಂಬಂಧಪಟ್ಟ ಅಧ್ಯಯನ. ಹಾಗಾದರೆ ಏನು ಹೇಳುತ್ತೆ ಇದು? Epige-netics ಪ್ರಕಾರ ಜೀನ್ಸ್ ಗಳು ನಮ್ಮ ದೇಹದಲ್ಲಿ ನಡೆಯುವ ಎಲ್ಲಾ ಕ್ರಿಯೆಗಳ ಮೇಲೆ- ತನ್ಮೂಲಕ ನಮ್ಮ ಆರೋಗ್ಯದ ಮೇಲೆ ನೇರವಾದ ಪ್ರಭಾವ ಬೀರುತ್ತೆ.

ಆದರೆ ಇದು ಬಹಳ ಹಿಂದಿನ ಮಾತು. Latest news-ಇದೀಗ ಬಂದ ಸುದ್ದಿ ಏನೆಂದರೆ- ಈ ವಂಶವಾಹಿಗಳು ನಮ್ಮ ದೇಹದಲ್ಲಿ ಹೇಗೆ ಕಾರ್ಯ
ನಿರ್ವಹಿಸುತ್ತದೆ ಅನ್ನೋದು ಕೆಲವು ಅಂಶಗಳಿಂದ ನಿರ್ಧಾರವಾಗುತ್ತೆ. ಅವುಗಳು – ನಮ್ಮ ವಾತಾವರಣ, ಆಹಾರ ಹಾಗೂ ನಮ್ಮ ವಿಹಾರ. ಹೌದು! Genes is the ultimate ಅಂತ ಅಂದುಕೊಂಡಿತ್ತು ವಿಜ್ಞಾನ, ಆದರೆ ಈಗ ಬೆಳಕಿಗೆ ಬಂದಿರುವ ಸತ್ಯ ಏನಪ್ಪಾ ಅಂದರೆ ನಮ್ಮ ಆಹಾರ-ವಿಹಾರ- ವಾತಾ ವರಣಕ್ಕೂ ನಮ್ಮ ವಂಶವಾಹಿಗಳ ಕಾರ್ಯಕ್ಷಮತೆಗೂ ನೇರವಾದ ಸಂಬಂಧವಿದೆ.

Epigenetics ಪ್ರಕಾರ ನಮ್ಮ ಜೀಗಳು ಸರಿಯಾಗಿ ಕೆಲಸ ಮಾಡಬೇಕು, ನಮ್ಮ ದೇಹದಲ್ಲಿ ಆಗಬೇಕಾದಂತಹ ಕಾರ್ಯಗಳನ್ನು ಸರಿಯಾಗಿ ನಿಭಾಯಿಸ ಬೇಕು ಅಂದರೆ ಅದಕ್ಕೆ ಪೂರಕವಾದಂತಹ ಆಹಾರ-ವಿಹಾರ- ವಾತಾವರಣ ಅವಶ್ಯಕ. ಇದರಲ್ಲಿ ಯಾವುದೇ ಒಂದು ಏರುಪೇರು ಆದರೂ ಅದರ ಪರಿಣಾಮ ’Genes’ಗಳ ವರೆಗೂ ಇದೆ ಅನ್ನೋದು ಖಚಿತ! ಇದನ್ನೇ ಆಯುರ್ವೇದ ವಿಜ್ಞಾನವು ಸಾವಿರಾರು ವರ್ಷಗಳ ಹಿಂದೆ ಬಿಡಿಬಿಡಿಯಾಗಿ ತಿಳಿಸಿ ಹೇಳಿರುವ ವಿಷಯವೇಋತುಚರ್ಯೆ.

ಸ್ನೇಹಿತರೆ, ‘ಆಯುರ್ವೇದ’ ಶಬ್ದವು ಎರಡು ಪದಗಳಿಂದ ಕೂಡಿದೆ- ‘ಆಯು’ ಮತ್ತು ‘ವೇದ’. ವೇದ ಎಂದರೆ ಜ್ಞಾನ ಎಂದರ್ಥ. ‘ಆಯು’ ಎಂದರೆ ಸಾಮಾನ್ಯವಾಗಿ ನಾವು ‘ಆಯಸ್ಸು/ lifespan’ಅಂತ ಅರ್ಥ ಮಾಡಿಕೊಳ್ಳುತ್ತೇವೆ. ಆಯು ಅಥವಾ ಆಯಸ್ಸಿನ ಸರಿಯಾದ ಅರ್ಥವೇನು? ‘ಆಯು’ ಅಂದರೆ ದೇಹ- ಇಂದ್ರಿಯ -ಮನಸ್ಸು- ಆತ್ಮ- ಈ ನಾಲ್ಕರ ಸಂಯೋಗ ಅಥವಾ ಒಂದು ಸ್ನೇಹಮಯ ಒಕ್ಕೂಟ. Ayu is a team of four players. ಈ ಒಕ್ಕೂಟದಲ್ಲಿ ಯಾವರೀತಿಯದರೂ, ಯಾವಾಗಲಾದರೂ ಆಗಲಿ ಬಿರುಕು ಉಂಟಾದರೆ ಅದೇ ರೋಗ. ಈ ಬಿರುಕೇ ಬೆಳೆದು ದೊಡ್ಡದಾಗಿ, ಒಕ್ಕೂಟ ನಾಶವಾದರೆ ಅದೇ ಮರಣ. ಹಾಗಾದರೆ ಆಯುರ್ವೇದ ಅಂದರೆ ಕೇವಲ ಒಂದು ವೈದ್ಯಕೀಯ ಪದ್ಧತಿ ಅಷ್ಟೇನಾ? ಖಂಡಿತ ಇಲ್ಲ.

ಕೇವಲ ರೋಗ ಬಂದಾಗ ಮಾತ್ರ ನೆನಪಿಸಿಕೊಳ್ಳುವ ಜ್ಞಾನವಲ್ಲ ಆಯುರ್ವೇದ. ‘ಆಯು’ ಅಂದರೆ ಶರೀರೇಂದ್ರಿಯಸತ್ತ್ವಾತ್ಮಗಳ ನಡುವೆ ಇರುವ ಸಂಯೋಗವನ್ನು ನೂರು ವರುಷ ಗಟ್ಟಿಯಾಗಿ, ಭದ್ರವಾಗಿ, ಜೋಪಾನವಾಗಿ ಇಟ್ಟುಕೊಂಡು ರಕ್ಷಿಸಿಕೊಳ್ಳುವುದಕ್ಕೆ ಬೇಕಾದ ಜ್ಞಾನವನ್ನು ಯಾವ ಶಾಸ ಕೊಡುತ್ತೋ ಅದೇ ಆಯುರ್ವೇದ. ತನ್ಮೂಲಕ ನಾವು ಸದಾ ಸಮತೋಲನವನ್ನ ಸಾಧಿಸಿ ಸ್ವಸ್ಥ, ಸಂತೋಷಮಯ ಬದುಕನ್ನು ನಡೆಸುವ  ಸಾಮರ್ಥ್ಯ ವನ್ನು ನೀಡುತ್ತದೆ ಆಯುರ್ವೇದ.

ಇದುವೇ ನಿಜವಾದ ಆಯುರ್ವೇದ. ಇದುವೇ ಆಯುರ್ವೇದದ ಪೂರ್ಣ ಸ್ವರೂಪ. ಈ ಜೀವನ eನವನ್ನು ಆಯುರ್ವೇದವು ಎರಡು ರೀತಿಯಲ್ಲಿ ನಮಗೆ ನೀಡುತ್ತದೆ. ೧. ಸ್ವಾಸ್ಥ್ಯ ರಕ್ಷಣೆಗಾಗಿ ಹಾಗೂ ೨.ವಿಕಾರ ಪ್ರಶಮನಕ್ಕಾಗಿ. ಸ್ವಾಸ್ಥ್ಯರಕ್ಷಣೆಯಲ್ಲಿ, ಒಬ್ಬ ಆರೋಗ್ಯವಂತನ ಆರೋಗ್ಯ ರಕ್ಷಣೆ ಹೇಗೆ ಮಾಡಿ ಕೊಳ್ಳಬೇಕು? ರೋಗವೇ ಬಾರದ ಹಾಗೆ ಹೇಗೆ ನಮ್ಮ ಜೀವನವನ್ನು ಹೇಗೆ ನಡೆಸಬೇಕೆನ್ನುವ preventive care insights ಗಳನ್ನು ಕಾಣಬಹುದು. ನಂತರ ‘ವಿಕಾರ ಪ್ರಶಮಾನ’ದಲ್ಲಿ- curative care ಅಂದರೆ, ರೋಗಗಳ ಸ್ವರೂಪ , ಉಪಶಮನ ಹಾಗೂ ಚಿಕಿತ್ಸೆಗಳನ್ನು ವಿವರಿಸಿದ್ದಾರೆ.

We are more interested in Preventive Care, ಅಲ್ವಾ? ಯಾಕೆಂದರೆ ಒಂದು ಸಲ ರೋಗ ಬಂದರೆ ಅದರಲ್ಲಿ ಎಷ್ಟೊಂದು ನೋವು, ದುಃಖ, ಖರ್ಚು ಮತ್ತು ಶ್ರಮವಿದೆ. ಹಾಗಾಗಿ ರೋಗವೇ ಬಾರದ ಹಾಗೆ ಜೀವನ ನಡೆಸುವುದೇ ಜಾಣತನ. ಸ್ವಾಸ್ಥ್ಯ ರಕ್ಷಣೆಯಲ್ಲಿ ನಮ್ಮ ಆಯುವಿನ ಸಂಯೋಗವನ್ನು ಹೇಗೆ ಗಟ್ಟಿಯಾಗಿ ಇಟ್ಟುಕೊಳ್ಳಬಹುದು ಅನ್ನುವ Health secrets ಗಳನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅದರಲ್ಲಿ ಮೊದಲನೆಯದು ದಿನಚರ್ಯೆ- ರಾತ್ರಿ ನಿದ್ರಿಸಿ ಬೆಳಿಗ್ಗೆ ಏಳುವುದರಿಂದ ಮತ್ತೆ ರಾತ್ರಿ ಮಲಗುವವರೆಗೆ ನಾವು ಮಾಡಬೇಕಾದ ಕ್ರಮಬದ್ಧವಾದ ಆರೋಗ್ಯ ಪೂರಕ ಕಾರ್ಯಗಳು.

ಈ ದಿನಚರ್ಯೆಯು ಋತುಮಾನಕ್ಕೆ ಅನುಸಾರವಾಗಿ ಬದಲಾವಣೆಯಾಗಬೇಕಾಗುತ್ತದೆ. ಅದೇ ಋತುಚರ್ಯೆ. ಪ್ರತಿ ಋತುವಿನಲ್ಲಿಯೂ ಪ್ರಕೃತಿಯಗುವ ಬದಲಾವಣೆಗಳನ್ನು ಗಮನಿಸಿ, ಅದರಿಂದ ದೇಹದಗುವ ಏರಿಳಿತಗಳನ್ನು ಕಂಡುಕೊಂಡು, ತ್ರಿದೋಷ ಅಗ್ನಿಗಳ ವ್ಯತ್ಯಾಸಗಳನ್ನು ಗಮನದಲ್ಲಿಟ್ಟು ಕೊಂಡು ನಮ್ಮ ಆಹಾರ ವಿಹಾರ ವಿಚಾರಗಳನ್ನು ಸಂಯೋಜಿಸಿಕೊಳ್ಳುವುದೇ ಋತುಚರ್ಯೆ. It is a perfect science. ಋತುಗಳು ಆರು. ಹೇಮಂತ ಋತು ಮತ್ತು ಶಿಶಿರ ಋತುಗಳು ಚಳಿಗಾಲವಾದರೆ, ನಂತರ ಬರುವ ವಸಂತ ಋತುವು ಪ್ರಕೃತಿಯಲ್ಲಿ ಚಿಗುರೊಡೆಯುವ ಕಾಲ. ಗ್ರೀಷ್ಮ ಋತು ಬೇಸಿಗೆ ಯಾದರೆ, ವರ್ಷಾ ಋತುವು ಮಳೆಗಾಲ.

ಮುಂದಿನ ಶರತ್ ಋತುವು ಮಳೆಗಾಲದ ನಂತರ ಬರುವ ಬಿಸಿಲುಗಾಲ. ಇಡೀ ವರ್ಷದಲ್ಲಿ ನಾವು ಎರಡು ರೀತಿಯ ಕಾಲಗಳನ್ನು ಗಮನಿಸಬಹುದು.
ಒಂದು ಆದಾನಕಾಲ ಮತ್ತೊಂದು ವಿಸರ್ಗಕಾಲ. ಆದಾನ ಕಾಲದಲ್ಲಿ ಶಿಶಿರ, ವಸಂತ, ಗ್ರೀಷ್ಮ ಋತುಗಳಿದ್ದು ಈ ಕಾಲದಲ್ಲಿ ನಮ್ಮ ಶರೀರದ ಬಲವು ದಿನ ಕಳೆದಂತೆ ಕಡಿಮೆಯಾಗುತ್ತಾ ಹೋಗುತ್ತದೆ. ಅಂದರೆ ಶಿಶಿರ ಋತುವಿನಲ್ಲಿ ಅಧಿಕವಾಗಿದ್ದ ದೇಹ ಬಲವು ಗ್ರೀಷ್ಮ ಋತು ಬರುವಷ್ಟರಲ್ಲಿ ಅತ್ಯಂತ ಕ್ಷಯವಾಗುತ್ತದೆ. ಇನ್ನು ವಿಸರ್ಗ ಕಾಲದಲ್ಲಿ ವರ್ಷ, ಶರತ್ ಮತ್ತು ಹೇಮಂತ ಋತುಗಳಿದ್ದು ಈ ಕಾಲದಲ್ಲಿ ದಿನದಿಂದ ದಿನಕ್ಕೆ ನಮ್ಮ ಬಲವು ಹೆಚ್ಚಾ ಗುತ್ತಾ ಹೋಗುತ್ತದೆ. ಅಂದರೆ ವರ್ಷ ಋತುವಿನಲ್ಲಿ ಅತ್ಯಂತ ಕಡಿಮೆಯಿದ್ದ ಬಲವು ಹೇಮಂತ ಋತುವಿನಲ್ಲಿ ಅತ್ಯಧಿಕವಾಗುತ್ತದೆ.

ಮನುಷ್ಯ ಪ್ರಕೃತಿಯ ಒಂದು ಪುಟ್ಟ ಭಾಗ. ಮನುಷ್ಯನ ಹಾಗೂ ಪ್ರಕೃತಿಯ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ನಿರಂತರ ವ್ಯವಹಾರವಿದೆ. ಪ್ರತಿ ಋತುವಿನಲ್ಲಿಯೂ ಹೇಗೆ ಪ್ರಕೃತಿಯಲ್ಲಿ ಹಲವಾರು ಬದಲಾವಣೆಗಳನ್ನು ನಾವು ಕಾಣಬಹುದೋ, ಅದೇ ರೀತಿ ಹವಾಮಾನ ಬದಲಾವಣೆಯಿಂದ ಶರೀರದಲ್ಲಿ ಪ್ರಾಕೃತವಾದಂತಹ ಬದಲಾವಣೆಗಳನ್ನೂ ಕಾಣುತ್ತೇವೆ. ಇದರಲ್ಲಿ ಬಹಳ ಮುಖ್ಯವಾದದ್ದು ಶರೀರದ ಬಲ. ಚಳಿಗಾಲದಲ್ಲಿ ನಮ್ಮ ದೇಹದ ಬಲ, ವ್ಯಾಧಿ ಕ್ಷಮತೆ/ immunity ಅತ್ಯಂತ ಹೆಚ್ಚು. ಅದೇ ಬಿಸಿಲು ಮತ್ತು ಮಳೆಗಾಲದಲ್ಲಿ ಶಾರೀರಿಕ ಬಲ ಕಡಿಮೆ. ಹಾಗಾಗಿಯೇ ನಾವು ಬೇಸಿಗೆ ಯಲ್ಲಿ ಮತ್ತು ಮಳೆಗಾಲದಲ್ಲಿ ಹೆಚ್ಚು ಹುಷಾರು ತಪ್ಪುವುದು.

ಇದನ್ನು ನಾವು, ವೈದ್ಯರು ನಮ್ಮ ಕ್ಲಿನಿಕ್ ನಲ್ಲಿ ಗಮನಿಸಬಹುದು. ಚಳಿಗಾಲದಲ್ಲಿ ರೋಗಿಗಳು ತುಂಬಾ ಕಡಿಮೆ. ಅದೇ ಬೇಸಿಗೆ ಬಂದಂತೆ ಎಲ್ಲಾ  ಆಸ್ಪತ್ರೆಗಳು ತುಂಬಿ ಹೋಗುತ್ತವೆ. ಹಾಗೆಯೇ ವರ್ಷಾ ಋತು ಅಂದರೆ ಮಳೆಗಾಲದಲ್ಲಿ ನಮ್ಮ ಶಾರೀರಿಕ ಬಲ ಇಮ್ಯೂನಿಟಿ/ immunity ಅತ್ಯಂತ ಕಡಿಮೆ. ಆರೋಗ್ಯವು ಬಹಳ ನಾಜೂಕಾಗಿರುತ್ತೆ. ಹಾಗಾಗಿಯೇ ಈ ಋತುವಿನಲ್ಲಿ ಆರೋಗ್ಯ ರಕ್ಷಣೆಗೆ ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ ಎಂದು ಆಯುರ್ವೇದ ಎಚ್ಚರಿಸುತ್ತದೆ. ಆರೋಗ್ಯ ರಕ್ಷಣೆಯಲ್ಲಿ ಮೊದಲ ಹೆಜ್ಜೆ- ದೇಹದ ಅರಿವು ಬೆಳೆಸಿಕೊಳ್ಳುವುದು! ಮಳೆಗಾಲದಲ್ಲಿ ವಾತಾವರಣದ ಪ್ರಭಾವ
ದಿಂದ ನಮ್ಮ ದೇಹದ ಒಳಗೆ ಏನೇನೆ ವ್ಯತ್ಯಾಸಗಳಾಗುತ್ತವೆ ಅಂತ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ಮೊದಲಿಗೆ ಮಳೆಗಾಲ ಅಂದರೆ ಕ್ಯಾಲೆಂಡರ್ ಪ್ರಕಾರ ಜೂನ್ ೧೫ರಿಂದ ಆಗ ೧೫ ರ ತನಕ ಎಂದು ತಿಳಿಯಬಹುದು. ಆದರೆ ಈಗ ಕ್ಯಾಲೆಂಡರ್ ಪ್ರಕಾರ ಋತುಗಳು ಬದಲಾಗುತ್ತಾ ಇಲ್ಲ. ಋತುವೈಶಮ್ಯವನ್ನು ನಾವು ಕಾಣಬಹುದು. ಹಾಗಾಗಿ ಕ್ಯಾಲೆಂಡರ್ ಪ್ರಕಾರ ಪರಿಗಣಿಸುವ ಬದಲು ಋತುಲಕ್ಷಣ ಗಳನ್ನು ಗಮನಿಸಿ- ಅಂದರೆ ವಾತಾವರಣದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಿ, ಓ! ಮಳೆಗಾಲ ಶುರುವಾಯಿತು ಅಂತ ತಿಳಿದುಕೊಳ್ಳುವುದು ಹೆಚ್ಚು ವೈಜ್ಞಾನಿಕ.

ಮಳೆಗಾಲದಲ್ಲಿ ಮುಂಗಾರು ಶುರುವಾದ ತಕ್ಷಣ ತಂಪು ಗಾಳಿ ಬೀಸಿ ಮೋಡ ಕವಿಯುತ್ತದೆ. ಮಿಂಚು ಗುಡುಗುಗಳ ಆರ್ಭಟ. ಗಾಳಿಯ ಸಂಚಾರವು
ಪಶ್ಚಿಮದಿಂದ. ಸಸ್ಯ ಸಂಕುಲವು ನಿಧಾನವಾಗಿ ಚಿಗುರೊಡೆದು ಹಸಿರಾಗಲು ಶುರುವಾಗುತ್ತದೆ. ಇದುವೇ ವರ್ಷಾಗಮನದ ಸೂಚನೆಗಳು. ಪರಿಸರದಲ್ಲಿನ ಈ ಬದಲಾವಣೆಗಳು ನಮ್ಮಲ್ಲೂ ಆಂತರಿಕವಾಗಿ ಒಂದಿಷ್ಟು ಏರುಪೇರುಗಳನ್ನು ಉಂಟುಮಾಡುತ್ತದೆ. ಏಕೆಂದರೆ ನಮ್ಮ ಜೈವಿಕ ಕ್ರಿಯೆಗಳೆ ವಾತಾ ವರಣದ ಪ್ರೇರಣೆಯಿಂದ ನಡೆಯುತ್ತದೆ. ಸೂರ್ಯ ಚಂದ್ರರ ಚಲನೆಯನ್ನು ಅನುಸರಿಸುತ್ತದೆ. ಹಾಗಾದರೆ ಮಳೆಗಾಲದಲ್ಲಿ ನಮ್ಮ ದೇಹದ ಸ್ಥಿತಿ ಏನಾ ಗಿರುತ್ತದೆ? ಮೊದಲಿಗೆ ದೇಹದ ಬಲ ಕ್ಷೀಣವಾಗುತ್ತದೆ. ಜೀರ್ಣಶಕ್ತಿ ಬಹಳ ಕಡಿಮೆ ಇರುತ್ತದೆ.

ಹಾಗಾಗಿ ಹಸಿವು ಕಡಿಮೆ. ಹಸಿವೆ ಕಡಿಮೆಯಾಗುವುದರಿಂದ ಸೇವಿಸಿದ ಆಹಾರವು ನಿಧಾನವಾಗಿ ವಚನಗೊಳ್ಳುವುದರಿಂದ ತಿಂದದ್ದು ಹುಳಿಯಾಗುವುದೇ ಹೆಚ್ಚು. ಆದ್ದರಿಂದ ಹುಳಿತೇಗು, ವಾಂತಿ, ಭೇದಿ, ತಲೆನೋವು, ಅಜೀರ್ಣದ ತೊಂದರೆಗಳಾಗಿ ಮೈ ಜಡ್ಡು ಕಟ್ಟಿದಂತೆ ಭಾರವೆನಿಸುತ್ತದೆ. ಇನ್ನು  ತ್ರಿದೋಷ ಗಳನ್ನು ಗಮನಿಸುವುದಾದರೆ ಬೇಸಿಗೆಯಲ್ಲಿ ಹೆಚ್ಚಾಗಿ ಸಂಗ್ರಹವಾದ ವಾತದೋಷವು ಈ ಋತುವಿನಲ್ಲಿ ಮಳೆ-ಗಾಳಿ-ಚಳಿಗಳಿಂದ ಕೆರಳಿ ಮತ್ತಷ್ಟು ಜಾಸ್ತಿಯಾಗುತ್ತದೆ. ಜೊತೆ ಜೊತೆಗೆ ಭೂ ಬಾಷ್ಪದಿಂದ ವಾತಾವರಣದಲ್ಲಿ ಅಮ್ಲತ್ವ (ಹುಳಿರಸ) ಹೆಚ್ಚಾಗಿ ಪಿತ್ತವು ಸಂಗ್ರಹವಾಗುತ್ತದೆ.

ತೇವಾಂಶದ ಹೆಚ್ಚಳದಿಂದ ಕ-ವೂ ಹೆಚ್ಚಾಗುತ್ತದೆ. ಹೀಗೆ ಮೂರು ದೋಷಗಳ ವೈಷಮ್ಯದಿಂದ ಈ ಕಾಲದಲ್ಲಿ ರೋಗಗಳು ಹೆಚ್ಚಾಗಿಯೇ ಕಾಡುತ್ತದೆ. ಆದ್ದರಿಂದ ಸಾಮಾನ್ಯವಾಗಿ ಮಳೆ ಬೀಳಲು ಜ್ವರ, ಶೀತ, ಅಜೀರ್ಣ, ಭೇದಿಗಳನ್ನು ಕಾಣಬಹುದು. ಸಂಧಿ ನೋವು, ತಲೆ ಸುತ್ತು ಇತ್ಯಾದಿಗಳನ್ನು
ಗಮನಿಸಬಹುದು. ಒಟ್ಟಾರೆ ಮಳೆಗಾಲದಲ್ಲಿ ಶರೀರದಲ್ಲಿ ಕ್ಲೇದ/ ದ್ರವಾಂಶ ಹೆಚ್ಚು. ಜೀರ್ಣಶಕ್ತಿ, ಹಸಿವೆ, ಬಾಯಾರಿಕೆ ಕಡಿಮೆ. ದೇಹದ ಬಲ ಕಡಿಮೆ. ಮೂರು ದೋಷಗಳ ವಿಕೃತಾವಸ್ಥೆ. ಹೀಗಿರುವಾಗ ಮಳೆಗಾಲದ ಋತುಚರ್ಯೆಯ ಗುರಿ ಏನಿರಬೇಕು? ದೇಹದ ಬಲವನ್ನು ಹೆಚ್ಚು ಮಾಡುವ, ಜೀರ್ಣಾ ಶಕ್ತಿಯನ್ನು ಸರಿಮಾಡಿ ಆಹಾರವನ್ನು ಸರಿಯಾಗಿ ಜೀರ್ಣಿಸಿಕೊಳ್ಳುವ, ತ್ರಿದೋಷಗಳನ್ನು ಪ್ರಾಕೃತಾವಸ್ಥೆಗೆ ತರುವ ವಿವಿಧ ವ್ಯಾಧಿಗಳನ್ನು ಉಪಶಮನ ಮಾಡುವ ರೀತಿಯಲ್ಲಿರಬೇಕು ನಮ್ಮ ಆಹಾರ ಮತ್ತು ವಿಹಾರ.

ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳದೆ ಮನ ಬಂದಂತೆ ತಿಂದು, ಉಂಡು, ಕೆಲಸಗಳನ್ನು ಮಾಡಿದರೆ ರೋಗದ ತುತ್ತಾಗಿ ಹಾಸಿಗೆ ಹಿಡಿಯುವುದರಲ್ಲಿ ಯಾವ ಸಂಶಯವೂ ಇಲ್ಲ. ನಾವು ಪ್ರಕೃತಿಯ ಒಂದು ಭಾಗವೆಂದು ನೆನಪಿಸಿಕೊಂಡು, ಪ್ರಕೃತಿಯಗುವ ಬದಲಾವಣೆಗಳನ್ನು ಗಮನಿಸಿ, ಅದರಿಂದ ದೇಹದ ಮೇಲಾಗುವ ಪ್ರಭಾವಗಳ ಅರಿವನ್ನು ಬೆಳೆಸಿಕೊಂಡು, ಅದಕ್ಕೆ ತಕ್ಕಂತೆ ಋತಿವಿಗನುಸಾರನಮ್ಮ ಆಹಾರ-ವಿಹಾರಗಳ ಸೂಕ್ತ ಬದಲಾವಣೆ ಗಳನ್ನು ನಿಷ್ಠೆಯಿಂದ ಮಾಡಿದ್ದೇ ಆದರೆ ಖಂಡಿತ ವರ್ಷಾ ಋತುವಿನಲ್ಲಿ ಅಷ್ಟೇ ಅಲ್ಲ, ಇಡೀ ವರ್ಷ ಆರೋಗ್ಯವಾಗಿರಬಹುದು ಅನ್ನುವುದು ಆಯು ರ್ವೇದದ ಗ್ಯಾರಂಟಿ!