ಸಾಂದರ್ಭಿಕ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಒಬ್ಬ ವಿದ್ಯಾರ್ಥಿಯ ಜೀವನದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯು ಒಂದು ಪ್ರಮುಖ ಘಟ್ಟ ಹಾಗೂ ಪರೀಕ್ಷಾ ದಿನಕ್ಕೆ ಬಹಳ ಪ್ರಾಮುಖ್ಯ. ವಿದ್ಯಾರ್ಥಿಯ ಪರೀಕ್ಷಾ ಯಾತ್ರೆ ಪೋಷಕರು ಮತ್ತು ಶಿಕ್ಷಕರ ಬೆಂಬಲವಿಲ್ಲದೆ ಅಪೂರ್ಣ. ವಿದ್ಯಾರ್ಥಿಗಳಿಗೆ ಇಡೀ ವರ್ಷದ ಶ್ರಮದ
ಪ್ರತಿಫಲ ನೀಡುವ ದಿನವೇ ಪರೀಕ್ಷೆಯ ದಿನ. ಆದುದರಿಂದ ವಿದ್ಯಾರ್ಥಿಗಳು ಪರೀಕ್ಷೆಯ ದಿನದಂದು ಲವಲವಿಕೆಯಿಂದ, ಚೈತನ್ಯದಿಂದ ಉತ್ಸುಕರಾಗಿರಬೇಕು ಮತ್ತು ಪರೀಕ್ಷೆಯ ದಿನವನ್ನು ಹಬ್ಬದ ದಿನದಂತೆ ಸಂಭ್ರಮಿಸಬೇಕು.
ಅಂತಹ ವಾತಾವರಣವನ್ನು ಹೆತ್ತವರು, ರಕ್ಷಕರು, ಪೋಷಕರು ಮತ್ತು ಶಿಕ್ಷಕರು ನಿರ್ಮಾಣ ಮಾಡಬೇಕು. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಮಾನಸಿಕವಾಗಿ ಸಿದ್ಧರಾಗಿರಬೇಕು. ಆತಂಕ ಸಹಜ. ಆದರೆ ಅತಿಯಾದ ಆತಂಕಪಡುವ ಅಗತ್ಯವೇ ಇಲ್ಲ. ಭಯವಂತೂ ಬೇಡವೇ ಬೇಡ. ಪರೀಕ್ಷಾ ದಿನ ಮೂಡ್ ಚೆನ್ನಾಗಿಲ್ಲವೆಂದರೆ ವರ್ಷ ಪೂರ್ತಿ ಓದಿದ್ದು ವ್ಯರ್ಥವಾಗಲೂಬಹುದು ಮತ್ತು ನಿರೀಕ್ಷೆಗೆ ತಕ್ಕ ಉತ್ತರ ಬರೆಯಲು ಸಾಧ್ಯವಾಗದೇ ಇರಬಹುದು.
ಜಾಣ್ಮೆ, ಪ್ರತಿಭೆ, ಪ್ರಜ್ಞೆಗಳು ಸಂಪೂರ್ಣ ಅನಾವರಣಗೊಳ್ಳಬೇಕು. ನೀವೊಬ್ಬರೇ ಪರೀಕ್ಷೆ ಬರೆಯುವುದಲ್ಲ, ಲಕ್ಷಗಟ್ಟಲೆ ವಿದ್ಯಾರ್ಥಿಗಳಲ್ಲಿ ನೀವೊಬ್ಬರು ಅಷ್ಟೇ. ಇದೀಗ ಮಾರ್ಚ್ ೨೮ ರಿಂದ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಗೆ ತಜ್ಞರು ನೀಡಿರುವ ಸೂಚನೆ ಮತ್ತು ಮಾರ್ಗ ದರ್ಶನದಂತೆ ಪರೀಕ್ಷೆ ನಡೆಸಲಾಗುತ್ತಿದೆ. ಸ್ವಾಭಾವಿಕವಾಗಿ ಈ ಬಾರಿಯ ಎಸ್ಎಸ್ ಎಲ್ಸಿ ಪಬ್ಲಿಕ್ ಪರೀಕ್ಷೆಯ ಬಗ್ಗೆ ಪ್ರಕ್ಷುಬ್ಧತೆ ಇದೆ. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸರಿಸುಮಾರು ಎರಡು ವರ್ಷಗಳಷ್ಟು ಕಾಲ ಪಾಠಪ್ರವಚನಗಳು ಕ್ರಮಬದ್ಧವಾಗಿ ನಡೆಯಲಿಲ್ಲ.
ಶೈಕ್ಷಣಿಕ ಮುನ್ನಡೆಯನ್ನು ಸರಿದೂಗಿಸಿ ಶೈಕ್ಷಣಿಕ ಸಂಸ್ಥೆಗಳು, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮಷ್ಟಿಯಲ್ಲಿ ಕೆಲಸ ಮಾಡಿದರೂ ಆನ್ ಲೈನ್ ಶಿಕ್ಷಣ ತರಗತಿ ಶಿಕ್ಷಣಕ್ಕೆ ಪರ್ಯಾಯವಾಗಲಿಲ್ಲ. ಅದು ಕೂಡ ಸರಕಾರಿ ಶಾಲೆಗಳಲ್ಲಿ ಓದಿದ ತೀವ್ರ ಬಡ ಕುಟುಂಬದ ಮಕ್ಕಳಲ್ಲಿ ಮೊಬೈಲ್, ಕಂಪ್ಯೂಟರ್ ಇರಲಿಲ್ಲ, ಇದ್ದರೂ ಇಂಟರ್ನೆಟ್ ಸಮಸ್ಯೆಯಿತ್ತು. ಆನ್ಲೈನ್ ಸಂಪೂರ್ಣ ಹತೋಟಿ ತಪ್ಪಿತ್ತು. ಇದೀಗ ಹಲವಾರು ಹೊಂದಾಣಿಕೆಗಳ ಮೂಲಕ ವಿದ್ಯಾರ್ಥಿಗಳಿಗೆ ಪ್ರಥಮ ವಾರ್ಷಿಕ ಪಬ್ಲಿಕ್ ಪರೀಕ್ಷೆ. ಹಲವಾರು ಆತಂಕ ಮತ್ತು ಅಡೆತಡೆಗಳ ಮಧ್ಯೆಯೇ ಮುಂದಿನ ಅಭ್ಯಾಸಕ್ಕೆ ಬುನಾದಿಯಾಗಿದೆ.
ಮತ್ತು ತಮ್ಮ ಪ್ರತಿಭೆ ಹಾಗೂ ನಿರ್ವಹಣೆಯನ್ನು ಪ್ರದರ್ಶಿಸುವುದು ಅನಿವಾರ್ಯವಾಗಿದೆ. ಈ ಬಾರಿ ಕರೋನಾ ರಜೆಯ ಕಾರಣ ಕೆಲವು ಪಾಠಗಳು ಕಡಿತವಾಗಿದೆ. ಆದ್ದರಿಂದ ಪರೀಕ್ಷೆಗೆ ನಿಗದಿಯಾದ ಪಾಠಗಳತ್ತ ಓದು ಕೇಂದ್ರೀಕೃತವಾಗಿರಬೇಕಾಗುತ್ತದೆ. ಈ ಪರೀಕ್ಷೆಯ
ಸಾಧನೆಯೇ ಮುಂದಿನ ಶಿಕ್ಷಣಕ್ಕೆ ಅಡಿಗಲ್ಲು. ನೀವು ಬರೆದ ಉತ್ತರ ಪತ್ರಿಕೆಯೆಂಬುದು ನೀವು ನಡೆದು ಬಂದ ದಾರಿ. ಅಂಕ ಸಂಪಾದನೆ ಅನಿವಾರ್ಯ. ಅದೇ ರೀತಿಯಲ್ಲಿ ಅಂಕ ಸಂಪಾದನೆಯೊಂದಿಗೆ ಜ್ಞಾನ ಸಂಪಾದನೆಯೂ ಗುರಿಯಾದಾಗ ಯಾವ ಪ್ರಶ್ನೆಯೂ ಕಷ್ಟವೆನಿ ಸುವುದಿಲ್ಲ.
ನಿಮ್ಮ ಪರೀಕ್ಷೆ ನಿಮ್ಮ ಕೈಯಲ್ಲಿದೆ. ಪರೀಕ್ಷೆಯಲ್ಲಿ ಪ್ರಶ್ನೆಗಳನ್ನು ಓದಿ ಅರ್ಥೈಸಿಕೊಳ್ಳುವ ಕೌಶಲ ಮತ್ತು ಸರಿಯಾದ ಉತ್ತರವನ್ನು ಕ್ರಮ ಬದ್ಧವಾಗಿ ಚಾಕಚಕ್ಯತೆಯಿಂದ ಬರೆಯುವ ಕೌಶಲವನ್ನು ರೂಢಿಸಿಕೊಳ್ಳಬೇಕು. ಕಂಠಪಾಠ ತಪ್ಪೇನಲ್ಲ, ಸಂಪೂರ್ಣ ತಳ್ಳಿಹಾಕ ಲಾಗದು. ಆದರೆ ಪ್ರತೀ ಪದಗಳನ್ನು ಅರ್ಥೈಸಿಕೊಳ್ಳಬೇಕು ಮತ್ತು ಪ್ರಶ್ನೆಗೆ ಅದನ್ನು ಸಮಪರ್ಕಕವಾಗಿ ಬಳಸಿ ಉತ್ತರಿಸಿದರೆ ತಪ್ಪೇನಿಲ್ಲ.
ಪ್ರಶ್ನೆಗೆ ಸೂಕ್ತವಾದ ನೇರ ಉತ್ತರ, ಹೆಚ್ಚು ಅಂಕಕ್ಕೆ ಹೆಚ್ಚು ಬರಹ, ಕಡಿಮೆ ಅಂಕಕ್ಕೆ ಕಡಿಮೆ ಬರಹ ಅಲ್ಲದೆ ದೀರ್ಘ ಉತ್ತರ ನೀಡುವ ಪ್ರಶ್ನೆಗಳಿಗೆ ಪಾಯಿಂಟ್ ಬೈ ಪಾಯಿಂಟ್ ಹಾಕಿ ಉತ್ತರಿಸಿದರೆ ನಿಮ್ಮ ಉತ್ತರವು ಮೌಲ್ಯಮಾಪಕರನ್ನು ಆಕರ್ಷಿಸುತ್ತದೆ. ಉತ್ತರ ಗೊತ್ತಿದೆ ಯೆಂದು ಅಗತ್ಯಕ್ಕೆ ಮೀರಿ, ಅಳತೆ ಮೀರಿ ಉತ್ತರ ಬರೆಯಬಾರದು.
Neat Presentation of matters are essential and imperative. There should be strategic use of points, headings, paragraphs, diagrams which would make your answer look well organised. Writings should be neat and diagrams should be clear.. ನೀವು ಭವ್ಯ ಭಾರತದ ಭಷ್ಯದ ಮುಂಚೂಣಿ ಯಲ್ಲಿರುವ ಶಿಲ್ಪಿಗಳೆಂದರೆ ತಪ್ಪಿಲ್ಲ.
ತಿಳಿದುಕೊಳ್ಳಬೇಕಾದ ತುಂಬಾ ಪ್ರಮುಖ ವಿಚಾರವೆಂದರೆ ಪರೀಕ್ಷೆ ಒಂದು ಟೆಸ್ಟ್ ಮಾತ್ರ, ವ್ಯಕ್ತಿಯನ್ನು ಅಳೆಯುವ ಮಾನದಂಡವಲ್ಲ. ನೀವು ನಿಮ್ಮ ಪರೀಕ್ಷೆಯನ್ನು ಅತ್ಯಂತ ಚೆನ್ನಾಗಿ ನಿಭಾಯಿಸದಿದ್ದರೆ ಚಿಂತಿಸಬೇಕಾದ ಅಗತ್ಯವೇ ಇಲ್ಲ. ಅಷ್ಟೇನೂ ಚೆನ್ನಾಗಿ ಬರೆಯದಿದ್ದರೆ
ಚಿಂತಿಸಬಾರದು. ಯಾಕೆಂದರೆ ಬರೆದ ಆ ನಿಮ್ಮ ಉತ್ತರಪತ್ರಿಕೆ ನಿಮ್ಮ ಕೈಜಾರಿದೆ, ಆ ಪತ್ರಿಕೆಯನ್ನು ಬದಲಿಸುವ ಸ್ವಾತಂತ್ರ್ಯ ನಿಮ್ಮ ಕೈಯಲ್ಲಿಲ್ಲ. ಚೆನ್ನಾಗಿ ನಿಭಾಯಿಸಿದ್ದರೆ ಉತ್ತಮ ಅಂಕಗಳು ಬಂದೇ ಬರುತ್ತವೆ. ಅದಕ್ಕೆ ಆತಂಕ ಬೇಡ, ಭಯ ಬೇಡ ಎನ್ನುವುದು. ಅತಂಕದ ಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ತೋರಿಸಲು ಸಾಧ್ಯವಿಲ್ಲ. ಈ ಸ್ಪರ್ಧಾತ್ಮಕ ಮತ್ತು ಒತ್ತಡದ ಯುಗದಲ್ಲಿ ಪರೀಕ್ಷೆಗಳೆಂದರೆ ಅಸ್ತಿತ್ವದ ಪ್ರಶ್ನೆಯೆಂಬಂತೆ ಮಾರ್ಪಾಡಾಗಿದೆ.
“Survival of the fittest! ಕ್ಲಿಷ್ಟ ವಿಷಯಗಳನ್ನು ಓದಿ ಅರ್ಥೈಸಿಕೊಂಡು ಆಗಾಗ ಮನನ ಮಾಡಿ ಮರೆಯ ಬಾರದು. ಪರೀಕ್ಷಾ ದೃಷ್ಟಿಯಲ್ಲಿ ಕಡಿಮೆ ಓದಿ ಹೆಚ್ಚು ಅಂಕ ಗಳಿಸಿವವರ ಪಾಲಿಗೆ ವಿದ್ಯಾರ್ಥಿಗಳು ಸೇರಬೇಕು. ಯಾವುದೇ ವಿಷಯ ಅರ್ಥವಾಗದೇ ಮುಂದೆ ಹೋಗಿ ಅರ್ಧಂಬರ್ಧ ಕಲಿಯಬಾರದು. ಅರ್ಥಮಾಡಿಕೊಂಡು ಮನನ ಮಾಡಿ ನೆನಪಿನಲ್ಲಿಟ್ಟುಕೊಂಡು ಪರೀಕ್ಷೆಯಲ್ಲಿ ತತ್ಸಂಬಂಧ ಪ್ರಶ್ನೆ ಬಂದಾಗ ಭಾಷಾಧಾರಿತ ವಿಷಯಗಳಾದರೆ ಕಡಿಮೆ ಶಬ್ದ ಮತ್ತು ವಾಕ್ಯಗಳಲ್ಲಿ ಹೆಚ್ಚು ವಿಷಯ ಅಂತರ್ಗತವಾಗಿರುವಂತೆ ಸ್ಪಷ್ಟ ಬರಹದ ಉತ್ತರ ನೀಡಬೇಕು. ಪ್ರಶ್ನೆ ಪತ್ರಿಕೆ ಕೈ ಸೇರಿದಾಗ ಉತ್ತರ ಬರೆಯುವಷ್ಟೇ ಪ್ರಮುಖ ಸಂಗತಿ ಅದನ್ನು ಅರ್ಥ ಮಾಡಿಕೊಳ್ಳುವುದು.
ಜ್ಞಾನ ಮತ್ತು ಗಣಿತ ವಿಷಯಗಳಿಗೆ ಸ್ಪಷ್ಟ, ಸಮರ್ಪಕ, ಸೈದ್ಧಾಂತಿಕ ಮತ್ತು ನಿರೂಪಣಾಯುಕ್ತ ಉತ್ತರ ನೀಡಬೇಕು. ಗಣಿತದಲ್ಲಿ ಹೆಜ್ಜೆ (ಹಂತ)ಗಳನ್ನು ಸಮರ್ಪಕವಾಗಿ ಬರೆದು ಉತ್ತರಿಸಿದರೆ ಮೌಲ್ಯಮಾಪಕರಿಗೂ ಪ್ರಸನ್ನತೆಯ ಅನಿಸಿಕೆ ಮೂಡುತ್ತದೆ ಮತ್ತು ಪೂರ್ಣ
ಅಂಕಗಳನ್ನು ಕೊಟ್ಟೇ ಕೊಡುತ್ತಾರೆ. ಪ್ರಸಕ್ತ ಸನ್ನಿವೇಶದಲ್ಲಿ ಪರೀಕ್ಷೆಯೆಂಬುದು ಅಂಕ ಗಳಿಕೆಯ ಪೈಪೋಟಿಯಾಗಿ ಮಾರ್ಪಾಟಾಗಿದೆ. ವಿದ್ಯಾರ್ಥಿಗಳು, ಹೆತ್ತವರು, ಶಾಲಾಧ್ಯಾಪಕರು, ಶಾಲಾ ಆಡಳಿತ ಮಂಡಳಿಯ ಎಲ್ಲರೂ ಬಯಸುವುದು ಶೇಕಡವಾರು ಮಾರ್ಕ್ಸ್ ಮತ್ತು
ರ್ಯಾಂಕ್ ಹಾಗೂ ಶೇ. ೧೦೦ ಫಲಿತಾಂಶ.
ಈ ಅಂಕಗಳಿಕೆಯೆಂಬ ನಾಗಾಲೋಟದಲ್ಲಿ ಎಸ್ಎಸ್ಎಲ್ಸಿಯಲ್ಲಿ 625/625 ಮತ್ತು ಪಿಯುಸಿಯಲ್ಲಿ 600/600 ಅಂಕ ಗಳಿಕೆಗೆ ಬಂದು ನಿಂತು ಅಂತಿಮ ಘಟ್ಟ ತಲುಪಿಯಾಗಿದೆ. ದಾಖಲೆ ಬರೆದಾಗಿದೆ. ಇನ್ನೇನಿದ್ದರೂ ಪುನಾರಾವರ್ತನೆ. ನೂರು ಶೇಕಡಾ ಮಾರ್ಕ್ ಯಾರಿಗೆ ಬೇಡ? ದೇವರು ಎಲ್ಲರಿಗೂ ಸಮಾನವಾದ ಬುದ್ಧಿಶಕ್ತಿಯನ್ನು ಕೊಟ್ಟಿರುವುದಿಲ್ಲ. ವಿದ್ಯಾರ್ಥಿಗಳಿಗೆ ಕಲಿಕೆಗೆ ಪೂರಕ ವಾತಾವರಣವೂ ಇರುವುದಿಲ್ಲ. ಯೋಗ್ಯವಾದ ಸಹಾಯ, ಸಹಕಾರವೂ ಇರುವುದಿಲ್ಲ. ಅದೇಕೆ ಉತ್ತಮ ಅಧ್ಯಾಪಕ ವೃಂದದವರೂ ಇರುವುದಿಲ್ಲ. ವಿದ್ಯಾರ್ಥಿ ಗಳು ಗುಣಮಟ್ಟದ ಶಿಕ್ಷಣದಿಂದ ಹಲವಾರು ಕಾರಣಗಳಿಂದ ವಂಚಿತರಾಗಿರುತ್ತಾರೆ.
ಆದುದರಿಂದ ವಿದ್ಯಾರ್ಥಿ ಆ ಮಟ್ಟದಲ್ಲಿರುವನೇ? ಪ್ರಯತ್ನ ಪಟ್ಟಿದ್ದಾನೆಯೇ? ಎಲ್ಲ ಸ್ಥರಗಳಲ್ಲೂ ಉತ್ತೇಜನ ಸಿಕ್ಕಿದೆಯೇ ಎನ್ನುವುದೂ ಮುಖ್ಯವಾಗುತ್ತದೆ. ಅಂಕಗಳಿಗೆ ಪ್ರಾಮುಖ್ಯ. ಮುಂದಿನ ವಿದ್ಯಾಭ್ಯಾಸಕ್ಕೆ ಅಳತೆಗೋಲು ಇದು. ಎಲ್ಲರೂ ಅನುಸರಿಸುತ್ತಿರುವ
ಮಾನದಂಡ. ಆದರೆ ಇತಿಮಿತಿಗಳಲ್ಲಿ ಗುರಿಯಿದ್ದರೆ, ಛಲವಿದ್ದರೆ, ಬಡತನ, ಕಷ್ಟ ಸಹಿಷ್ಣುತೆಗಳ ನಡುವೆಯೂ ಉತ್ತುಂಗಕ್ಕೇರಬಹುದು. ಮಕ್ಕಳ ಅಭಿವೃದ್ಧಿಯ ದೃಷ್ಟಿಯಿಂದ ತಾವು ಜೀವನದಲ್ಲಿ ಸಾಽಸಲಾಗದ್ದನ್ನು ಮಕ್ಕಳು ಸಾಧಿಸಬೇಕೆಂಬ ಮನೋಭಾವನೆ ತಪ್ಪಲ್ಲದಿದ್ದರೂ ಆ ನಿಟ್ಟಿನಲ್ಲಿ ಒತ್ತಡ ಮತ್ತು ಅನವಶ್ಯ ಬುದ್ಧಿವಾದ ಮತ್ತು ಅನಗತ್ಯ ಉಪದೇಶ ಹಾನಿಕಾರವಾಗದೇ ಇರಲಾರದು.
ಪ್ರಧಾನಿಯವರು ಮೂರು ವರ್ಷಗಳ ಹಿಂದೆ ಮಕ್ಕಳ ಅಂಕಪಟ್ಟಿ ಪೋಷಕರ ವಿಸಿಟಿಂಗ್ ಕಾರ್ಡ್ ಎಂದು ತಿಳಿದುಕೊಳ್ಳುತ್ತಾರೆ ಎಂಬ ಮಾತನ್ನು ಪರಿಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಉಲ್ಲೇಖಿಸಿದ್ದಾರೆ. ಇದೊಂದು ಸಮಂಜಸ ವ್ಯಾಖ್ಯಾನ. ಇದು ವಾಸ್ತವಿಕ. ಆದರೆ ಅವರು ಎಡವಟ್ಟಾದರೆ ಚಿಂತಿಸಬೇಕಾದ ಅವಶ್ಯಕತೆಯೇ ಇಲ್ಲ ಎಂದೂ ಹೇಳಿದರು. ಹೌದು, ಆಕಾಶ ಕಳಚಿ ಬಿದ್ದಿಲ್ಲವಲ್ಲ? ಭೂಮಿ ಬಾಯ್ಬಿಡಲಿಲ್ಲವಲ್ಲ ಎನ್ನುವ ಮನೋಸ್ಥೈರ್ಯ ವಿದ್ಯಾರ್ಥಿಗಳಲ್ಲಿರಬೇಕು ಮತ್ತು ಅವರು ಇತರರೊಂದಿಗೆ ಹೆಚ್ಚು ಹೋಲಿಕೆ ಮಾಡಿಕೊಳ್ಳ ಬಾರದು ಮತ್ತು ಪೋಷಕರೂ ಹೋಲಿಕೆ ಮಾಡುವುದನ್ನು ನಿಲ್ಲಿಸಬೇಕು ಎಂದರು.
ಪರೀಕ್ಷೆಗಳ ಸಮಯದಲ್ಲೂ ಎಲ್ಲಕ್ಕಿಂತ ಮುಖ್ಯವಾಗಿ ವಿದ್ಯಾರ್ಥಿಗಳು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ದತ್ತ ಗಮನಹರಿಸ ಬೇಕು. ಸಕಾರಾತ್ಮಕ ಮನೋಭಾವನೆ ಯನ್ನು ಮೈಗೂಡಿಸಿಕೊಂಡು ಆತ್ಮಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಪರೀಕ್ಷೆಯಲ್ಲಿ ಚೀಟ್ ಮಾಡಬಾರದು. ಇದರಿಂದ ಹೆತ್ತವರಿಗೆ, ಸಮಾಜಕ್ಕೆ ಎಲ್ಲಕ್ಕಿಂತ ಮುಖ್ಯವಾಗಿ ನಮಗೇ ನಾವು ಮೋಸ ಮಾಡಿ ಕೊಳ್ಳುತ್ತೇವೆ.
There is no short cut for success and there is no substitute for hard work”.