Tuesday, 10th December 2024

ಪರೀಕ್ಷೆ ತಯಾರಿಯಲ್ಲಿನ ದಿನ; ಭವಿಷ್ಯ ಬರೆಯುವ ಸಮಯ

ಪರಿಶ್ರಮ

parishramamd@gmail.com

ಪ್ರಯತ್ನ ಮಾಡಿ ಸೋತೋನಿಗೆ ಇತಿಹಾಸದಲ್ಲಿ ಸೋತ ಅನ್ನೋ ಪಟ್ಟ ಸಿಗುತ್ತೆ. ಆದ್ರೆ, ಪ್ರಯತ್ನ ಪಡದೆ ಕೂತೋನಿಗೆ ಹೇಡಿ ಅಂತ ಜನ ಆಡಿಕೊಳ್ಳುತ್ತಾರೆ. ಅದಕ್ಕೆ ಯುದ್ಧಕ್ಕೆ ಅಂತ ಇಳಿದಾಗಿದೆ ಶತ್ರು ಯಾರೆ ಇರಲಿ; ಸೈನ್ಯ ಎಷ್ಟೇ ದೊಡ್ಡದಿರಲಿ; ನಿಮ್ಮ ಆತ್ಮ ವಿಶ್ವಾಸ ಅನ್ನೋ ದೊಡ್ಡ ಅಸದ ಮುಂದೆ ಯಾವುದು ಏನೂ ಮಾಡಲ್ಲ.

ಮನೆಯವರ ಕನಸನ್ನ ನನಸು ಮಾಡೋ ಹೊತ್ತು ಬಂದೇ ಬಿಡ್ತು! ಅಪ್ಪ ನೆಂಟರತ್ರ ಹೇಳಿಕೊಂಡು ಬಂದ ಹಾಗೆ ಮಗ ಡಾಕ್ಟರ್ ಆಗೋ ಸಮಯ ಇದು. ಅಮ್ಮನ ಮನೆಯವರು ಹೇಳೋತರ ನಮ್ಮ ಪ್ಯಾಮಿಲಿಲಿ ಮೊದಲು ಇಂಜಿನಿಯರ್ ಆಗೋ ಸಮಯ ಇದು. ಸ್ನೇಹಿತರೆಲ್ಲ ಸೇರಿಕಟ್ಟಿಕೊಂಡ
ಕನಸನ್ನ ನನಸು ಮಾಡಿಕೊಳ್ಳುವ ಸಮಯ ಇದು. ವಿದ್ಯಾರ್ಥಿಗಳ ಬಗ್ಗೆ ಮಾತಾಡೋವಾಗೆಲ್ಲ ಒಂದು ಮಾತು ಹಾಗೆ ಮನಸಲ್ಲಿ ಬಂದು ಹೋಗುತ್ತೆ. ಗೋಡೆ ಮೇಲಿರೋ ಗಡಿಯಾರ ಎಲ್ಲರಿಗೂ ಒಂದೇ ಸಮಯ ತೋರಿಸುತ್ತೆ.

ಆದರೆ, ಆ ಸಮಯವನ್ನ ನಾವು ಹೇಗೆ ಬಳಸಿಕೊಂಡಿದ್ದೀವಿ ಅನ್ನೋದರ ಮೇಲೆ ನೀನು ಮುಂದೇ ನಾಗುತ್ತೀಯಾ ಅನ್ನೋದು ನಿರ್ಧಾರ ಆಗುತ್ತೆ. ಮೈ ಡಿಯರ್ ಪ್ರೆಂಡ್ಸ್ ನೀವು ಡಾಕ್ಟರ್ ಆಗಬೇಕು ಅನ್ನೋ ಕನಸು ನಿಮ್ಮದೋ ಅಥವಾ ನಿಮ್ಮ ಮನೆಯವರದ್ದೆ ಗೊತ್ತಿಲ್ಲ. ನೀವು ಇಂಜಿನಿಯರ್ ಆಗಬೇಕು ಅನ್ನೋದು ನಿಮ್ಮ ಕನಸೋ ಅಥವಾ ನಿಮ್ಮ ಸ್ನೇಹಿತರೆಲ್ಲ ಸೇರಿಕಟ್ಟಿಕೊಂಡ ಕನಸೋ ಗೊತ್ತಿಲ್ಲ ಆದರೆ ಅದೆಷ್ಟೋ ನಿದ್ದೆಗೆಟ್ಟ ರಾತ್ರಿಗಳು. ಅಕ್ಕಪಕ್ಕದ ನಿಮ್ಮ ಸ್ನೇಹಿತರನ್ನ ನಿಮ್ಮ ಮನೆಯಲ್ಲಿ ತೋರಿಸಿ ನಿಮಗೆ ಕೊಟ್ಟ ಉದಾಹರಣೆಗಳು.

ಯಾವುದೋ ಅವಮಾನಕ್ಕೆ ಯಾವುದೋ ಜಿದ್ದಿಗೆ ಬಿದ್ದು ತೆಗೆದುಕೊಂಡು ನಿರ್ಧಾರಗಳು ಇವೆಲ್ಲ ಏನೇ ಇರಲಿ ನೀವೀಗ ಅದಕ್ಕೆ ಉತ್ತರ ಕೊಡೋ ಸಮಯ ಇದು. ಪರೀಕ್ಷೆ ಅಂದ ಕೂಡಲೇ ನಿಮ್ಮನ್ನ ಹೆದರಿಸೋರೆ ಜಾಸ್ತಿ ಆ ಸಿಲಬಸ್ ಕವರ್ ಮಾಡಿದ್ಯ? ಈ ಬುಕ್ ರೆಫರ್ ಮಾಡಿದ್ಯ? ಲಾ
ಇಯರ್ ಇದನ್ನ ಕೇಳಿದ್ರಂತೆ ಸೋ ಈ ಸರಿ ಈ ಕ್ವಷನ್ ಬಂದೇಬರುತ್ತೆ. ಅಂತ ಹೇಳೋರ ಮಾತೆಲ್ಲ ಕೇಳಿ ನಿಮಗೆ ತಲೆಬಿಸಿ ಆಗಿರುತ್ತೆ, ಅಪ್ಪ ಅಮ್ಮ ಅಕ್ಕ ಪಕ್ಕದವರ ಮನೆ ಮಕ್ಕಳು ಮಾಡಿಕೊಂಡ ಪ್ರಿಪರೇಷನ್‌ನನ್ನ ನಿಮ್ಮ ಜೊತೆ ಕಂಪೇರ್ ಮಾಡೋಕೆ ಶುರುಮಾಡಿರುತ್ತಾರೆ.

ಮೈ ಡಿಯರ್ ಪ್ರೆಂಡ್ಸ್, ನಿಮ್ಮ ತಯಾರಿ ಹೇಗಿರಬೇಕು ಅಂದ್ರೆ, ನಿಮಗೆ ಏನು ಗೊತ್ತು ಅನ್ನೋದು ನಿಮಗೆ ಸರಿಯಾಗಿ ಗೊತ್ತಿರಬೇಕು. ಹಾಗೆ ನಿಮಗೆ ಏನು ಗೊತ್ತಿಲ್ಲ ಅನ್ನೋದರ ಬಗ್ಗೆನು ನಿಮಗೆ ಸರಿಯಾಗಿ ಗೊತ್ತಿರಬೇಕು. ಯಾಕಂದ್ರೆ ಈಗ ನಿಮಗೆ ಗೊತ್ತಿರೋ ಎಲ್ಲ ವಿಷಯಗಳ ಬಗ್ಗೆ ನಿಮ್ಮ ಸ್ನೇಹಿತರ ಹತ್ರ ಡಿಸ್ಕಸ್ ಮಾಡೋಕೆ ಹೋದ್ರೆ, ಅವರು ಇನ್ನೊಂದು ಹೊಸ ವಿಷಯವನ್ನ ನಿಮಗೆ ಹೇಳುತ್ತಾರೆ. ಆಗ ನೀವು ಅದರ ಬಗ್ಗೆ
ಯೋಚನೆ ಮಾಡ್ತಾ ನೀವು ಏನು ಇಷ್ಟು ದಿನ ಕಲಿತ್ತಿದ್ದೀರೋ ಅದನ್ನ ಮರಿಯೋಕೆ ಶುರುಮಾಡ್ತೀರಾ.

ಹಾಗಾಗಿ ನಿಮ್ಮ ಸ್ನೇಹಿತರ ಜೊತೆ ಡಿಸ್ಕಸ್ ಮಾಡೋದನ್ನ ಮೊದಲು ಬಿಡಿ, ಹಾಗಂತ ಡೌಟ್ ಕೇಳದೆ ಇರಬೇಡಿ. ಈ ಮಾತನ್ನ ಹೇಳೋವಾಗ ನನಗೆ ಒಂದು ಮಾತು ನೆನಪಾಯ್ತು. ನನಗೆ ಒಂದು ದಿನ ಒಬ್ಬ ವಿದ್ಯಾರ್ಥಿಯಿಂದು ಒಂದು ಪ್ರಶ್ನೆ ಬಂತು-‘ಸಾರ್ ನಾವು ಕಷ್ಟ ಯಾಕ ಪಡಬೇಕು? ನಮ್ಮ ಹಣೇಲಿ ಬರೆದಿದ್ದರೆ ಅದು ನಮಗೆ ಸಿಕ್ಕಿ ಸಿಗುತ್ತಲ್ವಾ’ ಅಂತ ಅಂದ.ಅವನ ಮಾತು ಬಹಳ ತೀಕ್ಷಣವಾಗಿತ್ತು. ಹುಡುಗರೆಲ್ಲ ನಾನು ಏನು ಹೇಳುತ್ತೀನಿ ಅನ್ನೋದನ್ನ ಕಾಯುತ್ತಾ ಇದ್ರು. ಆಗ ನನಗೆ ಹೊಳೆದಿದ್ದು ಇಷ್ಟೆ, ಎಲ್ಲ ಹಣೇಲೆ ಬರೆದಿರುತ್ತೆ ನಿಜಾನಪ್ಪ ಆದ್ರೆ ಅದೇ ಹಣೆಬರಹದಲ್ಲಿ ನೀನು ಪ್ರಯತ್ನ ಪಟ್ಟರೆ ಅದು ಸಿಗಲಿ ಅಂತ ಬರೆದಿದ್ದರೆ ಏನು ಮಾಡ್ತೀಯಾ? ಅಂತ ಕೇಳಿದೆ, ಅವನ ಬಳಿ ಅದಕ್ಕೆ ಉತ್ತರ ಇರಲಿಲ್ಲ.

ಆದ್ರೆ ಪ್ರೆಂಡ್ಸ್, ಒಂದು ವಿಷಯ ನೆನೆಪಿಟ್ಟುಕೊಳ್ಳಿ ಮಾಡು ಇಲ್ಲವೆ ಮಡಿ ಅನ್ನೋದು ಹಳೇ ಮಾತು ಏನಾರು ಮಾಡಿ ಮಡಿ ಆಗ ನಾಲ್ಕು ಜನ ನಿನ್ನ ಬಗ್ಗೆ ಏನು ಮಾತಾಡ್ತಾರೆ. ಪ್ರಯತ್ನ ಮಾಡಿ ಸೋತೋನಿಗೆ ಇತಿಹಾಸದಲ್ಲಿ ಸೋತ ಅನ್ನೋ ಪಟ್ಟ ಸಿಗುತ್ತೆ. ಆದ್ರೆ, ಪ್ರಯತ್ನ ಪಡದೆ ಕೂತೋನಿಗೆ ಹೇಡಿ ಅಂತ ಜನ ಆಡಿಕೊಳ್ಳುತ್ತಾರೆ. ಅದಕ್ಕೆ ಯುದ್ಧಕ್ಕೆ ಅಂತ ಇಳಿದಾಗಿದೆ ಶತ್ರು ಯಾರೆ ಇರಲಿ; ಸೈನ್ಯ ಎಷ್ಟೇ ದೊಡ್ಡದಿರಲಿ; ನಿಮ್ಮ ಆತ್ಮ ವಿಶ್ವಾಸ ಅನ್ನೋ ದೊಡ್ಡ ಅಸದ ಮುಂದೆ ಯಾವುದು ಏನೂ ಮಾಡಲ್ಲ.

ಮುಂದೊಂದು ದಿನ ನೀವು ಡಾಕ್ಟರ್ ಆದ್ರೆ ನಿಮ್ಮ ಅಪ್ಪನ ಕಾಲರ್ ಮೇಲಾಗುತ್ತೆ. ಅಮ್ಮನ ಆತ್ಮವಿಶ್ವಾಸ ಜಾಸ್ತಿ ಆಗುತ್ತೆ. ಪಟ್ಟ ಶ್ರಮ, ಹಾಕಿದ ಕಣ್ಣೀರು, ಆದ ಅವಮಾನ ಯಾವುದು ಲೆಕ್ಕಕ್ಕೇ ಬರಲ್ಲ, ‘ಇವನೆಲ್ಲಿ ಡಾಕ್ಟರ್ ಆಗುತ್ತಾನೆ?’ ಅಂದೋರು ಇವರ ಕೈಗುಣಂದ ನನ್ನ ಖಾಯಿಲೆ ವಾಸಿ
ಆಯ್ತು ಅನ್ನೋ ಸಮಯ ಬಂದೆ ಬರುತ್ತೆ. ಅದಕ್ಕೆ ನೀಟ್ ಅನ್ನ ನೀಟಾಗಿ ಪಾಸ್ ಮಾಡಿ ನೀವು ಇಷ್ಟು ದಿನ ಪಟ್ಟ ಪರಿಶ್ರಮಕ್ಕೆ ಫಲ ಸಿಗೋ ಸಮಯ ಇದು, ಜನ ಯಾರತ್ರ ಬೇಕಾದ್ರು ಸುಳ್ಳು ಹೇಳ್ತಾರೆ ಆದ್ರೆ ಜನ ಸುಳ್ಳು ಹೇಳದೆ ಇರೋ ಒಂದು ಕಡೆ ಅಂದ್ರೆ ಅದು ಡಾಕ್ಟರ್ ಹತ್ರ, ಅದಕ್ಕೆ
ಭಾರತದಂತ ದೇಶದಲ್ಲಿ ವೈದ್ಯೋ ನಾರಾಯಣೋ ಹರೀಃ ಅಂತ ಡಾಕ್ಟರ್‌ನ ದೇವರಿಗೆ ಹೋಲಿಸಿದ್ದಾರೆ ಪ್ರಪಂಚಕ್ಕೆ ಶೇಕಡ ೩೯ ಪರ್ಸೆಂಟ್‌ಗಿಂತ ಹೆಚ್ಚು ಡಾಕ್ಟರ್‌ಗಳನ್ನು ಕೊಟ್ಟ ಖ್ಯಾತಿ ನಮ್ಮ ದೇಶದ್ದು, ಅಂತ ಸಾಲಿಗೆ ನಿಮ್ಮ ಹೆಸರನ್ನ ಸೇರಿಸೋ ಸಮಯ ಇದು.

ಅಪ್ಪ-ಅಮ್ಮ ಕೊಟ್ಟ ಹೆಸರನ್ನ ಇಡೀ ಕರ್ನಾಟಕಕ್ಕೆ ಪರಿಚಯಿಸೋ ಸಮಯ ಇದು. ಪರೀಕ್ಷೆ ಅನ್ನೋದು ನಿಮ್ಮ ಜೀವನದ ಒಂದು ಹಂತ ಅಷ್ಟೆ. ಆದರೆ,
ಅದೇ ಜೀವನ ಅಲ್ಲ, ನೀವು ಜೀವನ ಕಟ್ಟಿಕೊಳ್ಳೋಕೆ ಪರೀಕ್ಷೆ ಬಹಳ ಮುಖ್ಯ. ಅದು ಜೀವನಾನೆ ಆಗಿರಲಿ ಅಥವಾ ವಿದ್ಯಾರ್ಥಿ ಜೀವನಾನೆ ಆಗಿರಲಿ. ಕೆಲಸವನ್ನೇ ಆಗಲಿ, ಓದನ್ನೇ ಆಗಲಿ ಕಷ್ಟ ಪಟ್ಟು ಮಾಡಬೇಡಿ ಇಷ್ಟ ಪಟ್ಟು ಮಾಡಿ. ಆಗ ನೀವು ಮಾಡೋ ಕೆಲಸ ನಿಮ್ಮ ಅಭ್ಯಾಸವಾಗಿ ಟರ್ನ್
ಆಗುತ್ತೆ. ಆ ಮೇಲೆ ನೀವು ಕೆಲಸ ಮಾಡೋಹಾಗೆ ಇಲ್ಲ.

ಯಾಕಂದ್ರೆ, ಅದು ನಿಮ್ಮ ರುಟೀನ್ ಆಗಿ ಹೋಗಿರುತ್ತೆ. ನಾವು ವಿದ್ಯಾರ್ಥಿಗಳಿಗೆ ಎಕ್ಸಾಂಪಲ್ ಕೊಡೋವಾಗ ಬಹಳವಾಗಿ ೨ ಹೆಸರು ಕೇಳಿ ಬರುತ್ತೆ. ಒಂದು ನಮ್ಮ ಹೆಮ್ಮೆಯ ವಿಶ್ವೇಶ್ವರಯ್ಯ ಇನ್ನೊಂದು ಅಬ್ದುಲ್ ಕಲಾಂ. ವಿಶ್ವೇಶ್ವರಯ್ಯನವರು ದೀಪದ ಬೆಳಕಲ್ಲಿ ಓದಿ ಇಡೀ ಕರ್ನಾಟಕಕ್ಕೆ ಬೆಳಕುಕೊಟ್ಟರು. ಅಬ್ದುಲ್ ಕಲಾಂರಂತ ವಿeನಿಗಳು ಶತ್ರು ಎದೆಯಲ್ಲಿ ನಡುಕ ಹುಟ್ಟಿಸೋ ಅಣುಬಾಂಬ್ ಕಂಡುಹಿಡಿದು ಸಿಂಪಲ್ ಆಗಿ ಬಂದ
ನಮ್ಮೆಲ್ಲರಿಗೂ ಸೂಪರ್ ಮ್ಯಾನ್ ಆಗಿ ಉಳಿದುಬಿಟ್ಟರು.

ಒಂದು ದಿನ ಮೈಕ್ರೋಸಾಫ್ಟ್ ಸ್ಥಾಪಕರೊಬ್ಬರಲ್ಲಿ ಅಮೆರಿಕದ ಪ್ರಜೆ ಕೇಳಿದ್ನಂತೆ ‘ಯಾಕೆ ನೀವು ಭಾರತದ ಎಂಜಿನೀರ್ ಗಳನ್ನ ಹೈರ್ ಮಾಡ್ತೀರ ಅಮೆರಿಕದವರು ನಿಮಗೆ ಕಣ್ಣಿಗೆ ಕಾಣಲ್ವಾ’ ಅಂತ, ಅದಕ್ಕೆ ಅವರು ಹೇಳಿದ್ರಂತೆ ‘ನಾವು ಅವರನ್ನ ಇವತ್ತು ಹೈರ್ ಮಾಡಿಲ್ಲ ಅಂದ್ರೆ ಭಾರತದಲ್ಲಿ
ಮತ್ತೊಂದು ಮೈಕ್ರೋಸಾಫ್ಟ್ ಸಂಸ್ಥೆ ಸ್ಥಾಪನೆ ಆಗುತ್ತೆ’ ಅಂತ ಅದು ಭಾರತಕ್ಕೆ ಇರೋ ತಾಕತ್ತು. ಇಂತಹ ಎಂಜಿನಿಯರ್, ಡಾಕ್ಟರ್‌ಗಳ ಭವಿಷ್ಯ ಬರೆಯುವ ಸಮಯ ಇದು, ಹೆದರಬೇಡ ಏನು ಆಗಲ್ಲ ಧೈರ್ಯಕ್ಕಿಂತ ದೊಡ್ಡ ಸಾಧನ ಬೇರೆಯಿಲ್ಲ. ನಿಮ್ಮ ಪರಿಶ್ರಮಕ್ಕೆ ಫಲ ಸಿಗುವ ಸಮಯ
ಇದು. ವಿದ್ಯಾರ್ಥಿಗಳೇ ನಿಮ್ಮ ಶ್ರಮದ ಹಿಂದೆ ನಮ್ಮ ಪರಿಶ್ರಮ ಇz ಇರುತ್ತೆ ಭವಿಷ್ಯದ ಡಾಕ್ಟರ್‌ಗಳ ಭರವಸೆ, ವಿಜ್ಞಾನಿಗಳ ಆತ್ಮವಿಶ್ವಾಸದ ಪ್ರತೀಕವಾಗಿ ನಿಮ್ಮನ್ನ ಮಾರ್ಗದರ್ಶನ ಮಾಡೋಕೆ ನಾವಿದ್ದೇವೆ. ಗಟ್ಟಿ ನಿರ್ಧಾರ ದಿಟ್ಟ ಹೆಜ್ಜೆಯೊಂದೆ ಗೆಲುವನ್ನ ಮುಟ್ಟಿಸೋಕೆ ಸಾಧ್ಯ.