ವಿಶ್ಲೇಷಣೆ
ಸಿದ್ದಾರ್ಥ ವಾಡೆನ್ನವರ್
ಇಂದು ನಾವು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿದ್ದೇವೆ. 75 ವರ್ಷಗಳನ್ನು ಕಳೆದಿದ್ದೇವೆ. ೧೯೪೭ ರಿಂದ ೨೦೨೨ರವರೆಗೆ ನಾವು ತುಂಬಾ ಸಾಧಿಸಿದ್ದೇವೆ, ಇನ್ನು ಸಾಧಿಸುವುದಿದೆ. ಯಾವಾಗ ಒಂದು ದೇಶ ಪ್ರಜಾಪ್ರಭುತ್ವ ಅಡಿಯಲ್ಲಿ ನಡೆಯುತ್ತದೆಯೋ
ಅಲ್ಲಿ ವಿಶ್ವಾಸಾತ್ಮಕ ಚಿಂತನೆಯ ಸರಕಾರಗಳನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆ ಪ್ರಜೆಗಳ ಮೇಲಿರುತ್ತದೆ.
ಮುಂದಿನ ೨೫ ವರ್ಷಗಳು ಭಾರತಕ್ಕೆ ಮಹತ್ವದ ವರ್ಷಗಳು. 2047ಕ್ಕೆ ನಮ್ಮ ದೇಶ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿ ಇರಬೇಕಾದ ಅವಶ್ಯಕತೆಯಿದೆ. ಯಾರನ್ನು ನಾವು ಅಧಿಕಾರದಲ್ಲಿ ಇರಿಸುತ್ತೇವೆ ಎನ್ನುವುದರ ಮೇಲೆ ದೇಶದ ಭವಿಷ್ಯ ಅಡಗಿದೆ. 2047ಕ್ಕೆ ನಮ್ಮ ದೇಶ ಜಗತ್ತಿನ ಸರ್ವ ಶ್ರೇಷ್ಠ ದೇಶ ಆಗಬೇಕು. ಜಗತ್ತು ನಮ್ಮ ನಿರ್ಣಯಗಳಿಗಾಗಿ ಕಾದು ಕುಳಿತುಕೊಳ್ಳಬೇಕು. ಕಳೆದ ೭೫ ವರ್ಷಗಳಲ್ಲಿ ೬೪ ವರ್ಷಗಳ ಆಡಳಿತ ಮತ್ತು ಉಳಿದ ಒಂಬತ್ತು ವರ್ಷಗಳ ಆಡಳಿತದ ಮಧ್ಯೆ ಅಗಾಧವಾದ ವ್ಯತ್ಯಾಸ ಇದೆ. ಜಗತ್ತು ಇಂದು ನಮ್ಮತ್ತ ಮುಖ ಮಾಡಿದೆ.
ಜಗತ್ತು ಜಾಗತಿಕ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತದ ಸಲಹೆ ಕೇಳುತ್ತಿದೆ. ಸ್ಥಿರ ಸರ್ಕಾರ ಜೊತೆಗೆ ನೈಜ್ಯ ದೇಶಭಕ್ತಿ ನಾಯಕರ ದಂಡು ನಮಗೆ ಸಿಕ್ಕಾಗ ನಮ್ಮ ಸಂಕಲ್ಪ ಪರಿಪೂರ್ಣ ಆಗುತ್ತದೆ. ವಿವಿಧ ಪಂತ, ವಿವಿಧ ನಂಬಿಕೆ, ವಿವಿಧ ಜಾತಿ ಹಾಗೂ ಕುಲಗಳಿಂದಾಗಿ ಮತ್ತು ರಾಜಕೀಯ, ಆರ್ಥಿಕ, ಭಾಷಾ ಮತ್ತು ಪ್ರಾಂತೀಯ ಭೇದಗಳಿಂದಾಗಿ ನಮ್ಮ ರಾಷ್ಟ್ರದಲ್ಲಿ ಉಂಟಾಗಿರುವ ಒಡಕುಗಳನ್ನು ನಿವಾರಿಸಲು ಸಮರ್ಥ ಪಕ್ಷಕ್ಕೆ ನಾವೆಲ್ಲ ಬೆಂಬಲ ಸೂಚಿ ಸುವ ಅಗತ್ಯವಿದೆ.
ನಮ್ಮ ಪ್ರಾಚೀನ ಇತಿಹಾಸದ ಶ್ರೇಷ್ಠ ಸಂಗತಿಗಳನ್ನು ಮನವರಿಕೆ ಮಾಡಿಕೊಡುವ ಸಂಘಟನೆಗಳ ಸಿದ್ಧಾಂತಗಳಿಗೆ ಬೆಂಬಲ
ಸೂಚಿಸುವ ಪಕ್ಷಕ್ಕೆ ನಾವೆಲ್ಲ ಮತ ನೀಡಬೇಕಾಗಿದೆ. ತ್ಯಾಗ, ಸೇವೆ ಮತ್ತು ಸಮಾಜದ ಕುರಿತಾಗಿ, ರಾಷ್ಟ್ರದ ಕುರಿತಾಗಿ ನಿಸ್ವಾರ್ಥ ದಿಂದ ಸಮರ್ಪಣಾ ಭಾವ ಮೂಡಿಸುವ ಚಿಂತನೆಗಳಿಗೆ ಬೆಂಬಲ ಇರಲಿ. ನಕಾರಾತ್ಮಕ ಅಂಶಗಳಿಗೆ ಪ್ರಚೋದನೆ ನೀಡುವ ಪಕ್ಷಗಳನ್ನು ದೂರ ಇಡುವ ಕಾಲ ಕೂಡಿ ಬಂದಿದೆ. ‘ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ’ ಆಡಳಿತ ನಡೆಸಲು ಇರುವ ಉತ್ತಮ ವೇದಿಕೆ.
ಬರುವ ಚುನಾವಣಾ ಜಾತ್ರೆಯಲ್ಲಿ ಪರ ಮತ್ತು ವಿರುದ್ಧ ಎನ್ನುವ ಚಿಂತನೆ ಇದ್ದೇ ಇರುತ್ತದೆ. ಗೆದ್ದ ನಂತರ ಎಲ್ಲರೂ ನನ್ನವರು
ಎನ್ನುವ ಮನಸ್ಥಿತಿಗಳು ಯಾವವು? ಈ ಪ್ರಶ್ನೆಗೆ ಮೊದಲೇ ಉತ್ತರ ಹುಡುಕಿ ದ್ವೇಷದ ರಾಜಕಾರಣಕ್ಕೆ ಅಂತ್ಯ ಹೇಳಬೇಕಾಗಿದೆ. ಕೆಲವು ನೇತಾರರು ಹೀಗೂ ಇರುತ್ತಾರೆ. ಗೆದ್ದ ನಂತರ ತನ್ನ ಜಾತಿ, ತನ್ನ ಕುಟುಂಬ ಅನ್ನುತಾರೆ. ನಕಲಿವಾದ ಅನುಸರಿಸಿ, ತುಷ್ಟೀ ಕರಣ ನೀತಿ ಅಳವಡಿಸಿಕೊಂಡು ದೇಶದ ಅಭದ್ರತೆಗೆ ಕಾರಣರಾಗುತ್ತಾರೆ. ಹಲವು ವರ್ಷಗಳವರೆಗೆ ಆಡಳಿತ ನಡೆದದ್ದು ಹೀಗೆನೇ.
೧೯೬೫ರಲ್ಲಿ ಪಾಕಿಸ್ತಾನ ದೇಶ ಭಾರತದಲ್ಲಿರುವ ಮುಸ್ಲಿಂರನ್ನು ಎತ್ತಿ ಕಟ್ಟಲು ಪ್ರೇರೇಪಿಸುತ್ತಿತ್ತು. ಇದನ್ನು ಅರಿತ ಅಂದಿನ ಪ್ರಧಾನಿ ಶಾಸ್ತ್ರೀಜಿಯವರು ದೇಶವನ್ನು ಉದ್ದೇಶಿಸಿ ಹೀಗೆ ಭಾಷಣ ಮಾಡುತ್ತಾರೆ. ‘ಹತ್ಯಾರೋಂ ಕಾ ಜವಾಬ್ ಹತ್ಯಾರೋಂ ಸೇ ದೇಂಗೆ!’ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಅಂದರೆ ಪಾಕಿಸ್ತಾನಕ್ಕೆ ಯುದ್ಧದ ಭಾಷೆ ಬಿಟ್ಟು ಬೇರೆ ಭಾಷೆ ಅರ್ಥ ಆಗುವು ದಿಲ್ಲ. ನಮ್ಮ ರಾಜ್ಯದಲ್ಲಿಯೂ ಪಾಕಿಸ್ತಾನದ ಚಿಂತನೆಗೆ ಬೆಂಬಲ ಸೂಚಿಸುವ ಮನಸ್ಥಿತಿ ಹೊಂದಿದ ಪಕ್ಷಗಳಿವೆ. ಆ ಪಕ್ಷಗಳಲ್ಲಿ ನಮ್ಮನ್ನು ನಾಶ ಮಾಡುವ ಮನಸ್ಥಿತಿಯ ನಾಯಕರಿದ್ದಾರೆ.
ಅವರು ಅಧಿಕಾರಕ್ಕಾಗಿ ಏನೆಲ್ಲಾ ಮಾಡಿದ್ದಾರೆ ಮತ್ತು ಮಾಡುವವರಿದ್ದಾರೆ. ಅಧಿಕಾರಕ್ಕೆ ಬಂದರೆ ೧೦೦೦೦ ಕೋಟಿ ರು. ಮೀಸಲಿ ಡುತ್ತೇವೆ ಎಂದು ಹೇಳಿದ್ದಾರೆ. ಅಂದರೆ ನಮ್ಮ ಮತ ಪಡೆದು ಅವರ ಕಲ್ಯಾಣ ಮಾಡುವುದು. ಶಾಸ್ತ್ರೀಜಿಯವರು ಹೇಳಿದ ಮಾತು ನೆನಪಿಸಿಕೊಂಡು ರಾಷ್ಟ್ರೀಯ ವಿಚಾರಧಾರೆ ಇರುವ ಪಕ್ಷಕ್ಕೆ ಬೆಂಬಲ ಸೂಚಿಸೋಣ. ಪಕ್ಷಗಳು ಮತ್ತು ಸಂಸ್ಥೆಗಳು ದೇಶ ವಿರೋಧಿ ಗಳಾಗಬಾರದು, ಹಿಂಸಾತ್ಮಕ ಕಾರ್ಯಗಳಲ್ಲಿ ತೊಡಗಬಾರದು. ಸಜ್ಜನರು ರಾಜಕೀಯಕ್ಕೆ ಬರಬೇಕಾದರೆ ದೇಶದ ಪ್ರಜೆಗಳಾದ ನಾವು ದರೋಡೆಕೋರರಿಗೆ, ಧರ್ಮಭ್ರಷ್ಟರಿಗೆ, ಮತೀಯವಾದಿಗಳ ಕೈಗೆ ಅಧಿಕಾರ ಕೊಡುವುದನ್ನು ನಿಲ್ಲಿಸಬೇಕು.
ನಾವು ಪಕ್ಷವನ್ನು ಆಯ್ಕೆ ಮಾಡುವ ಪೂರ್ವದಲ್ಲಿ ಆ ಪಕ್ಷದ ವಿದೇಶ ನೀತಿ, ರಕ್ಷಣಾ ನೀತಿ, ಆರ್ಥಿಕ ನೀತಿ, ದೇಶದ ಸಂಸ್ಕೃತಿಯ ರಕ್ಷಣೆ ಜೊತೆಗೆ ಪ್ರತಿ ಪ್ರಜೆಗೆ ಸರಕಾರ ಕೊಡುಗೆ ಏನು? ಇವುಗಳ ಬಗ್ಗೆ ಚಿಂತನೆ ಮಾಡಿ ಮತ ಚಲಾಯಿಸಬೇಕಾಗಿದೆ. ನಾವೆಲ್ಲ ಗರ್ವದಿಂದ ಹೇಳಬೇಕಾಗಿದೆ ‘ನಮ್ಮದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ.’ ಜೊತೆಗೆ ನಾವೆಲ್ಲ ನೆನಪಿಡಬೇಕಾದ
ಇನ್ನೊಂದು ಅಂಶವೇನೆಂದರೆ ನಮ್ಮದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ ಅಷ್ಟೇ ಅಲ್ಲ ‘ಜಗತ್ತಿನ ಪ್ರಜಾಪ್ರಭುತ್ವದ ವ್ಯವಸ್ಥೆಯ ತಾಯಿ.’ ಜಗತ್ತಿಗೆ ಪ್ರಜಾಪ್ರಭುತ್ವ ಚಿಂತನೆಯನ್ನು ನಮ್ಮ ದೇಶ ನೀಡಿದೆ, ನಮ್ಮ ಪ್ರಜಾಪ್ರಭುತ್ವ ಪಂಚಾಯಿತಿ ಯಿಂದಲೇ ಪ್ರಾರಂಭವಾಗಿ ಊರಿನ ಶೇಕಡ ೯೦ ರಷ್ಟು ಸಮಸ್ಯೆಗಳು ಗ್ರಾಮ ಮಟ್ಟದಲ್ಲಿಯೇ ನಿವಾರಣೆ ಆಗುತ್ತವೆ.
ಕಾಂಗ್ರೆಸ್, ಸಮಾಜವಾದಿ, ಸಮತಾವಾದ ಸಿದ್ಧಾಂತಗಳಲ್ಲಿ ಬೆಳೆದ ರಾಜಕಾರಣಿಗಳು ದೇಶದ ಮೇಲೆ ಗೌರವ ಹುಟ್ಟುವ ಹಾಗೆ ಆಡಳಿತ ಮಾಡಲೇ ಇಲ್ಲ. ಜಾತಿ ಮತ್ತು ಕುಟುಂಬ ಅಭಿವೃದ್ಧಿಗೆ ಆದ್ಯತೆ ನೀಡಿದರು. ಆದರೆ, ಇಂದು ನನ್ನ ಭಾರತ ಬದಲಾಗಿದೆ. ರಾಷ್ಟ್ರವಾದಿ ಸಂಘಟಣೆಗಳ ನಿರಂತರ ಪರಿಶ್ರಮದಿಂದ ಜನರಲ್ಲಿ ‘ನನ್ನ ದೇಶ, ನನ್ನ ಸಂಸ್ಕೃತಿ, ನಮ್ಮ ಜನ, ನಮ್ಮ ಜೀವನ
ವಿಧಾನ-ಇವು ಜಗತ್ತಿನಲ್ಲಿಯೇ ಶ್ರೇಷ್ಠ’ ಎನ್ನುವುದು ಮನವರಿಕೆ ಆಗಿದೆ. ಬಲಿಷ್ಠ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಪ್ರಮುಖ ಸ್ಥಾನ ಪಡೆದಿದೆ.
ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುತ್ತಿದ್ದೇವೆ. ವ್ಯಕ್ತಿ ನಿರ್ಮಾಣದಿಂದ ಸಮಾಜದ ಸಂಘಟನೆ, ಜೊತೆಗೆ ಸಶಕ್ತ ಮತ್ತು ಸದೃಢ ದೇಶ ಕಟ್ಟಲು ಸಾಧ್ಯ. ಚಿಂತನೆ ಹೇಗಿರಬೇಕೆಂದರೆ, ‘ಯುದ್ಧ ನಡೆಯಬೇಕಾದರೆ ಅದು ಶತ್ರುವಿನ ನೆಲದಲ್ಲಿ ನಡೆಯಬೇಕು.’ ಅಷ್ಟರ ಮಟ್ಟಿಗೆ ನಾವು ಪ್ರಬಲ ಆಗಬೇಕು. ಇದನ್ನು ಸರ್ಜಿಕಲ್ ಸ್ಟ್ರೈಕ್ ಮೂಲಕ ಸಾಬೀತುಪಡಿಸಿದ್ದೇವೆ. ಶತ್ರುವಿನ ನೆಲದಲ್ಲಿ ನಿಂತು ಶತ್ರುಗಳನ್ನು ಸೋಲಿಸುವ ತಾಕತ್ತು ಇಂದು ಭಾರತಕ್ಕೆ ಬಂದಿದೆ. ಅದಕ್ಕೆ ಕಾರಣ ಪ್ರಜಾಪ್ರಭುತ್ವದ ಚುನಾವಣಾ ವ್ಯವಸ್ಥೆಯಲ್ಲಿ ನಾವೆಲ್ಲ ಒಂದಾಗಿ ಒಂದು ಸಿದ್ಧಾಂತಕ್ಕೆ ಮತ ನೀಡಿದ್ದು, ಇದು ಹೀಗೇ ಮುಂದುವರಿಯಬೇಕಾದ ಅನಿವಾರ್ಯತೆ ಇದೆ.
ಕರ್ನಾಟಕದಲ್ಲಿ ಮೊದಲೆಲ್ಲಾ ಉತ್ತರಕ್ಕೆ ಲಿಂಗಾಯತರು, ದಕ್ಷಿಣಕ್ಕೆ ಒಕ್ಕಲಿಗರು ಎಂಬ ಪರಂಪರೆ ಇತ್ತು. ಆದರೆ ಇಂದು ‘ಭಾರತ್ ಮಾತಾ ಕೀ ಜೈ’, ‘ಕನ್ನಡಾಂಬೆಗೆ ಜೈ’ ಎನ್ನುತ್ತಿದ್ದೇವೆ. ಬದಲಾವಣೆ ಅಂದರೆ ಇದೇ ಅಲ್ಲವೆ? ಡಾ|| ಬಿ.ಆರ್. ಅಂಬೇಡ್ಕರ್ ಅವರು ಜಾತಿಯನ್ನು ಮೀರಿದ ಮಹಾನ್ ರಾಷ್ಟ್ರವಾದಿ ಆಗಿದ್ದರು. ಇತ್ತೀಚಿನ ಪೂರ್ಣ ಬೆಂಬಲಿತ ಸರ್ಕಾರಗಳ ಆಡಳಿತದಿಂದ ಎಲ್ಲರಿಗೂ
ಇದು ಮನವರಿಕೆಯಾಗಿದೆ. ಡಾ|| ಬಿ.ಆರ್. ಅಂಬೇಡ್ಕರ ಅವರು ಎಂದಿಗೂ ರಿಲಿಜನ್‌ಗಳಿಗೆ ಬೆಂಬಲ ಸೂಚಿಸಲಿಲ್ಲ.
“We are Indians Firstly and Lastly” ಎನ್ನುವ ಸಂದೇಶ ನೀಡಿದರು. ಭಾರತೀಯರಾದ ನಾವೆಲ್ಲ ಪ್ರತೀ ಕ್ಷಣ ನಮ್ಮ ರಾಷ್ಟ್ರದ ಬಗ್ಗೆ ಚಿಂತಿಸಬೇಕಾಗಿದೆ. ವ್ಯಕ್ತಿ ನಿರ್ಮಾಣ, ಸಮಾಜ ಸಂಘಟಣೆ ಜೊತೆಗೆ ಸದೃಢ ರಾಷ್ಟ್ರ ನಿರ್ಮಾಣ ಈ ಚಿಂತನೆಗಳಿಗೆ ಬೆಂಬಲ ನೀಡುವ ಪಕ್ಷಕ್ಕೆ ನಾವೆಲ್ಲ ತಪ್ಪದೆ ಮತ ನೀಡೋಣ. ಸುಮಾರು ೫೦೦ ವರ್ಷಗಳ ಹಿಂದೆ ಶ್ರೀಪುರಂದರ ದಾಸರು ‘ದುರಹಂಕಾರ ಮಾಡಿದರೆ ಕೊನೆಗೆ ಗಂಜಿಗೂ ಗತಿ ಇಲ್ಲದಂತಾಗುತ್ತದೆ’ ಎಂದು ಹೇಳಿದ್ದರು.
ನನಗೆ ಪಕ್ಕದ ಪಾಕಿಸ್ತಾನ ನೆನಪಿಗೆ ಬರುತ್ತಿದೆ. ನಮ್ಮ ದೇಶದಲ್ಲಿಯೂ ಪಾಕಿಸ್ತಾನದ ಹಾಗೆ ಮನಸ್ಥಿತಿಯುಳ್ಳ ಪಕ್ಷಗಳಿವೆ. ಕೇವಲ
ಸುಳ್ಳಿನ ಗ್ಯಾರಂಟಿಗಳಿಂದಲೇ ಅಧಿಕಾರ ಪಡೆಯಬಹುದು ಎನ್ನುವ ಭ್ರಮೆಯಲ್ಲಿದ್ದಾರೆ. ಸೈದ್ಧಾಂತಿಕ ಚಿಂತನೆ ಇಲ್ಲದ, ಪ್ರತಿ ಪ್ರಜೆಯ ಕಲ್ಯಾಣ ಬಯಸದ, ಕೇವಲ ಜಾತಿ ಮತ್ತು ಕುಟುಂಬ ಅಭಿವೃದ್ಧಿಗಾಗಿ ಅಧಿಕಾರ ಉಪಯೋಗಿಸಿಕೋಳ್ಳುವ ಪಕ್ಷಗಳಿಗೆ ಮುಕ್ತಿನೀಡಬೇಕಾಗಿದೆ. ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸೌಲತ್ತುಗಳು ಸಿಗಬೇಕಾದರೆ, ದೇಶ ಬಲಿಷ್ಠ ಆಗಬೇಕಾದರೆ ಯಾವ ಪಕ್ಷವನ್ನು ಅಧಿಕಾರಕ್ಕೆ ತರಬೇಕು? ಈ ವಿಷಯದಲ್ಲಿ ಯೋಗ್ಯ ನಿರ್ಧಾರ ತೆಗೆದುಕೊಳ್ಳುವಷ್ಟರ ಮಟ್ಟಿಗೆ ನಾಡಿನ ಪ್ರಜೆ ಗಳು ಪ್ರಜ್ಞಾವಂತರಾಗಿದ್ದಾರೆ.
ಸ್ವಾತಂತ್ರ್ಯ ಸಿಕ್ಕು ೬೫ ವರ್ಷಗಳಾದರೂ ಪ್ರತಿ ಕುಟುಂಬಕ್ಕೆ ಮನೆ ಇರಲಿಲ್ಲ. ಪ್ರತಿ ಮನೆಗೆ ಬೆಳಕು ಇರಲಿಲ್ಲ, ಆ ಮನೆಗೆ ನೀರು, ಸಿಲೆಂಡರ್ ಗ್ಯಾಸ್ ಇರಲಿಲ್ಲ. ಕೇವಲ ಇತ್ತೀಚಿನ ೯ ವರ್ಷಗಳಲ್ಲಿ ಎಲ್ಲವೂ ಸಾಧ್ಯವಾಗಿದೆ. ಸಮರ್ಥ ಪಕ್ಷ ಅಧಿಕಾರಕ್ಕೆ ಬಂದರೆ
ಪ್ರತಿಯೊಬ್ಬರೂ ನೆಮ್ಮದಿಯಿಂದ ಬದುಕಬಹುದು.