ಮಿಶ್ರಾ ಕೃಷಿ
ಕವಿತಾ ಮಿಶ್ರಾ
mishraformkvt@gmail.com
ಯಾವುದೇ ಬೆಳೆಯ ಬೆಲೆ ನಿರ್ಧಾರ ಮಾಡುವ ಹಕ್ಕು ರೈತನಿಗೆ ಇರುವುದಿಲ್ಲ. ಒಂದು ವರ್ಷ ಕಡಿಮೆ ಆದಾಯ ಬಂದರೆ ಮುಂದಿನ ವರ್ಷ ಸಲ್ಪ ಹೆಚ್ಚು ಬರುತ್ತದೆ. ಕಡಿಮೆ ಬಂದ ವರ್ಷ ಹೋರಾಟಕ್ಕೆ ಹೋದರೆ ಅವನ ಕುಟುಂಬ ಉಪವಾಸ ಬೀಳುತ್ತದೆ.
ನಾವು ಕೃಷಿಯನ್ನು ಮಾಡುತ್ತಿದ್ದೇವೆ ಅಂದರೆ ನಮ್ಮ ಮನೆಯಲ್ಲಿ ನೂರಾರು ಗೊಬ್ಬರ ಚೀಲ, ಒಂದಿಷ್ಟು ಕಸ ಕಡ್ಡಿ ಇಂತಹವು ಇರಬೇಕು, ಇಲ್ಲದಿದ್ದರೆ ನಾವು ಉತ್ತಮ ಕೃಷಿಕರಲ್ಲ ಅಂತ ಹೇಳುವ ಅನೇಕ ಮಂದಿ ಇದ್ದಾರೆ. ಆದರೆ ಅದೊಂದು ದೊಡ್ಡ ಭ್ರಮೆ ಅನ್ನುವುದರಲ್ಲಿ ನಿಸ್ಸಂಶಯ. ಸೂಟು ಬೂಟು ಹಾಕಿಕೊಂಡಿದ್ದರೆ ಅವನೊಬ್ಬ ಸಾಪ್ಟ್‌ವೇರ್ ಅಥವಾ ಉದ್ಯಮಿ ಇಲ್ಲವೇ ಅವನೊಬ್ಬ ಯಾವುದೋ ದೊಡ್ಡ ಶ್ರೀಮಂತನೇ ಆಗಿರಬೇಕು ಅಂತ ಜನರು ವಿಚಾರ ಮಾಡುತ್ತಾರೆ.
ಆದೇ ರೈತ ಎಷ್ಟೇ ಶ್ರೀಮಂತನಾಗಿದ್ದರೂ ಅವನು ಪಂಚೆಯನ್ನೇ ತೊಡಬೇಕು, ಹರಿದ ಕೊಳಕು ಅಂಗಿ ಯನ್ನೇ ಧರಿಸಿರಬೇಕು. ಪ್ರಗತಿಪರ ರೈತ ಅಂದರೆ ಅವನು ಹಸಿರು ಶಾಲನ್ನು ಹಾಕಿಕೊಳ್ಳಬಹುದು. ಒಬ್ಬ ರೈತನಿಗೆ ಶ್ರೀಮಂತರ ನೆಂಟಸ್ತನವಾಗಿತ್ತು. ಅವರು ಸೂಟು ಬೂಟು ಇಲ್ಲದೆಯೆ ಮನೆ ಯಿಂದ ಹೊರಗೆ ಹೋಗದೇ ಇರಲಾರ ದಷ್ಟು ಪ್ರೆಸ್ಟೀಜಿನ ಜನ. ರೈತನೂ ಕೂಡ ತುಂಬಾ ಬಡವ ಅಲ್ಲ. ಅವನೂ ಊರಿನಲ್ಲಿ ಶ್ರೀಮಂತನೆ. ಇರುವ ಬಟ್ಟೆಗಳಲ್ಲೇ ಸಲ್ಪ ಹೆಚ್ಚು ಬಿಳುಪಾದ ಬಟ್ಟೆ ಯನ್ನು ಧರಿಸಿ ಶ್ರೀಮಂತರ ಮನೆಯ ಮುಂದೆ ಹೋಗಿ ನಿಂತಾಗ, ಮನೆಯ ನಾಯಿಗಳು ಒಂದು ಕಡೆ ಕೂಗುತ್ತಿದ್ದರೆ, ಸೆಕ್ಯೂರಿಟಿ ರೈತನನ್ನು ಹೋಗುವಂತೆ ಸನ್ನೆ ಮಾಡುತ್ತಿದ್ದ.
ಮನೆಯ ಯಜಮಾನ ಮನೆಯಿಂದ ಹೊರಗೆ ಬಂದು ಇವನನ್ನು ಕರೆದುಕೊಂಡು ಹೋದರು, ಆದ್ರೆ ನಿಜವಾಗಿ ಮಜಾ ಇರುವುದೇ ಈ ಘಟನೆಯ ನಂತರ. ಆ ದಿನ ರಾತ್ರಿ ಶ್ರೀಮಂತನ ಸ್ನೇಹಿತನ ಮನೆಯಲ್ಲೊಂದು ದೊಡ್ಡ ಕಾರ್ಯ ಕ್ರಮ. ರೈತನೊಬ್ಬನನ್ನೇ ಬಿಟ್ಟು ಹೋಗುವುದಕ್ಕೆ ಅಸಾಧ್ಯ. ಯಾಕಂದ್ರೆ ಅವನು ಬಂದಿದ್ದೇ ಇವತ್ತು. ಶ್ರೀಮಂತನಿಗೆ, ಇವನನ್ನೂ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗೋಣ ಅಂತ ಇದ್ದರೂ ಪ್ರೆಸ್ಟೀಜಿನ ಮ್ಯಾಟರ್ರು. ಆದ್ರೂ ಅವನ ಬಳಿ ಹೇಳಿ, ಅವನಿ ಗೊಂದು ಸೂಟು ಬೂಟು ಹಾಕಿಸಿ ಕಾರ್ಯಕ್ರಮಕ್ಕೆ ಕರೆದುಕೊಂಡ ಹೋದ. ಇದುವರೆಗೆ ಶೂ ಹಾಕಿರದ ರೈತನ ಕಾಲುಗಳು ತುರಿಕೆಗೆ ಪ್ರಾರಂಭವಾಗಿತ್ತು, ಅವನು ಯಾವತ್ತೂ ತೆರೆದ ಪರಿಸರದಲ್ಲಿ ಉಳಿದಿದ್ದವನೇ ಹೊರತು, ಮುಚ್ಚಿಕೊಂಡು ಉಸಿರುಕಟ್ಟುವ ವಾತಾವರಣದಲ್ಲಿ ಬದುಕಿದವನಲ್ಲ.
ಸರಿ, ಶೂ ತೆಗೆದ. ಈಗ ಮೇಲಿನ ಕೋಟು ಸೆಕೆಯನ್ನು ಉಂಟುಮಾಡುವುದಕ್ಕೆ ಪ್ರಾರಂಭ ಮಾಡಿತ್ತು. ಅಯ್ಯಪ್ಪಾ, ಈ ದರಿದ್ರ ಕೋಟನ್ನು ಇವರೆಲ್ಲಾ ಹೇಗೆ ಹಾಕಿಕೊಂಡಿದ್ದಾರೆ ಅಂತ ವಿಚಾರ ಮಾಡಿ ಅದನ್ನೂ ತೆಗೆದುಬಿಸಾಡಿದ ರೈತ, ಈಗ ಬನಿಯನ್, ಪ್ಯಾಂಟ್ ಮತ್ತು ಕಾಲುಚೀಲದಲ್ಲಿ ಇರುವುದನ್ನು ಗಮನಿಸಿದ ಜನರು ನಗುವುದಕ್ಕೆ ಪ್ರಾರಂಭ ಮಾಡಿದ್ದರು. ಎಲ್ಲರೂ ಟೇಬಲ್‌ನ ಮೇಲೆ ಕುಳಿತು ಊಟ ಮಾಡಿದರೆ ಇವನು ಮಾತ್ರ ನೆಲಕ್ಕೆ ಕುಳಿತು, ಅನ್ನಕ್ಕೆ ಕೈ ಮುಗಿದು
ಊಟ ಮಾಡುತ್ತಿದ್ದ.
ಇದರಲ್ಲಿ ನಮ್ಮ ಸಂಸ್ಕೃತಿ ಕಾಣುತ್ತಿತ್ತು. ಜಗತ್ತು ಎಷ್ಟೇ ಮುಂದುವರೆದರೂ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವವನು ರೈತ ಎನ್ನುವುದನ್ನು ಇಂತಹಾ ಚಿಕ್ಕ ಪುಟ್ಟ ಘಟನೆಗಳ ಮುಖೇನವೇ ತಿಳಿಯಬಹುದು. ರೈತನಿಗೆ ಜನರು ಹಿಂದಿನ ಸ್ಥಾನವನ್ನು ನೀಡುತ್ತಾರೆ ಕಾರಣ ಅವನ ಬಡತನ. ಆದರೆ
ನಾವೇಕೆ ಆ ಬಡತನವನ್ನು ಹೋಗಲಾಡಿಸುವುದಕ್ಕೆ ಸಾಧ್ಯವಿಲ್ಲ? ಭೂ ತಾಯಿಯನ್ನು ನಂಬಿದರೆ ಏನನ್ನಾದರೂ ಮಾಡುವುದಕ್ಕೆ ಸಾಧ್ಯ ಎನ್ನುವುದನ್ನು ಸದಾ ನೆನಪಿನಲ್ಲಿಡಬೇಕು. ನಮ್ಮಲ್ಲಿ ಒಂದು ಎಕರೆ ಇದೆ ಅಂದರೆ ಅವನಲ್ಲೊಂದು ಕೀಳು ಭಾವನೆ ಸೃಷ್ಟಿಯಾಗುತ್ತಿರುತ್ತದೆ.
ನನ್ನ ಬೆಳ ಆದಾಯ ಎಲ್ಲವೂ ಕಡಿಮೆಯೇ, ನನ್ನ ಅಣ್ಣಂದಿರು ನನಗೆ ಮಾಡಿದ ಮೋಸದಿಂದಲೇ ಹೀಗಾಯ್ತು. ಅವರೇನಾದರೂ ಸರಿಯಾಗಿ ಹಿಸೆಯನ್ನು
ನೀಡಿದ್ದರೆ ನಾನೇಕೆ ಹೀಗೆ ಕಡಿಮೆ ಬೆಲೆಗೆ ಬಾಳುತ್ತಿದ್ದೆ! ಹೀಗೆ ಅನೇಕ ವಿಚಾರಗಳನ್ನು ರೈತರು ಮಾಡುವುದನ್ನು ನೋಡಿದ್ದೇನೆ. ಆದರೆ ಅವೆಲ್ಲಾ ಕೇವಲ ಹುಸಿ ವಿಚಾರಗಳು. ಪ್ರತಿ ರೈತನೂ ಕೂಡ ಕೋಟಿಯಲ್ಲಿ ಮಾತನಾಡುವಂತಾಗುತ್ತದೆ ಆದರೆ ಸಲ್ಪ ವಿಚಾರ ಮಾಡಿ ಕೃಷಿಯನ್ನು ಮಾಡುವ ತಾಳ್ಮೆ ಅವನಿಗೆ ಬೇಕು ಅಷ್ಟೆ.
ನಾವು ಹೆಚ್ಚಿನ ರೈತರು ಮಾಡುತ್ತಿರುವ ದೊಡ್ಡ ದೋಷ ಅಂದರೆ, ಕೇವಲ ಒಂದೇ ಬೆಳೆಯನ್ನು ಬೆಳೆಯುತ್ತಿದ್ದೇವೆ. ಆದರೆ ಒಂಟಿ ಬೆಳೆಯ ಪದ್ಧತಿ ಯಾವತ್ತಿದ್ದರೂ ಮಾರಕವೇ ಹೊರತು ಪೂರಕವಲ್ಲ. ಅದು ಕೇವಲ ಕ್ಷಣಿಕ ತೃಪ್ತಿಯನ್ನು ನೀಡಬಹುದಷ್ಟೆ. ಆದರೆ ನಾವು ದುಡಿಯುವುದಕ್ಕೆ ಆಗದ ಸಂದರ್ಭದಲ್ಲಿ ನಾವು ಕೋಟಿಯ ಲೆಕ್ಕದಲ್ಲಿ ಮಾತನಾಡಬೇಕಾದರೆ ನಾವು ಬಹುಬೆಳೆ ಪದ್ದತಿಯ ಕೃಷಿಯಮ್ಮು ಅವಲಂಬಿಸುವುದು ಅನಿವಾರ್ಯ.
ಬಹುಬೆಳೆ ಪದ್ದತಿಯನ್ನು ಮಾಡಬೇಕು ಅಂತ ಕೇವಲ ತೆಂಗಿನ ಮರಗಳ ನಡುವೆ ಬಾಳೆಗಿಡ ಗಳನ್ನು ಹಾಕುವುದೂ ಅಲ್ಲ. ಅವುಗಳೂ ಇರಲಿ, ಆದರೆ ಅವು ನಮಗೆ ತುಂಬಾ ಆದಾಯವನ್ನು ತಂದುಕೊಡುವುದಿಲ್ಲ. ನಮ್ಮ ಮಕ್ಕಳು ವಯಸ್ಸಿಗೆ ಬಂದ ನಂತರ ಆದಾಯ ದೊರೆಯಬೇಕಾದರೆ ಒಂದೇ ಮಾರ್ಗ ಅದುವೇ ‘ಶ್ರೀಗಂಧ’.
ಯಾವುದೇ ಬೆಳೆಯ ಬೆಲೆಯನ್ನು ನಿರ್ಧಾರ ಮಾಡುವ ಹಕ್ಕು ರೈತನಿಗೆ ಇರುವುದಿಲ್ಲ. ಒಂದು ವರ್ಷ ಕಡಿಮೆ ಆದಾಯ ಬಂದರೆ ಮುಂದಿನ ವರ್ಷ ಸಲ್ಪ ಹೆಚ್ಚು ಬರುತ್ತದೆ. ಕಡಿಮೆ ಬಂದ ವರ್ಷ ಹೋರಾಟಕ್ಕೆ ಹೋದರೆ ಅವನ ಹೆಂಡತಿ ಮಕ್ಕಳು ಉಪವಾಸ ಬೀಳುತ್ತಾರೆ, ಅವನು ಹೋರಾಟ ಮಾಡಿದ್ದಕ್ಕೆ ಬೆಲೆಯೂ ಹೆಚ್ಚಾಗುವುದಿಲ್ಲ ಜತೆಗೆ ಇವನ ಹಣವೂ ಖರ್ಚಾಗಿರುತ್ತದೆ.
ಒಬ್ಬ ರೈತನಿಗೆ ನೂರು ಎಕರೆಯೇ ಬೇಕು ಅಂತೇನಿಲ್ಲ, ಅವನ ಬಳಿ ಒಂದೇ ಎಕರೆ ಇದ್ದರೂ ಅದನ್ನು ಅರಣ್ಯಬೆಳೆ, ತೋಟಗಾರಿಕಾ ಬೆಳೆ ಅಂತ ವಿಂಗಡಣೆ ಮಾಡಿಕೊಳ್ಳುವುದರ ಮೂಲಕ ಮೂರು ತಿಂಗಳಿಗೊಂದು ಪಗಾರನ್ನು ಪಡೆಯುವುದಕ್ಕೆ ಸಾಧ್ಯತೆಗಳಿವೆ. ಮಿಶ್ರ ಬೆಳೆಯಲ್ಲಿ ಶ್ರೀಗಂಧಕ್ಕೆ ಹೆಚ್ಚಿನ ಒತ್ತನ್ನು ನೀಡಿ ದಾಗ, ಒಂದು ಎಕರೆಗೆ ಸುಮಾರು ೪ರಿಂದ ೫ಟನ್ ಟನ್‌ಗಳಷ್ಟು ಶ್ರೀಗಂಧವನ್ನು ಪಡೆಯಬಹುದು. ಒಂದು ಟನ್ ಶ್ರೀಗಂಧದ ಬೆಲೆ 1 ಕೋಟಿ. ನೀವು ಊಹೆ ಯನ್ನೂ ಮಾಡಿಕೊಳ್ಳಲಾಗದಷ್ಟು ಹಣ ನಿಮಗೆ ವಯಸ್ಸಾದ ನಂತರ ಅಕೌಂಟಿಗೆ ಬಂದು ಬಿದ್ದಿರುತ್ತದೆ.
ತಮ್ಮ ಭೌಗೋಳಿಕ ಪ್ರದೇಶದಲ್ಲಿ ಶ್ರೀಗಂಧ ಉತ್ತಮವಾಗಿ ಬೆಳೆಯುವುದಿಲ್ಲ ಎನ್ನುವ ಭ್ರಮೆಯಲ್ಲಿ ಕೆಲವರು ಇರುತ್ತಾರೆ. ಅಂತಹಾ ಭ್ರಮೆಗಳು ನಿಮ್ಮ ತಲೆ ಯಲ್ಲಿದ್ದರೆ ಅದಕ್ಕೆ ಇಂದೇ ತುಳಸೀ ನೀರನ್ನು ಬಿಟ್ಟುಬಿಡಿ. ಎನ್‌ಆರ್ ಪುರದಂತಹಾ ಪ್ರದೇಶಗಳೇ ಶ್ರೀಗಂಧದ ತವರಾಗಿತ್ತು ಅನ್ನುವ ಸತ್ಯವನ್ನು ನಾವು
ಯಾವತ್ತೂ ಮರೆಯಬಾರದು. ಶ್ರೀಗಂಧದ ಗಿಡಗಳನ್ನು ಬೆಳೆಸುವ ಕುರಿತು ಅನೇಕ ಸಂದೇಹಗಳಿರಬಹುದು. ಸ್ವಂತ ಜಮೀನಿನಲ್ಲಿ ಶ್ರೀಗಂಧವನ್ನು ಬೆಳೆದರೆ ಅದರ ಮಾಲೀಕತ್ವ ರೈತನದ್ದೇ ಆಗಿರುತ್ತದೆ ಆದರೆ ಅವುಗಳನ್ನು ಸರಕಾರಕ್ಕೇ ಮಾರಬೇಕು ಎಂದು 2003ರಲ್ಲಿ ಸರಕಾರ ಹೇಳಿಕೆ ನೀಡಿತ್ತು.
ಶ್ರೀಗಂಧವನ್ನು ಬೆಳೆಯುವಾಗ ಕೆಲವು ವಿಚಾರಗಳನ್ನು ಮನದಟ್ಟು ಮಾಡಿಕೊಂಡಿರಬೇಕು. ಶ್ರೀಗಂಧ ಯಾವುದೇ ಮಣ್ಣಿನಲ್ಲಿ ಬೆಳೇಯುತ್ತದೆಯಾದರೂ, ನೀರನ್ನು
ಹಿಡಿದಿಟ್ಟುಕೊಳ್ಳುವ ಕಪ್ಪು ಮಣ್ಣು ಹೆಚ್ಚು ಪೂರಕವಲ್ಲ, ಜತೆಗೆ ಮರಗಳ ಬುಡಕ್ಕೆ ನಾವು ಯಾವುದೇ ಕೀಟನಾಶಕಗಳನ್ನಾಗಲೀ ಅಥವಾ ಗೊಬ್ಬರಹಗಳನ್ನಾಗಲೀ ಹಾಕುವ ಅಗತ್ಯತೆಯಿಲ್ಲ. ಕಸದಿಂದಲೇ ದುಡ್ಡು ಮಾಡುವ ಬೆಳೆ ಶ್ರೀಗಂಧ. ಒಂದು ಗುಂಟೆ ಅಂದರೆ 100 ಚದರ್ ಮೀಟರ್, 1 ಎಕರೆ ಅಂದರೆ ಸುಮಾರು 4000 ಚದರ್ ಮೀಟರ್‌ಗಳು ಇರುತ್ತೆ. ಅಲ್ಲಿ ಒಂದು ಶ್ರೀಗಂಧ ಜತೆ ಒಂದು ಬೇರೆ ಗಿಡ, ಅವುಗಳ ಜತೆಗೆ ಉಳ್ಳಾಗಡ್ಡೆ, ಶೇಂಗ ಹೀಗೆ ಬೇಕಾದ ಬೆಳೆಯನ್ನು ಬೆಳೆಯುವು ದಕ್ಕೆ ಸಾಧ್ಯೆತೆಯಿದೆ. ಒಂದು ಮುಖ್ಯ ವಿಚಾರ ಅಂದರೆ ಶ್ರೀಗಂಧಕ್ಕಿಂತ ಎತ್ತರವಾದ ಮರ ಶ್ರೀಗಂಧದ ಜತೆಯಲ್ಲಿ ಇರಬಾರದು.
ನಿಮಗೆ ಶ್ರೀಗಂಧದ ಕುರಿತಾಗಿ ಯಾವುದೇ ಅನುಮಾನವಿದದರೂ ಯಾವುದೇ ಸಂದರ್ಭದಲ್ಲಿ ನನ್ನನ್ನು ಕೇಳಬಹದು. ನಮ್ಮ ರೈತರು ಯಾವುದೇ ಕಾರಣಕ್ಕೂ ಇನ್ನೊಬ್ಬ ಶ್ರೀಮಂತನ ಎದುರು ತಾನೊಬ್ಬ ಬಡ ರೈತ ಎನ್ನುವ ಮನೋಭಾವವನ್ನು ಹೊಂದಬಾರದು. ರೈತನ ಸೊಂಟ ಮುರಿದರೆ ಹಣ ಇವವನ ಹೊಟ್ಟೆ ಖಾಲಿ ಬೀಳುತ್ತದೆ ಎನ್ನುವ ರಿವನ್ನು ರೈತನೂ ಅರಿಯಬೇಕು, ಶಹರದಲ್ಲಿ ಶಿಸ್ತಾಗಿ ಕುಳಿತು ಪಿಜ್ಜಾ ತಿನ್ನುವ ಕುವರಿಯೂ ಅರಿಬೇಕು. ಇದನ್ನು ಅರಿಯದಿದ್ದರೆ ಕಾಲವೇ ಅರಿವಿಗೆ ತರುತ್ತದೆ.