ಇದೇ ಅಂತರಂಗ ಸುದ್ದಿ
vbhat@me.com
ಜೀವನದಲ್ಲಿ ಪದೇಪದೆ ಫೇಲ್ ಆದವರು ಸೋಲಿನ ರುಚಿ, ಕಹಿ, ಸಿಹಿ ಎಲ್ಲವನ್ನೂ ಅರಿತಿರುತ್ತಾರೆ. ಸೋಲನ್ನು ದಕ್ಕಿಸಿಕೊಂಡು, ಅದರ ಅವಮಾನವನ್ನು ಸಹಿಸಿ ಕೊಂಡು ಪುನಃ ಮೊದಲಿನಂತಾಗಲು ಪ್ರಯತ್ನಿಸುತ್ತಾರೆ. ಆದರೆ ಜೀವನದಲ್ಲಿ ಯಶಸ್ಸನ್ನು ಕಂಡವರು, ಸೋಲನ್ನೇ ಕಾಣದವರು ಏಕಾಏಕಿ ಫೇಲ್ ಆದಾಗ ಚಡಪಡಿಸುತ್ತಾರಲ್ಲ, ಒಳಗೊಳಗೇ ಬೇಯುತ್ತಾರಲ್ಲ, ಅದನ್ನು ನೋಡ ಲಾಗುವುದಿಲ್ಲ. ಯಶಸ್ಸು ಅವರಲ್ಲೊಂದು ದಾಷ್ಟ್ಯವನ್ನು ರೂಪಿಸಿರುತ್ತದೆ.
ಯಶಸ್ಸಿನ ಗುಂಗಿನಲ್ಲಿ ಅವರು ಮೈಮರೆತಿರುತ್ತಾರೆ. ಜೀವನ ಸದಾ ಹೀಗೇ ಇರುತ್ತದೆಂದು ಭಾವಿಸಿರುತ್ತಾರೆ. ಆದರೆ ಹಠಾತ್ತನೆ ಸೋಲು ಎದುರಾದರೆ ಅವರಿಗೆ ಅದನ್ನು ಹೇಗೆ ಸ್ವೀಕರಿಸಬೇಕೆಂಬುದು ಗೊತ್ತಾಗದೇ ಒದ್ದಾಡುತ್ತಾರೆ. ಎಷ್ಟೋ ಸಲ ಸೋಲಿಗಿಂತ, ಸೋಲಿನ ಹೊಡೆತಕ್ಕೆ ನರಳುವ, ಕೊರಗುವ ಸೋಲಿದೆಯಲ್ಲ,
ಅದರ ಪರಿಣಾಮ ಮಾತ್ರ ಭಯಾನಕವಾಗಿರುತ್ತದೆ. ಸೋಲನ್ನು ಸಹಿಸಿಕೊಳ್ಳಬಹುದು.
ಆದರೆ, ಅದರ ಪರಿಣಾಮವನ್ನು ಎದುರಿಸಲಾಗದೇ ಸೋಲುವುದು ನಿಜಕ್ಕೂ ಘನಘೋರ. ಇಂಥ ಸ್ಥಿತಿಯಲ್ಲಿದ್ದವರು ಕ್ರಿಕೆಟ್‌ನ ದೇವರು ಎಂದೇ ಕರೆಯಿಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಮಾತುಗಳನ್ನು ಕೇಳಿಸಿಕೊಳ್ಳಬೇಕು. (ಅಷ್ಟಕ್ಕೂ ದೇವರು ಹೇಳಿದರೆ ಯಾರು ಕೇಳುವುದಿಲ್ಲ ಹೇಳಿ). ‘ನಾನು ಸಾಮಾನ್ಯ ಆಟಗಾರನಾಗಿ ಭಾರತ ಕ್ರಿಕೆಟ್ ತಂಡವನ್ನು ಸೇರಿದೆ. ಉತ್ತಮ ಪ್ರದರ್ಶನದ ಫಲವಾಗಿ ತಂಡದ ಕ್ಯಾಪ್ಟನ್ ಕೂಡ ಆದೆ. ಆದರೆ, ನಾಯಕನಾಗಿ ನನ್ನ ಸಾಧನೆ ಹೇಳಿಕೊಳ್ಳುವಂಥ ದ್ದೇನೂ ಇರಲಿಲ್ಲ. ನಾಯಕನಾಗಿ ಒತ್ತಡಕ್ಕೆ ಸಿಲುಕುತ್ತಿದ್ದುದರಿಂದ, ಅದು ನನ್ನ ಸಹಜ ಬ್ಯಾಟಿಂಗ್ ಮೇಲೆ ಸಹ ಪರಿಣಾಮ ಬೀರಲಾ ರಂಭಿಸಿತು.
ನಾಯಕನಾಗಿ ಫೇಲ್ ಆದರೂ ಪರವಾಗಿಲ್ಲ, ಕ್ರಿಕೆಟ್ ಆಟಗಾರನಾಗಿ ಫೇಲ್ ಆಗಬಾರದು ಎಂದು ಭಾವಿಸಿ ನಾಯಕತ್ವದಿಂದ ಹೊರಬಂದೆ. ಆ ನಂತರ ಹನ್ನೊಂದರಲ್ಲಿ ಒಬ್ಬನಾಗಿ ತಂಡದಲ್ಲಿ ಮುಂದುವರಿದೆ. ನನ್ನ ಬ್ಯಾಟಿಂಗ್ ಕೌಶಲವನ್ನು ಮುಂದುವರಿಸಲು ಇದರಿಂದ ಸಹಾಯಕವಾಯಿತು. ಸಂಪೂರ್ಣವಾಗಿ ನಾನು ಬ್ಯಾಟಿಂಗ್ ಮೇಲೆ ನನ್ನ ಗಮನವನ್ನು ಕೇಂದ್ರೀಕರಿಸಿದೆ’ ಎಂದು ಸಚಿನ್ ಹೇಳಿದ್ದರು. ಕ್ಯಾಪ್ಟನ್ ಆಗಿ ವಿಫಲನಾದರೆ, ಮುಂದೆ ಆಟಗಾರನಾಗಿ
ಮುಂದುವರಿಯುವುದು ಹೇಗೆ ಎಂದು ಅವರು ಯೋಚಿಸಲಿಲ್ಲ.
ಕ್ಯಾಪ್ಟನ್ ಆಗಿ ವಿ-ಲನಾದರೆ ಆಟಗಾರನಾಗಿಯೂ ವಿಫಲನಾದಂತೆ ಎಂದು ಸಹ ಯೋಚಿಸಲಿಲ್ಲ. ನನಗೆ ಇಲ್ಲಿ ಬ್ರಿಟನ್‌ನ ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ನೆನಪಾ
ಗುತ್ತಾರೆ. ಎರಡನೇ ಮಹಾಯುದ್ಧದಲ್ಲಿ ಬ್ರಿಟನ್‌ಗೆ ಜಯವನ್ನು ತಂದುಕೊಟ್ಟರೂ, ಮುಂದಿನ ವರ್ಷ ನಡೆದ ಮಹಾಚುನಾವಣೆಯಲ್ಲಿ ಚರ್ಚಿಲ್ ಅಧಿಕಾರ ವಂಚಿತರಾಗುತ್ತಾರೆ. ತಮ್ಮ ಸಾರ್ವಜನಿಕ ಜೀವನ ಇಲ್ಲಿಗೇ ಮುಗಿಯಿತು ಎಂದು ಅವರು ಕೈಕಟ್ಟಿ ಕ್ಲಾಸ್ ಅಟೆಂಡೆನ್ಸ್ ಕೊಟ್ಟು ಅವನನ್ನು ಕ್ಲಾಸಿಗೆ ಹೋಗುವಂತೆ ಹೇಳಿದರು.
ಇದನ್ನು ಕುಳಿತುಕೊಳ್ಳುವುದಿಲ್ಲ. ನಿರಂತರ ರಾಜಕೀಯ ಚಟುವಟಿಕೆಯಿಂದ ಬಿಡುವು ಪಡೆದು ಸಾಹಿತ್ಯ ಅಧ್ಯಯನ ಹಾಗೂ ಬರವಣಿಗೆಯಲ್ಲಿ ತೊಡಗಿಸಿಕೊಳ್ಳು ತ್ತಾರೆ. ಅವರಿಗೆ ಸಾಹಿತ್ಯಕ್ಕೆ ನೀಡುವ ಅತ್ಯುಚ್ಚ ಪ್ರಶಸ್ತಿಯಾದ ನೊಬೆಲ್ ಪುರಸ್ಕಾರ ಸಹ ಪ್ರಾಪ್ತವಾಗುತ್ತದೆ. ಅದಾದ ನಂತರ ಪುನಃ ಅವರು ಕೆಲಕಾಲ ಬ್ರಿಟನ್‌ನ ಪ್ರಧಾನ ಮಂತ್ರಿಯೂ ಆಗುತ್ತಾರೆ. ಒಂದು ಸೋಲು ಸೋಲಲ್ಲ. ಸೋಲಿನಿಂದ ಧೃತಿಗೆಡುವುದು, ಸೋತೆ ಎಂದು ಸತ್ತಂತೆ ಭಾವಿಸುವುದು ನಿಜವಾದ ಸೋಲು.
ಸೋಲು ಸಹ ನಮ್ಮನ್ನು ಅರಿಯಲು, ನಿಜ ಸಾಮರ್ಥ್ಯ ತಿಳಿಯಲು ಸಹಕಾರಿಯಾಗಬಹುದು.
ಸೋಲು ಎದುರಾದಾಗ, ಜೀವನದ ಎಲ್ಲ ಬಾಗಿಲುಗಳು ಮುಚ್ಚಿಹೋದವು ಎಂದು ಭಾವಿಸುವುದು ಬೇಡ. ಕೇವಲ ಒಂದು ಬಾಗಿಲಷ್ಟೇ ಮುಚ್ಚಿರಬಹುದು. ನೀವು
ಪ್ರಯತ್ನಪಟ್ಟರೆ ಅದೂ ತೆರೆದುಕೊಳ್ಳಬಹುದು.
ಸಣ್ಣ ಕತೆಗಳು
‘ಒಂದು ಕತೆ ಹೇಳ್ತೀನಿ’ ಅಂತ ಯಾರಾದರೂ ಹೇಳಿದರೆ, ‘ಅಯ್ಯೋ ಶುರು ಹಚ್ಕೊಂಡನಲ್ಲ’ ಎಂದು ಮೂಗು ಮುರಿಯುವವರೇ ಹೆಚ್ಚು. ಕತೆ ಹೇಳಲು ಸಮಯವಿರಬಹುದು. ಆದರೆ ಕತೆ ಕೇಳಲು ಯಾರಿಗೂ ಸಮಯವಿಲ್ಲ. ತಾವು ಕೇಳಿದ ಅತಿ ಸಣ್ಣ ಕತೆಗಳಿವು ಎಂದು ಪತ್ರಕರ್ತ ವೈಯೆನ್ಕೆ ಆಗಾಗ ಈ ಎರಡು ಕತೆಗಳನ್ನು ಹೇಳುತ್ತಿದ್ದರು.
ಮೊದಲನೆಯದು – ‘ಕನಸಿನಲ್ಲಿ ಡೈನೋಸಾರಸ್‌ನ್ನು ಕಂಡೆ. ಎದ್ದಾಗ ಮುಂದೆ ಇತ್ತು’.
ಎರಡನೇಯದು – ‘ಅವನ ಮದುವೆಯಾಯಿತು. ಇಲ್ಲಿಗೆ ಕತೆ ಮುಗಿಯಿತು’.
ಇದು ಟ್ವಿಟರ್ ಯುಗ. ೧೪೦ ಅಥವಾ ೨೮೦ ಅಕ್ಷರಗಳಲ್ಲಿ ಕತೆ ಹೇಳುವ, ಬರೆಯುವ ಕಾಲ. ಬರೆಯುವವರಿಗೆ ಹಾಗೂ ಓದುವವರಿಗೆ ಪುರುಸೊತ್ತಿಲ್ಲ.
? ? ?
ಆಫೀಸ್ ಮ್ಯಾನೇಜರ್‌ನನ್ನು ಕೆಲಸದಿಂದ ವಜಾ ಮಾಡಿದರು. ಯಾರೂ ಏನೂ ಹೇಳಲಿಲ್ಲ. ಆಫೀಸಿನ ಅಟೆಂಡರ್ ಅವನಾಗಿಯೇ ಕೆಲಸ ಬಿಟ್ಟು ಹೋದ. ಎಲ್ಲರೂ ಅವನ ಬಗ್ಗೆ ಮಾತಾಡಿಕೊಂಡರು.
? ? ?
‘ನೀನು ಕೆಲವು ದಿನಗಳ ಮಟ್ಟಿಗೆ ನನ್ನ ಸ್ಥಾನವನ್ನುತುಂಬುತ್ತೀಯಾ?’ ಎಂದು ದೇವರು ಕೇಳಿದ. ಒಬ್ಬನೇ ಕುಳಿತು ಎಲ್ಲರ ಬಗ್ಗೆ ಯೋಚಿಸುವ ಆ ಕೆಲಸ ಯಾರಿಗೆ ಬೇಕು ಎಂದು, ‘ಆಗೊಲ್ಲ’ ಸಾರಿ ಎಂದು ಹೇಳಿದೆ.
? ? ?
ನನ್ನ ಬೆನ್ನ ಮೇಲೆ ಬಂದೂಕು ನಿನ್ನ ಬೆನ್ನ ಮೇಲೆ ಪುಸ್ತಕ. ಇಬ್ಬರಿಗೂ ಮತ್ತೊಬ್ಬರ ಹೆಗಲ ಮೇಲೆ ಏನಿರಬಹುದೆಂಬ ಆತಂಕ.
ಪಾರಬ್ಧ ಅಂದೆ ಯಾವುದು ?
ಇತ್ತೀಚೆಗೆ ಶಿರಸಿಯಿಂದ ಕವಿಮಹಾಶಯರೊಬ್ಬರು ಫೋನ್ ಮಾಡಿ, ತಾವೊಂದು ಕವನ ಬರೆದಿರುವುದಾಗಿಯೂ, ಅದನ್ನು ಪತ್ರಿಕೆಯಲ್ಲಿ ಪ್ರಕಟಿಸಬೇಕೆಂದೂ ಕೋರಿದರು. ‘ಪತ್ರಿಕೆಗೆ ಕಳಿಸಿ ಕೊಡಿ, ಪ್ರಕಟಣೆಗೆ ಅರ್ಹವಾಗಿದ್ದರೆ ಖಂಡಿತವಾಗಿಯೂ ಮುದ್ರಿಸುತ್ತೇವೆ’ ಎಂದು ಹೇಳಿದೆ. ‘ಪತ್ರಿಕೆಯ ವಿಳಾಸ ಕೊಡಿ, ಕಳಿಸಿ
ಕೊಡುತ್ತೇನೆ’ ಅಂದರು. ವಿಳಾಸ ಹೇಳುತ್ತಾ ಕುಳಿತರೆ ಸಮಯ ಹಿಡಿಯುತ್ತದೆಯೆಂದು ‘ಇ-ಮೇಲ್ ಐಡಿ ಕೊಡ್ತೇನೆ. ಇ-ಮೇಲ್ ಮಾಡಿ’ ಎಂದೆ.
ನಾನು ತಪ್ಪು ಮಾಡಿದೆ ಎಂದು ಅನಿಸಿತು. ಕಾರಣ ಆ ಮಹಾಶಯರಿಗೆ ಇ-ಮೇಲ್ ಬಗ್ಗೆ ಹೆಚ್ಚು ಗೊತ್ತಿರಲಿಲ್ಲ ಅಂತ ಅನಿಸುತ್ತದೆ. ‘ಇತ್ತೀಚಿನ ದಿನಗಳಲ್ಲಿ ಎಲ್ಲರೂ ಇ-ಮೇಲ್ ಬಗ್ಗೆ ಮಾತಾಡುವುದನ್ನು ಕೇಳಿದ್ದೇನೆ. ನನಗೆ ಆ ಬಗ್ಗೆ ಹೆಚ್ಚು ಗೊತ್ತಿಲ್ಲ. ಇ-ಮೇಲ್ ಮಾಡಿದರೆ ಕವರ್ ಮೇಲೆ ಸ್ಟಾಂಪ್ ಅಂಟಿಸುವ ಅಗತ್ಯ ಇಲ್ಲವಾ?’ ಎಂದು ಕೇಳಿದರು. ನಾನು ಯಾವುದೋ ಪ್ರಮುಖ ಮೀಟಿಂಗ್‌ನಲ್ಲಿದ್ದೆ. ಕವಿವರ್ಯರ ಆ ಪ್ರಶ್ನೆ ಕೇಳಿ ಹೌಹಾರಿದೆ. ಇವರಿಗೆ ಆರಂಭದಿಂದ ಇ-ಮೇಲ್ ಬಗ್ಗೆ ಟ್ಯೂಶನ್ ಕೊಡಬೇಕಾಗುತ್ತದಲ್ಲ ಅನಿಸಿ, ‘ಪರವಾಗಿಲ್ಲ, ಪೋಸ್ಟ್ ಮೂಲಕವೇ ಕಳಿಸಿ. ಪತ್ರಿಕೆ ವಿಳಾಸ ಹೇಳ್ತೇನೆ. ಬರೆದುಕೊಳ್ಳಿ’ ಎಂದೆ. ಅದೇ ಅತಿ
ಸುಲಭ ಅನಿಸಿತು.
ಆದರೆ ಕವಿವರ್ಯರು ಬಿಡಬೇಕಲ್ಲ, ‘ಪರವಾಗಿಲ್ಲಾರಿ, ಇ-ಮೇಲ್ ಮಾಡ್ತೇನೆ’ ಅಂದರು. ಇವರು ನನ್ನ ಜತೆ ಮಷ್ಕಿರಿ ಮಾಡುತ್ತಿರಬಹುದಾ ಎಂದೆನಿಸಿತು. ‘ಬೇಡ, ಪೋಸ್ಟ್ ಮಾಡಿ, ಪತ್ರಿಕೆ ವಿಳಾಸ ಬರಕೊಳ್ಳಿ’ ಎಂದೆ. ‘ಪರವಾಗಿಲ್ಲ ಇ-ಮೇಲ್ ಮಾಡ್ತೇನೆ. ಇ-ಮೇಲ್ ವಿಳಾಸವನ್ನೇ ಕೊಡಿ’ ಎಂದರು. ಕೊಟ್ಟೆ.
‘ಭಟ್ರೇ, ಒಂದು ಸಂದೇಹ. ನಾನು ನಿಮಗೆ ಇ-ಮೇಲ್ ಮಾಡಿದರೆ ನಿಮಗೆ ಬರುತ್ತದಾ ?’ ಎಂದು ಕೇಳಿದರು. ‘ಖಂಡಿತ ಬರುತ್ತದೆ’ ಎಂದೆ. ‘ಒಂದು ವೇಳೆ ಬರದಿದ್ದರೆ ?’ ಎಂದರು. ‘ಹಾಗೇನಿಲ್ಲ, ಬಂದೇ ಬರುತ್ತದೆ.’ ಎಂದೆ. ‘ಸ್ಟಾಂಪ್ ಇಲ್ಲದಿದ್ದರೂ ಬರುತ್ತದೆ ಅಂದಿದ್ದಕ್ಕೆ ಸಂದೇಹ ಬಂತು. ಅದಕ್ಕಾಗಿ ಕೇಳಿದೆ.
ನಾನು ಸ್ಟಾಂಪ್ ಅಂಟಿಸದಿದ್ದುದಕ್ಕೆ ನಿಮಗೇನಾದರೂ ದಂಡ ಹಾಕ್ತಾರಾ ?’ ಎಂದು ಕೇಳಿತು ಕವಿ ಜೀವ. ನನಗೆ ಯಾರೋ ಎರಡೂ ಕೈಗಳಿಂದ ಎರಡೂ ಕೆನ್ನೆಗೆ ಚಟಪಟ… ಫಟೀರ್… ಎಂದು ಹೊಡೆಯುತ್ತಿದ್ದಾರೆ ಎಂದೆನಿಸಿತು. ‘ಪರವಾಗಿಲ್ಲ ಸಾರ್, ಪೋಸ್ಟ್ ಮೂಲಕ ಕಳಿಸಿ, ತೆಗೆದುಕೊಳ್ಳಿ ವಿಳಾಸ’ ಎಂದೆ, ನನ್ನೆಲ್ಲಾ
ಸಹನೆಯನ್ನು ಒಟ್ಟುಗೂಡಿಸಿಕೊಂಡು. ‘ಬೇಡ ಭಟ್ರೇ, ಇಮೇಲ್ ಮೂಲಕವೇ ಕಳಿಸುವೆ’ ಎಂದರು. ನಾನು ಹಣೆಹಣೆ ಚಚ್ಚಿಕೊಳ್ಳತೊಡಗಿದೆ.
‘ನೀವು ನನ್ನ ಕವನವನ್ನು ಓದಿದರೆ ಸಾಕು, ಅದನ್ನು ಕಟಿಸದೇ ಬಿಡುವುದಿಲ್ಲ. ಎರಡು ಸಾಲುಗಳನ್ನು ಓದಿ ಹೇಳಲಾ ?’ ಎಂದು ಕೇಳಿದರು. ‘ಭಗವಂತ ! ನಾನು ನಿನಗೆ ಏನು ಅನ್ಯಾಯ ಮಾಡಿದ್ದೆ ? ನನಗೇಕೆ ಈ ಶಿಕ್ಷೆ ಕೊಡುತ್ತಿರುವೆ ?’ ಎಂದು ಕೇಳಿ ಫೋನ್ ಕಟ್ ಮಾಡಿದೆ.
ಮೂರು ದಿನಗಳ ನಂತರ ಆ ಕವಿಪುಂಗವ ನನ್ನ ಕಚೇರಿಯಲ್ಲಿ ನನ್ನ ಮುಂದೆ ಹಾಜರ್! ‘ಇ-ಮೇಲ್ ಮಾಡಿದರೆ ನಿಮಗೆ ಬರದೇ ಇರಬಹುದು. ಒಮ್ಮೊಮ್ಮೆ ಪೋಸ್ಟ್ ಮೂಲಕ ಕಳಿಸಿದರೂ ಹೋಗುವುದೇ ಇಲ್ಲ. ಹೀಗಾಗಿ ನಾನೇ ಬಂದುಬಿಟ್ಟೆ’ ಎಂದರು. ನೂರು ವರ್ಷ ಹಿಂದಕ್ಕೆ ಹೋದಂತಾಯಿತು. ಈಗ ಆ ಕವನ
ಪ್ರಕಟಿಸುವ ಜವಾಬ್ದಾರಿ ನನ್ನ ಮೇಲಿದೆ. ಆದರೆ, ಅದನ್ನು ಓದುವ ಕರ್ಮ ಅಥವಾ ಪ್ರಾರಬ್ಧ ನಿಮ್ಮದು, ತಯಾರಿದ್ದೀರಾ ?
ಸುಳ್ಳು ಹೇಳಿದ್ದೇ ಒಳ್ಳೆಯದಾಯಿತು !
ಹತ್ತು ದಿನ ಹೇಳದೇ ಕೇಳದೇ ರಜೆ ಹಾಕಿದ ಹತ್ತನೇ ತರಗತಿ ವಿದ್ಯಾರ್ಥಿ ಕ್ಲಾಸಿಗೆ ಬಂದಾಗ, ಟೀಚರ್ ಅವನನ್ನು ಪ್ರಿನ್ಸಿಪಾಲರ ಬಳಿ ಕಳಿಸಿದರು.
‘ಸಾರ್, ಮನೆಯಲ್ಲಿ ಒಂದು ಸಮಸ್ಯೆಯಿತ್ತು. ಅದಕ್ಕಾಗಿ ಬರಲಿಲ್ಲ’ ಎಂದ ವಿದ್ಯಾರ್ಥಿ. ‘ಅದೆಂಥ ಸಮಸ್ಯೆ?’ ಪ್ರಿನ್ಸಿಪಾಲರು ಕೇಳಿದರು. ‘ಅದು, ನನ್ನ ತಂಗಿಯ ಸಮಸ್ಯೆ’ ‘ಏನಾಯಿತು ಅವಳಿಗೆ ?’ ‘ಅವಳು ನಾಪತ್ತೆಯಾಗಿದ್ದಳು’ ‘ಈಗ ಎಲ್ಲಿದ್ದಾಳೆ ?’ ‘ಈಗ ಮನೆಯಲ್ಲಿದ್ದಾಳೆ, ಹುಡುಕಿದೆವು.’ ‘ಅವಳು ಎಷ್ಟು ದೊಡ್ಡವಳು ?’
‘ನನ್ನ ವಯಸ್ಸು’ ಪ್ರಿನ್ಸಿಪಾಲರು ಮರು ಮಾತಾಡಲಿಲ್ಲ. ಆ ವಿದ್ಯಾರ್ಥಿಗೆ ಟೀಚರ್ ಗಮನಿಸುತ್ತಿದ್ದರು. ವಿದ್ಯಾರ್ಥಿ ಹೊರಹೋದ ಬಳಿಕ, ಟೀಚರ್ ಪ್ರಿನ್ಸಿಪಾಲರ ಬಳಿ ಹೋಗಿ ‘ಆತ ಸುಳ್ಳು ಹೇಳುತ್ತಿದ್ದಾನೆಂಬುದು ಗೊತ್ತಿದ್ದರೂ ಅವನಿಗೆ ಅಟೆಂಡೆನ್ಸ್ ಕೊಟ್ಟಿರಲ್ಲ. ಏಕೆ ?’ ಎಂದು ಪ್ರಶ್ನಿಸಿದರು.
‘ಒಂದು ವೇಳೆ ಅದು ನಿಜ ಆಗಿದ್ದಿದ್ದರೆ, ಅವನ ಸಹೋದರಿಯ ಪರಿಸ್ಥಿತಿ ಹೇಗಿದ್ದಿರಬೇಡಾ? ಆತ ಸುಳ್ಳು ಹೇಳಿದ್ದೇ ಒಳ್ಳೆಯದಾ ಯಿತು. ಅವನ ಸಹೋದರಿ ಅಂಥ ಸ್ಥಿತಿ ಅನುಭವಿಸಿರಲಿಲ್ಲವಲ್ಲ?’ ಎಂದರು ಪ್ರಿನ್ಸಿಪಾಲರು. ಟೀಚರ್ ಬಾಯಿಂದ ಮಾತೇ ಹೊರಡಲಿಲ್ಲ.
ಒಳ್ಳೆಯವರ ಬದಲು ಒಳ್ಳೆತನ ಹುಡುಕಿ
ಒಳ್ಳೆಯ ಮನುಷ್ಯರೆಂಬುವವರು ಇಲ್ಲವಂತೆ. ಒಂದೋ ಅಂಥವರು ಹುಟ್ಟಿಯೇ ಇಲ್ಲ, ಇಲ್ಲವೇ ಅಂಥವರು ದೇವಮಾನವರಾಗಿದ್ದಾರೆ, ಸಾಧು-ಸಂತರಾಗಿದ್ದಾರೆ. ಹಿಮಾಲಯದಲ್ಲೋ, ಹರಿದ್ವಾರದಲ್ಲೋ ಇದ್ದಾರೆ. ಒಮ್ಮೆ ನಮ್ಮ ನಡುವೆಯೇ ಇದ್ದರೂ ನಮ್ಮ ಕಣ್ಣಿಗೆ ಮಾತ್ರ ಬಿದ್ದಿಲ್ಲ. ನಾವು ಒಳ್ಳೆಯವರು ಎಂದು
ತೀರ್ಮಾನಿಸುವ ರೀತಿಯೇ ವಿಚಿತ್ರ. ನಮ್ಮ ದೃಷ್ಟಿಯಲ್ಲಿ ಒಳ್ಳೆಯ ವರೆಂದರೆ ಪರಿಪೂರ್ಣರು ಎಂದರ್ಥ. ಎಲ್ಲ ರೀತಿಯಿಂದಲೂ ಯೋಗ್ಯರು, ಅರ್ಹರಾಗಿರು ವವರನ್ನು ನಾವು ಒಳ್ಳೆಯವರು ಎಂದು ಹೇಳುತ್ತೇವೆ. ಹತ್ತು ಒಳ್ಳೆಯ ಗುಣಗಳನ್ನು ಹೊಂದಿ, ಒಂದು ಕೆಟ್ಟ ಗುಣವನ್ನು ಹೊಂದಿ ದ್ದರೆ ಅವರನ್ನು ಒಳ್ಳೆಯವರೆಂದು
ಪರಿಗಣಿಸುವುದಿಲ್ಲ. ‘ಸರ್ವ ಬಣ್ಣವೂ ಮಸಿ ನುಂಗಿತು’ ಎಂಬಂತೆ ಅವರನ್ನು ಕೆಟ್ಟವರ ಸಾಲಿಗೆ ಸೇರಿಸಿ ಬಿಡುತ್ತೇವೆ.
ನಮ್ಮ ಪ್ರಕಾರ ಒಳ್ಳೆಯವರೆಂದರೆ, ಅವರು ಎಲ್ಲ ಸಂದರ್ಭ ಗಳಲ್ಲೂ ಒಳ್ಳೆಯ ಗುಣಗಳನ್ನು ಸೂಸುತ್ತಲೇ ಇರಬೇಕು. ಮಕ್ಕಳಿಗೆ ಒಳ್ಳೆಯ ಅಪ್ಪ, ಹೆಂಡತಿಗೆ ಒಳ್ಳೆಯ ಗಂಡ, ಆಫೀಸಿನಲ್ಲಿ ಒಳ್ಳೆಯ ಉದ್ಯೋಗಿ, ಬಂಧು-ಬಾಂಧವರಿಗೆ ಒಳ್ಳೆಯ ನೆಂಟ, ಸ್ನೇಹಿತರಿಗೆ ಒಳ್ಳೆಯ ಸ್ನೇಹಿತ… ಹೀಗೆ ಬರೀ ಒಳ್ಳೆಯತನಗಳನ್ನೇ ಮೆರೆಯುತ್ತಾ ಹೋಗಬೇಕು. ಎಲ್ಲೋ ಒಂದು ಕಡೆ ಎಡವಟ್ಟಾದರೆ, ಈ ಒಳ್ಳೆಯ ವನೆಂಬ ಪಟ್ಟಕ್ಕೆ ಏಟು ಬೀಳುತ್ತದೆ.
ಕೆಟ್ಟ ಗಂಡನಾದವನು ಒಳ್ಳೆಯ ಅಪ್ಪನಾಗುವುದಕ್ಕೆ ಸಾಧ್ಯವಿದೆ, ಕೆಟ್ಟ ಉದ್ಯೋಗಿಯಾದವನು ಉತ್ತಮ ಸ್ನೇಹಿತನಾಗಲು, ಉತ್ತಮ ನೆರೆಹೊರೆಯವನಾಗಲು, ಉತ್ತಮ ಸಂಘಟಕನಾಗಲು, ಉತ್ತಮ ಭಾಷಣಕಾರನಾಗಲು ಸಾಧ್ಯವಿದೆ. ಒಂದು ಕೆಟ್ಟ ಗುಣದಿಂದ ವ್ಯಕ್ತಿಯ ಇಡೀ ವ್ಯಕ್ತಿತ್ವವನ್ನು ಅಳೆಯಲು ಹೋಗಬಾರದು.
ಉದಾಹರಣೆಗೆ, ಖ್ಯಾತ ಹಿಂದೂಸ್ತಾನಿ ಗಾಯಕ ದಿವಂಗತ ಭೀಮಸೇನ ಜೋಶಿ ಅವರು ಸಂಗೀತ ಕಛೇರಿ ಆರಂಭಿಸುವ ಮುನ್ನ ಕುಡಿಯುತ್ತಿದ್ದರು. ಎಷ್ಟೋ ಸಲ ಕುಡಿದೇ ವೇದಿಕೆಗೆ ಬಂದು ಹಾಡುತ್ತಿದ್ದರು. ಅನೇಕರಲ್ಲಿ ಇಂದಿಗೂ ಕುಡಿತ ಎಂಬುದು ಕೆಟ್ಟ ಅಭ್ಯಾಸ ಹಾಗೂ ಕುಡುಕರೆಂದರೆ ಕೆಟ್ಟವರು ಎಂಬ ಭಾವನೆ
ಯಿದೆ. ಈ ದೃಷ್ಟಿಯಿಂದ ನೋಡಿದರೆ ಭೀಮಸೇನ ಜೋಶಿಯ ವರನ್ನು ಒಳ್ಳೆಯವರೆಂದು ಪರಿಗಣಿಸಲು ಸಾಧ್ಯವಿಲ್ಲ. ಹಾಗಾದರೆ ಅವರು ಕೆಟ್ಟವರಾ? ಅವರ ಸಂಗೀತ ಕೆಟ್ಟದ್ದಾ? ವ್ಯಕ್ತಿಯೊಬ್ಬ ಕೆಟ್ಟವನಾ, ಒಳ್ಳೆಯವನಾ ಎಂದು ಅಳತೆಪಟ್ಟಿ ಹಿಡಿದುಕೊಂಡು ನಿರ್ಧರಿಸುವುದೇ ತಪ್ಪು. ಯಾರೂ ನೂರಕ್ಕೆ ನೂರು ಕೆಟ್ಟವರೂ ಅಲ್ಲ. ಒಳ್ಳೆಯವರೂ ಅಲ್ಲ. ಜೀವನವಿಡೀ ಒಳ್ಳೆಯವನಾದವ ಕೊನೆಗಾಲದಲ್ಲಿ ಯಾರನ್ನೋ ಸಾಯಿಸಿದರೆ, ಅವರನ್ನು ಏನಂತ ಕರೆಯೋಣ? ಯಾರನ್ನೇ ಆಗಲಿ, ಒಳ್ಳೆಯವ, ಕೆಟ್ಟವ ಎಂದು ತಕ್ಕಡಿ ಹಿಡಿದು ನಿರ್ಧರಿಸಲು ಹೋಗಬೇಡಿ. ಯಾರೂ ನಿಮ್ಮ ತಕ್ಕಡಿ ಪರಿಧಿಗೆ ಸಿಗುವುದೇ ಇಲ್ಲ. ನೀವು ಯಾರನ್ನು ಒಳ್ಳೆಯವರೆಂದು ಭಾವಿಸಿರುತ್ತೀರೋ ಅಂಥವರಿಂದಲೇ ನಿರಾಸೆಯುಂಟಾಗಬಹುದು.
ಅದರ ಬದಲು ವ್ಯಕ್ತಿಗಳಲ್ಲಿರುವ ಒಳ್ಳೆಯತನ, ಒಳ್ಳೆಯ ಗುಣ ಗಳಷ್ಟನ್ನೇ ನೋಡಿ, ಅವರು ಕೆಟ್ಟವರೇ ಇರಬಹುದು. ಅಷ್ಟಕ್ಕೂ ಅವರು ನಮಗೆ ಇಷ್ಟವಾಗುವುದು ಅವರ ಗುಣಗಳ ಮೂಲಕವೇ. ಅಂದಹಾಗೆ ಭೀಮಸೇನ ಜೋಶಿ ಸಂಗೀತಕ್ಕೆ ತಲೆದೂಗದವರಾರು?
ಪೀತಿ ಮತ್ತು ಬಿಯರು !
ದಕ್ಷಿಣ ಆಫ್ರಿಕಾದ ಕೇಪ್‌ಟೌನ್‌ಗೆ ಹೋದಾಗ, ಅಲ್ಲಿನ ಒಂದು ರೆಸ್ಟೋರಾಗೆ ಹೋಗಿದ್ದೆ. ಅದು ಪಕ್ಕಾ ಆಫ್ರಿಕನ್ ಸಂಸ್ಕೃತಿ ಹೋಲು ವಂತಿತ್ತು. ರೆಸ್ಟೋರಾದಲ್ಲಿ ಆಫ್ರಿಕನ್ ನರ್ತಕಿಯರು ಹಾಡುತ್ತಿದ್ದರು, ಕುಣಿಯುತ್ತಿದ್ದರು. ಅಲ್ಲಿಗೆ ಬಂದ ಗ್ರಾಹಕರಿಗೆ ಸ್ಥಳೀಯ ವಾದ್ಯಗಳನ್ನು ನುಡಿಸಲು ಕಲಿಸುತ್ತಿದ್ದರು. ಅವರ ನೃತ್ಯಕ್ಕೆ ಸ್ಟೆಪ್ಸ್
ಹಾಕುವುದನ್ನೂ ಹೇಳಿಕೊಡುತ್ತಿದ್ದರು. ಅದೊಂದು ಗಮ್ಮತ್ತಾದ ತಾಣ. ಅದಕ್ಕೆ ಹೊಂದಿಕೊಂಡು ಒಂದು ಪಬ್ ಇತ್ತು. ಅಲ್ಲೊಂದು ಲವರ‍್ಸ್ ಕಾರ್ನರ್. ಪ್ರೀತಿಯ ಬಗ್ಗೆ, ಬಿಯರ್ ಬಗ್ಗೆ ಅನೇಕ ಸ್ವಾರಸ್ಯಕರ ಬರಹಗಳಿದ್ದವು. ಆದರೆ ಆ ಪೈಕಿ ಒಂದು ಸಾಲು ಇಷ್ಟವಾಯಿತು. ಪ್ರೀತಿ ಹಾಗೂ ಬಿಯರ್‌ನ್ನು ಇದಕ್ಕಿಂತ ಕಡಿಮೆ
ಪದಗಳಲ್ಲಿ ಪರಿಣಾಮಕಾರಿಯಾಗಿವಿಲ್ಲವೇನೋ ?
ಜಾಕಿಛಾನ್ ಹಾಗೂ ನನ್ನ ನೆನಪು!
ಎಲ್ಲ ತಂದೆ-ತಾಯಿಗಳು ತಮಗಾಗಿ ದುಡಿದರೆ ಅವರು ಅರವತ್ತು ವರ್ಷಗಳವರೆಗೆ ಸಂಪಾದಿಸಬೇಕಿಲ್ಲ. ನಿವೃತಿಯ ನಂತರವೂ ದುಡಿಯಬೇಕಾಗಿಲ್ಲ. ಆದರೆ ಯಾರೂ ಸಹ ತಮಗಾಗಿ ಮಾತ್ರ ದುಡಿಯುವುದಿಲ್ಲ, ಸಂಪಾದಿಸುವುದಿಲ್ಲ. ಕೆಲವರಂತೂ ತಮ್ಮ ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಐದಾರು ಪೀಳಿಗೆಯವರು ಕುಳಿತು ಉಣ್ಣುವಷ್ಟು ಸಂಪಾದಿಸುತ್ತಾರೆ. ಅವರಿಗೆ ಎಷ್ಟು ದುಡಿದರೂ ಸಮಾಧಾನವಿಲ್ಲ. ಸಾಯುವ ತನಕವೂ ಸಂಪಾದಿಸುತ್ತಲೇ ಇರುತ್ತಾರೆ, ದುಡಿದಿದ್ದನ್ನು ಅನುಭವಿಸದೇ, ದುಡಿತವನ್ನು ಕಾಯಕ ಮಾಡಿಕೊಂಡು ಅತೃಪ್ತರಾಗಿಯೇ ಸಾಯುತ್ತಾರೆ.
ಇಂಥವರಿಗೆ ಸಮಾಧಾನ, ಸಂತೃಪ್ತಿಯೇ ಇಲ್ಲ. ಯಾರು ತಾನು ಗಳಿಸಿದ್ದೆಲ್ಲ ವನ್ನೂ ಬದುಕಿರುವಾಗಲೇ ದಾನ ಮಾಡುತ್ತಾನೋ ಅವನಷ್ಟು ಸಂತೃಪ್ತ ಬೇರೆ ಯಾರೂ ಇಲ್ಲವಂತೆ. ಯೋಗಿ ದುರ್ಲಭಜೀ ಅನೇಕ ಸಲ ಹೀಗೆ ಮಾಡಿದ್ದಾರೆ. ತಾವು ಗಳಿಸಿದ್ದೆಲ್ಲವನ್ನೂ, ತಮಗೂ ಇಟ್ಟುಕೊಳ್ಳದೇ ನಾಳಿನ ಚಿಂತೆಯನ್ನು ಮಾಡದೇ ಸರ್ವಸ್ವವನ್ನು ದಾನ ಮಾಡಿದ್ದರು. ನಂತರ ಆರಂಭ ದಿಂದ ಮತ್ತೆ ಶುರು ಮಾಡಿದ್ದರು. ಕೆಲವು ಸಲವಂತೂ ಮನೆ, ಮಠವನ್ನು ಮಾರಾಟ
ಮಾಡಿ ಅಕ್ಷರಶಃ ಭಿಕಾರಿಯಾಗಿ, ಮತ್ತೆ ಸಂಪಾದನೆಗೆ ಆರಂಭಿಸಿದ್ದರು. ಗಳಿಸುತ್ತಲೇ ಇರುವುದಕ್ಕಿಂತ ಗಳಿಸಿದ್ದನ್ನು ಕೊಟ್ಟು, ಪುನಃ ಗಳಿಸಲು ಶುರು ಮಾಡುವುದು ಸವಾಲಿನ, ಸಂತೋಷದ ಕೆಲಸ ಎಂದು ಅವರು ಹೇಳುತ್ತಿರುತ್ತಾರೆ.
ಈ ಮಾತನ್ನು ಹೇಳಲು, ಬರೆಯಲು, ಓದಲು ಚೆನ್ನಾಗಿರುತ್ತದೆ. ಆದರೆ ವಾಸ್ತವದಲ್ಲಿ ಜಾರಿಗೆ ತರುವುದು ಬಹಳ ಕಷ್ಟ. ಮನುಷ್ಯ ಹೇಗೆಂದರೆ, ತಾನು ಗಳಿಸಿದ್ದರಲ್ಲಿ ಒಂದು ಚೂರನ್ನು ಬೇರೆಯವರಿಗೆ ಕೊಡುವಾಗ, ಶರೀರದ ಅಂಗವನ್ನು ಕತ್ತರಿಸಿ (ಉಗುರು, ಕೂದಲು ಬಿಟ್ಟು) ಕೊಟ್ಟವರಂತೆ ವರ್ತಿಸುತ್ತಾರೆ. ಒಂದು ಸೂಜಿಯ ಮೊನೆಯಷ್ಟು ಭೂಮಿ ಕೊಡದಿರುವುದಕ್ಕೆ ಮಹಾಭಾರತ ಯುದ್ಧ ವಾಗಿದ್ದೆಂದು ಕೇಳಿದ್ದೇವೆ. ಈಗಲೂ ಭೂಮಿಯ ಬಗ್ಗೆ ನಮ್ಮ ಧೋರಣೆ ಅದೇ. ಕೆಲ ವರ್ಷಗಳ ಹಿಂದೆ ಖ್ಯಾತ ನಟ ಜಾಕಿಛಾನ್ ಸಂದರ್ಶನವನ್ನು ಓದು ತ್ತಿದ್ದೆ. ಆತ ಒಂದು ರೀತಿಯಲ್ಲಿ ಯೋಗಿ ದುರ್ಲಭಜೀ ಥರ. ತಾನುಬದುಕಿರುವಾಗಲೇ, ಜೀವನಾಂಶಕ್ಕೆ
ಬೇಕಾದಷ್ಟು ಸಂಪತ್ತನ್ನು ಇಟ್ಟುಕೊಂಡು, ಉಳಿದೆಲ್ಲವನ್ನು ತನ್ನ ಮಗನಿಗೆ ಕೊಡದೇ ಸಂಘ-ಸಂಸ್ಥೆಗಳಿಗೆ ಎತ್ತಿಕೊಟ್ಟ ಕೊಡುಗೈ ದಾನಿ. ಅವನ ಮಗನ ಪಾಲಿಗೆ ಪಿತ್ರಾರ್ಜಿತ ಎಂಬುದಿದ್ದರೆ ಅದು ಅಪ್ಪನ ಹೆಸರು ಮಾತ್ರ.
‘ನೀನೇಕೆ ನಿನ್ನ ಹಣ, ಆಸ್ತಿ ಎಲ್ಲವನ್ನೂ ಮಗನಿಗೆ ಕೊಡದೇ ಚಾರಿಟಿಗೆ ಬರೆದೆ? ಮಗನಿಗೆ ಆಸ್ತಿ ಮಾಡಿಡಬೇಕು ಎಂದು ಏಕೆ ಅನಿಸಲಿಲ್ಲ?’ ಎಂದು ಕೇಳಿದ್ದಕ್ಕೆ ಚಾಕಿ ಛಾನ್ ಹೇಳುತ್ತಾನೆ, ‘ನನ್ನ ಮಗನಿಗೆ ಹಣ ಮಾಡುವ ಸಾಮರ್ಥ್ಯವಿದ್ದರೆ, ಆತ ಸ್ವಂತ ದುಡಿದುಗಳಿಸುತ್ತಾನೆ. ಆತನಿಗೆ ಆ ಸಾಮರ್ಥ್ಯ ಇಲ್ಲದಿದ್ದರೆ, ನಾನು ಗಳಿಸಿಟ್ಟಿದ್ದನ್ನೂ ನಿರರ್ಥಕಗೊಳಿಸುತ್ತಾನೆ. ನಾವು ಗಳಿಸಿದ ಹಣದ ಬಗ್ಗೆ ಮಾತ್ರ ಮೋಹವಿರುತ್ತದೆ. ಬೇರೆಯವರುಗಳಿಸಿದ ಹಣ, ಆಸ್ತಿ ಎಷ್ಟಿದ್ದರೂ ಕಡಿಮೆಯೇ. ಮೂರು ಜನ್ಮಕ್ಕಾಗುವಷ್ಟು ದುಡಿದಿಟ್ಟು ನನ್ನ ಮಗ, ಇನ್ನೂ ಕಾಣದ ಮೊಮ್ಮಕ್ಕಳ ಬದುಕನ್ನು ನಾನು ಹಾಳು ಮಾಡುವುದಿಲ್ಲ.’
ಶಿವಾಜಿ ನೆರಮನೆಯಲ್ಲಿ ಹುಟ್ಟಲಿ ಎಂಬಂತೆ, ಚಾಕಿ ಛಾನ್ ಚೀನಾ ದೇಶದಲ್ಲಿರಲಿ ಎಂದು ಎಲ್ಲರೂ ಹೇಳುತ್ತಾರೆಂಬುದು ಗೊತ್ತು. ಚಾಕಿ ಛಾನ್‌ನ ಈ ಮಾತನ್ನು ಜಾರಿಗೆ ತರುವ ಮನಸ್ಸು ನಿಮಗಿದ್ದರೆ, ಆಗ ನನ್ನನ್ನು ನೆನಪಿಸಿಕೊಳ್ಳಬಹುದು.