ಪ್ರಕಾಶ ಪಥ
ಪ್ರಕಾಶ್ ಶೇಷರಾಘವಾಚಾರ್
ರಾಮ ಜನ್ಮಭೂಮಿ ಪ್ರಕರಣವನ್ನು ಸುಪ್ರೀಂ ಕೋರ್ಟಿನಲ್ಲಿ ೪೦ ದಿನಗಳವರೆಗೆ ಯಶಸ್ವಿಯಾಗಿ ವಾದಿಸಿ, ರಾಮಮಂದಿರ ನಿರ್ಮಾಣವನ್ನು ಸಾಕಾರ ಗೊಳಿಸಿದ ಕೇಶವ ಪರಾಶರನ್ರನ್ನು ‘ಭಾರತೀಯ ಕಾನೂನುಗಳ ಪಿತಾಮಹ’ ಎಂದು ಶ್ಲಾಘಿಸಿದ್ದಾರೆ ಮದ್ರಾಸ್ ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್.
ಅಯೋಧ್ಯೆಯಲ್ಲಿ ರಾಮನು ಜನಿಸಿದ ಸ್ಥಳದಲ್ಲಿ ರಾಮಮಂದಿರದ ಪುನರ್ ನಿರ್ಮಾಣಕ್ಕೆ ಕಳೆದ ೫೦೦ ವರ್ಷಗಳಲ್ಲಿ ನೂರಾರು ಹೋರಾಟಗಳು ನಡೆದು ಸಾವಿರಾರು ಜನರ ಬಲಿದಾನವಾಗಿದೆ. ೯೦ರ ದಶಕದಲ್ಲಿ ಕರ ಸೇವಕರು ಮತ್ತೆ ಮಂದಿರ ಕಟ್ಟು ದೃಢನಿಶ್ಚಯದಲ್ಲಿ ನಿರ್ಣಾಯಕ ಹಂತದ ಹೋರಾಟ ಕೈಗೊಂಡಾಗ, ಪೊಲೀಸರ ಗುಂಡಿಗೆ ನೂರಾರು ಜನರ ಬಲಿದಾನ ವಾಯಿತು.
೧೯೯೨ರಲ್ಲಿ ನಡೆದ ಕರಸೇವೆಯ ಸಮಯದಲ್ಲಿ ವಿವಾದಿತ ಕಟ್ಟಡವು ರಾಮಭಕ್ತರ ಆಕ್ರೋಶದಲ್ಲಿ ನೆಲಸಮವಾಗಿ, ತಾತ್ಕಾಲಿಕವಾದ ರಾಮಮಂದಿರವು ತಲೆಯೆತ್ತಿತು. ಮಂದಿರದ ಹೋರಾಟದ ಕೊನೆಯ ಚರಣವು ನ್ಯಾಯಾಲಯದ ಅಂಗಳ ತಲುಪಿತು. ಉಭಯ ಕೋಮುಗಳ ನಡುವಿನ ವಿವಾದವನ್ನು ಬಗೆಹರಿಸಲು ಕೈಗೊಂಡ ಎಲ್ಲ ಸಂಧಾನಗಳೂ ವಿಫಲವಾದ ತರುವಾಯ, ಸರ್ವೋಚ್ಚ ನ್ಯಾಯಾಲಯವು ದೈನಂದಿನ ವಿಚಾರಣೆಯ ಮೂಲಕ ಈ ಜಟಿಲ
ಸಮಸ್ಯೆಗೆ ತೆರೆಯೆಳೆಯುವ ತೀರ್ಮಾನಕ್ಕೆ ಬಂತು. ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅನುಮತಿಸಿದಾಗ ವಕೀಲ ಕೇಶವ
ಪರಾಶರನ್ರವರು ನಾಯರ್ ಸೇವಾ ಸೊಸೈಟಿ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಸಂವಿಧಾನದ ಪೀಠದ ಮುಂದೆ ವಾದ ಮಾಡಿದರು.
‘ಅಯ್ಯಪ್ಪ ಸ್ವಾಮಿಯು ಬ್ರಹ್ಮಚಾರಿ ದೈವವು; ಆ ದೇವಸ್ಥಾನದ ಪಾವಿತ್ರ್ಯ ಕಾಪಾಡಲು ನಿರ್ದಿಷ್ಟ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನಿಷೇಧಿಸುವುದು
ಅತ್ಯವಶ್ಯಕ’ ಎಂದು ಅವರು ಪ್ರತಿಪಾದಿಸಿದರು. ೨೦೦೮ರಲ್ಲಿ, ರಾಮಸೇತು ಉಳಿವಿಗಾಗಿ ಸುಪ್ರೀಂ ಕೋರ್ಟಿನಲ್ಲಿ ವಾದ ಮಂಡಿಸಿ ಅದನ್ನು ಉಳಿಸಿದ ಕೀರ್ತಿಗೆ ಪಾತ್ರರಾಗಿದ್ದ ೯೦ ವರ್ಷದ ಕೇಶವ ಪರಾಶರನ್ರವರನ್ನು, ಹೋರಾಟದ ಮುಂಚೂಣಿಯಲ್ಲಿದ್ದ ರಾಮ ಜನ್ಮಭೂಮಿ ಟ್ರಸ್ಟ್ ಮೊರೆ ಹೋಯಿತು. ಆರು ದಶಕಗಳ ಕಾಲ ವಕೀಲಿಕೆ ಕೈಗೊಂಡು, ವಯಸ್ಸು ೮೫ ತಲುಪಿದಾಗ ವೃತ್ತಿಯಿಂದ ನಿವೃತ್ತಿ ಪಡೆದು ಚೆನ್ನೈನಲ್ಲಿ ನೆಲೆಸಿದ್ದ ಪರಾಶರನ ಅವರು ಶ್ರೀರಾಮನ ಪರಮಭಕ್ತರು ಹಾಗೂ ಪ್ರತಿನಿತ್ಯ ವಾಲ್ಮೀಕಿ ರಾಮಾಯಣದ ಶ್ಲೋಕ ಗಳನ್ನು ಪಾರಾಯಣ ಮಾಡುತ್ತಿದ್ದ ಶ್ರದ್ಧಾವಂತರು.
ಅವರಿಗೆ ರಾಮ ಜನ್ಮಭೂಮಿ ಟ್ರಸ್ಟ್ನ ಮನವಿಯನ್ನು ತಿರಸ್ಕರಿಸಲಾಗಲಿಲ್ಲ. ಪರಾಶರನ್ರ ತಂದೆ ಕೇಶವ ಅಯ್ಯಂಗಾರ್ ಅವರು ವಕೀಲರು ಮತ್ತು
ವೈದಿಕ ವಿದ್ವಾಂಸರಾಗಿದ್ದರು. ಪರಾಶರನ್ರವರು ತಮ್ಮ ಪದವಿ ವಿದ್ಯಾಭ್ಯಾಸ ಮುಗಿದ ಮೇಲೆ ಕೆಲಸಕ್ಕೆ ಸೇರಿದರೂ, ಕೆಲವೇ ದಿನಗಳಲ್ಲಿ ಅದನ್ನು ಬಿಟ್ಟು
ಕಾನೂನು ಪದವಿ ಮಾಡಲು ಮತ್ತೆ ಕಾಲೇಜಿಗೆ ದಾಖ ಲಾದರು. ಕಾನೂನು ಪದವಿಯಲ್ಲಿ ಮೂರು ಪದಕಗಳನ್ನು ಪಡೆದು, ತಮ್ಮ ತಂದೆಯವರ ಸಲಹೆ ಯಂತೆ ಸ್ವತಂತ್ರವಾಗಿ ವಕೀಲಿಕೆ ಮಾಡಲು ಆರಂಭಿಸಿದರು.
ಪರಾಶರನ್ರವರು ಬಿಜೆಪಿಗಾಗಲೀ ಸಂಘ ಪರಿವಾರಕ್ಕಾಗಲೀ ಸೇರಿದವರಲ್ಲ; ಅವರು ಇಂದಿರಾ ಗಾಂಧಿಯವರ ಪರಮಾಪ್ತರಾಗಿದ್ದವರು. ೧೯೮೩ರಿಂದ ಮತ್ತು ರಾಜೀವ್ ಗಾಂಧಿಯವರ ಆಡಳಿತದ ಕೊನೆಯವರೆಗೂ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದ ಅವರಿಗೆ ೨೦೦೩ರಲ್ಲಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ‘ಪದ್ಮಭೂಷಣ’ ಮತ್ತು ೨೦೧೧ ರಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ‘ಪದ್ಮವಿಭೂಷಣ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಯುಪಿಎ ಎರಕಾರವು ೨೦೧೨ ರಲ್ಲಿ ಇವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತು. ಪರಾಶರನ್ ಅವರು, ‘ಒಬ್ಬ ರಾಜಕೀಯೇ ತರ ವ್ಯಕ್ತಿಯಾದ ನಾನು ಎಂದಿಗೂ ರಾಜ ಕೀಯ ಚಟುವಟಿಕೆಗಳಲ್ಲಿ ಭಾಗಿಯಾಗಿಲ್ಲ; ರಾಜಕೀಯೇತರವಾಗಿಯೇ ಇರಲು ಬಯಸುತ್ತೇನೆ.
ಹಾಗಿಲ್ಲದಿದ್ದರೆ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರು ಈ ನಾಗರಿಕ ಪ್ರಶಸ್ತಿಗಳನ್ನು ನೀಡುತ್ತಿದ್ದರಾ’ ಎಂದು ಪ್ರಶ್ನಿಸುತ್ತಾರೆ. ಮೋದಿ
ಸರಕಾರದ ಅವಧಿಯಲ್ಲಿ ‘ಎನ್ಜೆಎಸಿ’ (ನ್ಯಾಷನಲ್ ಜುಡಿಷಿಯಲ್ ಅಪಾಯಿಂಟ್ಮೆಂಟ್ಸ್ ಕಮಿಷನ್) ಕಾಯ್ದೆಯನ್ನು ರಾಜ್ಯಸಭೆ ಯಲ್ಲಿ ಬಲವಾಗಿ
ಬೆಂಬಲಿಸಿದ್ದರು ಹಾಗೂ ತಮ್ಮ ರಾಜ್ಯಸಭಾ ಸದಸ್ಯತ್ವದ ಅವಧಿಯಲ್ಲಿ ಪಕ್ಷಾತೀತ ರಾಗಿಯೇ ಉಳಿದು ತಮ್ಮ ನಿಲುವಿಗೆ ಬದ್ಧರಾಗಿದ್ದರು. ರಾಮ ಜನ್ಮಭೂಮಿ ಮೊಕದ್ದಮೆಯನ್ನು ಸುಪ್ರೀಂ ಕೋರ್ಟಿನಲ್ಲಿ ೪೦ ದಿನಗಳವರೆಗೆ ಯಶಸ್ವಿಯಾಗಿ ವಾದಿಸಿ, ೫ ಶತಮಾನದ ಹೋರಾಟಕ್ಕೆ ಅಂತ್ಯಹಾಡಿ,
ರಾಮಮಂದಿರ ನಿರ್ಮಾಣವನ್ನು ಸಾಕಾರಗೊಳಿಸಿದ ಕೇಶವ ಪರಾಶರನ್ರನ್ನು ‘ಭಾರತೀಯ ಕಾನೂನು ಗಳ ಪಿತಾಮಹ’ ಎಂದು ಶ್ಲಾಘಿಸಿರುವ ಮದ್ರಾಸ್
ಹೈಕೋರ್ಟ್ನ ಮಾಜಿ ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ‘ವಕೀಲ ವೃತ್ತಿಯಲ್ಲಿ ಧರ್ಮದೊಂದಿಗೆ ರಾಜಿ ಮಾಡಿಕೊಳ್ಳದೆ ಸಾಕಷ್ಟು
ಕೊಡುಗೆ ನೀಡಿದವರು ಪರಾಶರನ್’ ಎಂದಿದ್ದಾರೆ.
ಸುಪ್ರೀಂ ಕೋರ್ಟ್ನಲ್ಲಿ ವಾದಿಸುವಾಗ ಬೆಟ್ಟ ದಷ್ಟು ಕಡತಗಳನ್ನು ನೋಡಬೇಕಿತ್ತು, ಸಾವಿರಾರು ಸಾಕ್ಷ್ಯಾಧಾರಗಳನ್ನು ಉಲ್ಲೇಖಿಸಬೇಕಿತ್ತು. ಯೋಗೇ ಶ್ವರನ್, ಅನಿರುದ್ಧ ಶರ್ಮಾ, ಶ್ರೀಧರ್ ಪೊಟ್ಟರಾಜು, ಅದಿತಿ ದಾನಿ, ಅಶ್ವಿನಿ ಕುಮಾರ್ ಡಿ.ಎಸ್. ಮತ್ತು ಭಕ್ತಿ ವರದನ್ ಸಿಂಗ್ ಎಂಬ ಪ್ರಮುಖ ವಕೀಲರು ಸೇರಿದಂತೆ ಇವರಿಗೆ ೧೨ಕ್ಕೂ ಹೆಚ್ಚು ವಕೀಲರು ಸಹಾಯಕರಾಗಿದ್ದರು. ರಾಮಮಂದಿರದ ಪ್ರಕರಣವನ್ನು ೯೩ರ ಹರೆಯದ ಪರಾಶರನ್ ಅವರು ನ್ಯಾಯಾ ಲಯದಲ್ಲಿ ವಾದಿಸುವಾಗ, ಅವರ ಹಿರಿತನ ವನ್ನು ಪರಿಗಣಿಸಿ ಕುಳಿತೇ ವಾದ ಮಂಡಿಸಲು ಮುಖ್ಯ ನ್ಯಾಯಾಧೀಶ ರಂಜನ್ ಗೊಗೋಯ್ ಸೂಚಿಸಿದರು.
ಆದರೆ, ‘ನಾನು ಶ್ರೀರಾಮನ ಪರವಾಗಿ ವಾದ ಮಂಡಿಸುತ್ತಿರುವುದು; ಆದ್ದರಿಂದ ನಿಂತೇ ವಾದ ಮಾಡುವೆ’ ಎಂದುತ್ತರಿಸಿದರು ಪರಾಶರನ್. ಆ ಮಟ್ಟಿಗೆ ಶ್ರೀರಾಮನಲ್ಲಿ ಅಚಲವಾದ ಶ್ರದ್ಧೆಯಿಟ್ಟಿದ್ದ ಅವರಲ್ಲಿ ತಾವು ಮಾಡುತ್ತಿರುವುದು ಭಗವಂತನ ಕೆಲಸವನ್ನು ಎಂಬ ಬಲವಾದ ನಂಬಿಕೆಯಿತ್ತು. ವಾದಿಸುವ ಸಮಯದಲ್ಲಿ ಅನೇಕ ಹಿಂದೂಗ್ರಂಥಗಳು ಮತ್ತು ಶ್ಲೋಕಗಳನ್ನು ಉದಾಹರಣೆಯಾಗಿ ಸುಲಲಿತವಾಗಿ-ಸಂದರ್ಭೋಚಿತವಾಗಿ ಬಳಸಿ ಕೊಂಡು ತಮ್ಮ ವಾದಕ್ಕೆ ಬಲ ತುಂಬುತ್ತಿದ್ದರು ಪರಾಶರನ್.
‘ಒಮ್ಮೆ ಮಸೀದಿಯದರೆ ಅದು ಎಂದಿಗೂ ಮಸೀದಿಯು’ ಎಂದು ಪ್ರತಿವಾದಿಗಳು ವಿತಂಡ ವಾದ ಮಾಡಿದಾಗ, ‘ಅಯೋಧ್ಯೆಯಲ್ಲಿ ೪೦-೫೦ ಮಸೀದಿ ಗಳಿದ್ದು ಮುಸಲ್ಮಾನರು ಎಲ್ಲಿ ಬೇಕಾದರೂ ಪ್ರಾರ್ಥನೆ ಸಲ್ಲಿಸಬಹುದು; ಆದರೆ ಹಿಂದೂಗಳಿಗೆ ರಾಮನು ಜನಿಸಿದ ಜಾಗ ಇದೊಂದೇ. ಬೇರೆ ಜಾಗ
ವನ್ನು ರಾಮನು ಜನಿಸಿದ ಸ್ಥಳವೆಂದು ಪೂಜೆ ಮಾಡಲು ಸಾಧ್ಯವಿಲ್ಲ’ ಎಂದು ಮಾರುತ್ತರ ನೀಡಿದ ಪರಾಶರನ್, ವಾದಿಸುವಾಗ ಒಮ್ಮೆಯೂ ತಾಳ್ಮೆ
ಕಳೆದುಕೊಳ್ಳಲಿಲ್ಲ ಹಾಗೂ ಎದುರಾಳಿ ವಕೀಲರ ಮೇಲೆ ಕೂಗಾಡಲಿಲ್ಲ. ಆದರೆ ಸುನ್ನಿ ವಕ್ಫ್ ಮಂಡಳಿಯ ವಕೀಲ ರಾಜೀವ್ ಧವನ್ ಅವರು ವಾದ ಮಾಡುವಾಗ ಅನೇಕ ಸಂದರ್ಭದಲ್ಲಿ ಸಹನೆ ಕಳೆದುಕೊಂಡು ಕೂಗಾಡುತ್ತಿದ್ದರು.
ಪರಾಶರನ್ ತಮ್ಮ ಕೊನೆಯ ವಾದವನ್ನು ಮಂಡಿಸಿದ ತರುವಾಯ ಕೋರ್ಟ್ ಹಾಲ್ನಿಂದ ಹೊರಬಂದು, ರಾಜೀವ್ ಧವನ್ರು ಹೊರಬರುವವರೆಗೆ ಕಾದು, ಅವರೊಂದಿಗೆ ಭಾವಚಿತ್ರ ತೆಗೆಸಿಕೊಂಡು ಶುಭ ಕೋರಿದರು ಹಾಗೂ ‘ನಮ್ಮ ನಡುವಿನ ಕಾದಾಟ ಕೋರ್ಟ್ ಹಾಲ್ನೊಳಗೆ ಮಾತ್ರ; ಹೊರ ಬಂದಾಗ ಮನಸ್ಸಿನಲ್ಲಿ ಯಾವುದೇ ಕಹಿಯಿರುವುದಿಲ್ಲ’ ಎಂದರು. ಪರಾಶರನ್ರ ತಂಡದ ಸದಸ್ಯರಲ್ಲೊಬ್ಬರಾದ ಅದಿತಿ ದಾನಿ ಅವರು, ‘ನಮ್ಮೊಂದಿಗೆ ವಾರದ ಏಳೂ ದಿನ ಕೆಲಸ ಮಾಡುತ್ತಿದ್ದ ಅವರು, ಕಾರ್ಯ ನಿರ್ವಹಣೆಯ ವೇಳೆ ನಾವ್ಯಾರೂ ಹಸಿದಿಲ್ಲ ಎಂದು ಖಾತ್ರಿಪಡಿಸಿಕೊಳ್ಳುತ್ತಿದ್ದರು.
ನ್ಯಾಯಶಾಸ್ತ್ರದ ಓರ್ವ ವ್ಯಕ್ತಿಯಾಗಿ ದೇವರಿಗಾಗಿ ವಾದಿಸಿದವರು ಕೇಶವ ಪರಾಶರನ್ ಅವರು’ ಎನ್ನುತ್ತಾರೆ. ‘ಪರಾಶರನ್ ರದ್ದು ಅದ್ಭುತವಾದ ‘-ಟೋ ಗ್ರಫಿಕ್’ ನೆನಪಿನ ಶಕ್ತಿ! ಯಾವುದೇ ಇತಿಹಾಸ, ಧಾರ್ಮಿಕ ಗ್ರಂಥ ಹಾಗೂ ಸಂಸ್ಕೃತ ಪುಸ್ತಕದ ಸಹಾಯವಿಲ್ಲದೆ ಅದರೊಳಗಿನ ಹುರುಳನ್ನು ತಮ್ಮ ವಾದದ ನಡುವೆ ಸುಲಲಿತವಾಗಿ ಉಲ್ಲೇಖಿಸುತ್ತಿದ್ದರು’ ಎನ್ನುತ್ತಾರೆ ಅವರ ತಂಡದ ಮತ್ತೋರ್ವ ವಕೀಲ ಅನಿರುದ್ಧ ಶರ್ಮಾ.
ರಾಮಮಂದಿರದ ಪ್ರಕರಣವನ್ನು ವಾದಿಸಲು ನಯಾ ಪೈಸೆಯನ್ನೂ ಪಡೆಯದೆ ದೈವದ ಕೆಲಸವೆಂದು ಅದರಲ್ಲಿ ತೊಡಗಿಸಿಕೊಂಡ ಪರಾಶರನ್,
ಕೋರ್ಟ್ನಲ್ಲಿನ ೮ ಗಂಟೆಗಳ ವಾದ-ಪ್ರತಿವಾದದ ನಂತರ ಕಚೇರಿಗೆ ಬರುತ್ತಿದ್ದಂತೆ ಮರುದಿನದ ವಾದಕ್ಕೆ ಬೇಕಾದ ಅಂಶಗಳನ್ನು ಟಿಪ್ಪಣಿ ಮಾಡಿಕೊಳ್ಳು ವಲ್ಲಿ ತೊಡಗಿಸಿಕೊಳ್ಳುತ್ತಿದ್ದರಂತೆ. ಈ ಘಟ್ಟದಲ್ಲಿ ಅವರ ವಯಸ್ಸು ೯೩ ಆಗಿತ್ತು ಎಂಬುದನ್ನು ಮರೆಯಬಾರದು. ಅವರ ಈ ಸಮರ್ಪಣಾ ಮನೋಭಾವ ಊಹೆಗೂ ನಿಲುಕದ್ದು.
ರಾಮ ಜನ್ಮಭೂಮಿ ಪ್ರಕರಣದ ತೀರ್ಪು ಬಂದ ದಿನ ಪರಾಶರನ್ರು ದೆಹಲಿಯಲ್ಲಿನ ತಮ್ಮ -ಟ್ಗೆ ಮರಳಿದಾಗ ಅಚ್ಚರಿಯ ಘಟನೆಯೊಂದು ನಡೆದಿತ್ತು
– ಅಲ್ಲಿಯವರೆಗೂ ಕಾಣದಿದ್ದ ಕೋತಿಗಳು ಏಕಾಏಕಿ ಕಾಣಿಸಿಕೊಂಡು ಅಲ್ಲಿನ ಗಿಡ-ಮರಗಳ ಮೇಲೆ ಎಗರಾಡಿ ಅವಾಂತರ ಎಬ್ಬಿಸಿದ್ದವು! ಅದನ್ನು ಕಂಡ
ಪರಾಶರನ್, ‘ಪ್ರಾಯಶಃ ಹನುಮಂತನು ತನ್ನ ರಾಮನಿಗೆ ಮಂದಿರ ದೊರೆಯುತ್ತದೆಯೆಂದು ಸಂತಸದಿಂದ ಹೀಗೆ ಮಾಡಿದ್ದೇನೋ…’ ಎಂದರು ಎಂದು ನೆನಪಿಸಿಕೊಳ್ಳುತ್ತಾರೆ ಭಾರತ ಸರಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿದ್ದ ಖ್ಯಾತ ವಕೀಲ ನರಗುಂದ್ರವರು.
‘ರಾಮಜನ್ಮಭೂಮಿ ಮತ್ತು ಶಬರಿಮಲೆ ಪ್ರಕರಣಗಳಲ್ಲಿ ಹಾಜರಾಗಲೆಂದೇ ನಾನು ನಿವೃತ್ತಿಯಿಂದ ಹೊರಬಂದೆ ಎಂದು ಹೇಳುವುದು ಸಂಪೂರ್ಣ ಸರಿ ಯಲ್ಲ; ಈ ಪ್ರಕರಣ ಗಳಲ್ಲಿ ಕಾಣಿಸಿಕೊಳ್ಳಲು ನನ್ನನ್ನು ಆಯ್ಕೆ ಮಾಡಿರುವುದು ಭಗವಂತನ ಇಚ್ಛೆ ಎಂದು ನಾನು ನಂಬುತ್ತೇನೆ. ಭಗವದ್ಗೀತೆಯಲ್ಲಿ ಭಗವಂತ ಹೇಳುವಂತೆ ನಾನು ನಿಮಿತ್ತ ಮಾತ್ರ’ ಎನ್ನುವ ಮೂಲಕ ಸೌಜನ್ಯ ಮೆರೆದ ವರು ಪರಾಶರನ್.
ಹೀಗೆ, ಕೋಟ್ಯಂತರ ಹಿಂದೂಗಳು ೫ ಶತಮಾನ ಗಳಿಂದ ಕಾಯುತ್ತಿದ್ದ ರಾಮಮಂದಿರ ನಿರ್ಮಾಣಕ್ಕೆ ನ್ಯಾಯಾಲಯದಲ್ಲಿ ಪ್ರಕರಣವನ್ನು ಗೆಲ್ಲುವುದು
ಅನಿವಾರ್ಯವಾಗಿದ್ದ ಸಂದರ್ಭದಲ್ಲಿ, ತಮ್ಮ ವೃತ್ತಿಯಲ್ಲಿ ಸಂಪಾದಿಸಿದ್ದ ಸಂಪೂರ್ಣ ಗೌರವ ಮತ್ತು ಕೀರ್ತಿಯನ್ನು ಆ ಇಳಿವಯಸ್ಸಿನಲ್ಲಿ ಪಣಕ್ಕಿಟ್ಟು
ವಾದಿಸಿ ಗೆಲ್ಲಲು ನ್ಯಾಯಾಲಯದ ಅಖಾಡಕ್ಕೆ ಧುಮುಕಿದವರು ಪರಾಶರನ್. ಅಂತೆಯೇ ಶ್ರೀರಾಮನ ಆಶೀರ್ವಾದದ ಫಲವಾಗಿ ತಮ್ಮ ಪ್ರಯತ್ನದಲ್ಲಿ ಜಯಶೀಲರಾಗಿ ಮತ್ತಷ್ಟು ಎತ್ತರಕ್ಕೆ ತಮ್ಮ ಕೀರ್ತಿಪತಾಕೆಯನ್ನು ಹಾರಿಸಿದ ಪರಾಶರನ್ ರನ್ನು ಪತ್ರಕರ್ತರೊಬ್ಬರು, ‘ತಾವು ಮತ್ತೆ ಕೋಟ್ಗೆ ಬರುವು ದಿಲ್ಲವಾ?’ ಎಂದು ಪ್ರಶ್ನಿಸಿದಾಗ, ‘ವಕೀಲರಿಗೆ ನಿವೃತ್ತಿಯಿಲ್ಲ’ ಎಂದುತ್ತರಿಸಿದರಂತೆ!
(ಲೇಖಕರು ಬಿಜೆಪಿಯ ಮಾಜಿ
ಮಾಧ್ಯಮ ಸಂಚಾಲಕರು)