ಪರಿಶ್ರಮ
ಪ್ರದೀಪ್ ಈಶ್ವರ್
parishramamd@gmail.com
ಜೀವನದಲ್ಲಿ ಏನೋ ಸಾಧಿಸಬೇಕೆಂದು ಆಸೆ. ಪ್ರತಿಯೊಬ್ಬರಿಗೂ ಒಂದೊಂದು ಸಮಸ್ಯೆ ಪದೇ ಪದೇ ಕಷ್ಟ ಬರ್ತಿದೆ ಅಂದ್ರೆ ಕಷ್ಟ ಬರ್ತಿದೆ ಅಂತ ಅಲ್ಲ. ದುರದುಷ್ಟ ಬರ್ತಿದೆ ಅಂತಲೂ ಅಲ್ಲ.
ಒಳ್ಳೆ ದಿನಗಳು ಹತ್ರ ಬರ್ತಿದೆ ಅಂತ. ಶ್ರೀಮಂತರಿಗೆ ಚಿನ್ನ ಕಂಡ್ರೆ ಇಷ್ಟ. ಬಡವರಿಗೆ ಅನ್ನ ಕಂಡ್ರೆ ಇಷ್ಟ. ಇಬ್ಬರು ಬದುಕನ್ನ ಇಷ್ಟ ಪಟ್ರೆ. ಈ ಪಾರ್ಶಾಲಿಟಿ ಇರಲ್ಲ. ಈ ಡಿಫೆನ್ಸ್ ಇರಲ್ಲ. ಬದುಕು ಅದ್ಭುತವಾಗಿ ನಡೆಯುತ್ತೆ. ಲೈಫಲಿ ಏನು ಸಾಧಿಸಬೇಕು ಅಂದ್ರು ಮೆಂಟಲ್ ಬ್ಲಾಕ್ಸ್ ಇರುತ್ತವೆ. ಅದನ್ನ ತೆಗಿಬೇಕು. ಒಂದು ಸಲ ಪ್ರಯತ್ನ ಪಟ್ಟ ನಂತರ ಸೋತೋಗಿ ಬಿಟ್ರೆ! ಇನ್ನು ನನ್ನ ಕೈಯಲ್ಲಿ ಆಗಲ್ಲ ಅಂದು ಕೊಂಡು ಬಿಡೋದು.
ಒಂದು success ಸಿಕ್ಕ ತಕ್ಷಣ ನಾನು ಮನಸು ಮಾಡಿದರೆ ಏನು ಬೇಕಾದರೂ ಆಗುತ್ತೆ ಅಂದುಕೊಳ್ಳುವುದು. ಎರಡು ತಪ್ಪು. ಆನೆಯನ್ನ ಟ್ರೈನ್ ಮಾಡುವಾಗ ದೊಡ್ಡ ದೊಡ್ಡ ಹಗ್ಗಗಳಾಕಿ ಟ್ರೈನ್ ಮಾಡಿರ್ತಾರೆ. ಅದು 2 ವರ್ಷನೂ 3 ವರ್ಷನೂ ಟ್ರೈನ್ ಆದಮೇಲೆ ನಂತರ ಆನೆ ಮೆಂಟಲಿ decide ಆಗಿರುತ್ತೆ. ಇನ್ನು ಎಷ್ಟು ಹಗ್ಗ ಎಳೆದ್ರು ಕಿತ್ತು ಬರೋಕೆ ಆಗಲ್ಲ. ದೊಡ್ಡ ದೊಡ್ಡ ಹಗ್ಗ ಹಾಕಿದ್ದಾರೆ ಅಂತ ಅದು decide ಆಗಿರುತ್ತೆ. ಅದು ಕೋಸ್ಕರ ಸರ್ಕಸ್‌ಲಿ ಒಂದು ಚಿಕ್ಕ ಹಗ್ಗ ಹಾಕಿದ್ರು ಆನೆ ತಪ್ಪಿಸಿಕೊಂಡು ಹೋಗಲ್ಲ.
ನಮಗೆ ಅನ್ಸುತ್ತೆ ಎಷ್ಟು ಚಿಕ್ಕ ಚೈನ್ ಹಾಕಿದರೂ ಆನೆ ಹೇಗ್ ನಿಲ್ಲುತ್ತೆ ಅಂತ. ಅದು ಪ್ರಯತ್ನ ಪಟ್ರೆ ಹೊಡೆದುಕೊಂಡು ಹೋಗುತ್ತೆ. ಆದ್ರೆ ಆನೆ dicide ಆಗುತ್ತೆ ಪ್ರಾಕ್ಟಿಸ್ ಟೈಮ್‌ಲಿ ಎಷ್ಟು ಎಳೆದರು ಇಷ್ಟೇ ಇನ್ನ ಆಗಲ್ಲ ಅಂತ. ಸೊ .. ಮೆಂಟಲ್ ಬ್ಲಾಕ್ಸ್ ಇಂದ ಆಚೆ ಬನ್ನಿ. 900 ಕ್ಕೂ ಹೆಚ್ಚು ಬಾರಿ ಸೋತಂತ ಥಾಮಸ್ ಅಲ್ವ ಎಡಿಸನ್ ಒಂದೇ ಒಂದು ಸಲ ಅಯ್ಯೋ ನನ್ನ ಕೈಲಿ ಆಗಲ್ಲ ಅಂದುಕೊಂಡ್ರೆ ಇವತ್ತು ಜಗತ್ತಿನ ಇತಿಹಾಸದ ಪುಟಗಳಲ್ಲಿ ಥಾಮಸ್ ಅಲ್ವ ಎಡಿಸನ್ ಇರ್ತಿರ್ಲಿಲ್ಲ .
ಲೈಫಲಿ ಏನ್ ನಡೆದರೂ ಮತ್ತೆ ಮತ್ತೆ ಪ್ರಯತ್ನ ಪಡಬೇಕು. ಚಿಕ್ಕ ವಯಸ್ಸಲ್ಲಿ ಅಮ್ಮ ನಮಗೆಲ್ಲ ಒಂದು ಕಥೆ ಹೇಳುತ್ತಿದ್ರು. ಮೊದಲನೇ ಸಲ ಹುಲಿ ಬಂತು ಅಂದ ತಕ್ಷಣ ಅಪ್ಪ ಹೋದ್ರಂತೆ, ಎರಡನೇ ಸಲ ಹುಲಿ ಬಂತು ಅಂದ ತಕ್ಷಣ ಅಪ್ಪ ಹೋದ್ರಂತೆ, ಮೂರನೇ ಸಲ ನಿಜವಾಗಲೂ ಹುಲಿ ಬಂತಂತೆ ಅಪ್ಪ ಹೋಗಲಿಲ್ವಂತೆ. ಮೂರನೇ ಸಲ ಹೋಗಬಹುದಿತ್ತು ಅಲ್ವ? ಮಗನ ಮೇಲೆ ನಂಬಿಕೆ ಇಡಬಹುತ್ತಿತ್ತು ಅಲ್ವಾ? ಅಂದ್ರೆ ನಾವು ಓದುತ್ತಿರುವ ಮಾರೆಲ್ ಸ್ಟೋರೀಸ್ ಸ್ವಲ್ಪ ಬದಲಾಗಿ ಬಿಟ್ರೆ ನಮ್ಮ ಎಥಿಕ್ಸ್ ಮೊರಾಲಿಟಿ ಬದಲಾಗಿ ಬಿಡುತ್ತೆ. ಗೆಲುವು ಅಂದ್ರೆ ಸಂತೋಷ , ಗೆಲುವು ಅಂದ್ರೆ ನೆಮ್ಮದಿ, ಗೆಲುವು ಅಂದ್ರೆ ನೀವು ಅಂದುಕೊಂಡಿದ್ದನ್ನ ಸಾದಿಸಿದ ನಂತರ ನೀವೆಷ್ಟು ನೆಮ್ಮದಿ ಆಗಿ ಇರ್ತೀರ ಅಂತ.
ಅಪ್ಪ ಅಮ್ಮ ಏನ್ ಅಂತಾರೆ ಅಂದ್ರೆ, ಹತ್ತನೇ ಕ್ಲಾಸ್ ಲ್ಲಿ ಇದು ಒಂದು ಓದು ಸಾಕು ಲೈಫ್ ಸೆಟ್ಟಲ್ ಆಗುತ್ತೆ ಅಂತ. ಹತ್ತನೇ ಕ್ಲಾಸ್ ಎಲ್ರು ಕಷ್ಟ ಪಟ್ಟು ಓದುತ್ತಾರೆ ರಿಸಲ್ಟ ಬರುತ್ತೆ. 95% ಬರುತ್ತೆ, ನಂತರ ಏನ್ ಅಂತಾರೆ Pಖಿಇ ಇದು 2 ವರ್ಷ ಓದು ಅಂತಾರೆ.
2 ವರ್ಷನು ಓದುತ್ತೀವಿ. ಇದು ಆದಮೇಲೆ ಇಷ್ಟು ದಿನ ಓದಿದ್ದು ಅಲ್ಲ ಇವಾಗ NEET, CET, IIT ಎಕ್ಸಾಮ್ ಮುಖ್ಯ ಅಂತಾರೆ. ಅದು ಓದು ಬಿಡ್ತೀವಿ. ಎಲ್ಲ ಓದಿ MBBS ಅಥವಾ ಇಂಜೀನಿಯರಿಂಗ್ ಹೋದ್ರೆ ಆವಾಗ್ ಏನು ಅಂತಾರೆ. ಇಷ್ಟು ದಿನ ಓದಿದ್ದು ಅಲ್ಲ. ಇದು ಪಾಸ್ ಆಗಬೇಕು ಅಂತಾರೆ.
ಕಷ್ಟ ಪಟ್ಟು MBBS, BE ಓದಿ ಪಾಸ್ ಮಾಡಿದ್ರೆ, MBBS, BE ಗೆ ಸ್ಕೋಪ್ ಇಲ್ಲ MD, ಎಂಟೆಕ್ ಮಾಡಬೇಕು ಅಂತಾರೆ. ಯಾವಾಗ ಸಂತೋಷವಾಗಿರೋದು, ಗೆದ್ದಮೇಲೆ ಹೇಗ್ ಸಂತೋಷವಾಗಿರಲು ಸಾಧ್ಯ. ಸಕ್ಸಸ್‌ಗೆ ಡೆಫಿನೇಷ ಇರಲ್ಲ. ನೀನು ಗೆದ್ದು ಬಿಡು ಅದೇ ಡೆಫಿನೇಷನ್ ಆಗಿಬಿಡುತ್ತೆ. ನಾಳೆ ಚೆನ್ನಾಗಿರೋಣ, ಗೆದ್ದಮೇಲೆ ಚೆನ್ನಾಗಿರೋಣ, 10th ಆದಮೇಲೆ ಚೆನ್ನಾಗಿರೋಣ, , puc ಆದ ಮೇಲೆ ಚೆನ್ನಾಗಿರೋಣ, ನೋ.. ಎಲ್ಲ ಯುವಕ ಯುವತಿಯರಿಗೆ ಒಂದು ಮಾತು ಹೇಳ್ತೀನಿ ದಯವಿಟ್ಟು ಒಂದು ಅರ್ಥ ಮಾಡಿ ಕೊಳ್ಳಿ.
ಯಾರು ಯಾರು ಓದುತ್ತಾ ಇದ್ದೀರಾ. ಜೀವನದ ಗೋಲ್ಡನ್ days ಇವೆಲ್ಲ. ಡಿಗ್ರಿ ನೋ ಮಾಸ್ಟರ‍್ಸ್ ಡಿಗ್ರಿ ನೋ ಮುಗಿಯೋವರೆಗೂ ಗೋಲ್ಡನ್ ಡೇಸ್. ಯಾಕೆಂದ್ರೆ ಚಿಕ್ಕ ಚಿಕ್ಕ ಪ್ರಾಬ್ಲಮ್ ಇರುತ್ತೆ. ವೀಕೆಂಡ್‌ಲ್ಲಿ ಊಟ ಮಾಡೋಣ ಅಂದ್ರೆ amount ಪ್ರಾಬ್ಲಮ್. ಒಳ್ಳೆ ಸಿನೆಮಾಗೆ ಕಾಸು ಇರಲ್ಲ, ರಿಚಾರ್ಜ್‌ಗೆ ಕಾಸು ಇರಲ್ಲ. ಇಷ್ಟೇ! ಒಂದು ಸಲ ಗೆದ್ದು ನೋಡು ನೀನ್ ಅಂದುಕೊಂಡಿದ್ದು ಆಗಿ ನೋಡು ನೀನು ಓದೋವಾಗ, ಸ್ಟ್ರಗಲ್ ಮಾಡೋವಾಗ ಒಂದು ಸ್ವಲ್ಪ ಅನ್ನ shortage ಬಂದಿರುತ್ತೆ ಅಷ್ಟೇ. ಆದ್ರೆ ನೆಮ್ಮದಿ ಯಾಗಿ ಊಟ ಮಾಡಿರುತ್ತೀಯ.
ನೀನು ಅಂದುಕೊಂಡಿದ್ದು ತಿನ್ನೋಕೆ ಆಗಿರಲ್ಲ. ಆದ್ರೆ ಊಟ ಮಾಡಿರುತ್ತೀಯ. ಅದೇ ನೀನು ಒಂದು ಸಲ ಗೆದ್ದು ಬಿಡು. ನಿಜವಾದ ಟೈಮ್ ಇರುತ್ತೆ. ನೀವು ಏನು ಮಾಡೋಕೆ ಆಗಲ್ಲ. ತಿಂಡಿ intimeಗೆ ತಿನ್ನಲ್ಲ, ಊಟ intimeಗೆ ತಿನ್ನಲ್ಲ, tensions. ಬದುಕಿಗೆ ಅತಿ ದೊಡ್ಡ ಫಾರ್ಮುಲಾ dears… ಇಷ್ಟೇ. ಇವತ್ತು ನೀವು ಏನು ಕೆಲಸ ಮಾಡುತ್ತಿದೀರ ಅದ್ರ ಖುಷಿಯಾಗಿರಿ.
ನಾಳೆ ನಾನು ಏನಾದರು ಸಾಽಸಿ ನೆಮ್ಮದಿಯಾಗಿರ್ತೀನಿ ಅಂದ್ರೆ ನೆವರ್ ಪಾಸಿಬಲ್. ಆಗೋದೇ ಇಲ್ಲ. ನೀವು ಜೀವನದಲ್ಲಿ ಗೆದ್ರಲ್ಲಿ ಸೋತು ಹೋಗಿಬಿಡಬಹುದು. ಆದ್ರೆ ಪ್ರಯತ್ನದಲ್ಲಿ ಸೋತು ಹೋಗಬಾರದು. ಪ್ರಯತ್ನದಲ್ಲಿಯಾದರು ಸಕ್ಸಸ್ ಸಿಗಬೇಕು. ಯಾವತ್ತೋ ಒಂದು ದಿನ ಗೆಲ್ತೀವಿ. ಪ್ರತಿಯೊಬ್ಬರಿಗೂ ಒಂದು ದಿನ ಅಂತ ಬರುತ್ತೆ. ಜೀವನದಲ್ಲಿ ನಾವು ಏನಾದರು ಸಾಧಿಸಲೇ ಬೇಕು ಅಂತ ಹೋದಾಗ, ನಮಗೆ – ಆಗೋದೇ ರಿಜೆಕ್ಷನ್! ತಿರಸ್ಕರಿಸುತ್ತಾರೆ, ನೆಕ್ಸ್ಟ್ ಅವಮಾನಿಸುತ್ತಾರೆ.
ನಿನ್ನ ಕೈಯಲ್ಲಿ ಆಗಲ್ಲ ಅಂತಾರೆ. ಫೈನಲಿ ಒಪ್ಪಿಕೊಳ್ತಾರೆ. ಏಣಿ ಹತ್ತೋದು ಕಷ್ಟ ಅನ್ಕೋತೀರಾ, ಏಣಿ ಹತ್ತಿದ ಮೇಲೆ ಅಲ್ಲಿ ನಿಂತುಕೊಳ್ಳುವುದು ಇನ್ನು ಕಷ್ಟ. ಬೀಳೋದು ಅಂತೂ ತುಂಬ easy. so… ಜೀವನ ದಲ್ಲಿ ತುಂಬ ಎಚ್ಚರಿಕೆ ಇಂದ ಹೆಜ್ಜೆ ಇಡಿ.
ಜೀವನದಲ್ಲಿ ಸಕ್ಸಸ್ ಪಡೀಬೇಕು ಅಂದ್ರೆ ಅವಮಾನ ಆಗುತ್ತೆ. ದೊಡ್ಡ ದೊಡ್ಡ ವ್ಯಕ್ತಿಗಳನ್ನೇ headings ಗಳಾಕಿ ಬೈಯುತ್ತಾರೆ. ದೊಡ್ಡ ದೊಡ್ಡ ವ್ಯಕ್ತಿಗಳೇ ಅವಮಾ ನಕ್ಕೆ ಒಳಪಡ್ತಾರೆ.
nothing to worry dears… ಜೀವನದಲ್ಲಿ ಸಾಧಿಸಬೇಕಾ ಅದರ ಬಗ್ಗೆ ಕ್ಲಾರಿಟಿ ಇಟ್ಟುಕೊಳ್ಳಿ. ಜಾರ್ಜ್ ಬರ್ನಾಡ್ ಶಾ ಅಂತ. ಇವರು ಐರಿಸ್ ದೇಶದವರು. ಬಹಳಷ್ಟು ಬುಕ್ಸ್‌ಗಳನ್ನ ಬರೆದಿದ್ದಾರೆ. ನಾಟಕಗಳನ್ನ ಮಾಡುತ್ತಾರೆ. ಇವ್ರು ತುಂಬ ಹೆಸರನ್ನ ಮಾಡಿದ್ದಾರೆ. ಐರಿಸ್‌ನಲ್ಲಿ ಒಂದು ಸಲ ಅವ್ರ ಡ್ರೈವರ್ ಕೇಳ್ತಾನೆ, ಸರ್ ಕಳೆದ 25-35 ವರ್ಷ ಗಳಿಂದ ನಿಮ್ಮ ಬಳಿ ಡ್ರೈವರ್ ಆಗಿ ಸೇವೆ ಸಲ್ಲಿಸು ತ್ತಿದ್ದೀನಿ, ನನಗೆ ಒಂದು ಒಳ್ಳೆ ವೇದಿಕೆಯಲ್ಲಿ ಮಾತನಾಡೋಕೆ ಅವಕಾಶ ಮಾಡಿಕೊಡಿ.
ಹೇಗೆ ಒಬ್ಬ ಡ್ರೈವರ್‌ಗೆ ಅವಕಾಶ ಕೊಡೋದು; ಸಾವಿರಾರು ಜನ ವೇದಿಕೆಯಲ್ಲಿ ಇರುತ್ತಾರೆ. ಅಂತ ಯೋಚನೆ ಮಾಡಿ ಒಂದು ವೇದಿಕೆಯಲ್ಲಿ ಅವಕಾಶ ಕೊಡ್ತಾರೆ, ಆ ಪ್ರೋಗ್ರಾಮ್‌ಲ್ಲಿ ಅವತ್ತು ಅಷ್ಟೇನು ತಂತ್ರಜ್ಞಾನ ಇರಲಿಲ್ಲ. ಜಾರ್ಜ್ ಬರ್ನಾಡ್ ಶಾ ರವರನ್ನ ಯಾರು ನೇರವಾಗಿ ನೋಡಿರಲಿಲ್ಲ. ಹೆಸರು ಕೇಳಿದ್ರು ಆ ಕಾರ್ಯಕ್ರಮದಲ್ಲಿ ಆವತ್ತು ಜಾರ್ಜ್ ಬರ್ನಾಡ್ ಶಾ ಡ್ರೈವರ್ ಗೆ ಹೇಳ್ತಾರೆ. ಡ್ರೈವರ್ ನೀನು ನನ್ನ ವೇಷ ಹಾಕಿಕೊಂಡು ಮಾತಾಡು. ನಾನು ನಿನ್ನ ವೇಷ ಹಾಕಿಕೊಳ್ತೀನಿ ಅಂತ. ಆವತ್ತು ಜಾರ್ಜ್ ಬರ್ನಾಡ್ ಶಾ ಆಗ್ತಾರೆ.
ಡ್ರೈವರ್ ಜಾರ್ಜ್ ಬರ್ನಾಡ್ ಶಾ ವೇಷ ಹಾಕಿಕೊಂಡು ಸ್ಟೇಜ್ ಮೇಲೆ ಹತ್ತಿ ಮಾತಾಡ್ತಾರೆ. ಏನ್ ಡ್ರೈವರ್ ಮಾತಾಡ್ತಿದ್ರೆ ಸಿಕ್ಕಾಪಟ್ಟೆ ಸಿಳ್ಳೆಗಳು ಬರುತ್ತಾ ಇರುತ್ತೆ. ಯಾರೋ ಒಬ್ಬ ವ್ಯಕ್ತಿಗೆ ಗೊತ್ತಾಗುತ್ತೆ ಇದು ಜಾರ್ಜ್ ಬರ್ನಾಡ್ ಶಾ ಅಲ್ಲ, ಆತನ ಡ್ರೈವರ್ ಅಂತ.
ಇಲ್ಲಿ ಇವರನ್ನ ಸಿಕ್ಕಿ ಹಾಕಿಸಬೇಕು ಅಂತ ದೂರದಿಂದ ಜಾರ್ಜ್ ಬರ್ನಾಡ್ ಶಾನ ಒಂದು ಫೀಲ್ಡ ನಲ್ಲಿ specialisation ಆಗಿರು ತ್ತಾನೆ. ಸಭೆಯಿಂದ ಒಂದು ಪ್ರಶ್ನೆ ಬರುತ್ತೆ. ಆಗ ಜಾರ್ಜ್ ಬರ್ನಾಡ್ ಶಾ (Driver) ತಬ್ಬಿಬಾಗಿ , ಇಂತ ಚಿಕ್ಕ ಪ್ರಶ್ನೆಗೆ ನನ್ನ ಡ್ರೈವರ್ ಆನ್ಸರ್ ಮಾಡ್ತಾನೆ ಅಂತ ಉತ್ತರಿಸುತ್ತಾನೆ. ನೋಡಿ ಇದನ್ನ Common sense ಅಂತ ಹೇಳ್ತಾರೆ.
ಹುಟ್ಟು ಅನ್ನೋದು ಒಂದು ಕ್ಷಣ ಆಗೋದು. ಸಾವು ಅನ್ನೋದು ಕ್ಷಣದಲ್ಲಿ ಆಗೋಗುತ್ತೆ. ಆದ್ರೆ ಬದುಕು ಅನ್ನೋದು ಪ್ರತಿ ಕ್ಷಣ ನಡೆಬೇಕು. ಅನು ಕ್ಷಣ ನಡೆಬೇಕು. ಆ ಪ್ರತಿ ಕ್ಷಣ, ಅನು ಕ್ಷಣ ಯಶಸ್ಸಿರಬೇಕು ಅಂದ್ರೆ ಆತ್ಮ ವಿಶ್ವಾಸದಿಂದ ಬದುಕಬೇಕು. ಲೈಫಲಿ ಏನೇ ಆದರೂ ಅದಕ್ಕೆ ಒಂದು cause ಇರುತ್ತೆ, ಕಾರಣ ಇರುತ್ತೆ. ಅದನ್ನ ನಾವು ಗಟ್ಟಿಯಾಗಿ ನಂಬಬೇಕು.
ಜೀವನದಲ್ಲಿ ಏನು ಆಗಿದೆ ಅದನ್ನ ನಂಬಿ. ನೀವು ಏನೋ ಅದರಮೇಲೆ ನಂಬಿಕೆ ಇಡಿ. ನಿಮ್ಮ ಬಗ್ಗೆ ಮೊದಲು ಗೌರವ ಬೆಳಿಸಿ ಕೊಳ್ಳಿ. ಕೂಲ್ ಆಗಿ ವಾಸ್ತವದಲ್ಲಿ ಬದುಕಿ. ಬದುಕು ಅಂದ್ರೆ ಎಷ್ಟು ಕಷ್ಟ ಅನುಭವಿಸುತ್ತಿದ್ದೀರಾ ಅಂತ ಅಲ್ಲ. ವಾಸ್ತವದಲ್ಲಿ ಎಷ್ಟು ಬದುಕುತ್ತೀರಾ ಅಂತ. ಲೈಫ್ ಒಂದು ತರಾ ಟೀಚರ್ ಇದ್ದಂಗೆ. ಟೀಚರ್ಸ್ ತುಂಬ ಒಳ್ಳೆಯವರು, ಪಾಠ ಹೇಳಿಕೊಟ್ಟು ಪರೀಕ್ಷೆ ಕೊಡುತ್ತಾರೆ. ಈ ಲೈಫ್ ಫಸ್ಟ್ ಪರೀಕ್ಷೆ ಕೊಡುತ್ತೆ, ಫೈಲ್ ಆಗುತೀವಿ, ನಂತರ ಪಾಠ ಕಲಿಸುತ್ತೆ.