Friday, 13th December 2024

ಸಮುದ್ರ ಮೀನಿನಿಂದ ಫ್ಲು ವೈರಸ್‌ ಉಗಮ

ವೈದ್ಯ ವೈವಿಧ್ಯ

drhsmohan@gmail.com

ಚೀನಾದ ಶೆಂಗಾಯ್ ನ ಪಾರ್ಶ್ಚ ಸಂಸ್ಥೆಯ ವೈರಾಲಜಿ ತಜ್ಞ ಜೀ ಕುಯ್ ೨೦೨೧ರಲ್ಲಿ ಸಮುದ್ರದಾಳದ ಏಡಿಗಳ ಜೀನೋಮ್‌ಗಳ ಅಧ್ಯಯನ ನಡೆಸಿ ಅದರಲ್ಲಿ ಒಂದು ಗುಂಪಿನ ಇನ್ ಫ್ಲುಯೆಂಜಾ ವೈರಸ್ ಗುರುತಿಸಿದ್ದಾರೆ. ಹೀಗೆ ಹಲವು ಸಂಶೋಧಕರು – ವೈರಸ್ ಸಮುದ್ರದ ಮೀನಿನ ಮೂಲದಿಂದ ಬಂದಿದೆ ಎಂಬ ವಾದವನ್ನು ಒಪ್ಪುತ್ತಾರೆ.

ವೈರಸ್ ಕಾಯಿಲೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಹೆಚ್ಚಿನ ತಮ್ಮೆಲ್ಲರ ಗಮನಕ್ಕೆ ಬಂದಿರಬಹುದು. ಮೂರು ವರ್ಷಗಳಿಂದ ಮನುಷ್ಯ ನಿಗೆ ಸವಾಲೆಸೆದು ಗಂಭೀರ ಪರಿಣಾಮಗಳನ್ನು ಉಂಟು ಮಾಡಿದ ಕೋವಿಡ್ ಬಗ್ಗೆಯೂ ಅರಿವಿದೆ. ಹಾಗೆಯೇ ಡೆಂಗ್ಯೂ, ನಿಫಾ, ಝೀಕಾ ಹಾಗೂ ಇತ್ತೀಚೆಗೆ ಎಚ್ ೩ಎನ್೨ ವೈರಸ್‌ಗಳು ಮನುಕುಲವನ್ನು ಕಾಡುತ್ತಿವೆ. ಆದರೆ ಈ ಎಲ್ಲ ವೈರಸ್‌ಗಳ ಮೂಲ ಅಥವಾ ತಾಯಿ ವೈರಸ್ ಎಂದರೆ – ಕಾಯಿಲೆಗೆ ಕಾರಣವಾಗುವ ಇನ್ ಫ್ಲುಯೆಂಜಾ. ಅದು ಹೇಗೆ ಆರಂಭವಾಯಿತು? ಅದರ ಮೂಲ ಯಾವುದೆಂಬುದರ ಬಗ್ಗೆ ಹೆಚ್ಚು ಚರ್ಚೆನಡೆಯುತ್ತಿದೆ.

ಇದು ಸಮುದ್ರದ ನೀರಿನಲ್ಲಿ ವಾಸಿಸುವ ಮೀನುಗಳಲ್ಲಿ ಆರಂಭವಾಯಿತು ಎಂಬ ಆಶ್ಚರ್ಯಕರ ಮಾಹಿತಿಯನ್ನು ಇತ್ತೀಚೆಗೆ ವಿಜ್ಞಾಗಳು ಹೊರ ಗೆಡಹಿದ್ದಾರೆ. ಸಂಶೋಧಕರು ಸ್ಟರ್ಜಿಯಾನ್ ಎಂಬ ಶಾರ್ಕ್ ಮೀನಿನ ರೀತಿಯ ದೊಡ್ಡ ಜಾತಿಯ ಮೀನಿನ ಜೆನೆಟಿಕ್ ಮೂಲದಲ್ಲಿ ಈ ವೈರಸ್‌ನ ದೂರದ ಸಂಬಂಧಿ ರೀತಿಯ ವೈರಸ್‌ವೊಂದನ್ನು ಗುರುತಿಸಿದ್ದಾರೆ. ನೂರಾರು ಮಿಲಿಯನ್ ವರ್ಷಗಳ ಮೊದಲು ನೀರಿನಲ್ಲಿದ್ದ ಬಹಳ ಹಿಂದಿನ ಜಲಚರ ಜೀವಿಗಳಲ್ಲಿ ಇನ್ ಫ್ಲುಯೆಂಜಾ ಹುಟ್ಟಿತು ಎಂಬುದು ಸಂಶೋಧಕರ ಅಭಿಮತ.

ಮೀನುಗಳು ಜನ್ಮ ತಳೆಯುವ ಮೊದಲೇ ಈ ಜಲಚರ ಜೀವಿಗಳಲ್ಲಿ – ವೈರಸ್ ಆರಂಭವಾಗಿದ್ದವು ಎಂದರೆ ಅವುಗಳಿಗೆ ಎಷ್ಟು ಅಗಾಧ ಮತ್ತು ದೀರ್ಘ
ಇತಿಹಾಸ ಇದೆ ಎಂಬುದನ್ನು ಗಮನಿಸಿ. ಈ ವೈರಸ್‌ಗಳು ಒಂದು ಜೀವಿಯಿಂದ ಮತ್ತೊಂದು ಜೀವಿಗೆ ದಾಟುವ ಅಥವಾ ಹಾರುವ ಗುಣ ಹೊಂದಿವೆ. ಹಾಗಾಗಿ ಮಾನವನಲ್ಲಿ ಇವು ಹೊಸ ಹೊಸ ರೀತಿಯ ಸಾಂಕ್ರಾಮಿಕಗಳನ್ನು ಹುಟ್ಟು ಹಾಕುತ್ತವೆ.

ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದ ವೈರಾಲಜಿ ತe ಮೇರಿ ಪೆಟ್ರೋನ್ ಈ ಬಗೆಗೆ ಸುದೀರ್ಘ ಸಂಶೋಧನೆ ಕೈಗೊಂಡಿದ್ದಾರೆ. ಆರಂಭದ ಎರಡು ವರ್ಷ ಆಕೆ ಕರೋನಾ ವೈರಸ್ ಮೇಲೆ ಅಧ್ಯಯನ ನಡೆಸಿ, ಈಗ ಅವರು ಹವಳದ ಮೇಲೆ ವಿಸ್ತೃತ, ವಿಶೇಷ ಅಧ್ಯಯನ ಕೈಕೊಂಡಿದ್ದಾರೆ.
ನಿಡೇರಿಯಾ (Cnideria) ಫಲಂಗೆ ಸೇರಿದ ಈ ಹವಳಗಳು ೬೦೦ ಮಿಲಿಯನ್ ವರ್ಷಗಳ ಮೊದಲು ಬೇರೆ ಪ್ರಾಣಿಗಳಿಂದ ಭಿನ್ನವಾಗಿ ಹೊರ ಬಂದು ಬೇರೆಯಾದವು. ಪ್ರಾಣಿಗಳಲ್ಲಿ ಸೋಂಕು ತರುವ ವೈರಸ್‌ಗಳ ಬಗ್ಗೆ ತಿಳಿಯಲು ಈ ಹವಳಗಲ್ಲಿನ ಅಧ್ಯಯನ ಸಹಾಯಮಾಡುತ್ತದೆ ಎಂಬುದು ಪೆಟ್ರೋನ್‌ರ ವಿಶ್ವಾಸ.

ಅದರಲ್ಲಿಯೂ ಆರ್‌ಎನ್‌ಎ ಜೀನೋಮ್ ಹೊಂದಿದ ವೈರಸ್‌ಗಳ ಅಧ್ಯಯನಕ್ಕೆ ಈ ಹವಳಗಳ ಅಧ್ಯಯನ ಸಹಾಯಕಾರಿ. ಆಸ್ಟ್ರೇಲಿಯಾದ ಕರ್ಟಿನ್ ವಿಶ್ವವಿದ್ಯಾಲಯದ ಜೋ ರಿಚರ್ಡ್ಸ್ ಅವರ ಸಹಾಯದಿಂದ ಪಶ್ಚಿಮ ಆಸ್ಟ್ರೇಲಿಯಾದ ಕರಾವಳಿ ಭಾಗದಲ್ಲಿ ಸಂಗ್ರಹಿಸಿದ ಹವಳಗಳಲ್ಲಿ ಆರ್ಟಿಕ್ಯುಲ ವೈರೇಲ್ಸ್ – ಗುಂಪಿನ ವೈರಸ್‌ಗಳ ಸೋಂಕನ್ನು ಗುರುತಿಸಲು ಸಾಧ್ಯವಾಯಿತು. ಮೇಲಿನ ಗುಂಪಿನ ವೈರಸ್‌ಗಳಲ್ಲಿ ಇನ್‌ಪ್ಲೂಯೆಂಜಾ ಕುಟುಂಬದ ವೈರಸ್‌ಗಳು ಹಾಗೂ ಕ್ವಾರಂಜಿ ವೈರಸ್ ಎಂಬ ಮತ್ತೊಂದು ಗುಂಪಿನ ವೈರಸ್‌ಗಳು ಇದ್ದವು.

ಈ ಕ್ವಾರಂಜಿ ಗುಂಪಿನ ವೈರಸ್‌ಗಳು ಸಾಮಾನ್ಯವಾಗಿ ಉಣ್ಣಿಗಳಲ್ಲಿ ಹರಿದಾಡುತ್ತಿರುತ್ತವೆ. ಅಪರೂಪದಲ್ಲಿ ಮಾನವರಿಗೆ, ಹಕ್ಕಿಗಳಿಗೆ ಹಾಗೂ ಇನ್ನಿತರ ಪ್ರಾಣಿಗಳಿಗೆ ಸೋಂಕು ಉಂಟುಮಾಡಬಲ್ಲವು. ಹೊಸ ಅಧ್ಯಯನದ ಪ್ರಕಾರ ಹವಳದಲ್ಲಿ ಸೋಂಕು ಉಂಟು ಮಾಡುವ ವೈರಸ್‌ಗಳು ಒಂದು ದೊಡ್ಡ ವೈರಸ್ ಕುಟುಂಬಕ್ಕೆ ಸೇರಿದವು. ಇವು ಬಹುಶಃ ೬೦೦ ಮಿಲಿಯನ್ ವರ್ಷಗಳ ಮೊದಲು ಆರಂಭವಾಗಿ ನಂತರ ಆರ್ಟಿಕ್ಯುಲೇ ವೈರೇಲ್‌ಗಳಿಗೆ ಜನ್ಮ ಕೊಟ್ಟವು. ಹಾಗೆಯೇ ಇನ್ ಫ್ಲುಯೆಂಜಾ ಮತ್ತು ಕ್ವಾರಂಜಿ ಗುಂಪಿನ ವೈರಸ್‌ಗಳು ಆಗಲೇ ಉಗಮವಾದವು ಇಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಹಾಗಾಗಿ ಪೆಟ್ರೋನ್‌ರು – ವೈರಸ್ ಸಮುದ್ರದಲ್ಲಿ ಜನಿಸಿರಬಹುದು ಎಂದು ಊಹೆ ಮಾಡುತ್ತಾರೆ. ೨೦೧೮ರಲ್ಲಿ ಹಾಗ್ ಜಾತಿಯ ಮೀನಿನಲ್ಲಿ – ವೈರಸ್‌ನ ದೂರದ ಸಂಬಂಧಿ ತರಹದ ವೈರಸ್ ಅನ್ನು ಸಂಶೋಧಕರು ಗುರುತಿಸಿದ್ದಾರೆ. ಸೈಬೀರಿಯಾದ ಸ್ಪರ್ಜಿಯನ್ ಮೀನಿನಲ್ಲಿ ಇನ್
-ಯೆಂಜಾ ರೀತಿಯ ಆರ್‌ಎನ್‌ಎ ಸೀಕ್ವೆನ್ಸ್ ಗುರುತಿಸಿದರು. ಮೇಲಿನ ಹಲವು ಸಂಶೋಧನೆ ಮತ್ತು ಅಧ್ಯಯನಗಳು ಇನ್ ಫ್ಲುಯೆಂಜಾ ವೈರಸ್
ಆರಂಭದಲ್ಲಿ ಜಲಚರಗಳಿಗೆ ಅದರಲ್ಲಿಯೂ ಮುಖ್ಯವಾಗಿ ಮೀನುಗಳಿಗೆ ಸೋಂಕು ಉಂಟು ಮಾಡಿ ನಂತರ ಭೂಮಿಯ ಮೇಲಿನ ಜೀವಿಗಳಿಗೆ
ಸೋಂಕು ಉಂಟುಮಾಡಲಾರಂಬಿಸಿದವು. ಇದಕ್ಕೆ ಪೂರಕವಾಗಿ ಚೀನಾದ ಶೆಂಗಾಯ್ ನ ಪಾರ್ಶ್ಚ ಸಂಸ್ಥೆಯ ವೈರಾಲಜಿ ತಜ್ಞ ಜೀ ಕುಯ್ ೨೦೨೧ರಲ್ಲಿ ಸಮುದ್ರದಾಳದ ಏಡಿಗಳ ಜೀನೋಮ್‌ಗಳ ಅಧ್ಯಯನ ನಡೆಸಿ ಅದರಲ್ಲಿ ಒಂದು ಗುಂಪಿನ ಇನ್ ಫ್ಲುಯೆಂಜಾ ವೈರಸ್ ಗುರುತಿಸಿದ್ದಾರೆ.

ಹೀಗೆ ಹಲವು ಸಂಶೋಧಕರು – ವೈರಸ್ ಸಮುದ್ರದ ಮೀನಿನ ಮೂಲದಿಂದ ಬಂದಿದೆ ಎಂಬ ವಾದವನ್ನು ಒಪ್ಪುತ್ತಾರೆ. ಮೊದಲ ಇನ್ ಫ್ಲುಯೆಂಜಾ ಸಾಂಕ್ರಾಮಿಕ ಬಹುಶಃ ಕ್ರಿ ಪೂ ೬೦೦೦ ಹೊತ್ತಿಗೆ ಚೀನಾದಲ್ಲಿ ಕಂಡುಬಂದಿತು ಎಂದು ಇತಿಹಾಸಕಾರರು ಊಹೆ ಮಾಡುತ್ತಾರೆ. ಕ್ರಿ ಪೂ ೫ನೇ ಶತಮಾನದ ಗ್ರೀಕ್ ಬರವಣಿಗೆಯಲ್ಲಿ ಈ ಬಗ್ಗೆ ಪ್ರಸ್ತಾಪವಿದೆ. ಕ್ರಿ ಶ ೧೧೭೩-೧೧೭೪ ಹಾಗೂ ೧೩೮೭ರಲ್ಲಿ ಯುರೋಪಿನ ಹಲವೆಡೆ ಇನ್ ಫ್ಲುಯೆಂಜಾ ಹೆಸರಿನ ಸಾಂಕ್ರಾಮಿಕ ಹರಡಿದ ದಾಖಲೆಗಳಿವೆ.

ಕ್ರಿ.ಶ.೧೪೯೩ರ ಹೊತ್ತಿಗೆ ಈ ಕಾಯಿಲೆ ಅಮೆರಿಕದಲ್ಲಿ ಕಂಡುಬಂದಿತು ಎನ್ನಲಾಗಿದೆ. ಖಚಿತ ದಾಖಲೆ ಇರುವ ಇನ್ ಫ್ಲುಯೆಂಜಾ ಸಾಂಕ್ರಾಮಿಕ ಕ್ರಿ ಶ ೧೫೧೦ರಲ್ಲಿ ಪೂರ್ವ ಏಷ್ಯಾದ ದೇಶಗಳಲ್ಲಿ ಆರಂಭವಾಗಿ ನಂತರ ಅದು ಆಫ್ರಿಕಾದ ಉತ್ತರ ಭಾಗ ಮತ್ತು ಯುರೋಪ್‌ಗೆ ಹರಡಿತು ಎಂದು ವಿಜ್ಞಾನಿಗಳ ಅಭಿಮತ. ೧೫೫೭ ಮತ್ತು ೧೫೮೦ರಲ್ಲಿ ಜಗತ್ತಿನ ಹಲವೆಡೆ ಕಾಣಿಸಿಕೊಂಡ – ಸಾಂಕ್ರಾಮಿಕ ಗರ್ಭಪಾತ ಮತ್ತು ಗರ್ಭಿಣಿ ಮಹಿಳೆಯ ಮರಣಕ್ಕೆ ೧೫೫೭ರಲ್ಲಿ ಮೊದಲ ಬಾರಿಗೆ ಕಾರಣವಾಯಿತು.

೧೫೮೦ರಲ್ಲಿ ದೊಡ್ಡಮಟ್ಟದ ಸಾಂಕ್ರಾಮಿಕ ಏಷ್ಯಾ ಖಂಡದಲ್ಲಿ ಆರಂಭವಾಗಿ ನಂತರ ಆಫ್ರಿಕಾ, ಯುರೋಪ್ ಮತ್ತು ಅಂತಿಮವಾಗಿ ಅಮೆರಿಕದಲ್ಲೂ ತನ್ನ ಪ್ರಭಾವ ತೋರಿಸಿತು. ೧೬ನೇ ಶತಮಾನದ ಈ – ಕಾಯಿಲೆ ಎಲ್ಲಿ ಬೇಕಾದರೂ ಕಾಣಿಸಿಕೊಂಡು ಆಗಾಗ ಸಾಂಕ್ರಾಮಿಕ ರೀತಿಯಲ್ಲಿ
ಹರಡಬಹುದು ಎಂದು ಜನರಿಗೆ ಅರ್ಥವಾಗತೊಡಗಿತು. ೧೬೪೮ರಲ್ಲಿ ಕುದುರೆಗಳಿಗೂ ಈ – ಕಾಯಿಲೆ ಬರುವುದು ಗಮನಕ್ಕೆ ಬಂದಿತು.

೧೮ ನೇ ಶತಮಾನದಲ್ಲಿ ೧೭೨೯ ರಲ್ಲಿ ರಷ್ಯಾದಲ್ಲಿ ಆರಂಭವಾದ ಸಾಂಕ್ರಾಮಿಕ ಜಗತ್ತಿನಾದ್ಯಂತ ತನ್ನ ಬಾಹುಗಳನ್ನು ಚಾಚಿತು. ಬೇರೆ ಬೇರೆ ಅಲೆಗಳಲ್ಲಿ ೩ ವರ್ಷಗಳ ಕಾಲ ನಿರಂತರವಾಗಿ ಇದು ಹರಡಿತು. ೧೭೮೧- ೮೨ರಲ್ಲಿ ಚೀನಾದಲ್ಲಿ ಮತ್ತೊಂದು – ಸಾಂಕ್ರಾಮಿಕ ಆರಂಭವಾಯಿತು. ಈ ಸಾಂಕ್ರಾಮಿಕದ ಆರಂಭದಿಂದ ರೋಗಿಗಳಿಗೆ ವಿಪರೀತ ಜ್ವರ ಒಂದು ಸುಸ್ತು ಮಾಡತೊಡಗಿತು. ೧೮೭೮ ರಲ್ಲಿ ತುಂಬಾ ಗಂಭೀರವಾದ ಹಕ್ಕಿ ಇನ್ ಫ್ಲುಯೆಂಜಾ ಮೊದಲ ಬಾರಿಗೆ ಗುರುತಿಸಲ್ಪಟ್ಟಿತು. ಹಾಗೆಯೇ ಮನುಷ್ಯರಿಗೂ ಹರಡಿದ ಉದಾಹರಣೆ ಅಗಲೇ ಆರಂಭವಾಯಿತು. ೧೮೮೯ ರ ಸಾಂಕ್ರಾಮಿಕವು ಎಚ್೨ ಎನ್೨ ವೈರಸ್ ನಿಂದ ಉಂಟಾಗಿದ್ದು – ಸಾಂಕ್ರಾಮಿಕದ ಬಗ್ಗೆ ಜನರಿಗೆ ಸರಿಯಾಗಿ ಗುರುತಿಸಲು ಸಾಧ್ಯವಾಯಿತು.

೧೮೯೨ರಲ್ಲಿ ಇನ್ ಫ್ಲುಯೆಂಜಾ ಉಂಟು ಮಾಡುವ ಸೂಕ್ಷ್ಮಜೀವಿ ಹೀಮೋಫಿಲಸ್ ಇನ್ -ಯೆಂಜೇ ಎಂಬ ಬ್ಯಾಕ್ಟೀರಿಯಾ ಎಂದು ಫೀ- ಎಂಬ ವಿಜ್ಞಾನಿ ಯಿಂದ ತಪ್ಪಾಗಿ ಗುರುತಿಸಲ್ಪಪಟ್ಟಿತು. ಅದರ ನಂತರದ ವರ್ಷಗಳಲ್ಲಿ ವೈರಸ್ ಗಳು ಗುರುತಿಸಲ್ಪಟ್ಟವು. ನಂತರ ವೈರಾಲಜಿ ವಿಭಾಗ ನಿಧಾನವಾಗಿ ಬೆಳೆಯಲಾರಂಭಿಸಿತು. ೧೯೦೧-೦೩ ರ ಮಧ್ಯೆ ಇಟಲಿ ಮತ್ತು ಆಸ್ಟ್ರಿಯಾದ ಸಂಶೋಧಕರು ಹಕ್ಕಿ ಜ್ವರ ಅಥವಾ ಏವಿಯನ್ ಇನ್ ಫ್ಲುಯೆಂಜಾವು
ಬ್ಯಾಕ್ಟೀರಿಯಾಗಳಿಗಿಂತ ಚಿಕ್ಕದಾದ ಸೂಕ್ಷ್ಮ ಜೀವಿಯಿಂದ ಉಂಟಾದದ್ದು ಎಂದು ಸೂಕ್ಷ್ಮವಾದ ಫಿಲ್ಟರ್ ಗಳನ್ನು ಉಪಯೋಗಿಸಿ ನಿಖರವಾಗಿ ಹೇಳಿದರು.

ಆದರೂ ಆ ಸಂದರ್ಭದಲ್ಲಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಗೆ ಇರುವ ಮೂಲಭೂತ ವ್ಯತ್ಯಾಸ ಗೊತ್ತಿರಲಿಲ್ಲ. ೧೯೧೮ – ೨೦ ರ ಮಧ್ಯೆ ಸ್ಪಾನಿಷ್ – ಎಂಬ ಸಾಂಕ್ರಾಮಿಕ ಸಾಂಕ್ರಾಮಿಕದ ಇತಿಹಾಸದ ಘನ ಘೋರ ಸಾಂಕ್ರಾಮಿಕ ಎಂದು ಹೆಸರು ಪಡೆಯಿತು.  ಈ – ಬಹುಶಃ ಎಚ್೧ಎನ್೧ವೈರಸ್ ನಿಂದ ಬಂದ ಕಾಯಿಲೆಯಾಗಿದ್ದು, ಅಮೆರಿಕದಲ್ಲಿ ಮೊದಲು ಆರಂಭವಾಗಿ ಮೊದಲ ಜಾಗತಿಕ ಮಹಾಯುದ್ಧದ ಸಮಯವಾಗಿದ್ದರಿಂದ ಸೈನಿಕರ ತಿರುಗಾಟದ ದೆಸೆಯಿಂದ ಜಗತ್ತಿನ ಎಲ್ಲ ಕಡೆ ಹಬ್ಬಿತು. ೧೯೨೦ರ ಹೊತ್ತಿಗೆ ಆಗಿನ ಜನಸಂಖ್ಯೆಯ ೫೦ ಕೋಟಿ ಜನರಲ್ಲಿ ಕಾಣಿಸಿಕೊಂಡು ೪ – ೫ ಕೋಟಿ ಜನರ ಮರಣಕ್ಕೆ ಕಾರಣವಾಗಿತ್ತು ಎಂದರೆ ಇದರ ಅಗಾಧತೆ ಗಮನಿಸಿ.

ಆಗಿನ ಜನಸಂಖ್ಯೆಯ ೧/೩ ರಿಂದ ೧/೨ದಷ್ಟು ಜನರಲ್ಲಿ ಈ ಕಾಯಿಲೆ ಕಾಣಿಸಿಕೊಂಡಿತ್ತು. ಈ ಸಾಂಕ್ರಾಮಿಕದ ಸಮಯದಲ್ಲಿ ಉಸಿರಾಟದ ಅಂಗಗಳಿಂದ ವೈರಸ್ ಹರಡುವುದು ಖಚಿತಗೊಂಡಿತು. ವಿಪರೀತ ಕೆಟ್ಟ ದ್ರವ ಶ್ವಾಸಕೋಶಗಳಲ್ಲಿ ಸೇರಿಕೊಂಡು ಉಸಿರಾಡಲು ತೀವ್ರ ರೀತಿಯ ತೊಂದರೆಯಾಗಿ ಜನರು ಬೇಗ ಬೇಗ ಮರಣ ಹೊಂದತೊಡಗಿದರು. ಈ ಮಹಾ ಯುದ್ಧದಲ್ಲಿ ಸ್ಪೇನ್ ಮಧ್ಯಸ್ಥ ರಾಷ್ಟ್ರವಾಗಿತ್ತು. ಅಲ್ಲಿ
ಮಾಧ್ಯಮದ ಮೇಲೆ ನಿಯಂತ್ರಣ ಇರಲಿಲ್ಲ. ಯುದ್ಧ ಕಾಲದ ಮಾಹಿತಿಗಳು ಅಲ್ಲಿ ಸರಿಯಾಗಿ ಭಿತ್ತರವಾಗುತ್ತಿತ್ತು. ಹಾಗಾಗಿ ಈ ಕಾಯಿಲೆಗೆ
ಸ್ಪಾನಿಷ್ – ಹೆಸರು ಬಂದಿತು. ದೃಢಕಾಯದ ಕಡಿಮೆ ವಯಸ್ಸಿನವರು ಈ ಕಾಯಿಲೆಗೆ ಒಳಗಾಗಿದ್ದು ಈ ಸಾಂಕ್ರಾಮಿಕದ ವಿಶೇಷ.

೧೯೩೧ರಲ್ಲಿ ರಿಚರ್ಡ್ ಶೋಪ್ ಎಂಬುವವರು ಹಂದಿ ಜ್ವರಕ್ಕೆ ವೈರಸ್ ಕಾರಣ ಎಂಬ ಸಂಶೋಧನೆಯ ೩ ಪ್ರಬಂಧಗಳನ್ನು ಪ್ರಕಟಿಸಿದರು. ಶೋಪ್‌ರ ಈ ಸಂಶೋಧನೆಯ ನಂತರ ಮಾನವ ನಲ್ಲಿ ಇನ್ ಫ್ಲುಯೆಂಜಾದ ಬಗ್ಗೆ ಹೆಚ್ಚು ಸಂಶೋಧನೆ ಯಾಗತೊಡಗಿತು. ಹಾಗೆಯೇ ವೈರಾಲಜಿ, ಸೀರಾ ಲಾಜಿ, ಇಮ್ಯೂನಾಲಜಿ ಪ್ರಯೋಗಾತ್ಮಕ ಪ್ರಾಣಿಗಳ ಮಾಡೆಲ, ವ್ಯಾಕ್ಸೀನಾಲಜಿ ಮತ್ತು ಇಮ್ಯನೋಥೆರಪಿ ಚಿಕಿತ್ಸೆಗಳು ಇನ್ ಫ್ಲುಯೆಂಜಾ
ಸಂಶೋಧನೆಯ ನಂತರ ಚುರುಕುಗೊಂಡು ಕಾರ್ಯಕ್ಕೆ ತೊಡಗಿದವು. ೧೯೩೩ ರಲ್ಲಿ ಮಾನವರಲ್ಲಿ ಇನ್ ಫ್ಲುಯೆಂಜಾಕ್ಕೆ ಕಾರಣವಾಗುವ ವೈರಸ್
ಸಂಶೋಧಿಸಲ್ಪಟ್ಟಿತು.

ಎರಡನೇ ಮಹಾಯುದ್ಧದ ಹೊತ್ತಿಗೆ ವೈರಸ್‌ಗೆ ವ್ಯಾಕ್ಸಿನ್ ಅಭಿವೃದ್ಧಿಪಡಿಸುವ ಪ್ರಯತ್ನಕ್ಕೆ ತೊಡಗಿ ೧೯೪೫ರಲ್ಲಿ ಮೊದಲ ವ್ಯಾಕ್ಸಿನ್ ಅಮೆರಿಕದಲ್ಲಿ
ಬಳಕೆಗೆ ಬಂದಿತು. ಎರಡನೇ ಮಹಾಯುದ್ಧದ ನಂತರ ನಾಲ್ಕು – ಸಾಂಕ್ರಾಮಿಕವು ಆದವು. ೧೯೫೭ -೫೮ ರಲ್ಲಿ ಏಷ್ಯಾದ – ಚೀನಾದ ಯುವಾನ್ ಪ್ರಾಂತದಲ್ಲಿ ಕಂಡುಬಂದಿತು. ಇದು ಎಚ್೨ ಎನ್೨ ಪ್ರಬೇಧದಿಂದ ಉಂಟಾಯಿತು. ಈ ಸಾಂಕ್ರಾಮಿಕದಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು
ಜನರು ಮರಣ ಹೊಂದಿದರು. ವೈರಸ್ ವಿರುದ್ಧದ ಔಷಧ ಅಮಟಡೀನ್‌ಗೆ೧೯೬೬ ರಲ್ಲಿ ಅನುಮೋದನೆ ದೊರೆಯಿತು. ೧೯೯೦ ರ ನಂತರ ಬೇರೆ ಬೇರೆ ಆಂಟಿ ವೈರಲ್ ಔಷಧಗಳು ಬಳಕೆಗೆ ಬಂದವು.

ಇನ್ ಫ್ಲುಯೆಂಜಾ ಶಬ್ದ ಇಟಲಿ ಮೂಲದ್ದು ಅರ್ಥ ಫ್ಲುಯೆಂಜಾ ಅಥವಾ ಪ್ರಭಾವ. ಶೀತದ ಪ್ರಭಾವ ಎಂತಲೂ ಕೆಲವರು ಅರ್ಥೈಸುತ್ತಾರೆ. ೧೮೦೦ ರ ನಂತರ ವಿಪರೀತ ಶೀತಕ್ಕೂ ಇನ್ ಫ್ಲುಯೆಂಜಾ ಎನ್ನತೊಡಗಿದರು. – ಎಂಬ ಶಬ್ದ ೧೮೩೯ರಲ್ಲಿ ಆರಂಭಗೊಂಡಿತು. ೧೮೯೩ರಲ್ಲಿ ಅಧಿಕೃತ ಗೊಂಡಿತು.