Saturday, 14th December 2024

ಬದುಕೆಂಬ ಬಂಡಿ ಸಾಗಲು ಬೇಕಾದ ನಾಲ್ಕು ಚಕ್ರಗಳು

ಒಂದು ಕಾರ್‌ನ ನಾಲ್ಕು ಚಕ್ರಗಳಲ್ಲಿ ಒಂದು ಚಕ್ರ ಅಲುಗಾಡಿದರೂ ಸಾಕು. ಕಾರ್ ಅಪಘಾತಕ್ಕೀಡಾಗುತ್ತದೆ. ಅದೇ ಎಲ್ಲವೂ ಬ್ಯಾಾಲೆನ್‌ಸ್‌‌ನಲ್ಲಿದ್ದರೆ ಕಾರು ಸುರಕ್ಷಿಿತ. ನಮ್ಮ ಜೀವನದಲ್ಲೂ ನಾಲ್ಕು ಅಂಶಗಳನ್ನು ಸರಿಯಾಗಿ ಬ್ಯಾಾಲೆನ್‌ಸ್‌ ಮಾಡುವುದನ್ನು ಕಲಿತರೆ ಜೀವನ ಒಂದೇ ಗರ್ಲ್‌ಫ್ರೆೆಂಡ್ ಇರುವ ಬಾಯ್‌ಫ್ರೆೆಂಡ್ ಥರ ಆಗುತ್ತೆೆ. ಇಲ್ಲವಾದರೆ, ಹತ್ತತ್ತು ಸಿಮ್ ಇಟ್ಟುಕೊಂಡು, ಇಪ್ಪತ್ತು ಗರ್ಲ್‌ಫ್ರೆೆಂಡ್ ಇರುವ ಹುಡುಗನ ಪಾಡಾಗುತ್ತೆೆ. ಹಾಗಾದರೆ ಬ್ಯಾಾಲೆನ್‌ಸ್‌ ಮಾಡಬೇಕಾದ ಆ ನಾಲ್ಕು ಅಂಶಗಳು ಯಾವ್ಯಾಾವು ಎಂಬುದನ್ನು ನೋಡೋಣ.

ಮೊದಲನೇ ಚಕ್ರ ನಮ್ಮ ವೈಯಕ್ತಿಿಕ ಜೀವನ: ಇದರಲ್ಲಿ ನಮ್ಮ ಆರೋಗ್ಯ, ನಮ್ಮ ಜವಾಬ್ದಾಾರಿಗಳು, ಕೆಲಸಗಳು, ಖುಷಿ, ದುಃಖ ಇತ್ಯಾಾದಿಗಳಿವೆ. ನಮ್ಮ ಜೀವನ ಹೇಗಿದೆಯೆಂದರೆ, ‘ನಾನು ಅದನ್ನು ಮಾಡಲೇಬೇಕು’, ‘ನಾನು ಓದಲೇಬೇಕು’, ‘ನಾನು ಕೆಲಸಕ್ಕೆೆ ಹೋಗಲೇಬೇಕು’, ‘ನಾನು ಆ ಕಾರ್ಯಕ್ರಮವನ್ನು ಅಟೆಂಡ್ ಮಾಡಲೇಬೇಕು’, ‘ಮಾಡಲೇ ಬೇಕು, ಹೋಗಲೇ ಬೇಕು, ತಿನ್ನಲೇ ಬೇಕು, ಬೇಕು, ಬೇಕು! ಆದರೆ ಇಷ್ಟಪಟ್ಟು ಮಾಡುವುದ್ಯಾಾವಾಗ? ಪ್ರೀತಿಯಿಂದ ಮಾಡುವುದ್ಯಾಾವಾಗ? ನಮ್ಮ ಜೀವನದುದ್ದಕ್ಕೂ ಬೇರೆ ಕಡೆಯಿಂದ ಬಂದ ಒತ್ತಡಕ್ಕೆೆ ಮಣಿದು ನಮ್ಮ ಆತ್ಮತೃಪ್ತಿಿಗಾಗಿ ನಾವು ಏನು ಮಾಡಬೇಕೋ ಅದನ್ನೆೆಲ್ಲ ಮರೆತೇಬಿಟ್ಟಿಿದ್ದೇವೆ. ನಮ್ಮತನವನ್ನು ಕಳೆದುಕೊಂಡಿದ್ದೇವೆ. ನಮಗಿಷ್ಟವಾಗಿದ್ದು, ನಮಗೆ ಪ್ರೀತಿ ಪಾತ್ರವಾಗಿದ್ದನ್ನು ಮಾಡುವುದನ್ನೇ ಬಿಟ್ಟಿಿದ್ದೇವೆ. ನಮಗೆ ನಾವು ಸಮಯವನ್ನೇ ಕೊಡುತ್ತಿಿಲ್ಲ. ಒಂದೊಳ್ಳೆೆ ಹಸಿರು ವೃಕ್ಷಗಳಿರುವ ಜಾಗಕ್ಕೆೆ ಹೋಗಿ ಶುದ್ಧವಾದ ಗಾಳಿಯನ್ನು ಕಣ್ಣುಮುಚ್ಚಿಿ ದೀರ್ಘವಾಗಿ ದೇಹದೊಳಕ್ಕೆೆ ತೆಗೆದುಕೊಳ್ಳಲೂ ಪುರಸೊತ್ತಿಿಲ್ಲ. ಸಿಟಿಗಳಲ್ಲಂತೂ ಇವೆಲ್ಲ ಸಾಧ್ಯವೇ ಇಲ್ಲ. ಈಗ ಲೇಖನ ಓದುತ್ತಿಿರುವ ಬಹುತೇಕ ಜನರಿಗೆ ರಾತ್ರಿಿ ಮಲಗಿದ ತಕ್ಷಣ ನಿದ್ರೆೆ ಬರುವುದೇ ಇಲ್ಲ. ಆಫೀಸ್‌ಗಳಿಂದ ಕೆಲಸದ ಒತ್ತಡ ತೆಗೆದುಕೊಂಡು ಬಂದು ಮನೆಯಲ್ಲಿ ಕೂಗಾಡುವವರು ಸಾಕಷ್ಟು!

ಜೀವನವೆಂಬ ಕಾರ್‌ನ ಎರಡನೇ ಚಕ್ರ ಕೌಟುಂಬಿಕ ಜೀವನ: ಫ್ಯಾಾಮಿಲಿ ಲೈಫ್ ಎನ್ನುವುದು ಸುಮ್ಮನೆ ಹಾಗೇ ನಡೆದು ಹೋಗುವುದಿಲ್ಲ. ಅದಕ್ಕೆೆ ಟೈಮ್ ಕೊಡಬೇಕಾಗುತ್ತದೆ. ಗಮನ ಕೊಡಬೇಕಾಗುತ್ತದೆ. ಒಂದು ಸ್ವಲ್ಪ ವ್ಯತ್ಯಾಾಸವಾದರೂ ತಲೆನೋವು ಇದ್ದೇ ಇರುತ್ತದೆ. ಒಮ್ಮೆೆ ಒಬ್ಬ ಹೆಂಗಸು ಡಾಕ್ಟರ್ ಬಳಿ ಹೋಗಿದ್ದಳು. ಡಾಕ್ಟರ್ ಕೇಳಿದರು, ‘ಏನಮ್ಮಾಾ, ನಿಮ್ಮ ತಲೆನೋವು ಹೇಗಿದೆ?’ ಅದಕ್ಕೆೆ ಆಕೆ ಹೇಳಿದಳು, ‘ಅಯ್ಯೋ, ಅವ್ರು ಒಂದು ವಾರದಿಂದ ಊರಲ್ಲಿಲ್ಲ!’ ಹಿಂಗಾಗುತ್ತೆೆ ಪರಿಸ್ಥಿಿತಿ. ಮದುವೆಯಾದವರಿಗೆ ಒಂದು ತಲೆ ಬಿಸಿ ಅವರಿರುವುದಕ್ಕೆೆ, ಇನ್ನೊೊಂದು ತಲೆಬಿಸಿ ಅವರನ್ನು ಎಂದು ಬಿಟ್ಟು ಹೊಗುವುದಕ್ಕೂ ಆಗುವುದಿಲ್ಲ.

ನಾನೇನೋ ಬ್ರಹ್ಮಚಾರಿ, ಸನ್ಯಾಾಸಿ. ನಮ್ಮ ಆಶ್ರಮದಲ್ಲಿ ಎಂಬತ್ತು ಸನ್ಯಾಾಸಿಗಳಿದ್ದಾಾರೆ. ಒಬ್ಬರ ಬಳಿ ನಾನು ಜಗಳವಾಡಿಕೊಂಡರೆ, ಇನ್ನೂ ಎಪ್ಪತ್ತೊೊಂಬತ್ತು ಸನ್ಯಾಾಸಿಗಳು ಬ್ಯಾಾಲೆನ್‌ಸ್‌ ಇದ್ದಾಾರೆ. ನಾನು ಈ ಸನ್ಯಾಾಸಿಯನ್ನು ಬಿಟ್ಟು, ಬೇರೆ ಸನ್ಯಾಾಸಿಗಳ ಜತೆ, ಹಾಯ್ ಎಂದು ಮಾತಾಡಿಸಿಕೊಂಡು ಖುಷಿಯಾಗಿರಬಹುದು. ಆದರೆ ಮದುವೆಯಾದವರು ಜಗಳ ಮಾಡಿಕೊಂಡರೆ ಎಲ್ಲಿ ಹೋಗುತ್ತಾಾರೆ? ಒಬ್ಬ ಹೆಂಡತಿಯ/ಗಂಡನ ಜತೆ ಜಗಳವಾಡಿಕೊಂಡರೆ, ಇನ್ನೊೊಬ್ಬ ಸಿಗುವುದಿಲ್ಲ. ಸಿಕ್ಕರೂ ಹೋಗುವುದಕ್ಕಾಾಗುವುದಿಲ್ಲ. ಈಗ ನೀವು ನಿಮ್ಮ ಕುಟುಂಬಕ್ಕೆೆ ಹೆಚ್ಚು ಸಮಯ ಕೊಡುತ್ತಿಿದ್ದೀರಾ? ಎಂದು ಪ್ರಶ್ನಿಿಸಿಕೊಳ್ಳಿಿ. ಕೇವಲ ಆಫೀಸ್‌ನಿಂದ 8 ಗಂಟೆಗೆ ಬಂದು 10 ಗಂಟೆಗೆ ಮಲಗಿಬಿಡುತ್ತೀರೋ? ಆಲೋಚಿಸಿ.

ಅದೇ ಜೀವನವೆಂಬ ಕಾರ್‌ನ ಮೂರನೇ ಚಕ್ರ ನಿಮ್ಮ ವೃತ್ತಿಿ ಜೀವನ: ನಿಮ್ಮ ವೈಯಕ್ತಿಿಕ ಜೀವನಕ್ಕೆೆ ಗಮನ ಕೊಡಬೇಕು. ನಿಮ್ಮ ಕೌಟುಂಬಿಕ ಜೀವನದ ಕಡೆ ಗಮನಹರಿಸಬೇಕು. ಹಾಗೆಯೇ ನಿಮ್ಮ ವೃತ್ತಿಿಯ ಬಗ್ಗೆೆಯೂ ಗಮನ ಅತ್ಯಗತ್ಯ.

ಇನ್ನು ನಾಲ್ಕನೇ ಚಕ್ರ ಸಾಮಾಜಿಕ ಜೀವನ: ಹೊರಗಡೆ ಇರುವ ನಿಮ್ಮ ಸ್ನೇಹಿತರು ನಿಮ್ಮ ಬೆಂಬಲಿಗರು ಮತ್ತು ನೀವು ಬೇರೆಲ್ಲವನ್ನೂ ಮರೆತು ಅವರೊಂದಿಗೆ ಇರುವಂತೆ ಮಾಡುವವರು. ಈ ಸ್ನೇಹಿತರಿದ್ದಾಾರಲ್ಲ, ಇವರ ಜತೆ ಇರುವುದು ಬಹಳ ಮುಖ್ಯ. ಕೆಲವೊಂದು ವಿಚಾರಗಳನ್ನು ನೀವು ಮನೆಯಲ್ಲಿ ಹೇಳಿಕೊಳ್ಳುವುದಕ್ಕೆೆ ಆಗುವುದಿಲ್ಲ. ಹಾಗಂತ, ವೈಯಕ್ತಿಿಕವಾಗಿ ಅದನ್ನು ನಮ್ಮೊೊಳಗೇ ಒತ್ತಿಿ ಇಟ್ಟುಕೊಳ್ಳುವುದಕ್ಕೂ ಆಗುವುದಿಲ್ಲ. ಅದನ್ನು ಹೇಳಿಕೊಳ್ಳುವುದಕ್ಕೆೆ ಯಾರಾದ್ರೂ ಒಬ್ಬ ಆಪ್ತನಾದವನು ಬೇಕು. ಅವನ ಬಳಿ ಎಲ್ಲವನ್ನೂ ಹೇಳಿ ತಲೆಯಲ್ಲಿ, ಮನಸ್ಸಲ್ಲಿ ಇರುವುದನ್ನೆೆಲ್ಲವನ್ನೂ ಸುಮ್ಮನೆ ಹೊರಹಾಕಬೇಕು. ಪರಿಹಾರ ಸಿಕ್ಕರೆ ಅಳವಡಿಸಿಕೊಳ್ಳಬೇಕು. ಇದು ಮೇಲೆ ಹೇಳಿದ ಅಷ್ಟೂ ಚಕ್ರಗಳನ್ನೂ ಕೆಲವೊಮ್ಮೆೆ ನಿಭಾಯಿಸುವ ಶಕ್ತಿಿ ಹೊಂದಿರುತ್ತದೆ.

ಈ ನಾಲ್ಕು ಚಕ್ರಗಳು ಸರಿ ಇದ್ದರೆ ಮಾತ್ರ, ನಿಮ್ಮ ಕಾರು ಸರಿಯಾಗಿ ಚಲಿಸುತ್ತಿಿರುತ್ತದೆ. ಬೇಕಾದರೆ ಹೌದೋ, ಇಲ್ಲವೋ ನೋಡಿ. ಮೊದಲನೇ ಚಕ್ರ ಅಂದರೆ ನಮ್ಮ ಆರೋಗ್ಯ ಸರಿ ಇಲ್ಲದಿದ್ದಾಾಗ ಯಾರಾದ್ರೂ ಬಂದು ಮಾತಾಡಿಸಿದರೆ, ಕಿರಿಕಿರಿ ಎನಿಸುತ್ತದೆ. ನನ್ನೇ ಕೇಳಿ ಅದರ ಅನುಭವದ ಬಗ್ಗೆೆ. ನನಗೆ ಒಮ್ಮೆೆ ಊಟಕ್ಕೆೆ ಎಂದು ಕರೆದಿದ್ದರು. ಅಲ್ಲಿಗೆ ಹೋದಾಗ ನನಗೆ ಪ್ರವಚನ ಕೊಡಲು ಹೇಳಿದರು. ‘ಅರೇ, ನನ್ನನ್ನು ಕರೆದಿದ್ದು ಊಟ ಮಾಡುವುದಕ್ಕಲ್ಲವಾ?’ ಎಂದು ಕೇಳಿ, ಊಟ ಮಾಡಿ ಎದ್ದು ಬಂದಿದ್ದೆೆ. ಆಗ ನನಗೆ ಹುಷಾರಿರಲಿಲ್ಲ. ಸನ್ಯಾಾಸಿಯಾದರೂ ನಾನೂ ಮನುಷ್ಯನೇ ಅಲ್ಲವೇ?

ಇದನ್ನೆೆಲ್ಲ ತಡೆಯುವುದಕ್ಕೆೆ ನಾವೆಲ್ಲರೂ ಮಾಹಾಭಾರತದಲ್ಲಿ ಬರುವ ಒಂದು ಪಾತ್ರದ ಥರ ಆಗಬೇಕು. ಯುಧಿಷ್ಠಿಿರ. ಸಂಸ್ಕೃತದಲ್ಲಿ ‘ಯುಧಿ’ ಎಂದರೆ ಯುದ್ಧ. ‘ಸ್ಥಿಿರ’ ಎಂದರೆ ಸ್ಥಿಿರವಾಗಿರುವುದು. ಇದರ ಅರ್ಥವೇನೆಂದರೆ, ಯುದ್ಧ ನಡೆಯುವ ಮಧ್ಯೆೆಯೂ, ಅಷ್ಟು ಗದ್ದಲಗಳ ಮಧ್ಯೆೆಯೂ ಸ್ಥಿಿರವಾಗಿರುವವನೇ ಯುಧಿಷ್ಠಿಿರ. ಸ್ನೇಹಿತರೇ ನಾವು ನಮ್ಮ ಜೀವನದ ಜಂಜಾಟಗಳನ್ನು, ಸಮಸ್ಯೆೆಗಳನ್ನು, ಕಿರಿಕಿರಿಗಳನ್ನು ನಿಲ್ಲಿಸಲು ಸಾಧ್ಯವಿಲ್ಲ ಹಾಗೂ ಎಲ್ಲ ಚಕ್ರಗಳ ಮೇಲೂ ಒಂದೇ ಸಲ ಗಮನ ಕೊಡುವುದಕ್ಕೆೆ ಆಗುವುದಿಲ್ಲ. ಒಮ್ಮೆೆ ನಮ್ಮ ಆರೋಗ್ಯದ ಬಗ್ಗೆೆ ಗಮನಹರಿಸಬೇಕಾಗುತ್ತದೆ. ಮತ್ತೊೊಮ್ಮೆೆ ಸ್ನೇಹಿತರ ಬಗ್ಗೆೆ ಗಮನ ಹರಿಸಬೇಕಾಗುತ್ತದೆ. ಮಗದೊಮ್ಮೆೆ ಕುಟುಂಬ, ಹೆಂಡತಿ. ನೀವು ಒಂದೇ ಸಮನೆ ಹೆಂಡತಿ, ಹೆಂಡತಿ, ಹೆಂಡತಿ ಎಂದು ಅಲ್ಲೇ ಇರುವುದಕ್ಕೆೆ ಹೋದರೆ, ಇನ್ನುಳಿದ ಚಕ್ರಗಳು ಹಾದಿ ತಪ್ಪುುತ್ತವೆ. ಕೆಲವರು ಹಾಗೇ ಇರುತ್ತಾಾರೆ, ಯಾವಾಗಲೂ ಕೆಲಸ, ಕೆಲಸ, ಕೆಲಸ ಎನ್ನುತ್ತಾಾ ಎಲ್ಲವನ್ನೂ ಮರೆಯುತ್ತಾಾರೆ. ಹೆಂಡತಿ ಕೇವಲ ಮದುವೆಯಾಗಿ ಮನೆಯಲ್ಲಿರಬೇಕಷ್ಟೇ.

ಇವೆಲ್ಲಕ್ಕಿಿಂತ ಹೆಚ್ಚಾಾಗಿ ನಾವು ಅಭ್ಯಸಿಸಬೇಕಿರುವುದು ಬೇರೆಯದ್ದೇ ಇದೆ, ಅದೇ ಆಧ್ಯಾಾತ್ಮ. ಆಧ್ಯಾಾತ್ಮಿಿಕ ಚಿಂತನೆಗಳಿಂದ ಯುದ್ಧದಲ್ಲೂ ಸ್ಥಿಿರವಾಗಿರಬಲ್ಲ ಮನಸ್ಸನ್ನು ಸಂಪಾದಿಸಬಹುದು. ಶಾಂತಿ, ಆಧ್ಯಾಾತ್ಮಿಿಕವಾಗಿ ಬಹಳ ಆಳಕ್ಕಿಿಳಿದರೆ ಮಾತ್ರ ಮನಸ್ಸು ಸ್ಥಿಿರವಾಗಿರಲು ಸಾಧ್ಯ. ಒಂದು ಸುಂದರವಾದ ಮನೆ ನಿರ್ಮಾಣವಾಗಲು, ಅಷ್ಟೇ ಗಟ್ಟಿಿಯಾದ ಪಾಯ ಬೇಕಾಗುತ್ತದೆ. ಯಾವ ಬಿರುಗಾಳಿಗೂ, ಸಿಡಿಲು-ಮಳೆಗೂ ಜಗ್ಗದ ಪಾಯ ಬೇಕಾಗಿರುತ್ತದೆ. ಆದರೆ, ಜನರು ಕೇವಲ ಕಣ್ಣುಮುಂದೆ ಸುಂದರವಾಗಿ ಕಾಣುವ ಮನೆಯನ್ನು ಮಾತ್ರ ಇಷ್ಟಪಡುತ್ತಾಾರೆ, ನಮಗೂ ಇದೇ ರೀತಿಯ ಮನೆ ಕಟ್ಟಿಿ ಅದರಲ್ಲಿರಬೇಕು ಎಂದು ಆಶಿಸುತ್ತಾಾರೆ.

ಹಾಗೇ ನಮ್ಮ ಜೀವನ ನಿಂತಿರುವ ಆಧ್ಯಾಾತ್ಮಕ್ಕೆೆ ನಾವು ಸಮಯ ಬೆಲೆ ಕೊಡದೇ, ಸುಖ-ಶಾಂತಿ ಬೇಕು ಎಂದರೆ ಹೇಗೆ ಸಾಧ್ಯ?
ಕಳೆದ ವರ್ಷ ನಾನು ಅಮೆರಿಕಕ್ಕೆೆ ಹೋದಾಗ 9/11 ಮ್ಯೂಸಿಯಮ್‌ಗೆ ಹೋಗುವ ಅವಕಾಶ ಸಿಕ್ಕಿಿತು. ವರ್ಲ್‌ಡ್‌ ಟ್ರೇಡ್ ಸೆಂಟರ್ ಧ್ವಂಸಗೊಳಿಸಿದ ದಿನ 9/11. ಅಲ್ಲಿ ಒಂದು ಬೃಹದಾಕಾರದ ಬಂಡೆ ಇತ್ತು. ಬೆಟ್ಟದ ಥರ ಕಾಣುತ್ತಿಿತ್ತು. ಅದೇನು ಗೊತ್ತಾಾ? ಅಷ್ಟು ದೊಡ್ಡ ವರ್ಲ್‌ಡ್‌ ಟ್ರೇಡ್ ಸೆಂಟರ್‌ನ ಪಾಯ ಅದು. ಆ ಕಲ್ಲಿನ ಮೇಲೆ ಕಟ್ಟಿಿದ್ದರು. ಯಾವ ಸಿಡಿಲು-ಮಳೆಯೂ ಅದನ್ನು ಕಟ್ಟಡವನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ ಆದರೆ ಬೇಕು ಬೇಕು ಅಂತ ದಾಳಿ ಮಾಡಿದ್ದರಿಂದ ಕಟ್ಟಡ ಕುಸಿಯಿತು. ಇದನ್ನು ಉಲ್ಲೇಖಿಸಿದ್ದು ಯಾಕೆ ಎಂದರೆ, ನಮ್ಮ ಜೀವನದಲ್ಲೂ ಅಧ್ಯಾಾತ್ಮ ಎಂಬ ಪಾಯ ಆ ಕಲ್ಲಿನಂತಿರಬೇಕು.

ವಿದೇಶದಲ್ಲಿರುವ ನನ್ನ ಸ್ನೇಹಿತನೊಬ್ಬನಿದ್ದಾಾನೆ. ಅವನು ಬಹಳ ಶ್ರೀಮಂತ. ಅವನ ಬಳಿ ಒಂದು ಹಡಗು ಇತ್ತು. ಅದು ಹೇಗಿತ್ತೆೆಂದರೆ, ಅದರಲ್ಲೇ ಒಂದು ಲಕ್ಷುರಿ ಮನೆಯಿತ್ತು. ಬಾ ಒಂದು ರೌಂಡ್ ಹೋಗೋಣ ಎಂದ. ಹೇಗೆ ಬಿಡಕ್ಕಾಾಗುತ್ತೆೆ? ಹೋದೆ. ನಾವು ಸಮುದ್ರದಲ್ಲಿ ತೇಲುತ್ತಾಾ ತೇಲುತ್ತಾಾ ಹೋದಂತೆ, ಅಲೆಗಳು ಬಹಳ ದೊಡ್ಡದಾಗಿ ಬರಲು ಶುರುವಾಯಿತು. ಹಡಗು ಮೇಲೆ ಕೆಳಗೆ ಹೋಗುತ್ತಾಾ ಮುಂದೆ ಸಾಗುತ್ತಿಿತ್ತು. ನಾನು ಕೇಳಿದ ‘ಅಲ್ಲಯ್ಯಾಾ ನನ್ನನ್ನು ಇದರಲ್ಲಿ ವಿಹಾರಕ್ಕಾಾಗಿ ಕರೆದುಕೊಂಡು ಬಂದಿದ್ದೀಯೋ ಅಥವಾ ಟೆನ್ಶನ್ ಕೊಡುವುದಕ್ಕೆೆ ಕರ್ಕೊಂಡು ಬಂದಿದ್ದೀಯೋ?’ ಎಂದೆ. ಅವನು ಆರಾಮಾಗಿ ಹೇಳಿದ, ‘ಇಲ್ಲಪ್ಪ ಕಳೆದ ಸಲ ನನ್ನ ಹೆಂಡತಿ ಮಕ್ಕಳನ್ನು ಕರೆದುಕೊಂಡು ಬಂದಿದ್ದೆೆ. ಆಗ ಹಡಗಲ್ಲಿ ಒಂದು ಸಣ್ಣ ತೂತಾಗಿ ಪಡಬಾರದ ಕಷ್ಟ ಪಟ್ಟೆೆ. ಈಗ ಅದರ ಸಮಸ್ಯೆೆ ಇಲ್ಲ ಆರಾಮಾಗಿ ಮುಂದೆ ಹೋಗೋಣ ಬಾ’ ಎಂದ.

ಆಗ ಒಂದು ವಿಚಾರ ಹೊಳೆಯಿತು. ಹೌದಲ್ವಾಾ? ನಮ್ಮ ಜೀವನವೂ ಹೀಗೇ ಅಲ್ವಾಾ? ನಮ್ಮ ಸುತ್ತಲೂ ಸಮುದ್ರ, ಜೀವನ ಅದರ ಮೇಲೆ ತೇಲುತ್ತಾಾ ಹೋಗುತ್ತಿಿರುತ್ತದೆ. ಒಂದು ಸಣ್ಣ ತೂತಾದರೂ ಹಡಗು ಸಮುದ್ರ ಪಾಲು. ಆ ಒಂದು ತೂತಾಗದಂತೆ ನೋಡಿಕೊಳ್ಳುವುದೇ ನಮ್ಮ ಕರ್ತವ್ಯ. ಬಹಳ ಜಾಗ್ರತೆಯಿಂದ ನಿಭಾಯಿಸಿದರೆ ಒಳ್ಳೆೆಯ ವಿಹಾರ ಮಾಡಬಹುದು. ಅದಕ್ಕೆೆ ಬೇಕಾಗಿರುವುದೇ ಆಧ್ಯಾಾತ್ಮಿಿಕತೆ. ನಾವು ಆಧ್ಯಾಾತ್ಮಿಿಕವಾಗಿ ತೊಡಗಿಸಿಕೊಂಡರೆ ಖಂಡಿತವಾಗಿಯೂ ನಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆೆಗಳನ್ನು ಸ್ಪಂದಿಸುವುದನ್ನು ಕಲಿಯುತ್ತೇವೆ. ಇಲ್ಲದಿದ್ದರೆ ಪ್ರತಿಕ್ರಿಿಯಿಸುವುದನ್ನು ಕಲಿಯುತ್ತೇವೆ. ಪ್ರತಿಕ್ರಿಿಯಿಸುವುದಕ್ಕೂ, ಸ್ಪಂದಿಸುವುದಕ್ಕೂ ವ್ಯತ್ಯಾಾಸ ತಿಳಿಯುವುದು ಆಗಲೇ.