Friday, 13th December 2024

ಉಚಿತಗಳು; ದೇಶದ ಸರ್ವನಾಶ ಗ್ಯಾರಂಟಿ !

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಕ್ವಾರ್ಟರ್ ಎಣ್ಣೆಗೆ, ಹೊಟ್ಟಪಾಡಿಗೆ ಪಿಕ್‌ಪಾಕೆಟ್, ಕಳ್ಳತನ, ದರೋಡೆ, ಕೊಲೆಗಳಾಗುತ್ತಿದ್ದವು. ಆಗ ಇಂಥ ಉಚಿತ ಗ್ಯಾರೆಂಟಿಗಳು ಲಭಿಸಿದ್ದರೆ ಒಂದಷ್ಟು ಅಪರಾಧ ಪ್ರಮಾಣಗಳು ಕಡಿಮೆಯಾಗುತಿತ್ತೇನೋ? ಆದರೆ ಈಗಿನ ಯುವಕರಿಗೆ ಆಪಲ್ ಫೋನು, ಕೆಟಿಎಂ ಬೈಕು, ಡಿಯೋಡ್ರೆಂಟು, ಕೂಲಿಂಗ್‌ಗ್ಲಾಸು, ಇಂಪೋರ್ಟೆಡ್ ಜಾಕೆಟ್‌ಗಳು ಬೇಕು.

ಸಾಮಾಜಿಕ ಜಾಲತಾಣಗಳಲ್ಲಿ ನಟ ಉಪೇಂದ್ರ ಸಂದರ್ಶನದ ವಿಡಿಯೋಗಳು ಬಹಳ ಸದ್ದು ಮಾಡುತ್ತಿವೆ. ಹೊಲಸು ರಾಜಕಾರಣ, ದೈತ್ಯ ಭ್ರಷ್ಟಚಾರದಲ್ಲಿ ಪ್ರಜ್ಞೆ ಕಳೆದುಕೊಂಡಿರುವ ‘ಸತ್ತ್’ ಪ್ರಜೆಗಳನ್ನು ಬಡಿದೆಬ್ಬಿಸಲು ತನ್ನದೇ ಐಡಿಯಾಗಳಿಂದ ಪ್ರಜಾಕೀಯ ಎಂಬ ಪರಿಕಲ್ಪನೆಯನ್ನು
ಹುಟ್ಟು ಹಾಕಿದ್ದಾರೆ ಉಪೇಂದ್ರ. ಈ ಸಂದರ್ಶನಗಳಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳಲ್ಲದೇ, ಮಾಧ್ಯಮದವರಿಗೂ ದೇಶದ ಚುನಾವಣಾ ವ್ಯವಸ್ಥೆಯಲ್ಲಿನ ‘ಫಿಕ್ಸಿಂಗ್’ ತಂತ್ರಗಳ ಕುರಿತು ಸರಿಯಾಗಿ ಪ್ರಶ್ನಿಸುತ್ತಿದ್ದಾರೆ.

ಅವರ ‘ಪ್ರಜಾಲೋಚನೆ’ಯಲ್ಲಿ ಮತದಾರರಿಂದಲೇ ದೇಶಹಾಳು ಎಂಬುದನ್ನು ಸ್ಪಷ್ಟಪಡಿಸು ತ್ತಿದ್ದಾರೆ. ರಾಜಕೀಯಕ್ಕಿಂತ ಮೊದಲು ಮತದಾರನನ್ನು ಸರಿಪಡಿಸಬೇಕು, ಆಮಿಷಗಳಿಗೆ ಕ್ಷಣಿಕ ಸುಖಗಳಿಗೆ ಬಲಿಯಾಗದೆ ‘ಕಾಮನ್ ಮ್ಯಾನ್’ಗೆ ಮತ ನೀಡಿ ನೀವು ‘ಚೀಫ್ ಮಿನಿಸ್ಟರ್’ ಆಗಿ ಎಂದು ಕರೆನೀಡುತ್ತಿರುವ ಉಪೇಂದ್ರ ಅವರ ಸದ್ವಿಚಾರಕ್ಕೆ ತದ್ವಿರುದ್ಧವಾಗಿ ಇಂದು ಕಾಂಗ್ರೆಸ್ ನೀಡುತ್ತಿರುವ ‘ಗ್ಯಾರಂಟಿ’ಗಳು ಅಷ್ಟುಇಷ್ಟು ಉಳಿದುಕೊಂಡಿ ರುವ ಪ್ರಜಾಪ್ರಭುತ್ವದ ಪುಟಗೋಸಿ ಯನ್ನೇ ಕಿತ್ತೆಸೆಯುವಂತಿದೆ.

ನೆರೆಯ ಶ್ರೀಲಂಕಾ, ಪಾಕಿಸ್ತಾನ ದೇಶಗಳು ತಿರುಪೆ ಎತ್ತುವಂತಾಗಿದ್ದರೂ ಈ ಕಾಂಗ್ರೆಸ್ ಮಾತ್ರ ರಾಜ್ಯದ ಮತದಾರರನ್ನು ಬ್ರಿಟಿಷರ ಕಾಲದ ಗತಿಗೆಟ್ಟ ದರಿದ್ರ ಗುಲಾಮಗಿರಿಯ ಪ್ರಜೆಗಳನ್ನಾಗಿ ಭಾವಿಸಿದಂತಿದೆ. ದುಡಿಮೆ ಮಾಡಿ ಹತ್ತು ಕೆಜಿ ಅಕ್ಕಿ ಖರೀದಿಸಿ ತಿನ್ನುವಂಥ ಶಕ್ತಿ ನಮ್ಮ ಪ್ರಜೆಗಳಿಗೆ ಇಲ್ಲವೇ? ಹಾಗೊಮ್ಮೆ ಹತ್ತು ಕೆಜಿ ಅಕ್ಕಿ ಖರೀದಿಸಲೂ ಅಶಕ್ತನಾದ ಪ್ರಜೆಗಳಿದ್ದರೆ ಅದಕ್ಕೆ ನೇರಕಾರಣ ಅದೇ ಕಾಂಗ್ರೆಸ್ ಪಕ್ಷ. ಕಳೆದ ಅರವತ್ತಕ್ಕೂ ಹೆಚ್ಚು ವರ್ಷಗಳು ದೇಶವನ್ನಾಳಿದರೂ ಇಂದಿಗೂ ಪ್ರಜೆಗಳಿಗೆ ೧೦ ಕೆಜಿ ಅಕ್ಕಿ ಉಚಿತವಾಗಿ ನೀಡುತ್ತೇವೆ ಎಂದು ಸಿದ್ದರಾಮಯ್ಯಅಂಗೈನ ಹತ್ತು ಬೆರಳುಗಳಲ್ಲಿ ತೋರಿಸಿ ‘ಬೇಕೋ ಬೇಡವೋ’ ಎಂದ ರೀತಿಯನ್ನು ನೋಡಿದರೆ ಕನ್ನಡಿಗರು ಸ್ವಾಭಿಮಾನಗೇಡಿಗಳೋ ಅಥವಾ ಉಗಾಂಡದಂಥ
ದೇಶಗಕ್ಕಿಂತಲೂ ದಾರಿದ್ರ್ಯಕ್ಕೆ ಒಳಗಾಗಿದ್ದಾರೋ ಎಂಬ ಅನುಮಾನ ಹುಟ್ಟಿಸುತ್ತದೆ.

ಒಂದು ಕಡೆ ಮೋದಿಯವರು ಹವಾಯಿ ಚಪ್ಪಲಿ ಧರಿಸುವವನೂ ವಿಮಾನದಲ್ಲಿ ಪ್ರಯಾಣಿಸುವಂತೆ ಮಾಡುತ್ತೇವೆ ಎನ್ನುತ್ತಿದ್ದರೆ ಕ್ಷೇತ್ರವೇ ಇನ್ನೂ
ನಿಗದಿಯಾಗದ ಸಿದ್ದರಾಮಯ್ಯನವರು, ‘ಹತ್ತು ಕೆಜಿ, ಹತ್ತು ಕೆಜಿ, ಹತ್ತು ಕೆಜಿ ಅಕ್ಕಿ ಬೇಕೋ ಬೇಡವೋ’ ಎಂದು ಕೇಳುತ್ತಿದ್ದಾರೆ. ಇದನ್ನು ನೋಡಿದರೆ ಉಪೇಂದ್ರರ ‘ಸೂಪರ್’ ಸಿನಿಮಾದಲ್ಲಿ ಪ್ರಜೆಗಳ ಕಪಾಳಕ್ಕೆ ಹೊಡೆದು ಜಾಡಿಸಿ ಒದೆಯುವ ದೃಶ್ಯ ಕಣ್ಮುಂದೆ ಬರುತ್ತದೆ. ಸುದ್ದಿವಾಹಿನಿಗಳು ರಾಜ್ಯದ ಇಂಧನ ಇಲಾಖೆಯ ಅಧಿಕಾರಿಗಳನ್ನು, ತಜ್ಞರನ್ನು ಕೂರಿಸಿಕೊಂಡು ೨೦೦ ಯೂನಿಟ್ ಉಚಿತವಾಗಿ ಹೇಗೆ ಕೊಡಬಹುದು ಮತ್ತು ಅದರಿಂದ ರಾಜ್ಯದ
ಬೊಕ್ಕಸಕ್ಕೆ ಸಾಲದ ಹೊರೆಯಾಗದಂತೆ ಹೇಗೆ ನಿಭಾಯಿಸಬಹುದೆಂದು ಲೈವ್ ಸಂದರ್ಶನ ಮಾಡಿನೋಡಲಿ. ಆಗ ಇಂಥ ಗ್ಯಾರಂಟಿಗಳ ವಾರೆಂಟಿ ಗಳ ಅಸಲಿಯತ್ತು ಬಯಲಾಗುತ್ತದೆ.

ಬೇಕಿದ್ದರೆ ಈಗಲೂ ಬೆಸ್ಕಾಂ ಅಧಿಕಾರಿಗಳನ್ನು ಕೇಳಿ ನೋಡಿ, ಅವರ ಕಚೇರಿಯಲ್ಲಿ ವಿದ್ಯುತ್ ದರವನ್ನು ಏರಿಸಲೇಬೇಕಾದ ಅನಿವಾರ್ಯಕ್ಕೆ ಸಂಬಂಧಿಸಿದ ಕಡತಗಳು ಅನುಮೋದನೆಗಾಗಿ ಕೂತಿರುತ್ತವೆ. ಆದರೆ ನಾಗರಿಕರಿಗೆ ಹೊರೆಯಾಗದಿರಲೆಂದು ಅಂಥ ಪೈಲ್‌ಗಳನ್ನು ತಡೆಹಿಡಿದು ಸೂಕ್ತ ಸಮಯದಲ್ಲಿ ಬೆಲೆ ಏರಿಕೆ ಮಾಡುತ್ತದೆ. ವಾಸ್ತವಾಂಶ ಹೀಗಿರುವಾಗ ಕಾಂಗ್ರೆಸ್ ಮಾತ್ರ ೨೦೦ ಯೂನಿಟ್‌ಗಳ ಉಚಿತ ಗ್ಯಾರಂಟಿಯನ್ನು ನೀಡುತ್ತೇವೆ ಎಂದು ಘೋಷಿಸುತ್ತದೆ. ಅದಕ್ಕೆ ಸಂಬಂಧಿಸಿದ ಅಂಕಿಅಂಶಗಳನ್ನು ಸಮತೋಲನ ತಂತ್ರಗಳನ್ನು ಪ್ರಜೆಗಳಿಗೆ ವಿವರಿಸಬೇಕಿದೆ.

ಇನ್ನು ಮನೆಯ ಒಡತಿಗೆ ತಿಂಗಳಿಗೆ ೨೦೦೦ರು. ಗ್ಯಾರಂಟಿ. ನಮ್ಮ ಮಹಿಳೆಯರು ಮೊದಲೆಲ್ಲ ಅಗರಬತ್ತಿ ಉಜ್ಜಿ, ಬೀಡಿಗಳನ್ನು ಸುತ್ತಿ, ಸೀರೆ ರವಿಕೆ
ಉಡುಗೆಗಳ ಕುಸುರಿಕೆಲಸಗಳಲ್ಲದೇ ಅನೇಕ ಗುಡಿಕೈಗಾರಿಕೆಗಳ ಮೂಲಕ ಗಂಡನೊಂದಿಗೆ ಒಂದಷ್ಟು ಹಣ ಸಂಪಾದಿಸಿ, ಮಕ್ಕಳನ್ನು ಓದಿಸಿ
ಸ್ವಾಭಿಮಾನದಿಂದ ಬದುಕುತ್ತಿದ್ದರು. ಕಾಲ ಬದಲಾದಂತೆ ತಂತ್ರeನಗಳ ಪರಿಚಯವಾಗಿ ಗುಡಿಕೈಗಾರಿಕೆಗಳನ್ನೆಲ್ಲ ಯಂತ್ರಗಳು ನುಂಗಿ ಹಾಕಿವೆ. ಅಂಥ ವಸ್ತುಗಳು ಹೆಚ್ಚಾಗಿ ವಿದೇಶಗಳಿಂದ ಆಮದುಗಳಾಗುತ್ತಿರುವುದರಿಂದ ಗುಡಿಕೈಗಾರಿಕೆ ಎಂಬ ಕಲ್ಪನೆಯೇ ನಶಿಸಿದೆ.

ಇಂಥ ಪರಿಸ್ಥಿತಿಯಲ್ಲಿ ಪ್ರeವಂತ ರಾಜಕೀಯ ನಾಯಕರು ಹೆಣ್ಣುಮಕ್ಕಳ ಮನೆಯ ಸಮಯವನ್ನು ಉಪಯೋಗಿಸಿಕೊಳ್ಳುವಂಥ ಸಣ್ಣಪುಟ್ಟ ಕೈಕೆಲಸ ಗಳನ್ನು ಮಾಡಿಸಿಕೊಂಡು ಅದಕ್ಕೆ ತಕ್ಕಂಥ ಮಜೂರಿಯನ್ನು ಕೊಟ್ಟರೆ ಹೆಣ್ಣು ಮಕ್ಕಳು ಸ್ವಾವಲಂಬಿಯಾಗುತ್ತಾರಲ್ಲವೇ? ಹಳ್ಳಿ ನಗರಳಲ್ಲಿ ಸೀ ಶಕ್ತಿ ಸ್ವಸಹಾಯ ಸಂಘಗಳು ಬೆಳೆಯುತ್ತಲೇ ಇವೆ. ಅವುಗಳಿಗೆ ಸಾಲಗಳನ್ನೂ ನೀಡುತ್ತಿದ್ದಾರೆ. ಅಂಥ ಸಂಘಗಳಿಂದ ಸಣ್ಣಪುಟ್ಟ ಕೈಗಾರಿಕೆಗಳನ್ನು ನಡೆಸಿ ಅವರನ್ನು ಲಘು ಉದ್ಯಮಿಗಳನ್ನಾಗಿ ಮಾಡಬಹುದಲ್ಲವೇ? ಎಲ್ಲವನ್ನೂ ಗುತ್ತಿಗೆದಾರರಿಗೇ ಕೊಟ್ಟರೆ ಸಾವಿರ ಮಂದಿ ತಿನ್ನುವುದನ್ನು ಅವನೊಬ್ಬನೇ ತಿನ್ನುವಂತೆ ಮಾಡಿ ಅವನ ಎಂಜಲನ್ನು ತಿನ್ನುವ ಮಾqಡಾಳ್ ನಂಥ ಗಿರಾಕಿ ಕೊಬ್ಬುತ್ತಾರಷ್ಟೆ ! ಮೊದಲು ಮನೆ ಒಡೆಯನ ವೇತನ ಹೆಚ್ಚಿಸುವ ಯೋಜನೆ ಜಾರಿಯಾಬೇಕಿದೆ.

ಕನಿಷ್ಠವೇತನ ಕಡ್ಡಾಯವಾದರೆ ಹತ್ತು ಕೆಜಿಯಲ್ಲ ತಿಂಗಳಿಗೆ ೧೨೦೦ ರು. ಬೆಲೆಯ ೨೫ ಕೆಜಿ ಅಕ್ಕಿಯನ್ನು ಖರೀದಿಸುವಂತೆ ವ್ಯವಸ್ಥೆಯನ್ನೇ ಸುಧಾರಿಸ ಬಹುದಲ್ಲವೇ? ಬೆಲೆ ಏರಿಕೆ ಆರ್ಥಿಕ ವ್ಯವಸ್ಥೆಯ ಅನಿವಾರ್ಯವಾದರೆ ಬಡವರ ಕೂಲಿಯ ವೇತನವೂ ಏರಿಕೆಯಾಗಬೇಕಲ್ಲವೇ? ಆದರೆ ಇದಾಗದೇ ಶ್ರೀಮಂತರ ದಿಕ್ಕು, ಭವಿಷ್ಯ ರೂಪಿಸುತ್ತಿದ್ದರೆ ಶ್ರಮಿಕರ ದಿಕ್ಕು ಮಾತ್ರ ಇತಿಹಾಸ ಸೇರುತ್ತಿದೆ.

ಇಂಥ ಬಡವರ ದುಃಸ್ಥಿತಿಯನ್ನೇ ಅಸಮಾಡಿಕೊಂಡ ಪಿತೃಪಕ್ಷಗಳು ಅವರ ಮತಗಳನ್ನು ಕಬಳಿಸುವುದಕ್ಕಾಗಿ ದಿಢೀರ್ ಸ್ಖಲನದಂಥ ಮನೆಹಾಳು ಗ್ಯಾರಂಟಿಗಳನ್ನು ಘೋಷಿಸಲಾರಂಭಿಸಿರುವುದು ಪ್ರಜಾಪ್ರಭುತ್ವದ ದುರಂತ. ಒಂದೆಡೆ ಕೇಂದ್ರ ಸರಕಾರ ‘ಅಗ್ನಿಪಥ್’ ಯೋಜನೆಯಡಿ ಯುವಶಕ್ತಿ ಬೇಜವಾಬ್ದಾರಿಗಳಾಗದಂತೆ ತಡೆದು, ಸ್ವಾಭಿಮಾನಿ ದೇಶಪ್ರೇಮಿಗಳನ್ನು ರೂಪಿಸಲು ನಿರ್ಧರಿಸಿದೆ.

ಹದಿನೇಳೂವರೆ ವಯಸ್ಸಿಗೇ ದುಡಿಮೆ ಆರಂಭಿಸಿ ಸಾರ್ಥಕ ಯುವಕರನ್ನಾಗಿಸುವ ಅಗ್ನಿವೀರ ಸೇವೆಯನ್ನು ಸೃಷ್ಟಿಸಿ ದೇಶವನ್ನು, ದೇಶದ
ಭವಿಷ್ಯವನ್ನು ಭದ್ರಗೊಳಿಸಲು ಶ್ರಮಿಸುತ್ತಿದೆ. ಆರದೆ ಕಾಂಗ್ರೆಸ್ ಅದರ ಬದಲಿಗೆ ಅಂಥ ಯುವಕರಿಗೆ ೧೫೦೦ ರಿಂದ ೩೦೦೦ ರೂಪಾಯಿಗಳ
ಗ್ಯಾರಂಟಿ ಘೋಷಿಸುತ್ತಿರುವುದನ್ನು ಗಂಭೀರವಾಗಿ ಅವಲೋಕಿಸಿದರೆ ಯುವ ಸಮೂಹಕ್ಕೇ ಅಪಾಯಕಾರಿ. ನಮ್ಮಲ್ಲಿ ದುಡಿಮೆಯಲ್ಲೇ ದೇವರೆಂದು ಬದುಕುವ ಪರಂಪರೆ ಇದೆಯೇ ಹೊರತು, ಬೆಳೆದ ಮಗನಿಗೆ ಪಾಕೆಟ್ ಮನಿ ಕೊಟ್ಟು ಓತ್ಲಾ ಹೊಡೆದುಕೊಂಡಿರು ಎನ್ನುವಂಥ ತಂದೆತಾಯಿಗಳು ಇರುವುದಿಲ್ಲ.

ಅಂಥ ಮಕ್ಕಳಾಗುವುದಕ್ಕೆ ಯುವಕರೇನು ಆಲೂಗಡ್ಡೆ ತಜ್ಞರಲ್ಲ? ದುಡಿಯುವ ವಯಸ್ಸಿನ ಮಗನಿಗೆ ದುಡಿಯಲು ಹೇಳದೆ ಖರ್ಚಿಗೆ ತಿಂಗಳಿಗಿಷ್ಟು ಹಣ ನೀಡಿದರೆ ಆತನೇನು ಧರ್ಮಸ್ಥಳ, ತಿರುಪತಿಗೆ ಹೋಗಿಬರುತ್ತಾನೆಯೇ? ಅಥವಾ ಮನೆಗೆ ಊದಿನಬತ್ತಿ, ಕರ್ಪೂರ ತರಲು ಉಪಯೋಗಿಸುತ್ತಾ ನೆಯೇ? ಟ್ರೀಟು, ಡೇಟಿಂಗು, ಪಾರ್ಟಿ, ಗ್ಯಾದರಿಂಗಿನಂಥ ಶೋಕಿಗಳಲ್ಲದೇ, ರಮ್ಮಿ ಎ೨ ಡ್ರೀಂ ಲೆವೆನ್‌ನಂಥ ಆನ್‌ಲೈನ್ ಗೇಮುಗಳ ಕಾಲದಲ್ಲಿ ಮಕ್ಕಳಿಗೆ ಪುಗಸಟ್ಟೆ ಹಣ ನೀಡಿದರೆ ಇಲ್ಲದ ಚಟಕ್ಕೆ ಸಲ್ಲದ ಗುಲಾಮಗಿರಿಗೆ ಒಳಗಾಗುತ್ತಾನೆಯೇ ಹೊರತು ಸ್ವಾಭಿಮಾನದ ಮನಃಸ್ಥಿತಿಯನ್ನು ಹೊಂದುವುದಿಲ್ಲ. ಈ ವಿಚಾರ ದಲ್ಲಿ ನಮ್ಮ ರಾಹುಲ್‌ಗಾಂಧಿಯೇ ಪರವಾಗಿಲ್ಲ, ಹುಟ್ಟು ಶ್ರೀಮಂತನಾಗಿದ್ದು ಅವಿವಾಹಿತ ನಾಗಿದ್ದರೂ ಯಾವುದೇ ಚಟಗಳಿಗೆ ಒಳಗಾಗದೆ ಆಗಾಗ ಕಣ್ಮರೆಯಾಗಿ ವಿದೇಶಗಳನ್ನು ಸುತ್ತಿ ಅಲ್ಲಿ ಭಾರತದ ಮಾನ ಹರಾಜ್ಹಾಕಿ ಬರುತ್ತಾರೆ.

ಆದರೆ, ಕೆಲ ನಾಯಕರ ಮಕ್ಕಳು ಇಪ್ಪತ್ತು ವಯಸ್ಸಿಗೇ ನೂರು ಕೋಟಿ ಸಂಪಾದಿಸುವವರು, ಬಾರ್, ಪಬ್-ಕ್ಲಬ್ ರೆಸಾರ್ಟುಗಳನ್ನು ನಡೆಸುವ
‘ಉದ್ಯಮಿ’ಗಳಾಗಿದ್ದಾರೆ. ಆದರೆ ಬಡವ- ಮದ್ಯಮವರ್ಗದ ಮಕ್ಕಳು ಮಾತ್ರ ಮೂರು ಸಾವಿರದಂಥ ‘ಯುವಪಿಂಚಿಣಿ’ ಪಡೆದು ದುಡಿಮೆಗೆ ‘ಕೈ’ ಎತ್ತಬೇಕೇ? ಉಪೇಂದ್ರ ಅವರು ಜನಗಳಿಗೆ ಒಂದೊಳ್ಳೆಯ ಸಲಹೆ ನೀಡಿದ್ದಾರೆ. ಅದೇನೆಂದರೆ ಈ ರಾಜಕೀಯ ಪಕ್ಷಗಳು ನೀಡುವ ಗ್ಯಾರಂಟಿ ಅಥವಾ
ಪ್ರಣಾಳಿಕೆಯ ಭರವಸೆಗಳನ್ನು ನ್ಯಾಯಾಲಯ ದಲ್ಲಿ ನೋಂದಣಿ ಮಾಡಿಸಬೇಕು. ನಂತರ ಆ ಪಕ್ಷ ಗೆದ್ದು ಬಂದರೆ ಅದನ್ನು ಮೊದಲ ವರ್ಷದ
ಜಾರಿಗೆ ತರುವ ಪ್ರಯತ್ನವಾಗಬೇಕು. ಅದಾಗದಿದ್ದರೆ ಕೂಡಲೇ ರಾಜಿನಾಮೆ ನೀಡಿ ಸರಕಾರದಿಂದ ಹೊರಬರಬೇಕು.

ಮೊದಲು ಇಂಥ ನಿಯಮವನ್ನು ಜಾರಿಗೆ ತರಲಿ ನೋಡಿ. ಆಗ ಇಂಥ ಗ್ಯಾರಂಟಿಗಳನ್ನು ನೀಡುವ ಅಯೋಗ್ಯರೆಲ್ಲ ಐಡೆಂಟಿಟಿ ಇಲ್ಲದಂತೆ ಹೋಗುತ್ತಾರೆ. ನಮ್ಮ ದೇಶದ ನಾಗರಿಕರು ಬೆಲೆ ಏರಿಕೆ ಕಡಿಮೆ ಮಾಡಿ, ಉಚಿತ ಆರೋಗ್ಯ-ಶಿಕ್ಷಣ ನೀಡಿ, ಉದ್ಯೋಗ ಸಿಗುವಂತೆ ಮಾಡಿ ಎಂದು ಬೇಡುತ್ತಾರೆಯೇ ಹೊರತು ಹಣವನ್ನು ಪುಗಸಟ್ಟೆ ಕೊಡಿ, ಅಕ್ಕಿ ಕೊಡಿ, ಕರೆಂಟು ಫ್ರೀಯಾಗಿ ಕೊಡಿ ಎಂದು ಭಿಕ್ಷೆ ಬೇಡುವ ನಿರ್ಲಜ್ಜರಲ್ಲ.

ಮೊನ್ನೆ ಬೆಳಗಾವಿಗೆ ಬಂದ ರಾಹುಲ್‌ಗಾಂಧಿ 2000 ಯೂನಿಟ್ ಉಚಿತವಾಗಿ ನೀಡುತ್ತೇವೆ ಎಂದು ಬಾಯಿತಪ್ಪಿ ಹೇಳಿದರು. ಅದನ್ನೇ ಸೋಷಿಯಲ್ ಮೀಡಿಯಾದಲ್ಲಿ ೨೦೦೦ ಯೂನಿಟ್ ಕೊಡುವುದಕ್ಕೆ ಪ್ರತಿಯೊಬ್ಬರ ಮನೆಯನು ರಾಗಿ ಮಿಷನ್ನು, ಪಂಪ್‌ಸೆಟ್ ಇಟ್ಟುಕೊಂಡಿzರೆಯೇ ಎಂದು ಜಾಡಿಸಿ ದ್ದಾರೆ. ಅಷ್ಟರ ಮಟ್ಟಿಗೆ ಯುವಕರು ಎಚ್ಚೆತ್ತುಕೊಂಡಿದ್ದಾರೆ. ಮೊದಲೆ ಕ್ವಾರ್ಟರ್ ಎಣ್ಣೆಗೆ, ಹೊಟ್ಟಪಾಡಿಗೆ ಪಿಕ್‌ಪಾಕೆಟ್, ಕಳ್ಳತನ, ದರೋಡೆ,
ಕೊಲೆಗಳಾಗುತ್ತಿದ್ದವು. ಆಗ ಇಂಥ ಉಚಿತ ಗ್ಯಾರಂಟಿಗಳು ಲಭಿಸಿದ್ದರೆ ಒಂದಷ್ಟು ಅಪರಾಧ  ಪ್ರಮಾಣಗಳು ಕಡಿಮೆಯಾಗುತಿತ್ತೇನೋ? ಆದರೆ ಈಗಿನ ಯುವಕರಿಗೆ ಆಪಲ್ ಫೋನು, ಶೋಕಿಗೆ ಕೆಟಿಎಂ ಬೈಕು, ದುಬಾರಿ ಡಿಯೋಡ್ರೆಂಟು, ರೆಬೆನ್ ಕೂಲಿಂಗ್‌ಗ್ಲಾಸು, ಇಂಪೋರ್ಟೆಡ್ ಜಾಕೆಟ್‌ಗಳು ಬೇಕು. ಇದಕ್ಕಾಗಿ ಆತನಿಗೆ ಸರಿಯಾದ ಉದ್ಯೋಗ ಬೇಕು.

ಲಕ್ಷಾಂತರ ಸುರಿದು ಪದವಿಧರನನ್ನಾಗಿಸಿದ ಅಪ್ಪಅಮ್ಮನಿಗೆ ಮಗನ ಶೋಕಿಗೆ ಮೂರುಸಾವಿರ ಕೊಡಲು ಸಾಧ್ಯವಿಲ್ಲವೇ? ಆದರೆ ಯುವ
ಸಮೂಹಕ್ಕೆ ಮೊದಲು ಬೇಕಿರುವುದು ಸಮಾಜ-ದೇಶದೆಡೆಗಿನ ಪ್ರಜ್ಞೆ, ಡಾ.ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ಕಟ್ಟಿಕೊಟ್ಟ ಸಂವಿಧಾನದ, ಪ್ರಜಾಪ್ರಭುತ್ವದ ಅರಿವು ಸ್ವಾಭಿಮಾನ ದೇಶಾಭಿಮಾನದ ಮನಃಸ್ಥಿತಿಯ ಗ್ಯಾರಂಟಿ. ಇದು ಗ್ಯಾರಂಟಿ ಇದ್ದರೆ ಹೇಗಾದರು ದುಡಿದು ತಿನ್ನುವುದು ಗ್ಯಾರಂಟಿ. ಪುಗಸಟ್ಟೆ ಯೋಜನೆಗಳಿಂದ ದೇಶ ಆರ್ಥಿಕವಾಗಿ, ನೈತಿಕವಾಗಿ, ಬೌದ್ಧಿಕವಾಗಿ ದಿವಾಳಿಯಾಗಿ ಸರ್ವ ನಾಶವಾಗುವುದು ಮಾತ್ರ ಪಕ್ಕಾ ‘ಗ್ಯಾರಂಟಿ’!!

ಇಂದಿನ ಐಎಎಸ್ ಪರೀಕ್ಷೆಯಂಥ ಐಸಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಐಷರಾಮಿ ಉದ್ಯೋಗವನ್ನು ಎಡಗಾಲಿನಲ್ಲಿ ಒದ್ದು, ‘ನಮ್ಮನ್ನು ಆಳುತ್ತಿರುವ ಬ್ರಿಟಿಷರ ದೇಶದಲ್ಲಿ ನಿಂತು ಅವರ ಕೈಗಳಿಂದ ನನ್ನ ಬೂಟಿಗೆ ಪಾಲಿಷ್ ಮಾಡಿಸಿಕೊಳ್ಳುತ್ತಿದ್ದೇನೆ. ಇದು ನನ್ನ ಮೊದಲ ಗೆಲುವು, ಮುಂದೆ ನೋಡಿ…’ ಎಂದು ತನ್ನ ತಂದೆ ತಾಯಿಗೆ ಇಂಗ್ಲೆಂಡಿನಿಂದ ಪತ್ರ ಬರೆದ ಯುವ ಲಾವಾರಸ ನೇತಾಜಿ ಸುಭಾಷ್ ಚಂದ್ರ ಬೋಸ್. ದೇಶಕ್ಕೆ ಬೇಕಿರುವುದು ಇಂಥ ಗ್ಯಾರಂಟಿ ದೇಶಭಕ್ತ ಯುವಕರು. ನೋಡೋಣ ಮುಂದಿನ ಚುನಾವಣೆಯಲ್ಲಿ !