Friday, 13th December 2024

ಸ್ವಾತಂತ್ರ‍್ಯಕ್ಕೂ ಮೊದಲೇ ತಂತ್ರಜ್ಞಾನದತ್ತ ಭಾರತ ಒಲವು

ತನ್ನಮಿತ್ತ

ಸುರೇಂದ್ರ ಪೈ

ಇತ್ತೀಚೆಗೆ ಅಣುಬಾಂಬ್‌ನ ಪಿತಾಮಹ ಎಂದು ಕರೆಯಲ್ಪಡುವ ಅಮೆರಿಕನ್ ಭೌತಶಾಸಜ್ಞ ಜೆ. ರಾಬರ್ಟ್ ಓಪನ್‌ಹೈಮರ್ ಅವರ ಜೀವನವನ್ನು ಆಧರಿಸಿದ ‘ಓಪನ್‌ಹೈಮರ್’ ಹೆಸರಿನ ಹಾಲಿವುಡ್ ಚಲನಚಿತ್ರ ಬಿಡುಗಡೆಯಾಗಿದ್ದು ನಿಮಗೆಲ್ಲ ತಿಳಿದಿರುವ ಸಂಗತಿ.

ದ್ವಿತೀಯ ವಿಶ್ವಯುದ್ಧದಲ್ಲಿ ಅಮೆರಿಕವು ಜಪಾನ್ ಮೇಲೆ ತನ್ನ ಪ್ರಾಬಲ್ಯ ಸಾಽಸಲು ಮೊರೆ ಹೋಗಿದ್ದು ‘ಅಣು ಬಾಂಬ್’ ಎಂಬ ತಂತ್ರಜ್ಞಾನವನ್ನು ಎಂಬುದನ್ನು ಜಗತ್ತಿನಾದ್ಯಂತ ತಿಳಿದ ಸಂಗತಿ. ಅಂದಿನಿಂದಲೇ ಜಗತ್ತಿನ ಎಲ್ಲ ದೇಶಗಳು ತಾವು ಅತ್ಯಂತ ಪ್ರಭಾವಶಾಲಿ ದೇಶವಾಗಬೇಕಾದರೆ
ಪರಮಾಣು ತಂತ್ರಜ್ಞಾನ ಅತ್ಯವಶ್ಯಕ ಎಂಬುದನ್ನು ಮನಗಂಡು ನಿರಂತರವಾಗಿ ಈ ಕ್ಷೇತ್ರದಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ನಡೆಸುತ್ತಲೇ ಬಂದಿದ್ದಾರೆ. ಭಾರತ ಸಹ ಬ್ರಿಟಿಷರಿಂದ ಸ್ವತಂತ್ರಗೊಳ್ಳುವ ಪೂರ್ವದಿಂದಲೂ ಈ ಪರಮಾಣು ತಂತ್ರಜ್ಞಾನದ ಬಗ್ಗೆ ವಿಶೇಷ ಒಲವು ತೋರುತ್ತಾ ಬಂದಿದ್ದು, ಭಾರತದಲ್ಲಿ ಪರಮಾಣು ಕಾರ್ಯಕ್ರಮವನ್ನು ಜೂನ್ ೧೯೪೫ರಲ್ಲಿ ಡಾ.ಹೋಮಿ ಜಹಾಂಗೀರ್ ಬಾಬಾ ಅವರು ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಮೆಂಟಲ್ ರಿಸರ್ಚ್ ಎಂಬ ಪರ ಮಾಣು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದರು.

ಭಾರತವು ೧೯೫೬ ರಲ್ಲಿ ತನ್ನ ಮೊದಲ ಸಂಶೋಧನಾ ರಿಯಾಕ್ಟರ್ (ಅಪ್ಸರಾ, ಇದು ಏಷ್ಯಾದ ಮೊದಲ ಪರಮಾಣು ಸಂಶೋಧನಾ ರಿಯಾಕ್ಟರ್) ಮತ್ತು ೧೯೬೪ರ ಹೊತ್ತಿಗೆ ಅದರ ಮೊದಲ ಪ್ಲುಟೋ ನಿಯಂ ಮರುಸಂಸ್ಕರಣಾ ಘಟಕವನ್ನು ನಿರ್ಮಿಸಿತು. ಅಕ್ಟೋಬರ್ ೧೯೬೨ರಲ್ಲಿ ಚೀನಾಕ್ಕೆ ಭಾರತದ ಮಿಲಿಟರಿ ಸೋಲು, ಸಂಭಾವ್ಯ ಆಕ್ರಮಣವನ್ನು ತಡೆಯುವ ಸಾಧನವಾಗಿ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಭಾರತ ಸರಕಾರಕ್ಕೆ ಪರಮಾಣು ಶಕ್ತಿಯ ಸಂಶೋಧನೆಗೆ ಹೆಚ್ಚಿನ ಪ್ರಚೋದನೆ ಒದಗಿಸಿತು.

ಅಲ್ಲದೆ, ಚೀನಾ ತನ್ನ ಮೊದಲ ಪರಮಾಣು ಪರೀಕ್ಷೆಯನ್ನು ಅಕ್ಟೋಬರ್, ೧೯೬೪ರಲ್ಲಿ ನಡೆಸಿತು. ಪರಿಸ್ಥಿತಿಯ ಗಂಭಿರತೆ ಅರಿತ ಅಂದಿನ ಪ್ರಧಾನಿ ಪಂಡಿತ್ ನೆಹರೂರವರು ಬಾಬಾ ಅವರಿಗೆ ಹೆಚ್ಚಿನ ಅನುದಾನ ಒದಗಿಸಿದರು. ಪೋಖ್ರಾನ್-ಐ ಪರಮಾಣು ಪರೀಕ್ಷೆಯ ಬಗ್ಗೆ ಭಾರತೀಯ ಭೌತಶಾಸ್ತ್ರಜ್ಞ ರಾಜಾ ರಾಮಣ್ಣ ಪರಮಾಣು ಶಸಾಸಗಳ ಕುರಿತಂತೆ ತಮ್ಮ ವೈeನಿಕ ಸಂಶೋಧನೆಯನ್ನು ವಿಸ್ತರಿಸಿ ಮೇಲ್ವಿಚಾರಣೆ ಮಾಡಿದರು ಮತ್ತು ಪರೀಕ್ಷೆಯ ಮೇಲ್ವಿಚಾರಣೆ ಮಾಡುವ ವಿಜ್ಞಾನಿಗಳ ಸಣ್ಣ ತಂಡದ ಮೊದಲ ನಿರ್ದೇಶನ ಅಧಿಕಾರಿಯಾಗಿದ್ದರು.

ಮೇ ೧೮, ೧೯೭೪ ಭಾರತೀಯರ ಪಾಲಿಗೆ ಒಂದು ಅವಿಸ್ಮರಣೀಯ ದಿನ. ಅಂದಿನ ಪ್ರಧಾನಿಯಾದ ಶ್ರೀಮತಿ ಇಂದಿರಾ ಗಾಂಧಿ ಅವರ ಅಧಿಕಾರಾವಧಿ ಯಲ್ಲಿ ಪರಮಾಣು ಪರೀಕ್ಷೆ ನಡೆಸಿದ ಸುದಿನ. ಈ ಪರೀಕ್ಷೆಗೆ ‘ಸ್ಮೈಲಿಂಗ್ ಬುದ್ಧ ’ ಅಥವಾ ಆಪರೇಷನ್ ಹ್ಯಾಪಿ ಕೃಷ್ಣ (ಬುದ್ಧ ಪೂರ್ಣಿಮೆಯಂದು ನಡಸಿದ ಕಾರಣಕ್ಕೆ) ಎಂಬ ಸಂಕೇತನಾಮ ನೀಡಲಾಯಿತು. ಇದನ್ನು ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಸೇನಾ ನೆಲೆಯ ಪೋಖ್ರಾನ್ ಟೆ ರೇಂಜ್‌ನಲ್ಲಿ ಪರಮಾಣು ಬಾಂಬ್ ಅನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಇದು ಯುನೈಟೆಡ್ ನೇಷ ಸೆಕ್ಯುರಿಟಿ ಕೌನ್ಸಿಲ್ (ಖಿಘೆಖಇ) ಯ ಖಾಯಂ ಸದಸ್ಯತ್ವ ಹೊಂದಿರದ ರಾಷ್ಟ್ರದಿಂದ ಮೊದಲ ದೃಢಪಡಿಸಿದ ಪರಮಾಣು ಪರೀಕ್ಷೆಯಾಗಿದ್ದದ್ದು ಜಗತ್ತಿನ ಇತರೆ ರಾಷ್ಟ್ರಗಳು ಹುಬ್ಬೇರಿಸುವಂತೆ ಮಾಡಿದ್ದು ವಿಶೇಷವಾಗಿತ್ತು.

೧೯೭೪ರ ಪರೀಕ್ಷೆಗಳ ನಂತರ, ಭಾರತವು ಐದು ಪರೀಕ್ಷೆಗಳನ್ನು ನಡೆಸಿತು. ಮೂರು ಪರೀಕ್ಷೆಗಳು ಮೇ ೧೧ರಂದು ಮತ್ತು ಎರಡು ಮೇ ೧೩, ೧೯೯೮ರಂದು
ನಡೆಸಲಾಯಿತು. ಮೇ ೧೧, ೧೯೯೮ರಂದು, ಭಾರತೀಯ ಸೇನೆಯ ಪೋಖ್ರಾನ್ ಶ್ರೇಣಿಯಲ್ಲಿ ಭಾರತವು ಪರಮಾಣು ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದ ಹೆಮ್ಮೆಯ ಸಾಧನೆಯನ್ನು ಮಾಡಿತು. ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ನೇತೃತ್ವದಲ್ಲಿ ನಡೆದ ೧೯೯೮ರ ಈ ಐತಿಹಾಸಿಕ ಘಟನೆಯ ನಂತರ ನಮ್ಮ ಅಂದಿನ ಭಾರತದ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ ಅವರು ಭಾರತವನ್ನು ಸಂಪೂರ್ಣ ಪರಮಾಣು ದೇಶ
ಎಂದು ಘೋಷಿಸಿದರು. ಆಶ್ಚರ್ಯಕರ ಸಂಗತಿಯೆಂದರೆ ಪ್ರಧಾನಿಗಳು ಅಧಿಕೃತವಾಗಿ ಘೋಷಣೆ ಮಾಡುವ ತನಕ ಯಾರೊಬ್ಬರಿಗೂ ಭಾರತವು ಸಹ ಪರಮಾಣು ಶಕ್ತಿಯನ್ನು ಹೊಂದಬಲ್ಲದು ಎಂಬ ಕಲ್ಪನೆಯೇ ಇರಲಿಲ್ಲ.

ಇಷ್ಟೇ ಅಲ್ಲದೇ, ಅಣ್ವಸ ಪರೀಕ್ಷೆಯನ್ನು ಹೊರತುಪಡಿಸಿ ಭಾರತವು ಅದೇ ದಿನ (ಮೇ ೧೧) ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ ರೂಪಿಸಿರುವ ಮೊದಲ ದೇಶೀಯ ವಿಮಾನವಾದ ಹಂಸ-೩ ಕೂಡ ಪರೀಕ್ಷಿಸಿತು. ಇದನ್ನು ಪೈಲಟ್ ತರಬೇತಿ, ಸರ್ವೇಲ ಮತ್ತು ಇತರ ಉದ್ದೇಶಗಳಿಗಾಗಿ ಸಿದ್ಧಪಡಿಸಿದ್ದು, ಇದು ಬೆಂಗಳೂರಿನಲ್ಲಿ ಸಿದ್ಧಪಡಿಸಲಾಗಿದೆ. ಇದೇ ದಿನ ಡಿ- ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಆರ್ಗನೈಸೇಷನ್ (ಡಿಆರ್‌ಡಿಒ) ಕೂಡ ಕೊಡುಗೆ ನೀಡಿದೆ.

ಅಂದು ನೆಲದಿಂದ ಆಕಾಶಕ್ಕೆ ಚಿಮ್ಮುವಂಥ ತ್ರಿಶೂಲ್ ಕ್ಷಿಪಣಿಯ ಯಶಸ್ವಿ ಪ್ರಯೋಗ ಮಾಡಿತು. ಇದರ ಯಶಸ್ವಿ ಪ್ರಯೋಗದ ನಂತರ ಭಾರತೀಯ ಸೇನೆ ಮತ್ತು ವಾಯುಸೇನೆಗೆ ಸೇರ್ಪಡೆ ಮಾಡಲಾಯಿತು. ಈ ಎಲ್ಲ ತಂತ್ರಜ್ಞಾನ ಸಾಧನೆಗಳೂ ಮೇ ೧೧ನೇ ತಾರೀಕಿನಂದೇ ಆಗಿವೆ. ೧೯೯೯ರಿಂದ ವಿeನಿಗಳು, ಸಂಶೋಧಕರು, ಎಂಜಿನಿಯರ್‌ಗಳು ಮತ್ತು ವಿeನ ಮತ್ತು ತಂತ್ರeನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಎಲ್ಲರ ಸಾಧನೆಗಳನ್ನು ಸ್ಮರಿಸುವ ಉದ್ದೇಶದಿಂದ ಮೇ ೧೧ ಅನ್ನು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ.

ಈ ವರ್ಷವನ್ನು ‘From Schools to Startups: Igniting Young Minds to Innovate ಎಂಬ ಥೀಮ್ ನಿಂದ ಆಚರಿಸಲಾಗುತ್ತಿದೆ. ರಾಷ್ಟ್ರೀಯ ತಂತ್ರಜ್ಞಾನ ಪ್ರಶಸ್ತಿಗಳ ಬಗ್ಗೆ ಗೊತ್ತೆ?: ಈ ವಿಶೇಷ ದಿನವನ್ನು ಆಚರಿಸಲು, ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಶಾಸನಬದ್ಧ ಸಂಸ್ಥೆಯಾದ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ (TDB) ೧೯೯೯ರಿಂದ ರಾಷ್ಟ್ರೀಯ ತಂತ್ರeನ ಪ್ರಶಸ್ತಿಯನ್ನು ರಾಷ್ಟ್ರೀಯ ಬೆಳವಣಿಗೆಗೆ ಸಹಾಯ ಮಾಡಿದ ಸಂಶೋಧ ಕರು, ತಂತ್ರಜ್ಞರು ಮತ್ತು ನವೋದ್ಯಮಿಗಳ ಅತ್ಯುತ್ತಮ ಮತ್ತು ಸ್ಪೂರ್ತಿದಾಯಕ ವೈಜ್ಞಾನಿಕ, ತಾಂತ್ರಿಕ ಮತ್ತು ನಾವೀನ್ಯತೆ ಕೊಡುಗೆಗಳನ್ನು ಗುರುತಿಸಿ ಗೌರವಿಸುತ್ತದೆ.

೨೦೨೪ಕ್ಕೆ ಟಿಡಿಬಿ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಕ್ಷೇತ್ರದಲ್ಲಿ ನಾಲ್ಕು ವಿಭಾಗಗಳ ೧೩ ಡೊಮೇನ್‌ಗಳಲ್ಲಿ ನೀಡಲಾಗುತ್ತಿದೆ. ಅವುಗಳೆಂದರೆ: ಭೌತಶಾಸ್ತ್ರ, ರಸಾಯನಶಾಸ್ತ್ರ, ಜೈವಿಕ ವಿಜ್ಞಾನ, ಗಣಿತ ಮತ್ತು ಕಂಪ್ಯೂಟರ್ ವಿಜ್ಞಾನ, ಭೂ ವಿಜ್ಞಾನ, ಔಷಧ, ಎಂಜಿನಿಯರಿಂಗ್ ವಿಜ್ಞಾನ, ಕೃಷಿ ವಿಜ್ಞಾನ, ಪರಿಸರ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ, ಪರಮಾಣು ಶಕ್ತಿ, ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಮತ್ತು ಇತ್ಯಾದಿಗಳು.

ವಿಜ್ಞಾನ ರತ್ನ (ವಿಆರ್): ಜೀವಮಾನದ ಸಾಧನೆಗಳು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದ ನಿರ್ದಿಷ್ಟ ಕ್ಷೇತ್ರದಲ್ಲಿ ನೀಡಿದ ಕೊಡುಗೆಗಳನ್ನು ಗುರುತಿಸಲು ಗರಿಷ್ಠ ಮೂರು ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ವಿಜ್ಞಾನ ಶ್ರೀ: ವಿಜ್ಞಾನ ಮತ್ತು ತಂತ್ರಜ್ಞಾನದ ನಿರ್ದಿಷ್ಟ ಕ್ಷೇತ್ರದಲ್ಲಿನ ವಿಶಿಷ್ಟ ಕೊಡುಗೆಗಳನ್ನು ಗುರುತಿಸಲು ಗರಿಷ್ಠ ೨೫ ಪ್ರಶಸ್ತಿಗಳನ್ನು ನೀಡಲಾಗು ವುದು.

ವಿಜ್ಞಾನ ಯುವ: ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ: ವಿಜ್ಞಾನ ಮತ್ತು ತಂತ್ರಜ್ಞಾನದ ನಿರ್ದಿಷ್ಟ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡಿದ ಯುವ ವಿಜ್ಞಾನಿಗಳನ್ನು ಗುರುತಿಸಲು ಮತ್ತು ಪ್ರೋತ್ಸಾಹಿಸಲು ಗರಿಷ್ಠ ೨೫ ಪ್ರಶಸ್ತಿಗಳನ್ನು ನೀಡಲಾಗುತ್ತದೆ.

ವಿಜ್ಞಾನ ತಂಡ ಪ್ರಶಸ್ತಿ: ವಿಜ್ಞಾನ ಮತ್ತು ತಂತ್ರಜ್ಞಾನದ ನಿರ್ದಿಷ್ಟ ಕ್ಷೇತ್ರದಲ್ಲಿ ಕೆಲಸ ಮಾಡಿ ಅಸಾಧಾರಣ ಕೊಡುಗೆ ನೀಡಿದ ಮೂರು ಅಥವಾ ಅದಕ್ಕಿಂತ ಹೆಚ್ಚು ವಿಜ್ಞಾನಿಗಳು/ ಸಂಶೋಧಕರು/ಆವಿಷ್ಕಾರಕರನ್ನು ಒಳಗೊಂಡ ತಂಡಕ್ಕೆ ಗರಿಷ್ಠ ಮೂರು ಪ್ರಶಸ್ತಿಗಳನ್ನು ನೀಡಲಾಗುತ್ತದೆ.