Friday, 13th December 2024

ಈ ವರ್ಷದ ಭವಿಷ್ಯ ಹಾಗೂ ಆಗಸದಲ್ಲಿ ನಡೆದ ವಿದ್ಯಮಾನ

ಜ್ಯೋತಿರ್ಭವಿಷ್ಯ

ಎಲ್‌.ಪಿ.ಕುಲಕರ್ಣಿ

ನಮಗೆ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಹಾಗೂ ಆಕಾಶ ವೀಕ್ಷಣೆಯ ಬಗ್ಗೆ ಬಹಳ ಕುತೂಹಲ ವಿರುತ್ತದೆ. ಏಕೆಂದರೆ ಜ್ಯೋತಿಷ್ಯಶಾಸ್ತ್ರ ನಿಂತಿರುವುದೇ ಈ ಆಕಾಶದಲ್ಲಿರುವ ಸೂರ್ಯ, ಚಂದ್ರ, ನಕ್ಷತ್ರ, ಗ್ರಹಗಳ ಮೇಲೆ.

ಮೊದಲು, ೨೦೨೧ನೇ ಇಸವಿ ಹೇಗಿರುತ್ತದೆ? ಅದು ಕೂಡ ೨೦೨೦ರಂತೆ ಕರೋನಾದಂತಹ ಸಾಂಕ್ರಾಮಿಕ ರೋಗಗಳಿಂದ ಕೂಡಿರುತ್ತದೆಯೇ? ಇಲ್ಲವೇ, ಮನುಷ್ಯನ ಬದುಕಿಗೆ ಸೂಕ್ತವಾದ ಭಯ ಮುಕ್ತ ವಾತಾವರಣ ನಿರ್ಮಿಸಿಕೊಡುತ್ತದೆಯೇ ಎಂದು ತಿಳಿಯಲು ಕೆಲವು ಭವಿಷ್ಯವಾಣಿಯ ಮೊರೆ ಹೋಗಿ, ನಂತರ ಈ ವರ್ಷದ ನಭೋಂಮಡಲದಲ್ಲಿ ಏನೆ ಕುತೂಹಲಕರ ಬದಲಾವಣೆಗಳು, ವಿದ್ಯಮಾನಗಳು ಜರುಗುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಇತ್ತೀಚೆಗೆ ಒಂದು ಪ್ರಸಿದ್ಧ ಸುದ್ದಿ ಮಾಧ್ಯಮ ಈ ವರ್ಷ ಜಗತ್ತಿನಲ್ಲಿ ಏನೆ ಅನಾಹುತಗಳಾಗಲಿವೆ ಎಂದು ತಿಳಿಸಲು ನಾಸ್ಟ್ರಾಡಾಮಸ್ ನ ಭವಿಷ್ಯವಾಣಿಯ ಬಗ್ಗೆ ವಿವರಣೆ ಕೊಟ್ಟಿತ್ತು. ಫ್ರೆಂಚ್‌ ಭೌತಜ್ಞಾನಿ, ಭವಿಷತ್ಕಾರ ನಾಸ್ಟ್ರಾಡಾಮಸ್, ಆತನ ನಾಸ್ಟ್ರಾಡಾಮಸ್ ಭವಿಷ್ಯವಾಣಿ (Nostradamus Predictions) ಜಗತ್ತಿನ ಅತಿ ಹೆಚ್ಚು ಪ್ರಸಿದ್ಧಿ ಪಡೆದಿದೆ.

ಸುಮಾರು ೪೬೫ ವರ್ಷಗಳ ಹಿಂದೆ ಮೈಕಲ್ ದಿ ನಾಸ್ಟ್ರಾಡಾಮಸ್ ಪ್ರಪಂಚದ ಬಗ್ಗೆ ಹೇಳಿರುವ ಮುನ್ಸೂಚನೆಗಳು ಇಲ್ಲಿ
ಯವರೆಗೆ ಜನರನ್ನು ಅಚ್ಚರಿಗೊಳಿಸಿವೆ. ಪ್ರೊಫೆಸೀಸ್ ಆಫ್ ನಾಸ್ಟ್ರಾಡಾಮಸ್ (Prophecies of Nostradamus) ಎಂಬ ತನ್ನ ಪುಸ್ತಕದಲ್ಲಿ, ನಾಸ್ಟ್ರಾಡಾಮಸ್ ಒಟ್ಟು ೬೩೩೮ ಭವಿಷ್ಯವಾಣಿಗಳನ್ನು ಉಲ್ಲೇಖಿಸಿದ್ದಾನೆ. ಅದರಲ್ಲಿ ಇದುವರೆಗೆ ಶೇ.೭೦ರಷ್ಟು
ನಿಜವೆಂದು ಸಾಬೀತಾಗಿವೆ. ಆತನ ಹೇಳಿಕೆಗಳು ಸತ್ಯಕ್ಕೆ ಸಮೀಪವಾಗಿವೆ. ಜಗತ್ತಿನ ವಿವಿಧ ಭಾಗಗಳಲ್ಲಿ ಏನೇನು ಸಂಭವಿಸುತ್ತದೆ ಎಂದು ಆತ ಮೊದಲೇ ಅಂದಾಜಿಸಿದ್ದ.

ಅವನ ಅಂದಾಜಿನಂತೆ ಮತ್ತು ಪುಸ್ತಕದಲ್ಲಿ ಹೇಳಿದ್ದಂತೆ ಈವರೆಗೆ ಹಲವು ಅಚ್ಚರಿಗಳು ಸಂಭವಿಸಿದ್ದು, ಜನರನ್ನು ಬೆರಗು ಗೊಳಿಸಿವೆ. ನಾಸ್ಟ್ರಾಡಾಮಸ್ ಮರಣದ ಬಳಿಕ ಆತನ ಪುಸ್ತಕ ಪ್ರಸಿದ್ಧಿ ಪಡೆಯಿತು. ನಾಸ್ಟ್ರಾಡಾಮಸ್ ಪ್ರಕಾರ ೨೦೨೧ರಲ್ಲಿ ಭಾರೀ
ಅನಾವೃಷ್ಟಿ, ಕ್ಷುದ್ರ ಗ್ರಹಗಳು ಬಡಿಯುವ ಹಾಗೂ ದೆವ್ವಗಳು ,ಭೂತಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಇವೆ ಎಂದು ಹೇಳಿzರೆ ಎನ್ನಲಾಗಿದೆ. ಕಳೆದ ವರ್ಷ ಕೂಡ ನಾಸ್ಟ್ರಾಡಾಮಸ್ ಹೇಳಿದ ಭವಿಷ್ಯ ಬಹುತೇಕ ನಿಜವಾಗಿವೆಯಂತೆ.

ಲೆಸ್ ಪ್ರೊಫೆಟಿಸ್ ಎಂಬ ತನ್ನ ಪುಸ್ತಕದಲ್ಲಿ ಈ ಅಂದಾಜುಗಳನ್ನು ಮಾಡಿದ್ದಾನಂತೆ. ಐದು ಶತಮಾನಗಳ ಹಿಂದೆ ಈ ಪುಸ್ತಕ ಬರೆಯಲಾಗಿದೆಯಾದರೂ ಸಹ ಇಂದಿಗೂ ಇದು ಪ್ರಸ್ತುತವಾಗಿದೆ. ಈ ವರ್ಷ ಯುವಕರು ಅರ್ಧ ಸತ್ತಿದ್ದು, ಅವುಗಳ ಪ್ರೇತಾತ್ಮಗಳೆ ನಮ್ಮ ಸುತ್ತ ಗಿರಕಿ ಹಾಕುತ್ತಿರುತ್ತವೆ ಎಂದಿದ್ಧಾರೆ. ಇದೇ ವೇಳೆ ಜೈವಿಕ ಅಸ್ತ್ರವೊಂದನ್ನು ರಷ್ಯಾದ ವಿಜ್ಞಾನಿಗಳು ಸಿದ್ಧಪಡಿಸುತ್ತಿದ್ದು, ಅದು ನಮ್ಮನ್ನೆ ನಾಶ ಮಾಡಬಲ್ಲದು.

ಜಲವಾಯು ಪರಿವರ್ತನೆಯ ಈ ಹಾನಿ ಯುದ್ಧ ಹಾಗೂ ಸಮರದ ಸ್ಥಿತಿಗಳನ್ನು ಸೃಷ್ಟಿಸಲಿದೆ. ಸಂಪನ್ಮೂಲಗಳಿಗಾಗಿ ವಿಶ್ವದಲ್ಲಿ ಹಾಹಾಕಾರ ಸೃಷ್ಟಿಯಾಗಲಿದೆ ಹಾಗೂ ಜನರು ಪಲಾಯನಗೈಯಲ್ಲಿದ್ದಾರೆ ಎಂದು ನಾಸ್ಟ್ರಾಡಾಮಸ್ ಈ ಪುಸ್ತಕದಲ್ಲಿ ಬರೆ ದಿದ್ದಾರೆ. ಮುಂದಿನ ದಿನಗಳಲ್ಲಿ ಭೂಮಿಯ ಮೇಲೆ ಉಲ್ಕೆ ಯೊಂದು ಬಂದು ಬೀಳಲಿದೆ ಎಂದು ನಾಸ್ಟ್ರಾಡಾಮಸ್ ಹೇಳಿರುವ ಮಾತುಗಳನ್ನು ಅಮೆರಿಕದ ನಾಸಾದ ಮುನ್ಸೂಚನೆ ಸಹ ಸ್ಪಷ್ಟಪಡಿಸುತ್ತಿದೆ. ಇವೆ ಸಾಲದೆಂಬಂತೆ, ಅಮೆರಿಕದ ಕ್ಯಾಲಿಫೋರ್ನಿ ಯಾದಲ್ಲಿ ಭೂಕಂಪನವೊಂದು ಸಂಭವಿಸುವ ಸಾಧ್ಯತೆ ಬಗೆಗೂ ಪುಸ್ತಕದಲ್ಲಿ ಉಲ್ಲೇಖವಿದೆ.

ಇದೇ ವೇಳೆ ಸಾಂಕ್ರಾಮಿಕಗಳು, ಬರ ಹಾಗೂ ಭೂಕಂಪನಗಳಂಥ ಪ್ರಾಕೃತಿಕ ವಿಕೋಪದಿಂದ ಜನರ ತತ್ತರಿಸುವುದರೊಂದಿಗೆ ಈ ವರ್ಷದಲ್ಲಿ ಕರೋನಾಗಿಂತಲೂ ಇನ್ನೂ ಭಯಂಕರವಾದ ವೈರಸ್‌ಗಳು ನಮಗೆ ಕಾಟ ಕೊಡಲಿವೆ ಎನ್ನುತ್ತದೆ ಈ ಬುಕ್.
ನಾವೆಲ್ಲ ಗಮನಿಸಿದಂತೆ ಇಂಗ್ಲೆಂಡಿನಿಂದ ಬಂದ ಕೊರೊನಾದ ಎರಡನೆಯ ಪೀಳಿಗೆ ಇದಕ್ಕೆ ಉತ್ತಮ ಉದಾಹರಣೆ ಅಂತಾ ಹೇಳಬಹುದು.

ಎರಡನೇಯದಾಗಿ ಈ ವರ್ಷ ಆಕಾಶದಲ್ಲಿ ಯಾವೆಲ್ಲ ನಕ್ಷತ್ರ, ಗ್ರಹಗಳು ಗೋಚರಿಸಲಿವೆ, ಈ ವರ್ಷದಲ್ಲಿ ನಡೆಯುವ ಗ್ರಹಣ ಗಳೆಷ್ಟು, ಅಲ್ಲದೇ ಮಳೆಯಂತೆ ಸುರಿಯುವ ಉಲ್ಕಾಪಾತಗಳೆಷ್ಟು ಎಂಬುದರ ಬಗ್ಗೆ ತಿಳಿಯೋಣ. ಈ ಕುರಿತು ಉಡುಪಿಯ
ಖ್ಯಾತ ಭೌತಶಾಸ್ತ್ರಜ್ಞರಾದ ಡಾ.ಎ.ಪಿ.ಭಟ್ ಅವರು ಬಹಳ ಸವಿಸ್ತಾರವಾಗಿ ತಿಳಿಸುತ್ತಾ ಹೋಗುತ್ತಾರೆ. ಆಶ್ಚರ್ಯ ವೆಂದರೆ, ಈಗ ಬಂದಿರುವ ೨೦೨೧ರಲ್ಲಿ ದಕ್ಷಿಣ ಭಾರತೀಯರಿಗೆ ಗ್ರಹಣಗಳೇ ಇಲ್ಲ .ಇರಲಿಕ್ಕೆ ಈ ವರ್ಷ ನಾಲ್ಕು ಗ್ರಹಣಗಳು ಸಂಭವಿಸುತ್ತವೆ.

ಮೇ ೨೬ ಕ್ಕೆ ಖಗ್ರಾಸ ಚಂದ್ರಗ್ರಹಣ, ನವೆಂಬರ್ ೧೯ಕ್ಕೆ ಪಾರ್ಶ್ವ ಚಂದ್ರಗ್ರಹಣ, ಜೂನ್ ೧೦ ಕ್ಕೆ ಕಂಕಣ ಸೂರ್ಯ ಗ್ರಹಣ,
ಹಾಗೂ ಡಿಸೆಂಬರ್ ಕ್ಕೆ ಖಗ್ರಾಸ ಸೂರ್ಯಗ್ರಹಣ ಸಂಭವಿಸುತ್ತವೆಯಾದರೂ ದಕ್ಷಿಣ ಭಾರತದವರಿಗೆ ಇವು ಗೋಚರಿಸುವು ದಿಲ್ಲ. ಇನ್ನೊಂದು ವಿಶೇಷ ವೆಂದರೆ, ಈ ವರ್ಷ ನಾಲ್ಕು ಸೂಪರ್ ಮೂನ್‌ಗಳು ಸಂಭವಿಸುತ್ತವೆ. ಹುಣ್ಣಿಮೆಗಳ ಸೂಪರ್ ಮೂನ್‌ಗಳಲ್ಲಿ ಚಂದ್ರ ದೊಡ್ಡದಾಗಿ ಕಾಣುತ್ತಾನೆ.

ಮಾರ್ಚ್ ೨೮, ಏಪ್ರಿಲ್ ೨೭, ಮೇ ೨೬, ಹಾಗೂ ಜೂನ್ ೨೪. ಈ ಎಲ್ಲಾ ಹುಣ್ಣಿಮೆಗಳಲ್ಲಿ ಚಂದ್ರ ಸುಮಾರು ೨೫ ಅಂಶ ದೊಡ್ಡದಾಗಿ ಕಾಣುವ ಸೂಪರ್ ಮೂನ್‌ಗಳು. ಪ್ರತಿ ವರ್ಷಕ್ಕೊಮ್ಮೆ ಚೆಂದ ವಾಗಿ ದೊಡ್ಡದಾಗಿ ಕಾಣುವ ಗುರು ಹಾಗೂ ಶನಿಗ್ರಹಗಳು , ಆಗಸ್ಟ ರಂದು ಶನಿಗ್ರಹ (Saturn opposition) ಹಾಗೂ ಆಗ ೨೦ ಗುರುಗ್ರಹ (Jupiter opposition) ರಾತ್ರಿ ಇಡೀ ಕಾಣಲಿವೆ. ಆಗ ತಿಂಗಳಲ್ಲಿ ಈ ಎರಡೂ ಗ್ರಹಗಳು ಅದ್ಭುತವಾಗಿ ಕಾಣಲಿವೆ.

ಏಪ್ರಿಲ್ ೨೭ರಂದು ಮಂಗಳನನ್ನೇ ಚಂದ್ರ ಅಡ್ಡವಾಗಿ ಮರೆಮಾಚುವ ಕೌತುಕ(Lunar occultation of Mars) ನಡೆಯಲಿದೆ.
ಫೆಬ್ರವರಿ ಮೊದಲ ವಾರದವರೆಗೆ ಬೆಳಗಿನ ಜಾವ ಕಾಣುವ ಶುಕ್ರ ನಂತರ, ಏಪ್ರಿಲ್ ೨೧ರಿಂದ ಇಡೀ ವರ್ಷ ಪಶ್ಚಿಮ ಆಕಾಶದಲ್ಲಿ ಸಂಜೆ ಗೋಚರಿಸಲಿದೆ.

ಸುಮಾರು ೫೮೪ ದಿನಗಳಿಗೊಮ್ಮೆ ಸಂಜೆಯ ಆಕಾಶದಲ್ಲಿ ಚೆಂದವಾಗಿ ದೊಡ್ಡದಾಗಿ ಕಾಣುವ ಶುಕ್ರ ಗ್ರಹ, ಅಕ್ಟೋಬರ್ ೨೯ ರಂದು ೪೭ ಡಿಗ್ರಿ ಎತ್ತರದಲ್ಲಿ  ಪಶ್ಚಿಮ ಆಕಾಶದಲ್ಲಿ ಕಾಣಲಿದೆ. ಬುಧ ಗ್ರಹವನ್ನು ನೋಡಲು ಬಲು ಕಷ್ಟ. ವರ್ಷದಲ್ಲಿ ಆರು ಬಾರಿ, ಒಂದು ವಾರ ಕಾಲ ಕಾಣುವ ಬುಧ ಗ್ರಹ ಈ ವರ್ಷ, ಜನವರಿ ೨೪, ಮೇ ೧೭, ಸೆಪ್ಟೆಂಬರ್ ೧೪, ಸಂಜೆಯ ಸೂರ್ಯಾಸ್ತ ವಾದ ಕೆಲ ನಿಮಿಷಗಳು ಪಶ್ಚಿಮ ಆಕಾಶದಲ್ಲಿ ಕಂಡರೆ, ಮಾರ್ಚ್ , ಜುಲೈ , ಹಾಗೂ ಅಕ್ಟೋಬರ್ ೨೫ರಲ್ಲಿ ಬೆಳಗಿನ ಜಾವ ಪೂರ್ವ ಆಕಾಶದಲ್ಲಿ ಕಾಣುತ್ತದೆ.

ಸೂರ್ಯನ ಸುತ್ತ ದೀರ್ಘ ವೃತ್ತಾಕಾರದಲ್ಲಿ ಸುತ್ತುವ ಭೂಮಿ ಜನವರಿ ರಂದು ಸಮೀಪದಲ್ಲಿದ್ದರೆ ಜುಲೈ ರಂದು ದೂರದಲ್ಲಿರುತ್ತದೆ. ಈ ಹಿಂದೆ ೨೦೨೦ರ ಡಿಸೆಂಬರ್‌ನಲ್ಲಿ ಗೋಚರಿಸಿದ ಗುರು-ಶನಿ ಗ್ರಹಗಳ ಅಪರೂಪದ ಸಮಾಗಮದಂತೆ,
ಈ ಸಮಾಗಮದ ಮುಂಚೆಯೇ ಜೆಮಿನೀಡ್ ಉಲ್ಕಾವೃಷ್ಟಿ ಸಂಭವಿಸಿತ್ತು. ಆ ಉಲ್ಕೆಗಳ ಬಣ್ಣ, ಅವು ಚಲಿಸುವ ವೇಗ ಖುಷಿ ಪಟ್ಟವರಿಗೆ ಹಾಗೂ ಆಗ ಉಲ್ಕೆಗಳನ್ನು ನೋಡುವ ಅವಕಾಶವಂಚಿತರಿಗೆ ೨೦೨೧ರ ಪ್ರಾರಂಭದಿಂದಲೇ ಅಂತಹ ಅವಕಾಶ ಒದಗಿ ಬಂದಿದೆ.

ಕ್ವಾಡ್ರಾನ್ಟಿಡ್ ಉಲ್ಕಾವೃಷ್ಟಿ ಡಿ.೨೮ರಿಂದ ಇದೇ ಜನವರಿ ೧೨ರ ಅವಧಿಯಲ್ಲಿ ಗೋಚರಿಸುತ್ತದೆ. ಇಡೀ ವರ್ಷದಲ್ಲಿ ಅತಿ ಹೆಚ್ಚು ಉಲ್ಕೆಗಳು ಸಂಭವಿಸುವ ಮೂರು ಉಲ್ಕಾಪಾತಗಳಲ್ಲಿ ಇದೂ ಒಂದಾಗಿದೆ. ಈ ಅವಕಾಶವನ್ನು ಕಳೆದುಕೊಂಡರೆ ಇಂಥ
ಮತ್ತೊಂದು ಅವಕಾಶ ದೊರಕುವುದು ಮುಂದಿನ ಆಗನಲ್ಲಿ ಸಂಭವಿಸುವ ಪರ್ಸಿಡ್ ಉಲ್ಕಾವೃಷ್ಟಿ’ನೆ. ಕ್ವಾಡ್ರಿನ್ಟಿಡ್ ಉಲ್ಕೆಗಳು ೨೦೦೩ ಇಎಚ್ ಕ್ಷುದ್ರ ಗ್ರಹದ ಅವಶೇಷಗಳಿಂದಾಗಿ ಜನಿಸುತ್ತವೆ. ಈ ಕ್ಷುದ್ರ ಗ್ರಹದ ಕಕ್ಷೆಯ ದೀರ್ಘವೃತ್ತಾಕಾರದಲ್ಲಿ ಇದ್ದು, ಸೂ
ರ್ಯನಿಗೆ ಹತ್ತಿರ ಬರುತ್ತಾ ಭೂಮಿಯ ಕಕ್ಷೆಗೆ ಹತ್ತಿರವಾಗುತ್ತದೆ. ಹಾಗೂ ಸೂರ್ಯನಿಂದ ಅತೀ ದೂರ ಹೋಗುವಾಗ ಗುರು ಗ್ರಹದ ಕಕ್ಷೆಯಷ್ಟು ಅಂದರೆ ಖಗೋಳಮಾನದಷ್ಟು ದೂರವಿರುತ್ತದೆ. ಪ್ರತಿವರ್ಷ ಸಂಭವಿಸುವ ಮಾಮೂಲಿ ೧೫ ಉಲ್ಕಾಪಾತಗಳಲ್ಲಿ ಈ ವರ್ಷ ಕೆಲವೇ ಉಲ್ಕಾಪಾತಗಳು ಪ್ರಮುಖವಾದವುಗಳು.

ಜನವರಿ ೧೦ : ಗುರು, ಬುಧ ಹಾಗೂ ಶನಿ ಗ್ರಹಗಳು ಹತ್ತಿರ ಬರುವ ಬಲು ಕುತೂಹಲಕರ ವಿದ್ಯಮಾನ ಟ್ರಿಪಲ್ ಕಂಜಕ್ಷನ್ ಜರುಗಲಿದೆ.

ಜನವರಿ ೨೯ : ಮೊದಲ ಚಂದ್ರ ಗ್ರಹಣ, ಇದನ್ನು ದಿ ಊಲ ಮೂನ್ ಎಂದು ಕರೆಯಲಾಗುತ್ತಿದೆ.

ಫೆಬ್ರವರಿ ೮ : ಗಂಟೆಗೆ ಸರಾಸರಿ ಉಲ್ಕೆಗಳಂತೆ ಅಲಾ ಸೆಂಟ್ರಿಯೋಡ್ ಉಲ್ಕಾಪಾತ ನಡೆಯಲಿದೆ.

ಫೆಬ್ರವರಿ ೨೮ : ಕ್ಯಾಪ್ರಿಕಾನ್‌ನಲ್ಲಿ ಬುಧ ಗ್ರಹದ ತುತ್ತತುದಿ ಗೋಚರಿಸಲಿದೆ.

ಮಾರ್ಚ್ ೨೮ : ಸೂಪರ್ ವಾರ್ಮ್ ಮೂನ್.

ಮಾರ್ಚ್ ೨೯ : ಶುಕ್ರ ಗ್ರಹ ಬಹಳ ಹೊಳಪಾಗಿ ಕಾಣುತ್ತದೆ.

ಏಪ್ರಿಲ್ ೧೭ : ಲುನಾರ್ ಅಕುಲ್ಟೇಷನ್ ಆಫ್ ಮಾರ್ಸ್ .

ಏಪ್ರಿಲ್ ೨೨ : ಗಂಟೆಗೆ ೧೮ ಉಲ್ಕಾವೃಷ್ಟಿಯಂತೆ ಗೋಚರಿಸುವ ಲಿರಿಡ್ ಉಲ್ಕಾವೃಷ್ಟಿ.

ಏಪ್ರಿಲ್ ೨೭ : ಸೂಪರ್ ಪಿಂಕ್ ಮೂನ್ ಮತ್ತು ಪೂರ್ಣ ಚಂದ್ರ.

ಮೇ ೬ : ಗಂಟೆಗೆ ೪೦ ಉಲ್ಕೆಗಳ ವೃಷ್ಟಿಯಂತೆ ಎನ್-ಅಕ್ವಾರಿಡ್ ಉಲ್ಕಾಪಾತ.

ಮೇ ೨೬ : ಓಸಿನಿಯಾ ಮತ್ತು ಪೂರ್ವ ಹಾಗೂ ಆಗ್ನೇಯ ಏಷ್ಯಾ ಭಾಗಗಳಲ್ಲಿ ಗೋಚರಿಸುವ ಪೂರ್ಣ ಚಂದ್ರ ಗ್ರಹಣ. ಇದನ್ನು ಸೂಪರ್ ಪವರ್ ಮೂನ್ ಎಂದು ಕರೆಯಲಾಗುತ್ತಿದೆ.

ಮೇ ೨೯ : ಶುಕ್ರ ಮತ್ತು ಬುಧ ಗ್ರಹಗಳು ಡಿಗ್ರಿ ೨೪ ಮಿನಿಟ್‌ನಲ್ಲಿ ಹತ್ತಿರ ಹಾಯ್ದು ಹೋಗಲಿವೆ.

ಜೂನ್ ೧೦ : ಕೆನಡಾ, ಗ್ರೀನ್ ಲ್ಯಾಂಡ್, ಯುರೋಪ್, ರಷ್ಯಾ ಹಾಗೂ ಅಮೆರಿಕದಲ್ಲಿ ಗೋಚರಿಸಲಿರುವ ಆನ್ನುಲರ್ ಸೋಲಾರ್ ಇಕ್ಲಿ .

ಜೂನ್ ೨೪ : ಸೂಪರ್ ಸ್ಟ್ರಾಬ್ರೆರಿ ಮೂನ್.

ಜುಲೈ ೧೩ : ಡಿಗ್ರಿ ೨೯ ಮಿನಿಟ್ ಕೋನದಲ್ಲಿ ಶುಕ್ರ ಹಾಗೂ ಬುಧ ಗ್ರಹಗಳ ಸಂಯೋಗ.

ಜುಲೈ ೩೦ : ಗಂಟೆಗೆ ೨೫ ಉಲ್ಕೆಗಳ ವೃಷ್ಟಿಯಂತೆ ದಕ್ಷಿಣದ ಡೆಲ್ಟಾ ಅಕ್ವಾರಿಡ್ ಉಲ್ಕಾವೃಷ್ಟಿ.

ಆಗ ೨ : ಮಧ್ಯರಾತ್ರಿ ಭೂಮಿಯನ್ನು ಶನಿಗ್ರಹ ಸಮೀಪಿಸುತ್ತದೆ.

ಆಗ ೧೨ : ಗಂಟೆಗೆ ಸುಮಾರು ೧೫೦ ಉಲ್ಕೆಗಳಂತೆ ಪೆರಿಸಿಡ್ ಉಲ್ಕಾಪಾತ.

ಆಗ ೧೯ : ಮಂಗಳ ಮತ್ತು ಬುಧ ಗ್ರಹಗಳ ಸಂಯೋಗ.

ಡಿಗ್ರಿ ೪೦ ಮಿಮಿಟ್ ಕೋನದಲ್ಲಿ ಹತ್ತಿರ ಬರಲಿವೆ.

ಆಗ ೨೦ : ಬರಿಗಣ್ಣಿಗೆ ಗುರು ಗ್ರಹ ಗೋಚರಿಸಲಿದೆ.

ಆಗ ೨೨ : ನೀಲಿ ಚಂದ್ರ.

ಸೆಪ್ಟೆಂಬರ್ ೧೪ : ನೆಪ್ಚೂನ್ ಗ್ರಹ ಭೂಮಿಗೆ ಹತ್ತಿರ ಬರಲಿದೆ.

ಅಕ್ಟೋಬರ್ ೨ : ಬರಿಗಣ್ಣಿಗೆ ಅಂಡ್ರೊಮೆಡಾ ಗ್ಯಾಲಕ್ಸಿ ಗೋಚರಿಸಲಿದೆ.

ಅಕ್ಟೋಬರ್ ೮ : ಗಂಟೆಗೆ ೧೦ ಉಲ್ಕೆಗಳಂತೆ ಪಾತವಾಗುವ ಡ್ರಾಕೊನಿಡ್ ಉಲ್ಕಾಪಾತ.

ಅಕ್ಟೋಬರ್ ೨೧ : ಗಂಟೆಗೆ ೧೫ ಉಲ್ಕೆಗಳಂತೆ ಪಾತವಾಗುವ ಆರಿಡ್ ಉಲ್ಕಾವೃಷ್ಟಿ.

ನವೆಂಬರ್ ೫ : ಯುರೇನಸ್ ಗ್ರಹ ಭೂಮಿಗೆ ಹತ್ತಿರ ಬರಲಿದೆ.

ನವೆಂಬರ್ ೧೨ : ಗಂಟೆಗೆ ರಿಂದ ೧೨ ಉಲ್ಕೆಗಳಂತೆ ಪಾತವಾಗುವ ನಾರ್ಥರ್ನ್ ಟಾರಿಡ್ ಉಲ್ಕಾಪಾತ.

ನವೆಂಬರ್ ೧೭ : ಗಂಟೆಗೆ ೧೫ ರಂತೆ ಸಂಭವಿಸುವ ಲಿಯೊನಿಡ್ ಉಲ್ಕಾಪಾತ.

ನವೆಂಬರ್ ೧೯ : ಒಸಿನಿಯಾ, ಅಮೆರಿಕ, ಪೂರ್ವ ಏಷ್ಯಾ, ಉತ್ತರದ ಯರೋಪ, ಇಂಡೋನೇಷ್ಯಾಗಳಲ್ಲಿ ಗೋಚರಿಸುವ
ಪಾರ್ಶ್ವ ಚಂದ್ರ ಗ್ರಹಣ.

ಡಿಸೆಂಬರ್ ೪ : ಅಂಟಾರ್ಟಿಕಾ, ದಕ್ಷಿಣ ಅಟ್ಲಾಂಟಿಕ್ ಸಾಗರ, ದಕ್ಷಿಣ ಆಫ್ರಿಕಾಗಳಲ್ಲಿ ಗೋಚರಿಸುವ ಪೂರ್ಣ ಸೂರ್ಯ ಗ್ರಹಣ.

ಡಿಸೆಂಬರ್ ೧೪ : ಗಂಟೆಗೆ ೧೫೦ ಉಲ್ಕೆಗಳಂತೆ ಜೆಮಿನಿಡ್ ಉಲ್ಕಾವೃಷ್ಟಿ.

ಡಿಸೆಂಬರ್ ೨೧ : ಗಂಟೆಗೆ ೧೦ ಉಲ್ಕೆಗಳಂತೆ ಅರ್ಸಿಡ್ ಉಲ್ಕಾಪಾತ.