ಪ್ರಸ್ತುತ
ಡಾ.ಸಂಧ್ಯಾ ಪುರೇಚಾ
ವುಮೆನ್ 20 (G20) ಎಂಬುದು ೨೦೧೫ ರಲ್ಲಿ ಟರ್ಕಿ ಅಧ್ಯಕ್ಷರ ಅವಧಿಯಲ್ಲಿ ಸ್ಥಾಪಿಸಲಾದ ಅಧಿಕೃತ ಎ೨೦ ಸಮನ್ವಯದ ಗುಂಪಾಗಿದೆ. G೨೦ ಚರ್ಚೆಗಳಲ್ಲಿ ಲಿಂಗ ಪರಿಗಣನೆಗಳನ್ನು ಮುಖ್ಯವಾಹಿನಿಗೆ ತರುವುದನ್ನು ಖಚಿತಪಡಿಸಿಕೊಳ್ಳುವುದು
ಮತ್ತು G೨೦ ನಾಯಕರ ಘೋಷಣೆಗೆ ಲಿಂಗ ಸಮಾನತೆ ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಉತ್ತೇಜಿಸುವ ನೀತಿಗಳು ಮತ್ತು ಬದ್ಧತೆಗಳಾಗಿ ಪರಿವರ್ತಿಸುವುದು ಇದರ ಉದ್ದೇಶವಾಗಿದೆ.
ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಭಾರತವು ಮಹಿಳೆಯರಿಗೆ ಅನುಕೂಲಕರ ವಾತಾವರಣವನ್ನು ಖಾತ್ರಿಪಡಿಸುವಲ್ಲಿ ಮಹತ್ವದ ದಾಪುಗಾಲು ಹಾಕಿದೆ. ಡಬ್ಲ್ಯು೨೦ ಭಾರತವು ಗೌರವಾನ್ವಿತ ಪ್ರಧಾನ ಮಂತ್ರಿಯವರ ಭಾರತದ ಜಿ೨೦ ಅಧ್ಯಕ್ಷರ ದೃಷ್ಟಿಕೋನವನ್ನು ‘ಒಳಗೊಳ್ಳುವ, ಮಹತ್ವಾಕಾಂಕ್ಷೆಯ, ನಿರ್ಣಾಯಕ ಮತ್ತು ಕಾರ್ಯಾ ಧರಿತ’ವಾಗಿ ಮುಂದಕ್ಕೊಯ್ಯಲು ಶ್ರಮಿಸುತ್ತದೆ.
ಪ್ರಧಾನಮಂತ್ರಿಯವರು ರೂಪಿಸಿದಂತೆ ಮುಂದಿನ ಒಂದು ವರ್ಷದಲ್ಲಿ ಹೊಸ ಆಲೋಚನೆಗಳನ್ನು ಪ್ರೇರೇಪಿಸಲು ಮತ್ತು ಸಾಮೂಹಿಕ ಕ್ರಿಯೆಯನ್ನು ತ್ವರಿತಗೊಳಿಸಲು ಜಿ ೨೦ಯು ಜಾಗತಿಕ ‘ಪ್ರಧಾನ ಚಾಲಕ ಶಕ್ತಿಯಾಗಿ’ ಕಾರ್ಯನಿರ್ವಹಿಸುವು ದನ್ನು ಖಾತ್ರಿಪಡಿಸಲು ಭಾರತವು ಶ್ರಮಿಸುತ್ತದೆ. ಡಬ್ಲ್ಯು೨೦ ಭಾರತದ ದೃಷ್ಟಿಕೋನ- ಸಮಾನತೆ ಮತ್ತು ಸಮತ್ವದ ಜಗತ್ತನ್ನು ಸೃಷ್ಟಿಸುವುದು, ಅಲ್ಲಿ ಪ್ರತಿಯೊಬ್ಬ ಮಹಿಳೆ ಘನತೆಯಿಂದ ಬದುಕಬೇಕು. ಇದನ್ನು ಸಾಧಿಸುವುದಕ್ಕಾಗಿ, ಮಹಿಳಾ ನೇತೃತ್ವದ ಅಭಿವೃದ್ಧಿಗೆ ಇರುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುವುದರ ಮೇಲೆ ಕೇಂದ್ರೀಕರಿಸುವುದು ನಮ್ಮ ಧ್ಯೇಯ.
ಅದು ಮಹಿಳೆಯರು ತಮ್ಮ ಜೀವನ ಮತ್ತು ಇತರರ ಜೀವನದ ಪ್ರಗತಿಗಾಗಿ, ಪರಿವರ್ತನೆಗೆ ಅನುವು ಮಾಡಿಕೊಡುವ ಪರಿಸರ ಮತ್ತು ಪಾರಿಸರಿಕ ವ್ಯವಸ್ಥೆಯನ್ನು ಖಚಿತಪಡಿಸುತ್ತದೆ. ಈ ಸಮನ್ವಯದ ಗುಂಪು ಕ್ರಿಯಾಶೀಲ ಮತ್ತು ಪರಿಣಾಮಕಾರಿ ಸಂವಹನಗಳನ್ನು ರೂಪಿಸಲು ಭಾಗೀದಾರ ಪಕ್ಷಗಳೊಂದಿಗೆ ಸಮಾಲೋಚನೆಗಳನ್ನು ಸುಗಮಗೊಳಿಸುತ್ತದೆ. ಅಲ್ಲದೆ, ಜಿ೨೦ ಮಾತುಕತೆಗಳಿಗೆ ಡಬ್ಲ್ಯು೨೦ ಶಿಫಾರಸುಗಳನ್ನು ನೀಡುತ್ತದೆ – ಮತ್ತು ಅಂತಿಮವಾಗಿ ಡಬ್ಲ್ಯು೨೦ ನಾಯಕನ ಘೋಷಣೆ – ವೈವಿಧ್ಯಮಯ ಮತ್ತು ಅಂತರ್ ವಿಭಾಗೀಯ ಆಸಕ್ತಿಗಳ ಸಮಗ್ರ ಪ್ರಾತಿನಿಧ್ಯದ ಅಗತ್ಯವನ್ನು ಮುಂದಿಡುತ್ತದೆ.
ಪ್ರಮುಖ ಮಹಿಳಾ ಸಮಸ್ಯೆಗಳ ಬಗ್ಗೆ ಒಮ್ಮತವನ್ನು ರೂಪಿಸಲು ಕ್ರಮಗಳನ್ನು ತೆಗೆದುಕೊಳ್ಳುವುದು, ಮಹಿಳಾ ಉದ್ಯಮಿ ಗಳೊಂದಿಗೆ ಡಬ್ಲ್ಯು೨೦ ನ ಸಕ್ರಿಯ ಸಮನ್ವಯವನ್ನು ಹೆಚ್ಚಿಸುವುದು ಮತ್ತು ಲಿಂಗ ಸಮಾನತೆಯನ್ನು ಮುನ್ನಡೆಸುವ ನೀತಿಗಳಿಗೆ ಬದ್ಧತೆಗಳನ್ನು ಎತ್ತಿ ತೋರಿಸುವುದು ನಮಗಿರುವ ಆದೇಶವಾಗಿದೆ. ಒಂದು ಗುಂಪಾಗಿ, ನಾವು ಪ್ರಬಲವಾದ ಜಿ೨೦ ಜಾಗತಿಕ ಮತ್ತು ರಾಷ್ಟ್ರೀಯ ಜಾಲವನ್ನು ಸ್ಥಾಪಿಸಲು ಪ್ರಯತ್ನಿಸುತ್ತೇವೆ ಮತ್ತು ಅಧ್ಯಕ್ಷತೆಯಲ್ಲಿ ಜಿ೨೦ ಕಾರ್ಯ ಸೂಚಿಯ ನಿರಂತರತೆಯನ್ನು ಖಾತ್ರಿಪಡಿಸಿಕೊಳ್ಳುತ್ತೇವೆ.
ಭಾರತದ ಡಬ್ಲ್ಯು೨೦ ಅಧ್ಯಕ್ಷತೆಯ ಅವಧಿಯಲ್ಲಿ, ಜಿ೨೦ ನಾಲ್ಕು ಆದ್ಯತೆಯ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸುತ್ತದೆ. ಅವುಗಳೆಂದರೆ: ೧. ತಳಮಟ್ಟದಲ್ಲಿ ಮಹಿಳೆಯರ ನಾಯಕತ್ವವನ್ನು ನಿರ್ಮಿಸುವುದು ೨. ಮಹಿಳಾ ಉದ್ಯಮಶೀಲತೆ
೩. ಡಿಜಿಟಲ್ ಲಿಂಗ ಅಸಮಾನತೆಯ ನಡುವೆ ಸೇತುವೆ ನಿರ್ಮಿಸುವುದು ೪. ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಯ ಮೂಲಕ
ಮಾರ್ಗಗಳನ್ನು ರಚಿಸುವುದು.
ಈ ಆದ್ಯತೆಗಳಿಗೆ ಒತ್ತು ನೀಡಲು, ಜಿ೨೦ ನ ಕಾರ್ಯತಂತ್ರವು ೪ ವಿಧಾನವನ್ನು ಒಳಗೊಳ್ಳುತ್ತದೆ – ಸಹಯೋಗ, ಸಹಕಾರ, ಸಂವಹನ ಮತ್ತು ಒಮ್ಮತ ರೂಪಣೆ, ಮತ್ತು ಕಾರ್ಯತತ್ಪರತೆ. ನಾವು ಮಹಿಳೆಯರ ಸಮಸ್ಯೆಗಳಿಗೆ ಸಂಬಂಧಿಸಿದ ವಿವಿಧ ಭಾಗೀದಾರರನ್ನು ಸೇರಿಸಿಕೊಳ್ಳುತ್ತೇವೆ, ಸಹ ಭಾಗಿಗಳಾಗಿಸಿಕೊಳ್ಳುತ್ತೇವೆ ಮತ್ತು ತೊಡಗಿಸಿಕೊಳ್ಳುತ್ತೇವೆ.
ಭಾಗೀದಾರರು: ನಮ್ಮ ಪ್ರಾಥಮಿಕ ಪಾಲುದಾರರು ತಳಮಟ್ಟದಲ್ಲಿರುವ ಮಹಿಳೆಯರು – ಬುಡಕಟ್ಟು, ಗ್ರಾಮೀಣ
ಮತ್ತು ನಗರ ಪ್ರದೇಶಗಳಲ್ಲಿ ಮಹಿಳೆಯರು, ಕೃಷಿ, ಅನೌಪಚಾರಿಕ ವಲಯ, ಮಹಿಳಾ ಕುಶಲಕರ್ಮಿಗಳು ಮತ್ತು ಕೈಮಗ್ಗ ಮತ್ತು ಕರಕುಶಲ ಕೆಲಸ ಮಾಡುವವರು, ಮಹಿಳಾ ಉದ್ಯಮಿಗಳು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪಿಆರ್ಐಗಳು. ಜಿ೨೦ ನಮ್ಮ ವಿದ್ಯಾರ್ಥಿಗಳ ಪ್ರಭಾವ ವಿಸ್ತರಣೆಗಾಗಿ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮಾಡುವುದು.
ಜೊತೆಗೆ ಶ್ವೇತಪತ್ರಗಳು, ನೀತಿ ಸಾರಾಂಶಗಳು ಮತ್ತು ಸಂಶೋಧನಾ ಪ್ರಬಂಧಗಳಂತಹ ಜ್ಞಾನ ಉತ್ಪನ್ನಗಳನ್ನು
ಅಭಿವೃದ್ಧಿಪಡಿಸುವುದು. ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಹಿಳಾ ನಾಗರಿಕ ಸಮಾಜದ ವೇದಿಕೆಗಳು, ಸ್ಥಳೀಯ ಎನ್ಜಿಒಗಳು, ಯುಎನ್ ಏಜೆನ್ಸಿಗಳು, ಐಎಲ್ಒ, ಚೇಂಬರ್ ಆಫ್ ಕಾಮರ್ಸ್ ಇತ್ಯಾದಿಗಳು ಸಹ ಭಾಗವಹಿಸುತ್ತವೆ. ಡಬ್ಲ್ಯು ೨೦ ಅನ್ನು ಚರ್ಚೆಗೆ ಒಳಗೊಳ್ಳುವ ಮತ್ತು ವೈವಿಧ್ಯಮಯ ವೇದಿಕೆಯನ್ನಾಗಿ ಮಾಡುತ್ತವೆ.
ಜನ ಆಂದೋಲನ ಮತ್ತು ಜನ ಜಾಗೃತಿ; ಗಲ್ಲಿಯಿಂದ ದಿಲ್ಲಿಗೆ: ಗ್ರಾಮಗಳು ಮತ್ತು ರಾಜಧಾನಿ ನಗರಗಳನ್ನು ಒಳಗೊಳಿಸುವ ಸರಣಿ ಸಭೆಗಳು ಮತ್ತು ಕಾರ್ಯಕ್ರಮಗಳ ಮೂಲಕ, ಡಬ್ಲ್ಯು೨೦ ಎಲ್ಲಾ ವರ್ಗಗಳ ಮಹಿಳೆಯರ ಭಾಗವಹಿಸುವಿಕೆಯನ್ನು ಖಚಿತಪಡಿಸುತ್ತದೆ. ಡಬ್ಲ್ಯು೨೦ ಬಗ್ಗೆ ಅರಿವು ಮೂಡಿಸಲು ಮತ್ತು ಸಮನ್ವಯದ ಗುಂಪಿನ ನೀತಿ ಸಾರಾಂಶಗಳು ಮತ್ತು ಸಂವಹನದಲ್ಲಿ ನಾಗರಿಕರ ಧ್ವನಿಗಳನ್ನು ಸ್ವೀಕರಿಸಲು ಗ್ರಾಮ ಸಭೆಗಳನ್ನು ಆಯೋಜಿಸಲಾಗುತ್ತದೆ.
ಗ್ರಾಮ ಮಟ್ಟದಲ್ಲಿ ಸಶಕ್ತ ವಾತಾವರಣವನ್ನು ಖಾತ್ರಿಪಡಿಸುವ ನಿರ್ಣಯಗಳನ್ನು ಅಂಗೀಕರಿಸುವ ಗುರಿಯನ್ನು ಹೊಂದಲಾಗಿದೆ. ಇದಲ್ಲದೆ, ಡಬ್ಲ್ಯು೨೦ ಆದ್ಯತೆಯ ಕ್ಷೇತ್ರಗಳಿಗೆ ಬೆಂಬಲವಾಗಿ ಪೋಸ್ಟ್ಕಾರ್ಡ್ ಪ್ರಚಾರಗಳನ್ನು ದೇಶಾದ್ಯಂತ ಕೈಗೊಳ್ಳಲಾಗುತ್ತದೆ, ಅದು ನೀತಿ ನಿರೂಪಕರು ಮತ್ತು ನೀತಿ ಫಲಿತಾಂಶಗಳ ಮೇಲೆ ಪ್ರಭಾವ ಬೀರುತ್ತದೆ. ಇದಲ್ಲದೆ, ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸುವ ನಾಲ್ಕು ದೊಡ್ಡ ವಿಶ್ವ ದರ್ಜೆಯ ಕಾರ್ಯಕ್ರಮಗಳನ್ನು ಅಂತಾರಾಷ್ಟ್ರೀಯ ಪ್ರತಿನಿಧಿಗಳ ಜತೆಗೂಡಿ ನಡೆಸಲಾಗುತ್ತದೆ.
ಇವುಗಳು ಶಾಸೀಯ ನೃತ್ಯಗಳ ಪ್ರದರ್ಶನಗಳನ್ನು ಒಳಗೊಂಡಿರುತ್ತದೆ, ಜೊತೆಗೆ ನ್ಯಾನೋ-ಉದ್ಯಮಿಗಳು ಮತ್ತು ಸ್ಥಳೀಯ ಪಾಕಪದ್ಧತಿಗಳನ್ನು ಒಳಗೊಂಡಿರುವ ಕೈಮಗ್ಗ ಮತ್ತು ಕರಕುಶಲ ಮೇಳವನ್ನು ಆಯೋಜಿಸಲಾಗುತ್ತದೆ. ಇಂತಹ ಮೊದಲ ಸಭೆ ಔರಂಗಾಬಾದ್ನಲ್ಲಿ ೨೦೨೩ ರ ಫೆಬ್ರವರಿ ೧೩-೧೫ರ ವರೆಗೆ ನಡೆಯಲಿದೆ.
ಮಹಿಳಾ ಉದ್ಯಮಶೀಲತೆ: ಡಬ್ಲ್ಯು೨೦ ಕಾರ್ಯಸೂಚಿಯು ಉದ್ಯಮಶೀಲತೆ ಮತ್ತು ಯೋಗ್ಯ ಕೆಲಸದ ಪ್ರಾಮುಖ್ಯತೆಯನ್ನು ಗುರುತಿಸುತ್ತದೆ, ನಿರ್ದಿಷ್ಟವಾಗಿ ಗುರಿ ೮.೩ (ಎಸ್ಡಿಜಿ) ನಲ್ಲಿ ಹೇಳುವಂತೆ- ಉತ್ಪಾದನಾ ಚಟುವಟಿಕೆಗಳು, ಯೋಗ್ಯ ಉದ್ಯೋಗ ಸೃಷ್ಟಿ, ಉದ್ಯಮಶೀಲತೆ, ಸೃಜನಶೀಲತೆ ಮತ್ತು ನಾವೀನ್ಯತೆಗಳನ್ನು ಬೆಂಬಲಿಸುವ ಅಭಿವೃದ್ಧಿ- ಆಧಾರಿತ ನೀತಿಗಳ ಉತ್ತೇಜನ. ಮತ್ತು ಔಪಚಾರಿಕತೆಯನ್ನು ಪ್ರೋತ್ಸಾಹಿಸಿ. ಮತ್ತು ಹಣಕಾಸು ಸೇವೆಗಳ ಪ್ರವೇಶ ಸೇರಿದಂತೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಬೆಳವಣಿಗೆ. ಡಬ್ಲ್ಯು೨೦ ಉದ್ಯಮಿಗಳು, ಆರಂಭಿಕ ಯುನಿಕಾರ್ನ್ಗಳು, ನ್ಯಾನೊ
ಮತ್ತು ಸೂಕ್ಷ್ಮ ಉದ್ಯಮಿಗಳೊಂದಿಗೆ ಸಂವಾದ ಮತ್ತು ಸಮಾಲೋಚನೆಗಳನ್ನು ನಡೆಸುತ್ತದೆ ಮತ್ತು ಅವರ ಶಿಫಾರಸುಗಳಿಗೆ ಒತ್ತು ನೀಡುತ್ತದೆ.
ಜಾಗತಿಕ ಒಮ್ಮತದ ನಿರ್ಮಾಣ: ಮಹಿಳೆಯರ ಆರ್ಥಿಕ ಸಬಲೀಕರಣವು ಹೂಡಿಕೆಯ ವಿಶ್ವದ ಅತ್ಯಂತ ಭರವಸೆಯ
ಕ್ಷೇತ್ರಗಳಲ್ಲಿ ಒಂದಾಗಿದೆ, ದೊಡ್ಡ ಉದಯೋನ್ಮುಖ ಮಾರುಕಟ್ಟೆಗಳು, ಪ್ರತಿಭಾ ಕಣಜಗಳು ಮತ್ತು ಜನಸಂಖ್ಯಾ ಲಾಭಾಂಶ ಗಳನ್ನು ಪಡೆಯಬೇಕಾಗಿದೆ. ಉತ್ತಮ ಆಡಳಿತ, ಆರ್ಥಿಕ ಬೆಳವಣಿಗೆ, ಬಡತನ ಮತ್ತು ಹಸಿವು ನಿರ್ಮೂಲನೆ, ಎಲ್ಲರಿಗೂ ಆಹಾರ ಭದ್ರತೆ ಮತ್ತು ಪೌಷ್ಟಿಕತೆ, ಸುಸ್ಥಿರ ಬಳಕೆ ಮತ್ತು ಉತ್ಪಾದನಾ ಮಾದರಿಗಳು, ಪರಿಸರ ಸುಸ್ಥಿರತೆಗೆ ಆದ್ಯತೆ ಮತ್ತು ಒಟ್ಟಾರೆ ಎಸ್ಡಿಜಿ ಸಾಧನೆಗಾಗಿ ಮಹಿಳಾ ಆರ್ಥಿಕ ಸಬಲೀಕರಣದ ಮೇಲೆ ಜಾಗತಿಕ ಒಮ್ಮತ ರೂಪಿಸಲು ಜಿ೨೦ ಕೆಲಸ ಮಾಡುತ್ತದೆ.
ವ್ಯಾಪಾರ, ಸರಕಾರ, ಮಹಿಳೆಯರು ಮತ್ತು ನಾಗರಿಕ ಸಮಾಜ ಸೇರಿದಂತೆ ಎಲ್ಲಾ ಭಾಗೀದಾರರಿಗೆ ಸಾರ್ವತ್ರಿಕ ಕರೆಯಾಗಿ, ಡಬ್ಲ್ಯು೨೦ ಅಜೆಂಡಾವು ಜಂಟಿ ಪ್ರಯತ್ನಗಳಿಗೆ ಆದ್ಯತೆಗಳನ್ನು ವಿವರಿಸುತ್ತದೆ, ಇದರಿಂದಾಗಿ ನಿರ್ಲಕ್ಷಿತ ವಿಭಾಗಗಳ ಮಹಿಳೆಯರು ಸೇರಿದಂತೆ ಎಲ್ಲಾ ಮಹಿಳೆಯರು ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯ ಪ್ರಯೋಜನಗಳನ್ನು ಹಂಚಿಕೊಳ್ಳ ಬಹುದು, ಮತ್ತು ಯಾರೂ ಹಿಂದೆ ಉಳಿಯಬಾರದು.
ಡಬ್ಲ್ಯು೨೦ ಜಿ೨೦ ಮತ್ತು ಡಬ್ಲ್ಯು೨೦ ತ್ರಿವಳಿ ವಿಚಾರಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಡಬ್ಲ್ಯು೨೦ ಆದ್ಯತೆಗಳು ಮತ್ತು ಕೆಲಸದ ನಿರಂತರತೆಯನ್ನು ಖಾತ್ರಿಪಡಿಸುತ್ತದೆ.
ರೋಲ್ ಮಾಡೆಲ್ಗಳು ಮತ್ತು ಮಹಿಳಾ ಟ್ರಯಲ್ ಬ್ಲೇಜರ್ಗಳು: ಮಹಿಳೆಯರು ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಇನ್ನೂ ಅನೇಕ ಸಾಧನೆಗಳಿಗೆ ಸಮೃದ್ಧವಾಗಿ ಕೊಡುಗೆ ನೀಡಿದ್ದಾರೆ. ಡಬ್ಲ್ಯು೨೦ ಮಹಿಳೆಯರನ್ನು ಸಾಧಿಸಲು ಪ್ರೇರೇಪಿಸುವ ರೋಲ್ ಮಾಡೆಲ್ಗಳನ್ನು ಗುರುತಿಸುತ್ತದೆ.
ಸರಕಾರ ಮತ್ತು ನಾಗರಿಕ ಸಮಾಜದ ಪರಿವರ್ತನಾ ಯೋಜನೆಗಳು ಮತ್ತು ಅಭ್ಯಾಸಗಳು: ಮಹಿಳೆಯರಿಗಾಗಿ ಕೆಲಸ ಮಾಡಿದ ಆಡಳಿತದ ಮಾದರಿಗಳನ್ನು ಅರ್ಥಮಾಡಿಕೊಳ್ಳಲು ಸರಕಾರದ ಯೋಜನೆಗಳನ್ನು ವಿಶ್ಲೇಷಿಸುವುದು ಡಬ್ಲ್ಯು೨೦ ಗಾಗಿ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ.
ಉದಾಹರಣೆಗೆ, ಮಧ್ಯಪ್ರದೇಶದ ಲಾಡ್ಲಿ ಲಕ್ಷ್ಮಿ ಯೋಜನೆ, ಸರಕಾರ ಮತ್ತು ನಾಗರಿಕ ಸಮಾಜದಿಂದ ಉತ್ತಮ ಅಭ್ಯಾಸಗಳನ್ನು ಪ್ರದರ್ಶಿಸಲು ಮಾದರಿಯಾಗಿ ಬಳಸಬಹುದು. ಡಾ. ಸಂಧ್ಯಾ ಪುರೇಚಾ ಡಬ್ಲ್ಯು ೨೦ ಸಮನ್ವಯದ
ಗುಂಪನ್ನು ಅಧ್ಯಕ್ಷರಾಗಿ ಮುನ್ನಡೆಸುತ್ತಾರೆ ಮತ್ತು ಭಾರತದ ಪ್ರತಿನಿಧಿಗಳಾಗಿ ಖ್ಯಾತ ಮಹಿಳೆಯರಾದ ಡಾ. ಜ್ಯೋತಿ
ಕಿರಣ್ ಶುಕ್ಲಾ, ಪ್ರೊ.ಶಮಿಕಾ ರವಿ, ಶ್ರೀಮತಿ ಭಾರತಿ ಘೋಷ್, ರವೀನಾ ಟಂಡನ್ ಮತ್ತು ಡಬ್ಲ್ಯು೨೦ ಕಾರ್ಯಾಲಯದ (ಎಫ್ಐಸಿಸಿಐ ಎಫ್ಎಲ್ಒ) ಮುಖ್ಯ ಸಂಯೋಜಕಿಯಾಗಿ ಧರಿತ್ರಿ ಪಟ್ನಾಯಕ್ ಇರುತ್ತಾರೆ. ಅಮುಲ್ ಈ ಸಮನ್ವಯದ ಗುಂಪಿನ ಸಾಂಸ್ಥಿಕ ಪಾಲುದಾರನಾಗಿರುತ್ತದೆ.
(ಲೇಖಕರು ಡಬ್ಲ್ಯು೨೦ಯ ಅಧ್ಯಕ್ಷರು)