Friday, 13th December 2024

ಗಾಂಧೀಜಿ ಮತ್ತು ಭಗವದ್ಗೀತೆ

ಅಭಿಪ್ರಾಯ

ರವಿ ಮಡೋಡಿ

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಉಪವಾಸ, ಅಹಿಂಸೆ ಹಾಗೂ ಅಸಹಕಾರ ಮುಂತಾದ ಚಳುವಳಿಗಳನ್ನು ನಡೆಸಿ, ನಮ್ಮನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆ ಮಾಡಿ, ಸ್ವಾತಂತ್ರ್ಯ ಪಡೆಯುವಲ್ಲಿ ಗಾಂಧೀಜಿಯವರ ಪಾತ್ರ ಅತ್ಯಂತ ಮಹತ್ವವಾದುದು. ಸಾಮಾನ್ಯರ ತಿಳಿವಳಿಕೆಯಲ್ಲಿ ಹೋರಾಟ ವೆಂದಾಗ ಅಶಾಂತಿ, ಹಿಂಸೆ, ಮದ್ದುಗುಂಡುಗಳು ಮುಂತಾದ ಅಗಣಿತವಾದ ಸದ್ದನ್ನು ನಿರೀಕ್ಷಿಸುವವರಿಗೆ ಗಾಂಽಜಿಯವರ ಈ ಬಗೆಗಿನ ಹೋರಾಟಗಳು ಒಪ್ಪಿಗೆ ಯಾಗುವುದು ತುಸು ಕಷ್ಟವೇ. ಆದರೆ ಅಂತಹ ಅವರ ಮಾರ್ಗಗಳು ಆ ಕಾಲದಲ್ಲಿ ದೇಶದ ಜನತೆ ಸ್ವಯಂ ಪ್ರೇರಿತರಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗ ವಹಿಸುವಂತೆ ಮಾಡಿತ್ತು ಎನ್ನುವುದನ್ನು ಎಂದಿಗೂ ಮರೆಯುವ ಹಾಗಿಲ್ಲ.

ಅವರ ಮಾತುಗಳು ಮಿಂಚಿನ ಸಂಚಾರದಂತೆ ದೇಶಾದ್ಯಂತ ಪ್ರವಹಿಸುತ್ತ ಜನರು ಚಳುವಳಿಗಳಲ್ಲಿ ಧುಮುಕು ವಂತೆ ಮಾಡುತ್ತಿತ್ತು. ಅನೇಕ ಮಂದಿ ಅವರ ಈ ಧ್ಯೇಯ ಧೋರಣೆಯನ್ನು ತಮ್ಮ ಜೀವನದಲ್ಲಿಯೂ ಅನುಕರಿಸುತ್ತ ತಮ್ಮನ್ನು ತಾವೇ ಸಂಘಟಿಸಿಕೊಳ್ಳುತ್ತ ನಿಃಸ್ವಾರ್ಥರಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಇಂತಹ ಬಗೆಯ ಗಾಂಧೀಜಿಯವರ ಹೋರಾಟದ ಕ್ರಮವನ್ನು ಕೇವಲ ಭಾರತ ಮಾತ್ರವಲ್ಲದೇ ಬೇರೆ ದೇಶದಲ್ಲಿಯೂ ಕೂಡ ಅನೇಕರು ಪ್ರಯೋಗಿಸಿದ್ದನ್ನು ಕಾಣಬಹುದಾಗಿದೆ.

ಗಾಂಧೀಜಿಯವರಿಗೆ ಈ ಬಗೆಗಿನ ಚಿಂತನೆಗಳು, ತತ್ವಗಳು ಮೂಡುವುದಕ್ಕೆ ಪ್ರೇರಣೆಯಾಗಿದ್ದು ವ್ಯಾಸರು ರಚಿಸಿ ರುವ ಮಹಾಭಾರತದ ಭಗವದ್ಗೀತೆ ಎನ್ನುವುದು ನಿರ್ವಿವಾದದ ಸಂಗತಿಯಾಗಿದೆ. ನಮ್ಮೆಲ್ಲರಿಗೂ ತಿಳಿದಿರುವಂತೆ ಭಗವದ್ಗೀತೆ ಎನ್ನುವುದು ಕುರುಕ್ಷೇತ್ರ ಮಹಾಯುದ್ಧದಲ್ಲಿ ಅರ್ಜುನನಿಗೆ ಉಂಟಾದ ವಿಷಾದಕ್ಕೆ ಶ್ರೀಕೃಷ್ಣನು ಉಪ ದೇಶಿಸಿರುವ ಸಂಗತಿಗಳಾಗಿವೆ. ಅಲ್ಲಿರುವ ಒಳ ನೋಟಗಳು, ದಾರ್ಶನಿಕ ನುಡಿಗಳು ಎಲ್ಲರ ಬಾಳಿಗೂ ಅನ್ವಯಿಸುತ್ತದೆ ಮತ್ತು ಪ್ರೇರಕ ವಾಗುತ್ತದೆ. ಇಂತಹ ಭಗವದ್ಗೀತೆಯನ್ನು ಗಾಂಧೀಜಿಯವರು ತಮ್ಮ ಬದುಕಿಗೆ ಅಳವಡಿಸಿಕೊಂಡಿದ್ದರು.

ಗಾಂಧೀಜಿಯವರು ವಿದ್ಯಾರ್ಥಿ ದೆಸೆಯಿಂದಲೇ ಭಗವದ್ಗೀತೆಯನ್ನು ಓದುವುದಕ್ಕೆ ಆರಂಭಿಸಿದ್ದರು. ಒಂದು ಕಾವ್ಯವೆಂದೋ ಅಥವಾ ಧಾರ್ಮಿಕ ಗ್ರಂಥವೆಂದೋ ಪರಿಗಣಿಸಿರಲಿಲ್ಲ. ಜೀವನ ಸಾರವನ್ನು ತಿಳಿಯುವಂತಹ ಪ್ರಯತ್ನವನ್ನು ಮಾಡಿದ್ದರು. ಅದರ ಬಗ್ಗೆ ಚಿಂತನೆಗಳು ಹೆಚ್ಚುತ್ತ ಹೋದಂತೆ ಅವರಿಗೆ ಹೊಸ ನೋಟ ಗಳು ಪ್ರಾಪ್ತವಾದವು. ಗಾಂಽಜಿಯವರು ಭಗವದ್ಗೀತೆಗೆ ತಮ್ಮದೇಯಾದ ವ್ಯಾಖ್ಯಾನವನ್ನು ನೀಡಿದರು. ಕೃಷ್ಣನು ಭಗವದ್ಗೀತೆಯಲ್ಲಿ ಪ್ರತಿಪಾದಿಸಿದ ಕರ್ತವ್ಯ ಪ್ರeಯ, ಸ್ಥಿತಪ್ರಜ್ಞತೆಯ ಬಗ್ಗೆ ಹೆಚ್ಚು ಮನ್ನಣೆಯನ್ನು ನೀಡಿದರೆ ಗಾಂಧೀಜಿಯವರು ನಿಷ್ಕಾಮ ಕರ್ಮದ ಬಗ್ಗೆ ಹೆಚ್ಚು ಒಲವನ್ನು ಹೊಂದಿದ್ದರು.

ಭಗವದ್ಗೀತೆಯನ್ನು ನಿಕಷಕ್ಕೆ ಒಡ್ಡಿ ಹಲವು ಅಂಶಗಳಿಗೆ ತಮ್ಮದೇಯಾದ ಹೊಸ ಅರ್ಥಗಳನ್ನು ನೀಡಿದ್ದರು. ಉದಾಹರಣೆಗೆ ಭಗವದ್ಗೀತೆಯಲ್ಲಿರುವ ಮುಕ್ತಿಯನ್ನು ಪರಿಪೂರ್ಣ ಶಾಂತಿ ಎಂದಿದ್ದಾರೆ. ಪರಿತ್ಯಾಗವನ್ನು ನಮ್ಮ ನಂಬಿಕೆಗೆ ಒಳಪಡಿಸುವ ಕಠಿಣ ಪರೀಕ್ಷೆ ಎಂದು ಕರೆದಿದ್ದಾರೆ. ನನ್ನ ಎಷ್ಟೋ ಬದುಕಿನ ಸಮಸ್ಯೆಗಳಿಗೆ, ಸಂಶಯಗಳು, ನಿರಾಸೆಗಳಿಗೆ ಭಗವದ್ಗೀತೆಯು ಉತ್ತರವನ್ನು ನೀಡಿ ತ್ವನವನ್ನು ಮೂಡಿಸಿತ್ತು ಎಂಬುದನ್ನು ಅವರು ಅತ್ಯಂತ ಗೌರವ ಭಾವದಿಂದ ನುಡಿದಿದ್ದರು.
ಜನರ ಮನೋವಿಕಸನಕ್ಕೆ ಒತ್ತು ನೀಡುವ ಭಗವದ್ಗೀತೆಯನ್ನು ಸಾಮಾನ್ಯರ ಜೀವನದ ಭಾಗವಾಗಿಸುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ಈ ನಿಟ್ಟಿನಲ್ಲಿ ಈಗ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಯವರ ಕೃಪಾರ್ಶಿವಾದದಲ್ಲಿ ಅಮೆರಿಕದ ಸಿಯಟೆಲ್ ಕನ್ನಡಿಗರು ಭಗವದ್ಗೀತೆ ಅಭಿಯಾನದ ನೂತನ ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಿದ್ದಾರೆ.

ಗಾಂಧೀ ಜಯಂತಿಯಿಂದ ಗೀತಾ ಜಯಂತಿವರೆಗಿನ 70 ದಿನಗಳ ಕಾಲ ದಿನಕ್ಕೆ ಹತ್ತು ಭಗವದ್ಗೀತೆಯ ಶ್ಲೋಕಗಳಂತೆ ದೇಶಾದ್ಯಂತ ಪಠನ ಹಾಗೂ ವ್ಯಾಖ್ಯಾನ ವನ್ನು ಅಂತರ್ಜಾಲದಲ್ಲಿ ಬಿತ್ತರಿಸಲು ಯೋಜಿಸಿದ್ದಾರೆ. ಇದೊಂದು ಭಗವದ್ಗೀತೆ ಹಾಗೂ ಗಾಂಽ ತತ್ವಗಳ ಸಮಾಗಮವಾಗಿದೆ. ಇಂತಹ ಭಗವದ್ಗೀತೆಯ ಸಾರ ವನ್ನು ನಮ್ಮೆಲ್ಲರ ಜೀವನದಲ್ಲಿ ಅಳವಡಿಸಿಕೊಂಡರೆ ನಿಜಾರ್ಥದಲ್ಲಿ ಗಾಂಽಜಿಯವರು ಕಂಡ ರಾಮರಾಜ್ಯದ ಕನಸು ನನಸಾಗುವುದರಲ್ಲಿ ಸಂದೇಹವಿಲ್ಲ.