Saturday, 23rd November 2024

ಗಾಂಧಿ ತತ್ವದ ಮೊದಲ ವಿರೋಧಿ ಕಾಂಗ್ರೆಸ್

ವೀಕೆಂಡ್ ವಿಥ್‌ ಮೋಹನ್

camohanbn@gmail.com

ಬ್ರಿಟಿಷರ ವಿರುದ್ಧ ಸುಮಾರು ೧೦೦ ವರ್ಷಗಳ ಹಿಂದೆಯೇ ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ್ಯ ಕಹಳೆ ಮೊಳಗಿಸಿದ್ದ ಮಹಾತ್ಮ ಗಾಂಧಿಯವರ ತ್ಯಾಗ ಮತ್ತು ಬಲಿದಾನವನ್ನು ಭಾರತ ಮಾತ್ರವಲ್ಲದೆ ಇಡೀ ಜಗತ್ತೇ ನೆನಪಿನಲ್ಲಿಟ್ಟುಕೊಂಡಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿದ್ದಂತಹ ವರ್ಣಭೇದ ನೀತಿಯ ವಿರುದ್ಧ ಶುರುವಾದಂತಹ ಹೋರಾಟಕ್ಕೆ ಪ್ರೇರಣೆಯಾಗಿದ್ದು ಮಹಾತ್ಮ ಗಾಂಧಿ.

ಮಾರ್ಟಿನ್ ಲೂತರ್ ಕಿಂಗ್‌ನಂತಹ ವ್ಯಕ್ತಿಗೆ ಪ್ರೇರಣೆಯಾಗಿದ್ದು ಮಹಾತ್ಮ ಗಾಂಧಿ. ೧೯೫೯ರಲ್ಲಿ ಈತ ಭಾರತಕ್ಕೆ ಬಂದು ಗಾಂಧಿಯವರ ಬಗ್ಗೆ ಅಪಾರ ವಿಷಯಗಳನ್ನು ತಿಳಿದುಕೊಂಡು ತನ್ನ ಹೋರಾಟಗಳಿಗೆ ಅವರೇ ಪ್ರೇರಣೆಯೆಂದಿದ್ದನಲ್ಲದೇ, ಗಾಂಧಿ ಜೀವನ ತತ್ವಗಳನ್ನು ಅಳವಡಿಸಿ ಕೊಳ್ಳುವುದರಿಂದ ಒಂದು ದೇಶದ ಹಲವು ಸಮಸ್ಯೆಗಳು ಪರಿಹಾರವಾಗುತ್ತದೆಯೆಂದು ಈತ ಹೇಳಿದ್ದ. ಹಾಗಂತ ಭಾರತಕ್ಕೆ ಕೇವಲ ಅಹಿಂಸಾ ಮಾರ್ಗದಿಂದ ಮಾತ್ರ ಸ್ವಾತಂತ್ರ್ಯ ಬಂದಿ ತೆಂಬುದೂ ಸತ್ಯವಲ್ಲ, ಸುಭಾಷ್ ಚಂದ್ರ ಬೋಸ್, ವೀರ ಸಾವರ್ಕರ್, ಭಗತ್ ಸಿಂಗ್‌ರಂತಹ ನೂರಾರು ಕ್ರಾಂತಿಕಾರಿ ನಾಯಕರ ತ್ಯಾಗವನ್ನೂ ಮರೆಯುವ ಹಾಗಿಲ್ಲ.

ಇಂತಹ ಸಂಗ್ರಾಮದಲ್ಲಿ ತ್ಯಾಗ ಮಾಡಿದ ಹಲವು ನಾಯಕರ ಇತಿಹಾಸವನ್ನು ಕೈಬಿಟ್ಟು ಕೇವಲ ನೆಹರುವನ್ನು ವೈಭವೀಕರಿಸಿ ಗಾಂಧಿ ಹೆಸರನ್ನು ಬಳಸಿಕೊಂಡು ಕಳೆದ ೭೫ ವರ್ಷಗಳಿಂದ ರಾಜಕೀಯ ಮಾಡುತ್ತ ಬಂದಿರುವ ಕಾಂಗ್ರೆಸ್, ಅವರ ಆದರ್ಶಗಳನ್ನು ಮಾತ್ರ ತನ್ನ ಆಡಳಿತದಲ್ಲಿ
ಅಳವಡಿಸಿಕೊಳ್ಳಲಿಲ್ಲ. ಮಾತು ಮಾತಿಗೂ ತಮ್ಮದು ಸ್ವಾತಂತ್ರ್ಯಕ್ಕೆ ಹೋರಾಡಿದ ಪಕ್ಷವೆಂದು ದೊಡ್ಡ ಸುಳ್ಳನ್ನು ಜನರಿಗೆ ಹೇಳುತ್ತ ಬಂದಿದೆ. ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಡೆದ ಘಟನೆಗಳಿಗೆ ಬೆಚ್ಚಿದ ಬ್ರಿಟಿಷರಿಗೆ ಮತ್ತೊಮ್ಮೆ ಭಾರತದಲ್ಲಿ ಇದೇ ರೀತಿಯ ಹೋರಾಟ ಮರುಕಳಿಸಿದರೆ ತಮಗೆ ಉಳಿಗಾಲವಿಲ್ಲವೆಂಬುದರ ಅರಿವಿತ್ತು, ಅದಕ್ಕೆ ಹೆದರಿ ತಾವು ಹಾಗೂ ಸ್ವಾತಂತ್ರ್ಯ ಹೋರಾಟಗಾರರ ನಡುವೆ ಸಮನ್ವಯ ಸಾಧಿಸುವ ಸಲುವಾಗಿ ೧೮೮ ರಲ್ಲಿ ಬ್ರಿಟಿಷ್ ಅಽಕಾರಿಯಾಗಿದ್ದ ಎ.ಒ.ಹೂಮ ನೇತೃತ್ವದಲ್ಲಿ ಕಾಂಗ್ರೆಸ್ ಎಂಬ ಸಂಘಟನೆ ಸ್ಥಾಪಿಸಲಾಯಿತು.

ಮೂಲತಃ ಕಾಂಗ್ರೆಸಿನ ಜನಕರು ಬ್ರಿಟಿಷರು. ಕಾಂಗ್ರೆಸ್ ಎಂಬ ಸಂಘಟನೆ ಶುರುವಾದ ಮೊದಲ ೨೦ ವರ್ಷಗಳಲ್ಲಿ ಬ್ರಿಟಿಷರ ಕಾರ್ಯಂಗ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನಷ್ಟೇ ಬಗೆಹರಿಸುವ ಕೆಲಸ ಮಾಡುತ್ತಿತ್ತು. ನಂತರದ ದಿನಗಳಲ್ಲಿ ಬ್ರಿಟಿಷರ ವಿರುದ್ಧ ಧ್ವನಿಯೆತ್ತಲು ಈ ಸಂಘಟನೆಯನ್ನು
ಬಳಸಿಕೊಳ್ಳಲಾಯಿತು. ನೆಹರು ಈ ಸಂಘಟನೆಯ ಸದಸ್ಯರಾಗಿದ್ದರೇ ಹೊರತು ಇದರ ಜನಕರಾಗಿರಲಿಲ್ಲ. ಸ್ವಾತಂತ್ರ್ಯ ಪೂರ್ವದಲ್ಲಿ ರಾಜಕೀಯ ಪಕ್ಷವೆಂಬ ಕಲ್ಪನೆಯೇ ಇರಲಿಲ್ಲ, ಸ್ವತಂತ್ರ ಬಂದ ನಂತರ ಮಹಾತ್ಮ ಗಾಂಽಯವರು ಈ ಸಂಘಟನೆಯನ್ನು ವಿಸರ್ಜಿಸಲು ಹೇಳಿದ್ದರೂ ನೆಹರು ಈ ಮಾತನ್ನು ಕೇಳಲಿಲ್ಲ.

ತಮ್ಮ ಸ್ವಾರ್ಥಕ್ಕಾಗಿ ಈ ಸಂಘಟನೆಯನ್ನೇ ರಾಜಕೀಯ ಪಕ್ಷವನ್ನಾಗಿಸಿ ಸಂಘಟನೆಯಲ್ಲಿದ್ದಂತಹ ಉಳಿದ ಸ್ವಾತಂತ್ರ್ಯ ಹೋರಾಟಗಾರರಿಗೆ ಮೋಸ ಮಾಡಿ ಗಾಂಧೀಜಿ ಮಾತಿನ ವಿರುದ್ಧ ನಡೆದುಕೊಂಡರು. ಅಧಿಕಾರ ದಾಹಕ್ಕಾಗಿ ಗಾಂಧಿ ತತ್ವಗಳ ವಿರುದ್ಧ ನೆಹರು ಮುನ್ನಡೆಸಿಕೊಂಡು ಬಂದಂತಹ
ಕಾಂಗ್ರೆಸ್ ಪಕ್ಷಕ್ಕೆ ಮಹಾತ್ಮ ಗಾಂಧಿಯವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಗಾಂಽಜಿಗೆ ಭಗವದ್ಗೀತೆಯ ಬಗ್ಗೆ ಅಪಾರ ಗೌರವವಿತ್ತು. ಆದರೆ, ಸ್ವಾತಂತ್ರ್ಯಾನಂತರ ಗಾಂಧೀಜಿ ಹೆಸರನ್ನು ಹೈಜಾಕ್ ಮಾಡಿದ ಕಾಂಗ್ರೆಸ್ ನಾಯಕರ‍್ಯಾರೂ ಭಗವದ್ಗೀತೆಯ ಸಾರವನ್ನು ತಾವುಗಳೇ ಅಳವಡಿಸಿ ಕೊಳ್ಳಲಿಲ್ಲ.

ಇಂದು ಶಾಲೆಗಳಲ್ಲಿ ಭಗವದ್ಗೀತೆಯನ್ನು ಮಕ್ಕಳಿಗೆ ನೈತಿಕ ಶಿಕ್ಷಣದ ಭಾಗವಾಗಿ ಬೋಧಿಸಲು ಮುಂದಾದಾಗ ಜಾತ್ಯತೀತತೆಯ ಹೆಸರಿನಲ್ಲಿ ಮೊದಲು ವಿರೋಧಿಸಿದ್ದೇ ಕಾಂಗ್ರೆಸ್. ಸ್ವಾತಂತ್ರ್ಯಾನಂತರ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್, ಎಡಚರರಿಗೆ ಶಾಲಾ ಪಠ್ಯ ಪುಸ್ತಕ ರಚನೆಯ ಜವಾಬ್ದಾರಿ ನೀಡಿ ವಿದೇಶಿ ನೀತಿಗಳನ್ನು ಜಾರಿಗೆ ತಂದು ಗಾಂಧೀಜಿ ಭಗವದ್ಗೀತೆಗೆ ನೀಡಿದ್ದ ಪ್ರಾಮುಖ್ಯವನ್ನು ಹೊಸೆದು ಹಾಕಿದರು.

ಜಾತ್ಯತೀತತೆಯ ವ್ಯಾಖ್ಯಾನವನ್ನು ಕೇವಲ ಮುಸಲ್ಮಾನರಿಗೆ ಸೀಮಿತಗೊಳಿಸಿರುವ ಕಾಂಗ್ರೆಸ್, ಅವರ ಓಲೈಕೆಯಲ್ಲಿ ಮಹಾತ್ಮ ಗಾಂಽಯವರ
ತತ್ವಗಳನ್ನು ಗಾಳಿಗೆ ತೂರುತ್ತಿದೆ. ‘ರಘುಪತಿ ರಾಘವ ರಾಜಾ ರಾಮ್, ಪತಿತ ಪಾವನ ಸೀತಾರಾಮ್, ಈಶ್ವರ ಅಲ್ಲ ತೇರೆ ನಾಮ’ಎಂಬ ಮಾತನ್ನು
ಗಾಂಧೀಜಿ ಸದಾ ಹೇಳುತ್ತಿದ್ದರು. ಈ ಪೈಕಿ ರಾಮ ಹಾಗೂ ಈಶ್ವರನ ಹೆಸರನ್ನು ಕೈಬಿಟ್ಟು ಮುಸಲ್ಮಾನರ ಓಲೈಕೆಗಾಗಿ ಕೇವಲ ಅಹುವಿನ ಹೆಸರನ್ನು ಮಾತ್ರ ಕಾಂಗ್ರೆಸ್ ನೆನಪಿನಲ್ಲಿಟ್ಟುಕೊಂಡಿದೆ. ಮಸೀದಿಗಳಿಗೆ ನೀಡಿದ ಮಹತ್ವವನ್ನು ಕಾಂಗ್ರೆಸಿಗರು ದೇವಸ್ಥಾನಗಳಿಗೆ ನೀಡಲಿಲ್ಲ. ಮಸೀದಿಗಳನ್ನು
ಸರಕಾರಿ ಅಽನದಿಂದ ದೂರವಿಟ್ಟು ದೇವಸ್ಥಾನಗಳನ್ನು ಮಾತ್ರ ತೆಕ್ಕೆಗೆ ತೆಗೆದುಕೊಂಡರು.

‘ವಕ್ಫ್ ಕಾಯ್ದೆ’ ಜಾರಿಗೆ ತರುವ ಮೂಲಕ ಲಕ್ಷಾಂತರ ಕೋಟಿ ರುಪಾಯಿ ಮೌಲ್ಯದ ಆಸ್ತಿಯನ್ನು ಒಂದು ಧರ್ಮಕ್ಕೆ ಸೀಮಿತವಾಗುವಂತೆ
ಮಾಡಿದರು.  ಇನ್ನು ಗಾಂಧೀಜಿಗೆ ಶ್ರೀರಾಮಚಂದ್ರ ಹಾಗೂ ಶ್ರೀಕೃಷ್ಣನ ಮೇಲೆ ಅಪಾರ ಭಕ್ತಿಯಿತ್ತು. ಅವರ ಹೆಸರನ್ನು ಬಳಸಿಕೊಂಡ ನೆಹರು ಕುಟುಂಬದ ಕುಡಿಗಳು ರಾಮನ ಅಸ್ತಿತ್ವವನ್ನೇ ಪ್ರಶ್ನಿಸಿದ್ದರು. ರಾಮಸೇತುವಿನ ವಿಷಯದಲ್ಲಿ ೨೦೦೭ರಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ವಾಲ್ಮೀಕಿ ರಾಮಾಯಣ ಉಖಿಸಿ ರಾಮನನ್ನು ಕೇವಲ ಗ್ರಂಥಕ್ಕೆ ಸೀಮಿತಗೊಳಿಸಿದರು. ಶ್ರೀರಾಮ ಕೇವಲ ರಾಮಾಯಣ ಗ್ರಂಥದಲ್ಲಿರುವ ಕಾಲ್ಪನಿಕ ಪಾತ್ರದಾರಿಯಾಗಿದ್ದು ಆತನ ಇರುವಿಕೆಗೆ ಯಾವುದೇ ಸಾಕ್ಷಿ ಸಿಕ್ಕಿಲ್ಲವೆಂದು ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದರು. ರಾಮ ಹೆಂಡ ಕುಡಿಯುತ್ತಿದ್ದನೆಂದು ಹೇಳಿದ ಕರ್ನಾಟಕದ ಲೊಡ್ಡೆಗಳ ಪಟಾಲಂನ ನಾಯಕ ಭಗವಾನ್‌ನ ಪರವಾಗಿ ನಿಂತದ್ದು ಕಾಂಗ್ರೆಸ್ ಪಕ್ಷ. ಬಾಬ್ರಿ ಮಸೀದಿ ಪ್ರಕರಣದಲ್ಲಿ ಕರಸೇವಕರ ಪರವಾಗಿ ನಿಲ್ಲದ ಕಾಂಗ್ರೆಸ್, ರಾಮನ ಹೆಸರನ್ನು ಕೇಳಿದರೆ ಸಾಕು ಉರಿದುಬೀಳುತ್ತದೆ.

ರಾಮಮಂದಿರದ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದಾಗ ಕಾಂಗ್ರೆಸಿಗರ ಮುಖ ಇಂಗು ತಿಂದ ಮಂಗನಂತಾಗಿತ್ತು. ರಾಮಮಂದಿರದ ಜಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಿ ಎಂದಿದ್ದ ಕಾಂಗ್ರೆಸ್, ನ್ಯಾಯಾಲಯದ ತೀರ್ಪಿನ ಪರವಾಗಿ ಇಂದಿಗೂ ಗಟ್ಟಿಯಾಗಿ ನಿಂತಿಲ್ಲ. ರಾಮನ ಭಂಟ ಹನುಮನ ಜಯಂತಿಗೆ ಅನುಮತಿ ನೀಡಲು ನಿರಾಕರಿಸುವ ಕಾಂಗ್ರೆಸ್, ಟಿಪ್ಪು ಸುಲ್ತಾನ ಜಯಂತಿಗೆ ನಿರಾಯಾಸವಾಗಿ ಅವಕಾಶ ನೀಡುತ್ತದೆ.
ಗಾಂಽಜಿಗೆ ರಾಮ ಹಾಗೂ ಕೃಷ್ಣನ ಮೇಲಿದ್ದಂತಹ ಭಕ್ತಿಯಲ್ಲಿ ಕನಿಷ್ಠ ಭಕ್ತಿ ಕಾಂಗ್ರೆಸಿಗರಿಗಿದ್ದಿದ್ದರೆ ಹಿಂದೂಗಳು ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಆಡಳಿತದಲ್ಲಿ ಕಷ್ಟಪಡುವ ಪರಿಸ್ಥಿತಿ ಎದುರಾಗಿರುತ್ತಿರಲಿಲ್ಲ.

ಗಾಂಧೀಜಿ ಧೂಮಪಾನ ಹಾಗೂ ಮಧ್ಯಪಾನ ವಿರೋಧಿಯಾಗಿದ್ದರು. ಆದರೆ ನೆಹರುಗೆ ವಿದೇಶಿ ‘ಸಿಗಾರ್ ’ಗಳೇ ಬೇಕಿತ್ತು. ಸ್ವದೇಶೀ ಚಳವಳಿಗೆ ಮಹತ್ವ ನೀಡಿದ ಗಾಂಧಿ ತತ್ವವನ್ನು ಪಾಲಿಸದ ನೆಹರೂಗೆ ಬ್ರಿಟಿಷರು ಭಾರತ ಬಿಟ್ಟು ತೊಲಗಿದ ನಂತರವೂ ವಿದೇಶಿ ವಸ್ತುಗಳ ಮೇಲಿನ ಮೋಹ ಕಡಿಮೆಯಾಗಿರಲಿಲ್ಲ. ಅವರದ್ದೇ ಸಂತತಿಯನ್ನು ಮುಂದುವರಿಸಿಕೊಂಡು ಬಂದಿರುವ ರಾಹುಲ್ ಗಾಂಧಿ ಕೂಡ ವಿದೇಶಿ ಪಬಗಳಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ವಿಷಯ ಇಡೀ ಜಗತ್ತಿಗೇ ತಿಳಿದಿದೆ. ತನ್ನ ಹೆಸರಿನಲ್ಲಿ ‘ಗಾಂಧಿ’ ಹೆಸರನ್ನು ಸೇರಿಸಿಕೊಂಡು ಮೋಜು ಮಾಡುವ ಮೂಲಕ ರಾಹುಲ, ಅವಮಾನ ಮಾಡಿದ್ದಾರೆ.

ಗೋವುಗಳಿಗೆ ಗಾಂಧಿ ನೀಡುತ್ತಿದ್ದ ಮಹತ್ವ ಮತ್ಯಾರು ನೀಡುತ್ತಿರಲಿಲ್ಲ. ಅದೇ ಗೋರಕ್ಷಣೆಗೆ ‘ಗೋಹತ್ಯಾನಿಷೇಧ’ ಕಾನೂನು ಜಾರಿಗೆ ತಂದರೆ ಜಾತ್ಯತೀತತೆಯ ಹೆಸರಿನಲ್ಲಿ ಮುಸಲ್ಮಾನರನ್ನು ಓಲೈಸಲು ವಿರೋಽಸುವ ಪಕ್ಷ ಮತ್ತದೇ ಕಾಂಗ್ರೆಸ್. ತಮ್ಮ ಆಡಳಿತದಲ್ಲಿ ಪ್ರತಿಯೊಂದು ವಿಷಯ
ದಲ್ಲಿಯೂ ಸುಳ್ಳುಗಳ ಸರಮಾಲೆಯನ್ನೇ ಹೇಳಿಕೊಂಡು ಬಂದಿರುವ ಆ ಪಕ್ಷ ಮಹಾತ್ಮಾ ಗಾಂಧಿ ಸತ್ಯನಿಷ್ಠ ಜೀವನ ಹೋರಾಟದ ವಿರುದ್ಧವೇ ನಡೆದುಬಂದಿದೆ. ಜಾತ್ಯತೀತತೆಯ ವ್ಯಾಖ್ಯಾನವನ್ನು ತಮಗಿಷ್ಟಬಂದಂತೆ ಬಳಸಿಕೊಳ್ಳುವ ಕಾಂಗ್ರೆಸ್, ಸದಾ ಮುಸಲ್ಮಾನರ ಓಲೈಕೆಯಲ್ಲಿಯೇ
ತೊಡಗಿರುತ್ತದೆ. ಭಾರತ ವಿಭಜನೆಯ ಸಂದರ್ಭದಲ್ಲಿಯೂ ಕಾಂಗ್ರೆಸಿನ ನೆಹರು, ಜಿನ್ನಾನ ಪರವಾಗಿ ನಿಂತು, ಆತನಿಗೆ ಬೇಕಿರುವ ಸರ್ವ ಸಹಾಯವನ್ನೂ ಮಾಡುವ ಮೂಲಕ ಮಗ್ಗುಲಮುಳ್ಳು ಪಾಕಿಸ್ತಾನವನ್ನು ಹುಟ್ಟುಹಾಕುವಲ್ಲಿ ಮುಖ್ಯಪಾತ್ರ ವಹಿಸಿದ್ದರು.

ಗಾಂಧೀಜಿ ಜನ್ಮಸ್ಥಳ ಗುಜರಾತಿನ ಪೋರಬಂದರ್. ನರೇಂದ್ರ ಮೋದಿ ಹಾಗೂ ಅಮಿತ್ ಶಾರ ಮೂಲ ಕೂಡ ಗುಜರಾತ್. ಇವರಿಬ್ಬರನ್ನು
ಟೀಕಿಸುವ ಭರದಲ್ಲಿ ಕಾಂಗ್ರೆಸಿನ ಕೆಲ ಮುಖಂಡರು ಇಡೀ ಗುಜರಾತಿಗಳನ್ನೇ ಟೀಕಿಸುತ್ತಿದ್ದಾರೆ. ಇದು ಮಹಾತ್ಮ ಗಾಂಧಿಯವರಿಗೆ ಮಾಡುವ ಅವಮಾನವಲ್ಲವೇ? ಪ್ರಾದೇಶಿಕತೆಯ ಹೆಸರಿನಲ್ಲಿ ರಾಜಕೀಯ ಮಾಡುವಾಗ ಕನ್ನಡಿಗರು ಮತ್ತು ಗುಜರಾತಿಗಳೆಂಬ ಭೇದ ಭಾವ ಮಾಡುವಲ್ಲಿ
ಕಾಂಗ್ರೆಸಿಗರು ನಿಸ್ಸೀಮರು. ಪಾಕಿಸ್ತಾನಕ್ಕಿಂತಲೂ ಮುಂಚಿತವಾಗಿ ರಾಜಕೀಯವಾಗಿ ‘ದಿವಾಳಿ’ಯಾಗಿರುವ ಕಾಂಗ್ರೆಸ್ ಗೆ ಜನಮನ್ನಣೆ ಸಿಗದ ಕಾರಣ ಹತಾಶೆಯಿಂದ ಗುಜರಾತಿಗಳ ರಾಜಕೀಯ ವಿಷಯವನ್ನು ಅಲ್ಲಲ್ಲಿ ಹೇಳುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡುತ್ತಿದ್ದಾರೆ.

ಕಾಂಗ್ರೆಸ್ ಒಂದು ರಾಜಕೀಯ ಪಕ್ಷವಾಗಿ ಎಂದೂ ಸಹ ಬ್ರಿಟಿಷರ ವಿರುದ್ಧ ಹೋರಾಡಲಿಲ್ಲ. ಜನರ ಮುಂದೆ ಅನುಕಂಪ ಗಿಟ್ಟಿಸುವ ಸಲುವಾಗಿ ಮಹಾತ್ಮ ಗಾಂಧಿಯವರ ಹೆಸರನ್ನು ಹೈಜಾಕ್ ಮಾಡಿ ಅಽಕಾರ ಅನುಭವಿಸಿದರು. ಗಾಂಽ ಹೆಸರನ್ನು ತಮ್ಮ ಹೆಸರಿನ ಪಕ್ಕ ಸೇರಿಸಿಕೊಳ್ಳುವ
ಮೂಲಕ ಸಾವಿರಾರು ಕೋಟಿ ಅಕ್ರಮ ಸಂಪತ್ತನ್ನು ಲೂಟಿ ಹೊಡೆದ ಕಾಂಗ್ರೆಸ್ ಪಕ್ಷದ ಚಿಲ್ಟುಗಳು ಮೂರರಿಂದ ನಾಲ್ಕು ತಲೆಮಾರಿಗಾಗುವಷ್ಟು ಅಸ್ತಿ ಮಾಡಿಕೊಂಡರೆಂಬ ಸತ್ಯವನ್ನು ಅವರದ್ದೇ ಪಕ್ಷದ ರಮೇಶ್ ಕುಮಾರ್, ಬಹಿರಂಗವಾಗಿ ಹೇಳಿದ್ದರು. ಗಾಂಧಿ ತತ್ವಗಳ ವಿರುದ್ಧ ಆಡಳಿತ ನಡೆಸಿ,
ಸಮಾಜವನ್ನು ಅದರಿಂದ ದೂರಮಾಡಿದ ಕೀರ್ತಿ ಕಾಂಗ್ರೆಸ್ ಗೆ ಸಲ್ಲಬೇಕು. ತಾವು ಮಾಡಿರುವ ಪಾಪ ಕಾರ್ಯಗಳಿಗೆ ಮಹಾತ್ಮರ ಹೆಸರನ್ನು ಅಡ್ಡತಂದು ನುಣುಚಿಕೊಳ್ಳುವ ಕಾಂಗ್ರೆಸ್ ಪಕ್ಷಕ್ಕೆ ಮಹಾತ್ಮ ಗಾಂಧಿ ಹೆಸರನ್ನು ಹೇಳುವ ಯಾವ ನೈತಿಕತೆಯೂ ಇಲ್ಲ.