ಸ್ವಚ್ಛಭಾರತ
ಗಜೇಂದ್ರ ಸಿಂಗ್ ಶೇಖಾವತ್
ಅಸಾಧಾರಣ ವೈವಿಧ್ಯ ಮತ್ತು ವಿಭಿನ್ನತೆಗಳ ದೇಶವಾದ ಭಾರತವು ತನ್ನ ಏಕತೆಯಲ್ಲಿ ಬಲವನ್ನು ಕಂಡುಕೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಪ್ರಮುಖ ಉಪಕ್ರಮವಾದ ಸ್ವಚ್ಛ ಭಾರತ ಅಭಿಯಾನವು, ನಮ್ಮ ದೇಶದಲ್ಲಿ ಸಾಮೂಹಿಕ
ಇಚ್ಛಾಶಕ್ತಿಯಿಂದ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಉಜ್ವಲ ಉದಾಹರಣೆ ಯಾಗಿದೆ. ಸ್ವಚ್ಛ ಭಾರತ ಮಿಷನ್ (ಎಸ್ಬಿಎಂ-ಜಿ) ಸ್ವಚ್ಛ, ಆರೋಗ್ಯಕರ ಮತ್ತು ಹೆಚ್ಚು ಸುಸ್ಥಿರ ಭಾರತಕ್ಕಾಗಿನ ಜನಾಂದೋಲನ (ಸಾಮೂಹಿಕ ಚಳವಳಿ) ಆಗಿದೆ.
ಆದಾಗ್ಯೂ, ಈ ಅಭಿಯಾನವು ತಕ್ಷಣದ ಕ್ರಮ ಮಾತ್ರವಲ್ಲ, ಇದು ದೀರ್ಘಾವಧಿಯ ದೃಷ್ಟಿಕೋನಕ್ಕೆ ಅಡಿಪಾಯವನ್ನು ಹಾಕುತ್ತಿದೆ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಪರಿಹರಿಸುತ್ತಿದೆ, ಇದು ಸರಕಾರದ ವಿವಿಧ ಇಲಾಖೆಗಳ ಜಂಟಿ ಕ್ರಮಗಳ ಮೂಲಕ ಸಾಧ್ಯವಾಗಿದೆ. ಈ ಉದ್ದೇಶಕ್ಕೆ ಉತ್ತೇಜಿಸಲು, ಪ್ರಧಾನಿ ಮೋದಿ ಯವರ ದೂರದೃಷ್ಟಿಯ ಪರಿಣಾಮಕಾರಿ ಅನುಷ್ಠಾನವನ್ನು ಖಚಿತ ಪಡಿಸಿಕೊಳ್ಳಲು ನಿಯತ ರಾಜ್ಯ ಭೇಟಿಗಳು ಮತ್ತು ಉನ್ನತ ಮಟ್ಟದ ಪರಿಶೀಲನೆಗಳ ಮೂಲಕ ನನ್ನ ಇಡೀ ತಂಡವು ಪ್ರತಿದಿನ ದಣಿವರಿಯದೆ ಕೆಲಸ ಮಾಡುತ್ತಿದೆ. ಈ ಸಂಕಲ್ಪದಿಂದಾಗಿಯೇ ನಾವು ಎಸ್ಬಿಎಂ-ಜಿ ೨.೦ ಅಡಿಯಲ್ಲಿ ೪.೪ ಲಕ್ಷ ಒಡಿಎಫ್ ಪ್ಲಸ್ ಗ್ರಾಮಗಳನ್ನು ಸಾಧಿಸಿದ್ದೇವೆ ಜತೆಗೆ ೧೧.೨೫ ಕೋಟಿಗೂ ಹೆಚ್ಚು ಮನೆ ಶೌಚಾಲಯಗಳು ಮತ್ತು ೨.೩೬ ಲಕ್ಷ ಸಮುದಾಯ ನೈರ್ಮಲ್ಯ ಸಮುಚ್ಚಯಗಳನ್ನು ನಿರ್ಮಿಸಿದ್ದೇವೆ.
ಈ ಉಪಕ್ರಮದ ಪ್ರಮುಖ ಅಂಶವೆಂದರೆ, ‘ಸ್ವಚ್ಛತಾ ಹಿ ಸೇವಾ’ (ಸ್ವಚ್ಛತೆಯೇ ಸೇವೆ) ಅಭಿಯಾನವು ಈ ಮಿಷನ್ನಲ್ಲಿ ಜನರ ಭಾಗವಹಿಸುವಿಕೆಯನ್ನು ಶಕ್ತಗೊಳಿಸುತ್ತದೆ. ನಾವು ಈಗಾಗಲೇ ೨೦೨೨ರಲ್ಲಿ ಈ ಅಭಿಯಾನದ ಆಳವಾದ ಪರಿಣಾಮವನ್ನು ನೋಡಿದ್ದೇವೆ. ಈ ಅವಧಿಯಲ್ಲಿ ಸುಮಾರು ೧೦ ಕೋಟಿ ಜನರು ಶ್ರಮದಾನ ಚಟುವಟಿಕೆಗಳನ್ನು ಮಾಡಿದ್ದಾರೆ. ಈ ವರ್ಷ ಸ್ವಚ್ಛತಾ ಹಿ ಸೇವಾದ ೧೨ ದಿನಗಳಲ್ಲಿ ೨೦ ಕೋಟಿಗೂ ಹೆಚ್ಚು ಜನರು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ, ಅಂದರೆ ದಿನಕ್ಕೆ ಸರಾಸರಿ ೧.೬೭ ಕೋಟಿ ಜನರು ಭಾಗವಹಿಸುತ್ತಿದ್ದಾರೆ.
ಇಷ್ಟು ಅಗಾಧ ಸಂಖ್ಯೆಯ ಜನರ ಸಹಭಾಗಿತ್ವದಿಂದಾಗಿ ಈ ವರ್ಷ ರಾಷ್ಟ್ರವು ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿರುವುದನ್ನು ನಾವು ನೋಡಿದ್ದೇವೆ. ಇದರಿಂದಾಗಿ ಬಯಲುಶೌಚ-ಮುಕ್ತ ಪ್ಲಸ್ ಗ್ರಾಮಗಳು ಶೇ.೭ರಿಂದ ಶೇ.೭೫ಕ್ಕೆ ತಲುಪಿವೆ. ಈ ವರ್ಷ, ಸ್ವಚ್ಛತಾ ಹಿ ಸೇವಾ ಅಭಿಯಾನಕ್ಕೆ ಸಂಪುಟ ಸಹೋದ್ಯೋಗಿಗಳಾದ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್, ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ನಾನು ಚಾಲನೆ ನೀಡಿದ್ದೇವೆ. ೧೫ ದಿನಗಳ ಈ ಅಭಿಯಾನ ಸೆಪ್ಟೆಂಬರ್ ೧೫ರಿಂದ ಶುರುವಾಗಿದ್ದು ಅಕ್ಟೋಬರ್ ೧ರವರೆಗೆ ನಡೆಯುತ್ತದೆ.
ಮಾನ್ಯ ಪ್ರಧಾನಮಂತ್ರಿಯವರ ಕರೆಯ ಮೇರೆಗೆ ಅಕ್ಟೋಬರ್ ೧ರಂದು ಬೆಳಗ್ಗೆ ೧೦ರಿಂದ ೧೧ರವರೆಗೆ ರಾಷ್ಟ್ರವ್ಯಾಪಿ ಸ್ವಚ್ಛತಾ ಶ್ರಮದಾನದ ಮೂಲಕ ಈ ಅಭಿಯಾನವು ಕೊನೆಗೊಳ್ಳುತ್ತದೆ. ಈ ವರ್ಷ, ಸ್ವಚ್ಛ ಭಾರತ್ ಮಿಷನ್-ಗ್ರಾಮೀಣ ಮತ್ತು ನಗರ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಜಂಟಿ ಉಪಕ್ರಮ ವಾಗಿ ಅಭಿಯಾನವನ್ನು ನಡೆಸಲಾಗುತ್ತಿದೆ.
ಸ್ವಚ್ಛತಾ ಹಿ ಸೇವಾ ಒಂದು ಸಾಮಾನ್ಯ ಅಭಿಯಾನವಲ್ಲ. ಹಂಚಿಕೆಯ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವ ಮತ್ತು ನೈರ್ಮಲ್ಯವು ಪ್ರತಿಯೊಬ್ಬರ ಹೊಣೆಯಾಗಿದೆ ಎಂಬ ಸಂದೇಶವನ್ನು ಬಲಪಡಿಸುವ ಉದ್ದೇಶದಿಂದ ಸ್ವಯಂಪ್ರೇರಿತ ಚಟುವಟಿಕೆ ಗಳ ಮೂಲಕ ‘ಶ್ರಮದಾನ’ದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಇದು ನಾಗರಿಕರಿಗೆ ನೀಡಿದ ಕರೆಯಾಗಿದೆ. ಈ ವರ್ಷ ಅಭಿಯಾ ನವು, ‘ಕಸಮುಕ್ತ ಭಾರತ’ ಬ್ಯಾನರ್ ಅಡಿಯಲ್ಲಿ, ನೈರ್ಮಲ್ಯವು ಸಾಮೂಹಿಕ ಕರ್ತವ್ಯವಾಗಿದೆ ಮತ್ತು ಸ್ವಚ್ಛತೆ ನಮ್ಮ ದೈನಂದಿನ ಜೀವನದ ಆಂತರಿಕ ಭಾಗ ವಾಗಿರಬೇಕು ಎಂದು ಒತ್ತಿಹೇಳುವ ಗುರಿಯನ್ನು ಹೊಂದಿದೆ.
ಸ್ವಚ್ಛತಾ ಹಿ ಸೇವಾ ಅಭಿಯಾನದ ಯಶಸ್ಸಿನ ಕುರಿತು ನಾವು ನೋಡುವಾಗ, ಈ ಅಸಾಮಾನ್ಯ ಪ್ರಯತ್ನದ ಸೂಕ್ಷ್ಮ ಅಂಶಗಳನ್ನು ಆಳವಾಗಿ ಪರಿಶೀಲಿಸುವುದು ಅತ್ಯಗತ್ಯ. ಅಭಿಯಾನದ ಪ್ರಮುಖ ಅಂಶವೆಂದರೆ, ದೃಷ್ಟಿಗೋಚರವಾಗುವ ಸ್ವಚ್ಛತೆಗೆ ಅಚಲವಾದ ಒತ್ತು ನೀಡುವುದು, ನಮ್ಮ ಸಮಾಜದ ತೆರೆಮರೆಯ ಹೀರೋಗಳಾದ ಸಫಾಯಿ ಕರ್ಮಚಾರಿಗಳ ಕಲ್ಯಾಣವನ್ನು ವಿಸ್ತರಿಸುವುದು. ಅವರ ಪ್ರಮುಖ ಪಾತ್ರವನ್ನು ಗುರುತಿಸುವುದು ಅಭಿಯಾನದ ಶ್ಲಾಘನೀಯ ಅಂಶವಾಗಿದೆ.
ಇದು ನಮ್ಮ ಸುತ್ತಮುತ್ತಲ ಆವರಣವನ್ನು ಶ್ರದ್ಧೆಯಿಂದ ನಿರ್ವಹಿಸುವವರನ್ನು ಮೇಲಕ್ಕೆತ್ತುವ ಅಗತ್ಯವನ್ನು ಒತ್ತಿ ಹೇಳುತ್ತದೆ.
‘ಸ್ವಚ್ಛತಾ ಹಿ ಸೇವಾ ಅಭಿಯಾನ-೨೦೨೩’ ಸಾರ್ವಜನಿಕ ಪ್ರದೇಶಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಹೆಚ್ಚಿನ ದಟ್ಟಣೆಯ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು ನೈರ್ಮಲ್ಯ ಸೌಲಭ್ಯಗಳನ್ನು ನವೀಕರಿಸುವವರೆಗೆ ವೈವಿಧ್ಯಮಯ ಚಟುವಟಿಕೆಗಳನ್ನು ಹೊಂದಿದೆ.
ಹೆಚ್ಚುವರಿಯಾಗಿ, ನದಿ ದಡಗಳು, ಜಲಮೂಲಗಳು, ಪ್ರವಾಸಿ ತಾಣಗಳು ಮತ್ತು ಐತಿಹಾಸಿಕ ಸ್ಮಾರಕಗಳನ್ನು ಸ್ವಚ್ಛಗೊಳಿಸು ವುದು, ನಮ್ಮ ಪ್ರಕೃತಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ನಮ್ಮ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ನಡುವಿನ ಸಹಯೋಗವು ಈ ದೃಷ್ಟಿಕೋನಕ್ಕೆ ಅನುಗುಣವಾಗಿ ದೃಢವಾದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಗೆ ವೇದಿಕೆಯನ್ನು ರೂಪಿಸುತ್ತದೆ.
ಈ ಹಂತದಲ್ಲಿ, ಸ್ವಚ್ಛತಾ ಹಿ ಸೇವಾ ಅಭಿಯಾನ-೨೦೨೩ರ ಅಡಿಯಲ್ಲಿ ಅಳವಡಿಸಿಕೊಂಡ ಸಂಪೂರ್ಣ ಸರಕಾರದ ವಿಧಾನ ವನ್ನು ಗುರುತಿಸುವುದು ಸಹ ಮುಖ್ಯವಾಗಿದೆ. ಈ ವಿನೂತನ ವಿಧಾನವು ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಅಲ್ಲದೆ, ೫೯ ಸರಕಾರಿ ಇಲಾಖೆಗಳನ್ನು ೩೦,೦೦೦ ಚಟುವಟಿಕೆಗಳನ್ನು ಪ್ರಾರಂಭಿಸಲು ಮತ್ತು ದೇಶಾದ್ಯಂತ ಸ್ವಚ್ಛತೆಯನ್ನು ಉತ್ತೇಜಿಸಲು ಇದುವರೆಗೆ ೭.೫ ಲಕ್ಷಕ್ಕೂ ಹೆಚ್ಚು ಜನರ ಭಾಗವಹಿಸುವಿಕೆ ಯನ್ನು ಖಚಿತಪಡಿಸುತ್ತದೆ.
ಇದಲ್ಲದೆ, ಅಭಿಯಾನದ ಅತ್ಯಂತ ಮಹತ್ವದ ಸಾಧನೆಯೆಂದರೆ, ಸಮುದಾಯಗಳ ಅಭೂತಪೂರ್ವ ಭಾಗವಹಿಸುವಿಕೆ. ವಿದ್ಯಾರ್ಥಿಗಳು, ಸರಕಾರಿ ನೌಕರರು ಮತ್ತು ಸ್ಥಳೀಯ ಸಮುದಾಯಗಳು ಸೇರಿದಂತೆ ಎಲ್ಲಾ ವರ್ಗದ ಜನರು ಈ ಉದ್ದೇಶಕ್ಕಾಗಿ ಒಗ್ಗೂಡುತ್ತಾರೆ. ಯುವ ಮನಸ್ಸುಗಳು ಅದರ ಮೂಲದಲ್ಲಿ ತ್ಯಾಜ್ಯ ವಿಂಗಡಣೆಯ ಪ್ರಾಮುಖ್ಯವನ್ನು ಅಳವಡಿಸಿಕೊಳ್ಳುತ್ತವೆ, ತಮ್ಮ ಸಮುದಾಯಗಳಲ್ಲಿ ಸ್ವಚ್ಛತೆಯ ಚಾಂಪಿಯನ್ ಆಗಿ ವಿಕಸನಗೊಳ್ಳುತ್ತವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ವಿಶೇಷ ಕಾರ್ಯಕ್ರಮಗಳು ಪ್ರಾದೇಶಿಕ ಗಡಿಗಳನ್ನು ಮೀರಿ, ಸಾಮೂಹಿಕ ಉದ್ದೇಶದ ಪ್ರಜ್ಞೆಯನ್ನು ಬೆಳೆಸುತ್ತವೆ.
ಈ ವರ್ಷದ ಅಭಿಯಾನವು ಸ್ವಚ್ಛತಾ ಹಿ ಸೇವಾ ಪೋರ್ಟಲ್ ಚಾಲನೆಯನ್ನು ಕಂಡಿದೆ. ಇದು ಈ ಉಪಕ್ರಮದ ಅಡಿಯಲ್ಲಿ ಸ್ವಯಂಪ್ರೇರಿತ ಕೆಲಸವನ್ನು ನಿಖರವಾಗಿ ದಾಖಲಿಸುತ್ತದೆ. ಇದು ಅಂಥ ಅಭಿಯಾನಗಳಲ್ಲಿ ಹಿಂದೆ ಕಾಣದಂಥ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಮಟ್ಟವನ್ನು ಪರಿಚಯಿಸುತ್ತದೆ, ಭಾಗವಹಿಸುವ ನಾಗರಿಕರು ಮತ್ತು ಸಂಸ್ಥೆಗಳ ಮಹೋನ್ನತ ಪ್ರಯತ್ನ ಗಳನ್ನು ಪ್ರಮಾಣೀಕ ರಿಸಲು ಸ್ಪಷ್ಟವಾದ ವಿಧಾನವನ್ನು ನೀಡುತ್ತದೆ. ಅದೇ ಸಮಯದಲ್ಲಿ, ಇಂಡಿಯನ್ ಸ್ವಚ್ಛತಾ ಲೀಗ್, ಸ್ವಚ್ಛತಾ ಹಿ ಸೇವಾ-೨೦೨೩ದೊಂದಿಗೆ ಸಂಯೋಜಿಸಲ್ಪಟ್ಟಿದ್ದು, ಅಭಿಯಾನದಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಉತ್ತೇಜಿಸು ತ್ತದೆ.
ನನ್ನ ಎಲ್ಲಾ ಸಹ ನಾಗರಿಕರು ಶ್ರಮದಾನದ ಮನೋಭಾವವನ್ನು ಮೈಗೂಡಿಸಿಕೊಳ್ಳಲು, ನಮ್ಮ ರಾಷ್ಟ್ರಪಿತನ ತತ್ತ್ವಗಳಿಂದ
ಕಲಿಯಲು ಮತ್ತು ಅಕ್ಟೋಬರ್ ೧ರಂದು ಸ್ವಚ್ಛತಾ ಶ್ರಮದಾನದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಮತ್ತು ನಮ್ಮ ಹಳ್ಳಿಗಳು, ಪಟ್ಟಣಗಳು ಮತ್ತು ನಗರಗಳನ್ನು ‘ಸಂಪೂರ್ಣ ಸ್ವಚ್ಛ’ವನ್ನಾಗಿ ಮಾಡಲು ತಮ್ಮದೇ ಆದ ರೀತಿಯಲ್ಲಿ ಕೊಡುಗೆ ನೀಡಬೇಕೆಂದು ನಾನು ವಿನಂತಿಸುತ್ತೇನೆ.
(ಲೇಖಕರು ಕೇಂದ್ರ ಜಲಶಕ್ತಿ ಸಚಿವರು)