ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ, ಎಲ್ಲವನ್ನೂ ಮಾಡುತ್ತೇವೆಂದು ಬಡಾಯಿ ಕೊಚ್ಚಿಿಕೊಂಡವರ ಸರಕಾರ ನೂರು ದಿನ ಪೂರೈಸಿದೆ. ತಮ್ಮ ನೂರು ದಿನಗಳ ಸಾಧನೆಯ ಪುಸ್ತಕದಲ್ಲಿ ಬೆಂಗಳೂರಿನ ಸಮಸ್ಯೆೆಗಳಿಗೆ ಪರಿಹಾರ ನೀಡಿದ ಬಗ್ಗೆೆ ವಿಷಯಗಳೇ ಇಲ್ಲ!
ಮಾಡುವುದು 9 ಗಂಟೆಯ ಕೆಲಸ, ಅದರಲ್ಲಿ 4 ಗಂಟೆ ಟ್ರಾಾಫಿಕ್ ಜಾಮ್. ಒಟ್ಟು 13 ಗಂಟೆಯ ಪ್ರಯಾಸದ ದಿನದಲ್ಲಿದ್ದೀರೆಂದರೆ, ನೀವು ಬೆಂಗಳೂರಿನಲ್ಲಿ ಇದ್ದೀರೆಂದೇ ಅರ್ಥ. ಬೆಳಗ್ಗೆೆ ಏಳು ಗಂಟೆಗೆ ಎದ್ದು ಆಫೀಸಿಗೂ ಹೊರಟರೂ ಇದೇ ಕಥೆ. ಹನ್ನೊೊಂದು ಗಂಟೆಗೆ ಹೊರಟರೂ ಇದೇ ಕಥೆ. ಸಂಜೆಯ ವೇಳೆ ನಾಲ್ಕು ಗಂಟೆಗೆ ಆಫೀಸಿನಿಂದ ಮನೆಗೆ ಹೊರಟರೂ ಇದೇ ಹಣೆಬರಹ. ಈ ಟ್ರಾಾಫಿಕ್‌ನಿಂದಾಗಿ ಅದೆಷ್ಟು ಜನರಿಗೆ ತಮ್ಮ ಹೆಂಡತಿ ಮಕ್ಕಳನ್ನು ಪ್ರತಿನಿತ್ಯ ನೋಡಲು ಆಗುತ್ತಿಿಲ್ಲವೋ ದೇವರೇ ಬಲ್ಲ. ಮುಂಜಾನೆ ಆಫೀಸಿಗೆ ಹೋಗುವ ಸಮಯಕ್ಕೆೆ ಮಕ್ಕಳು ಮಲಗಿರುತ್ತವೆ. ಸಂಜೆ ಆಫೀಸಿನಿಂದ ಮನೆಗೆ ಹೊರಡುವ ವೇಳೆಗೆ ಮಕ್ಕಳು ಮಲಗಿರುತ್ತಾಾರೆ. ಇನ್ನು ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆೆ ಹೋಗುವುದಾದರೆ ಅಷ್ಟೇ, ಮಕ್ಕಳನ್ನು ದೇವರೇ ಕಾಪಾಡಬೇಕು. ಮಾತು ಮಾತಿಗೂ ದಕ್ಷಿಿಣ ಭಾರತದವರೇ ಅತಿ ಹೆಚ್ಚು ತೆರಿಗೆ ಕಟ್ಟುತ್ತೇವೆಂದು ಬಾಯಿ ಬಡಿದುಕೊಳ್ಳುವವರಿಗೆ ಬೆಂಗಳೂರಿಗರ ಕಷ್ಟ ಅರ್ಥವಾಗುವುದೇ ಇಲ್ಲ. ಇನ್ನು ಕರ್ನಾಟಕದಲ್ಲಿ ಬೆಂಗಳೂರಿನವರೇ ಅತಿ ಹೆಚ್ಚು ತೆರಿಗೆಯನ್ನು ಕಟ್ಟುತ್ತಾಾರೆಂದು ವಾದಿಸುವವರಿಗೆ ಬೇಕಿರುವ ಒಂದು ಸರಿಯಾದ ಮೂಲಭೂತ ವ್ಯವಸ್ಥೆೆಯನ್ನು ಕಲ್ಪಿಿಸುವ ಯೋಗ್ಯತೆ ನಮ್ಮ ಜನಪ್ರತಿನಿಧಿಗಳಿಗಿಲ್ಲ.
ಬೆಳಗ್ಗೆೆ ಎದ್ದು ರಸ್ತೆೆಗೆ ಇಳಿದರೆ ಸಾಕು, ಬೆಂಗಳೂರಿನ ರಸ್ತೆೆಗಳೆಲ್ಲವೂ ದೂಳುಮಯ ಅಡಿಯಷ್ಟು ಗುಂಡಿಗಳು, ಫುಟ್‌ಪಾತ್ ಒತ್ತುವರಿ ಎಲ್ಲವೂ ಅಯೋಮಯ. ಸರಿ, ಇನ್ನು ಈ ವೈಟ್ ಟಾಪಿಂಗ್ ಅನ್ನುವ ಹೆಸರಿನಲ್ಲಿ ಬೆಂಗಳೂರಿನ ಗಲ್ಲಿ ಗಲ್ಲಿಗಳಲ್ಲಿ ಸೃಷ್ಟಿಿಸಿರುವ ಅವಾಂತರಗಳಂತೂ ಒಂದಾ, ಎರಡಾ? ಅದು ಯಾವ ತಂತ್ರಜ್ಞಾಾನದ ಮಯಾಲೋಕವೇ ಇವರ ಬಳಿ ಇಲ್ಲವೋ, ತಿಳಿದಿಲ್ಲ. ಒಂದು ರಸ್ತೆೆಯ ಕಾಮಗಾರಿ ತಿಂಗಳಾದರೂ ಮುಗಿದಿರುವುದಿಲ್ಲ. ಕಳೆದ ಎರಡು ವರ್ಷಗಳಿಂದ ಎಲ್ಲೆೆಡೆ ವೈಟ್‌ಟಾಪಿಂಗ್‌ನದ್ದೇ ದರ್ಬಾರು. ಒಂದು ರಸ್ತೆೆಯಾದರೂ ಪೂರ್ಣವಾಗಿ ಮುಗಿದಿಲ್ಲ. ಎಲ್ಲೋೋ ಒಂದೆಡೆ ಮುಗಿದಿದೆನ್ನಿಿ ಅಲ್ಲಿ ಇನ್ನೂ ಸ್ವಲ್ಪ ಕೆಲಸ ಉಳಿಸದೇ ಬಿಡುವುದಿಲ್ಲ.
ಇನ್ನು ಒಂದು ವಿಚಾರವೆಂದರೆ, ಅರ್ಧಂಬರ್ಧ ವೈಟ್ ಟಾಪಿಂಗ್‌ನ ಕಥೆ. ಒಂದೆಡೆಯಾದರೆ, ರಸ್ತೆೆಯ ಪಕ್ಕದಲ್ಲಿ ಸರಿಯಾಗಿ ಮುಚ್ಚದೇ ಅರ್ಧಂಬರ್ಧ ಬಿಟ್ಟಿಿರುವ ಜಾಗಗಳದ್ದು. ಮತ್ತೊೊಂದು ಅವಾಂತರ ಗಾಡಿಗಳನ್ನು ಎಗರಿಸಿಕೊಂಡು ಓಡಬೇಕು. ಬೆಂಗಳೂರಿನ ರಸ್ತೆೆಗಳಲ್ಲಿ ಓಡಿಸುವ ವಾಹನಗಳು ಬಹುಬೇಗ ರಿಪೇರಿಗೆ ಬಂದು ಎಲ್ಲ ಜೇಬುಗಳು ಖಾಲಿ. ಕಾಂಗ್ರೆೆಸ್‌ನ ಸಿದ್ದರಾಮಯ್ಯ ರಾಜಕೀಯವಾಗಿ ಎಷ್ಟೇ ಸಮರ್ಥರಾಗಿದ್ದರೂ, ಬೆಂಗಳೂರನ್ನು ಸತತವಾಗಿ ಆರು ವರ್ಷಗಳ ಕಾಲ ಹಾಳು ಮಾಡಿದ ರೀತಿಯನ್ನು ಮಾತ್ರ ಜನರು ಕ್ಷಮಿಸುವುದಿಲ್ಲ. ರಾಜ್ಯದಲ್ಲಿಯೂ ತಮ್ಮದೇ ಅಧಿಕಾರವಿದ್ದೂ, ಬಿಬಿಎಂಪಿಯಲ್ಲೂ ತಮ್ಮದೇ ಆಡಳಿತವಿದ್ದಾಾಗಲೂ ಸಹ ಬೆಂಗಳೂರಿನ ಸಮಸ್ಯೆೆಗಳನ್ನು ನಿವಾರಿಸುವಲ್ಲಿ ವಿಫಲವಾಗಿದ್ದರು. ನಿವಾರಿಸುವುದು ಬಿಡಿ, ಸಮಸ್ಯೆೆಗಳನ್ನು ಇನ್ನು ಹೆಚ್ಚು ಮಾಡಿ ಎಲ್ಲರ ಬಾಯಿಂದಲೂ ಉಗಿಸಿಕೊಂಡರು.
‘ಇಂದಿರಾ ಕ್ಯಾಾಂಟೀನ್’ಗಿಂತಲೂ ಬೆಂಗಳೂರಿಗರಿಗೆ ಬೇಕಾಗಿದ್ದುದು ಒಳ್ಳೆೆಯ ರಸ್ತೆೆಗಳು. ಸಾರಿಗೆ ವ್ಯವಸ್ಥೆೆ. ಕೇವಲ ವೋಟ್ ಬ್ಯಾಾಂಕಿಗಾಗಿ ಕೆಲಸ ಮಾಡಲು ಹೋಗಿ ಬೆಂಗಳೂರಿಗರ ನೆಮ್ಮದಿಯನ್ನು ಹಾಳುಮಾಡಿದ ಕೀರ್ತಿ ಇವರದ್ದು. ಇನ್ನು ಬೆಂಗಳೂರು ನಗರದ ಉಸ್ತುವಾರಿಗಾಗಿ ಕಚ್ಚಾಾಡುವ ನಾಯಕರಿಗೆ ಬೆಂಗಳೂರಿಗರ ಮೂಲಭೂತ ಸಮಸ್ಯೆೆಗಳನ್ನು ನಿವಾರಿಸಬೇಕೆಂಬ ಹಂಬಲವಿಲ್ಲ. ಕಾಟಾಚಾರಕ್ಕೆೆ ಪ್ರತಿವರ್ಷವೂ ಚುನಾಯಿತನಾಗುವ ಬೆಂಗಳೂರಿನ ಮೇಯರ್ ಬಾಯಲ್ಲಿ ತಾನು ಚುನಾಯಿತನಾದ ದಿನವಷ್ಟೇ ಬೆಂಗಳೂರನ್ನು ಉದ್ಧಾಾರ ಮಾಡುವ ನುಡಿಮುತ್ತುಗಳು ಉದುರುತ್ತವೆ. ತದನಂತರ ಆ ಮೇಯರ್ ಅದ್ಯಾಾವ ಕಡೆ ಇರುತ್ತಾಾರೋ ದೇವರೇ ಬಲ್ಲ.
ಕೇವಲ ಅಧಿಕಾರಕ್ಕಾಾಗಿ ಕಿತ್ತಾಾಡುವ ಈ ಸೋಕಾಲ್‌ಡ್ ರಾಜಕೀಯ ನಾಯಕರುಗಳು, ಕನಿಷ್ಠ ಪಕ್ಷ ತಮ್ಮ ಮನಸ್ಸಿಿಗೆ ಮೋಸ ಮಾಡಿಕೊಳ್ಳುವ ಬದಲು ಕೊಂಚ ಕೆಲಸವನ್ನಾಾದರೂ ಮಾಡಬೇಕಲ್ಲವೇ? ನಮ್ಮ ಕಾರ್ಪೋರೇಟರ್‌ಗಳ ಬಳಿ ಓಡಾಡಲು ಫಾರ್ಚೂನರ್ ಕಾರುಗಳಿವೆ. ಬಿಬಿಎಂಪಿಯಲ್ಲಿ ಪಾವತಿಸಲು ಹಣವೇ ಇಲ್ಲ. ಕಾರಿನಲ್ಲಿ ಓಡಾಡಿಕೊಂಡು ಜನರ ಮಧ್ಯೆೆ ನಿಂತು ಫೋಟೊ ತೆಗೆಸಿಕೊಂಡು ಯಾವುದೋ ಒಂದು ಅಣ್ಣಮ್ಮ ಅಥವಾ ರಾಜ್ಯೋೋತ್ಸವ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು, ಕೆಲವು ಭಂಡ ಭಾಷಣಗಳನ್ನು ಮಾಡಿದರೆ, ತಮ್ಮ ಕೆಲಸ ಮುಗಿಯಿತೆಂದುಕೊಂಡು ಕಾಲಹರಣ ಮಾಡುತ್ತಾಾರೆ. ಸದ್ಯ ಬ್ಯಾಾನರ್ ಹಾಕುವ ಸಂಸ್ಕೃತಿಯನ್ನು ಬೆಂಗಳೂರಿನಲ್ಲಿ ಬ್ಯಾಾನ್ ಮಾಡಿರುವುದರಿಂದ, ಇವರುಗಳ ಅಭಿಮಾನಿಗಳ ಪಟಾಲಂಗಳ ಅಧ್ಯಕ್ಷ, ಉಪಾಧ್ಯಕ್ಷ, ಅಭಿಮಾನಿ ಬಳಗಗಳು ಕಾಣಿಸಿಗುತ್ತಿಿಲ್ಲ. ಅಲ್ಲಿ ಇಲ್ಲಿ ಎಂದೋ ಒಂದು ಬ್ಯಾಾನರ್ ಓಕೆ, ಪ್ರತಿಯೊಂದು ಕಾರ್ಯಕ್ರಮದಲ್ಲಿಯೂ ಬ್ಯಾಾನರ್, ಸಣ್ಣ ಪುಟ್ಟ ಉದ್ಘಾಾಟನಾ ಸಮಾರಂಭಗಳಲ್ಲಿಯೂ ಬ್ಯಾಾನರ್‌ಗಳನ್ನು ನೋಡಿ ಸಾಕಾಗಿ ಹೋಗಿತ್ತು. ಇವರ ಶಿಷ್ಯರೆಂದು ಕಾಲರ್ ಏರಿಸಿಕೊಂಡು ಹೋಗುವ ಪುಡಿ ರೌಡಿಗಳು ಸ್ವಲ್ಪವಾದರೂ, ಜನರ ಸಮಸ್ಯೆೆಗಳ ಬಗ್ಗೆೆ ಯೋಚಿಸಿ ಸಹಾಯ ಮಾಡುತ್ತಾಾರೆಯೇ, ಅದೂ ಇಲ್ಲ.
ಚುನಾವಣೆ ಬಂತೆಂದರೆ ಸಾಕು, ಎಲ್ಲರೂ ಜೈಕಾರ ಹಾಕಿಕೊಂಡು ಬಾವಿಯಲ್ಲಿರುವ ಕಪ್ಪೆೆಗಳ ರೀತಿ ಹಾರಾಡುತ್ತಿಿರುತ್ತಾಾರೆ. ಜಯನಗರದಿಂದ ಮಾರತ್ತಹಳ್ಳಿಿಯವರೆಗೆ ಪ್ರತಿನಿತ್ಯ ಓಡಾಡುವ ಜನರ ಪರಿಸ್ಥಿಿತಿಯನ್ನು ನೋಡಿದರೆ, ಕಣ್ಣಿಿನಲ್ಲಿ ನೀರು ಬರುತ್ತದೆ. ಬನಶಂಕರಿಯಿಂದ ಶುರುವಾಗುವ ಈ ಯಮಯಾತನೆಯು, ಮಾರತ್ತಹಳ್ಳಿಿಯವರೆಗೂ ನಿಲ್ಲುವುದಿಲ್ಲ. ಸಿಲ್‌ಕ್ ಬೋರ್ಡಿನವರೆಗೂ ಮೆಟ್ರೋೋ ಕಾಮಗಾರಿಯಲ್ಲಿ ಸಿಲುಕಿ, ಆಫೀಸಿಗೆ ಹೋಗುವಷ್ಟರಲ್ಲಿ ಸಾಯುವಂತಾಗಿರುತ್ತದೆ. ದ್ವಿಿಚಕ್ರ ವಾಹನಗಳಲ್ಲಿನ ಸವಾರರಿಗಂತೂ ಆಫೀಸ್ ಸೇರುವಷ್ಟರಲ್ಲಿ ಮುಖದ ಮೇಲಿನ ಕ್ರೀಮ್ ಬಣ್ಣವೂ ಬದಲಾಗಿ, ಆಫೀಸಿಗೆ ಹೋದ ನಂತರ ಮತ್ತೊೊಮೆ ಮುಖ ತೊಳೆದು ತಲೆ ಬಾಚಿಕೊಳ್ಳುವ ಪರಿಸ್ಥಿಿತಿಯಿದೆ. ಇನ್ನು ಬಸ್ಸಿಿನಲ್ಲಿ, ಕಾರಿನಲ್ಲಿ ಕುಳಿತವರ ಸ್ಥಿಿತಿ ಹೇಳತೀರದು. ಡ್ರೈವರ್ ಕಾರಿನ ಕ್ಲಚ್ ಒತ್ತಿಿ ಒತ್ತಿಿ ಕಾಲುಗಳು ಸ್ವಾಾಧೀನ ಕಳೆದುಕೊಂಡಿರುತ್ತವೆ. ಒಳಗೆ ಕುಳಿತವರ ಪರಿಸ್ಥಿಿತಿಯಂತೂ, ಬೆಟ್ಟದ ಮೇಲಿನ ರಸ್ತೆೆಗಳಲ್ಲಿ ಓಡಾಡಿದ ಅನುಭವ.ಇನ್ನು ನಮ್ಮ ಮಹಾನುಭಾವರ ತಲೆಯಲ್ಲಿನ ಬುದ್ಧಿಿಯಂತೂ, ಅದೇನು ತೆಗೆದು ಬಾರಿಸಬೇಕೋ, ತಿಳಿದಿಲ್ಲ.
ಎಲೆಕ್ಟ್ರಾಾನಿಕ್ ಸಿಟಿ ಮೆಟ್ರೋೋ ಸದ್ಯದ ಪರಿಸ್ಥಿಿತಿಯಲ್ಲಿ ಬೇಕಿರಲಿಲ್ಲ. ಈಗಾಗಲೇ ಉದ್ದದ ಫ್ಲೈಓವರ್ ಇದೆ. ಕೆಳಗೆ ಆರು ಫಥಗಳ ರಸ್ತೆೆಯಿದೆ. ಹೀಗಿರುವಾಗ, ಆ ರಸ್ತೆೆಯ ಮೆಟ್ರೋೋ ಕೊಂಚ ತಡಮಾಡಿ, ಮೊದಲು ಸಿಲ್‌ಕ್ ಬೋರ್ಡ್ ಹಾಗೂ ಬೆಳ್ಳಂದೂರು ಹೊರವರ್ತುಲ ರಸ್ತೆೆಯ ಮೂಲಕ ಮಾರತ್ತಹಳ್ಳಿಿಯನ್ನು ಸಂಪರ್ಕಿಸುವ ಮೆಟ್ರೋೋ ಕಾಮಗಾರಿ ಮುಗಿಸಬೇಕಿತ್ತು. ಅತಿ ಹೆಚ್ಚು ಟ್ರಾಾಫಿಕ್ ಇರುವ ರಸ್ತೆೆಯಿದು. ಕೇವಲ ಇನ್ಫೋೋಸಿಸ್ ತರಹದ ಕಂಪೆನಿಗಳನ್ನು ಖುಷಿಪಡಿಸಲು ಎಲೆಕ್ಟ್ರಾಾನಿಕ್ ಸಿಟಿ, ಮೆಟ್ರೋೋನ ಅವಶ್ಯಕತೆಯಿರಲಿಲ್ಲ. ಮಾರತ್ತಹಳ್ಳಿಿ ಹೊರ ವರ್ತುಲ ರಸ್ತೆೆಯನ್ನು ತಲುಪುವಾಗ ಒಂದು ಬೇರೆಯದ್ದೇ ದೇಶವನ್ನು ಸುತ್ತಿಿಬಂದಂತಾಗುತ್ತದೆ.
ಸಿಲ್‌ಕ್ ಬೋರ್ಡಿನ ಬಳಿ ದೊಡ್ಡ ರಾಜಕಾಲುವೆ ಇರುವುದರಿಂದ ಮೆಟ್ರೋೋ ಮಾರ್ಗವು ವಿಳಂಬವಾಗುತ್ತದೆಯೆಂಬ ವಾದವನ್ನು ಎಷ್ಟು ದಿವಸ ಕೇಳುವುದು? ಹಾಗಾದರೆ ಈ ಸಮಸ್ಯೆೆಗೆ ಪರಿಹಾರವೇ ಇಲ್ಲವೇ? ಅತಿ ಹೆಚ್ಚು ಕಾರ್ಪೋರೇಟ್ ಕಂಪೆನಿಗಳಿರುವ ಈ ಹೊರ ವರ್ತುಲ ರಸ್ತೆೆಯನ್ನು ಅಲ್ಲಿನ ಕೆಲಸಗಾರರಿಗೆ ಒಂದು ಮೆಟ್ರೋೋ ಲೈನ್ ಮಾಡಿಸುವ ಯೋಗ್ಯತೆಯಿಲ್ಲವೆಂದರೆ ಈ ನಾಲಾಯಕ್ ಮಂತ್ರಿಿಗಳು ಯಾಕೆ ಬೇಕು? ಇವರಿಗೆ ಬೆಂಗಳೂರೆಂದರೆ ಕೇವಲ ಯಶವಂತಪುರ, ಮಲ್ಲೇಶ್ವರಂ, ಬಸವನಗುಡಿ ಮಾತ್ರ. ಇದನ್ನು ಬಿಟ್ಟು ಹೋರ ಹೋಗುವುದೇ ಇಲ್ಲ. ಇದೇ ಹೊರವರ್ತುಲ ರಸ್ತೆೆಯಲ್ಲಿ ಜಾರ್ಜ್ ಹಾಗೂ ಎಂಟಿಬಿ ನಾಗರಾಜ ಅವರ ಎಷ್ಟು ಆಫೀಸುಗಳಿವೆ.
ಇವರಿಗೆ ತಿಂಗಳಿಗೆ ಕೋಟ್ಯಂತರ ರುಪಾಯಿ ಬಾಡಿಗೆಯು ಮನೆ ಬಾಗಿಲಿಗೆ ಬರುತ್ತದೆ. ಇಷ್ಟಾಾದರೂ ಇವರುಗಳು ಕಾಮಗಾರಿಗಳನ್ನು ಮುಗಿಸುವುದೇ ಇಲ್ಲ. ಇನ್ನು ಸಂಬಳ ಪಡೆಯುವ ಅತಿ ದೊಡ್ಡ ಕೆಲಸಗಾರರ ಗುಂಪೇ ಇಲ್ಲಿದೆ. ಅತಿ ಹೆಚ್ಚು ತೆರಿಗೆ ಕಟ್ಟುವ ಜನರಿರುವ ಜಾಗವಿದು. ಇಂಥ ತೆರಿಗೆದಾರರಿಗೆ ಇಂಥ ಪರಿಸ್ಥಿಿತಿಯನ್ನು ತಂದೊಡ್ಡುವ ನಮ್ಮ ಪಡಪೋಸಿ ಜನನಾಯಕರುಗಳು ಕೆಲಸಕ್ಕೆೆ ಬಾರದ ನಾಲಾಯಕ್‌ಗಳನ್ನದೇ ಇನ್ನೇನು ಅನ್ನಬೇಕು?
ಭ್ರಷ್ಟಾಾಚಾರದಿಂದ ತಿನ್ನುವ ಹಣಕ್ಕಾಾದರೂ, ಸ್ವಲ್ಪ ಮರ್ಯಾಾದೆಯನ್ನು ನೀಡಿ, ಮೂಲಭೂತ ಸೌಕರ್ಯಗಳನ್ನು ನೀಡುವ ಕೆಲಸ ಮಾಡಬೇಕಲ್ಲವೇ? ಅದನ್ನು ಬಿಟ್ಟು ಈ ಆಸಾಮಿಗಳು ಬೆಂಗಳೂರಿಗೆ ‘ಸ್ಕೈಬಸ್’ ಮಾಡಲು ಮುಂದಾಗಿದ್ದರು. ಇವರ ತಲೆಯಲ್ಲಿ ಅದ್ಯಾಾರು ಏನು ತುಂಬುತ್ತಾಾರೋ, ದೇವರೇ ಬಲ್ಲ. ಇವರ ಸುತ್ತಲೂ ಇರುವ ಪುಡಾರಿಗಳಿಂಗಂತೂ, ಕತ್ತಿಿಗೆ ಒಂದು ದಪ್ಪದ ಚೈನು ಧರಿಸಿಕೊಂಡು ಹೆದರಿಸಿಕೊಂಡು ಓಡಾಡುವ ಯೋಗ್ಯತೆ ಮಾತ್ರವಿದೆ.
ಪ್ರಪಂಚದ ಯಾವುದೇ ಪ್ರಮುಖ ನಗರವನ್ನು ಗಮನಿಸಿದರೂ, ಮೊದಲು ಮೆಟ್ರೋೋ ಕಾಮಗಾರಿಯು ಆಯಾ ನಗರದ ಏರ್‌ಪೋರ್ಟ್‌ನಿಂದ ಶುರುವಾಗುತ್ತದೆ. ಆದರೆ ನಮ್ಮಲ್ಲಿ ಎಲ್ಲವೂ ಉಲ್ಟಾಾ-ಪಲ್ಟಾಾ. ಏರ್‌ಪೋರ್ಟ್‌ನ ಮೆಟ್ರೋೋ ಕೊನೆಯಲ್ಲಿಯೇ ಇವರ ಕಣ್ಣಿಿಗೆ ಬೀಳುವುದು. ಇಂದಿಗೂ ಏರ್‌ಪೋರ್ಟಿಗೆ ಓಲಾ ಅಥವಾ ಉಬರ್‌ನಲ್ಲಿಯೇ ಹೋದರೆ ಕನಿಷ್ಠವೆಂದರೂ, 2000 ರುಪಾಯಿ ಬೇಕು. 2000 ರುಪಾಯಿಯಲ್ಲಿ ಮಂಗಳೂರಿಗೆ ಹೋಗಿ ಬರಬಹುದು. ಇತ್ತೀಚೆಗೆ ಈ ಕೂಗು ತುಸು ಹೆಚ್ಚಾಾಗಿದ್ದರಿಂದ ಸಬ್ ಅರ್ಬನ್ ರೈಲು ಬಳಕೆ ಮಾಡಬೇಕೆಂದು ಯೋಚನೆ ಬಂದಿದೆ. ಇನ್ನು ಈ ಸಬ್ ಅರ್ಬನ್ ರೈಲುಗಳ ವಿಚಾರದಲ್ಲಿ ಸಂಸದ ಪಿ.ಸಿ.ಮೋಹನರ ಕೊಡುಗೆಯನ್ನು ಮರೆಯುವಂತಿಲ್ಲ. ಕಳೆದ ನಾಲ್ಕು ವರ್ಷಗಳಿಂದ ಕಷ್ಟಪಟ್ಟು ಕೊನೆಗೂ ರೈಲ್ವೆೆ ಸಚಿವರ ಒಪ್ಪಿಿಗೆ ಪಡೆದು ಬೆಂಗಳೂರಿನ ಸಬ್ ಅರ್ಬನ್ ರೈಲುಗಳ ಸಂಚಾರವನ್ನು ಶುರು ಮಾಡಲಿದ್ದಾಾರೆ.
ಬೆಂಗಳೂರಿನ ಹೊರಹೊಲಯದ ಟ್ರಾಾಫಿಕ್ ಸಮಸ್ಯೆೆಗಳಿಗೆ ಕಿವುಡರಾಗಿ ಕೂತಿದ್ದ ಕಾಂಗ್ರೆೆಸ್ ಸರಕಾರ, ತಮ್ಮದೇ ಸರಕಾರವು ಕೇಂದ್ರದಲ್ಲಿದ್ದಾಾಗಲೂ ಈ ಚಿಂತನೆಯನ್ನು ಮಾಡಲಿಲ್ಲ. ಅಂತೂ ಇಂತೂ ಹಗಲು ರಾತ್ರಿಿಯೆನ್ನದೇ, ಹೊಡೆದಾಡಿ ಸಬ್ ಅರ್ಬನ್ ರೈಲು ತರುವಲ್ಲಿ ಪಿ.ಸಿ.ಮೋಹನ ಯಶಸ್ವಿಿಯಾದರು.
ಬಿಬಿಎಂಪಿ ಅಧಿಕಾರಿಗಳಿಗೆ ಅರ್ಥವಾಗದ ಸಂಗತಿಯೆಂದರೆ, ಚೆಂದದ ಪಾರ್ಕುಗಳನ್ನು ಮಾಡುವ ಬದಲು, ಸರಿಯಾದ ರಸ್ತೆೆಗಳನ್ನು ಮೊದಲು ಮಾಡಬೇಕಲ್ಲವೇ? ಚಿತ್ರ ವಿಚಿತ್ರವಾದ ಚೆಂದದ ಪಾರ್ಕುಗಳಿಗೆ ವ್ಯಯಿಸುವ ಹಣವನ್ನುಬಾಕಿಯಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ವ್ಯಯಿಸಬೇಕು ಎಂಬ ಸಾಮಾನ್ಯ ಜ್ಞಾಾನವಿಲ್ಲವಲ್ಲ ಇವರಿಗೆ.
ಮಳೆ ನಿಂತಮೇಲೆ ರಸ್ತೆೆಗಳನ್ನು ರಿಪೇರಿ ಮಾಡಬೇಕು. ಇಲ್ಲವಾದರೆ, ಎರಡು ಬಾರಿ ಟೆಂಡರ್ ಮಾಡಬೇಕೆಂಬ ಕುಂಟು ನೆಪಗಳನ್ನು ಹೇಳಿ, ಮುಂದೂಡುತ್ತಲೇ ಇರುತ್ತಾಾರೆ. ಹಾಗಾದರೆ ಬೆಂಗಳೂರಿನ ಈಗಿನ ಪರಿಸ್ಥಿಿತಿಯನ್ನು ನೋಡಿದರೆ, ಪ್ರತಿ 15 ದಿನಗಳಿಗೊಮ್ಮೆೆ ಜೋರಾದ ಮಳೆ ಬಂದೇ ಬರುತ್ತದೆ. ಹಾಗೆ ನೋಡಿದರೆ ಬೆಂಗಳೂರಿನ ರಸ್ತೆೆಗಳು ಸರಿಯಾಗುವುದೇ ಇಲ್ಲ, ಮಳೆಯೂ ನಿಲ್ಲುವುದಿಲ್ಲ. ಇತ್ತ ರಸ್ತೆೆಗಳನ್ನು ಸರಿ ಮಾಡುವುದಿಲ್ಲ. ಈ ಗುಂಡಿಗಳಲ್ಲಿ ಬಿದ್ದು, ಕೈಕಾಲು ಮುರಿದುಕೊಂಡವರ ಪರಿಸ್ಥಿಿತಿಯಂತೂ ಹೇಳ ತೀರದು. ಹಲವು ಮಂದಿ ಸತ್ತೇ ಹೋಗಿದ್ದಾಾರೆ. ಕೆಟ್ಟ ಮೇಲೆ ಬುದ್ಧಿಿ ಬರದಂತಹ ಪರಿಸ್ಥಿಿತಿ ನಮ್ಮ ಬೆಂಗಳೂರು ಉಸ್ತುವಾರಿವಹಿಸಿಕೊಂಡ ನಾಯಕರದ್ದು.
ಹೈಕೋರ್ಟ್ನಿಿ ತೀರ್ಪಿನ ಮೇರೆಗೆ ಸ್ವಲ್ಪ ದಿನಗಳ ಕಾಲ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಿ, ಮತ್ತೆೆ ಮಳೆ ಬಂದು ಮತ್ತದೇ ಅವಾಂತರಗಳ ಗೂಡಾಗಿ ಬೆಂಗಳೂರಿನ ಅಭಿವೃದ್ಧಿಿ ಕಾರ್ಯಗಳು ನಡೆಯುತ್ತಿಿದೆ. ಈ ಗುಂಡಿ ತುಂಬಿದ ರಸ್ತೆೆಗಳಲ್ಲಿ ಇನ್ನು ಹಳದಿ ಬಣ್ಣದ ಕಾರುಗಳದ್ದೇ ಕಾರುಬಾರು. ಅಕ್ಕ ಪಕ್ಕ ನೋಡದೇ ನುಗ್ಗುತ್ತಿಿರುತ್ತವೆ. ಒಟ್ಟಿಿನಲ್ಲಿ ನೆಮ್ಮದಿಯಾಗಿ ಆಫೀಸ್‌ಗೆ ಹೋಗಲು ಸಾಧ್ಯವಿಲ್ಲ. ಹಾಗೇ ಸಂಜೆ ನೆಮ್ಮದಿಯಾಗಿ ಮನೆ ಮುಟ್ಟಲು ಸಾಧ್ಯವಿಲ್ಲದಂಥ, ಒಂದು ರೀತಿ ನರಕದಂಥ ಪರಿಸ್ಥಿಿತಿಗೆ ಬೆಂಗಳೂರನ್ನು ನಮ್ಮ ಜನಪ್ರತಿನಿಧಿಗಳು ತಂದು ನಿಲ್ಲಿಸಿದ್ದಾಾರೆ.
ಪರದೇಶಗಳಲ್ಲಿ ಹೇಳಿಕೊಳ್ಳುಲು ಉದ್ಯಾಾನ ನಗರಿ, ಐಟಿ, ಬಿಟಿ, ವಿದ್ಯಾಾವಂತರ ನಗರ. ಆದರೆ ಇಲ್ಲಿ ವಾಸಿಸುವವರಿಗಷ್ಟೇ ಗೊತ್ತು; ಇಲ್ಲಿನ ನರಕದರ್ಶನ.
ಈ ಮಧ್ಯೆೆ ಕೆಲವು ಪುಂಡರ ಜೈಕಾರಗಳ ಮೆರವಣಿಗೆಗಳ ಹಾವಳಿಯೂ ಆಗಾಗ ಕಂಡುಬರುತ್ತದೆ. ಇನ್ನು ಈ ದೂಳಿನ ನಡುವೆ ನಮ್ಮ ಸಂಚಾರಿ ಪೊಲೀಸರ ಪಾಡು ಹೇಳುವಂತಿಲ್ಲ. ಪಾಪ, ಅವರು ನಮಗೆ ದುಡ್ಡು ವಸೂಲಿ ಮಾಡುವವರಂತೆ ಕಾಣುತ್ತಾಾರೆ. ಆದರೆ ಅವರು ಬೆಳಗಿನಿಂದ ಸಂಜೆಯವರೆಗೂ ಸಿಗ್ನಲ್‌ಗಳಲ್ಲಿ ನಿಂತು ವಾಹನದ ಹೊಗೆ ಮಿಶ್ರಿಿತ ಗಾಳಿಯ ಉಸಿರಾಟದಿಂದ ಅವರು ಆನಾರೋಗ್ಯದಿಂದ ಬಳಲುತ್ತಿಿರುತ್ತಾಾರೆ. ಟ್ರಾಾಫಿಕ್ ಪೊಲೀಸರ ಆರೋಗ್ಯ ವಿಚಾರವಾಗಿ ನಮ್ಮ ಸರಕಾರಗಳು ಏನನ್ನೂ ಮಾಡುತ್ತಿಿಲ್ಲ. ಚುನಾಯಿತ ಆಸಾಮಿಗಳು ಮಾತ್ರ ಹವಾನಿಯಂತ್ರಿಿತ ಕಾರುಗಳಲ್ಲಿ ಕೂತು ನಗರ ಪ್ರದಕ್ಷಿಿಣೆಯನ್ನು ಮುಗಿಸಿ, ಮಾಧ್ಯಮಗಳ ಮುಂದೆ ನಿಂತು ಹೇಳಿಕೆಗಳನ್ನು ನೀಡಿ ಕೈ ತೊಳೆದುಕೊಳ್ಳುತ್ತಾಾರೆ.
ಇನ್ನು ನಮ್ಮ ದೃಶ್ಯ ಮಾಧ್ಯಮಗಳು ಕೂಡ ಹಾಗೇ ಇವೆ. ನಲಪ್ಪಾಾಡ್ ಬೆಳಗ್ಗೆೆ ಎದ್ದು ಬಾತ್ ರೂಮ್‌ಗೆ ಹೋದುದ್ದನ್ನು ಬ್ರೇಕಿಂಗ್ ನ್ಯೂಸ್ ಮಾಡುವ ಬದಲು, ಪ್ರತಿನಿತ್ಯ ಜನರು ಅನುಭವಿಸುವ ಯಾತನೆಗಳಿಂದ ಆಗುವ ಅನಾನುಕೂಲಗಳನ್ನು ಸುದ್ದಿ ಮಾಡುವುದೇ ಇಲ್ಲ. ನಗರದ ಎಲ್ಲಾಾ ಮೂಲೆಗಳಲ್ಲಿಯೂ, ಇಂದು ಇದೇ ಪರಿಸ್ಥಿಿತಿಯಿದೆ. ಮೈಸೂರು ರಸ್ತೆೆಯಂತೂ ಆ ದೇವರಿಗೇ ಪ್ರೀತಿ. ಕನಕಪುರ ರಸ್ತೆೆಯ ಕಾಮಗಾರಿ ಯಾವಾಗ ಮುಗಿಯುತ್ತದೆಯೋ, ಆ ದೇವರೇ ಬಲ್ಲ. ಹಿಂದಿನ ನಾಯಕರುಗಳು ಸರಿಯಾದ ಯೋಜನೆಗಳು ಜಾರಿಗೆ ತರಲಿಲ್ಲ. ಈಗಿನ ನಾಯಕರಾದರೂ ಮುಂದಿನದ್ದನ್ನು ಯೋಚಿಸಿ, ಯೋಜನೆಗಳನ್ನು ಜಾರಿಗೆ ತರುತ್ತಾಾರೋ, ಅದು ಇಲ್ಲ.
ಕೇಂದ್ರ ಹಾಗೂ ರಾಜ್ಯ ಎರಡೂ ಕಡೆ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ, ಎಲ್ಲವನ್ನೂ ಮಾಡುತ್ತೇವೆಂದು ಬಡಾಯಿ ಕೊಚ್ಚಿಿಕೊಂಡವರ ನೂರು ದಿವಸವೂ ಮುಗಿಯಿತು. ತಮ್ಮ ನೂರು ದಿವಸಗಳ ಸಾಧನೆಯ ಪುಸ್ತಕದಲ್ಲಿ ಬೆಂಗಳೂರಿನ ಸಮಸ್ಯೆೆಗಳ ಸಾಧನೆಯ ಮಹತ್ವದ ವಿಷಯಗಳೇ ಇರಲಿಲ್ಲ. ಇದರ ಜತೆಗೆ ಈಗ ಬಿಬಿಎಂಪಿಯಲ್ಲೂ ಬಿಜೆಪಿಯೇ ಅಧಿಕಾರದಲ್ಲಿದೆ. ಕೇಂದ್ರ, ರಾಜ್ಯ, ಬೆಂಗಳೂರಲ್ಲೂ ಒಂದೇ ಸರಕಾರವಿದೆ. ಈಗಲಾದರೂ ಮನಸ್ಸು ಮಾಡಿ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸುವಂತೆ ಕಾಣುತ್ತಿಿಲ್ಲ.
ದೇಶದ ಪ್ರಮುಖ ನಗರಗಳಿಗೆ ಸ್ಪರ್ಧೆಯೊಡ್ಡಿಿ ಬೆಳೆಯುತ್ತಿಿರುವ ಬೆಂಗಳೂರು ನಗರವನ್ನು ಈ ಪರಿ ಸರಿಯಾದ ದೂರಾಲೋಚನೆಯಿಲ್ಲದೇ, ಅಭಿವೃದ್ಧಿಿ ಮಾಡುತ್ತಿಿರುವುದು ಮಾತ್ರ ಅಸಹ್ಯಕರ. ಸಾಲದಲ್ಲಿರುವ ಬಿಬಿಎಂಪಿ ಏನೋ ಒಂದು ಪ್ಯಾಾಕೇಜ್ ನೀಡಿ, ಮುಕ್ತಗೊಳಿಸಿ. ಇನ್ನುಮುಂದಾದರೂ ಸರಿಯಾದ ರೀತಿಯಲ್ಲಿ ಕೆಲಸ ಮಾಡಿಸುವ ಯೋಚನೆಗಳನ್ನು ಸಹ ಮಾಡುತ್ತಿಿಲ್ಲ. ನಾವು ಬೆಂಗಳೂರನ್ನು ಸಿಂಗಪುರ ಮಾಡಿ ಎಂದು ಕೇಳುತ್ತಿಿಲ್ಲ, ಕೇವಲ ಮೂಲಭೂತ ಸಮಸ್ಯೆೆಗಳನ್ನು ಬಗೆಹರಿಸಿದರೆ ಸಾಕು, ಎಷ್ಟೋೋ ಪ್ರಯೋಜನವಾಗುತ್ತದೆ.
20 ವರ್ಷಗಳ ಹಿಂದೆ, ಅಂದಿನ ಮುಖ್ಯಮಂತ್ರಿಿ ಎಸ್‌ಎಮ್ ಕೃಷ್ಣ ಬೆಂಗಳೂರನ್ನು ಸಿಂಗಪುರ ಮಾಡುತ್ತೇನೆಂದು ಹೇಳಿದ್ದರು. ಇಷ್ಟು ವರ್ಷಗಳಾದರೂ ಬೆಂಗಳೂರಿನ ರಸ್ತೆೆಗಳೇ ಸರಿಯಾಗಿಲ್ಲ. ಎಲ್ಲಿಂದ ಸಿಂಗಪುರ ಮಾಡುವುದು? ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ನೀಡುವ ನಗರದ ಪರಿಸ್ಥಿಿತಿಯೇ ಹೀಗಾದರೆ, ನಾವೇಕೆ ತೆರಿಗೆ ಕಟ್ಟಬೇಕು. ಕಟ್ಟುವುದು ತುಸು ಕಡಿಮೆಯಾದರೂ, ನೋಟಿಸ್‌ಗಳು ಬಂದು ಮನೆ ಬಾಗಿಲಿಗೆ ಬೀಳುತ್ತವೆ. ಯಾವ ಯೋಗ್ಯತೆಯ ಆಧಾರದಮೇಲೆ ಇವರು ನಮ್ಮಿಿಂದ ತೆರಿಗೆ ವಸೂಲಿ ಮಾಡುತ್ತಾಾರೆ? ಸಾಕಪ್ಪ ಸಾಕು ಅನ್ನುವಂಥ ಅನುಭವವಾಗಿ ಹೋಗಿದೆ. ಎಲ್ಲರೂ ಭಾಷಣಕಾರರೇ. ಯಾರಿಗೂ ಒಳ್ಳೆೆಯ ಕೆಲಸ ಮಾಡುವ ಇಚ್ಛಾಾಶಕ್ತಿಿಯಿಲ್ಲ.
ಬೆಂಗಳೂರಿನ ಈಗಿನ ಉಸ್ತುವಾರಿಯನ್ನು ಸ್ವತಃ ಮುಖ್ಯಮಂತ್ರಿಿಗಳೇ ಹೊತ್ತಿಿರುವುದರಿಂದ ಏನನ್ನಾಾದರೂ ಮಾಡುತ್ತಾಾರೆಂಬ ನಿರೀಕ್ಷೆೆಯಿದೆ. ಆದರೆ ಮತ್ತದೇ ಹುಸಿ ನಿರೀಕ್ಷೆೆಯಾಗದಿದ್ದರೆ ಸಾಕು.
ಉದ್ಯಾಾನಗಳ ನಗರಿಯಾಗಿದ್ದ, ಚೆಂದದ ಬೆಂಗಳೂರನ್ನು ಪ್ರತಿನಿತ್ಯವೂ ಗುಂಡಿಗಳು, ದೂಳಿನಿಂದ ಕೂಡಿದ ನಗರವನ್ನಾಾಗಿಸಿದ ಕೀರ್ತಿ ನಾವು ಆಯ್ಕೆೆ ಮಾಡಿದ ಜನಪ್ರತಿನಿಧಿಗಳಿಗೆ ಸಲ್ಲಬೇಕು.