Friday, 29th November 2024

ಹೆಚ್ಚಿನ ಗುರಿ ಸಾಧನೆಗೆ ಗೌತಮ್ ಬುದ್ದನಾಗಲಿ !

ಅಭಿಮತ

ರವೀ ಸಜಂಗದ್ದೆ

ಟಿ೨೦ ವಿಶ್ವಕಪ್ ಗೆಲುವಿನ ತೃಪ್ತಿಯೊಂದಿಗೆ ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತಿದಾರ ರಾಹುಲ್ ದ್ರಾವಿಡ್ ನೇಪಥ್ಯಕ್ಕೆ ಸರಿದಿದ್ದಾರೆ. ಭಾರತದ ಮಾಜಿ ಆರಂಭಿಕರಾದ ಗೌತಮ್ ಗಂಭೀರ್ ಮತ್ತು ಡಬ್ಲ್ಯು.ವಿ. ರಾಮನ್ ಅವರನ್ನು ರಾಷ್ಟ್ರೀಯ ತಂಡದ ಮುಖ್ಯ ತರಬೇತಿದಾರ ಸ್ಥಾನಕ್ಕಾಗಿ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿಯು ಸಂದರ್ಶನ ನಡೆಸಿತ್ತು. ಈ ಹುzಯ ಸ್ಪರ್ಧೆಯಲ್ಲಿ ಗೌತಮ್ ಹೆಸರು ಗಂಭೀರವಾಗಿ ಮುಂಚೂಣಿಯಲ್ಲಿತ್ತು.

ನಿರೀಕ್ಷೆಯಂತೆ, ತಿಂಗಳಿನಿಂದ ಹರಿದಾಡುತ್ತಿದ್ದ ಗಾಳಿ ಸುದ್ದಿ ನಿಜವಾಗಿದೆ. ಗೌತಮ್ ಗಂಭೀರ್ ಭಾರತ ಕ್ರಿಕೆಟ್ ತಂಡದ ಮುಖ್ಯ ತರಬೇತಿದಾರರಾಗಿ
ಆಯ್ಕೆಯಾಗಿದ್ದಾರೆ. ಅಭಿನಂದನೆಗಳು. ೨೦೦೩ರಿಂದ ೨೦೧೬ರವರೆಗೆ ತಂಡದ ಭಾಗವಾಗಿದ್ದ ಗೌತಮ್ ಗಂಭೀರ್ ಮೂರೂ ಮಾದರಿಯಲ್ಲಿ ಆರಂಭಿಕ ರಾಗಿ ಗಮನಾರ್ಹ ಪ್ರದರ್ಶನದ ಠ್ಟಿZh ಛ್ಚಿಟ್ಟb ಹೊಂದಿರುವ ಎಡಗೈ ದಾಂಡಿಗ. ೨೦೦೭ರ ಟಿ೨೦ ವಿಶ್ವಕಪ್ ಫೈನಲ್ ಮತ್ತು ೨೦೧೧ರ ಏಕದಿನ ವಿಶ್ವಕಪ್
ಫೈನಲ್ – ಎರಡೂ ಪಂದ್ಯಗಳಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ ಅಪರೂಪದ ದಾಖಲೆ ಹೊಂದಿದ್ದಾರೆ.

ಹಾಗಿದ್ದೂ, ಎರಡೂ ಫೈನಲ್ ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗಂಭೀರ್‌ಗೆ ಒಲಿಯದಿದ್ದುದು ಮತ್ತೊಂದು ವಿಶಿಷ್ಟ ದಾಖಲೆ! ೨೦೦೭ ರ ಟಿ೨೦ ಫೈನಲ್ ಪಂದ್ಯದಲ್ಲಿ ಕೇವಲ ೫೪ ಎಸೆತಗಳಲ್ಲಿ ೭೫ ರನ್ ಕಲೆಹಾಕಿ ತಂಡ ಪೈಪೋಟಿಯುತ ಮೊತ್ತ (೧೫೭) ಪೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಂತರ ಇರ್ಫಾನ್ ಪಠಾಣ್ ಅವರ ೪-೦-೧೬-೩ bowling figure ಪಂದ್ಯಶ್ರೇಷ್ಠ ಪ್ರಶಸ್ತಿ ಬಾಚಿಕೊಂಡು ಗಂಭೀರ್ ಆ ಪ್ರಶಸ್ತಿಯಿಂದ ವಂಚಿತ ರಾದರು. ಅದು ಟಿ೨೦ ಫೈನಲ್ಸ್ ಪಂದ್ಯದ ಸಾರ್ವಕಾಲಿಕ ಶ್ರೇಷ್ಠ ಇನ್ನಿಂಗ್ಸ್ ಗಳಂದು. ೨೦೧೧ರ ಏಕದಿನ ವಿಶ್ವಕಪ್ ಫೈನಲ್ಸ್ ನಲ್ಲಿ ಧೋನಿ ೯೧ ರನ್ ಹೊಡೆದು finisher ಆಗಿ ಮಿಂಚಿ ಇತಿಹಾಸ ಮತ್ತು ಕ್ರಿಕೆಟ್ ಪ್ರೇಮಿಗಳ ಹೃದಯದಲ್ಲಿ ದಾಖಲಾದರು. ಆ ಪಂದ್ಯದಲ್ಲಿ ಕೆಚ್ಚೆದೆಯಿಂದ ಶ್ರೀಲಂಕಾ ಬೌಲರು ಗಳನ್ನು ಬೆಂಡೆತ್ತಿ ಅಮೂಲ್ಯ ೯೭ ರನ್ ಗಳಿಸಿ ಭಾರತದ ವಿಜಯಕ್ಕೆ ಬುನಾದಿ ಹಾಕಿಕೊಟ್ಟ ಗಂಭೀರ್ ಇನ್ನಿಂಗ್ಸ್ ಅಲ್ಲೂ ಅದೇ ತೀವ್ರತೆ, ಗಾಂಭೀರ್ಯ ದಿಂದ ದಾಖಲಾಗಲಿಲ್ಲ!

It’s truly a superlative innings under pressure. ಕೊಂಚ ತರಾತುರಿಗೆ ಬಿದ್ದು ಔಟಾಗಿರದಿದ್ದರೆ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿ ತಂಡದ ಗೆಲುವಿಗೆ ಪಾತ್ರರಾದ ಕೆಲವೇ ಕೆಲವು ಶ್ರೇಷ್ಠ ಆಟಗಾರರ ಛ್ಝಿಜಿಠಿಛಿ ಚಿನಲ್ಲಿ ಅವರ ಹೆಸರು ಇರುತ್ತಿತ್ತು. ಆ ಕ್ಷಣ, ದಿನ ಮತ್ತು ಅಷ್ಟರ ಮಟ್ಟಿನ ತಾಳ್ಮೆ, ಅದೃಷ್ಟ ಯಾವುದೂ ಗಂಭೀರ್ ಜತೆಗಿರಲಿಲ್ಲ.

ಕ್ರಿಕೆಟ್ ಆಟದಿಂದ ನಿವೃತ್ತಿಯ ನಂತರ ದಶಕಗಳ ಕಾಲ ಪೂರ್ವ ದೆಹಲಿಯ ಸಂಸದರಾಗಿ ಗಂಭೀರ್ ಸೇವೆ ಸಲ್ಲಿಸಿ ಸೈ ಎನಿಸಿಕೊಂಡಿದ್ದಾರೆ. ಜತೆಜತೆಗೆ ಐಪಿಎಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕರಾಗಿ ಎರಡು ಬಾರಿ ಕಪ್ ಗೆಲ್ಲಿಸಿದ್ದಾರೆ. ೨೦೨೪ರಲ್ಲಿ ಕೆಕೆಆರ್ ತಂಡದ ಮೆಂಟರ್ ಆಗಿ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಪ್ರಸ್ತುತ ಭಾರತ ಕ್ರಿಕೆಟ್ ತಂಡ ಟಿ೨೦ ಚಾಂಪಿಯನ್ ಆಗಿ ಹೊರಹೊಮ್ಮಿ ಉತ್ತುಂಗದಲ್ಲಿದೆ. ತಂಡದ ಹಿರಿಯ ಮತ್ತು ಆಧಾರ ಸ್ತಂಭಗಳಾಗಿದ್ದ ರೋಹಿತ್, ವಿರಾಟ್, ಜಡೇಜಾ ನಿವೃತ್ತಿ ಘೋಷಿಸಿದ್ದಾರೆ.

ಹೊಸ ಯುವ ಆಟಗಾರರನ್ನು ಅಂತಾರಾಷ್ಟ್ರೀಯ ಪಂದ್ಯಗಳಿಗೆ ಸಜ್ಜುಗೊಳಿಸಿ ನಿರಂತರ ಗೆಲುವಿಗಾಗಿ ಹಪಹಪಿಸುವ, ಕೆಚ್ಚೆದೆಯ ಹೋರಾಟದ ಸಮೃದ್ಧ ತಂಡವನ್ನು ಟೆಸ್ಟ್, ಏಕದಿನ ಮತ್ತು ಟಿ೨೦ – ಈ ಮೂರೂ ಮಾದರಿಯಲ್ಲಿ ಕಟ್ಟಬೇಕಿದೆ. ಗಂಭೀರ್ ಈ ಕಾರ್ಯಯೋಜನೆಗಳನ್ನು ಎಷ್ಟರ ಮಟ್ಟಿಗೆ ಸಮರ್ಥವಾಗಿ ನಿರ್ವಹಿಸಿ ಯಶ ಕಾಣಲಿದ್ದಾರೆ ಎನ್ನುವುದು ಸದ್ಯಕ್ಕಿರುವ ಕುತೂಹಲ.

ರಣಜಿ ಮುಂತಾದ ಪಂದ್ಯಗಳಲ್ಲಿ ಆಡಿ ಸ್ಥಿರತೆಯತ್ತ ಗಮನ ಹರಿಸುವ ಬದಲು ಕೇವಲ ಐಪಿಎಲ್ ಆಡಿ ರಾಷ್ಟ್ರೀಯ ತಂಡದ ಬಾಗಿಲು ತಟ್ಟುತ್ತಿರುವ ಯುವ ಆಟಗಾರರ ಸಂಖ್ಯೆ ದೊಡ್ಡದಿದೆ. ಭಾರತದ ಕ್ರಿಕೆಟ್ ನ ಅಭಿವೃದ್ಧಿ ಮತ್ತು ಭವಿಷ್ಯದ ದೃಷ್ಟಿಯಿಂದ ಇದು ಖಂಡಿತಾ ಪೂರಕ ಬೆಳವಣಿಗೆಯಲ್ಲ. ಗೌತಮ್ ಮತ್ತು ಆಯ್ಕೆ ಸಮಿತಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ನಿರ್ಣಯ ಕೈಗೊಳ್ಳಬೇಕಿದೆ. ಗೌತಮ್ ಗಂಭೀರ್ ಮುಖ್ಯ ತರಬೇತಿದಾರ ಹುದ್ದೆಯ ಅಧಿಕಾರಾವದ್ದೆ ದಶಂಬರ ೩೧, ೨೦೨೭ರವರೆಗೆ ಇದೆ. ೨೦೨೫ರಲ್ಲಿ ಐಸಿಸಿ ಚಾಂಪಿಯ ಟ್ರೋಫಿ ಪಂದ್ಯಾವಳಿ ಪಾಕಿಸ್ತಾನದಲ್ಲಿ ನಿಗದಿಯಾಗಿದೆ. ಅದೇ ವರ್ಷ ವಿಶ್ವ ಐಸಿಸಿ ಟೆ ಚಾಂಪಿಯನ್ಶಿಪ್ ಫೈನಲ್ಸ್ ಲಾಡ್ಜ್ ಮೈದಾನದಲ್ಲಿ ನಡೆಯಲಿದೆ. ೨೦೨೬ರಲ್ಲಿ ಟಿ೨೦ ವಿಶ್ವಕಪ್ ಪಂದ್ಯಾವಳಿ ಭಾರತ-ಶ್ರೀಲಂಕಾದ ಜಂಟಿ ಆಯೋಜನೆಯಲ್ಲಿ ನಡೆಯಲಿದೆ.

೨೦೨೭ರಲ್ಲಿ ಏಕದಿನ ವಿಶ್ವಕಪ್ ಪಂದ್ಯಾವಳಿ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ದೇಶಗಳಲ್ಲಿ ನಡೆಯಲಿದೆ.  ಇದಲ್ಲದೆ ಏಷ್ಯಾ ಕಪ್ ಪಂದ್ಯಾವಳಿ ಇದೆ. ಜೊತೆಗೆ ಅಂದಾಜು ೨೫ ಟೆ, ೪೦ ಏಕದಿನ ಮತ್ತು ೫೦ ಟಿ೨೦ ಪಂದ್ಯಗಳ ದ್ವಿಪಕ್ಷೀಯ ಪಂದ್ಯಾವಳಿಗಳನ್ನು ವಿವಿಧ ದೇಶಗಳೆದುರು
ಗಂಭೀರ್ ಮುಖ್ಯ ತರಬೇತಿದಾರಾಗಿ ಭಾರತ ಆಡಲಿದೆ. ನಿರೀಕ್ಷೆಗಳು ಬೆಟ್ಟದಷ್ಟಿವೆ. ಸವಾಲುಗಳು ಗಂಭೀರ್‌ಗೆ ಹೊಸದೇನಲ್ಲ. ತಂಡದ ಸರ್ವಾಂಗೀಣ ಶಕ್ತಿಯನ್ನು ನಿರಂತರ ಹೆಚ್ಚಿಸಿ, ಪ್ರತಿಯೊಂದು ಪಂದ್ಯದಲ್ಲೂ ಉತ್ತಮ ತಂಡಶ್ರಮದೊಂದಿಗೆ ಶ್ರೇಷ್ಠ ಪ್ರದರ್ಶನ ಹೊರತೆಗೆಯುವ ಗುರುತರ ಜವಾಬ್ದಾರಿ
ಗುರು ಸ್ಥಾನಕ್ಕಿದೆ. ಇವರ ಕಾರ್ಯಕಾಲದಲ್ಲಿ ಭಾರತದ ಕ್ರಿಕೆಟ್ ಇನ್ನಷ್ಟು ಶಿಖರಕ್ಕೇರಲಿ.

ಮತ್ತಷ್ಟು ಪಂದ್ಯಾವಳಿಗಳು ಮತ್ತು ಚಾಂಪಿಯನ್ ಪಟ್ಟಗಳು ಪಟ್ಟು ಬಿಡದೆ ಭಾರತದ ಮುಡಿಗೇರಲಿ. ತರಬೇತಿದಾರ ಗೌತಮ್ ನೇತೃತ್ವದಲ್ಲಿ ಮತ್ತಷ್ಟು ಯಶಸ್ಸು ಭಾರತ ಕ್ರಿಕೆಟ್ ಚರಿತ್ರೆಯಲ್ಲಿ ದಾಖಲಾಗಲಿ. ಭಾರತ ತಂಡದ ಯಶಸ್ಸಿಗೆ ಗಂಭೀರ ಕೆಲಸ ಮಾಡಲು ಗೌತಮ್ ಬದ್ಧನಾಗಲಿ. ‘ನಿನ್ನ ಕೀರ್ತಿಯು ಜಗದಿ ಮೆರೆಯಲಿ ಒಂದೆ ಆಸೆಯು ಮನದಲಿ’ – ಆಶಯ ಇಷ್ಟೇ!

(ಲೇಖಕರು: ಸಾಫ್ಟ್ ವೇರ್ ಉದ್ಯೋಗಿ, ಹವ್ಯಾಸಿ ಬರಹಗಾರರು)