Saturday, 23rd November 2024

ಶಾಂತಿದೂತ ಗೀತಾ ಎಕ್ಸ್’ಪ್ರೆಸ್ ಕೋಮುವಾದಿಯಂತೆ !

ವೀಕೆಂಡ್ ವಿತ್ ಮೋಹನ್

camohanbn@gmail.com

ಗೀತಾ ಪ್ರೆಸ್ ಒಂದು ಭಾರತೀಯ ಪುಸ್ತಕ ಪ್ರಕಾಶನ ಸಂಸ್ಥೆ. ಹಿಂದೂ ಧಾರ್ಮಿಕ ಗ್ರಂಥಗಳ ವಿಶ್ವದ ಅತಿದೊಡ್ಡ ಪ್ರಕಾಶಕ ಸಂಸ್ಥೆ ಎಂಬ ಖ್ಯಾತಿ ಪಡೆದಿದೆ. ಉತ್ತರ ಪ್ರದೇಶ ರಾಜ್ಯದ ಗೋರಖಪುರದಲ್ಲಿ ತನ್ನ ಮುಖ್ಯ ಕಚೇರಿಯನ್ನು ಹೊಂದಿದೆ.

೧೯೨೩ರಲ್ಲಿ ಜಯ ದಯಾಳ್ ಗೋಯಾಂಕ ಮತ್ತು ಘನಶ್ಯಾಮ್ ದಾಸ್ ಜಲನ್ ಅವರು ಸನಾತನ ಧರ್ಮದ ತತ್ವಗಳನ್ನು ಪ್ರಚಾರ ಮಾಡಲು ಈ ಸಂಸ್ಥೆಯನ್ನು ಸ್ಥಾಪಿಸಿದ್ದರು. ಭಾಯಿಜೀ ಎಂದು ಕರೆಯಲ್ಪಡುವ ಹನುಮಾನ್ ಪ್ರಸಾದ್ ಪೊದ್ದಾರ್ ಅವರು ಅದರ ಪ್ರಸಿದ್ಧ ನಿಯತಕಾಲಿಕದ ಸಂಸ್ಥಾಪಕ ಮತ್ತು ಜೀವಮಾನದ ಸಂಪಾದಕರಾಗಿದ್ದರು. ಅವರು ಶಿವ್ ಎಂಬ ಹೆಸರಿನ ಮೂಲಕ ‘ಕಲ್ಯಾಣ್’ ಎಂಬ ಪತ್ರಿಕೆಯನ್ನು ಪ್ರಕಟಿಸಿದರು.

೧೯೨೭ರಲ್ಲಿ ಈ ಪತ್ರಿಕೆ ೧,೬೦೦ ಪ್ರತಿಗಳ ಚಲಾವಣೆಯೊಂದಿಗೆ ಪ್ರಕಟಣೆಯನ್ನು ಪ್ರಾರಂಭಿಸಿತು ಮತ್ತು ಪ್ರಸ್ತುತ ಅದರ ಮುದ್ರಣ ಸಂಖ್ಯೆ ೩ ಲಕ್ಷ ತಲುಪಿದೆ. ಗೀತಾ ಪ್ರೆಸ್ ತನ್ನ ಆರ್ಕೈವ್ಸ್‌ನಲ್ಲಿ ಭಗವದ್ಗೀತೆಯ ೧೦೦ಕ್ಕೂ ಹೆಚ್ಚು ವ್ಯಾಖ್ಯಾನಗಳನ್ನು ಒಳಗೊಂಡಂತೆ ೩,೫೦೦ ಕ್ಕೂ ಹೆಚ್ಚು ಹಸ್ತಪ್ರತಿಗಳನ್ನು ಒಳಗೊಂಡಿದೆ.

ಸ್ಥಾಪನೆಯಾದಾಗಿನಿಂದ ಗೀತಾ ಪ್ರೆಸ್ ‘ಭಗವದ್ಗೀತೆ’ಯ ೧೪೦ ಮಿಲಿಯನ್‌ಗಿಂತಲೂ ಹೆಚ್ಚು ಪ್ರತಿ ಮತ್ತು ‘ರಾಮಚರಿತಮಾನಸ’ದ ೧೦೦ ಮಿಲಿಯನ್ ಪ್ರತಿಗಳನ್ನು ಸಬ್ಸಿಡಿ ದರದಲ್ಲಿ ಪ್ರಕಟಿಸಿದೆ. ಗೀತಾ ಪ್ರೆಸ್ ೨೦೨೨ರಲ್ಲಿ ತನ್ನ ನೂರು ವರ್ಷಗಳನ್ನು ಪೂರೈಸಿತು. ಮಾಜಿ ರಾಷ್ಟ್ರಪತಿ ಗಳಾದ ರಾಮ್‌ನಾಥ್ ಕೋವಿಂದ್ ಅವರು ಮೇ ೪, ೨೦೨೨ರಂದು ಸಂಸ್ಥೆಯ ಶತಮಾನೋತ್ಸವಕ್ಕೆ ಚಾಲನೆ ನೀಡಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇದೇ ಸಂದರ್ಭದಲ್ಲಿ ಅಭಿನಂದಿಸಿದ್ದರು. ೧೮ ಜೂನ್ ೨೦೨೩ ರಂದು, ಗೀತಾ ಪ್ರೆಸ್ ಸಂಸ್ಥೆಗೆ ಪ್ರತಿಷ್ಠಿತ ‘ಗಾಂಧಿ ಶಾಂತಿ ಪ್ರಶಸ್ತಿ’ ಯನ್ನು ಘೋಷಿಸಲಾಗಿದೆ. ಬಹುತೇಕರ ಮನೆಯಲ್ಲಿ ಕಾಣಸಿಗುವ ಭಗವದ್ಗೀತೆಯ ಪುಸ್ತಕಗಳ ಮುದ್ರಕರು ಇವರೇ.

ಸರಳ ಭಗವದ್ಗೀತೆಯ ಸಣ್ಣಸಣ್ಣ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ದೇಶದ ಮೂಲೆ ಮೂಲೆಗಳಿಗೆ ತಲುಪಿಸುವ ಕೆಲಸನ್ನು ಅದು ಮಾಡುತ್ತ ಬಂದಿದೆ. ಭಗವದ್ಗೀತೆಯ ಅಷ್ಟೂ ಅಧ್ಯಾಯಗಳನ್ನು ಎಳೆ ಎಳೆಯಾಗಿ ವಿವರಿಸುವ, ಸುದೀರ್ಘ ವ್ಯಾಖ್ಯಾನ, ವಿಶ್ಲೇಷಣೆಗಳನ್ನೊಳಗೊಂಡ ಪುಸ್ತಕ ಗಳನ್ನೂ ಪ್ರಕಟಿಸಿದೆ. ಮಹಾಭಾರತದಂತಹ ಮಹಾನ್ ಕೃತಿಗಳನ್ನು ನಾನಾ ಆಯಾಮಗಳಲ್ಲಿ ಪ್ರಕಟಿಸಿದೆ. ಗೀತಾಪ್ರೆಸ್ ಸಂಸ್ಥೆಯ ಮತ್ತೊಂದು ಪ್ರಮುಖ ಪ್ರಕಟಣೆ ‘ವಾಲ್ಮೀಕಿ ರಾಮಾಯಣ’ ರಾಮಾಯಣದ ವಿವಿಧ ಕಥೆಗಳು.

ಸಂಪೂರ್ಣ ರಾಮಾಯಣ, ಸರಳ ರಾಮಾಯಣ ಗಳಂತಹ ವಿಶೇಷ ಕೃತಿಗಳನ್ನೂ ಪ್ರಕಟಿಸಿ ಜನಮನ್ನಣೆಗಳಿಸಿದೆ. ಮದು ಶತಮಾನದಿಂದ ವೇದಗಳು, ಪುರಾಣಗಳು, ಉಪನಿಷದ್ ಗಳನ್ನು ಪ್ರಕಟಿಸಿ ಸನಾತನ ಧರ್ಮದ ವಿಚಾರಧಾರೆಗಳನ್ನು ಪ್ರಚುರಪಡಿಸುತ್ತ ಬಂದಿದೆ. ಇಂಥ ಪ್ರತಿಷ್ಠಿತ ಸಂಸ್ಥೆಗೆ ನೀಡಿರುವ ‘ಗಾಂಽ ಶಾಂತಿ ಪ್ರಶಸ್ತಿ’ ನಿರೀಕ್ಷಿಸಿದಂತೆ ಕಾಂಗ್ರೆಸಿನ ಕೆಂಗಣ್ಣಿಗೆ ಗುರಿಯಾಗಿದೆ. ಹಿಂದೂ ಧರ್ಮದ ಗ್ರಂಥಗಳು ಜನರಿಗೆ ತಲುಪುವುದು ಕಾಂಗ್ರೆಸ್‌ಗೆ ಇಷ್ಟವಿಲ್ಲ. ಮಿಷನರಿಗಳು ‘ಗಿಡಿಯನ್ ಬೈಬಲ್ ’ಗಳ ಕೋಟಿಗಟ್ಟಲೆ ಪ್ರತಿಗಳನ್ನು ಅಮಾಯಕರ ಮನೆಮನೆಗೆ
ತಲುಪಿಸಿ ಮತಾಂತರ ಪ್ರೋತ್ಸಾಹಿಸುವ ಕಾಂಗ್ರೆಸ್‌ಗೆ, ಭಗವದ್ಗೀತೆಯನ್ನು ಪ್ರಕಟಿಸುವ ಗೀತಾ ಪ್ರೆಸ್ ಅನ್ನು ಕಂಡರೆ ಉರಿ ಜಾಸ್ತಿ.

ಮತ್ತೊಂದೆಡೆ ಕಾಂಗ್ರೆಸಿನ ‘ಆಲ್ ಟೈಮ್ ಪಾರ್ಟನರ್ಸ್’ ಕಮ್ಯುನಿಸ್ಟರಿಗೆ ಭಗವದ್ಗೀತೆ, ಮಹಾಭಾರತ, ರಾಮಾಯಣ, ವೇದಗಳೆಂದರೆ ಅಲರ್ಜಿ. ಸನಾತನ ಧರ್ಮದ ಆಚರಣೆಗಳ ವಿರುದ್ಧ ಸುಳ್ಳು ಸುದ್ದಿಗಳನ್ನು ಪ್ರಕಟಿಸಿ ಪುಸ್ತಕದ ರೂಪದಲ್ಲಿ ಜನರಿಗೆ ತಲುಪಿಸುತ್ತಿರುತ್ತಾರೆ. ಶ್ರೀರಾಮನ ಅಸ್ತಿತ್ವವನ್ನೇ ಪ್ರಶ್ನಿಸಿ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದ್ದ ಕಾಂಗ್ರೆಸ್‌ನ ಹಿಂದಿರುವ ಕೈ ಕಮ್ಯುನಿಸ್ಟ್ ಲೇಖಕರದ್ದೇ. ಗೀತಾ ಪ್ರೆಸ್ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸಿನ ಜೈರಾಮ್ ರಮೇಶ್, ಅಕ್ಷಯ ಮುಕುಲ ೨೦೧೫ರಲ್ಲಿ ಬರೆದಿರುವ ‘ಗೀತಾ ಪ್ರೆಸ್ ಅಂಡ್ ದಿ ಮೇಕಿಂಗ್ ಆ ಹಿಂದುತ್ವ’ ಪುಸ್ತಕವನ್ನು ಉಲ್ಲೇಖಿಸಿ ಟೀಕಿಸಿದ್ದಾರೆ.

ಕಾಶ್ಮೀರ ಪಂಡಿತರ ಸಾವಿಗೆ ಕಾರಣನಾಗಿದ್ದ ಉಗ್ರ ಯಾಸೀನ್ ಮಲಿಕ್‌ನ ಪರವಾಗಿ ನಿಂತಿದ್ದ ಕಮ್ಯುನಿಸ್ಟ್ ಲೇಖಕಿ ಅರುಂಧತಿ ರಾಯ ಬರೆದಿರುವ ವಿಚಾರಗಳನ್ನು ಈ ಪುಸ್ತಕದಲ್ಲಿ ಉಖಿಸಲಾಗಿದೆ. ಮತ್ತೊಬ್ಬ ಕಮ್ಯುನಿಸ್ಟ್ ಲೇಖಕ ರಾಮಚಂದ್ರ ಗುಹ ವಿಚಾರಗಳನ್ನೂ ಈ ಪುಸ್ತಕದಲ್ಲಿ ಉಲ್ಲೇಖಿಸ ಲಾಗಿದೆ. ಹಿಂದೂ ಧರ್ಮವನ್ನು ಕಂಡರೆ ಉರಿದು ಬೀಳುವ ಈ ಇಬ್ಬರೂ ಲೇಖಕರ ಪುಸ್ತಕದ ಒಳಾರ್ಥವನ್ನು ನಾನು ಹೇಳಬೇಕಿಲ್ಲ. ಗೀತೆಯು ಜೀವನದ ಪಾಠಗಳನ್ನು ಹೇಳುತ್ತದೆ. ಸಂಬಂಧ ಮತ್ತು ಕರ್ತವ್ಯದ ನಡುವಣ ವ್ಯತ್ಯಾಸವನ್ನು ಹೇಳುತ್ತದೆ.

ಶ್ರೀಕೃಷ್ಣನು ಅರ್ಜುನನಿಗೆ ತನ್ನ ಕರ್ತವ್ಯದ ಬಗ್ಗೆ ಸುದೀರ್ಘವಾಗಿ ಉಲ್ಲೇಖಿಸುವ ವಿಚಾರ ಭಾಗವದ್ಗೀತೆಯಲ್ಲಿದೆ. ಇಂತಹ ಭಗವದ್ಗೀತೆ ಲೊಡ್ಡೆಗಳಿಗೆ
ಕೋಮುವಾದದ ಪುಸ್ತಕವಾಗಿ ಕಾಣುತ್ತದೆ. ಪಶ್ಚಿಮದ ಪೀಟರ್ ಡ್ರಕ್ಕರ್ ಬರೆದಿರುವ ವ್ಯವಹಾರ ನಿರ್ವಹಣೆಯ ಪುಸ್ತಕಗಳು ಪರಿಪೂರ್ಣವಾಗಿ ಕಾಣುವವರಿಗೆ ಚಾಣಕ್ಯನ ನೀತಿಗಳು ಕೋಮುವಾದವಾಗಿ ಕಾಣುತ್ತದೆ. ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಪಕ್ಷವನ್ನು ಜಾತ್ಯತೀತವೆಂದು
ಹೇಳುವ ರಾಹುಲ್ ಗಾಂಧಿಯ ಹಿಂಬಾಲಕರಿಗೆ ಗೀತಾ ಪ್ರೆಸ್ ಕೋಮುವಾದಿ ಪ್ರಕಟಣೆಯಾಗಿ ಕಾಣುತ್ತಿದೆ. ಮಹಾತ್ಮ ಗಾಂಧಿಯವರು ಸದಾ ಭಗವದ್ಗೀತೆಯನ್ನು ಉಲ್ಲೇಖಿಸುತ್ತಿದ್ದರು. ಅವರು ಭಗವದ್ಗೀತೆ ಮತ್ತು ರಾಮಾಯಣವನ್ನು ಎಂದಿಗೂ ವಿರೋಧಿಸಿದವರಲ್ಲ. ಅವರ ಹೆಸರಿನಲ್ಲಿ ರಾಜಕೀಯ ಮಾಡುವ ಕಾಂಗ್ರೆಸ್, ರಾಮ ಒಬ್ಬ ಕಾಲ್ಪನಿಕ ವ್ಯಕ್ತಿ ಎಂದು ಕರೆಯುವವರ ಪರವಾಗಿ ನಿಲ್ಲುತ್ತದೆ.

ಅರುಂಧತಿ ರಾಯ್ ಗೀತಾ ಪ್ರೆಸ್ ಸಂಸ್ಥೆಯನ್ನು ಖಂಡಿಸುವ ಸಲುವಾಗಿ ಹಿಂದೂ ಧರ್ಮದಲ್ಲಿನ ಅಸ್ಪೃಶ್ಯ ಪದ್ಧತಿಗಳನ್ನು ಈ ಸಂಸ್ಥೆ ಪೋಷಿಸುತ್ತಿದೆ ಯೆಂದು ಸುಳ್ಳು ಹೇಳಿದ್ದರು. ದೇವಸ್ಥಾನಗಳಿಗೆ ದಲಿತರ ಪ್ರವೇಶವನ್ನು ನಿರಾಕರಿಸುವ ಅಂಶಗಳನ್ನು ತನ್ನ ಪ್ರಕಟಣೆಗಳಲ್ಲಿ ಪೋಷಿಸುತ್ತ
ಬಂದಿದೆಯೆಂದು ಆರೋಪಿಸಿದ್ದರು. ಮೌಖಿಕ ಭಯೋತ್ಪಾದಕತೆಗೆ ಹೆಸರುವಾಸಿಯಾಗಿರುವ ಲೊಡ್ಡೆಗಳದು ಪ್ರಕಟಣೆಗಳ ಆಯ್ದ ಭಾಗಗಳನ್ನು ಮಾತ್ರ ಹೆಕ್ಕಿ ಹೊರತೆಗೆದು ದೊಡ್ಡದೊಂದು ನಿರೂಪಣೆಯನ್ನು ಸೃಷ್ಟಿಸುವಲ್ಲಿ ಎತ್ತಿದ ಕೈ. ವೀರ ಸಾವರ್ಕರ್ ‘ಪತಿತ ಪಾವನ ಮಂದಿರ’ದಲ್ಲಿ ದಲಿತರಿಗೆ
ಪ್ರವೇಶ ಸಿಗುವಂತೆ ಮಾಡಿರುವ ವಿಷಯವನ್ನು ಪ್ರಸ್ತಾಪಿಸುವುದಿಲ್ಲ. ಬದಲಾಗಿ ಅವರು ಬ್ರಿಟಿಷರಿಗೆ ಬರೆದ ಪತ್ರವನ್ನು ಮಾತ್ರ ಆಯ್ದುಕೊಂಡು ದೊಡ್ಡ
ನಿರೂಪಣೆಯನ್ನು ಸೃಷ್ಟಿಸುತ್ತಿzರೆ. ಅದೇ ರೀತಿಯಲ್ಲಿ ಗೀತಾ ಪ್ರೆಸ್ ಪ್ರಕಟಿಸಿರುವ ಮಹಾತ್ಮ ಗಾಂಧಿಯವರು ಇಷ್ಟ ಪಡುತ್ತಿದ್ದಂತಹ ಭಗವದ್ಗೀತೆಯನ್ನು ಪ್ರಸ್ತಾಪಿಸುವುದಿಲ್ಲ.

ಶ್ರೀಕೃಷ್ಣ ಮತ್ತು ರಾಮನ ಆದರ್ಶಗಳನ್ನು ಪ್ರಸ್ತಾಪಿಸುವುದಿಲ್ಲ. ನೆಹರು ಕಾಲದಿಂದಲೂ ಆಯಕಟ್ಟಿನ ಸ್ಥಳಗಳಲ್ಲಿ ತಮ್ಮನ್ನು ತಾವು ಪ್ರತಿಷ್ಠಾಪಿಕೊಂಡು ಬಂದಿರುವ ಕಮ್ಯುನಿಸ್ಟರಿಗೆ ದೇಶಭಕ್ತಿ ಎಂಬುದಿಲ್ಲ. ವಿದೇಶಿ ಸಂಸ್ಕೃತಿ ಹೇರಿಕೆಯನ್ನೇ ತಮ್ಮ ದಿನನಿತ್ಯದ ಅನ್ನದ ಮೂಲವನ್ನಾಗಿಸಿಕೊಂಡು, ಪರದೇಶಗಳಿಂದ ಸಿಗುವ ಎಂಜಲು ಕಾಸಿಗೆ ಅಸೆ ಪಟ್ಟು ಭಾರತ ವಿರೋಧಿ ಮತ್ತು ಹಿಂದೂ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುತ್ತಾರೆ.
ಕಾಂಗ್ರೆಸಿಗರಿಗೆ ಮುಸಲ್ಮಾನರನ್ನು ಓಲೈಸಲು ಬೇಕಿರುವ ಅಷ್ಟೂ ಸಲಕರಣೆಗಳು ಕಮ್ಯುನಿಸ್ಟರ ಬಳಿ ಸಿಗುತ್ತದೆ.

ಹಿಂದುಗಳನ್ನು ವಿರೋಧಿಸುವ ಸಕಲ ಸಾಹಿತ್ಯ ಬಂಡಾರವೇ ಕಮ್ಯುನಿಸ್ಟರ ಬಳಿ ಇರುವುದರಿಂದ ಅವರು ಹೇಳುವ ಹಲವು ಸುಳ್ಳುಗಳನ್ನು ಕಾಂಗ್ರೆಸ್ ಕೂಡ ಹೇಳುತ್ತ ಬಂದಿದೆ. ಮುಂಬೈ ನಗರದಲ್ಲಿ ೨೦೦೮ ರಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಸಿಕ್ಕಿಬಿದ್ದ ಉಗ್ರ ಅಜ್ಮಲ್ ಕಸಬ್‌ನ ಕೈನಲ್ಲಿ ಕೇಸರಿ
ದಾರವನ್ನು ಕಂಡು ‘ಹಿಂದೂ ಭಯೋತ್ಪಾದನೆ’ಎಂಬ ನಿರೂಪಣೆಯನ್ನು ಶುರು ಮಾಡಿದ್ದರು. ನಂತರ ಆತ ಪಾಕಿಸ್ತಾನದವನು, ಹಿಂದುಗಳಿಗೆ ಕೆಟ್ಟ ಹೆಸರು ತರಲೆಂದೇ ಈ ಕೆಲಸ ಮಾಡಿದ್ದಾನೆಂಬ ಸತ್ಯ ತನಿಖೆಯಿಂದ ತಿಳಿಯಿತು.

ಮುಸ್ಲಿಂ ಯುವಕರಿಗೆ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಲು ಪ್ರೇರಣೆ ನೀಡುವ ಮೋಸ್ಟ್ ವಾಂಟೆಡ್ ವ್ಯಕ್ತಿ ಜಾಕಿರ್ ನಾಯಕ್ ಇವರಿಗೆ ಜಾತ್ಯತೀತನಾಗಿ ಕಾಣುತ್ತಾನೆ. ತನ್ನ ಮತಾಂಧತೆಯ ಭಾಷಣಗಳಿಂದ ಯುವಕರನ್ನು ದಾರಿ ತಪ್ಪಿಸುತ್ತಿರುವ ಈತ ಎಂದಿಗೂ ಕೋಮುವಾದಿಯಾಗಿ
ಕಾಣಿಸುವುದಿಲ್ಲ. ಈತನನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದ್ದರ ವಿರುದ್ಧ ಮಾತನಾಡುವ ದೊಡ್ಡದೊಂದು ಪಡೆ ಭಾರತದಲ್ಲಿದೆ.

ಈ ಹಿಂದೆ ಗಾಂಧಿ ಶಾಂತಿ ಪ್ರಶಸ್ತಿಯನ್ನು ಪಡೆದ ಪ್ರಮುಖ ಸಂಸ್ಥೆಗಳೆಂದರೆ ಇಸ್ರೋ, ರಾಮಕೃಷ್ಣ ಮಿಷನ್, ಬಾಂಗ್ಲಾದೇಶ ಗ್ರಾಮೀಣ ಬ್ಯಾಂಕ್, ವಿವೇಕಾನಂದ ಕೇಂದ್ರ – ಕನ್ಯಾಕುಮಾರಿ, ಅಕ್ಷಯ ಪಾತ್ರ, ಏಕಲ್ ಅಭಿಯಾನ್ ಟ್ರಸ್ಟ್, ಸುಲಭ್ ಇಂಟರ್ ನ್ಯಾಷನಲ್. ಇವಲ್ಲದೇ ದಕ್ಷಿಣ
ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ, ತಾಂಜಾನಿಯಾದ ಮಾಜಿ ಅಧ್ಯಕ್ಷ ಜೂಲಿಯಸ್ ನ್ಯೆರೆರೆ, ಬಾಬಾ ಆಮ್ಟೆ, ಓಮನ್ ದೇಶದ ಸುಲ್ತಾನ್ ಕಾಬೋಸ್ ಬಿನ್ ಸಯ್ಯದ್ ಅಲಿ ಅವರಿಗೂ ಈ ಪ್ರಶಸ್ತಿ ಲಭಿಸಿದೆ. ಮಹಾತ್ಮ ಗಾಂಧಿಯವರಂತೆ ಶಾಂತಿಯನ್ನು ಬಯಸುವವರಿಗೆ ನೀಡುವ ಪ್ರಶಸ್ತಿ ಇದಾಗಿದ್ದು, ಗೀತಾ ಪ್ರೆಸ್ ತನ್ನ ಪ್ರಕಟಣೆಗಳ ಮೂಲಕ ದೇಶದೆಡೆ ಶಾಂತಿಯನ್ನು ಬಯಸುವ ಸನಾಥನ ಹಿಂದೂ ಧರ್ಮದ ಗ್ರಂಥಗಳು ಮತ್ತು ಪುಸ್ತಕಗಳನ್ನು ಪ್ರಕಟಿಸುತ್ತ ಬಂದಿದೆ.

ಮಹಾಭಾರತದ ಸಾವಿರಾರು ಕಥೆಗಳು ಮಕ್ಕಳ ಮನಸ್ಸಿನ ಮೇಲೆ ಉತ್ತಮವಾದ ಪರಿಣಾಮವನ್ನು ಬೀರುತ್ತವೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಹೇಳಿರುವ ಜೀವನ ಪಾಠವನ್ನು ಅಳವಡಿಸಿಕೊಂಡರೆ ಸಂಬಂಧಗಳು ಮತ್ತು ಕರ್ತವ್ಯದ ನಡುವಿನ ವ್ಯತ್ಯಾಸ ಸ್ಪಷ್ಟವಾಗಲಿ ತಿಳಿಯುತ್ತದೆ.
ಸಂಬಂಧಗಳನ್ನೂ ಮೀರಿ ಕರ್ತವ್ಯ ನಿಭಾಯಿಸಬೇಕಾದಂತಹ ಪರಿಸ್ಥಿತಿಯನ್ನು ಜೀವನದಲ್ಲಿ ಹಲವು ಬಾರಿ ಎದುರಿಸಬೇಕಾಗುತ್ತದೆ. ಸಂಬಂಧಗಳು ಕೇವಲ ಕುಟುಂಬಕ್ಕೆ ಸೀಮಿತ ಆದರೆ ಕರ್ತವ್ಯಗಳು ಇಡೀ ಸಮಾಜದ ಮೇಲೆ ಪರಿಣಾಮ ಬೀರುತ್ತವೆ. ರಾಮಾಯಣದಲ್ಲಿನ ರಾಮನ ಆದರ್ಶ ಗುಣಗಳು ಮಕ್ಕಳಿಗೆ ತಿಳಿಯಬೇಕು.

ಹನುಮಂತನ ರಾಮಭಕ್ತಿಯ ಅರಿವು ಮಕ್ಕಳಿಗೆ ಆಗಬೇಕು. ಹಿಂದೂ ಧರ್ಮವನ್ನು ಇದೇ ಮಾದರಿಯಲ್ಲಿ ಅನುಸರಿಸಬೇಕು, ಇಲ್ಲವಾದರೆ ನಿನಗೆ ಶಿಕ್ಷೆಯಾಗುತ್ತದೆಯೆಂದು ಹೇಳುವ ಒಂದೇ ಒಂದು ಗ್ರಂಥವಿಲ್ಲ. ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಆಚರಣೆಗಳು ಹಿಂದೂ ಧರ್ಮ ಗ್ರಂಥಗಳಾದ ಭಗವದ್ಗೀತೆ, ಮಹಾಭಾರತ ಮತ್ತು ರಾಮಾಯಣದಲ್ಲಿ ಕಾಣಿಸುವುದಿಲ್ಲ. ಶಾಂತಿಯನ್ನು ಬಯಸಿದ್ದ ಮಹಾತ್ಮ ಗಾಂಧಿಯವರ ನೆನಪಿನಲ್ಲಿ ನೀಡುವ ಪ್ರಶಸ್ತಿಯನ್ನು ಹಿಂದೂ ಧರ್ಮಗ್ರಂಥಗಳನ್ನು ಪ್ರಕಟಿಸುವ ಗೀತಾ ಪ್ರೆಸ್‌ಗೆ ನೀಡಿರುವುದು ಹೆಮ್ಮೆಯ ವಿಷಯ.