ಸಕಾಲಿಕ
ಡಿ.ಎಸ್.ಅರುಣ್
ಉಚಿತ ಕೊಡುಗೆಗಳು ನಿಜವಾದ ಫಲಾನುಭವಿಗಳಿಗೆ ಸಿಗದೇ ಸಿರಿವಂತರು ಹಾಗೂ ಉಳ್ಳವರ ಪಾಲಾಗುತ್ತಿದೆ, ಅದನ್ನು ತಪ್ಪಿಸಿ ಅರ್ಹರು ಮಾತ್ರ ಇವುಗಳ ಪ್ರಯೋಜನ ಪಡೆಯುವಂತೆ ಮಾಡಲು ಬಿಪಿಎಲ್ ಕಾರ್ಡಿಗೆ ಕೆವೈಸಿ ಮಾಡುವುದು, ಆಧಾರ್ ಜೋಡಣೆ ಕಡ್ಡಾಯಗೊಳಿಸಿದೆ. ಇದರಿಂದ ಉಚಿತ ಕೊಡುಗೆಗಳು ಮಾತ್ರವಲ್ಲ ಸಾಲಮನ್ನಾ ಯೋಜನೆಯ ದುರುಪಯೋಗವಾಗುವುದಕ್ಕೂ ತಡೆ ಹಾಕಿದಂತಾಗಿದೆ.
ಮೊದಲಿಗೆ ಟೀಕಿಸುವುದನ್ನು ಬಿಟ್ಟು ಜಿಎಸ್‌ಟಿ ಇಂದ ಏನು ಉಪಯೋಗ ಎಂದು ಚರ್ಚೆ ನಡೆಯಲಿ ಹಾಗೂ ತಿಳಿಯಲಿ. ಸರಕಾರದ ಯಾವುದೇ ಯೋಜನೆಯು ದೇಶವಾಸಿಗಳಿಗೆ ಫಲಾನುಭವಿಗಳಿಗೆ ತಲುಪುವ ಬದಲು ಟೀಕಾಕಾರರ ಬಾಯಿಗೆ ಯೋಜನೆ ಅಥವಾ ವಿಷಯ ಸರಿ ಇದ್ದರು ಅಸಂಬದ್ಧವಾದ ಹೇಳಿಕೆಯಿಂದ ಗೊಂದಲ ಸೃಷ್ಟಿಯಾಗುತ್ತಿರು ವುದು ಎಲ್ಲರೂ ಗಮನಿಸು ತ್ತಿದ್ದಾರೆ.
ಗೊಂದಲಕ್ಕೆ ಕಾರಣ ಟೀಕೆ ಮಾಡುವವರೆ ಹೊರತು ಸರಕಾರವಲ್ಲ. ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಯಾವುದೇ ಹೊಸ ಯೋಜನೆ ಅಥವಾ ವಿಷಯ ಜಾರಿಗೆ ತಂದರು ಜನರಿಗೆ ಹೆಚ್ಚಿನ ಹಾಗೂ ಪೂರ್ಣ ಮಾಹಿತಿಯನ್ನು ಒದಗಿಸುವ ಬದಲು ಗೊಂದಲ ಗಳಿಂದ ಕೂಡಿದ ಮಾಹಿತಿಯನ್ನು ರವಾನೆ ಮಾಡಲಾಗುತ್ತಿದೆ. ಅಕ್ಕಿ ಮೊಸರು ಧಾನ್ಯಕ್ಕೆ ಜಿಎಸ್‌ಟಿ ವಿಧಿಸಿದ್ದನ್ನು ವಿರೋಧಿಸುವವರು ನಮ್ಮ ಸುತ್ತಲಿನ ದೇಶಗಳ ಆರ್ಥಿಕ ಸ್ಥಿತಿಗತಿ ಗಮನಿಸಲಿ. ಆಗ ಸರಕಾರದ ನಿಲುವು ಅರ್ಥವಾಗುತ್ತದೆ ಬರೀ ರಾಜಕೀಯದ ಉದ್ದೇಶಕ್ಕಾಗಿ ಟೀಕಿಸುವುದು ಸರಿಯಲ್ಲ.
ಜಿಎಸ್‌ಟಿ ಸಂಗ್ರಹಗೊಂಡರೆ ಮಾತ್ರ ಸರಕಾರಕ್ಕೆ ಆದಾಯ, ದೇಶ ಆರ್ಥಿಕವಾಗಿ ಸುಭದ್ರವಾಗಿದ್ದರೆ ಅದೇ ಹಣ ಮತ್ತೆ ಜನರ ಅವಶ್ಯಕತೆಗಾಗಿ ಬಳಕೆ ಯಾಗುತ್ತದೆ ಎಂಬುದನ್ನು ಎಲ್ಲರೂ ತಿಳಿದುಕೊಳ್ಳಬೇಕು. ಜಿಎಸ್‌ಟಿಯಿಂದ ಮೊಸರು ಧಾನ್ಯದ ದರ ಹೆಚ್ಚಾದರೆ ಅದರಿಂದ ಬರುವ ಆದಾಯ ಉತ್ಪಾದಕರಿಗೆ(ರೈತರಿಗೆ) ಸಹಾಯ ಧನದ ರೂಪದಲ್ಲಿ ಕೊಡಲು ಬಳಕೆಯಾಗುತ್ತದೆ. ಇದರಿಂದ ಅವರಿಗೂ ಅನುಕೂಲವಾಗುತ್ತದೆ ಇವೆ ಕೆರೆಯ ನೀರನ್ನು ಕೆರೆಗೆ ಚೆಲುವ ಪ್ರಕ್ರಿಯೆ ಆದರೆ ಟೀಕೆ ಮಾಡುವವರು ಇಂಥದನ್ನೆಲ್ಲ ಗಮನಿಸುವುದಿಲ್ಲ.
ಸತತ ಮೂರು ವರ್ಷ ಕೋವಿಡ್ ಸಾಂಕ್ರಾಮಿಕ ಜಗತ್ತನ್ನು ಕಾಡಿದೆ ಇದರಿಂದ ವಿಶ್ವದಲ್ಲಿಯೇ ಬಲಿಷ್ಠ ಆರ್ಥಿಕತೆ ಹೊಂದಿದ ದೇಶಗಳು ತತ್ತರಿಸಿ ಹೋಗಿವೆ ಏಷ್ಯಾ, ಆಫ್ರಿಕಾ, ಯೂರೋಪಿನ ಹಲವು ರಾಷ್ಟ್ರಗಳ ಆರ್ಥಿಕತೆಯನ್ನು ಸಾಂಕ್ರಾಮಿಕ ಹಂಚಿಕೆ ನೂಕಿದೆ, ಅಲ್ಲಲ್ಲಿ ರಾಜಕೀಯ ಕ್ಲೋಬಿಯನ್ನು ಸೃಷ್ಟಿಸಿದೆ. ಈ ಹೊತ್ತಿನಲ್ಲಿ ದೇಶದ ಆರ್ಥಿಕತೆಗೆ ಜಿಎಸ್‌ಟಿ, ಆದಾಯವೇ ಬಲ ತುಂಬಿದೆ. ದೇಶದ ಆರ್ಥಿಕ ಸ್ಥಿತಿ ಚೇತರಿಸಿಕೊಂಡು ಸದೃಢವಾಗಲು ನೆರವಾಗಿದೆ.
ಈಗ ಜಿಎಸ್‌ಟಿ ಜಾರಿ ವಿಚಾರದಲ್ಲಿ ವಿರೋಧಪಕ್ಷಗಳು ಆತ್ಮ ದ್ರೋಹ ಮಾಡಿಕೊಳ್ಳುತ್ತಿರುವುದು ಏಕೆ ಎಂಬುದು ಅರ್ಥ ವಾಗುತ್ತಿಲ್ಲ. ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಹಣಕಾಸು ಮಂತ್ರಿಗಳು ಮಾತ್ರ ಭಾಗಿ ಯಾಗುವುದಿಲ್ಲ, ದೇಶದ ಅಷ್ಟು ರಾಜ್ಯ ದವರು ಇರುತ್ತಾರೆ ಅಕ್ಕಿ, ಮೊಸರಿಗೆ ಜಿಎಸ್‌ಟಿ ವಿಧಿಸಲು ನಿರ್ಧರಿಸಿದ ಸಭೆಯಲ್ಲಿ ತೆಲಂಗಾಣದ ಟಿಆರ್‌ಎಸ್, ಕೇರಳದ ಎಡರಂಗ, ಪಶ್ಚಿಮಬಂಗಾಳದ ಟಿಎಂಸಿ, ರಾಜಸ್ಥಾನದ ಕಾಂಗ್ರೆಸ್ ಸರಕಾರದ ಪ್ರತಿನಿಧಿಗಳು ಭಾಗಿಯಾಗಿದ್ದರು, ಅಲ್ಲಿ ಅವರೇಕೆ ವಿರೋಧ ಮಾಡಲಿಲ್ಲ ಜಿಎಸ್‌ಟಿ ಮಂಡಳಿಯ ನಿರ್ಧಾರಕ್ಕೆ ಒಮ್ಮತ ಸಭೆಯಿಂದ
ಎದ್ದು ಹೊರ ಬರಬೇಕಿತ್ತು, ತಮ್ಮ ವಿರೋಧ ದಾಖಲಿಸಬೇಕಿತ್ತು ಆದರೆ ಅಲ್ಲಿ ಸುಮ್ಮನಿದ್ದರು, ಒಪ್ಪಿಗೆ ಕೂಡ ಸೂಚಿಸಿದರು, ಈಗ ಮಾಧ್ಯಮಗಳ ಮುಂದೆ ವಿರೋಧಿಸುತ್ತಿದ್ದಾರೆ, ಇದು ಆಗಬಾರದು ಹೀಗೆ ಸಂಗ್ರಹಿಸಲಾದ ಆದಾಯದಲ್ಲಿ ಶೇಕಡ ೮೦ ರಷ್ಟು ವಾಪಸ್ ಬರುತ್ತದೆ ಎಂಬುದು ಗಮನಾರ್ಹ, ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಕುಳಿತಾಗ ತಮಗೆ ಬರುವ ಆದಾಯ ಮಾತ್ರ
ನೋಡುತ್ತಾರೆ ಇದು ಇಬ್ಬಂದಿತನ ಅಲ್ಲವೇ? ದೇಶದಲ್ಲಿ ಮೊದಲು ಪರ್ಯಾಯ ಆರ್ಥಿಕತೆ ಜಾರಿಯಲ್ಲಿತ್ತು ತೆರಿಗೆ ವಂಚನೆ ಇದರ ಮೂಲವಾಗಿತ್ತು ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಅದನ್ನೆಲ್ಲ ತೆಗೆದು ಆರ್ಥಿಕತೆಯನ್ನು ಒಂದೆಡೆಗೆ ತರಲಾಗಿದೆ.
ಅರ್ಹರು ನ್ಯಾಯಯುತವಾಗಿ ತೆರಿಗೆ ಪಾವತಿಸುವ ವ್ಯವಸ್ಥೆ ಜಾರಿಯಾಗಿದೆ. ಅದರ ಫಲವಾಗಿಯೇ ಜಿಎಸ್‌ಟಿ ಸಂಗ್ರಹ ಪ್ರಮಾಣ ಈ ಮೊದಲ ಮಾಸಿಕ ೮೦ ಸಾವಿರ ಕೋಟಿ ರುಪಾಯಿಗಳಿಂದ ೯೦ ಸಾವಿರ ಕೋಟಿ ರುಪಾಯಿಗಳಷ್ಟು ಇದ್ದದ್ದು, ಈಗ ೧.೪೨ ಲಕ್ಷ ಕೋಟಿಗೆ ಹೆಚ್ಚಳವಾಗಿದೆ, ಅನೇಕ ಗುರುತಿಸಲಾಗದ ವಲಯಗಳನ್ನು ಗುರುತಿಸಿ ಜಿಎಸ್‌ಟಿ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ.
ಮೇಕ್ ಇನ್ ಇಂಡಿಯಾ: ತೆರಿಗೆಯಲ್ಲಿ ಏಕರೂಪ ಆಗಿ, ಅಂತರರಾಜ್ಯ ತೆರಿಗೆ ಹೊರೆ ತಗ್ಗಿ, ಸರಕು-ಸಾಗಣೆ ವೆಚ್ಚವೂ ಕಡಿಮೆ ಆಗುತ್ತದೆ. ಆಮದು ವಸ್ತುಗಳಿಗೆ ಹೆಚ್ಚು ಸುರಕ್ಷತೆ ದೊರೆಯುತ್ತದೆ. ಇದರಿಂದ ದೇಶಿ ವಸ್ತುಗಳು ಹೆಚ್ಚು ಸ್ಪರ್ಧಾತ್ಮಕ ಬೆಲೆಗೆ ದೊರೆಯುತ್ತವೆ ತೆರಿಗೆ ಸಂಗ್ರಹಣೆಯಲ್ಲಿ ಸೋರಿಕೆ ತಡೆಗಟ್ಟಿದ ಪರಿಣಾಮ ೬೦ ಸಾವಿರ ಕೋಟಿಯಷ್ಟು ಆದಾಯ ಏರಿಕೆಯಾಗಿದೆ,
ಯುಪಿಎ ಸರಕಾರದ ಆಳ್ವಿಕೆಯ ಅವಧಿಯಲ್ಲಿ ದೇಶದಲ್ಲಿ ೨.೮೦ ಕೋಟಿ ಆದಾಯ ತೆರಿಗೆ ಪಾವತಿದಾರರು ಇದ್ದರು, ಈಗ ಅವರ ಸಂಖ್ಯೆ ೫.೭೮ ಕೋಟಿಗೆ ಏರಿಕೆಯಾಗಿದೆ.
ಹೀಗಾಗಿ ಸರಕಾರಕ್ಕೆ ನೇರ ಮತ್ತು ಪರೋಕ್ಷ ಆದಾಯದಲ್ಲಿ ಇಲ್ಲಿಯವರೆಗೂ ವ್ಯತ್ಯಾಸ ಒಂದು ಹಂತದಲ್ಲಿ ಸರಿಯಾಗಿದೆ. ಮುಂದಿನ ದಿನಗಳಲ್ಲಿ ಆದಾಯ ಜಿಎಸ್‌ಟಿ ಸಂಗ್ರಹ ಕ್ರಮಬದ್ಧಗೊಂಡು ಸರಿಯಾದ ವ್ಯಾಪಾರ ಮುನ್ನೆಲೆಗೆ ಬರಲಿದೆ. ಹೆಚ್ಚಳ ಗೊಂಡಿರುವ ಅಗತ್ಯ ವಸ್ತುಗಳ ದರ ಕಡಿಮೆ ಆಗಿ ಈಗ ಜನರಿಗೆ ಆಗುತ್ತಿರುವ ಆರ್ಥಿಕ ಹೊರೆ ಯೂ ನಿವಾರಣೆಯಾಗಲಿದೆ. ಈಗಿನ ಆದಾಯ ತೆರಿಗೆ ಪಾವತಿ ವ್ಯವಸ್ಥೆಯನ್ನು ಸರಕಾರವು ಮಧ್ಯಮವರ್ಗದ ಸ್ನೇಹಿಯಾಗಿಸಿದೆ.
ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು ನರೇಂದ್ರ ಮೋದಿ ನೇತೃತ್ವದ ಸರಕಾರವು ೩ ಲಕ್ಷ ದಿಂದ ೫ ಲಕ್ಷಕ್ಕೆ ಏರಿಕೆ ಮಾಡಿದೆ. ಇದರಿಂದ ಇಲ್ಲಿಯವರೆಗೂ ಮಧ್ಯಮವರ್ಗದವರಿಗೆ ಆಗುತ್ತಿದ್ದ ಆರ್ಥಿಕ ಹೊರೆ ಕಡಿಮೆಯಾಗಿದೆ. ಹಿಂದೆ ಆದಾಯ ತೆರಿಗೆ ಪಾವತಿಸುವುದು ನಷ್ಟದ ಬಾಬ್ತು ಎಂದೇ ಹಲವಾರು ಭಾವಿಸಿದ್ದರು, ಹೀಗಾಗಿ ತೆರಿಗೆ ತಪ್ಪಿಸುವುದು ಸಾಮಾನ್ಯವಾಗಿತ್ತು
ಆದಾಯ ತೆರಿಗೆ ಇಲಾಖೆಗೆ ಸಿಕ್ಕಿಹಾಕಿಕೊಳ್ಳುತ್ತೇವೋ ಎಂಬ ಭಯ ಅವರನ್ನು ಕಾಡುತ್ತಿತ್ತು, ಇದು ಆದಾಯ ತೆರಿಗೆ ಇಲಾಖೆ ಹಾಗೂ ಜನರ ನಡುವೆ ಅಂತರ ಸೃಷ್ಟಿಸಿತ್ತು ಆದರೆ, ಈ ಹೆದರಿಕೆ ಈಗ ತಪ್ಪಿದೆ. ಆದಾಯ ತೆರಿಗೆ ಸರಿಯಾಗಿ ಪಾವತಿಸಿದರೆ ಬ್ಯಾಂಕಿನಿಂದ ಕಡಿಮೆ ಬಡ್ಡಿಯಲ್ಲಿ ಸಾಲಸೌಲಭ್ಯ ಪ್ರೋತ್ಸಾಹಧನ ಸೇರಿದಂತೆ ಬೇರೆ ಬೇರೆ ಸವಲತ್ತು, ವಹಿವಾಟು ವಿಸ್ತರಣೆಗೆ ನೆರವು ಸೇರಿದಂತೆ ವಿವಿಧ ಉತ್ತೇಜನ ಕಾರ್ಯಕ್ರಮಗಳನ್ನು ಸರಕಾರ ಜಾರಿಗೊಳಿಸಿದೆ.
ಈ ರೀತಿ ತೆರೆಗೆ ಪ್ರಕ್ರಿಯೆಯನ್ನು ಮತ್ತಷ್ಟು ಜನಸ್ನೇಹಿಯಾಗಿಸಿದೆ. ಭಾರತದ ೨೦೨೧-೨೨ರ ವಾರ್ಷಿಕ ಜಿಡಿಪಿ ದರ ಶೇಕಡಾ
೮.೭ಕ್ಕೆ ಏರಿಕೆಯಾಗಿದ್ದರೆ, ಇದು ಚೀನಾ ಅಮೆರಿಕ ಹಾಗೂ ಲಂಡನ್ ಗಿಂತಲೂ ಅಧಿಕವಾಗಿದೆ. ಇಲ್ಲಿಯವರೆಗೂ ಉಚಿತ ಕೊಡುಗೆಗಳು ದೇಶದ ಆರ್ಥಿಕತೆಗೆ ಹೊರ ಯಾಗಿದ್ದವು ಇಂತಹ ಕೊಡುಗೆಗಳು ನಿಜವಾದ ಫಲಾನುಭವಿಗಳಿಗೆ ಸಿಗದೇ ಸಿರಿವಂತರು
ಹಾಗೂ ಉಳ್ಳವರ ಪಾಲಾಗುತ್ತಿದೆ, ಅದನ್ನು ತಪ್ಪಿಸಿ ಅರ್ಹರು ಮಾತ್ರ ಇವುಗಳ ಪ್ರಯೋಜನ ಪಡೆಯುವಂತೆ ಮಾಡಲು ಸರಕಾರ ಕ್ರಮಕ್ಕೆ ಮುಂದಾಗಿದೆ ಅದರ ಫಲವಾಗಿ, ಬಿಪಿಎಲ್ ಕಾರ್ಡಿಗೆ ಕೆವೈಸಿ ಮಾಡುವುದು, ಆಧಾರ್ ಜೋಡಣೆಯನ್ನು ಕಡ್ಡಾಯ ಗೊಳಿಸಿದೆ.
ಇದರಿಂದ ಉಚಿತ ಕೊಡುಗೆಗಳು ಮಾತ್ರವಲ್ಲ ಸಾಲಮನ್ನಾದಂಥ ಯೋಜನೆಯ ದುರುಪಯೋಗವಾಗುವದಕ್ಕೂ ತಡೆ ಹಾಕಿ ದಂತಾಗಿದೆ. ಇದು ಸಂಪೂರ್ಣವಾಗಿ ಫಲಪ್ರದವಾಗಲು ಒಂದಷ್ಟು ಕಾಲವಕಾಶ ಬೇಕಾಗುತ್ತದೆ. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಹೀಗೆ ಮುಂದುವರೆಯುವುದಿಲ್ಲ. ಜಿಎಸ್‌ಟಿ ಮಂಡಳಿ ಪ್ರತಿ ತಿಂಗಳು ಸಭೆ ಸೇರುತ್ತದೆ, ಅಲ್ಲಿ ಬೆಲೆ ಯಾವುದಕ್ಕೆ ಜಾಸ್ತಿ
ಕಡಿಮೆಮಾಡಬೇಕು ಜನರಿಗೆ ಏನು ಹೊರೆಯಾಗಿದೆ ಎಂಬುದನ್ನು ಬಗ್ಗೆ ವಿಸ್ತೃತ ಚರ್ಚೆ ಆಗುತ್ತದೆ, ಹೀಗಾಗಿ ಹೆಚ್ಚಳ ಗೊಂಡಿರುವ ಅಗತ್ಯವಸ್ತುಗಳ ಬೆಲೆ ಮುಂದಿನ ಆರು ತಿಂಗಳಲ್ಲಿ ಕಡಿಮೆಯಾಗಬಹುದು.
ಇನ್ನೊಂದು ಮಾತು… ಚುನಾವಣೆ ಹತ್ತಿರ ಬಂದಾಗ ಮಾತ್ರ ಸರಕಾರವು ಡೀಸೆಲ್-ಪೆಟ್ರೋಲ್, ಅನಿಲ ಸಿಲಿಂಡರ್‌ನಂತಹ ಅಗತ್ಯ ವಸ್ತುಗಳ ಬೆಲೆ ಇಳಿಸುತ್ತದೆ, ನಂತರ ಏರಿಕೆ ಮಾಡುತ್ತದೆ ಎಂದು ವಿರೋಧಿಗಳು ದೂರುತ್ತಾರೆ, ಆದರೆ ಅದು ಹಾಗೆ ಅಲ್ಲ ಕರ್ನಾಟಕದಲ್ಲಿ ಇನ್ನೆರಡು ತಿಂಗಳಲ್ಲಿ ತಾಲೂಕು ಪಂಚಾಯಿತಿ ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಯಲಿದೆ, ಮುಂದಿನ ಆರು ತಿಂಗಳಲ್ಲಿ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಲಿದೆ.
ಇನ್ನು ದೇಶದಲ್ಲಿ ಪ್ರತಿ ಮೂರು ಇಲ್ಲವೇ ಆರು ತಿಂಗಳಿಗೊಮ್ಮೆ ಯಾವುದಾದರೂ ಚುನಾವಣೆ ನಡೆಯುತ್ತಲೇ ಇರುತ್ತದೆ, ಹೀಗಾಗಿ ಬೆಲೆ ಏರಿಕೆ ಅಥವಾ ಇಳಿಕೆಗೆ ಚುನಾವಣೆ ಜತೆಗೆ ಸಂಬಂಧವಿಲ್ಲ, ಬದಲಿಗೆ ಅಂತಾರಾಷ್ಟ್ರೀಯ ವಿದ್ಯಮಾನಗಳು ಮಾರುಕಟ್ಟೆ ಯಲ್ಲಿನ ಸ್ಥಿತ್ಯಂತರಗಳು, ಹವಾಮಾನ ವೈಪರಿತ್ಯ, ಸಾಂಕ್ರಾಮಿಕ ರೋಗಗಳು ಕೂಡ ಕೆಲವೊಮ್ಮೆ ದೇಶದ ಆರ್ಥಿಕತೆಯ ಸ್ಥಿತಿಗತಿ ನಿರ್ಧರಿಸುತ್ತವೆ, ಇಲ್ಲಿ ಸರಕಾರಕ್ಕೆ ಚುನಾವಣೆಗಿಂತ ದೇಶದ ಹಣಕಾಸು ಸ್ಥಿತಿ ಆರೋಗ್ಯ ಸಾಮಾನ್ಯ ಜನರ ಹಿತ ಬಹಳ
ಮುಖ್ಯ, ಎರಡು ಮೂರು ವರ್ಷಗಳ ಕರೋನಾ ಕರಿ ನೆರಳಿನಿಂದ ಹೊರಬಂದು, ಸಾಮಾನ್ಯ ಸ್ಥಿತಿಗೆ ಮರಳುತ್ತಿರುವ ಭಾರತವನ್ನು ಎಲ್ಲರೂ ಒಮ್ಮತದಿಂದ ಪ್ರಗತಿ ಹಾದಿಯಲ್ಲಿ ಕೊಂಡೊಯ್ದು, ವಿಷಯ ತಿಳಿಯದೆ ಟೀಕೆ ಮಾಡುವವರಬೀಗ ಹಾಕೋಣ.
ಲೇಖಕರು: ಶಾಸಕರು, ಶಿವಮೊಗ್ಗ ವಿಧಾನಪರಿಷತ್ ಕ್ಷೇತ್ರ