Tuesday, 12th November 2024

Gururaj Gantihole Column: ಸರ್ವರ್‌ ಸಮಸ್ಯೆ: ನಂಗೂ ಫ್ರೀ, ನಿಂಗೂ ಫ್ರೀ…!

ಗಂಟಾಘೋಷ

ಗುರುರಾಜ್‌ ಗಂಟಿಹೊಳೆ

ಆಡಳಿತಾರೂಢ ಸರಕಾರವು ತಂತ್ರಜ್ಞಾನ ಮತ್ತು ಜನಸ್ನೇಹಿ ಆಡಳಿತದ ಹೆಸರಲ್ಲಿ ಏನೇನೋ ಪ್ರಯೋಗಕ್ಕೆ ಮುಂದಾದ ಭಾಗದ ಒಂದಂಶವಾದ ಸ್ಥಿರಾಸ್ತಿ ಡಿಜಿಟಲ್ ನೋಂದಣಿ ಕಡ್ಡಾಯ ಎಂಬ ಕಾಯ್ದೆಯು ಶ್ರೀಸಾಮಾನ್ಯ ರಿಂದ ಹಿಡಿದು ಉಪನೋಂದಣಾಧಿಕಾರಿಗಳನ್ನೂ ಗೊಂದಲಕ್ಕೆ ತಳ್ಳಿದ್ದರಿಂದ, ನಿಯಮ ರೂಪಿಸಿದ ಇಲಾಖೆಯು ದಸ್ತಾವೇಜು ನೋಂದಣಿ ಪ್ರಕ್ರಿಯೆಯನ್ನೇ ಸ್ಥಗಿತಗೊಳಿಸಿದೆ.

ನೋಂದಣಿ ಕಾಯ್ದೆ ಅಧಿನಿಯಮಕ್ಕೆ ತಿದ್ದುಪಡಿಯಾದ ಬಳಿಕ, ನೋಂದಣಿ ಕಚೇರಿಗಳಿಗೇ ಈ ಕಾನೂನು, ನೀತಿ-
ನಿಯಮ ಅರ್ಥವಾಗದಿದ್ದರೆ, ಇಂಥ ಅಪರಿಪಕ್ವ ಯೋಜನೆಗಳನ್ನು ಸರಕಾರ ಕೈಗೆತ್ತಿಕೊಂಡು ಜನರ ಸಮಯ, ಹಣ
ದೊಂದಿಗೆ ಚೆಲ್ಲಾಟವಾಡುತ್ತಿರುವುದೇಕೆ ಎಂದು ಪ್ರಶ್ನಿಸಬೇಕಾಗಿದೆ. ಹೊಸದಾಗಿ ಜಾರಿಗೊಳಿಸಿದ ನೋಂದಣಿ
ಪ್ರಕ್ರಿಯೆಗೆ ಯಾವ ದಾಖಲೆಗಳನ್ನು ಪರಿಗಣಿಸಬೇಕೆಂಬುದರ ಸ್ಪಷ್ಟತೆಯೇ ಈ ತಂತ್ರಾಂಶದಲ್ಲಿಲ್ಲ! ಕಾವೇರಿ-2.0 ತಂತ್ರಾಂಶದ ಮೂಲಕ ಪಡೆದ ಶುಲ್ಕಸಹಿತ ಅರ್ಜಿಗಳ ನೋಂದಣಿಯನ್ನು ಪೂರ್ಣಗೊಳಿಸಲಾಗಿದೆ ಮತ್ತು ಹೊಸದಾಗಿ ನೋಂದಣಿ ಮಾಡುವ ಎಲ್ಲ ಕಾರ್ಯಗಳನ್ನೂ ಸಂಪೂರ್ಣ ನಿಲ್ಲಿಸಲಾಗಿದೆ.

ತನ್ಮೂಲಕ, ಯಾವ ನೋಂದಣಿಗೆ ಯಾವ ದಾಖಲೆ ಪಡೆಯಬೇಕೆಂಬುದರ ಮಾರ್ಗಸೂಚಿ ಹೊರಡಿಸಬೇಕೆಂದು ರಾಜ್ಯದ ನೋಂದಣಿ ಮತ್ತು ಮುದ್ರಾಂಕ ಇಲಾಖಾ ನೌಕರರ ಸಂಘ ಸರಕಾರವನ್ನು ಆಗ್ರಹಿಸಿದೆ. ಕೇಂದ್ರ ನೋಂದಣಿ ಕಾಯ್ದೆ 1908ರ ಕರ್ನಾಟಕ ನೋಂದಣಿ ನಿಯಮಾವಳಿ 1965ರ 22ಬಿ, 22ಸಿ ಮತ್ತು 22ಡಿ ಅಂಶಕ್ಕೆ ತಿದ್ದುಪಡಿ ತರಲಾಗುತ್ತಿದೆ. ಈ ‘22 ಕಾಯ್ದೆಯ’ ಪ್ರಕಾರ, ತಿರುಚಿದ ದಾಖಲೆಯೊಂದಿಗೆ, ಕೇಂದ್ರ ಮತ್ತು ರಾಜ್ಯ ಸರಕಾರದ ಕಾಯ್ದೆಗೆ ವಿರುದ್ಧವಾಗಿ, ರಾಜ್ಯ ಸರಕಾರದ ವಶದಲ್ಲಿನ ಸ್ಥಿರಾಸ್ತಿ ನೋಂದಣಿ ಮಾಡಿದರೆ, ಅದನ್ನು ಜಿಲ್ಲಾ ನೋಂದ ಣಾಧಿಕಾರಿ ರದ್ದುಗೊಳಿಸುವ ಮತ್ತು ಕಾಯ್ದೆ-81ಎ ಪ್ರಕಾರ, ನೋಂದಣಿ ಮಾಡಿದ ಸಬ್ ರಿಜಿಸ್ಟ್ರಾರ್‌ಗೆ 3 ವರ್ಷ ಜೈಲುಶಿಕ್ಷೆ ವಿಧಿಸುವ ಅವಕಾಶ ನೀಡಲಾಗಿದೆ.

ಇಲ್ಲಿಯವರೆಗೆ ಕೇಂದ್ರ ನೋಂದಣಿ ಕಾಯ್ದೆ- 1908ರಲ್ಲಿ ಕೇವಲ ನೋಂದಣಿ ಶುಲ್ಕ ವಸೂಲಿ ಮಾಡುವ ಅಧಿಕಾರ ವಿತ್ತು. ಸದ್ಯಕ್ಕೆ ರಾಜ್ಯದಲ್ಲಿ 260ಕ್ಕೂ ಹೆಚ್ಚು ಸಬ್ ರಿಜಿಸ್ಟ್ರಾರ್ ಕಚೇರಿಗಳಿದ್ದು, ಸುಮಾರು 10 ಸಾವಿರಕ್ಕೂ ಅಧಿಕ ದಸ್ತಾವೇಜುಗಳು ನೋಂದಣಿಯಾಗುತ್ತಿವೆ ಎನ್ನಲಾಗಿದೆ. ಈ ಹಿಂದೆ ಕೃಷಿಭೂಮಿ, ಸೈಟು-ಮನೆ, ಕಟ್ಟಡಗಳು ಸೇರಿದಂತೆ ಸ್ಥಿರಾಸ್ತಿಗಳ ಕ್ರಯ, ದಾನಪತ್ರ, ಹಕ್ಕು ಬಿಡುಗಡೆ ಮತ್ತು ಕರಾರುಪತ್ರ, ಬಾಡಿಗೆ ಕರಾರುಗಳು ಸೇರಿದಂತೆ ಹಲವು ಸಾಮಾನ್ಯ ನೋಂದಣಿಗಳ ಜತೆಗೆ ಕಾವೇರಿ ಎಂಬ ತಂತ್ರಾಂಶವನ್ನು ಖಿmಜ್ಟZbಛಿ ಮಾಡಿ, ಅqsಡಿeಛ್ಟಿಛಿ
ಛಿಜಜಿoಠ್ಟಿZಠಿಜಿಟ್ಞ, ಊZಛ್ಝಿಛಿoo ಛಿಜಜಿoಠ್ಟಿZಠಿಜಿಟ್ಞ, ಇ-ಸ್ವತ್ತು, ಇ-ಆಸ್ತಿ ಇತ್ಯಾದಿಗಳನ್ನೂ ಬಿಡಿಎಗೆ ಸಂಯೋಜಿಸಲಾಗಿದೆ.

ತನ್ಮೂಲಕ, ಈ ಎಲ್ಲ ಪ್ರಕ್ರಿಯೆಗಳಿಗೆ ನಿರ್ದಿಷ್ಟ ಮಾರ್ಗಸೂಚಿ ನೀಡಿಲ್ಲ. ಆಧಾರ್ ಒಟಿಪಿ ಕಡ್ಡಾಯಗೊಳಿಸಿದ್ದರೂ, ಆಸ್ತಿಗೆ ಆಧಾರ್ ಲಿಂಕ್ ಮಾಡಿಲ್ಲದಿರುವುದು ಒಟಿಪಿ ಬಂದರೂ ಪ್ರಯೋಜನವಿಲ್ಲ. ಪ್ಯಾನ್‌ಕಾರ್ಡ್, ಪಾಸ್‌ಪೋರ್ಟ್‌ ನಂಥ ಇತರೆ ದಾಖಲೆಗಳಿಗೆ ಅವಕಾಶ ನೀಡಿದ್ದರಿಂದ ಶೇ.೫೦ಕ್ಕೂ ಹೆಚ್ಚಿನವರು ಆಧಾರ್ ಬಳಸುತ್ತಿಲ್ಲ. ಹೀಗಾಗಿ ಇಂಥ ನಕಲಿ ಐ.ಡಿ. ಸೃಷ್ಟಿಸುವ ದೊಡ್ಡ ಪಡೆಯೇ ತಲೆಯೆತ್ತಿ ನಿಂತಿದೆ.

ವಸ್ತುಸ್ಥಿತಿ ಹೀಗಿರುವಾಗ ಮತ್ತು ಪ್ರತಿದಿನ ಸಾವಿರಾರು ದಸ್ತಾವೇಜುಗಳು ನೋಂದಣಿಗೆ ಬರುವುದರಿಂದ ಇಂಥವುಗಳ ಸತ್ಯಾಸತ್ಯತೆ ಪರೀಕ್ಷಿಸಿ ಅಧಿಕೃತವೆಂದು ಹೇಗೆ ಪ್ರಮಾಣಿಸುವುದು, ಇದಕ್ಕೆ ಸಮಯ ಸಾಕಾಗುವುದೇ ಮತ್ತು ನಕಲಿ ದಾಖಲೆಗಳನ್ನು ಪತ್ತೆಹಚ್ಚುವ ಯಾವ ಕ್ರಮಗಳೂ ಸರಕಾರ-ಇಲಾಖೆಗಳಿಂದ ಇನ್ನೂ ಆಗಿಲ್ಲ. ಹೀಗಾಗಿ, ಇಂಥ ವೇಳೆ ಕೇವಲ ಅಧಿಕಾರಿಗಳನ್ನೇ ಹೊಣೆ ಮಾಡುವುದೇಕೆ ಎಂಬುದು ಇವರ ಪ್ರಶ್ನೆ. ಇಂಥ ಸಂದರ್ಭದ 2015-2023ರ ಅವಧಿಯಲ್ಲಿ ಬಿಬಿಎಂಪಿಯಲ್ಲಿ ಸುಮಾರು 45 ಸಾವಿರ ಆಸ್ತಿಗಳ ವಾರಸುದಾರರು ‘ಬಿ-ಖಾತಾ’ ಬದಲಾಗಿ ‘ಎ-ಖಾತಾ’ ಪಡೆದಿದ್ದಾರೆ ಎಂಬುದು ಇಲಾಖೆಯನ್ನೇ ಅನುಮಾನದಿಂದ ನೋಡುವಂತೆ ಮಾಡಿದೆ. ಇದೆಲ್ಲದರ ನಡುವೆ, ಇ-ಸ್ವತ್ತು ತಂತ್ರಾಂಶದಲ್ಲಿ, ನಕಲಿ ದಾಖಲೆ ಸಲ್ಲಿಸಿ, ರೆವಿನ್ಯೂ ಸೈಟ್‌ಗೆ ‘ಇ-ಖಾತಾ’ ಪಡೆದ ಪ್ರಕರಣ ಸಿಐಡಿ ತನಿಖಾ ಹಂತ ದಲ್ಲಿದೆ.

ಸರಕಾರಿ ಭೂಮಿಗಳಿಗೆ ಪಹಣಿ ತಿರುಚಿ, ರಿಜಿಸ್ಟ್ರೇಷನ್‌ಗೆ ಬರುತ್ತಾರೆ. ಕಾವೇರಿ-2.0 ಮೂಲಕ ಇ-ಸ್ವತ್ತು ಮಾಡಿ ಕೊಳ್ಳಲು ಅವಕಾಶವಿರುವುದರಿಂದ ನೋಂದಣಿ ಮಾಡಲಾಗುತ್ತದೆ. ಅದೇ ಹೆಸರಿನ ವ್ಯಕ್ತಿಯ ಮೂಲಕ ನೋಂದಣಿ ಮಾಡಿಸಿಕೊಂಡು ತದನಂತರ ಮಾರಾಟ ಮಾಡುವುದೋ, ಸ್ವತಃ ಖರೀದಿಸುವುದೋ ಮಾಡುವಂಥ ನಕಲಿ ದಂಧಾಪಡೆಯೇ ಇದರ ಹಿಂದೆ ಕೆಲಸಮಾಡುತ್ತಿದೆ. ಇದಕ್ಕೆ ಆಡಳಿತ ಯಂತ್ರದ ಕೆಲ ಕಾಣದ ಕೈಗಳ ಬೆಂಬಲವೂ ಇರುವುದರಿಂದ ನಾವೇನು ಮಾಡಲಾದೀತು ಎಂಬುದು ನೋಂದಣಿ ಮಾಡುವ ಅಧಿಕಾರಿಗಳ ಅಳಲು.

ಇಂಥ ಗೊಂದಲಗಳ ನಡುವೆ, ರಾಜ್ಯ ಸರಕಾರವು- ರಿಜಿಸ್ಟ್ರೇಜನ್ ಕಾಯ್ದೆ 1908 ರಲ್ಲಿ 22ಬಿ ಎಂಬ ಹೊಸ ಸೆಕ್ಷನ್ ಪರಿಚಯಿಸಿರುವುದರಿಂದ, ಕೇಂದ್ರ ಕಚೇರಿಯಿಂದ ಸರಿಯಾದ ನಿರ್ದೇಶನ, ಮಾರ್ಗದರ್ಶಿ ಸೂತ್ರ ಬರುವವರೆಗೂ ದಸ್ತಾವೇಜುಗಳ ಪರೀಶೀಲನೆ ಮತ್ತು ನೋಂದಣಿಯನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿದೆ ಎಂಬ ರಾಜ್ಯಪತ್ರವನ್ನು ‘ಸಾರ್ವಜನಿಕರ ಗಮನಕ್ಕೆ’ ಎಂಬ ಹೆಸರಿನಲ್ಲಿ ಬಿಡುಗಡೆ ಮಾಡುವ ಮೂಲಕ, ಅರೆಬೆಂದ ಯೋಜನೆಗಳನ್ನು ರೂಪಿಸುವವರ ಮೂಲಕ ಇಲಾಖೆ ನಡೆಯುತ್ತಿದೆ ಎಂಬ ಸಂದೇಶವನ್ನು ಜನತೆಯ ಮುಂದೆ ಇಡಲಾಗಿದೆ.

ಇನ್ನು ತರಾತುರಿಯ, ತಮಗೆ ಬೇಕಾದವರಿಗೆ ಲಾಭ ಮಾಡಿಕೊಡಲೋ ಈ ತಂತ್ರಾಂಶಗಳ ಹೆಸರಿನಲ್ಲಿ ಹಾಗೂ
ಅವುಗಳನ್ನು ಬದಲಾಯಿಸುವ, ಅಪ್‌ಗ್ರೇಡ್ ಮಾಡುವ, ಹೊಸ ತಂತ್ರಾಂಶಗಳನ್ನು ಪರಿಚಯಿಸುವ ಉದ್ದೇಶವೂ
ಭಯಂಕರವಾಗಿಯೇ ಇರುತ್ತದೆ. ಉದ್ದೇಶಿತ ಕಾರ್ಯಗಳು ಸುಗಮವಾಗಿ ನಡೆಯುವುದರ ಬದಲಾಗಿ ಸಮಸ್ಯೆಗಳನ್ನು
ಸೃಷ್ಟಿಸುವ ಮೂಲಕ ಜನರ ಹಣ ಮತ್ತೆ ಮತ್ತೆ ಪೋಲಾಗುವಂತೆ ನೋಡಿಕೊಳ್ಳುವ ಎಲ್ಲ ‘ಅವಕಾಶ’ಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇನ್ನು ತಂತ್ರಾಂಶಗಳನ್ನು ಜಾರಿಗೆ ತರುವ ಮತ್ತು ತಯಾರಿಸಲು ಗುತ್ತಿಗೆ/ಟೆಂಡರ್ ಕೊಡುವುದರ ಹಿಂದೆ ಬಹುದೊಡ್ಡ ಜನರ ‘ಕೈ’ವಾಡವೇ ಇದೆ ಎನಿಸದಿರದು.

ಇಂದಿನ ತಂತ್ರಜ್ಞಾನದ ಕಾಲದಲ್ಲಿ, ಚಿಕ್ಕಪುಟ್ಟ ಸ್ಟಾರ್ಟಪ್ ಕಂಪನಿಗಳೂ ಬಹುಪಯೋಗಿ, ಬಳಕೆಯೋಗ್ಯ ಸರಳ
ತಂತ್ರಾಂಶಗಳನ್ನು ರೂಪಿಸಿ, ಜನರ ಬೆಂಬಲ ಗಳಿಸುತ್ತ ಬಹುಕೋಟಿ ಕಂಪನಿಗಳಾಗಿ ಬೆಳೆಯುತ್ತಿವೆ. ಇನ್ನು ಗೂಗಲ,
ಯೂಟ್ಯೂಬ್, ಇತರ ಜಾಲತಾಣಗಳು, ಅಕೌಂಟ್ ಸೆಕ್ಷನ್‌ನ ತಂತ್ರಾಂಶಗಳು ಯಾವುದೇ ಸಮಸ್ಯೆಯಿಲ್ಲದೆ ಕಾರ್ಯೋ
ನ್ಮುಖವಾಗಿರುವಾಗ, ಸರಕಾರಿ ಸ್ವಾಮ್ಯದ ತಂತ್ರಾಂಶಗಳು ಕಾಯಂ ಸರ್ವರ್ ಸಮಸ್ಯೆಯಿಂದ ನರಳುವುದೇಕೆ?
ತಂತ್ರeನದಲ್ಲಿ ಪ್ರಾಬಲ್ಯ ಸಾಧಿಸಿದ ಗುತ್ತಿಗೆದಾರರಿಗೆ ಕೊಡದೆ ಅಪಕ್ವ ತಂತ್ರಾಂಶಗಳನ್ನು ಅಳವಡಿಸಿ, ಜನರನ್ನು
ಗೋಳುಹೊಯ್ದುಕೊಳ್ಳುವುದೇ ಸರಕಾರದ ಉದ್ದೇಶವಾದಂತಿದೆ.

ಕೆಲ ವರ್ಷಗಳ ಹಿಂದೆ ನೂರಾರು ಕೋಟಿ ಮೊತ್ತದ ಗುತ್ತಿಗೆ ಕೊಟ್ಟು ಇವರಿಂದ ಪಡೆದ ಕೆಲ ತಂತ್ರಾಂಶಗಳನ್ನು ಬಲವಂತವಾಗಿಯೇ ವಿವಿಧ ವಿಶ್ವವಿದ್ಯಾಲಯಗಳಿಗೆ ನೀಡಲಾಗಿತ್ತು ಎನ್ನಲಾಗುತ್ತಿದೆ. ಕಂದಾಯ, ಕೃಷಿ, ಶಿಕ್ಷಣ ಸೇರಿದಂತೆ ಸಾರ್ವಜನಿಕ ಇಲಾಖೆಗಳಲ್ಲೂ ಇದು ವ್ಯವಸ್ಥಿತವಾಗಿ ನಡೆದಿದೆ, ನಡೆಯುತ್ತಿದೆ. ಅಧಿಕಾರಕ್ಕೆ ಬರುವ ಯಾವ ಸರಕಾರವೂ ಎಲೆಮರೆ ಕಾಯಿಗಳಂಥ ಯೋಜನೆಗಳ ಮೂಲಕ ಜನರ ಹಣವನ್ನು ಲೂಟಿ ಹೊಡೆಯದೆ ಬಿಡಲಾರದು ಎಂಬ ಭಾವನೆ ಜನರಲ್ಲಿ ದಟ್ಟವಾಗಿದೆ. ಇ-ಗವರ್ನೆ ಹೆಸರಲ್ಲಿ ಎಲ್ಲ ಇಲಾಖೆಗಳನ್ನೂ ಆಧುನಿಕ ಗೊಳಿಸುವ ನಿಟ್ಟಿನಲ್ಲಿ ಟೆಂಡರ್ ಕರೆದು ತಂತ್ರಾಂಶಗಳನ್ನು ರೂಪಿಸಿ, ಜಾರಿಗೊಳಿಸಲಾಗಿದೆ.

Ahara, E-Hospital, E-WayBill, Arogya Karnataka, Nadakacheri, State Scholarship Portal, e-Suraksha, e-Asthi, e-swathu, sakala, Aushada, e-Janma, Jeevan Pramana, Kaveri ಸೇರಿದಂತೆ ಬಹುತೇಕ ಯೋಜನೆಗಳು ತಂತ್ರಾಂಶ ಗಳ ಮೂಲಕ ಆಯಾ ಇಲಾಖೆಗಳಿಂದ ನಡೆಯುತ್ತಿವೆ. ಹಾಗೆಯೇ, ಸೇವಾಸಿಂಧು ಪೋರ್ಟಲ್ ಮೂಲಕ ಹೆಚ್ಚುಕಡಿಮೆ 65 ಇಲಾಖೆಗಳ 760 ಆನ್‌ಲೈನ್ ಸೇವೆಗಳು ನಡೆಯುತ್ತಿವೆ ಎಂಬ ಒಂದು ಅಂದಾಜಿದೆ. ಜತೆಗೆ ಅಗತ್ಯವಿದ್ದ ಸಮಯಕ್ಕೆ ಸರ್ವರ್ ಸಿಗದು. ಯಾವುದೇ ಯೋಜನೆಗೆ ಅರ್ಜಿ ಸಲ್ಲಿಸಬೇಕಿದ್ದರೂ ಸರ್ವರ್ ಪೆಡಂಭೂತ ವಾರಗಟ್ಟಲೆ ಕಾಡಿಸದಿರದು.

ಅಷ್ಟೊತ್ತಿಗೆ ಆ ಯೋಜನೆಯ ಅಂತಿಮ ದಿನವೇ ಮುಗಿದುಹೋಗಿರುತ್ತದೆ. ನಾಡಿನ ಎಷ್ಟೋ ರೈತರಿಗೆ ಎಲ್ಲಿ, ಹೇಗೆ ಬೆಳೆವಿಮೆಗೆ ಅರ್ಜಿ ಸಲ್ಲಿಸಬೇಕು ಎಂದೇ ಗೊತ್ತಾಗುತ್ತಿಲ್ಲ. ಈ ಸರ್ವರ್ ಸಮಸ್ಯೆಯಿಂದಾಗಿ ಕೊನೆ ದಿನಾಂಕವನ್ನು ಸರಕಾರವೇ ಪದೇಪದೆ ವಿಸ್ತರಿಸಿದೆ. ಸರ್ವರ್ ಕಾಟದಿಂದಾಗಿ ಕೆಲ ಪರೀಕ್ಷೆಗಳನ್ನು ಮರಳಿ ನಡೆಸಲಾಗಿದೆ. ಕೆಲ ಪರೀಕ್ಷಾ ದಿನಾಂಕಗಳನ್ನು ಮತ್ತೆ ಮತ್ತೆ ವಿಸ್ತರಿಸಲಾಗಿದೆ. ಹೀಗೆ ಈ ತಂತ್ರಾಂಶಗಳ ಯೋಗ್ಯತೆಯನ್ನು ಮತ್ತು ಗುತ್ತಿಗೆ ಪಡೆದು ಇವನ್ನು ನಿರ್ವಹಿಸುತ್ತಿರುವ ಕಂಪನಿಗಳ ವಿಶ್ವಾಸಾರ್ಹತೆ, ಗುಣಮಟ್ಟವನ್ನು ನೋಡದೇ ಸರಕಾರ ಬೇಕಾ ಬಿಟ್ಟಿ ನಡೆದುಕೊಳ್ಳುತ್ತಿದೆ ಎಂಬುದು ಅರಿವಾಗುತ್ತದೆ.

ಪೋರ್ಟಲ್ ಸಹಿತ ಎಲ್ಲ ಸರ್ವರ್‌ಗಳು ಸದಾಕಾಲ ಸಮಸ್ಯೆಯ ಇರುತ್ತವೆ. ಸಾಮಾನ್ಯ ಜನರ ಮೇಲೆ ಇದರ ನೇರ ಪರಿಣಾಮವಾಗುತ್ತಿದೆ. ಕರ್ನಾಟಕದಲ್ಲಿ ಸ್ಥಿರಾಸ್ತಿ ನೋಂದಣಿ ಸಾಧ್ಯವೇ ಇಲ್ಲ ಎಂಬ ಸ್ಥಿತಿ ಬಂದುಬಿಟ್ಟಿದೆ. ಆಸ್ತಿ ನೋಂದಣಿಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬೆಳಗ್ಗೆ ನಿಂತರೆ ಸಂಜೆಯವರೆಗೂ ಕೆಲಸವಾಗುವುದಿಲ್ಲ.
ಇನ್ನೊಂದೆಡೆ ಉಚಿತ ರೇಷನ್ ನೀಡಲು ಬಯೊಮೆಟ್ರಿಕ್ ಸಹಿತ ಸಾಫ್ಟ್‌ ವೇರ್ ಅಪ್ಡೇಷನ್ ಬಗ್ಗೆ ಸರಕಾರ ಮಾತ ನಾಡುತ್ತಿದೆ.

ಸಾಫ್ಟ್‌ ವೇರ್ ಅಪ್ಡೇಟ್ ಆಗದಿರುವುದರಿಂದ ಅರ್ಹರಿಗೂ ಅಕ್ಕಿ ಸಿಗುತ್ತಿಲ್ಲ. ರೇಷನ್ ಕಾರ್ಡ್ ರದ್ದಾಗುವ ಆತಂಕವೂ ಅನೇಕರಲ್ಲಿ ಮನೆಮಾಡಿದೆ. ತಾಂತ್ರಿಕತೆ ಇಷ್ಟೊಂದು ಬೆಳೆದಿರುವಾಗ ಸರ್ವರ್ ಯಾಕಿಷ್ಟು ದುರ್ಬಲವಾಗುತ್ತಿದೆ? ಸಾಮಾನ್ಯರ ಆಸ್ತಿ ನೋಂದಣಿ ಆಗುತ್ತಿಲ್ಲ. ಆದರೆ, ರೈತರ ಪಹಣಿ ರೈತರಿಗೆ ಅರಿವಿಲ್ಲದೇ ಬೇರೊಂದು ಸಂಸ್ಥೆಯ ಪಾಲಾಗುತ್ತಿದೆ. ಜಿಲ್ಲಾಧಿಕಾರಿ, ತಹಶೀಲ್ದಾರ್‌ಗಳಿಗೆ ಈ ವಿಚಾರ ಗೊತ್ತಿಲ್ಲದ್ದೇನಲ್ಲ.

ವಿಜಯಪುರ ಜಿಯೊಂದರ 11500 ಎಕರೆ ಜಮೀನಿನ ಪಹಣಿ ಬೇರೆ ಸಂಸ್ಥೆಯ ಹೆಸರಿಗೆ ಆಗಿದೆ ಎಂದರೆ, ರಾಜ್ಯದಲ್ಲಿ
ಈ ಪ್ರಮಾಣ ಎಷ್ಟಿರಬಹುದು? 1988ರಿಂದ 2018ರವರೆಗೂ ರೈತರ ಹೆಸರಿನಲ್ಲಿದ್ದ ಪಹಣಿ ಏಕಾಏಕಿ ಆ ಸಂಸ್ಥೆಯ ಹೆಸರಿಗೆ ಹೇಗಾಯಿತು? ಜನಸಾಮಾನ್ಯರಿಗೆ ಸರ್ವರ್ ಸಮಸ್ಯೆಯಾಗುತ್ತದೆ, ಆದರೆ ಇಂಥ ಕಾರ್ಯಕ್ಕೆ ಸರ್ವರ್ ಸಹಕಾರಿಯಾಗುವುದೇ? ರಾಜ್ಯದ ಜನತೆ ನಿತ್ಯ ಎದುರಿಸುತ್ತಿರುವ ಸರ್ವರ್ ಗೋಳು ಇನ್ನಾದರೂ ತಪ್ಪಿಲಿ, ಸರಕಾರ ಈ ಬಗ್ಗೆ ಗಂಭೀರವಾಗಿ ಆಲೋಚಿಸಲಿ.

ಇದನ್ನೂ ಓದಿ: Gururaj Gantihole Column: ಬದುಕನ್ನು ಬಂಗಾರವಾಗಿಸುವ ಭತ್ತದ ಬೆಳೆಯನ್ನು ನಿರ್ಲಕ್ಷಿಸದಿರಿ