Saturday, 12th October 2024

ಗುರುಕುಲ ಪದ್ದತಿಯನ್ನು ಮಕಾಡೆ ಮಲಗಿಸಿದ ಮೆಕಾಲೆ

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

1835, ಡಿಯರ್ ಫಾದರ್! ಇಲ್ಲಿ ಎಲ್ಲವೂ ಯೋಜನೆಯಂತೆಯೇ ನಡೆಯುತ್ತಿದೆ. ನಾನಿಲ್ಲಿ ಪ್ರಯೋಗಿಸುತ್ತಿರುವ ಯೋಜನೆಗಳನ್ನು ಗಮನಿಸಿದರೆ ನಮ್ಮ ಸರಕಾರ ನನಗೊಂದು ಮೆಡಲು ಕೊಡಲೇಬೇಕು. ನೋಡುತ್ತಿರಿ ; ಇನ್ನು ಕೆಲವೇ ವರ್ಷ ಅಷ್ಟೇ ! ಈ ಇಂಡಿಯಾದಲ್ಲಿನ ಪ್ರತಿಯೊಂದು ಮಗುವೂ ಸಂಪೂರ್ಣವಾಗಿ ಬದಲಾಗಿರುತ್ತದೆ.

ಆತನ ದೇಹ ಮಾತ್ರ ಭಾರತದ್ದಾಗಿರುತ್ತದೆ. ಆದರೆ ಆತನ ಯೋಚಿಸುವ ಮೆದುಳು, ಮನಸ್ಸು ಎಲ್ಲವೂ ಬ್ರಿಟಿಷರದ್ದಾಗಿರುತ್ತದೆ. ಇಂಥ ಸಾರಾಂಶವಿರುವ ಪತ್ರ ವನ್ನು ಇಂಗ್ಲೆಂಡಿನಲ್ಲಿದ್ದ ತನ್ನ ತಂದೆಗೆ ರವಾನಿಸಿದವನ ಹೆಸರು ಲಾರ್ಡ್ ಮೆಕಾಲೆ. ಭಾರತದಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಬುಡಸಮೇತ ಕಿತ್ತೆಸೆಯಲು ಕರಾರ ವಾಕ್ಕಾದ ಯೋಜನೆಯೊಂದನ್ನು ರೂಪಿಸುತ್ತಾನೆ. ಆ ಯೋಜನೆಯ ಫಲವೇ ಇವತ್ತಿನ ‘ಕಾನ್ವೆಂಟ್’ ಸಂಸ್ಕೃತಿ. ಈ ಇಂಡಿಯ ಕಂಪನಿಯ ಆದೇಶದಂತೆ ಲಾರ್ಡ್ ಮೆಕಾಲೆ ಇಲ್ಲಿನ ಶಿಕ್ಷಣ ವ್ಯವಸ್ಥೆ ಕುರಿತಂತೆ ಗಂಭೀರವಾದ ಸರ್ವೆ ಮಾಡಿಸುತ್ತಾನೆ.

1835ರಲ್ಲಿ ಸುಮಾರು ಒಂದೂವರೆ ಸಾವಿರ ಬ್ರಿಟಿಷ್ ಅಽಕಾರಿಗಳು ಇಂಥದೊಂದು ಸರ್ವೆ ನಡೆಸಿ ವರದಿ ಯನ್ನು (ಲಂಡನ್ನಿನ ಇಂಡಿಯಾ ಹೌಸ್ ಲೈಬ್ರರಿ) ಸಿದ್ಧಪಡಿಸಿ ಮೆಕಾಲೆ ಕೈಗಿತ್ತಾಗ, ಈತ ದಿಗ್ಭ್ರಮೆಗೊಳ್ಳುತ್ತಾನೆ. ವರದಿಯ ಪ್ರಕಾರ, ಆವತ್ತಿನ ಮದ್ರಾಸ್ ಪ್ರಾಂತ್ಯವೊಂದರ ಸುಮಾರು ಒಂದೂವರೆ ಲಕ್ಷ ಕಾಲೇಜುಗಳಿದ್ದು ಅವೆಲ್ಲವೂ ಗುರುಕುಲಗಳಾಗಿದ್ದವು. ಲಾರ್ಡ್ ಮೆಕಾಲೆ ಅವೆಲ್ಲವನ್ನೂ ಕೂಲಂಕಷವಾಗಿ ಪರೀಕ್ಷಿಸಿ, ಇಲ್ಲಿನ ಗುರುಕುಲ ಶಿಕ್ಷಣದ ಜ್ಞಾನಶಿಖರವನ್ನು ಕಂಡು ಚಿಕ್ಕದೊಂದು ಶರಾ ಬರೆಯುತ್ತಾನೆ: Higher Learning Institutes !.

ಆಶ್ಚರ್ಯದ ಸಂಗತಿಯೆಂದರೆ ಅದರಲ್ಲಿದ್ದ ಸರ್ಜರಿ ಕಾಲೇಜುಗಳ ಸಂಖ್ಯೆ ಒಂದುವರೆ ಸಾವಿರದಷ್ಟಿತ್ತು. 1832 ರ ಸಮಯದಲ್ಲಿ ಲಂಡನ್ನಿನ ವೈದ್ಯರಿಗೆ ಸರ್ಜರಿ ಎಂದರೇನೆಂಬುದೇ ಗೊತ್ತಿರಲಿಲ್ಲ. ಆದರೆ ಅದಕ್ಕಿಂತ ನೂರಾರು ವರ್ಷಗಳ ಹಿಂದೆಯೇ ನಮಗೆ ಬರೀ ಸರ್ಜರಿಯಲ್ಲ ; ಪ್ಲಾಸ್ಟಿಕ್ ಸರ್ಜರಿಯೂ ತಿಳಿದಿತ್ತು. ಅದೇ ರೀತಿ ಮದ್ರಾಸ್ ಪ್ರಾಂತ್ಯದಲ್ಲಿದ್ದ ಆರ್ಕಿಟೆಕ್ಟ್ ಕಾಲೇಜುಗಳ ಸಂಖ್ಯೆ 2200 !. ಅಂದಿನ ಪೆರಿಯಾರ್ ಜನಾಂಗದವರು ನುರಿತ ಆರ್ಕಿಟೆಕ್ಟ್ ವಿದ್ಯಾರ್ಥಿ ಗಳಾಗಿದ್ದರು. ಹೀಗಾಗಿ ದಕ್ಷಿಣ ಭಾರತದ ಸುಪ್ರಸಿದ್ಧ ದೇವಾಲಯಗಳನ್ನು ನಿರ್ಮಿಸಿದವರು ಇದೇ ಪೆರಿಯಾರ್ ಜನಾಂಗ.

ಆದರೆ ಪೆರಿಯಾರ್ ಜನಾಂಗದವರನ್ನು ಬೆದರಿಸಿ ದೇವಸ್ಥಾನಗಳನ್ನು ಕಟ್ಟಬಾರದೆಂದು ಕಾನೂನು ತರಲಾಯಿತು. ಸುಮಾರು 1.5 ಲಕ್ಷ ಕಾಲೇಜುಗಳಿದ್ದ
ಮದ್ರಾಸ್ ಪ್ರಾಂತ್ಯದಲ್ಲಿ ಅವತ್ತು ಹಳ್ಳಿಗಳಿದ್ದದ್ದು 1.57 ಲಕ್ಷ!. ಅಂದರೆ ಒಂದೊಂದು ಹಳ್ಳಿಗೂ ಒಂದೊಂದು ಕಾಲೇಜು!. ದುರಂತವೆಂದರೆ ಇಂಥದೊಂದು ಶಿಕ್ಷಣ ವ್ಯವಸ್ಥೆಯನ್ನು ಹಾಳುಮಾಡಿದ ಮೆಕಾಲೆ, ಇಂಡಿಯನ್ ಎಜುಕೇಶನ್ ಆಕ್ಟ್’ ಎಂಬ ಅಸ್ತ್ರವನ್ನು ಬಳಸಿ ಕಾನ್ವೆಂಟ್ ಪದ್ಧತಿಯನ್ನು ಹುಟ್ಟುಹಾಕಿದ. ಕೊಲ್ಕತ್ತಾದಲ್ಲಿ ಮೊಟ್ಟಮೊದಲ ಕಾನ್ವೆಂಟ್ ಪ್ರಾರಂಭಿಸಲಾಯಿತು. ಇಂಥ ಕಾನ್ವೆಂಟ್‌ಗಳಿಗೆ ವಿದ್ಯಾರ್ಥಿಗಳನ್ನು ಹಿಡಿದು ತರುವ ಕೆಲಸವನ್ನು ಮಾಡಿದ ಪುಣ್ಯಾತ್ಮ ಯಾರು ಗೊತ್ತೆ ?. ರಾಜಾರಾಮ್ ಮೋಹನ್ ರಾಯ! ಮೆಕಾಲೆಯ ಕನಸು ನೆರವೇರಿತು.

ಮದ್ರಾಸ್‌ನ ಕಲೆಕ್ಟರ್ ಆಗಿದ್ದ ಎ.ಒ.ಹ್ಯೂಮ್ ಅಲ್ಲಿದ್ದ ಅಷ್ಟೂ ಗುರುಕುಲಗಳನ್ನು ಕಾನೂನುಬಾಹಿರ ಎಂದು ಘೋಷಿಸಿದ. ಪರಿಣಾಮವಾಗಿ ಇವತ್ತು ಈ ಕಾನ್ವೆಂಟ್‌ಗೆ ಪೋಷಕರು ಮರುಳಾಗಿ ಹೋಗಿದ್ದಾರೆ. ಇಷ್ಟಕ್ಕೂ ಈ ಕಾನ್ವೆಂಟ್ ಪದದ ಅರ್ಥವೇನು ಗೊತ್ತೆ ? ‘ಕ್ರಿಶ್ಚಿಯನ್ ಮಹಿಳಾ ಸನ್ಯಾಸಿಗಳು (ನ) ನಡೆಸುವ ಒಂದು ಸಂಸ್ಥೆ’. ಬ್ರಿಟಿಷರು ಭಾರತವನ್ನು ಬಿಟ್ಟುಹೋದರೂ ಅವರ ಶಿಕ್ಷಣ ಪದ್ಧತಿಯಲ್ಲಿ ಮುಂದೆ ಎಂತೆಂಥ ಕಟ್ಟುಕಥೆ, ಸುಳ್ಳು ಇತಿಹಾಸ, ತಿರುಚಿದ ಚರಿತ್ರೆ, ಅಯೋಗ್ಯ ಅಸಂಬದ್ಧ ವ್ಯಕ್ತಿಗಳ ವೈಭವೀಕರಣ ಪಠ್ಯಗಳಲ್ಲಿ ತುರುಕುತ್ತಾ ಬಂದರೆಂದರೆ, ಬ್ರಿಟಿಷರ ನಂತರವೂ ಇಲ್ಲಿನ ಕೆಲ ಗುಲಾಮರುಗಳು ಶಿಕ್ಷಣ ಪದ್ಧತಿಯ ಮೂಲಕ ಭಾರತೀಯರ ಮೇಲೆ ಮತ್ತೊಂದು ಸುತ್ತಿನ ಗುಲಾಮಗಿರಿ ಮನಸ್ಥಿತಿಯನ್ನು ಸ್ಥಾಪಿಸಿಬಿಟ್ಟರು.

ಆಕ್ರಮಣ ಮಾಡಿದ ಅಲೆಕ್ಸಾಂಡರ್, ದಿಕ್ಕುತಪ್ಪಿ ಭಾರತಕ್ಕೆ ಬಂದ ವಾಸ್ಕೊಡಿಗಾಮ, ಧರ್ಮಾಂಧ ದಾಳಿಕೋರರು-ದರೋಡೆಕೋರ ಇಸ್ಲಾಂ ನಾಯಕರುಗಳನ್ನು ಭಾರತದ ಭಾಗ್ಯವಿಧಾತರಂತೆ ಬಿಂಬಿಸಿ ಮಕ್ಕಳ ಮನಸ್ಸಿನಲ್ಲಿ ಸ್ವಾಭಿಮಾನವನ್ನು ನಾಶಮಾಡಲಾಯಿತು. ಈಗ ನೋಡಿ, ಆಫ್ಘಾನಿಸ್ತಾನದಲ್ಲಿ ಮಹಿಳೆಯರು ಕೇವಲ ಮಕ್ಕಳು ಹೆರುವುದಕ್ಕೆ ಮಾತ್ರ ಎನ್ನುವುದು ಮೂಲ ಇಸ್ಲಾಂ ಧರ್ಮದ ಆಶಯ ಎನ್ನಲಾಗುತ್ತಿದೆ. ಹೀಗಿರುವಾಗ ಶಹಜಹಾನ್ ತನ್ನ ಹೆಂಡತಿ ಮುಮ್ತಾಜ್ ಬೇಗಂಗೆ ಸಮಾಧಿ ಕಟ್ಟಿಸಿ ಅದಕ್ಕಾಗಿ ಅಂಥ ಬೃಹತ್ ತಾಜ್ ಮಹಲ್ ಕಟ್ಟಿದ್ದ ಎಂದು ನಂಬಿಸಲಾಗಿದೆ. ಅಸಲಿಗೆ ಅದು ತೇಜೋಮಹಲ್ ಎಂಬ ಹಿಂದೂ
ದೇವಾಲಯದ ಮೇಲೆ ನಿರ್ಮಿಸಲಾದ ಸಮಾಧಿ ಎಂಬುದು ಜಗತ್ತಿಗೇ ಗೊತ್ತಿದ್ದರೂ ಭಾರತೀಯರು ಅದೊಂದು ಮಹಾನ್ ಇತಿಹಾಸ ಎಂದು ಓದಿಕೊಂಡು ಬರಲಾಯಿತು.

ಮೊಘಲರು, ಖಿಲ್ಜಿ, ತುಘಲಕ್, ಸಯ್ಯಿದಿ, ಲೋಧಿ, ಬಹಮನಿ, ಘೋರಿ ಹೀಗೆ ದೇಶದ ಪರಂಪರೆಯನ್ನು ಹಾಳುಮಾಡಿದವರನ್ನೆ ಮಹಾನ್ ಸಾಧಕರಂತೆ ಮಕ್ಕಳಿಗೆ
ಬೋಧಿಸಲಾಗುತ್ತಿದೆ. ಬ್ರಿಟಿಷರ ಎದೆಬಡಿತ ಹೆಚ್ಚಿಸಿದ ತಿಲಕ್, ಆಜಾದ್, ಭಗತ್, ಉಧಮ, ನೇತಾಜಿಯಂಥ ಕ್ರಾಂತಿಕಾರಿ ಹುತಾತ್ಮರನ್ನು ಮರೆಮಾಚಿ ‘ಹಾಳೂರಿಗೆ ಉಳಿದವರಿಬ್ಬರು ಕಂತ್ರಿಗಳು’ ಎಂಬಂತೆ ಚಟ್ಟಪಲ್ಲಕ್ಕಿ ಹೊರಲಾಯಿತು. ಇದನ್ನು ಈ ದೇಶದವನು ಕಂಡುಹಿಡಿದ, ಅದನ್ನು ಆ ದೇಶದವನು ಕಂಡು ಹಿಡಿದ ಎಂದೆ ಹೇಳುವ ಪಾಠಗಳಲ್ಲಿ ನಮ್ಮ ಪುರಾಣಗಳಲ್ಲಿ ವೇದಗಳ ಮಂತ್ರಗಳಲ್ಲಿನ ವೈಜ್ಞಾನಿಕ ವಿಚಾರಗಳು, ದೇವಾಲಯಗಳಲ್ಲಿನ ವಾಸ್ತುಶಿಲ್ಪಗಳಲ್ಲಿನ ಅದ್ಭುತವಾದ ತಂತ್ರಜ್ಞಾನಗಳು, ಹಬ್ಬಗಳ ಆಚರಣೆ ಮತ್ತು ಅದರಲ್ಲಿನ ಪ್ರಾಕೃತಿಕವಾದ ವೈಜ್ಞಾನಿಕ ಸಂವೇದನೆಗಳು, ಆಯುರ್ವೇದ-ಧ್ಯಾನ-ಯೋಗ-ಮಂತ್ರ
ಶ್ಲೋಕಗಳಲ್ಲಿನ ವೈದ್ಯಕೀಯ ತಳಹದಿಯ ಅತ್ಯಮೂಲ್ಯ ವಿಚಾರಗಳನ್ನು ನಮ್ಮ ಶಿಕ್ಷಣದಲ್ಲಿ ಕಲಿಸಲೇಇಲ್ಲ.

ಅಮೆರಿಕ ನಾಸಾ ಕೋಟ್ಯಂತರ ವ್ಯಯಿಸಿ ನಡೆಸುವ ಗ್ರಹಗತಿಗಳ ಸಂಶೋಧನೆಗಳನ್ನೆ ನಮ್ಮ ಪಂಚಾಂಗಗಳು ಎಂದೋ ದಾಖಲಿಸಿರುತ್ತವೆ. ಈಗ ಹೊಸ ಶಿಕ್ಷಣ ನೀತಿಯನ್ನು ಕೆಲ ಸಂಸ್ಥೆಗಳು ಶಿಕ್ಷಣ ತಜ್ಞರುಗಳು ಮಥನಕ್ಕೆ ಒಳಪಡಿಸಿದ ಮೇಲೆ ಈಗ ನಾವುಗಳು ಕಲಿತ ಇತಿಹಾಸಗಳು ಎಷ್ಟು ಸುಳ್ಳು- ಪೊಳ್ಳು-ಉತ್ಪ್ರೇಕ್ಷಿತ-ಕಾಲ್ಪನಿಕ ಎಂಬುದು ಅರಿವಾಗುತ್ತಿದೆ. ಸರಿಯಾಗಿ ಹೇಳಬೇಕೆಂದರೆ ಮೆಕಾಲೆ ಶಿಕ್ಷಣಪದ್ಧತಿಯ ಪೂರಕವಾಗಿದ್ದ ಕಮ್ಮಿನಿಷ್ಠರು, ಅಯೋಗ್ಯ ಬುದ್ಧಿಜೀವಿಗಳು, ಸ್ವಾರ್ಥ ಸಮಯಸಾಧಕರ ಫಲವೋ ಎನೋ, ಇಂದು ದೇಶಾಭಿಮಾನಿಗಳಿಗಿಂತ ದೇಶದ್ರೋಹಿಗಳೇ ಹೆಚ್ಚಾಗುತ್ತಿದ್ದಾರೆ.

ರಾಷ್ಟ್ರವೇ ಬೇರೆ ರಾಜ್ಯವೇ ಬೇರೆ ಎನ್ನುವ ತಿಕ್ಕಲರು, ಸಂಸ್ಕೃತಿಯೇ ಬೇರೆ ಕನ್ನಡವೇ ಬೇರೆ ಎನ್ನುವ ಪ್ರೇಪೇಡ್ ಪೋಸ್ಟ್‌ಪೇಡ್ ಗಿರಾಕಿಗಳು ಹುಟ್ಟಿಕೊಳ್ಳು ತ್ತಿದ್ದಾರೆ. ಕನ್ನಡ ಹೋರಾಟಗಾರರು ಕೆಲಸಕ್ಕೆ ಬಾರದ ಹಿಂದಿ ದಿವಸದ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಾರೆ. ಆದರೆ ಮೈಸೂರಿನಲ್ಲಿ ದೇವದೇವತೆ ಗಳ ಗುಡಿಗಳನ್ನು ಕೆಡವಿದಾಗ ಯಾರೂ ಸೊತ್ತುವುದಿಲ್ಲ. ಇದೆ ಮೆಕಾಲೆ ಸೃಷ್ಠಿಸಿದ ಶಿಕ್ಷಣದ ಪದ್ಧತಿಯ ಸೈಡ್ ಎಫೆಕ್ಟ್ ಎಂದರೆ ಸುಳ್ಳಲ್ಲ. ಆದರೆ ಅಂದು ನಾಶವಾದ ಗುರುಕುಲ ಶಿಕ್ಷಣದಲ್ಲಿದ್ದ ಭಾಷಾ ಶ್ರೀಮಂತಿಕೆ, ಸದ್ಭಾವನೆ, ಸಂಸ್ಕಾರ, ಸಂಸ್ಕೃತಿ, ವೈಚಾರಿಕತೆ, ಸದ್ಗುಣ, ಸಂಪನ್ನತೆ, ಸ್ವಾಭಿಮಾನ, ಜನನಿ ಜನ್ಮಭೂಮಿಯ ಅನುಭೂತಿ, ಸೋದರತೆ, ದೇಶಾಭಿಮಾನ ಇವುಗಳ ಕೊರತೆಯೂ ಇಂದಿನ ಈ ದುರ್ಗತಿಗೆ ಕಾರಣವೆಂದರೆ ತಪ್ಪಲ್ಲ.

ಭಾರತೀಯರು ಅನಕ್ಷಸ್ಥರು, ಹಾವಾಡಿಗರು, ಮೂಢರು, ಮೌಢ್ಯವಂತರು ಎಂದೆ ಜರಿದು ಮೆಕಾಲೆ ಶಿಕ್ಷಣ ಪದ್ಧತಿಯಿಂದ ಭಾರತೀಯರು ಸಾಮಾಜಿಕತೆಯನ್ನು ಕಲಿತರು, ಪ್ರಜಾಪ್ರಭುತ್ವವನ್ನು ಹೊಂದಿದರು, ಬದುಕುವುದನ್ನು ಕಲಿತರು, ಉದ್ಧಾರವಾದರು ಎನ್ನುವ ಅವಿವೇಕಿಗಳು ತಿಳಿದುಕೊಳ್ಳಬೇಕಾದ ವಿಚಾರವೆಂದರೆ ಇಡೀ ಜಗತ್ತಿನಲ್ಲಿ ಶಾಲಾ ಪದ್ಧತಿ ವಿಕಸನಗೊಳ್ಳುತ್ತಿದ್ದರೆ ನಮ್ಮಲ್ಲಿನ ವಿಶ್ವವಿದ್ಯಾಲಯ ವಿಶ್ವವನ್ನೇ ವಿಕಸನಗೊಳಿಸುತಿತ್ತು.

ನಾನಾ ದೇಶಗಳ ಜನ ಭಾರತದ ಈ ವಿಶ್ವವಿದ್ಯಾಲಯದಲ್ಲಿ ಒಂದು ಅವಕಾಶ ಸಿಗಲಿ ಎಂದು ಬಯಸುತ್ತಿದ್ದರು. ಕ್ರಿಸ್ತಪೂರ್ವ 12ನೇ ಶತಮಾನದಲ್ಲಿ ಆವತ್ತಿನ ಮಗಧ ಅಂದರೆ ಈಗಿನ ಬಿಹಾರದಲ್ಲಿದ್ದ ನಳಂದ ವಿಶ್ವವಿದ್ಯಾಲಯ ಸರಿಸುಮಾರು ಹತ್ತು ಸಾವಿರ ವಿದ್ಯಾರ್ಥಿಗಳನ್ನು, ಎರಡು ಸಾವಿರಕ್ಕೂ ಹೆಚ್ಚು ಬೋಧಕರನ್ನು ತನ್ನ ಒಡಲಲ್ಲಿಟ್ಟುಕೊಂಡು ಜ್ಞಾನವನ್ನು ನೀಡುತಿತ್ತು. ನಳಂದ ಎಂದರೆ ಜ್ಞಾನವನ್ನು ಹಂಚುವುದು ಎಂದರ್ಥ. ಮುಂದೆ ಅದನ್ನು ಮಹಾವಿಹಾರ ಎಂದು ಕರೆಯ ಲಾಯಿತು. ಅಂದರೆ ಬೌದ್ಧ ಧರ್ಮದ ಜ್ಞಾನಾರ್ಜನೆಯ ಕೇಂದ್ರ. ಸುಮಾರು 32 ಎಕರೆಯಲ್ಲಿ ಸ್ಥಾಪಿತ ಈ ವಿಶ್ವವಿದ್ಯಾಲಯ ಬುದ್ಧ ಹುಟ್ಟುವುದಕ್ಕೂ ಮೊದಲೇ ಇತ್ತು ಎಂದು ಅಲ್ಲಿನ ಐತಿಹ್ಯಗಳು ತಿಳಿಸುತ್ತದೆ.

ಅಲ್ಲದೆ ಈ ವಿಶ್ವವಿದ್ಯಾಲಯದಲ್ಲಿ ಮಹಾವೀರ, ತೀರ್ಥಂಕರರು 14 ವರ್ಷ ಋತುಗಳನ್ನು ಕಳೆದಿದ್ದಾರೆ. ಗೌತಮ ಬುದ್ಧನು ಇಲ್ಲಿ ಧ್ಯಾನಾಸಕ್ತನಾಗಿ ಸಾಕಷ್ಟು ವರ್ಷ
ಕಳೆದಿದ್ದಾನೆ ಎಂಬುದರ ಬಗ್ಗೆ ಉಲ್ಲೇಖವಿದೆ. ಆನಂತರ ಗಣಿತ, ಖಗೋಳ, ತತ್ವಶಾಸ್ತ್ರ ಹೀಗೆ ಸಾಕಷ್ಟು ವಿಷಯಗಳನ್ನು ಬೌದ್ಧಧರ್ಮದ ತತ್ವಗಳನ್ನು ಅನು ಸರಿಸಲು ಪ್ರಾರಂಭವಾಯಿತು. ಚೀನಾ, ಮಯನ್ಮಾರ ಮುಂತಾದ ಹಲವು ದೇಶಗಳಿಂದ ಇಲ್ಲಿಗೆ ವಿದ್ಯಾರ್ಥಿಗಳು ಬರತೊಡಗಿದರು. ನಳಂದ ವಿಶ್ವವಿದ್ಯಾಲಯ ಅಜಾತಶತ್ರುವಿನ ಕಾಲದಿಂದಲೂ ಸಂಪದ್ಭರಿತವಾಗಿತ್ತು. ಮೌರ್ಯ ಚಕ್ರವರ್ತಿ ಅಶೋಕ, ನಂತರ ಶಾತವಾಹನರು, ಕುಶಾನರು, ಕುಮಾರಗುಪ್ತನ ಕಾಲದಲ್ಲಿ ನಳಂದ ಹಾಗೂ ವಿಕ್ರಮಶೀಲ ವಿಶ್ವವಿದ್ಯಾಲಯಗಳು ಸಾಕಷ್ಟು ಅಭಿವೃದ್ಧಿಯಾಗುತ್ತದೆ.

ಕ್ರಿಸ್ತಶಕ ೫ನೇ ಶತಮಾನದ ಹೊತ್ತಿಗೆ ಈ ವಿಶ್ವವಿದ್ಯಾಲಯದಲ್ಲಿ ಹತ್ತು ಸಾವಿರ ವಿದ್ಯಾರ್ಥಿಗಳು, 1500 ಶಿಕ್ಷಕರಿರುತ್ತಾರೆ. ಎರಡನೇ ಚಂದ್ರಗುಪ್ತನ ಆಳ್ವಿಕೆಯ ಕಾಲದಲ್ಲಿ ಚೀನಾದ ಬೌದ್ಧ ಪ್ರವಾಸಿಗ -ಹಿಯಾನ್ ನಳಂದ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ ಭಾರತವನ್ನು ಕೊಂಡಾಡುತ್ತಾ ವಿಶ್ವವಿದ್ಯಾಲಯವನ್ನು ಹೊಗಳಿ ದ್ದಾನೆ. ಕಾಲಾನಂತರ ಈ ವಿಶ್ವವಿದ್ಯಾಲಯ ವಿಶ್ವಯಾತ್ರಿಕರ ಮೆಚ್ಚಿನ ಸ್ಥಳವಾಗಿ 12ನೇ ಶತಮಾನದವರೆಗೂ ಜ್ಞಾನವನ್ನು ನೀಡುತ್ತಾ ಬಂದಿತ್ತು.
ಬೌದ್ಧ-ಶೈವ-ವೈಷ್ಣವ ಪಂಥಗಳಿಗೆ ರಾಜಾಶ್ರಯ ನೀಡಿದ್ದ ಈ ವಿಶ್ವವಿದ್ಯಾಲಯದ ಮೇಲೆ ಇಸ್ಲಾಂ ಆಕ್ರಮಣಕಾರ ಭಕ್ತಿಯಾರ್ ಖಿಲ್ಜಿಯು ದಾಳಿಮಾಡಿ ಅಲ್ಲಿನ ಬೌದ್ಧ ಯಾತ್ರಿಕರನ್ನು ಕೊಲ್ಲುತ್ತಾನೆ.

ಸುಮಾರು ಐವತ್ತು ಲಕ್ಷಗಳಷ್ಟಿದ್ದ ಗ್ರಂಥಗಳಿಗೆ ಬೆಂಕಿಯಿಟ್ಟು ಸುಡುತ್ತಾನೆ. ಖಿಲ್ಜಿ ಹಚ್ಚಿದ ಬೆಂಕಿ ಆರುತಿಂಗಳವರೆಗೆ ಅಲ್ಲಿನ ಗ್ರಂಥಭಂಡಾರವನ್ನು ಸುಡುತ್ತದೆ. ನಂತರ ವಿಶ್ವವಿದ್ಯಾಲಯ ನಮ್ಮ ಹಂಪಿಯಂತೆ ಅವಸಾನವಾಗುತ್ತದೆ. ಉಳಿದ ಗ್ರಂಥಗಳನ್ನು ನಳಂದ ಮುಖ್ಯಸ್ಥರಾಗಿದ್ದ ಬೌದ್ಧ ಭಿಕ್ಕು ಶಾಖ್ಯ ಶ್ರೀಭದ್ರ ರಕ್ಷಸಿ
ಗ್ರಂಥಗಳ ಸಮೇತ ಟಿಬೆಟ್ ಸೇರಿಕೊಳ್ಳುತ್ತಾರೆ. ಈಗ ಹೇಳಿ ಭಾರತಲ್ಲಿದ್ದದ್ದು ಮತ್ತು ಬೇಕಿರುವುದು ಯಾವ ಮಾದರಿಯ ಶಿಕ್ಷಣವೆಂಬುದು. ಅದಕ್ಕೇ ಹೇಳುವುದು
ಭಾರತ ಸದಾ ವಿಶ್ವಗುರು ಎಂದು.

ಕೇಂದ್ರ ಸರಕಾರ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿಯನ್ನು ಕೆಲವರು ವಿರೋಧಿಸುತ್ತಿರುವುದರ ಹಿಂದೆಯೂ ಈ ‘ಮೆಕಾಲಿಸಂ’ ಧೋರಣೆ ಅಡಗಿದೆ. ನಮ್ಮ ದೇಶದ ಮುಸಲ್ಮಾನರಿಗೆ ಮದರಾಸಗಳಲ್ಲಿ ಕಡ್ಡಾಯವಾಗಿ ಕುರಾನ್ ತತ್ವಗಳನ್ನು ಕಲಿಸಲಾಗುತ್ತದೆ. ಆಗೆಯೇ ಕ್ರಿಶ್ಚಿಯನ್ ಕೇಂದ್ರಗಳಲ್ಲಿ ಶಾಲೆಗಳಲ್ಲಿ ಬೈಬಲ್ ತತ್ವಗಳನ್ನು ಸಾರಲಾಗುತ್ತದೆ ಹಾಗೂ ಹಿಂದೂ ಆಚರಣೆಗಳನ್ನು ನಿಷೇಧಿಸಲಾಗುತ್ತದೆ. ಆದರೆ ಹಿಂದೂಗಳ ಮಕ್ಕಳು ಮಾತ್ರ ಶಾಲೆಗಳಲ್ಲಿ ಭಗವದ್ಗೀತೆ ವೇದ ಪುರಾಣಗಳನ್ನು ಕಲಿಸುವುದು ಮಾತ್ರ ಕೋಮುವಾದ ಪುರೋಹಿತಶಾಹಿ ಕೇಸರಿಕರಣ ಎಂದು ಬಾಯಿ ಬಡಿದುಕೊಳ್ಳಲಾಗುತ್ತದೆ.

ಪ್ರಜಾಪ್ರಭುತ್ವಕ್ಕೆ ಸಂವಿಧಾನ ಮೊದಲ ಗ್ರಂಥ. ಹಾಗೆಯೇ ಸಂವಿಧಾನ ರಚನೆಯಾದ ನಂತರ ಅದನ್ನು ಯಾವ ಯಾವ ಸರಕಾರಗಳು ಯಾವಯಾವ ಪಕ್ಷಗಳು ಪ್ರಧಾನಿಗಳು ಎಷ್ಟು ಬಾರಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಲಾಗಿದೆ, ತಿದ್ದುಪಡಿ ತರಲಾಗಿದೆ ಎಂಬುದರ ಒಂದು ಪಠ್ಯವನ್ನು ರಚಿಸಿ ಮಕ್ಕಳಿಗೆ
ಬೋಧಿಸುವಂತಾಗಲಿ. ಎಲ್ಲದಕ್ಕೂ ಸಂವಿಧಾನವನ್ನು ಮಧ್ಯೆದಲ್ಲಿ ಎಳೆತಂದು ದಿಕ್ಕುತಪ್ಪಿಸುವುದನ್ನು ಬಿಟ್ಟು ಈ ದೇಶದ ಮಕ್ಕಳಿಗೆ ಯಾವರೀತಿಯ ಶಿಕ್ಷಣ ಬೇಕೆಂಬುದರ ಕುರಿತು ಹೆತ್ತವರಂತೆ ವರ್ತಿಸಲಿ. ಕೊನೆಯದಾಗಿ ನಮ್ಮ ಮಕ್ಕಳು ನಮ್ಮನ್ನು’ ಹೋಲಬೇಕೇ ಹೊರತು ಪಕ್ಕದಮನೆಯವರನ್ನಲ್ಲ ಅಲ್ಲವೇ?