ಬೇಟೆ
ಜಯವೀರ ವಿಕ್ರಮ ಸಂಪತ್ ಗೌಡ
ಮಹೇಶ್ ಚಂದ್ರ ಗುರು ಎಂಬ ಗೂಬೆ ಮುಂಡೇವುಗಳ ಬಗ್ಗೆ ಬರೆಯಲೇಬಾರದು ಎಂದು ಅಂದುಕೊಂಡಿದ್ದೆ. ಇಂಥವರನ್ನು
ದೊಡ್ಡವರನ್ನಾಗಿಮಾಡಿದವರು ಪತ್ರಕರ್ತರೇ. ಆ ಭಗವಾನ್ ಮತ್ತು ಮಹೇಶ್ ಚಂದ್ರ ಗುರು ಶುದ್ಧ ಅವಿವೇಕಿಗಳು.
ಅವರಿಗೆ ಹಿಂದೂ ದೇವರನ್ನು ಅವಹೇಳನ ಮಾಡಿದರೆ, ಪ್ರಚಾರ ಸಿಗುತ್ತದೆ ಎಂದು ಭಾವಿಸಿದ್ದಾರೆ. ಕಾಲಕಾಲಕ್ಕೆ ಹಿಂದೂ ಧರ್ಮ, ದೇವ-ದೇವತೆಗಳನ್ನು ಹೀಯಾಳಿಸುತ್ತಾರೆ, ನಿಂದಿಸುತ್ತಾರೆ. ಪತ್ರಿಕೆ ಮತ್ತು ಟಿವಿಗಳು ಅದನ್ನೇ ದೊಡ್ಡದಾಗಿ ಬರೆಯುತ್ತವೆ, ತೋರಿಸುತ್ತವೆ. ಅಷ್ಟಕ್ಕೇ ಇವರು ತಾವು ಮಹಾನ್ ಬುದ್ಧಿಜೀವಿಗಳಾದೆವು, ವಿಚಾರವಾದಿಗಳಾದೆವು ಅಂತ ಭ್ರಮಿಸುತ್ತಾರೆ. ಬಿಟ್ಟಿ ಪ್ರಚಾರ ಪಡೆದುಕೊಳ್ಳುತ್ತಾರೆ.
ಒಂದೆರಡು ದಿನ ಮುನ್ನೆಲೆಗೆ ಬರುತ್ತಾರೆ. ಜನರಿಗೂ ಗೊತ್ತು, ಇವರು ಅಂಡೆಪಿರ್ಕಿ ಗಳೆಂದು. ಹುಚ್ಚು ನಾಯಿ ಬೊಗಳುತ್ತವೆ ಎಂದು ಯಾರೂ ಇವರನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ಮೂಲತಃ ಇವರು ಬೋದಾಳಗಳು. ಏನೂ ಗೊತ್ತಿಲ್ಲದ ತಿರಸಟ್ಟು ಗಳು. ಭಗವಾನ್ ಆಗಲಿ, ಮಹೇಶ್ ಚಂದ್ರ ಗುರು ಆಗಲಿ, ತಮ್ಮ ಫೀಲ್ಡ ವರ್ಕ್‌ನಿಂದ ಸಾಧನೆ ಮಾಡಿದವರಲ್ಲ. ಇಬ್ಬರಿಗೂ ಅವರವರ ಕ್ಷೇತ್ರದಲ್ಲಿ ನೆಲೆಯೇ ಇಲ್ಲ.
ಮಹೇಶ್ ಚಂದ್ರ ಗುರು ಮೈಸೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದಲ್ಲಿ ಮಾಡಿದ ಅನಾಚಾರ, ದುಪಳಿ ಅಷ್ಟಿಷ್ಟಲ್ಲ. ವಿದ್ಯಾರ್ಥಿಗಳ ಮನಸ್ಸಿನಲ್ಲಿ ಜಾತಿ ವಿಷ ಬೀಜ ಬಿತ್ತಿ ಅವರ ಜೀವನದ ಜತೆ ಆಟವಾಡಿದ ಒಬ್ಬ ಹೊಣೆಗೇಡಿ
ಅಧ್ಯಾಪಕ. ಈತನಿಗೆ ಯಾವುದೇ ರಾಜ್ಯಮಟ್ಟದ ಪತ್ರಿಕೆಯೂ ಅಟೆಂಡರ್ ಕೆಲಸವನ್ನೂ ಕೊಡಲಿಕ್ಕಿಲ್ಲ. ಅಷ್ಟರಮಟ್ಟಿಗೆ ಇವನಿಗೂ, ಪತ್ರಿಕೋದ್ಯಮಕ್ಕೂ ಸಂಬಂಧ!
ಈತ ಒಂದು ದಿನವೂ ಸರಿಯಾಗಿ ಪಾಠ ಮಾಡಲಿಲ್ಲ. ಬರೀ ಅವರಿವರನ್ನು ಬೈಯುತ್ತಾ, ಜಾತಿವಾದ ಪೊರೆಯುತ್ತಾ, ವಿದ್ಯಾರ್ಥಿ ಗಳನ್ನುಒಡೆಯುತ್ತಾ, ಸಹೋದ್ಯೋಗಿಗಳ ಜತೆ ಜಗಳ ಕಾಯುತ್ತಾ ವಿಭಾಗದಿಂದ ನಿವೃತ್ತನಾಗಿ ನಿರ್ಗಮಿಸಿದ. ಯಾರಾದರೂ ಒಬ್ಬ ವಿದ್ಯಾರ್ಥಿ, ’ಹೌದು, ನಾನು ಅಭಿಮಾನದಿಂದ ಹೇಳಿಕೊಳ್ಳುತ್ತೇನೆ, ನಾನು ಮಹೇಶ್ ಚಂದ್ರ ಗುರು ಅವರ ವಿದ್ಯಾರ್ಥಿ’ ಎಂದು
ಎದೆತಟ್ಟಿಕೊಂಡು ಹೇಳಿಕೊಳ್ಳಲಿ, ನೋಡಿಯೇ ಬಿಡೋಣ.
ಅದು ಅವನ ಯೋಗ್ಯತೆ! ಕಾಲು ಶತಮಾನ ಪಾಠ ಮಾಡಿ, ಒಬ್ಬನೇ ಒಬ್ಬ ವಿದ್ಯಾರ್ಥಿಯಿಂದ ಒಳ್ಳೆಯ ಮಾತನ್ನು ಹೇಳಿಸಿಕೊಳ್ಳದ
ಅವನ ಬೌದ್ಧಿಕ ಮಟ್ಟ ಹೇಗಿರಬಹುದುಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಅವನನ್ನು ಯಾರೂ ’ಗುರು’ ಎಂದು
ಪರಿಗಣಿಸಲಾರರು ಮತ್ತು ಕರೆಯಲಾರರು. ಅದುಗೊತ್ತಿರುವುದರಿಂದಲೇ, ಆತ ತನ್ನ ಹೆಸರಿನ ’ಗುರು’ ಎಂದು ಇಟ್ಟುಕೊಂಡು ಬಿಟ್ಟಿದ್ದಾನೆ. ಇವನಂತೆ ಆ ಗಿರಾಕಿಯೂ ಹೆಸರಿನ ’ಭಗವಾನ’!
ನೋಡಿ, ಇಬ್ಬರಲ್ಲೂ ಅದೆಂಥ ಸಾಮ್ಯತೆ ?! ಈ ಭಗವಾನ ಮತ್ತು ಗುರುಗೆ ಹಿಂದೂ ಆಚಾರ, ಆಚರಣೆ, ದೇವರು, ಸಂಪ್ರದಾಯ, ಪರಂಪರೆಯನ್ನು ಬೈಯುವುದು ಹೀಯಾಳಿಸುವುದೇ ಕೆಲಸ. ಆ ಮೂಲಕ ಚಾಲ್ತಿಯಲ್ಲಿರಲು ಹೆಣಗುತ್ತಾರೆ. ಪತ್ರಿಕೋದ್ಯಮ
ಅಧ್ಯಾಪಕನಾಗಿ ಆತ ಒಂದೇ ಒಂದು ಗಮನ ಸೆಳೆಯುವ ಲೇಖನ, ಪುಸ್ತಕವನ್ನು ಬರೆದಿದ್ದನ್ನು ನಾನಂತೂ ನೋಡಿಲ್ಲ.
ಗೊತ್ತಿದ್ದವರು ತಿಳಿಸುವ ಉಪಕಾರ ಮಾಡಬೇಕು.
ಒಮ್ಮೆ ಈತನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಯೊಬ್ಬನನ್ನು ನನಗೆ ಮೈಸೂರಿನ ಪ್ರಸಿದ್ಧ ದಿನಪತ್ರಿಕೆಯ ಸಂಪಾದಕರೊಬ್ಬರು ಪರಿಚಯಿಸಿದ್ದರು. ಅವರು ಸಹ ವಿಚಾರವಾದಿಯೇ. ನನಗೆ ಮಹೇಶ್ ಚಂದ್ರ ಗುರು ಬಗ್ಗೆ ಅವನ ವಿದ್ಯಾರ್ಥಿ ಯಿಂದ ತಿಳಿದುಕೊಳ್ಳಬೇಕು ಎನಿಸಿತು. ಒಬ್ಬ ಅಧ್ಯಾಪಕನ ಜಾತಕವನ್ನು ವಿದ್ಯಾರ್ಥಿಗಿಂತ ಬೇರೆ ಯಾರು ಸಮರ್ಪಕವಾಗಿ ಬಿಚ್ಚಿಡ ಬಲ್ಲರು? ’ಒಹ, ನೀವು ಮಹೇಶ್ ಚಂದ್ರ ಗುರು ಅವರ ಶಿಷ್ಯರಾ?’ ಎಂದು ಕೇಳಿದೆ.
’ಅವರನ್ನು ನಮ್ಮ ಮೇಷ್ಟ್ರು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತೆ. ನಾನು ಅವರ ಶಿಷ್ಯನಲ್ಲ ಎಂದು ಎದೆಯುಬ್ಬಿಸಿ ಹೇಳುತ್ತೇನೆ. ಏನ್ ಸಾರ್, ಅವರನ್ನು ಒಬ್ಬ ಮೇಷ್ಟ್ರು ಎಂದು ಕರೆಯೋದುಂಟಾ? ಅವರನ್ನು ಒಬ್ಬಗುರು ಎಂದು ಒಪ್ಪಿಕೊಳ್ಳು ದುಂಟಾ ?’ಎಂದು ಖಡಕ್ ಆಗಿ ಹೇಳಿಬಿಟ್ಟ. ನಾನು ಅವನಿಂದ ಈ ಪ್ರತಿಕ್ರಿಯೆಯನ್ನು ನಿರೀಕ್ಷಿಸಿರಲಿಲ್ಲ. ’ಸಾರ್, ಒಂದು ದಿನವೂ ಅವರು ಸರಿಯಾಗಿ ಪಾಠ ಮಾಡಿಲ್ಲ. ಇಡೀ ಡಿಪಾರ್ಟ್‌ಮೆಂಟಿನಲ್ಲಿ ರಾಜಕೀಯ ಮಾಡಿದರು.
ಜಾತಿ ವಿಷ ಬೀಜ ಬಿತ್ತಿದರು. ವಿದ್ಯಾರ್ಥಿಗಳ ನಡುವೆ ಹುಳಿ ಹಿಂಡಿದರು. ಮೇಲ್ವರ್ಗದವರು – ಕೆಳವರ್ಗದವರೆಂದು ಒಡೆದರು. ಅಧ್ಯಾಪಕರ ನಡುವೆ ಜಗಳ ಹಚ್ಚಿ ಮಜಾ ತೆಗೆದುಕೊಂಡರು. ಕೆಲಸಕ್ಕೆ ಬಾರದ ವಿಷಯಗಳನ್ನು ಹೇಳಿ, ಕ್ಲಾಸು ಮುಗಿಸುತ್ತಿದ್ದರು. ಅವರೊಬ್ಬ ವಿಷ ಜಂತು. ನಮಗೆ ಒಂದು ಕ್ಲಾಸು ತೆಗೆದುಕೊಂಡವರು, ಒಂದಕ್ಷರ ಕಲಿಸಿದವರೂ ಶಿಕ್ಷಕರೇ. ಆದರೆ ಇವರಿಂದ ನಾನು ಏನನ್ನೂ ಕಲಿಯಲಿಲ್ಲ. ಹೀಗಾಗಿ ನನಗೆ ಅವರ ಬಗ್ಗೆ ಕಿಂಚಿತ್ತೂ ಗೌರವ ಇಲ್ಲ.
ಇಂಥವರು ವಿಶ್ವವಿದ್ಯಾಲಯದ ಅಧ್ಯಾಪಕರು, ವಿಭಾಗದಮುಖ್ಯಸ್ಥರಾಗಿದ್ದು ದುರಂತ ಮತ್ತು ಶಾಪ. ಯಾರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ. ಅವರು ನಮ್ಮ ವಿಭಾಗಕ್ಕೆ disgrace. ಅವರ ಬಗ್ಗೆಮಾತಾಡೋದೇ ನಿರರ್ಥಕ’ ಎಂದು ಹೇಳಿದ. ಅವನ ಮಾತು ಕೇಳಿದ ಆ ಸಂಪಾದಕರು, ’ಏನ್ರೀ, ನಿಮ್ಮ ಮೇಷ್ಟ್ರ ಬಗ್ಗೆ ಸ್ವಲ್ಪವಾದರೂ ಗೌರವ ಇಟ್ಟುಕೊಳ್ಳಬೇಕ್ರೀ..’ ಅಂದರು.
ಅದಕ್ಕೆ ಆತ ತುಸು ಏರಿದ ದನಿಯಲ್ಲಿ, ’ಅವನ್ಯಾವ ಸೀಮೆಯ ಮೇಷ್ಟ್ರು ಸಾರ್? ವಿದ್ಯಾರ್ಥಿಗಳ ಪಾಲಿಗೆ ಆತನೊಬ್ಬ ಕಂಟಕ.’ ಎಂದು ಏಕವಚನದಲ್ಲಿ ಹೇಳಿಬಿಟ್ಟ. ತನ್ನ ಮೇಷ್ಟ್ರ ಬಗ್ಗೆ ಒಬ್ಬ ವಿದ್ಯಾರ್ಥಿ ಹೀಗೆ ಏಕವಚನದಲ್ಲಿ ಕೆಟ್ಟದಾಗಿ ಮಾತಾಡುತ್ತಾನೆ ಅಂದ್ರೆ ಈ ಮಹೇಶ್ ಚಂದ್ರ ಗುರು ಯಾವ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ಗೋಳಾಡಿಸಿರಬಹುದು, ಸ್ವಲ್ಪ ಯೋಚಿಸಿ. ’ಈ ಮಾತು ನನ್ನದೊಬ್ಬನದೇ ಅಲ್ಲ, ಆ ಡಿಪಾರ್ಟ್‌ಮೆಂಟಿನಿಂದ ನೂರಾರು ಜನ ಡಿಗ್ರಿ ಪಡೆದು ಹೋಗಿದ್ದಾರಲ್ಲ, ಅವರ ಪೈಕಿ
ಯಾವನಾದರೂ ಒಬ್ಬ ನನ್ನ ಮಾತಿಗೆ ವಿರುದ್ಧವಾದಅಭಿಪ್ರಾಯ ವ್ಯಕ್ತಪಡಿಸಲಿ, ನೋಡುತ್ತೇನೆ’ ಎಂದು ಸವಾಲು ಹಾಕುವ ರೀತಿಯಲ್ಲಿ ಮಾತಾಡಿದ.
ನನಗೆ ಗುರು ಬಂಡವಾಳವೇನು ಎಂಬುದು ಮತ್ತಷ್ಟು ಮನದಟ್ಟಾಯಿತು. ಮೇಷ್ಟ್ರು ಎಷ್ಟೇ ದಡ್ಡನಾಗಿರಲಿ, ಯಾವ
ವಿದ್ಯಾರ್ಥಿಯೂ ಕೆಟ್ಟದಾಗಿ ಮಾತಾಡುವುದಿಲ್ಲ. ಮೇಷ್ಟ್ರು ಕೆಟ್ಟವನಾದರೂ ಕೆಟ್ಟದಾಗಿ ಮಾತಾಡುವುದಿಲ್ಲ. ಯಾಕೆಂದರೆ
ತನ್ನ ಮೇಷ್ಟ್ರನ್ನು ಬೈಯಬಾರದು ಎಂಬ ಒಳ್ಳೆಯ ಭಾವ ಪ್ರತಿಯೊಬ್ಬರಲ್ಲೂ ನೆಲೆಸಿರುತ್ತದೆ. ಆದರೆ ಈ ಗುರು ಬಗ್ಗೆ ಯಾರೂ ಒಳ್ಳೆಯ ಮಾತಾಡುವುದಿಲ್ಲ. ಅಂಥ ಹೊಲಸು ಆಸಾಮಿ. ಈ ವಿಷಯ ಹೊರಗಿನ ಸಮಾಜಕ್ಕೆ ಗೊತ್ತೇ ಆಗುವುದಿಲ್ಲ.
ಈತನ ’ಕ್ರಾಂತಿಕಾರಕ’ (ಸರಿಯಾಗಿ ಹೇಳುವುದಾದರೆ, ವಾಂತಿಕಾರಕ) ಮಾತುಗಳೇ ವರದಿಯಾಗುತ್ತವೆ. ಇವನ ಬುದ್ಧಿ ನೋಡಿದ್ದರೆ, ಯಾರೂ ಇವನಿಗೆ ವಾಚ್‌ಮನ್ ಕೆಲಸವನ್ನೂ ಕೊಡುವುದಿಲ್ಲ. ಆದರೆ ಮೈಸೂರು ವಿಶ್ವವಿದ್ಯಾಲಯದಂಥ ಪ್ರತಿಷ್ಠಿತ ವಿವಿಯ, ರಾಜ್ಯದ ಅತ್ಯಂತ ಹಳೆಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥನೂ ಆಗಿದ್ದು ಅತ್ಯಂತ ಮರ್ಯಾದೆಗೇಡಿನ ವಿಷಯ.
ಅದೇ ಮಹೇಶ್ ಚಂದ್ರ ಗುರು ಮೊನ್ನೆ ಹನುಮ ಜಯಂತಿ ಆಚರಣೆ ಬಗ್ಗೆ ಮಾತಾಡಿದ್ದಾನೆ – ’ಹನುಮ ಜಯಂತಿಯನ್ನು ಯಾರು ಮಾಡ್ತಿದ್ದಾರೆ ಗೊತ್ತಾ, ಯಾಕೆ ಮಾಡ್ತಿದ್ದಾರೆ ಗೊತ್ತಾ, ಹನುಮಂತನಂಥ ವ್ಯವಸ್ಥೆಯ ಗುಲಾಮರನ್ನು ಸಹಸ್ರಾರು ಸಂಖ್ಯೆಯಲ್ಲಿ ಸೃಷ್ಟಿ ಮಾಡಬೇಕೆಂದು ಹಿಂದುತ್ವವಾದಿಗಳು ಇಂದು ಹನುಮ ಜಯಂತಿಯನ್ನು ಆಚರಿಸುತ್ತಿದ್ದಾರೆ.
ಹನುಮ ಗುಲಾಮಗಿರಿಯ ಸಂಕೇತ. ರಾಮ ಪ್ರಭುತ್ವದ ಸಂಕೇತ. ನಾನು ಹೇಳಿದಂತೆ ಹೀಗೆ ಬರೆಯಿರಿ. ನನ್ನ ಮಾತನ್ನು
ತಿರುಚಬೇಡಿ. ನನಗೆ ಸತ್ಯ ಹೇಳಲು ಗಟ್ಸ್ ಇದೆ, ಡೈಜೆ ಮಾಡಿಕೊಳ್ಳುತ್ತೇನೆ. ಹನುಮ ಜಯಂತಿ ಆಚರಣೆ ಹಿಂದೆ, ಶೂದ್ರರಲ್ಲಿ, ದಲಿತರಲ್ಲಿ ಹೊಸ ಪೀಳಿಗೆಯ ಗುಲಾಮರನ್ನು ಹುಟ್ಟು ಹಾಕಬೇಕೆಂಬ ಹಿಡನ್ ಅಜೆಂಡಾ ಇದೆ. ಇದನ್ನುಖಂಡಿಸುತ್ತೇನೆ. ನಮಗೆ ರಾಮ ಭಕ್ತರೂ ಬೇಡ, ಹನುಮನ ಭಕ್ತರೂ ಬೇಡ. ಅಂಬೇಡ್ಕರ್, ಲೋಹಿಯಾ, ಗಾಂಧಿ ಹೇಳಿದ್ದಾರೆ ವ್ಯಕ್ತಿಪೂಜೆ ಭಾರತವನ್ನು ನಾಶ ಮಾಡುತ್ತದೆಂದು. ಈ ಕಾರಣದಿಂದ ಹನುಮ ಜಯಂತಿ ಯನ್ನು ನಾವು ಬೆಂಬಲಿಸಬಾರದು.’
ಈ ಅವಿವೇಕಿಗೆ ಹನುಮ ಜಯಂತಿಯನ್ನು ಏಕೆ ಆಚರಿಸುತ್ತಾರೆ ಎಂಬ ಪ್ರಾಥಮಿಕ ಸಂಗತಿಯೇ ಗೊತ್ತಿಲ್ಲ. ಅವನ ಬೌದ್ಧಿಕ ಮಟ್ಟವೇ ಅಷ್ಟು. ಹನುಮ ಗುಲಾಮಗಿರಿಯ ಸಂಕೇತ ಎಂದು ಹೇಳುತ್ತಾನೆ. ಹಾಗಾದರೆ ಈತ ಮಹೇಶ, ಚಂದ್ರ, ಗುರು ಎಂದೆಲ್ಲ ಯಾಕೆ ಹೆಸರಿಟ್ಟುಕೊಂಡಿದ್ದಾನೆ? ತನ್ನನ್ನು ಗುರು ಎಂದು ಕರೆದುಕೊಂಡು ಬೇರೆಯವರನ್ನು ಶಿಷ್ಯರೆಂದು ಭಾವಿಸುವ ಈತ ಕೂಡ ಬೇರೆಯವರನ್ನು ಗುಲಾಮ ಎಂದು ಭಾವಿಸಿದ್ದನಾ? ಒಂದು ವೇಳೆ ಈತ, ತನ್ನನ್ನು ಗೌರವಿಸುವ ವಿದ್ಯಾರ್ಥಿಗಳನ್ನು, ಆದರಿಸುವ
ಹೆಂಡತಿ-ಮಕ್ಕಳನ್ನು ಗುಲಾಮರೆಂದು ಭಾವಿಸುತ್ತಾನಾ?
ಇವನಿಗೆ ಭಕ್ತಿ-ದಾಸ್ಯತ್ವ, ಪ್ರೀತಿ, ಆರಾಧನೆ ಅರ್ಥವೇ ಗೊತ್ತಿಲ್ಲವಾ? ’ದಾಸ ದಾಸರ ಮನೆಯ ದಾಸಾನುದಾಸ ನಾನು’ ಎಂದು ಕನಕದಾಸರು ಹೇಳಿದ್ದನ್ನು ಈತ ಕೇಳಿಲ್ಲವಾ? ’ಮಹಾದೇವನನ್ನು ನೆನೆಯುವವನ, ಬಾಯಿ ತಾಂಬೂಲ ಮೆಲುವೆ, ಬೀಳುಡಿಗೆಯ ಹೊದ್ದು ಬದುಕುವೆ, ಪಾದರಕ್ಷೆಯ ಕಾದು ಬದುಕುವೆ ’ ಎಂದು ವಚನಕಾರರು ಹೇಳಿದ್ದನ್ನು ಈ ಅವಿವೇಕಿ ಕೇಳಿಸಿಕೊಂಡಿಲ್ಲವೇ? ಹಸಿವಾದರೆ ಊರೊಳಗೆ ಭಿಕ್ಷಾನ್ನಂಗಳುಂಟು, ತೃಷೆಯಾದರೆ ಕೆರೆ ಬಾವಿ ಹಳ್ಳಂಗಳುಂಟು, ಶಯನಕ್ಕೆಹಾಳುದೇಗುಲವುಂಟು,
ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕ್ಕೆ ನೀನೆನಗುಂಟು ಎಂದ ಅಕ್ಕ ಮಹಾದೇವಿ ಮುಂತಾದವರು ಗುಲಾಮಗಿರಿಯ
ಸಂಕೇತವಾ? ನರ-ಜನ್ಮವ ತೊಡೆದು, ಹರ-ಜನ್ಮವ ಮಾಡಿದ ಗುರುವೆ, ಭವ ಬಂಧನವ ಬಿಡಿಸಿ, ಪರಮಸುಖವ ತೋರಿದ ಗುರುವೆ, ಭವಿ ಎಂಬುದ ತೊಡೆದು, ಭಕ್ತೆ ಎಂದೆನಿಸಿದ ಗುರುವೆ, ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕೆ, ಕೊಟ್ಟ ಗುರುವೆ ನಮೋ ನಮೋ ಎನ್ನುವ ವಚನದಲ್ಲಿ ಗುಲಾಮಗಿರಿಯನ್ನು ಕಾಣುವವ ಅದೆಂಥ ನೀಚ ಮನಸ್ಸಿನವನಿರಬಹುದು?
ನಮ್ಮಲ್ಲಿ ಹಾಸು ಹೊಕ್ಕಾಗಿರುವ ದಾಸಪರಂಪರೆಯೇನು ಗುಲಾಮಗಿರಿಯ ಪ್ರತೀಕವಾ? ಭಕ್ತನಿಗೂ- ಗುಲಾಮನಿಗೂ, ದಾಸನಿಗೂ-ದಾಸ್ಯತ್ವಕ್ಕೂ ವ್ಯತ್ಯಾಸವೇ ಗೊತ್ತಿಲ್ಲವಾ? ಮನೆಯಲ್ಲಿ ಇವನ ಸೇವೆ ಮಾಡುವ, ಕಾಲಕಾಲಕ್ಕೆ ಅಡುಗೆ-ತಿಂಡಿ ಮಾಡಿ ಹಾಕುವ ಮನೆಯವರನ್ನು ಈತ ಜೀತಕ್ಕೆ ಇಟ್ಟುಕೊಂಡಿದ್ದಾನಾ? ಡಾ.ಅಂಬೇಡ್ಕರ್, ಲೋಹಿಯಾ ಮತ್ತು ಗಾಂಧಿ ಮೂರ್ತಿಪೂಜೆ ಮಾಡಬಾರದು ಎಂದು ಹೇಳಿದ್ದಾರೆ ಎಂದೆ ಗುರು, ಏನೂತಿಳಿದುಕೊಳ್ಳದೇ ಲಘುವಾಗಿ ಮಾತಾಡಿದ್ದಾನೆ.
ಅಂಬೇಡ್ಕರ್ ಅವರು ವ್ಯಕ್ತಿಪೂಜೆ ಮಾಡಬೇಡಿ ಎಂದು ಹೇಳುವಾಗ ಅವರ ಮನಸ್ಸಿನಲ್ಲಿದ್ದವರು ಮಹೇಶ್‌ಚಂದ್ರ ಗುರುವಿನಂಥ ಅಯೋಗ್ಯರು. ಅಂಥವರನ್ನು ಪೂಜೆ ಮಾಡಬೇಡಿ ಎಂದು ಅವರು ಹೇಳಿದ್ದರು. ಇಲ್ಲದಿದ್ದರೆ ಅವರು ಬುದ್ಧನನ್ನು ಪೂಜಿಸು ತ್ತಿರಲಿಲ್ಲ.’ಬುದ್ಧಮ್ ಶರಣಂ ಗಚ್ಛಾಮಿ’ ಎಂದು ಹೇಳುತ್ತಿರಲಿಲ್ಲ