ಆಲೂರು ಸಿರಿ
ಡಾ.ಅಶೋಕ್ ಆಲೂರು
ಇದೊಂದು ಒಂದು ಸತ್ವಪೂರ್ಣ ಆಹಾರ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದರಲ್ಲಿ ಸಾರಜನಕ, ಕೊಬ್ಬು, ಪಿಷ್ಟ ಮತ್ತು ಲವಣಾಂಶಗಳು ಸಮೃದ್ಧವಾಗಿವೆ. ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್, ಕಬ್ಬಿಣ, ಕ್ಯಾಲ್ಸಿಯಂ, ನಾರಿನಂಶ ಗಳಿಂದ ಕೂಡಿದ್ದು ಶ್ರೀಮಂತ ಪೌಷ್ಟಿಕಾಂಶಗ ಆಗರ. ಬರಗನ್ನು ಪ್ರಾಥಮಿಕವಾಗಿ ಸಂಸ್ಕರಿಸಿದಾಗ ಬರುವ ಧಾನ್ಯವನ್ನು ಬಳಸಿ ತಯಾರಿಸುವ ಅನ್ನ ಅತ್ಯಂತ ರುಚಿಕರವಾಗಿದ್ದು, ಸುಹಾಸನೆಯಿಂದ ಕೂಡಿರುವುದು ಇದರ ವಿಶೇಷ. ಅಕ್ಕಿಯನ್ನು ಬಳಸುವಂತೆ ಬರಗು ಧಾನ್ಯವನ್ನು ಬಳಸಿ ದೋಸೆ, ಪೊಂಗಲ್, ಇಡ್ಲಿ ಮುಂತಾದ ಮತ್ತು ರುಚಿಕರ ಅಡುಗೆಗಳನ್ನು ಮಾಡಬಹುದು.
ಬರಗು ಅತ್ಯಂತ ಹಳೆಯ ಕಿರು ಸಿರಿಧಾನ್ಯ. ನವಶಿಲಾಯುಗದ ಕಾಲದಿಂದ ಬೆಳೆಯುತ್ತಾ ಬಂದಿರುವ ಬೆಳೆ. ಪ್ರಪಂಚದ ಅನೇಕ ಭಾಗಗಳಲ್ಲಿ ಈ ಬೆಳೆಯನ್ನು ಬೆಳೆಯಲಾಗುತ್ತದೆ. ಭಾರತದಲ್ಲಿ ಅತಿ ಹೆಚ್ಚಾಗಿ ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಬೆಳೆಯಲಾಗುತ್ತದೆ. ಕರ್ನಾಟಕ ರಾಜ್ಯದ ಬೀದರ್, ಧಾರವಾಡ, ಹಾವೇರಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಚ್ಚು. ಇದನ್ನು ನಾನಾ ದೇಶಗಳಲ್ಲಿ ಪೊರಕೆ ಜೋಳದ ಸಿರಿಧಾನ್ಯ, ಹರ್ಷೆ ಸಿರಿಧಾನ್ಯ, ಸಾಮಾನ್ಯ ಸಿರಿಧಾನ್ಯ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ.
ಕರ್ನಾಟಕದಲ್ಲಿ ಸ್ಥಳೀಯವಾಗಿ ‘ಬರಗು’ ಎಂದು ಕರೆಯಲಾಗುತ್ತಿದ್ದು, ಪಕ್ಕದ ತಮಿಳಿನಲ್ಲಿ ಪನಿಮೆರಗು’ ಎಂಬ ಹೆಸರಿದೆ. ಅಂದರೆ ಇಬ್ಬನಿಯನ್ನೇ ಆಧರಿಸಿ ಬೆಳೆಯುವಂಥ ಬೆಳೆ ಎಂದರ್ಥ. ಕಡಿಮೆ ನೀರಿದ್ದರೂ ಬೆಳೆಯುವಂತಹ ಬೆಳೆ ಎಂದೂ ಭಾವಿಸಬಹುದು. ಅಕಾಲಿಕ ಮಳೆ ಸುರಿದರೂ
ಕೂಡ ಪೈರು ನೆಲಕಚ್ಚದೇ ದೃಢವಾಗಿ ನಿಲ್ಲುವ ಶಕ್ತಿ ಹೊಂದಿದೆ. ಈ ಬೆಳೆಯು ಸಕಾಲಕ್ಕೆ ಮಳೆ ಬರದೇ ಇರುವ ಸಂದರ್ಭದಲ್ಲಿ ಬರ ನಿರೋಧಕತೆ ಯನ್ನು ಬೆಳೆಸಿಕೊಂಡು ಇಳುವರಿಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಸುಸ್ಥಿರ ಆದಾಯವನ್ನು ಕೊಡುತ್ತದೆ.
ಮಳೆಯಾಶ್ರಿತ ಮತ್ತು ನೀರಾವರಿ, ಈ ಎರಡು ವಿಧಾನದಲ್ಲಿ ಬೆಳೆಯುವ ಸಿರಿಧಾನ್ಯವಾಗಿದ್ದು ಮೇಲ್ನೋಟಕ್ಕೆ ಸಾಮೆಯನ್ನು ಹೋಲುತ್ತದೆ. ತುಸು ಎತ್ತರವಾಗಿ ಬೆಳೆಯುತ್ತದೆ. ಸಾಸಿವೆ ಗಾತ್ರದ ಕಾಳುಗಳು ಇರುವುದರಿಂದ ಸಾಮೆಗಿಂತ ಇದರ ಸಂಸ್ಕರಣೆ ಸುಲಭ. ಬರಗಿನಲ್ಲಿ ಸಿಗುವ ಪೌಷ್ಟಿಕಾಂಶಗಳ ವಿಚಾರಕ್ಕೆ ಬಂದರೆ, ಇದೊಂದು ಒಂದು ಸತ್ವಪೂರ್ಣ ಆಹಾರ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದರಲ್ಲಿ ಸಾರಜನಕ, ಕೊಬ್ಬು, ಪಿಷ್ಟ ಮತ್ತು ಲವಣಾಂಶಗಳು ಸಮೃದ್ಧವಾಗಿವೆ. ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್, ಕಬ್ಬಿಣ, ಕ್ಯಾಲ್ಸಿಯಂ, ನಾರಿನಂಶ, ರಂಜಕ, ಥೈಮಿನ್
ಗಳಿಂದ ಕೂಡಿದ್ದು ಶ್ರೀಮಂತ ಪೌಷ್ಟಿಕಾಂಶಗ ಆಗರ.
ಬರಗನ್ನು ಪ್ರಾಥಮಿಕವಾಗಿ ಸಂಸ್ಕರಿಸಿದಾಗ ಬರುವ ಧಾನ್ಯವನ್ನು ಬಳಸಿ ತಯಾರಿಸುವ ಅನ್ನ ಅತ್ಯಂತ ರುಚಿಕರವಾಗಿದ್ದು, ಸುಹಾಸನೆಯಿಂದ ಕೂಡಿರುವುದು ಇದರ ವಿಶೇಷ. ಅಕ್ಕಿಯನ್ನು ಬಳಸುವಂತೆ ಬರಗು ಧಾನ್ಯವನ್ನು ಬಳಸಿ ದೋಸೆ, ಪೊಂಗಲ್, ಇಡ್ಲಿ ಮುಂತಾದ ಮತ್ತು ರುಚಿಕರ ಅಡುಗೆಗಳನ್ನು ಮಾಡಬಹುದು. ಈ ಆಹಾರವನ್ನು ಸೇವಿಸಿದಾಗ ನರಗಳಿಗೆ ಶಕ್ತಿ ನೀಡಿ ಮೂಳೆಗಳನ್ನು ಗಟ್ಟಿ ಮಾಡುವುದಲ್ಲದೆ ಹೃದಯ ಸಂಬಂಽಸಿದ ರೋಗ ಹಾಗೂ ಸಕ್ಕರೆ ರೋಗಗಳಿಗೆ ರಾಮಬಾಣವಾಗಿದೆ.
ಆರೋಗ್ಯದ ಪ್ರಯೋಜನಗಳು: ಗೋಧಿಯಲ್ಲಿ ಗ್ಲುಟೆನ್ ಅಂಶವು ಹೆಚ್ಚಿರುವುದರಿಂದ ಬಹುಪಾಲು ಜನರು ಗೋಧಿಗೆ ಪರ್ಯಾಯವಾಗಿ ಬರಗನ್ನು ಆಹಾರವಾಗಿ ಉಪಯೋಗಿಸಬಹುದು. ಇದು ಲೆಸಿಥಿನ್ ಅಂಶಗಳಿಂದ ಕೂಡಿರುವುದರಿಂದ ನರಮಂಡಲದ ಚಟುವಟಿಕೆಗಳು ಅತ್ಯಂತ ಸುಗಮವಾಗಿ
ಕಾರ್ಯನಿರ್ವಹಿಸಿ ನರಮಂಡಲವನ್ನು ಬಲಪಡಿಸುವ ಮೂಲಕ ಪರೋಕ್ಷವಾಗಿ ಉತ್ತೇಜಿಸುತ್ತದೆ. ಬರಗು ಸೇವನೆಯಿಂದ ಮಾನವನ ದೇಹದಲ್ಲಿ
ಕೊಬ್ಬಿನ ಅಂಶವನ್ನು ಕಡಿಮೆ ಮಾಡಿ ಉತ್ತಮ ಕೊಬ್ಬಿನಾಂಶವಾದ ಎಚ್‌ಡಿಎಲ್ ಮಟ್ಟವನ್ನು ಹೆಚ್ಚಿಸುತ್ತದೆ.ಬರಗು ಆಂಟಿ-ಆಕ್ಸಿಡೆಂಟ್‌ಗಳಿಂದ ಕೂಡಿದ್ದು ಅನುಪಯುಕ್ತ ಸ್ವತಂತ್ರ ರಾಡಿಕಲ್‌ಗಳನ್ನು ತೆಗೆದುಹಾಕುವ ಮೂಲಕ ಇದು ಜೀವಕೋಶಗಳನ್ನು ಹಾಳಾಗದಂತೆ ತಡೆದು ಮನುಷ್ಯನ ಮುಪ್ಪನ್ನು ಮುಂದೂಡುತ್ತದೆ.
ಬರಗಿನಲ್ಲಿ ನಿಯಾಸಿನ್ (ವಿಟಮಿನ್ ಬಿ೩) ಹೆಚ್ಚಿನ ಅಂಶ ಇದ್ದು, ಇದರ ದೈನಂದಿನ ಸೇವನೆಯಿಂದ ನಿಯಾಸಿನ್ ಕೊರತೆಯಿಂದ ಉಂಟಾಗುವ
ಚರ್ಮರೋಗವಾದ ಪೆಲಾಗ್ರಾವನ್ನು ತಡೆಗಟ್ಟಬಹುದು. ಇದರಲ್ಲಿ ಹೆಚ್ಚಿನ ಪ್ರಮಾಣದ ಮೆಗ್ನೀಷಿಯಮ್ ಇದೆ. ಹೀಗಾಗಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣ ಮಾಡಿ ಮತ್ತು ಆರೋಗ್ಯಕ್ಕೆ ಪೂರಕವಾದ ಮಟ್ಟದಲ್ಲಿ ಇನ್ಸುಲಿನ್‌ನನ್ನು ನಿಯಂತ್ರಿಸಿ ಟೈಪ್ ೨ ಮಧುಮೇಹವನ್ನು ಕಡಿಮೆ ಮಾಡುತ್ತದೆ. ಕ್ಯಾಲ್ಸಿಯಂ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಬರಗು ಹೊಂದಿರುವುದರಿಂದ ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಬೇಸಾಯ ಕ್ರಮಗಳು: ಬರಗು ಬಿತ್ತುವುದಕ್ಕೆ ಎರಡು ವಾರ ಮುಂಚೆ ಕೊಟ್ಟಿಗೆ ಅಥವಾ ಕಾಂಪೋಸ್ಟ್ ಗೊಬ್ಬರವನ್ನು ಮಣ್ಣಿನಲ್ಲಿ ಬೆರೆಸಬೇಕು. ಈ ಸಿರಿಧಾನ್ಯವನ್ನು ಮೊದಲ ಮುಂಗಾರಿನಲ್ಲಿ ಹಾಗೂ ತಡವಾದ ಮುಂಗಾರಿನಲ್ಲಿಯೂ ಬೆಳೆಯಬಹುದು. ಬಿತ್ತನೆ ಬೀಜವನ್ನು ೨೨.೫ ಸೆಂಟಿಮೀಟರ್ ಅಂತರದ ಸಾಲುಗಳಲ್ಲಿ ಪೈರಿಂದ ಪೈರಿಗೆ ೧೦.೦ ಸೆಂಟಿಮೀಟರ್ ಅಂತರವಿರುವಂತೆ, ೩.೫ ರಿಂದ ೪.೫ ಸೆಂಟಿಮೀಟರ್‌ಗಿಂತ ಹೆಚ್ಚು ಆಳವಿಲ್ಲದಂತೆ ಬಿತ್ತಬೇಕು. ಬೀಜವನ್ನು ಸಂಯುಕ್ತ ಕೂರಿಗೆ ಬಳಸಿ ಗೊಬ್ಬರ ಹಾಗೂ ಬೀಜವನ್ನು ಒಟ್ಟಿಗೆ ಬಿತ್ತಬಹುದು.
ಸುಧಾರಿತ ತಳಿಗಳು: ಕರ್ನಾಟಕ ರಾಜ್ಯ ಶಿಫಾರಸ್ಸು ಮಾಡಲಾದ ಇತ್ತೀಚಿನ ಜನಪ್ರಿಯ ತಳಿಗಳೆಂದರೆ ಜಿ.ಪಿ.ಯು.ಪಿ.- ೮ ಮತ್ತು ೨೧,
ಡಿ.ಎಚ್.ಪಿ.ಎಂ-೨೭೬೯, ಐ.ಟಿ.ಎಲ್-೧, ಟಿ.ಎನ್ .ಎ.ಯು.-೧೪೫, ೧೫೧, ೧೬೪ ಮತ್ತು ೨೦೨.
ಬೇಸಾಯಕ್ಕೆ ಬೇಕಾಗುವ ಸಾಮಗ್ರಿಗಳು: ಒಂದು ಹೆಕ್ಟೇರ್ ಪ್ರದೇಶಕ್ಕೆ ೮ ರಿಂದ ೧೦ ಕೆಜಿ ಬಿತ್ತನೆ ಬೀಜ, ೫ ರಿಂದ ೭.೫ ಟನ್ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರಗಳಾದ ಸಾರಜನಕ, ರಂಜಕ ತಲಾ ೨೦ ಕೆಜಿ ಹಾಕಬೇಕು.
ಮಧ್ಯಂತರ ಬೇಸಾಯ: ಎರಡರಿಂದ ಮೂರು ಬಾರಿ ಮಧ್ಯಂತರ ಬೇಸಾಯ ಅಥವಾ ಕುಂಟೆ ಹಾಯಿಸುವುದರಿಂದ ಮಣ್ಣನ್ನು ಸಡಿಲ ಮಾಡುವುದು
ಹಾಗೂ ಸಾಕ? ಕಳೆಗಳನ್ನು ಹತೋಟಿ ಮಾಡಬಹುದು.
ಕೊಯ್ಲೋತ್ತರ ಮತ್ತು ಒಕ್ಕಲು: ಹೆಚ್ಚಿನ ತಳಿಗಳಲ್ಲಿ ಬಿತ್ತನೆ ಮಾಡಿದ ೬೫ ರಿಂದ ೭೫ ದಿನಗಳ ನಂತರ ಬೆಳೆಯು ಕಟಾವಿಗೆ ಸಿದ್ಧವಾಗಿರುತ್ತದೆ. ಕಾಳು ಕೊಯ್ಲಿಗೆ ಬಂದಿರುವುದನ್ನು ಧೃಡಪಡಿಸಲು ತೆನೆಯ ಮೇಲ್ಭಾಗದಿಂದ ೨ನೇ ೩ ಭಾಗದಷ್ಟು ಕಾಳು ಕಟ್ಟುವಿಕೆ ಪ್ರಮಾಣವನ್ನು ಪರೀಕ್ಷಿಸಿ ಕಟಾವು ಮಾಡಬೇಕು.
ಇಳುವರಿ: ಉತ್ತಮ ಸುಧಾರಿತ ಬೇಸಾಯ ಕ್ರಮಗಳನ್ನು ಅನುಸರಿಸಿ ನೀರಾವರಿಯಲ್ಲಿ ಪ್ರತಿ ಹೆಕ್ಟೇರಿಗೆ ೨೦ ರಿಂದ ೨೩ ಕ್ವಿಂಟಲ್ ಧಾನ್ಯವನ್ನು ಮತ್ತು ೫೦ ರಿಂದ ೬೦ ಕ್ವಿಂಟಲ್ ಒಣ ಹುಲ್ಲಿನ ಕೊಯ್ಲನ್ನು ಪಡೆಯಬಹುದಾಗಿದೆ. ಆದರೆ ಮಳೆಯಾಶ್ರಿತ ಬೇಸಾಯ ಕ್ರಮದಲ್ಲಿ ೧೦ ರಿಂದ ೧೫
ಕ್ವಿಂಟಲ್ ಧಾನ್ಯ, ೩೦ ರಿಂದ ೪೦ ಕ್ವಿಂಟಲ್ ತಾಜಾ ಒಣ ಹುಲ್ಲಿನ ಕೊಯ್ಲನ್ನು ಪಡೆಯಬಹುದಾಗಿದೆ.
ಮೌಲ್ಯವರ್ಧಿತ ಉತ್ಪನ್ನಗಳು: ಭಾರತೀಯ ಕಿರುಧಾನ್ಯ ಸಂಶೋಧನಾ ಸಂಸ್ಥೆ, ಹೈದರಾಬಾದ್‌ನಿಂದ ಕೆಲವು ಮೌಲ್ಯವರ್ಧಿತ ಪದಾರ್ಥಗಳನ್ನು ಅಭಿವೃದ್ಧಿಪಡಿಸಿದೆ. ಅವುಗಳು ಬರಗಿನಿಂದ ತಯಾರಿಸಿದ ಇಡ್ಲಿ, ಖಾಜಾ, ಬರ್ಫಿ, ಸಮೋಸ, ಪಾಯಸ ಮುಂತಾದವು ಅತ್ಯಂತ ರುಚಿಕರವಾಗಿದ್ದು ಬಹುಬೇಡಿಕೆಯಿಂದ ಕೂಡಿವೆ.