ಅಭಿಮತ
ಗಣೇಶ್ ಭಟ್, ವಾರಣಾಸಿ
ganeshbhatv@gmail.com
ಉದ್ಯಮಪತಿಗಳನ್ನು ‘ಬೂರ್ಶ್ವಾಸ್’ ಎಂದು ಕರೆದು ಅವರನ್ನು ಖಳನಾಯಕರಂತೆ ಬಿಂಬಿಸಲಾಗುತ್ತಿದೆ. ಆದರೆ ಇದು ಸರಿಯಲ್ಲ. ದೇಶದ ಅಭಿವೃದ್ಧಿಗೆ ಹೂಡಿಕೆ, ಉದ್ದಿಮೆಗಳು ಹಾಗೂ ಕೈಗಾರಿಕೆಗಳು ಅತೀ ಮುಖ್ಯವಾಗಿವೆ. ಉದ್ದಿಮೆದಾರರನ್ನು ಕೆಟ್ಟದಾಗಿ ಚಿತ್ರಿಸುವುದರಿಂದ ದೇಶಕ್ಕೆ ಬಹಳ ಹಾನಿ ಯಾಗುತ್ತದೆ.
ದೇಶದ ಜನರಲ್ಲಿ ಸಿರಿವಂತರು ಹಾಗೂ ಉದ್ಯಮಪತಿಗಳ ಬಗ್ಗೆ ಒಂದು ರೀತಿಯ ನಕಾರಾತ್ಮಕ ಧೋರಣೆ ಇದೆ. ಅವರು ಬಡವರನ್ನು ಶೋಷಿಸಿ ಶ್ರೀಮಂತ ರಾಗುತ್ತಾರೆ, ಅವರು ನಿಷ್ಕರುಣಿಗಳು ಎನ್ನುವ ಪೂರ್ವಗ್ರಹವೇ ಇದಕ್ಕೆ ಕಾರಣ. ಭಾರತವನ್ನು ಈ ಹಿಂದೆ ಆಳಿದ ಬಹುತೇಕ ಎಲ್ಲ ಸರಕಾರಗಳೂ
ಸಮಾಜ ವಾದಿ ನಿಲುವನ್ನು ಪಾಲಿಸುತ್ತಿದ್ದು ಉದ್ಯಮ ಹಾಗೂ ಹೂಡಿಕೆದಾರರನ್ನು ಇನ್ನಿಲ್ಲದಂತೆ ಕಾಡಿದ್ದವು.
4-5 ದಶಕಗಳ ಹಿಂದೆಯೇ ಖಾಸಗಿ ವಶದಲ್ಲಿದ್ದ ಬ್ಯಾಂಕ್, ವಿಮಾನಯಾನ ಸಂಸ್ಥೆ, ವಿಮೆ, ಗಣಿಗಾರಿಕೆ ಮೊದಲಾದವುಗಳನ್ನು ರಾಷ್ಟ್ರೀಕರಣ ಗೊಳಿಸುವ ಮೂಲಕ ಸರಕಾರ, ಖಾಸಗೀ ವಲಯದ ಮೇಲೆ ತನಗಿದ್ದ ಅವಿಶ್ವಾಸವನ್ನು ಸಾಬೀತುಪಡಿಸಿತ್ತು. ಇತ್ತೀಚೆಗೆ ಕೆಲವು ರಾಜಕೀಯ ಪಕ್ಷಗಳು ದೇಶದ ಕೆಲವು ಪ್ರಮುಖ ಉದ್ಯಮಿಗಳನ್ನು ‘ಕ್ರೋನಿ ಕ್ಯಾಪಿಟಲಿಸ್ಟ್’ಗಳು ಎಂದು ದೂಷಿಸುತ್ತಿವೆ. ಕ್ರೋನಿ ಕ್ಯಾಪಿಟಲಿಸ್ಟ್ಗಳೆಂದರೆ ಸರಕಾರೀ ಪೋಷಿತ ಉದ್ಯಮಿಗಳು ಎಂದು ಅರ್ಥ. ಟಾಟಾ, ಅಂಬಾನಿ, ಅದಾನಿಗಳಂತಹ ದೇಶದ ಕೆಲವು ರಾಜಕೀಯ ಪಕ್ಷಗಳು ಗುರಿಯಾಗಿಸಿವೆ.
ಹೂಡಿಕೆದಾರರನ್ನು ಹಾಗೂ ಉದ್ಯಮಿಗಳನ್ನು ಬಂಡವಾಳಶಾಹಿಗಳು, ಸಮಾಜದ ಬಡಜನರ ರಕ್ತ ಹೀರುವವರು ಎಂದೂ ಚಿತ್ರಿಸುವ ಪ್ರಯತ್ನಗಳು ನಡೆಯುತ್ತಿವೆ. ಸರಕಾರ ದೇಶದಲ್ಲಿ ಹೂಡಿಕೆದಾರರಿಗೆ ಅನುಕೂಲಕರ ವಾತಾ ವರಣ ನಿರ್ಮಿಸುತ್ತಿರುವುದನ್ನು ಟೀಕಿಸುವ ವಿಪಕ್ಷಗಳು ಸರಕಾರಕ್ಕೆ ಸೂಟ್ ಬೂಟ್ ಕೀ ಸರ್ಕಾರ್’ ಎಂಬ ಹಣೆ ಪಟ್ಟಿ ಹಚ್ಚಿವೆ. ಉದ್ಯಮಪತಿಗಳನ್ನು ‘ಬೂರ್ಶ್ವಾಸ್’ ಎಂದು ಕರೆದು ಅವರನ್ನು ಖಳ ನಾಯಕರಂತೆ ಬಿಂಬಿಸ ಲಾಗುತ್ತಿದೆ. ಆದರೆ ಇದು ಸರಿಯಲ್ಲ.
ದೇಶದ ಅಭಿವೃದ್ಧಿಗೆ ಹೂಡಿಕೆ, ಉದ್ದಿಮೆಗಳು ಹಾಗೂ ಕೈಗಾರಿಕೆಗಳು ಅತೀ ಮುಖ್ಯವಾಗಿವೆ. ಉದ್ದಿಮೆದಾರರನ್ನು ಕೆಟ್ಟದಾಗಿ ಚಿತ್ರಿಸುವುದರಿಂದ ದೇಶಕ್ಕೆ ಬಹಳ ಹಾನಿಯಾಗುತ್ತದೆ. ದೇಶದ ಉದ್ಯಮಪತಿಗಳಲ್ಲಿ ಬಹಳಷ್ಟು ಮಂದಿ ಹೃದಯ ಶ್ರೀಮಂತರಿದ್ದಾರೆ. ಅನಿಲ್ ಅಗರ್ವಾಲ್ ಅವರ ಜಾಗತಿಕ ಗಣಿಗಾರಿಕೆ ಸಂಸ್ಥೆ ‘ವೇದಾಂತ ರಿಸೋರ್ಸಸ್ ಲಿಮಿಟೆಡ್’ ತಮಿಳುನಾಡಿನ ತೂತುಕುಡಿಯಲ್ಲಿ 3 ಸಾವಿರ ಕೋಟಿ ರು. ಹೂಡಿಕೆ ಮಾಡಿ ಸ್ಟೆರ್ಲೈಟ್ ಹೆಸರಿನ ತಾಮ್ರದ ಅದಿರು ಸಂಸ್ಕರಣಾ ಘಟಕ ನಡೆಸುತ್ತಿತ್ತು. ಆದರೆ, ತಮಿಳುನಾಡಿನ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಇದರ ವಿರುದ್ಧ ಜನರನ್ನು ಎತ್ತಿ ಕಟ್ಟಿ ಪ್ರತಿಭಟನೆ ನಡೆಸಿ, ಕೊನೆಗೆ ಹಿಂಸಾಚಾರ ಹತ್ತಿಕ್ಕಲು ಲಾಠೀ ಚಾರ್ಜ್, ಗೋಲೀಬಾರ್ ಅನ್ನೂ ನಡೆಸಿತು.
ಕೊನೆಗೆ ಒತ್ತಡಕ್ಕೆ ಮಣಿದು ತಮಿಳುನಾಡು ಸರಕಾರವು 2018 ಮೇ ತಿಂಗಳಲ್ಲಿ ಅದಿರು ಸಂಸ್ಕರಣಾ ಘಟಕ ಮುಚ್ಚಲು ಆದೇಶಿಸಿತು. ಇದರಿಂದಾಗಿ ಸಾವಿರಾರು ಜನರು ಉದ್ಯೋಗ ಕಳೆದುಕೊಳುವಂತಾಯಿತು ಹಾಗೂ ವೇದಾಂತ ಸಂಸ್ಥೆಗೆ ಸಾವಿರಾರು ಕೋಟಿ ರುಪಾಯಿಗಳ ನಷ್ಟವೂ ಆಯಿತು.
2021ರ ಮೇ ತಿಂಗಳಲ್ಲಿ ಕರೋನಾ ಎರಡನೇ ಅಲೆಯ ಸಂದರ್ಭದಲ್ಲಿ ದೇಶದ ಎಲ್ಲ ಆಸ್ಪತ್ರೆಗಳು ಮೆಡಿಕಲ್ ಆಕ್ಸಿಜನ್ ನ ತೀವ್ರ ಕೊರತೆಯನ್ನು ಎದುರಿಸಿ ದವು. ಕೊನೆಗೆ ತಮಿಳುನಾಡಿನಲ್ಲಿ ನ್ಯಾಯಾಲಯದ ವಿಶೇಷ ಅನುಮತಿ ಪಡೆದು ಸ್ಟೆರ್ಲೈಟ್ ಕಂಪನಿ ಕಾರ್ಖಾನೆ ತೆರೆದು ಮೆಡಿಕಲ್ ಆಕ್ಸಿಜನ್ ಅನ್ನು ಉತ್ಪಾದಿಸಿ ತೂತುಕುಡಿ ಸೇರಿ 19 ಜಿಲ್ಲೆಗಳ ಆಸ್ಪತ್ರೆಗಳಿಗೆ ಉಚಿತವಾಗಿ ಪೂರೈಸಿತು.
ಒಂದು ತಿಂಗಳ 500 ಮೆಟ್ರಿಕ್ ಟನ್ಗಳಷ್ಟು ಮೆಡಿಕಲ್ ಆಕ್ಸಿಜನ್ ಉತ್ಪಾದಿಸಿ ವಿತರಿಸಿತ್ತು ಸ್ಟೆರ್ಲೈಟ್. ಎಲ್ಲ ಕಹಿಗಳ ನಡುವೆ ತನ್ನ ಹೃದಯ ವೈಶಾಲ್ಯ ತೋರಿದ್ದರು ವೇದಾಂತ ರಿಸೋರ್ಸಸ್ ಲಿಮಿಟೆಡ್ ಸಂಸ್ಥೆಯ ಅನಿಲ್ ಅಗರ್ವಾಲ! ಇನ್ನು ದೇಶದ ಬಹುದೊಡ್ಡ ಉದ್ಯಮಿ ರತನ್ ಟಾಟಾ ಅವರ ಒಳ್ಳೆಯತನದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಲೇಖನಗಳಿಗೆ ಲೆಕ್ಕವೇ ಇಲ್ಲ. ಇಂಗ್ಲಿಷ್ ಅಂಕಣಕಾರರಾದ ಅನುಜ್ ತಿವಾರಿ, ರತನ್ ಟಾಟಾ ಅವರು ದೇಶದ ನಿಜವಾದ ರತ್ನ ಎಂದು ಸಾಬೀತುಪಡಿಸಿದ 15 ನಿದರ್ಶನಗಳು ಎನ್ನುವ ಲೇಖನ ಬರೆದಿದ್ದಾರೆ. ಟಾಟಾ ಅವರ ‘ದ ಟಾಟಾ ಟ್ರಸ್ಟ್, ಟಾಟಾ ಸನ್ಸ್ ಹಾಗೂ ಟಾಟಾ ಗ್ರೂಪ್ಸ್ ಕೋವಿಡ್ ಮಹಾಮಾರಿಯ ನಿಭಾವಣೆಗೆ 2500 ಕೋಟಿ ರು. ಖರ್ಚು ಮಾಡಿದೆ. ಪ್ರಧಾನಿ ನಿಧಿಗೆ ಸುಮಾರು 1500 ಕೋಟಿ ರು. ಧನಸಹಾಯ ಮಾಡಿದೆ. ಕರೋನಾ ಸಂಕಷ್ಟ ಕಾಲದಲ್ಲಿ ಟಾಟಾ ಸಂಸ್ಥೆಗಳು ಯಾವೊಬ್ಬ ನೌಕರನನ್ನೂ ಕಿತ್ತೆಸೆಯಲಿಲ್ಲ, ಬದಲಾಗಿ ಕೆಲಸಗಾರರನ್ನು ತೆಗೆದುಹಾಕಬಾರದಾಗಿ ಇತರ ಉದ್ಯಮಗಳಿಗೂ ಸ್ವತಃ ರತನ್ ಟಾಟಾ ಅವರೇ ಕರೆಕೊಟ್ಟಿದ್ದರು.
ಟಾಟಾ ಅವರಿಗೆ ತಮ್ಮ ಸಂಸ್ಥೆಯ ನಿವೃತ್ತರೊಬ್ಬರು ಅಸೌಖ್ಯದಿಂದ ಬಳಲುತ್ತಿದ್ದು, ಕಳೆದ ಎರಡು ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ ಎನ್ನುವ ವಿಷ
ಯವು ತಿಳಿಯಿತು. ಪುಣೆಯ ಫ್ರೆಂಡ್ಸ್ ಸೊಸೈಟಿ ಯಲ್ಲಿ ವಾಸಿಸುತ್ತಿದ್ದ ಆ ಮಾಜೀ ಉದ್ಯೋಗಿಯನ್ನು ಭೇಟಿಯಾಗಿ 83 ವರ್ಷ ಪ್ರಾಯದ ಟಾಟಾ
ಸಾಂತ್ವನ ಹೇಳುತ್ತಾರೆ. ಟಾಟಾ ಒಳ್ಳೆಯತನಕ್ಕೆ ಇದೊಂದು ಉದಾಹರಣೆಯಷ್ಟೇ! ಟಾಟಾ ಅವರಿಗೆ ‘ಭಾರತ ರತ್ನ’ ಕೊಡಬೇಕೆಂದು ನೆಟ್ಟಿಗರು ಸರಕಾರಕ್ಕೆ
ಒತ್ತಡ ಹೇರಲು ಆರಂಭಿಸಿದಾಗ ಸ್ವತಃ ಟಾಟಾ ಸಾಮಾಜಿಕ ಮಾಧ್ಯಮದ ಮೂಲಕ ಈ ಅಭಿಯಾನ ನಿಲ್ಲಿಸುವಂತೆ ಅಭಿಮಾನಿಗಳಿಗೆ ಮನವಿ ಮಾಡಿ
ದರು. ಮಾತ್ರವಲ್ಲ ‘ಪ್ರಶಸ್ತಿಗೂ ಮಿಗಿಲಾಗಿ, ನಾನು ಭಾರತೀಯನಾಗಿರಲು ಮತ್ತು ಭಾರತದ ಬೆಳವಣಿಗೆ ಹಾಗೂ ಸಮೃದ್ಧಿಗೆ ಪ್ರಯತ್ನಿಸಲು ಮತ್ತು ಕೊಡುಗೆ ನೀಡಲು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ’ ಎಂದು ವಿನಮ್ರವಾಗಿ ನುಡಿಯುತ್ತಾರೆ.
ಕಾರಿನಲ್ಲಿ ಪ್ರಯಾಣ ಮಾಡುವ ಸಂದರ್ಭಗಳಲ್ಲಿ ಡ್ರೈವರ್ ಪಕ್ಕದ ಸೀಟಿನ ಕುಳಿತು ಆತನ ಸುಖದುಃಖ ವಿಚಾರಿಸುವುದು ಟಾಟಾ ಅವರ ಅಭ್ಯಾಸವಂತೆ. ಪಾತ್ರೆಯಲ್ಲಿನ ಅನ್ನ ಬೆಂದಿದಿಯೇ ಎಂದು ಕಂಡುಕೊಳ್ಳಲು ಒಂದೆರಡು ಅಗುಳುಗಳನ್ನು ಹಿಚುಕಿನೋಡಿದರೆ ತಿಳಿಯುತ್ತದೆ. ದೊಡ್ಡವರ ಇಂತಹ ಉದಾತ್ತ ವರ್ತನೆಯ ಕೆಲವು ನಿದರ್ಶನಗಳು ಅವರ ವ್ಯಕ್ತಿತ್ವದ ಹಿರಿಮೆಯನ್ನು ಸಾರುತ್ತವೆ.
ಜನಸಾಮಾನ್ಯರ ನೋವು ನಲಿವುಗಳಿಗೆ ಸ್ಪಂದಿಸುವ ಇನೊಬ್ಬ ಉದ್ಯಮಿ ಮಹೀಂದ್ರಾ ಸಮೂಹದ ಚೇರ್ಮನ್ ಆನಂದ್ ಗೋಪಾಲ್ ಮಹೀಂದ್ರಾ.
ಟ್ವಿಟ್ಟರ್ನಲ್ಲಿ ಸಕ್ರಿಯರಾಗಿರುವ ಆನಂದ್ ತಮಗೆ ವಿಶಿಷ್ಟವೆನಿಸಿದ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ ಹಾಗೂ ಕೆಲವು ವಿಚಾರಗಳಿಗೆ ಸ್ಪಂದಿಸುತ್ತಾರೆ. ಕೆಲವು ವರ್ಷಗಳ ಹಿಂದೆ ಮಂಗಳೂರಿನ ಶಿಲ್ಪಾ ಹೆಸರಿನ ಮಹಿಳೆಯೊಬ್ಬರು ಪತಿಯನ್ನು ಕಳೆದುಕೊಂಡು ಜೀವನ ನಡೆಸಲು ಬೇರೆ ದಾರಿಯಿಲ್ಲದೆ, ಮಗನ
ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟಿದ್ದ ಒಂದು ಲಕ್ಷ ರುಪಾಯಿಗಳನ್ನು ಖರ್ಚು ಮಾಡಿ ಮಹೀಂದ್ರಾ ಬೊಲೆರೋ ವಾಹನ ಖರೀದಿಸಿದ್ದರು. ಅದನ್ನೇ ಮೊಬೈಲ್ ಹೋಟೆಲ್ ಆಗಿ ಪರಿವರ್ತಿಸಿ ‘ಹಳ್ಳಿಮನೆ ರೊಟ್ಟಿ’ ಎಂಬ ಹೆಸರಿನಲ್ಲಿ ಉತ್ತರ ಕರ್ನಾಟಕದ ಬಗೆಬಗೆಯ ರೊಟ್ಟಿ ತಯಾರಿಸಿ ಗ್ರಾಹಕರಿಗೆ ಒದಗಿಸುವ ಉದ್ದಿಮೆ ಆರಂಭಿಸಿದ್ದರು. ಈ ವಿಷಯ ಆನಂದ್ ಮಹೀಂದ್ರಾ ಗಮನಕ್ಕೆ ಬಂದು, ಅವರು ಶಿಲ್ಪಾಗೆ ಉದ್ದಿಮೆ ವಿಸ್ತರಿಸಲು ಸಹಾಯ ವಾಗುವಂತೆ 2018 ರಲ್ಲಿ ಹೊಸ ಮಹೀಂದ್ರಾ ಪಿಕ್ ಅಪ್ ಟ್ರಕ್ ವಾಹನ ಒದಗಿಸಿದರು.
ತನ್ನ ಆಟೋ ರಿಕ್ಷಾವನ್ನು ಮಹೀಂದ್ರಾ ಸ್ಕಾರ್ಪಿಯೋ ವಾಹನದಂತೆ ಅಲಂಕರಿಸಿದ್ದ ಅಟೋ ಚಾಲಕನಿಗೆ ನಾಲ್ಕು ಚಕ್ರಗಳ ಮಹೀಂದ್ರಾ ಸುಪ್ರೋ
ಮ್ಯಾಕ್ಸಿ ಟ್ರಕ್ ಅನ್ನು 2017ರಲ್ಲಿ ಉಡುಗೊರೆಯಾಗಿ ಕೊಟ್ಟಿದ್ದರು. 2019 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಗಣಪತಿ ಭಟ್ಟರು ಅಡಕೆ
ಮರಕ್ಕೆ ಹತ್ತುವ ಬೈಕ್ ಅನ್ನು ಸಂಶೋಧಿಸಿ ಅದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗಿತ್ತು. ಈ ವಿಚಾರವೂ ಆನಂದ್ ಗಮನಕ್ಕೆ ಬಂದು
ಗಣಪತಿ ಭಟ್ಟರ ಸಂಶೋಧನೆಯನ್ನು ಕೊಂಡಾಡಿ ಅಡಕೆ ಮರವೇರುವ ಬೈಕಿನ ಉನ್ನತೀಕರಣಕ್ಕೆ ಸಹಾಯ ಮಾಡುವಂತೆ ತನ್ನ ತಂಡಕ್ಕೆ ಸೂಚನೆ
ನೀಡಿದ್ದರು. ಇತ್ತೀಚೆಗೆ ಕೈಕಾಲುಗಳ ವೈಕಲ್ಯ ಹೊಂದಿದ್ದೂ ರಿಕ್ಷಾ ಚಲಾಯಿಸಿ ಸ್ವಾವಲಂಬೀ ಜೀವನ ನಡೆಸುತ್ತಿದ್ದ ಮೊಹಮ್ಮದ್ ಹೆಸರಿನ ದಿವ್ಯಾಂಗ
ವ್ಯಕ್ತಿಗೆ ಮಹೀಂದ್ರಾ ಸಂಸ್ಥೆಯಲ್ಲಿ ಉದ್ಯೋಗ ದೊರಕಿಸಿಕೊಟ್ಟಿzರೆ ಆನಂದ್ ಮಹೀಂದ್ರಾ.
ಭಾರತದ ಗ್ರಾಮೀಣ ಭಾಗದಿಂದಲೇ ಸಾಫ್ಟ್ವೇರ್ ಕಂಪೆನಿ ನಡೆಸುತ್ತಿರುವ, ಫೋರ್ಬ್ಸ್ ಭಾರತೀ ಯ ಶ್ರೀಮಂತರ ಪಟ್ಟಿಯಲ್ಲಿ 59 ನೇ ಸ್ಥಾನದಲ್ಲಿರುವ, ಝೋಹೋ ಕಾರ್ಪೋರೇಶನ್ ಲಿಮಿಟೆಡ್ ಹೆಸರಿನ ಗ್ರಾಹಕ ಸಂಬಂಧ ನಿರ್ವಹಣೆಯ ಸಾಫ್ಟ್ವೇರ್ ಕಂಪನಿಯ ಸಹ ಸಂಸ್ಥಾಪಕ ಹಾಗೂ ಸಿಇಓ ಶ್ರೀಧರ್ ವೆಂಬು. ಇವರ ಆಸ್ತಿಯ ಮೌಲ್ಯ 2.5 ಬಿಲಿಯನ್ ಡಾಲರ್ಗಳು(18500 ಕೋಟಿ ರುಪಾಯಿಗಳು). ಝೋಹೋ ಅಮೆರಿಕ ಹಾಗೂ ಭಾರತದ ಜಂಟಿ ಉದ್ಯಮ. ಅಮೆರಿಕದಲ್ಲಿದ್ದ ಶ್ರೀಧರ್ ವೆಂಬು ಭಾರತಕ್ಕೆ ಮರಳಿ, ತಮಿಳು ನಾಡಿನ ತೆಂಕಾಸಿ ಜಿಲ್ಲೆಯ ಪಶ್ಚಿಮ ಘಟ್ಟದ ತಪ್ಪಲಲ್ಲಿರುವ ಮಾತಲಾಂಪರೈ ಎನ್ನುವ ಹಳ್ಳಿಯಲ್ಲಿ ಕುಳಿತು ಅತೀ ಸರಳ ಜೀವನವನ್ನು ನಡೆಸುತ್ತ ಝೋಹೋ ಸಂಸ್ಥೆ ನಿರ್ವಹಿಸುತ್ತಿzರೆ.
ತಮಿಳುನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ಝೋಹೋ ವೃತ್ತಿ ತರಬೇತಿ ಕೇಂದ್ರಗಳನ್ನು ನಡೆಸಿ, ಉದ್ಯೋಗ ನೀಡಿ ಗ್ರಾಮೀಣ ಯುವಕರಿಗೆ ನಗರದ ಉದ್ಯೋಗಿಗಳಷ್ಟೇ ವೇತನ ಕೊಡುತ್ತಿzರೆ. ವೇತನದ ಉದ್ಯೋಗವನ್ನು ಕೊಡುತ್ತಿದ್ದಾರೆ. ೨೦೨೧ರಲ್ಲಿ ಭಾರತ ಸರಕಾರ, ಶ್ರೀಧರ್ಗೆ ಪದ್ಮಶ್ರೀ ನೀಡಿ ಗೌರವಿಸಿತ್ತು. ಇತ್ತೀಚೆಗೆ ಬೆಂಗಳೂರಿನ ಇಂಡಿಯನ್ ಇನ್ಸ್ಟಿ ಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ) ಗೆ ಸುಸಜ್ಜಿತ ಆಸ್ಪತ್ರೆ ಕಟ್ಟಿಸಲು ಮೈಂಡ್ ಟ್ರೀ ಹೆಸರಿನ ಸಾಪ್ಟ್ವೇರ್ ಕಂಪನಿಯ ಸಹ ಸಂಸ್ಥಾಪಕರಾದ ಸುಬ್ರತೋ ಬಾಗ್ಚಿ ಹಾಗೂ ಎನ್ ಎಸ್ ಪಾರ್ಥಸಾರಥಿಯವರು ೪೨೫ ಕೋಟಿ ರುಪಾಯಿಗಳನ್ನು ದಾನ ಮಾಡಿ ತಮ್ಮ ಸಾಮಜಿಕ ಬದ್ಧತೆ ಮೆರೆದಿzರೆ.
ಇನ್ನು ಇನೋಸಿಸ್, ವಿಪ್ರೋ ಸಂಸ್ಥೆಗಳು ಮಾಡುತ್ತಿರುವ ಸಮಾಜಸೇವಾ ಕೆಲಸಗಳಿಗೆ ಲೆಕ್ಕವೇ ಇಲ್ಲ. ಭಾರತದಲ್ಲಿ ಅತೀ ಹೆಚ್ಚಿನ ಮೊತ್ತವನ್ನು ಸಮಾಜ ಸೇವೆಗೆ ವಿನಿಯೋಗಿಸುವವರಲ್ಲಿ ವಿಪ್ರೋ ಮುಖ್ಯಸ್ಥರಾದ ಅಜೀಂ ಪ್ರೇಮ್ ಜಿಯವರು ಮೊದಲಿಗರು. 2021ರಲ್ಲಿ ಪ್ರೇಂ ಜಿಯವರ ಕುಟುಂಬ ಸಮಾಜ ಸೇವೆಗೆ 9713 ಕೋಟಿ ರು. ವಿನಿಯೋಗಿಸಿತ್ತು. ಇನೋಸಿಸ್ನ ಸುಧಾ ಮೂರ್ತಿ ಯವರ ನೇತೃತ್ವದ ಇನೋಸಿಸ್ -ಂಡೇಶನ್ ನೆರೆಪೀಡಿತ ಪ್ರದೇಶಗಳ ನಿರಾಶ್ರಿತರಿಗೆ 2300 ಮನೆಗಳನ್ನು ಕಟ್ಟಿಸಿಕೊಟ್ಟಿದೆ. 70000 ಶಾಲೆಗಳಿಗೆ ಲೈಬ್ರರಿಯನ್ನು ಒದಗಿಸಿಕೊಟ್ಟಿದೆ, 16000 ಸಾರ್ವಜನಿಕ ಶೌಚಾಲಯ ಗಳನ್ನು ಕಟ್ಟಿಸಿಕೊಟ್ಟಿದೆ. ಎಚ್ ಸಿಎಲ್ ಟೆಕ್ನಾಲಜೀಸ್ ನ ಸ್ಥಾಪಕರಾದ ಶಿವ್ ನಾಡಾರ್ ಅವರೂ ಕಳೆದ ವರ್ಷ 1263 ಕೋಟಿ ರುಪಾಯಿಗಳ ದಾನವನ್ನು ಕೊಟ್ಟಿzರೆ.
ಜನಸಾಮಾನ್ಯರಿಗೆ ಅಗ್ಗದ ದರದಲ್ಲಿ ಇಂಟರ್ನೆಟ್ ಸಿಗುವಂತೆ ಮಾಡಿದ ಕೀರ್ತಿ ಸಲ್ಲುವುದು ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿಯವರಿಗೆ
ಸಲ್ಲುತ್ತದೆ. ಪ್ರಪಂಚದಲ್ಲಿಯೇ ಅತೀ ಕಡಿಮೆ ಬೆಲೆಗೆ ಇಂಟರ್ನೆಟ್ ನಿಗುವುದು ಭಾರತದಲ್ಲಿಯೇ. ಚೀನಾ ತಂತ್ರಜ್ಞಾನದ ಸಹಾಯವಿಲ್ಲದೆ ಭಾರತದಲ್ಲಿ 4ಜಿ ತಂತ್ರಜ್ಞಾನವನ್ನು ಜಾರಿಗೆ ತಂದ ರಿಲಾಯನ್ಸ್ ಇದೀಗ 5 ಜಿ ತಂತ್ರಜ್ಞಾನವನ್ನೂ ಜಾರಿಗೆ ತರುತ್ತಿದೆ. ಕಳೆದ ವರ್ಷ 577 ಕೋಟಿ ರುಪಾಯಿಗಳನ್ನು
ಮುಖೇಶ್ ಅಂಬಾನಿ ಕುಟುಂಬವು ಸಮಾಜ ಸೇವೆಗಾಗಿ ವ್ಯಯಿಸಿದೆ. ಪ್ರಧಾನ ಮಂತ್ರಿಯವರ ಪಿ ಎಂ ಕೇರ್ಸಿಗೆ 500 ಕೋಟಿ ರುಪಾಯಿಗಳ ದೇಣಿಗೆ
ಯನ್ನೂ ನೀಡಿದೆ. ಭಾರತವನ್ನು ಸೋಲಾರ್ ಪ್ಯಾನೆಲ್ ನಿರ್ಮಾಣದಲ್ಲಿ ಚೀನಾದ ಅವಲಂಬನೆಯಿಂದ ಮುಕ್ತಗೊಳಿಸುವ ಕೆಲಸದಲ್ಲಿ ಗೌತಮ್ ಅದಾನಿಯವರ ಅದಾನಿ ಸಂಸ್ಥೆಯೂ ಪ್ರಮುಖ ಪಾತ್ರ ವಹಿಸುತ್ತಿದೆ.
ಸರಕಾರಕ್ಕೆ ದೇಶದ ಎಲ್ಲ ಜನರಿಗೆ ಉದ್ಯೋಗ ಕೊಡಲು ಸಾಧ್ಯವಿಲ್ಲ. ಇಂದು ಖಾಸಗಿ ವಲಯವು ಭಾರತೀಯರಿಗೆ ದೊಡ್ಡ ಮಟ್ಟಿನ ಉದ್ಯೋಗಾವಕಾಶ ವನ್ನು ಕಲ್ಪಿಸಿಕೊಡುತ್ತಿದೆ. ಟಾಟಾ, ಅಂಬಾನಿ, ಅದಾನಿ, ಇನೋಸಿಸ್. ವಿಪ್ರೋ, ಮಹೀಂದ್ರಾ ಮೊದಲಾದ ಸಂಸ್ಥೆಗಳು ಲಕ್ಷಾಂತರ ಸಂಖ್ಯೆಯಲ್ಲಿ ನೇರ ಉದ್ಯೋಗಗಳನ್ನು ಹಾಗೂ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಿವೆ. ಭಾರತದಲ್ಲಿ ಖಾಸಗಿ ವಲಯವು ಸುಮಾರು 1 ಕೋಟಿಗಿಂತಲೂ ಹೆಚ್ಚು ಮಂದಿಗೆ ಉದ್ಯೋಗ ದೊರಕಿಸಿದೆ. ಇದೀಗ ಹೊಸದಾಗಿ ಭಾರತದಲ್ಲಿ 53000 ಕ್ಕಿಂತಲೂ ಹೆಚ್ಚು ನವೋದ್ಯಮಗಳು (ಸ್ಟಾರ್ಟಪ್) ರೂಪುಗೊಡಿದ್ದು ಇವುಗಳು ೧೦ ಲಕ್ಷಕ್ಕಿಂತಲೂ ಹೆಚ್ಚು ಸಂಖ್ಯೆಯ ಜನರಿಗೆ ನೇರ ಹಾಗೂ ಪರೋಕ್ಷ ಉದ್ಯೋಗಗಳನ್ನು ಒದಗಿಸಿವೆ. ಉದ್ಯಮಗಳು ದೇಶದ ಅಭಿವೃದ್ಧಿಯ ಜೀವನಾಡಿ. ಹೀಗಾಗಿ ಉದ್ಯಮಿಗಳು ಹಾಗೂ ಹೂಡಿಕೆದಾರರನ್ನು ರಾಜಕೀಯ ಕಾರಣಗಳಿಗಾಗಿ ಖಳನಾಯಕರಂತೆ ಚಿತ್ರಿಸುವುದು ದೇಶದ ಹಿತಕ್ಕೆ ಮಾರಕ.