Saturday, 14th December 2024

ಪುಣ್ಯಕೋಟಿ ಕೈ ಹಿಡಿದ ಹೆಬ್ಬುಲಿ

ತುಂಟರಗಾಳಿ

ಸಿನಿಗನ್ನಡ

ನಟ ದರ್ಶನ್ ತಮ್ಮ ಉಡಾಫೆಯ ಮಾತುಗಳಿಂದ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಅವರು ಕೈ ಹಾಕಿ, ಸುಟ್ಟುಕೊಂಡಿ ರೋದು ಅದೃಷ್ಠ ದೇವತೆ ವಿಷಯದಲ್ಲಿ. ಟಿವಿ ಚಾನೆಲ್ ಗಳಂತೂ ನನ್ನ ಸಂದರ್ಶನಕ್ಕೆ ಕರೆಯಲ್ಲ ಅಂತ ಗೊತ್ತಾದ ಮೇಲೆ ಮೆತ್ತಗಾಗಿ, ಈಗ ಇರೋ ಬರೋ ಯೂಟ್ಯೂಬ್ ಚಾನೆಲ್‌ಗಳನ್ನೆ ಕರೆದು ಸಂದರ್ಶನ ಕೊಡುತ್ತಿದ್ದಾರೆ ಈ ದರ್ಶನ. ಆದರೆ ಅಲ್ಲೂ ತಮ್ಮ ಕಿರಿಕ್ ಬುದ್ಧಿಯನ್ನ ಮಾತ್ರ ಬಿಡುತ್ತಿಲ್ಲ ಅನ್ನೋದು ಇಂಥ ಸಂದರ್ಶನಗಳನ್ನು ನೋಡಿದವರ ಅನಿಸಿಕೆ.

ಈ ಯೂಟ್ಯೂಬ್ ಚಾನೆಲ್‌ಗಳ ಎಳಸು ಹುಡುಗ, ಹುಡುಗಿಯರು ದರ್ಶನ್ ನಮಗೆ ಸಂದರ್ಶನ ಕೊಡೋದೇ ನಮ್ಮ ಅದೃಷ್ಟ ಅಂತ ಅವರು ಬೈದ್ರೂ ಬೈಸಿಕೊಂಡು, ಹಲ್ಲು ಕಿಸಿಯುತ್ತಾರೆ. ಆದರೆ ಈ ಅದೃಷ್ಟದ ವಿಷಯದಲ್ಲಿ ಎಡವಟ್ಟು ಮಾಡಿಕೊಂಡಿರುವ ದರ್ಶನ್, ಅದೃಷ್ಟ ದೇವತೆ ಬಾಗಿಲು ತಟ್ಟಿ ದಾಗ, ಕರ್ಕೊಂಡ್ ಬಂದು ಬಟ್ಟೆ ಬಿಚ್ಚಿ, ಬೆಡ್ರೂಮ್‌ನಲ್ಲಿ ಕೂರಿಸಿಬಿಡಬೇಕು ಅಂತ ಮಾತನಾಡಿzರೆ. ಅದೃಷ್ಟ ದೇವತೆ ನಮ್ಮ ಮನೆಯಿಂದ ಬೇರೆ ಕಡೆ ಹೋಗೋಕೆ ಆಗಬಾರದು ಅಂತ ಆಕೆಯ ಬಟ್ಟೆ ಬಿಚ್ಚಿ ಕೂರಿಸಬೇಕು ಅನ್ನೋದು ದರ್ಶನ್ ಅವರ ಹೇಳಿಕೆಯ ಉದ್ದೇಶ. ಆದರೆ ಆಕೆಯನ್ನ ಬೆಡ್ರೂಮ್‌ನ ಯಾಕೆ ಕೂರಿಸಬೇಕು ಅನ್ನೋದು ಅವರ ಈ ಡೈಲಾಗ್ ಕೇಳಿ ಗಾಬರಿಯಾದವರು ಕೇಳ್ತಾ ಇರೋ ಪ್ರಶ್ನೆ.

ಒಟ್ಟಿನಲ್ಲಿ ಈಗ ಅದೃಷ್ಟ ದೇವತೆ ದರ್ಶನ್ ಅವರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಮಿಡಿ ಮೀಮ್ ಮಾಡುವವರಿಗೆ ಸರಕಾಗಿ ಬಳಕೆ ಆಗ್ತಾ ಇರೋದು ಸದ್ಯದ ಬೆಳವಣಿಗೆ.

ಲೂಸ್ ಟಾಕ್
ನರಭಕ್ಷಕ ಹುಲಿ (ಕಾಲ್ಪನಿಕ ಸಂದರ್ಶನ)
ಅಲ್ಲಪ್ಪಾ, ಹಿಂಗೆ ಊರೊಳಗೆ ನುಗ್ಗಿ ಮನುಷ್ಯರನ್ನ ಕೊಂದು ತಿನ್ನೋದು ತಪ್ಪಲ್ವಾ?
-ಏನ್ ತಪ್ಪು, ಹುಲಿ ಮುಪ್ಪಾದರೆ, ಹುಲ್ಲು ತಿಂತದಾ? ಉಪ್ಪು, ಹುಳಿ, ತಿಂದು ಬೆಳೆದಿರೋ ದೇಹ. ಹುಲಿ ಕಾಡಲ್ಲಿದ್ರೂ ಹುಲಿನೇ, ರೋಡಲ್ಲಿದ್ರೂ ಹುಲೀನೇ ಗೊತ್ತಾ, ಈಗ ನೀನ್ ಸಿಕ್ಕಿದೀಯಾ..ಕುತ್ತೇ ಮೇ ತೇರಾ ಜೂನ್ ಪೀ ಜಾವೂಂಗ

ಓ…ನೀನು ಧರ್ಮೇಂದ್ರನ ಅಭಿಮಾನಿ ಅನ್ನುತ್ತ, ಒಂದ್ ಅರ್ಧಗಂಟೆ ಇರು. ಇವತ್ತಿನ ಡೆಡ್ ಲೈನ್ ಮುಗಿಸ್ಕೊಂಡ್ ವಾಪಸ್ ಬರೀನಿ, ಆಮೇಲ್ ತಿನ್ನುವಂತೆ

-ಮಗಾ, ಪುಣ್ಯಕೋಟಿ ಕಾಲ ಎಲ್ಲಾ ಈವಾಗಿಲ್ಲಮ್ಮಾ, ಇದು ಕಲಿಗಾಲ.

ನಿಜ ಹೇಳಬೇಕೂಂದ್ರೆ, ಇದು ಹುಲಿಗಾಲ, ಅದ್ಸರಿ, ಈಗ ಬೋನೊಳಗೆ ಹಾಕಿದದ್ದಾರಲ್ಲ ನಿನ್ನ, ಈಗ ಹೇಳು, ನಿನ್ನ ಪ್ರಕಾರ ಯಾರು ಜಾಸ್ತಿ ಸ್ಟಾಂಗ್? ಮನುಷ್ಯನಾ ಅಥವಾ ‘ಹುಲಿಯಾ’?
-ಗೊತ್ತಿಲ್ಲ, ಕೆ.ವಿ.ರಾಜು ಅವರನ್ನೇ ಕೇಳಬೇಕು.

ಸರಿ, ಸರಿ, ಆದ್ರೆ, ‘ಕಾಡು ಹೋಗು ಅಂತಿದೆ, ಊರು ಬಾ ಅಂತಿದೆ’ ಅನ್ನೋ ನಿನ್ನ ಸಾಯಿಸ್ಬೇಕೂಂತ ಕೆಲವರು ಹೇಳಿದಾರೆ, ಏನಂತೀಯಾ?
-ಟೈಗರ್ ಪ್ರಭಾಕರ್, ಭಾಳಾ ಠಾಕ್ರೆ, ಪಟೌಡಿ ಹೀಗೆ ಹುಲಿಗಳ ಸಂತತಿ ಕಡಿಮೆಯಾಗಿದೆ. ಹಂಗಾಗಿ ನನ್ನನ್ನ ಕೊಲ್ಲಲ್ಲ ಅಂತ ಭರವಸೆ ಇದೆ.

ಸಿಕ್ಕಾಕ್ಕೊಂಡಿರೋ ಬೋನಿನಲ್ಲಿ ತಿನ್ನೋಕೆ ಬೋನ್ ಸಿಗ್ತಿಲ್ಲ, ಹಂಗೇ ಸತ್ರೂ ಸಾಯಬಹುದು ನೀನು. ಹಂಗೇನಾದ್ರೂ ಆದ್ರೆ, ನಿನ್ ಕೊನೇ ಆಸೆ ಏನು?
-ನೀವ್ಯಾರೂ ನಮ್ಮ ಹುಲಿಗಳ ಆಸೆ ತೀರ್ಸಲ್ಲ ಬಿಡ್ರಪ್ಪಾ. ಒಂದಷ್ಟು ವರ್ಷಗಳ ಹಿಂದೆ ‘ಹುಲಿ ಹಿಡಿದವರು ಕಂಡಂತೆ’ ಅಂತ ನನ್ ಮೇಲೊಂದ್ ಸಿನಿಮಾ ಮಾಡ್ತೀನಿ ಅಂತ ಹೇಳಿದ್ರು, ಆದ್ರೆ ಮಾಡದೇ ನನ್ನ ಆಸೆಗೆ ಹುಳಿ ಹಿಂಡಿಬಿಟ್ರು.

ನೆಟ್ ಪಿಕ್ಸ್
ಮತ್ತು ಸೋಮು ಫ್ಯಾಷನ್ ಮಾಲ್ ಒಂದರ ಕೆಟಲಾಗ್ ನೋಡ್ತಾ ಕೂತಿದ್ರು. ಅಲ್ಲಿ  ಒಬ್ಬರಿಗಿಂತ ಒಬ್ಬರು ಸುಂದರವಾಗಿರೋ ಹುಡುಗೀರು ಬಣ್ಣ ಬಣ್ಣದ ಬಟ್ಟೆ ಹಾಕ್ಕೊಂಡು ಪೋಸ್ ಕೊಟ್ಟು ನಿಂತ್ಕಂಡಿದ್ರು. ಪ್ರತಿ ಹುಡುಗಿಯ ಪಕ್ಕದಲ್ಲೂ ಆಯಾ ಬಟ್ಟೆಯ ದರ ಹಾಕಲಾಗಿತ್ತು. ಅದನ್ನು ಕಣ್ಣುತುಂಬಾ ನೋಡಿ ಖುಷಿ ಪಡುತ್ತಿದ್ದ ಖೇಮು, ಸೋಮು ಮಾತಾಡಿಕೊಳ್ಳುತ್ತಿದ್ದರು.

ಖೇಮು: ಈ ಕೆಟಲಾಗ್ನಲ್ಲಿರೋ ಹುಡುಗೀರು ಎಷ್ಟು ಚೆನ್ನಾಗಿದಾರಲ್ವಾ?
ಸೋಮು: ಹೌದಲ್ವಾ..
ಖೇಮು: ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕ್ಕೊಂಡು ಚಿಟ್ಟೆಗಳು ಎಷ್ಟು ಸೂಪರ್ ಆಗಿ ಕಾಣ್ತಾ ಇದಾರಲ್ವಾ..
ಸೋಮು: ಹೌದು ನೋಡ್ತಾ ಇದ್ರೆ ತಗೋಬೇಕು ಅಂತ ಟೆಂ ಆಗ್ತಿದೆ…

ಸೋಮು: ಹೌದು ನಿಜವಾಗೂ ಕಲರ್, ರೇಟು ನೋಡಿದ್ರೆ ನಂಗೂ ಟೆಂ ಆಗ್ತಿದೆ.
ಖೇಮು: ಅಯ್ಯೋ, ಇಲ್ಲಿ ನೋಡು ರೇಟು ತೀರಾ ಕಾಸ್ಟ್ಲೀ ಏನಿಲ್ಲ, ಈ ರೇಟಿಗೆ ನಾನು ಒಬ್ಬಳನ್ನ ಕೊಂಡುಕೊಳ್ಳೋಣ ಅಂತಿದೀನಿ.

ಸೋಮು: ಕೊಂಡ್ಕೊ, ಕೊಂಡ್ಕೊ, ಡೆಲಿವರಿ ಆದಾಗ ಅವಳು ನಿಜವಾಗೂ ಈ ಕೆಟಲಾಗ್ನಲ್ಲಿ ಇರೋ ಅಷ್ಟೇ ಚೆನ್ನಾಗಿದ್ರೆ, ನಾನೂ ಒಬ್ಬಳನ್ನ ಆರ್ಡರ್ ಮಾಡ್ತೀನಿ.

ಸರಿ, ಖೇಮು ಆರ್ಡರ್ ಮಾಡಿದ ಮೂರು ವಾರಗಳ ನಂತರ ಮತ್ತೆ ಖೇಮು, ಸೋಮು ಭೇಟಿ ಮಾಡಿದ್ರು. ಸೋಮು ಕೇಳಿದ ‘ನೀನ್ ಆರ್ಡರ್ ಮಾಡಿದ ಹುಡುಗಿ ಬಂದ್ಳಾ?’, ಅದಕ್ಕೆ ಖೇಮು ಹೇಳ್ದ ‘ಹುಡುಗಿ ಇನ್ನೂ ಬಂದಿಲ್ಲ. ಆದ್ರೆ ಇಷ್ಟರ ಬರ್ತಾಳೆ ಅನ್ನುತ್ತೆ. ನಿನ್ನೆ ತಾನೇ ಅವಳ ಬಟ್ಟೆ ಇರೋ ಲಗೇಜ್ ಕಳಿಸಿದ್ದಾರೆ.

ಲೈನ್ ಮ್ಯಾನ್

ಸುದೀಪ್ ಪುಣ್ಯಕೋಟಿ ಯೋಜನೆಯ ರಾಯಭಾರಿ
ಸುದೀಪ್- ಗೂಳಿ, ನಂದಿ ಅಂತ ಸಿನಿಮಾ ಮಾಡಿದ್ದು ಸಾರ್ಥಕ ಆಯ್ತು
ಪುಣ್ಯಕೋಟಿ – ‘ಹೆಬ್ಬುಲಿ’ನ ತಗೊಂಡೋಗಿ ಪುಣ್ಯಕೋಟಿ ಮಾಡಿ, ನನ್ ಕಥೆನೇ ಉಲ್ಟಾ ಮಾಡಿಬಿಟ್ರ
ಚಿಕ್ಕಣ್ಣ: ಗುರುಗಳೇ, ಇವತ್ತು ಪೇಪರ್‌ನಲ್ಲಿ ಎಲ್ಲಾ ಟ್ರೂಪ್ ಆಫ್ ಟೆರರಿ ವಾಸ್ ಊಟ್ಠ್ಞbಛಿb ಚಿqs ಐbಜಿZ mಟ್ಝಜ್ಚಿಛಿ ಅಂತ ಇತ್ತು. ನಮ್ಮ ಇಂಡಿಯಾದ ಪೊಲೀಸ್ನವರೂ ಟೆರರಿ ಆಗ್ತಿದಾರಾ?

ಸಾಧು: ಲೋ ಚಿಕ್ಕ, ಅದು ಊಟ್ಠ್ಞbಛಿbಅಲ್ಲ ಕಣೋ, ಊಟ್ಠ್ಞb bಛಿZb ಇಂಗ್ಲಿಷ್‌ನಲ್ಲಿ ‘ರೋಡ್ ಮೂವೀಸ್’ ಅಂತಲೇ ಫೇಮಸ್ ಆಗಿರೋ ರೋಡ್‌ನಲ್ಲಿ ನಡೆಯುವ ಕಥೆ ಇರುವ ಚಿತ್ರಗಳಿಗೆ ಕನ್ನಡ ಚಿತ್ರರಂಗ ಕೊಟ್ಟ ಹೊಸ ಹೆಸರು
-‘ರೋಡಿಸಂ’ ಚಿತ್ರಗಳು

ಚೆನ್ನೈನಲ್ಲಿ ಬಂದಿರೋ ಚಂಡಮಾರುತ ಶ್ರೀಲಂಕಾದ ಕ್ಯಾಂಡಿ ನಗರದಲ್ಲಿ ಬಂದು ತುಂಬಾ ಬಾನಿ ಆಗಿದ್ದಿದ್ದರೆ ಪತ್ರಿಕೆಗಳ ಹೆಡ್ಲೈನ್ ಏನಿರುತ್ತಿತ್ತು?

-ಕ್ಯಾಂಡಿ ಕ್ರಷ್
ಲೈಫಲ್ಲಿ ಜಾಸ್ತಿ ಜನ ಹುಡುಗೀರನ್ನ ಲವ್ ಮಾಡೋದರ ಅಪಾಯ

-ಮುಂದೆ ಮದುವೆ ಆದಮೇಲೆ ಎಣ್ಣೆ ಹೊಡೆದು ಸ್ಯಾಡ್ ಸಾಂಗ್ ಕೇಳುವಾಗ ಯಾವ ಗರ್ಲ್ ಫ್ರೆಂಡ್‌ನ ನೆನಪಿಸ್ಕೊಬೇಕು ಅಂತ ಕನ್ಪ್ಯೂಸ್ ಆಗುತ್ತೆ.

ಇವತ್ತಿಂದ ಶುರು ಮಾಡ್ತೀನಿ, ಮಾಡೇ ಮಾಡ್ತೀನಿ ಅನ್ನೋದು ಆದ್ರೆ ಮಾಡದೇ ಇರೋದು, ಬೆಳಗ್ಗೆ ಮುಂಚೆ ಎದ್ದು ಜಿಮ್ಗೆ, ಜಾಗಿಂಗ್ಗೆ ಹೋಗೋದು ಎಲ್ಲರೂ ಆಗಾಗ ಇವತ್ತಿಂದ ಬಿಡ್ತೀನಿ, ಬಿಟ್ಟೇ ಬಿಡ್ತೀನಿ ಅನ್ನೋದು, ಆದ್ರೆ ಬಿಡದೇ ಇರೋದು
-ಸಿಗರೇಟು, ಗುಂಡು ಮತ್ತು ಫೇಸ್ಬುಕ್

ಯೋಗರಾಜ್ ಭಟ್ ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡ್ತಾರಂತೆ. ಸಿನಿಮಾ ಹೆಸರು
-ಬ್ಯಾಚುಲರ್ ಲೈಫು ಇಷ್ಟೇನೆ – ಎಲ್ಲಾ ಸಲ್ಮಾನ್‌ಭಟ್‌ಫಿಲ್ಮ್.
ಖಾಸಗಿ ಟಿವಿ ಚಾನೆಲ್‌ಗಳೆ ಬ್ಯಾನ್ ಮಾಡಿರೋದ್ರಿಂದ ಛಾಲೆಂಜಿಂಗ್ ಸ್ಟಾರ್ ದರ್ಶನ್ ಕೊಂಡುಕೊಳ್ಳಬಹುದಾದ ಟಿವಿ ಚಾನೆಲ್

-ದೂರ-ದರ್ಶನ್
ಹೆಂಡ್ತಿ: ನಿಮ್ಮ ಕೂದಲು ಹಿಂಗೇ ಉದುರ್ತಾ ಇದ್ರೆ, ನಿಮಗೆ ಡೈವೋರ್ಸ್ ಕೊಡ್ತೀನಿ ಅಷ್ಟೆ.

ಗಂಡ: ಹೌದಾ, ಛೇ, ನಾನೆಂತಾ ಪೆದ್ದ.. ಇಷ್ಟು ದಿನ ಕೂದಲು ಉದುರ್‌ಬಾರ್ದು ಅಂತ ಏನೇನೋ ಟ್ರೀಟ್ಮೆಂಟ್ ತಗೊಂಡ್ ಬಿಟ್ಟೆ

ಗುಜರಾತ್‌ನಲ್ಲಿ ಗೆದ್ರೂ ಹಿಮಾಚಲ್ ಪ್ರದೇಶದಲ್ಲಿ ಯಾಕೆ ಸೋತ್ರಿ?
ಮೋದಿ – ಹಿಮಾಚಲ್ ಪ್ರದೇಶದಲ್ಲಿ ಕಾಂಗ್ರೆಸ್ ನೋರು ಆಂಬುಲೆನಲ್ಲಿ ಬಂದ್ರು, ಅದಕ್ಕೆ ದಾರಿ ಬಿಟ್ಟೆ
ಉಮ್ರಾನ್ ಮಲ್ಲಿಕ್ ಬೋಲಿಂಗ್ ನೋಡಿದ ಬ್ಯಾಟ್ಸ ಮನ್ ಗಳ ಅನಿಸಿಕೆ
-ಇವ್ನ್ ಸ್ಪೀಡಿಗೆ, ಬಾಲ್ ಬರೋವರೆಗೂ ಕಾದ್ರೆ ಅಷ್ಟೇ..ಅವ್ನು ಅಂಪೈರ್ ಹತ್ರ ಇದ್ದಾಗ್ಲೇ ಶಾಟ್ ಆಡಿಬಿಡಬೇಕು.