ಪ್ರಸ್ತುತ
ಸುಲಕ್ಷಣಾ ಶರ್ಮಾ
‘ಆನೋ ಭದ್ರಾಃ ಕೃತವೋ ಯಂತು ವಿಶ್ವತಃ’ ಜಗತ್ತಿನಲ್ಲಿ ಮತಗಳು ಭ್ರೂಣಾವಸ್ಥೆಗೆ ಬರುವ ಮೊದಲೇ ಜನ್ಮ ತಾಳಿ ಪ್ರೌಢಮೆಯನ್ನು ಗಳಿಸಿದ ಸನಾತನ ಧರ್ಮವನ್ನು ಪಾಲಿಸುತ್ತಿದ್ದ ಋಷಿಮುನಿಗಳು ಹೇಳಿದ ಮಾತಿದು ‘ವಿಶ್ವದಡೆಯಿಂದ ಉದಾತ್ತ ಚಿಂತನೆಗಳು ನಮ್ಮೆಡೆಗೆ ಬರಲಿ’ ಎಂಬ ಮಾತು ನಮ್ಮ ಹಿರಿಯರ ಹೃದಯ ವೈಶಾಲ್ಯವನ್ನು ಎತ್ತಿ ತೋರಿಸುತ್ತದೆ.
ಭಾರತೀಯ ಇತಿಹಾಸದಲ್ಲಿರುವ ವೈಚಾರಿಕತೆ, ಸಂಸ್ಕೃತಿಯಲ್ಲಿರುವ ಮೌಲ್ಯಾಧಾರಿತ ಜೀವನ ಧರ್ಮ, ವೈಜ್ಞಾನಿಕ ತಳಹದಿಯಿರುವ ಆಚರಣೆಗಳು ಇನ್ನಾವುದೇ ಮತಗಳಲ್ಲಿ ಸಿಗಲಾರದು. ಜಗತ್ತಿನಲ್ಲಿ ಉಳಿದ ರಾಷ್ಟ್ರಗಳು ಎದುರಿಸದಷ್ಟು ಪರಕೀಯರ ಆಕ್ರಮಣಗಳನ್ನು ಎದುರಿಸಿದ ನಂತರವೂ ಭಾರತದಲ್ಲಿ ಸಂಸ್ಕೃತಿ ಇನ್ನೂ ಅವಿನಾಶಿಯಾಗಿ ಉಳಿದಿದೆ ಎಂದಾದರೆ ಅದಕ್ಕೆ ಸನಾತನ ಧರ್ಮದ ಉದಾತ್ತ ಚಿಂತನೆಗಳೇ ಕಾರಣ. ಸನಾತನ ಧರ್ಮ ಅಥವಾ ಹಿಂದೂ ಧರ್ಮ ಯಾವುದೇ ಪುಸ್ತಕದ ಆಧಾರದಲ್ಲಿ ನಿಂತಿಲ್ಲ, ಹಿಂದೂ ಧರ್ಮವು ಕಾಲಚಕ್ರದ ತಿರುವಿನ ಜೊತೆಗೆ ವೈಚಾರಿಕ ವಿಮರ್ಶೆಗಳನ್ನು ನಡೆಸಿ ಹಿರಿಯರಿಂದ ಕಿರಿಯರಿಗೆ ಹಸ್ತಾಂತರಿಸಲ್ಪಟ್ಟ ಜೀವನ ಪದ್ಧತಿ.
ಭಾರತದ ಸುದೀರ್ಘ ಸಂಘರ್ಷಮಯ ಇತಿಹಾಸದಲ್ಲಿ ರಾಷ್ಟ್ರದ ಅಸ್ಮಿತೆಯನ್ನು ಮತ್ತು ಸನಾತನ ಸಂಸ್ಕೃತಿಯನ್ನು ಉಳಿಸಲು ನಮ್ಮ ಪೂರ್ವಜರು ಖರ್ಗವನ್ನು ಝಳಪಿಸುವ ಮೊದಲು ಸಂಧಾನ ಮಾರ್ಗವನ್ನು ಅನುಸರಿಸಿ ಶಾಂತಿ ಸ್ಥಾಪನೆಗೆ ಪ್ರಯತ್ನಿಸುತ್ತಿದ್ದರು ಎಂಬುದು ಚರಿತ್ರೆಯಿಂದ ತಿಳಿದು ಬರುತ್ತದೆ. ತಮ್ಮ ಚಿಂತನೆಗಳನ್ನು ಇನ್ನೊಬ್ಬರ ಮೇಲೆ ಹೇರಲು ಮತಾಂಧರು ಕ್ರೌರ್ಯದ ಮೊರೆ ಹೊಕ್ಕಾಗ ವಸುದೈವ ಕುಟುಂಬಕಂ ಎಂದು ಸಾರಿದ ಹಿಂದೂ ಧರ್ಮ ಶ್ರೇಷ್ಠವಾದದ್ದು, ಅನಾದಿಕಾಲದಿಂದಲೂ ಆಚರಣೆಯಲ್ಲಿರುವ ಹಿಂದೂ ಧರ್ಮವೂ ವಿಶ್ವದಲ್ಲಿ ಶಾಂತಿ ಸ್ಥಾಪನೆಗೆ ಅತ್ಯಗತ್ಯ.
ಹಿಂದೂ ಧರ್ಮದ ಶ್ರೇಷ್ಠತೆ: ಸುಸಂಪನ್ನವಾದ ಹಿಂದುಸ್ಥಾನದ ಮೇಲೆ ವಿಧರ್ಮೀಯರು ದಾಳಿಗಳನ್ನು ಮಾಡಿ, ಪ್ರತ್ಯೇಕತಾವಾದದ ಗುಬ್ಬಿಸಿ ಹಿಂದೂ ಧರ್ಮವನ್ನು ಬಲಹೀನಗೊಳಿಸಲು ಪ್ರಯತ್ನಿಸಿದಾಗ ಸನಾತನ ಚಿಂತನೆಗಳ ಮಹತ್ವವನ್ನು ಸಾರಿದ ವಿದ್ಯಾರಣ್ಯರು, ಸಮರ್ಥರಾಮದಾಸರು, ಅರವಿಂದರು, ವಿವೇಕಾನಂದರನ್ನೊಳಗೊಂಡ ಸಂತ ಪರಂಪರೆಯೇ ಹಿಂದೂ ಧರ್ಮದ ಅವಿನಾಶಿ ಗುಣಕ್ಕೆ ಕಾರಣವಾಯಿತು. ಚಿಕಾಗೋ ಸಮ್ಮೇಳನದಲ್ಲಿ ಧರ್ಮದ ಬಗ್ಗೆ ವ್ಯಾಖ್ಯಾನ ನೀಡಿದ ಸಿಡಿಲಸಂತ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮ, ಝೊರೋಸ್ಟ್ರಿಯನಿಸಂ ಮತ್ತು ಜುಡಾಯಿಸಂ ಇವುಗಳನ್ನು ತುಲನೆ ಮಾಡುತ್ತಾರೆ.
ಝೊರೋಸ್ಟ್ರಿಯನಿಸಂನಲ್ಲಿ ಕಾಲಕ್ರಮೇಣ ಧರ್ಮದ ಅನುಯಾಯಿಗಳ ಸಂಖ್ಯೆ ಕುಸಿಯುವುದು ಮತ್ತು ಜುಡಾಯಿಸಮ್ ತನ್ನ ಪುತ್ರಮತವಾದ ಕ್ರಿಶ್ಚಾನಿಟಿಯ ಹೊಡೆತಕ್ಕೊಳಗಾಗುವುದನ್ನು ಗುರುತಿಸಿದ ಸಿಟಿಲಸಂತ ಈ ಸಂಸ್ಕೃತಿಗಳ ವೈ-ಲ್ಯವನ್ನು ಸೂಕ್ಷ್ಮವಾಗಿ ತಿಳಿಸುತ್ತಾರೆ. ಹಿಂದೂ ಧರ್ಮದ ಮೇಲೆ ಇದೇ ತರಹದ ದಾಳಿಗಳು ನಡೆದಾಗ ಸನಾತನ ಚಿಂತನೆಗಳು ವಿಶ್ವ ವ್ಯಾಪಿ ಆಗುವುದರ ಬಗ್ಗೆ ವಿವೇಕಾನಂದರು ಹೀಗೆ ತಿಳಿಸುತ್ತಾರೆ.
Sect after sect arose in India and seemed to shake the religion of Vedas to its strong foundation, but like the water of seashore in tremendous earthquake, it recorded only for a while, only to return in all absorbing flood a thousand times more vigorous and when the tumult of the rush was over, all these sects were sucked in absorbed and assimilated into immense body of mother faith.ಈ ರೀತಿಯಲ್ಲಿ ವಿಧರ್ಮೀಯರ ದಬ್ಬಾಳಿಕೆಗೆ ಒಳಗಾಗಿಯೂ ಜಗ್ಗದೆ; ಮೂಲ ಧ್ಯೇಯವನ್ನು ಮರೆಯದೆ ಜಾಗತಿಕ ಒಳಿತಿಗಾಗಿ ಶಾಂತಿಮಂತ್ರವನ್ನು ಜಪಿಸುವ
ಸನಾತನ ಜೀವನ ಧರ್ಮವೇ ಹಿಂದೂ ಧರ್ಮ. ವೇದ ಕಾಲದಿಂದಲೂ ಸಂತಪರಂಪರೆ ಭರವಸೆಯ ನಾಳೆಗಾಗಿ ಸನಾತನ ಚಿಂತನೆಗಳ ಅಡಿಪಾಯ ವನ್ನಿಡಬೇಕೆಂದು ಹೇಳಿಕೊಂಡು ಬಂದಿದೆ. ವೈಯಕ್ತಿಕ ಮಹತ್ವಾಕಾಂಕ್ಷೆಗಳ ಸೆಳೆತದಲ್ಲಿ ಕೊಚ್ಚಿ ಹೋಗಿದ್ದ ವಸಾಹತುಶಾಹಿ ಪರಕೀಯ ಶಕ್ತಿಗಳು ರಕ್ತವನ್ನು ಹರಿಸುವ ಮೂಲಕ, ತಮ್ಮ ಮತದ ಸ್ಥಾಪನೆಗೆ ಪ್ರಯತ್ನಿಸಿ ಪತನದತ್ತ ಸಾಗುವಾಗ ಯಾವುದೇ ಹೇರಿಕೆ ನೀತಿಯನ್ನು ಅನುಸರಿಸದ ಹಿಂದೂ ಧರ್ಮವು ಭಾರತದ ಮೇರೆಗಳನ್ನು ಮೀರಿ ಜಗತ್ತಿನಲ್ಲಿ ಪ್ರಸರಣ ಹೊಂದಿದ್ದು ವಿಶೇಷ. ಸಂಕುಚಿತ ಮನೋಭಾವವನ್ನು ಬೆಳೆಸಿಕೊಂಡು ಬಂದ ಮತಗಳ ನಡುವೆ ‘ಕ್ರಿಣ್ವಂತೌ ವಿಶ್ವ ರ್ಮಾ’ಯಂ ಎಂಬ ಪರಿಕಲ್ಪನೆಯನ್ನು ಹೊಂದಿರುವ ಹಿಂದೂ ಧರ್ಮವೂ ಜಾಗತಿಕ ಒಳಿತಿಗಾಗಿ ಶ್ರಮಿಸುವುದು.
ಹಿಂದುತ್ವ ಮತ್ತು ಶಾಂತಿಯ ಪರಿಕಲ್ಪನೆ: ‘ನಿರ್ಭಯತೆಯ ಸಂದೇಶವನ್ನು ನೀಡಿದ ಅನನ್ಯ ಧರ್ಮವು ಮೂಡಿದ್ದು’ ಭಾರತದ ನೆಲದಿಂದ ಎಂಬ ವಿವೇಕ ವಾಣಿಯು ಹಿಂದುತ್ವದ ಮೂಲ ಚಿಂತನೆಯನ್ನು ಸಂಕ್ಷಿಪ್ತವಾಗಿ ತಿಳಿಸುತ್ತದೆ. ಅಧಿಕಾರ ದಾಹದಿಂದ ವಿದೇಶಿ ಜನರು ಕಚ್ಚಾಟದಲ್ಲಿ ತೊಡಗಿ ಅಶಾಂತಿಯ ಪರ್ವ ಎದುರಾದಾಗ ‘ಓಂ ಶಾಂತಿಃ ಓಂ ಶಾಂತಿಃ ’ ಎಂದು ಉಚ್ಚರಿಸಿ, ಶಾಂತಿಪ್ರಾಪ್ತಿಗಾಗಿ ಆಧ್ಯಾತ್ಮಿಕ ಮಾರ್ಗವನ್ನು ತೋರಿದ ಶ್ರೇಷ್ಠ ಧರ್ಮ ಸನಾತನ ಧರ್ಮ. ಹಿಂದುತ್ವ ಅಹಿಂಸೆಯನ್ನು ಪ್ರತಿಪಾದಿಸುತ್ತದೆ ಎಂದ ಮಾತ್ರಕ್ಕೆ ಕ್ಷಾತ್ರ ಧರ್ಮವನ್ನು ಅಲ್ಲಗೆಳೆಯುತ್ತದೆ ಎಂದಲ್ಲ. ಶಾಂತಿ ಸ್ಥಾಪನೆಗಾಗಿ ಧರ್ಮದ ನೆಲಗಟ್ಟಿನಲ್ಲಿ ಖಡ್ಗ ಝಳಪಿಸುವುದನ್ನು ಸನಾತನ ಧರ್ಮವು ಒಪ್ಪಿಕೊಂಡಿದೆ. ಛತ್ರಪತಿ ಶಿವಾಜಿ ಮಹಾರಾಜರಿಂದ ಹಿಡಿದು ಸ್ವಾತಂತ್ರ್ಯವೀರ ಸಾವರ್ಕರರವರೆಗೆ ಅನುಸರಿಸಿದ ರೀತಿನೀತಿಗಳು ‘ಧರ್ಮ ಹಿಂಸಾ ತಥೈವ ಚ’ ಎಂಬುದಕ್ಕೆ ಜ್ವಲಂತ ಉದಾಹರಣೆಗಳು.
ಅಧಿಕಾರಕ್ಕಾಗಿ ಮತ್ತು ಸಂಪತ್ತಿಗಾಗಿ ಬೇರೆ ದೇಶಗಳ ಮೇಲೆ ಆಕ್ರಮಣ ಮಾಡಿದ ಇತಿಹಾಸ ನಮ್ಮದಲ್ಲ. ಬೇರೆ ಸಂಸ್ಕೃತಿಯನ್ನು ಆಚರಿಸುವವರಿಗೆ ನಿರ್ಭೀತಿಯಿಂದ ನೆಲೆಯೂರಲು ನಮ್ಮ ಧರ್ಮವು ಅನುವು ಮಾಡಿಕೊಟ್ಟಿದೆ. ಇಂದು ನಾವು ಸಂವಿಧಾನದಲ್ಲಿ ಹೇಳುವ ‘ಸೆಕ್ಯುಲರಿಸಂ’ ಹಿಂದಿನಿಂದಲೂ ಹಿಂದೂ ಧರ್ಮದಲ್ಲಿದೆ. ಹಾಗಾಗಿ ಹಿಂದೂ ಧರ್ಮವೂ ಶಾಂತಿ ಸ್ಥಾಪನೆಗೆ ಇರುವ ದಾರಿ ಎಂದರೆ ತಪ್ಪಲ್ಲ.
ಶಾಂತಿಯ ಪಥ ಬಿಡದ ರಾಷ್ಟ್ರೀಯ ಸ್ವಯಂಸೇವಕ ಸಂಘ: ಸಂಪತ್ತು ಮತ್ತು ಅಧಿಕಾರಕ್ಕಾಗಿ ಹಿಂದೂ ವಿಚಾರಧಾರೆಗೆ ಮಸಿಬಳಿಯಲು
ವಿತರಣೀಯರು ಅನುಸರಿಸಿದುದು ಕ್ರೌರ್ಯದ ಜೊತೆಗೆ ಈ ಜಿqಜಿbಛಿ Zb ಛಿ mಟ್ಝಜ್ಚಿqs.ಅಂತಹ ಪ್ರತಿಕೂಲ ಸನ್ನಿವೇಶದಲ್ಲಿ ಸ್ವಧರ್ಮ ರಕ್ಷಣೆಯ ಜೊತೆಗೆ ಶಾಂತಿ ಸ್ಥಾಪನೆಯ ಹೊಣೆ ಹೊತ್ತು ಬೆಳೆದು ಬಂದ ಸಂಘಟನೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘ.
ಹಿಂದುತ್ವವೆಂದರೆ ತತ್ವಪೂಜೆ ಹೊರತು ವ್ಯಕ್ತಿ ಪೂಜೆಯಲ್ಲ. ವ್ಯಕ್ತಿ ಪೂಜೆ ಮಾಡಿದಾಗ ಅಹಂ ಭಾವ ಹುಟ್ಟಿಕೊಳ್ಳುತ್ತದೆ. ತತ್ವ ಪೂಜೆಯಿಂದ ಜಾಗತಿಕ ಹಿತಾಸಕ್ತಿಯ ಮನೋಧರ್ಮ ಉಂಟಾಗುತ್ತದೆ. ಇದನ್ನರಿತು ಸನಾತನ ಸಂಸ್ಕೃತಿಯ ಚಿಂತನೆಗಳನ್ನು ಮುಂದಿನ ತಲೆಮಾರುಗು ತಲುಪಿಸಲು ಡಾರ್ಕ್ಟ ಕೇಶವ ಬಲಿರಾಂ ಹೆಡ್ಗೇವಾರರು ಸ್ಥಾಪಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಮೂಲ ಚಿಂತನೆಗಳನ್ನೇ ನೆಚ್ಚಿಕೊಂಡು ಬೆಳೆದು ಬಂದಿದೆ. ವಿಶ್ವದಡೆ ಭಯೋತ್ಪಾದನೆ ಮತ್ತು ಕ್ರೌರ್ಯದ ಮೂಲಕ ಸಂಘಟನೆಗಳು ನೆಲೆಯೂರಲು ಶ್ರಮಿಸುತ್ತಿರುವಾಗ ‘ಸಂಘಚ್ಛದ್ವಂ ಸಂವದದ್ವಂ’ ಎಂಬಂತೆ ನಡೆಯುವ ಸಂಘದ ಸ್ವಯಂಸೇವಕರು ಬಯಸುವುದು ಜಾಗತಿಕ ಶಾಂತಿಯನ್ನೇ.
ದಿನನಿತ್ಯ ರಾಷ್ಟ್ರ ಸೇವೆಯಲ್ಲಿ ತೊಡಗಿರುವ ಸ್ವಯಂಸೇವಕರು ಅಗತ್ಯ ಬಿದ್ದಾಗ ರಾಷ್ಟ್ರಗಳ ಮೇರೆಗಳನ್ನು ಮೀರಿ ಹೋಗಿ ಸೇವೆ ಸಲ್ಲಿಸಿzರೆ. ವರ್ಷಗಳ ಹಿಂದೆ ನೇಪಾಳದಲ್ಲಿ ಭೂಕಂಪವಾದಾಗ ರಾಷ್ಟ್ರೀಯ ಸ್ವಯಂಸೇವಕ ಸಂಘ ನೇಪಾಳದ ಜನರಿಗೆ ಸಹಾಯ ಹಸ್ತ ಚಾಚಿದ್ದು ಒಂದು ಉದಾಹರಣೆಯಷ್ಟೇ! ಶಾಂತಿ, ಸಮತ್ವ, ಸಾಹೋದರ್ಯ ಎಂಬ ಚಿಂತನೆಗಳ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘವು ಬಯಸುವುದು ವಿಶ್ವ ಸಮುದಾಯದ ಒಳಿತನ್ನೆ!
ವಿಶ್ವಶಾಂತಿಗಾಗಿ ಹಿಂದುತ್ವ: ವೈಯಕ್ತಿಕ ಮಹತ್ವಾಕಾಂಕ್ಷೆಗಳನ್ನು ಪೂರೈಸಲು ಜಗತ್ತಿನ ವಿವಿಧ ದೇಶಗಳು ಯುದ್ಧಗಳ ಮೊರೆ ಹೊಕ್ಕಾಗ , ಶಾಂತಿಗಾಗಿ ಶ್ರಮಿಸಿದ ಹಿಂದುತ್ವ ಇಂದಿಗೂ ಅವಿನಾಶಿಯಾಗಿ ಉಳಿದಿದೆ. ಎರಡು ಜಾಗತಿಕ ಮಹಾ ಯುದ್ಧಗಳು ನಡೆದ ಮೇಲೆ ಎಚ್ಚೆತ್ತ ಜಗತ್ತಿನ ಪ್ರಮುಖ
ರಾಷ್ಟ್ರಗಳು ೧೯೪೫ರಲ್ಲಿ ವಿಶ್ವಸಂಸ್ಥೆಯನ್ನು ಸ್ಥಾಪಿಸಿದರೆ, ಭಾರತ ಮಾತ್ರ ಅನಾದಿಕಾಲದಿಂದಲೂ ಶಾಂತಿಸ್ತಾಪನೆಗೆ ಶ್ರಮಿಸಿದೆ ಎಂಬುದು ಗಮನಾರ್ಹ.
ವಾಸ್ತವದಲ್ಲಿ ಸ್ವಂತ ಹಿತಾಸಕ್ತಿಗಾಗಿ ದೇಶಗಳು ಶೀತಲ ಸಮರದಲ್ಲಿ ತೊಡಗಿರುವಾಗ ವಿಶ್ವಸಂಸ್ಥೆಯು ತನ್ನ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸು ತ್ತಿದೆಯೇ ಎಂಬ ಅನುಮಾನ ಕಾಡುವುದು ಸುಳ್ಳಲ್ಲ. ಇಂದಿನ ಬಹು ಧ್ರುವೀಯ ಜಗತ್ತಿನಲ್ಲಿ ರಾಷ್ಟ್ರಗಳ ನಡುವಿನ ಸಮಸ್ಯೆಗಳನ್ನು ಪರಿಹರಿಸಲು ಬೇರೆ ಬೇರೆ ರಾಷ್ಟ್ರದ ನಾಯಕರು ಬಯಸುವುದು ಹಿಂದುತ್ವದ ನಾಡಾದ ಭಾರತದ ಮಧ್ಯಸ್ಥಿಕೆಯನ್ನು. ಹಿಂದೂ ವಿಚಾರಧಾರೆಯ ಆಳವನ್ನರಿತು ಜರ್ಮನ್ ತತ್ತ್ವಜ್ಞಾನಿ ಶಾಪೆನ್ ಹಾವರ್ ಅವರು ‘ಭಾರತ ದೇಶದ ಆಧ್ಯಾತ್ಮಿಕ eನವೇ ನನ್ನ ಇಹ-ಪರ ಜೀವನದ ಶಾಂತಿ ಸೂತ್ರವಾಗಿದೆ’ ಎಂದು ಹೇಳುತ್ತಾರೆ.
ಒಟ್ಟಿನಲ್ಲಿ ವಿವಿಧ ದೇಶಗಳು ತಮ್ಮ ಅಸ್ತಿತ್ವವನ್ನು ಎತ್ತಿ ತೋರಿಸುವುದಕ್ಕಾಗಿ ಮಾಡುತ್ತಿರುವ ಅಂರ್ತ ಕಲಹಗಳು, ಪರೋಕ್ಷ ಯುದ್ಧಗಳು ಮತ್ತು ವಿಶ್ವಶಾಂತಿ ಇವೆರಡನ್ನು ಸಮತೋಲನಗೊಳಿಸಲು ಹಿಂದುತ್ವದ ಅವಶ್ಯಕತೆ ಇದೆ. ಇಂದಿನ ಅಘೋಷಿತ ಕದನಗಳ ಪರಿಣಾಮವನ್ನು ತಡವಾಗಿ ಯಾದರೂ ಅರಿತ ಜಗತ್ತಿನ ರಾಷ್ಟ್ರಗಳು ಮಧ್ಯಸ್ಥಿಕೆಗಾಗಿ ಭಾರತವನ್ನು ಬಯಸುತ್ತಿರುವುದು ಔಚಿತ್ಯಪೂರ್ಣವಾಗಿಯೇ ಇದೆ.
ವಿಶ್ವದಲ್ಲಿ ಶಾಂತಿಯ ಸ್ಥಾಪನೆಗಾಗಿ ಹಿಂದುತ್ವದ ಅವಶ್ಯಕತೆ ಇರುವ ಕಾರಣ ಸನಾತನ ಸಂಸ್ಕೃತಿಯ ಮೂಲ ಚಿಂತನೆಗಳನ್ನು ಮತ್ತು ವೈಜ್ಞಾನಿಕ ತಳಹದಿ ಇರುವ ಆಚರಣೆಗಳನ್ನು ತಿಳಿದು ಹಿಂದೂ ಧರ್ಮವನ್ನು ಅನುಸರಿಸುವ ಜವಾಬ್ದಾರಿ ಪ್ರತಿಯೊಬ್ಬ ಹಿಂದುವಿನ ಮೇಲೂ ಇದೆ.