Saturday, 14th December 2024

ಹಿಂದೂ ಹೃದಯ ಸಾಮ್ರಾಟ ಶಿವಾಜಿ

ಅಭಿವ್ಯಕ್ತಿ

ರಾಘವೇಂದ್ರ ಪೂಜಾರಿ

ಭಾರತದ ಇತಿಹಾಸದ ಗೆರಿಲ್ಲ ಯುದ್ಧ ತಂತ್ರವನ್ನು ಯುದ್ಧಗಳಲ್ಲಿ ಬಳಸಿದ ಮೊದಲ ರಾಜ ಶಿವಾಜಿ. ಭಾರತದಲ್ಲಿ ಮುಸ್ಲಿಂ ಧರ್ಮವನ್ನು ಸ್ಥಾಪಿಸಲು ಹೊರಟಿದ್ದ ಮೊಘಲರನ್ನು, ಸುಲ್ತಾನರನ್ನು ಹಾಗೂ ನಿಜಾಮರನ್ನು ಮಣಿಸಿ ಹಿಂದು ಧರ್ಮ ರಕ್ಷಣೆಗೆ ಹೋರಾಡಿದ ವೀರ ಸೇನಾನಿ ಶಿವಾಜಿ ಮಹಾರಾಜರ 393ನೇ ಜನ್ಮ ದಿನಾಚಾರಣೆ ಇದೇ ಫೆಬ್ರವರಿ 19 ರಂದು.

ವೀರ ಸೇನಾನಿ, ಹಿಂದೂ ಹೃದಯ ಸಾಮ್ರಾಟ್ ಎಂದೆಲ್ಲ ದೇಶದಾದ್ಯಂತ ಹೆಸರಾಗಿರುವ ಶಿವಾಜಿಗೂ ಬೆಂಗಳೂರಿಗೆ ಅವಿನಾಭಾವ ನಂಟಿದೆ. ಶಿವಾಜಿಗೆ ಬೆಂಗಳೂರೆಂದರೆ ಎಲ್ಲಿಲ್ಲದ ಪ್ರೀತಿ. ದುರದೃಷ್ಟವಶಾತ್ ಅದು ಬಹುತೇಕರಿಗೆ ತಿಳಿದಿಲ್ಲ. ಶಿವಾಜಿ ಮಹಾ ರಾಜರು ಬೆಂಗಳೂರನ್ನು ಆಗಾಧವಾಗಿ ಪ್ರೀತಿಸುತ್ತಿದ್ದರು. ಅದಕ್ಕೆ ಸಾಕಷ್ಟು ಪುರಾವೆಗಳಿವೆ. ಆದರೆ ಈ ಬಗ್ಗೆ ಇತಿಹಾಸದ ಪಠ್ಯ ಪುಸ್ತಕಗಳಲ್ಲಿ ಮಾಹಿತಿಯೇ ಇಲ್ಲ.

ಶಿವಾಜಿ ಬೆಂಗಳೂರನ್ನು ಎಷ್ಟು ಪ್ರೀತಿಸುತ್ತಿದ್ದರು ಎಂಬುದನ್ನು ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನವೇ ಈ ಲೇಖನ. 19 ಫೆಬ್ರವರಿ 1627ರಂದು ಪುಣೆಯ ಶಿವನೇರಿ ಕೋಟೆಯಲ್ಲಿ ಷಾಹಜೀ ಭೋನ್ಲೆ, ಜೀಜಾಬಾಯಿ ದಂಪತಿಯ ಎರಡನೇ ಮಗನಾಗಿ ಜನಿಸಿದ ಶಿವಾಜಿ, 03 ಏಪ್ರಿಲ್ 1680ರಂದು ವೀರ ಮರಣಹೊಂದಿದರು. ಬದುಕಿದ್ದು ಕೆಲವೇ ವರುಷಗಳಾದರೂ ಜಗತ್ತಿನ ಇತಿಹಾಸದ ಅಳಿಸಲಾಗದಂಥ ಛಾಪು ಮೂಡಿಸಿದರು.

ಭರತ ಖಂಡದಲ್ಲಿ ದೇಶಪ್ರೇಮಿ ಹಿಂದೂ ಮರಾಠ ಸಾಮ್ರಾಜ್ಯಕ್ಕೆ ನಾಂದಿ ಹಾಡಿದ್ದರು. 1537ರಲ್ಲಿ ಬೆಂಗಳೂರು ನಗರವನ್ನು ನಿರ್ಮಿಸಿ ಸುಸಜ್ಜಿತ ಆಡಳಿತ ವ್ಯವಸ್ಥೆಯನ್ನು ಹಿರಿಯ ಕೆಂಪೇಗೌಡರು ಅನುಷ್ಠಾನಗೊಳಿಸಿದರು. ನಂತರ ಅವರ ಮಗನಾದ ಇಮ್ಮಡಿ ಕೆಂಪಭೂಪ ಅಥವಾ ಎರಡನೇ ಕೆಂಪೇಗೌಡರು 1569ರಲ್ಲಿ ಅಧಿಕಾರ ವಹಿಸಿಕೊಂಡು, ತಂದೆಯಂತೆಯೇ ಬೆಂಗಳೂರು ನಗರದಲ್ಲಿ ಯೋಗ್ಯರೀತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದರು.

ಬಿಜಾಪುರ ಸುಲ್ತಾನ ಆದಿಲ್ ಷಾರವರ ಆಜ್ಞೆಯಂತೆ ಆತನ ಸೇನಾನಿ ರಣದುಖಾನ್ ಹಾಗೂ ಷಾಹಜೀ ಭೋನ್ಲೆ ಬೆಂಗಳೂರನ್ನು ಆಕ್ರಮಿಸಿಕೊಂಡರು. ಕೆಂಪೇಗೌಡರು ಪರಾಕ್ರಮಿಗಳಾಗಿದ್ದರೂ ನೆರೆಹೊರೆಯ ಪಾಳೆಗಾರರ ಮೋಸ, ಕುತಂತ್ರದಿಂದ ಹಾಗೂ ಬಿಜಾಪುರ ಸುಲ್ತಾನರ ದೊಡ್ಡ ಸೈನ್ಯದಿಂದ ಸೋಲಬೇಕಾಯಿತು. ಗೆದ್ದ ಬೆಂಗಳೂರನ್ನು ಬಿಜಾಪುರ ಸುಲ್ತಾನ ಆದಿಲ್ ಷಾಹಿಯು ತನ್ನ ಸೇನಾಧಿಪತಿಯಯಾದ ಷಾಹಜೀ ಭೋನ್ಲೆರವರಿಗೆ ಉಂಬಳಿಯಾಗಿ ಬಿಟ್ಟುಕೊಟ್ಟರು.

ಛತ್ರಪತಿ ಶಿವಾಜಿಯ ತಂದೆ ಷಾಹಜಿಯು ಉತ್ತಮ ರಾಜಕಾರಣಿ, ಚಾಣಾಕ್ಷಮತಿ ಹಾಗೂ ಸಮರ ಶೂರರು ಆಗಿದ್ದರು.
ಶಿವಾಜಿಯು 12 ವರ್ಷದ ಪ್ರಾಯದಲ್ಲಿ ಎರಡು ವರ್ಷಗಳು ಅಂದರೆ 1680 ರಿಂದ 1642ರ ವರೆಗೆ ಬೆಂಗಳೂರು ನಗರದಲ್ಲಿ
ತಂದೆಯೊಡನೆ ವಾಸವಾಗಿದ್ದರು. ತಂದೆಯೊಡನೆ ಬೆಂಗಳೂರು ಪ್ರಾಂತದಲೆ ಸುತ್ತಾಡಿ, ಬೆಂಗಳೂರಿನ ಬಗ್ಗೆ ಉತ್ತಮ
ಪರಿಚಯವು ಅವರಿಗಿತ್ತು. ತಾಯಿ ಜೀಜಾಬಾಯಿರವರ ಪ್ರೇರಣೆಯಿಂದಾಗಿ ನಿಂಬಾಳ್ಕರ್ ಮನೆತನಕ್ಕೆ ಸೇರಿದ ಸಯಿಬಾಯಿ ಯೊಂದಿಗೆ ಶಿವಾಜಿಯವರ ಕಲ್ಯಾಣ ಬೆಂಗಳೂರು ನಗರದ ನೆರವೇರಿತು.

1642ರ ನಂತರ ಶಿವಾಜಿಯು ಬೆಂಗಳೂರಿನಿಂದ ತನ್ನ ಪ್ರಾಂತವಾದ ಪುಣೆಗೆ ಹಿಂದಿರುಗುವಾಗ ಅವರ ತಂದೆ ಷಾಹಜೀಯು ನೂರಾರು ಆನೆಗಳು, ಕುದುರೆ, ಕಾಲಾಳುಗಳನ್ನೂ ಜತೆಗೆ ಪಾಂಡಿತ್ಯ ಹೊಂದಿದ, ನುರಿತ ಮಂತ್ರಿಗಳಾದ ಶಾಮರಾವ್ ನೀಲಕಂಠ ಪೇಶ್ವೆ, ಬಾಲಕೃಷ್ಣ ಪಂತ್ ಮಜುಮ್ದಾರ್, ರಘುನಾಥ್ ಬಳ್, ಬಾಲಾಜಿ ಹರಿಮಜಾಲ್ಸಿ ಈಗೇ ಹಲವಾರು ಪಂಡಿತರನ್ನು
ಕಳುಹಿಸಿಕೊಟ್ಟರು, ಹೀಗೆ ಶಿವಾಜಿಯು ಸಕಲ ಸೈನ್ಯ, ಯೋಗ್ಯಮಂತ್ರಿಗಳು ಹಾಗೂ ಪಂಡಿತರನ್ನು ಬೆಂಗಳೂರಿನಿಂದ ಪಡೆದು ಬಲಾಢ್ಯನಾಗಿ ಉತ್ತರ ಭಾರತದಲ್ಲಿ ಅಪತ್ರಿಮ ವೀರರಾಗಲು ಕಾರಣವಾಯಿತು. ಶಿವಾಜಿಯವರ ರಾಜ್ಯ ವಿಸ್ತರಣೆಯಲ್ಲಿ ಬೆಂಗಳೂರಿನಿಂದ ಹೊರಟಿದ್ದ ಮಂತ್ರಿಗಳ ಪಾತ್ರ ಬಹಳಷ್ಟಿದೆ ಎಂದು ಇತಿಹಾಸಗಾರರು ವಿಶ್ಲೇಷಿಸುತ್ತಾರೆ.