Saturday, 23rd November 2024

ಹಿಂದೂ ಮಾತ್ರ ನಿಜವಾದ ಸೆಕ್ಯೂಲರ್‌ !

ದಾಸ್ ಕ್ಯಾಪಿಟಲ್‌

dascapital1205@gmail.com

ಸ್ವಾತಂತ್ರ್ಯಾನಂತರ ಭಾರತದ ನವ ಇತಿಹಾಸ ಆರಂಭವಾಗುವುದು ಬ್ರಿಟಿಷರು ದೇಶ ಬಿಟ್ಟು ದಿನದಿಂದ- ಎಂಬ ನೆಹರೂ ಹಠಕ್ಕೆ
ಕಟ್ಟುಬಿದ್ದು ಭಾರತದ ಇತಿಹಾಸವನ್ನು, ಎಲ್ಲ ಬಗೆಯ ಮುಸ್ಲಿಮ್ ಆಕ್ರಮಣಗಳನ್ನು ಅಳಿಸಿಹಾಕುವ ದುರುದ್ದೇಶ ನೆಹರೂ ಪರಿವಾರದ ಪ್ರಭೃತಿಗಳದ್ದಾಗಿತ್ತು. ಡಾ. ಆರ್ .ಸಿ.ಮುಝುಂದಾರರಂಥ ಹಿರಿಯ ಇತಿಹಾಸತಜ್ಞರು ಇದನ್ನು ಒಪ್ಪದಿದ್ದಾಗ, ಅವರನ್ನು ಹೊರಗಿಟ್ಟೇ ವಿಕೃತ ಇತಿಹಾಸವನ್ನು ಬರೆಯಲು ಯತ್ನಿಸಲಾಯಿತು.

ಆಕ್ರಮಣದ ವಿಚಾರಗಳು ರಾಷ್ಟ್ರೀಯತೆಗೆ ಸಹಕಾರಾತ್ಮಕ ವಿಚಾರಗಳೆಂದು ಇವರು ತಿಳಿಸಲೆತ್ನಿಸಿದರು. ಅದು ಈ ದೇಶದಲ್ಲಿ ಸಾಧ್ಯವೇ ಇಂಬುದು ಗೊತ್ತಿದ್ದರೂ ಆ ಕಾರ್ಯಕ್ಕೆ ಮುಂದಾದರು. ಮುಸ್ಲಿಂ ಆಕ್ರಮಣಕಾರರನ್ನು ಹೊರಗಿಟ್ಟು ಇತಿಹಾಸವನ್ನು ಬರೆದರೆ ಇಲ್ಲಿನ ಮುಸಲ್ಮಾನರ ಮನನೋಯುತ್ತದೆಂದು ಅಂಜಿದರೇ ವಿನಾಃ, ಸತ್ತ್ವಯುತವಾದ ವೀರ ಮಣ್ಣಿನಲ್ಲಿ ಶತ-ಸಹಸ್ರ ವರ್ಷಗಳಿಂದ ಮುಖ್ಯವಾಹಿನಿಯಲ್ಲಿ, ಈ ನೆಲದ ಸಾಂಸ್ಕೃ ತಿಕ ಮತ್ತು ಅಧ್ಯಾತ್ಮಿಕ ವಾರಸುದಾರರಂತೆ ಬದುಕುತ್ತಿರುವ ಹಿಂದುಗಳ ಸ್ವಾತ್ಮಾಭಿಮಾನಕ್ಕೆ ಹೊಡೆತ ಬೀಳುವುದೆಂಬುದು ಈ ವಿಕೃತ ಮನೋಭಾವುಕರಿಗೆ ಅರಿವಿಲ್ಲವಾಗಿತ್ತೇ? Hindus taken for Granted, taken for a ride.

ಇದೇ ಒಂದು ರಾಷ್ಟ್ರದ ಕಲ್ಪನೆಯನ್ನು ಸಾಕಾರಗೊಳಿಸಲು ಬಹುದೊಡ್ಡ ಆಘಾತವನ್ನು ನೀಡುತ್ತದೆಂಬುದನ್ನೂ ಮನಗಾಣದೇ ಹೋದರು ಈ ಮೂಢರು. ಒಂದೇ ರಾಷ್ಟ್ರ ವಾಹಿನಿಯಲ್ಲಿ ಎಲ್ಲರೂ ಭಾರತೀಯರಾಗಿ ಬದುಕೋಣ ಎಂಬ ಸಮಷ್ಟಿಯ ಅರಿವನ್ನು ಆರಂಭದಿಂದಲೇ ಈ ದೇಶವಾಸಿಗಳಲ್ಲಿ ಮೂಡಿಸುತ್ತಾ ಅದನ್ನೇ ಪೋಷಿಸಿ ಬೆಳೆಸುತ್ತಾ ಬಂದಿದ್ದರೆ ಭಾರತೀಯ ಪರಂಪರೆಯ ಆಲೋಚನೆಯ ಅರಿವು ಪಾಶ್ಚಾತ್ಯದ ಪ್ರಭಾವದಿಂದ ತಪ್ಪಿ ರಾಷ್ಟ್ರಪ್ರೇಮ, ರಾಷ್ಟ್ರಕ್ಷೇಮ, ರಾಷ್ಟ್ರೀಯ ಭಾವೈಕ್ಯದಲ್ಲಿ ವಿಘಟನೆ ಹುಟ್ಟುತ್ತಿರಲಿಲ್ಲ.

ಒಂದು ಸಮಾಜ, ಜನಸಮುದಾಯ, ಒಂದು ಏಕೀಕೃತ ರಾಷ್ಟ್ರವಾಗುವುದು ಅದರ ಸಂಸ್ಕೃತಿ, ಕಲೆ, ಅಧ್ಯಾತ್ಮ, ಸಾಹಿತ್ಯಾತ್ಮಕ ಮೌಲ್ಯಗಳು, ಮೌಲ್ಯಾಧಾರಿತ ಸಾಮಾಜಿಕ, ರಾಜಕೀಯ ಸಂಸ್ಥೆಗಳ ನಿರ್ಮಾಣದಿಂದ ಮತ್ತು ಅದೇ ಕ್ರಮದ ಮುಖ್ಯತೆ, ಧಾರೆ, ಆವಿಷ್ಕಾರ ಇನ್ನಿತರ ಕ್ರಮದಲ್ಲಿ, ಧರ್ಮದ ಆಧಾರದ ಮೇಲೆ ದೇಶ ವಿಭಜನೆ ಆದಾಗ್ಯೂ ಮುಸಲ್ಮಾನರು ಇಲ್ಲೇ ಉಳಿದವರಾ ಗಿದ್ದರು, ಇಲ್ಲಿಯವರೇ ಆಗಿದ್ದರು.

ಮೊದಲಿಂದ ಇಲ್ಲೇ ಉಳಿದ ಈ ಮುಸ್ಲಿಂರಾದರೂ ಯಾರು? ರಕ್ತ, ಮಾಂಸಗಳಲ್ಲಿ, ಆಚಾರ ವಿಚಾರ ನಂಬಿಕೆಗಳಲ್ಲಿ, ಚಿಂತನೆ ಗಳಲ್ಲಿ, ನಮ್ಮವರೇ ಆಗಿರಬೇಕಲ್ಲವೆ? ಆದರೆ, ಅವರು ಕಾಲಗತಿಗೆ ಸಿಕ್ಕ ಮತಾಂತರಿತ ದುರ್ದೈವಿಗಳಾಗಿದ್ದರು. ಅಂಥವರ ಸ್ವಾಭಿ ಮಾನವನ್ನೇ ಅರ್ಥಮಾಡಿಕೊಳ್ಳದೆ ನವಭಾರತವನ್ನು ಕಟ್ಟುವುದಾದರೂ ಹೇಗೆ? ಅವರಿಗೂ ಒಂದು ಕಾಲದಲ್ಲಿ ತಾವು ಹಿಂದೂ ಗಳೇ ಆಗಿದ್ದೇವೆಂಬ, ಇಲ್ಲಿಯ ಸಂಸ್ಕೃತಿಯ ಶ್ರೇಷ್ಠಾಂಶಗಳೆಲ್ಲ ತಮಗೂ ಸೇರಿದ್ದವೆಂಬ ಭಾವನೆ ಮೂಡಿದರಲ್ಲವೇ ನಮ್ಮ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಸಂಪತ್ತಿನ ವಿರಾಟ್ ಸ್ವರೂಪದ ಅರಿವಾಗುವುದು!

ಆದರೆ ಅವರಿಗೆ ಅಂಥ ಅರಿವಿನ ಬದುಕನ್ನು ಬಾಳಲು ಸ್ವಾತಂತ್ರ್ಯಾನಂತರದಿಂದಲೇ ಅವಕಾಶ ದೊರೆಯದಂತಾದುದು ಮಾತ್ರ ದುರಂತ! ಇದೆಲ್ಲ ತುಷ್ಟೀಕರಣದ ರಾಜಕಾರಣದ ದುಷಲವಿದು! ಈಗಲೂ ದೇಶದ ಅನೇಕ ಭಾಗಗಳಲ್ಲಿ ಹಿಂದೂ ಮುಸಲ್ಮಾನರ ಬಾಂಧವ್ಯ ಚೆನ್ನಾಗಿಯೇ ಇದೆ. ಉತ್ತರ ಪ್ರದೇಶದ ಮುಸ್ಲಿಮ್ ಉದ್ಯಮಿಯೊಬ್ಬ 51 ಹಿಂದೂ ದೇವಳಗಳನ್ನು ಕಟ್ಟಿಕೊಡಲು ಮುಂದಾಗಿದ್ದಾನೆಂಬ ಸುದ್ದಿ ಮಾಧ್ಯಮಗಳಲ್ಲಿ ಹಿಂದೊಮ್ಮೆ ವರದಿಯಾಗಿತ್ತು. ಧಾರ್ಮಿಕ ಸೌಹಾರ್ದ, ಸಮನ್ವಯವೆಂಬುದು ಈ ನೆಲದ ನಿಜವಾದ ಗುಣ, ಶಕ್ತಿ, ಅಂತಃಸ್ಸತ್ತ್ವ.

Islam is our religion, but Ramayana is our Culture ಇದು ಇಂಡೋನೇಷ್ಯಾದಲ್ಲಿರುವ ಮುಸ್ಲಿಂರ ಮಾತು. ಆದರೆ ಇಂಥ ಮಾತು ಭಾರತದಂಥ ಬೃಹತ್ ರಾಷ್ಟ್ರಕ್ಕೆ ಸಾಧ್ಯವಾಗುವುದಿಲ್ಲವೇಕೆ? ಅನ್ಯರು ಬೆರೆಯಲಿ, ಸಂಸ್ಕೃತಿ ಹಂಚಿಕೊಳ್ಳಲಿ, ಕೂಡಿ ಬಾಳಲಿ ಎಂಬುದು ಕೋಮುವಾದವೇ? ಅಧಿಕಾರದ ದರ್ಪವೇ? ಯಾವುದೇ ಧರ್ಮಗ್ರಂಥಗಳು ಈ ಬಗೆಯ ಬೋಧೆಗಳನ್ನು ಮಾಡಿದರೆ, ಅದನ್ನು ಗ್ರಹಿಸಿ, ತರ್ಕಿಸಿ, ಸಮೀಕರಿಸಿ ಸ್ವೀಕರಿಸಲು ಅಡ್ಡಿಯೇನಿದೆ ? ಯಾರ ಅಭ್ಯಂತರವಿದೆ? ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲವೆ? Who are the real liabilities for the nation? ಮತಿಗೆಟ್ಟ, ಕುಹಕ, ವಿಕ್ಷಿಪ್ತ ಮನಸ್ಸಿನ ಚಿಂತನೆಗಳಿಂದ ಕೂಡಿದ ಎಡಪಂಥೀಯ ಸಿದ್ಧಾಂತಗಳಡಿಯಲ್ಲಿ ನಮ್ಮ ಶ್ರೇಷ್ಠ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಸಂಪತ್ತುಗಳಾದ ಪುರಾಣಗಳು, ಮಹಾಕಾವ್ಯಗಳು, ಉಪನಿಷತ್ತುಗಳು, ಭಗವದ್ಗೀತೆ, ವೇದಗಳು, ಇತಿಹಾಸ-ಮೌಲ್ಯವನ್ನು ಕಳೆಯುವ ಹುನ್ನಾರ ನಡೆಯುತ್ತಲೇ ಇದೆ. ಇದು ನಿನ್ನೆ ಮೊನ್ನೆಯದಲ್ಲ.

ಅವ್ಯಾಹತವಾಗಿ ಈ ದುಷ್ಕೃತ್ಯ ನಡೆಯುತ್ತಲೇ ಇದೆ. ಇನ್ನೊಬ್ಬ ಘಜ್ನಿ, ಘೋರಿ, ಬಾಬರ್, ಅಕ್ಬರ್, ಔರಂಗಜೇಬರುಗಳು ಬಂದು ನಮ್ಮ ಸಂಪತ್ತನ್ನು ನಾಶಮಾಡುವುದನ್ನು ನಮ್ಮವರೇ ಯಥಾನುಶಕ್ತಿ ನಡೆಸುತ್ತಿzರೆ. ಇವರೇ ದೇಶಕ್ಕೆ ದೊಡ್ಡ ಕಂಟಕರು. ದೇವರು, ಧರ್ಮ, ಭಾಷೆಯ ವಿಚಾರವಾಗಿ ನಮ್ಮಲ್ಲಿ ನಡೆಯುವಷ್ಟು ಚರ್ಚೆ, ವಾದ-ವಿವಾದಗಳು, ಜಿಜ್ಞಾಸೆ, ನಿಂದೆಗಳು ಪ್ರಾಯಃ ಜಗತ್ತಿನ ಮತ್ತೆಲ್ಲೂ ನಡೆಯುವುದಿಲ್ಲವೇನೋ!

ಈ ದೇಶ ಹೀಗೆಯೇ ಇದ್ದು ಬಿಡುತ್ತದೆಯೇನೋ ಎಂಬ ಆತಂಕವನ್ನು ಹೊಂದಿದ ನಮಗೆ ಕಾಣುತ್ತಿರುವ ವಿಸ್ತಾರವಾದ ಭಾರತದ ದಿಗಂತದಲ್ಲಿ ಆಶಾಕಿರಣವೊಂದು ಚುಂಗನೆ ಎದ್ದು ನಿಂತಿದ್ದನ್ನು ಕಂಡದ್ದು ತೀರಾ ಇತ್ತೀಚೆಗಿನ ದಿನಮಾನಗಳಲ್ಲಿ! ಆಳುವವನಿಗೆ ಅಥವಾ ನಾಯಕನಾದವನಿಗೆ, ಸಾರಥ್ಯವನ್ನು ವಹಿಸಿಕೊಂಡವನಿಗೆ ನೈತಿಕತೆ, ಪ್ರಾಮಾಣಿಕತೆ, ನಿಸ್ಪೃಹತೆ, ಸಮಷ್ಟಿಯ ಅರಿವು,
ಅನುಭೂತಿ, ಔದಾರ್ಯ, ಮೈಮನದ ಶುಚಿತ್ವ, ಉದಾತ್ತ ಚಿಂತನೆಗಳು, ರಾಷ್ಟ್ರಾಭಿವೃದ್ಧಿಯ ಹಂಬಲ, ರಾಷ್ಟ್ರಹಿತ ಮುಖ್ಯವಾಗಿ ಇರಬೇಕಾಗಿರುತ್ತದೆ.

ಅಧಿಕಾರದ ಹಸಿವಿಗಾಗಿ, ಅಥವಾ ಅದನ್ನುಳಿಸಿಕೊಳ್ಳಲು ಯಾವ ಮಟ್ಟಕ್ಕೂ ಇಳಿದು ದೇಶಹಿತವನ್ನು ಮರೆತು ವ್ಯವಹರಿಸು ವವನಿಗೆ ಯಾವ ಆದರ್ಶವನ್ನು ಬೋಧಿಸಲು ಸಾಧ್ಯ? ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ-ಇದು ವೇದೋಕ್ತ. ಈ ಪ್ರಜ್ಞೆ ಗಾಢವಾಗಿ ಪ್ರತಿಯೊಬ್ಬ ದೇಶವಾಸಿಗೂ ಇರಲೇಬೇಕಾದ ಕಾಲಘಟ್ಟದಲ್ಲಿ ನಾವಿದ್ದೇವೆ. ನೆಲ, ಜಲ, ಭಾಷೆ, ಗಡಿ, ಸಂಸ್ಕೃತಿ, ಧರ್ಮ, ನಾಗರಿಕತೆ, ವೇಷಭೂಷಣ, ಆಹಾರ- ವಿಹಾರಗಳು- ಇವೆಲ್ಲ ಒಂದು ಜನಾಂಗದ ಮೂಲಹಕ್ಕು. ಇದಕ್ಕೆ ವ್ಯತಿರಿಕ್ತ ವಾದ ಹುಟ್ಟಲು ಸಾಧ್ಯವೇ ಇಲ್ಲ. ಇದನ್ನು ಎತ್ತಿಹಿಡಿವ ಮಾತೂ ದೇಶದೊಳಿತಿನ ಮಾತೇ ಆಗಿರುತ್ತದೆ.

ಇದನ್ನು ಪ್ರತಿರೋಧಿಸುವುದೂ ದೇಶದ್ರೋಹದ ಕಾರ್ಯವಲ್ಲದೆ ಮತ್ತೇನು? ನಮ್ಮ ದೇಶದಲ್ಲಿ ಹೊರಗಿನಿಂದ ಆಮದಾದ ಹಲವು
ಅಪಾಯಕಾರಿ ಸಂಗತಿಗಳ ಪೈಕಿ ಎಡಪಂಥ ಎಂದು ಹೆಸರಿಸಿಕೊಂಡು ಈ ಏಳೆಂಟು ದಶಕಗಳಿಂದ ರಾಷ್ಟ್ರವ್ಯಾಪಿ ತಮ್ಮ
ಸಿದ್ಧಾಂತಗಳ ಮೂಲಕ ರಾಷ್ಟ್ರೀಯತೆಯ ಶಿಸ್ತಿಗೆ ಮಾರಕವಾಗಿ, ಐಕ್ಯತೆಗೆ ಅಡ್ಡವಾಗಿ, ವಿರೋಧವಾಗಿ ಹಿಂದುಯೇತರ ಮತ,
ಧರ್ಮಗಳ ದಾರಿ ತಪ್ಪಿಸಿ, ಅಶಿಸ್ತಿನಿಂದ ವರ್ತಿಸುತ್ತ ‘ಭಾರತೀಯತೆ’ ಎಂಬುದೇ ಇಲ್ಲ, ಹಾಗೊಂದು ವೇಳೆ ಇದ್ದರೂ ಅದು
ಸರಿ ಯಲ್ಲ; ಹೀಗಾಗಿ ಅದರ ವಿರೋಧವೇ ಅಭಿವೃದ್ಧಿ, ಸೌಹಾರ್ದ, ಬೌದ್ಧಿಕ ಪ್ರಗತಿ ಎಂದೆಲ್ಲ ಚಂಡಿಸುತ್ತ ಸಾಗಿದೆ.

ಬಹುಪಾಲು ನೆಹರೂ ರಾಜಕಾರಣದ ಫಲಿತವಿದು. ಶಿಕ್ಷಣ, ಮಾಧ್ಯಮ, ಸಂಸ್ಕೃತಿಗಳಲ್ಲ ಇದರ ಬಾಹುಬಲದ ವ್ಯಾಪ್ತಿ ವಿಸ್ತರಿ ಸಿದ್ದು, ಇದೇ ಒಂದು ಕೋಮುವಾದವಾಗಿ, ಮತಾಂಧತೆಯಾಗಿ, ಫ್ಯಾಸಿಸಂ ಆಗಿ ಹಬ್ಬಿದೆ. ಇದರ ಅಜೆಂಡಾಗಳೆಂದರೆ-ಭಯೋತ್ಪಾ ದನೆ, ಪ್ರತ್ಯೇಕತಾವಾದ, ನಕ್ಸಲ್ ವಾದ, ಮಾವೋವಾದ, ಮತಾಂತರ, ದೇಶದ್ರೋಹದ ಚಟುವಟಿಕೆಗಳು, ಸತ್ಯ ವಿರೋಧ, ಹಿಂದೂ ವಿರೋಧ, ಅಲ್ಪಸಂಖ್ಯಾತರ ಓಲೈಕೆ. ಬೌದ್ಧಿಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವೆಂಬ ಹೆಸರಿನಲ್ಲಿ, ತಾನೇ ಹೇಳುವ ಬಹುಸಂಸ್ಕೃತಿಯ ತೊಟ್ಟಿಲಾದ ಭಾರತ ಮತ್ತದರ ಪರಂಪರೆಯನ್ನು, ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿರುವ ಸನಾತನಧರ್ಮವನ್ನೂ ದೂಷಿಸುವ, ದಮಿಸುವ, ಧಿಕ್ಕರಿಸುವ ದೀಕ್ಷೆಯನ್ನು ತೊಟ್ಟು, ರಾಷ್ಟ್ರೀಯ ಐಕ್ಯತೆಗೆ ಧಕ್ಕೆಯಾಗುವಂತೆ ವ್ಯವಹರಿಸುತ್ತಿರುವುದು ಸರ್ವವೇದ್ಯ.

ತಾನೇ ಬೆಂಬಲಿಸುವ ಮಾರ್ಕ್ಸ್ ವಾದೀ ದೇಶಗಳಲ್ಲಿ, ಇಸ್ಲಾಮಿಕ್ ರಾಷ್ಟ್ರಗಳಲ್ಲಿ, ಈ ಬಗೆಯ ಸ್ವಾತಂತ್ರ್ಯ ಸೌಲಭ್ಯಗಳಿಲ್ಲ ಎಂಬುದೂ ಇದಕ್ಕೆ ಗೊತ್ತಿಲ್ಲ. ಯಾವುದೇ ವಾದಗಳನ್ನು ಹೂಡಿದರೂ ಅದರಲ್ಲಿ ಪ್ರಾಮಾಣಿಕ ಪಾಂಡಿತ್ಯ, ವ್ಯಾಪಕ ಹಾಗೂ ಸಾಧಾರ ಮಾಹಿತಿ, ಸುಸಂಗತ ವೈಜ್ಞಾನಿಕ ತರ್ಕ, ರಾಷ್ಟ್ರಹಿತಗಳು ಇದರ ಸಿದ್ಧಾಂತಗಳಲ್ಲಿ ಮೃಗೀಯವಾಗಿರುತ್ತದೆ. ಅಂತರ್ವಿರೋಧ, ಕುಟಿಲತೆ ಮತ್ತು ಅಸಹನೆಗಳು ಇದರ ಮೌಲ್ಯಗಳು. ಈ ಬಗೆಯ ಸಿದ್ಧಾಂತಿಗಳ ಬೌದ್ಧಿಕ ವಂಚನೆಯನ್ನು, ಹಿಡೆನ್ ಅಜೆಂಡಾದ ಭೌತಿಕ ಮತ್ತು ಬೌದ್ಧಿಕ ಸ್ಥಿತಿಯನ್ನು ಅನೇಕ ವಿದ್ವಾಂಸರು, ಲೇಖಕರು, ಸಾಹಿತಿಗಳು, ಚಿಂತಕರು ಸಾಧಾರವಾಗಿ, ಸತರ್ಕವಾಗಿ ಬೆತ್ತಲುಗೊಳಿಸುತ್ತಲೇ ಇದ್ದಾರೆ.

ವಿಚಿತ್ರವೆಂದರೆ, ಈ ಬಗೆಯ ವಾದಿಗಳಿಗೆ ಆಯಾ ರಾಜ್ಯ, ಭಾಷೆ, ಸಂಸ್ಕೃತಿಗಳಿಗೆ ಹೋರಾಡುವುದು ತಪ್ಪು ಅನಿಸುವುದಿಲ್ಲ. ಭಾರತ, ಭಾರತೀಯ ಸಂಸ್ಕೃತಿ-ಸಂಸ್ಕೃತ ಎಂದಾಕ್ಷಣ ಮೂಲಭೂತವಾಗುತ್ತದೆ. ಬಹುಸಂಸ್ಕೃತಿಯ ಭಾರತವನ್ನು ಒಪ್ಪಿದ ಮೇಲೆ ರಾಜ್ಯವಾದವನ್ನೂ ಅದೇ ನೆಲೆಯಲ್ಲಿ ಒಪ್ಪದ ಮೂರ್ಖರಿವರು? ರಾಷ್ಟ್ರವಾದವನ್ನು ಮೂಲಭೂತವೆನ್ನುವ ಇವರಿಗೆ ರಾಜ್ಯವಾದವೂ ಅದೇ ಆಗುತ್ತದೆಂಬ ಅರಿವಿಲ್ಲ? ಹಿಂದೂ ವೈವಿಧ್ಯವನ್ನು, ಬಹುತ್ವವನ್ನು ಧ್ವಂಸಗೊಳಿಸುತ್ತಾ ಕ್ರೈಸ್ತ, ಇಸ್ಲಾಂ, ಮಾರ್ಕ್ಸ್ ವಾದಗಳನ್ನು ಮಾತ್ರ ಓಲೈಸಿಕೊಂಡು ಬದುಕುವ ಈ ಸಿದ್ಧಾಂತಿಗಳಿಗೆ ಇದಮಿತ್ಥಂ ಎಂಬ ಅಸ್ತಿತ್ವ ಇಲ್ಲ.

ಹಿಂದೂ ಎಂಬ ಪದ ರಾಷ್ಟ್ರವಾಚಕವೇ ಹೊರತು ಧರ್ಮವಾಚಕವಲ್ಲ. ಇದು ಹಿಂದೂರಾಷ್ಟ್ರ ಅಂತ ಆದಮೇಲೆ ಇಲ್ಲಿರುವವ ರೆಲ್ಲರೂ ಹಿಂದುಗಳೇ ಆಗಬೇಕು ತಾನೆ? ಅಂದರೆ ಹಿಂದುತ್ವ ಎನ್ನುವುದು ಭಾರತೀಯತೆಗೆ ಭಿನ್ನವಾದ ಕಲ್ಪನೆ ಆಗುವುದು ಹೇಗೆ ಸಾಧ್ಯ? ಆದ್ದರಿಂದ ಹಿಂದೂ, ಹಿಂದುತ್ವ ಎನ್ನುವುದು ಈ ದೇಶದ ಜನರ ಜೀವನಪದ್ಧತಿ, ಸಂಸ್ಕೃತಿ, ಆಚಾರವಿಚಾರಗಳಿಗೆ ಸಂಬಂಽಸಿದ್ದು. ಕೋಮುವಿಗೆ ಅಲ್ಲ. ನಮ್ಮದು ಸನಾತನ ಧರ್ಮ. ಅದು ಎಲ್ಲವನ್ನೂ ಒಳಗೊಳ್ಳುತ್ತದೆ.

ಒಳಗೊಳ್ಳಲೇಬೇಕು. ಇದೇ ನಮ್ಮ ರಾಷ್ಟ್ರೀಯತೆ. ಇದೇ ನಿಜವಾದ ಸೆಕ್ಯುಲರಿಸಮ. ಈ ರಾಷ್ಟ್ರೀ ಯತೆಯನ್ನು ಹೊಂದಲು ಏನು ಅಡ್ಡಿ? ಹೊಂದಲಾಗದಿದ್ದರೆ ಬಾಯಿಮುಚ್ಚಿಕೊಂಡು ಬದುಕಬೇಕಷ್ಟೆ! ಅಷ್ಟಕ್ಕೂ ನಾವೊಂದು ರಾಷ್ಟ್ರೀಯ ಹಿತಾಸಕ್ತಿಯ ಚಿಂತನೆಯನ್ನು ಪ್ರಧಾನವಾಗಿಟ್ಟುಕೊಂಡು ಬದುಕುತ್ತೇವೆಯೋ ಹೊರತು ಯಾರ ಓಲೈಕೆಯನ್ನು ಮಾಡಿಯಲ್ಲ. ಇಂಥ ಜಾಜ್ವಲ್ಯ ಮಾನವಾದ ದೇಶವನ್ನು ಆಳುವ ಪ್ರಭುತ್ವಕ್ಕೆ ಹಿಂದುತ್ವದ ಪ್ರತಿಪಾದನೆಯ ಹಂಬಲ ಇರಲೇಬೇಕು. ನಮ್ಮದು
ಸಾಂಸ್ಕೃತಿಕ ರಾಷ್ಟ್ರಕಲ್ಪನೆಯಾದ್ದರಿಂದ ಇದರ ಪ್ರತಿ ಪಾದನೆಯೇ ಮುಖ್ಯ. ಇದೇ ಈ ರಾಷ್ಟದ ಜೀವನಾಡಿ.

Read E-Paper click here