Saturday, 14th December 2024

ಹಿಂದೂಗಳ ಬಾಲಕ್ಕೆ ಬೆಂಕಿ ಹಚ್ಚಬೇಡಿ !

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಕಾಂಗ್ರೆಸ್ ಪಕ್ಷದ ಮದರ್‌ಬೋರ್ಡ್‌ನಲ್ಲಿ ಅದೇನು ದೋಷವಿದೆಯೋ ಏನೋ. ಕಾಂಗ್ರೆಸ್ ಪಕ್ಷವೆಂದರೆ ಇಂದು ಮುಸ್ಲಿಂಲೀಗ್ ಪಕ್ಷವನ್ನೇ ಮೀರಿಸುವಂತೆ ಅದರ ನಾಯಕರು ಮತಾಂತರಗೊಂಡವರಂತೆ ಬದಲಾಗಿದ್ದಾರೆ. ಅದರಲ್ಲೂ ಕೆಲವು ನಾಯಕರ ಹೆಸರೇ ಹಿಂದುಗಳ ವಿರುದ್ಧದ ಬ್ರಾಂಡ್ ಅಂಬಾಸಿಡರ್ ಐಕಾನ್‌ಗಳಂತೆ ಗೋಚರಿಸುತ್ತಿದೆ.

೨೦೦೪ ಅಂದು ಲೋಕಸಭೆಯ ಚುನಾವಣೆಯಲ್ಲಿ ಕೇವಲ ೧೪೧ ಸ್ಥಾನ ಗಳಿಸಿದ್ದ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಭಾ ರತದ ಪ್ರಥಮ ವಿದೇಶಿ ಪ್ರಧಾನಮಂತ್ರಿ ಸ್ಥಾನದ ಸಮೀಪ ಬಂದು ನಿಂತಿದ್ದರು. ಅದಕ್ಕೆ ತಕ್ಕಂತೆ ಕಾಂಗ್ರೆಸ್‌ನ ಬಹುಪಾಲು ಮಂದಿ ಬಹುಪರಾಕ್ ಹೇಳಲು ಸಿದ್ಧರಾಗಿದ್ದರು. ಆದರೆ ಎಚ್ಚೆತ್ತ ಭಾರತೀಯರು ಯಾವುದೇ ಕಾರಣಕ್ಕೂ ದೇಶವನ್ನು ಮತ್ತೊಮ್ಮೆ ವಿದೇಶಿ ಮೂಲದವರ ಕೈಗೆ ಒಪ್ಪಿಸಲು ಸಿದ್ಧರಿರಲಿಲ್ಲ.

ದೇಶದ ಸ್ವಾಭಿಮಾನದ ಪ್ರಶ್ನೆಯಿಂದಾಗಿ ಸಹಜವಾಗಿ ಸೋನಿಯಾಗಾಂಧಿ ಪ್ರಧಾನಮಂತ್ರಿ ಪೀಠದಿಂದ ದೂರ ಸರಿದರು. ಇದನ್ನೇ ಇಂದು ಕಾಂಗ್ರೆಸಿಗರು ಅದನ್ನು ದೊಡ್ಡ ತ್ಯಾಗವೆಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಶತಮಾನಗಳ ಕಾಲ ನಮ್ಮನ್ನು ಗುಲಾಮರನ್ನಾಗಿಸಿ ಆಳಿದ ಬ್ರಿಟಿಷರ ದೇಶವನ್ನು ಆಳಲು ಭಾರತೀಯ ಮೂಲದ ಅದರಲ್ಲೂ ಹಿಂದುತ್ವವನ್ನೇ ಪಾಲಿಸಿಕೊಂಡು
ಬಂದಿರುವ ರಿಷಿಸುನಕ್ ಅವರು ಪ್ರಧಾನಮಂತ್ರಿ ಸ್ಥಾನಕ್ಕೆ ಆಯ್ಕೆಯಾದಾಗ ನಾವುಗಳು ಸೋನಿಯಾಗಾಂಧಿಯನ್ನು ವಿರೋಽಸಿದಂತೆ ಅಲ್ಲಿ ರಿಷಿಸುನಕ್ ರನ್ನು ವಿದೇಶಿ ಮೂಲದವನೆಂದು ವಿರೋಧಿಸಲಿಲ್ಲ.

ಬದಲಿಗೆ ರಿಷಿಗೆ ತಮ್ಮ ದೇಶವನ್ನು ಆಳುವಂತೆ ಸ್ವಾಗತಿಸಿದರು ಅದೇ ಆಂಗ್ಲರು. ಹಾಗಂತ ಅವರಿಗೆ ನಮ್ಮಂತೆ ಸ್ವಾಭಿಮಾನ ಸ್ವಪ್ರತಿಷ್ಠೆ ಇರಲಿಲ್ಲವೆಂದಲ್ಲ. ಆಂಗ್ಲರಿಗೆ ವಿದೇಶಿ ಮೂಲದ ಪ್ರಧಾನಮಂತ್ರಿ ನಮ್ಮನ್ನು ಆಳುತ್ತಿದ್ದಾನೆ ಎನ್ನುವುದಕ್ಕಿಂತ  ರಿಷಿ ಸುನಕ್ ಒಬ್ಬ ಪ್ರಾಮಾಣಿಕ, ಶ್ರದ್ಧಾವಂತ ನಂಬಿಕೆ ವಿಶ್ವಾಸಕ್ಕೆ ಅರ್ಹವಾದ ಸಂಭಾವಿತ ವ್ಯಕ್ತಿ ಎಂಬುದಕ್ಕಿಂತ ಹೆಚ್ಚಾಗಿ ಆತ ಹಿಂದೂ ಸಂಪ್ರದಾಯಸ್ಥನಾಗಿದ್ದು ಆತನಿಂದ ನಮ್ಮ ದೇಶಕ್ಕೆ ಯಾವುದೇ ರೀತಿಯಿಂದ ಕೆಡುಕಾಗುವುದಿಲ್ಲ ಮತ್ತು ಎಲ್ಲವೂ ಒಳಿತಾಗುತ್ತದೆಂಬ ಅನುಭೂತಿ ಅವರಿಗಿತ್ತು.

ರಿಷಿಸುನಕ್ ವಿದೇಶಿಗ ಎಂಬ ಯೋಚನೆಗಿಂತ ಅವರ ವ್ಯಕ್ತಿತ್ವ ವೈಚಾರಿಕತೆಯೇ ಆಂಗ್ಲರ ವಿವೇಚನೆಯಾಗಿತ್ತು. ಆಂಗ್ಲರಲ್ಲಿ ಇಂಥ ನಂಬಿಕೆ ಭರವಸೆ ಮೂಡಲು ಕಾರಣ ಮೋದಿತ್ವ. ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಭವ್ಯ ವ್ಯಕ್ತಿತ್ವ ದಿವ್ಯ ವೈಚಾರಿಕತೆ ಅಗಾಧ ಸಾಮರ್ಥ್ಯದ ಪರಿಣಾಮ. ಇಂದು ಅನೇಕ ರಾಷ್ಟ್ರಗಳು ಮೋದಿಯಂಥ ನಾಯಕನೊಬ್ಬ ನಮ್ಮ
ದೇಶಕ್ಕೂ ಬೇಕು ಎಂಬ ಬಯಕೆಯಲ್ಲಿದೆ. ಪಕ್ಕದ ಪಾಕಿಸ್ತಾನವನ್ನೇ ನೋಡಿ ಅದು ಎಂಥ ದರಿದ್ರ ಸ್ಥಿತಿಯಲ್ಲಿದೆ ಎಂದರೆ ಆ ದೇಶದಲ್ಲಿ ಭೂಕಂಪ ಪ್ರವಾಹವಾಗಲಿ ಆಗ ಮೋದಿಯವರು ನಮ್ಮ ಸಹಾಯಕ್ಕೆ ಬರುತ್ತಾರೆ ಎಂಬಂಥ ಹರಕೆಯಲ್ಲಿದ್ದಾರೆ.

ಮೋದಿಯವರ ಇಂಥ ಧೀಮಂತ ವ್ಯಕ್ತಿತ್ವವೇ ಇಂದು ವಿಶ್ವದ ನಾಗರಿಕರಿಂದ ಹಿಡಿದು ನಮ್ಮ ಮುಗ್ಧ ಅನಕ್ಷರಸ್ಥ ಹಳ್ಳಿಗನ ವರೆಗೂ ಹೃದಯ ತುಂಬಿದೆ. ಇಂಥ ಶಕ್ತಿಯೇ ಇಂದು ಬಿಜೆಪಿಯನ್ನು ದಿನೇದಿನೇ ಎತ್ತರಕ್ಕೆ ಕರೆದೊಯ್ಯುತ್ತಿದೆ ಮತ್ತು
ಪ್ರತಿಯೊಬ್ಬ ಭಾರತೀಯನೂ ಮೋದಿತ್ವದ ಅನುಭೂತಿಗೆ ಒಳಗಾಗುತ್ತಿದ್ದಾನೆ. ಸರಳವಾಗಿ ಹೇಳಬೇಕೆಂದರೆ ಸ್ವಾಮಿ ವಿವೇಕಾನಂದರ ಆತ್ಮಸಂಕಲ್ಪ ಮೋದಿಯವರಿಂದ ಸಾಕಾರವಾಗುತ್ತಿದೆ.

ಇಂಥ ಮನುಷ್ಯನನ್ನು ಇಲ್ಲಿನ ನಾಲ್ಕು ಕತ್ತೆ ವಯಸ್ಸಿನವರೆಲ್ಲ ನಿಂದಿಸಿ, ಮೋದಿ ಬೇಗ ಮಣ್ಣುಪಾಲಾದರೇ ಸಾಕು ಎಂಬ ಧಾವಂತದಲ್ಲಿ ಶಪಿಸುತ್ತಾ ಪ್ರೇತಾತ್ಮದಂತೆ ರೋದಿಸುತ್ತಿದ್ದಾರೆ. ದೇಶದಲ್ಲಿ ಭಾರತೀಯರ ನಾಡಿಮಿಡಿತ ಹೀಗಿರುವಾಗ ಇದನ್ನು ಧನಾತ್ಮಕವಾಗಿ ಅರ್ಥೈಸಿಕೊಂಡು ಅದಕ್ಕಿಂತ ಉತ್ತಮ ಚಿಂತನೆಗಳನ್ನು ಅಳವಡಿಸಿಕೊಂಡು ನಾವುಗಳೂ ಕಡಿಮೆಯಿಲ್ಲ ದೇಶದ ಸಾರ್ವಭೌಮತೆಗೆ ಪ್ರಜಾಪ್ರಭುತ್ವದ ಸಮಾನತೆಗೆ ಏನೆಲ್ಲಾ ಮಾಡಬೇಕೋ ಅದನ್ನು ನಾವುಗಳೂ ಮಾಡುತ್ತೇವೆಂಬ ಭರವಸೆ ವಿಶ್ವಾಸ ಹುಟ್ಟಿಸಬೇಕಾದ ಕಾಂಗ್ರೆಸ್ ಪಕ್ಷ ಇಂದು ಭಾರತೀಯರ ಸ್ವಾಭಿಮಾನ ನಂಬಿಕೆಗಳ
ತದ್ವಿರುದ್ಧವಾಗಿ ಹೋಗುತ್ತಿದೆ.

ಒಬ್ಬ ಜಾಮೂನು ಮಾರುತ್ತಾ ಗ್ರಾಹಕರನ್ನು ಸೆಳೆಯುತ್ತಿರುವಾಗ ಆತನ ಮುಂದೆ ರಸಗುಲ್ಲ ಮಾರಾಟ ಮಾಡಿ ಗ್ರಾಹಕರನ್ನು ಸೆಳೆಯುವುದು ಬುದ್ಧಿವಂತಿಕೆ. ಆದರೆ ಕಾಂಗ್ರೆಸ್ ಮಾಡುತ್ತಿರುವುದು ಹೇಗಿದೆಯೆಂದರೆ ಜಾಮೂನು ಮಾರುತ್ತಿರುವವನ ಮುಂದೆ ಕೊಳೆತ ಮೊಟ್ಟೆಯ ಆಮ್ಲೆಟ್ ಹಾಕುತ್ತಿರುವಂತಿದೆ. ಕಾಂಗ್ರೆಸ್ ಪಕ್ಷದ ಮದರ್‌ಬೋರ್ಡ್‌ನಲ್ಲಿ ಅದೇನು ದೋಷವಿ ದೆಯೋ ಏನೋ. ಕಾಂಗ್ರೆಸ್ ಪಕ್ಷವೆಂದರೆ ಇಂದು ಮುಸ್ಲಿಂಲೀಗ್ ಪಕ್ಷವನ್ನೇ ಮೀರುಸುವಂತೆ ಅದರ ನಾಯಕರು ಮತಾಂತರಗೊಂಡವರಂತೆ ಬದಲಾಗಿದ್ದಾರೆ. ಅದರಲ್ಲೂ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್ ಇವರ ಹೆಸರೇ ಹಿಂದುಗಳ ವಿರುದ್ಧದ ಬ್ರಾಂಡ್ ಅಂಬಾಸಿಡರ್ ಐಕಾನ್‌ಗಳಂತೆ ಗೋಚರಿಸುತ್ತಿದೆ.

ನಮ್ಮ ದೇಶದಲ್ಲಿ ಹಿಂದೂಗಳಿಂದ ಮುಸಲ್ಮಾರಿಗೆ ಯಾವ ತೊಂದರೆಯಾಗದಿದ್ದರೂ ಅವೈಜ್ಞಾನಿಕ ಅಸಂಬದ್ಧವಾಗಿ ಮುಸ್ಲಿಂರನ್ನು ಕೇವಲ ಓಲೈಸುವ ಒಂದೇ ಒಂದು ಸಿಂಗಲ್ ಅಜೆಂಡಾದಲ್ಲಿ ಕಾಂಗ್ರೆಸ್ ಬಂದು ನಿಂತಿದೆ. ಹಿಂದೂಗಳು ತಾವು ಹಿಂದೂಗಳು ಎಂದು ಹೇಳಿಕೊಳ್ಳುವುದರಿಂದ ಹಿಡಿದು ರಾಷ್ಟ್ರಧ್ವಜದಲ್ಲಿರುವ ಕೇಸರಿ, ಕೇಸರಿಬಾತು, ಪೇಟ ಶಾಲು ತಿಲಕ
ಹಣೆಯ ಕುಂಕುಮ ಎಲ್ಲವೂ ಅವರಿಗೆ ವಾಕರಿಕೆ.

ಅಸಲಿಗೆ ಬರಿಯ ಮತದಾರರಾಗಿ ಹೊರತುಪಡಿಸಿ ಹಿಂದೂಗಳ ಅಸ್ತಿತ್ವವೇ ಕಾಂಗ್ರೆಸ್‌ಗೆ ಸಹಿಸಲಸಾಧ್ಯವೆಂಬಂತೆ ಆಗಿಹೋಗಿದೆ. ಬಿ.ಕೆ. ಹರಿಪ್ರಸಾದ್‌ಗೆ ಮಸೀದಿಗಳಲ್ಲಿ ನ್ಯಾಯಾಲಯದ ಆದೇಶದಂತೆ ಅಜಾನ್ ಪಾಲಿಸುವುದಕ್ಕಿಂತ ಮೊದಲಾಗಿ ದೇವಸ್ಥಾನದಲ್ಲಿ ಸುಪ್ರಭಾತ ಅಭಿಯಾನ ಆರಂಭಿಸುವವರು ಉಗ್ರರು, ಮುಸಲ್ಮಾನರಿಗೆ ರಸ್ತೆಯಲ್ಲಿ
ನಮಾಜ್ ಮಾಡಲು ಬಿಡದಿದ್ದರೆ ಹಿಂದೂಗಳು ಪಾರ್ಕ್‌ನಲ್ಲಿ ಯೋಗ ಮಾಡಲು ಬಿಡುವುದಿಲ್ಲ ಎನ್ನುವ ಪ್ರಿಯಾಂಕಗಾಂಧಿ, ಮಾಂಸವನ್ನು ತಿಂದು ದೇವಸ್ಥಾನಕ್ಕೆ ಹೋದರೆ ಏನು ತಪ್ಪು ಎನ್ನುವ, ಕೇಸರಿ ಪೇಟವನ್ನು ಕಿತ್ತೆಸೆಯುವ, ನಾನು ಹಿಂದುತ್ವದ ವಿರುದ್ಧ ಎನ್ನುವ ಸಿದ್ದರಾಮಯ್ಯ, ಹಣೆಯ ಮೇಲಿನ ಕುಂಕುಮವನ್ನು ಅಳಿಸಿಕೊಳ್ಳುವ ಮಲ್ಲಿಕಾರ್ಜುನ ಖರ್ಗೆ, ಹಿಂದೂ ಪದವೇ ಅಶ್ಲೀಲ ಎನ್ನುವ ಸತೀಶ್ ಜಾರಕಿಹೊಳಿ, ಯೋಗಿ ಆದಿತ್ಯನಾಥರಿಗೆ ಥಳಿಸಬೇಕು ಎನ್ನುವ ದಿನೇಶ್ ಗುಂಡೂರಾವ್ ಹೀಗೆ ಇಂಥವರನ್ನು ಹಿಂದೂಗಳು ತಪಸ್ಸು ಮಾಡಿ ಪಡೆಯಬೇಕು.

ಒಳ್ಳೆಯ ಕಾಂಗ್ರೆಸ್ ಎಂಬುದು ಕೇಂದ್ರದಲ್ಲಿ ಪಿ.ವಿ. ನರಸಿಂಹರಾವ್, ಕರ್ನಾಟಕದಲ್ಲಿ ಎಸ್.ಎಂ. ಕೃಷ್ಣರೊಂದಿಗೆ
ಕೊನೆಗೊಂಡಿದೆ. ಮೊನ್ನೆ ಕಾಂಗ್ರೆಸ್ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಅನೇಕ ಅಂಶಗಳು ಹಿಂದೂಗಳ ಬಾಲಕ್ಕೆ
ಬೆಂಕಿ ಹಚ್ಚುವಂತಿದೆ. ಬಜರಂಗದಳವನ್ನು ನಿಷೇಽಸುತ್ತೇವೆ ಎಂಬ ಅವರ ಉದ್ದೇಶ ಹೇಗಿದೆಯೆಂದರೆ ಕರ್ನಾಟದಲ್ಲಿ ಬಜರಂಗದಳದ ಕಾರ್ಯಕರ್ತರ ಅಟ್ಟಹಾಸ ಮೆರೆದು ಸಿಕ್ಕಾಪಟ್ಟೆ ಕೋಮುಗಲಭೆಗಳಾಗಿ ನೂರಾರು ಮುಸಲ್ಮಾನರು
ಇದಕ್ಕೆ ಬಲಿಯಾಗಿ ಇಡೀ ರಾಜ್ಯ ಹೊತ್ತಿ ಉರಿದು ಲಾಠಿಚಾರ್ಜ್ ಕರ್ಫ್ಯು ಗೋಲಿಬಾರ್‌ಗಳಾಗಿ ರಸ್ತೆರಸ್ತೆಗಳಲ್ಲಿ ಟೈರ್‌ಗಳು ಸುಟ್ಟು ಕರಕಲಾಗಿ ಕೆಜಿಎಫ್ ಸಿನಿಮಾದಲ್ಲಿನ ಹೊಗೆಯಲ್ಲಿ ರಾಜ್ಯ ತತ್ತರಿಸಿ ಹೋದಂತಿದೆ.

ಸಾಲದೆಂಬಂತೆ ಬಜರಂಗ ದಳದೊಂದಿಗೆ ಧರ್ಮಾಂಧ ಸಂಘಟನೆ ಪಿಎಫ್ಐ ಹೋಲಿಕೆಯೇ ಒಂದು ವಿಕೃತ ಮನಸ್ಥಿತಿ. ರಾಮಾಯಣದಲ್ಲಿ ಶ್ರೀರಾಮನೊಂದಿಗೆ ನಿಂತ ಸುಗ್ರೀವ ಅಂಗದ ಹನುಮರನ್ನೊಳಗೊಂಡ ವಾನಸರ ಸೇನೆಯ ಸೇವೆಯಂತೆಯೇ ಇಂದು ಹನುಮನ ನಿಷ್ಠೆಯ ಧ್ಯೋತಕವಾಗಿ ಬಜರಂಗದಳ ಸಾಮಾಜಿಕ ಸೇವೆಯಲ್ಲಿದೆ. ಸಾತ್ವಿಕ ಹಿಂದೂಗಳ ಆಸ್ತಿಕತೆ ನಂಬಿಕೆ ಭಾವನೆಗಳ ರಕ್ಷಣೆಗೆ ಭಟರಂತೆ ನಿಲ್ಲುವ ಬಜರಂಗದಳವೇ ಹೊರತು ಕುಕ್ಕರ್ ಬಾಂಬರ್
ಗಳು, ಡಾಕ್ಟರ್ ಇಂಜಿನಿಯರಿಂಗ್ ಓದಿಯೂ ಭಯೋತ್ಪಾಧಕರಾಗುವ, ದಲಿತ ಶಾಸಕನ ಮನೆಗೆ-ಪೊಲೀಸ್ ಠಾಣೆಗೇ ಬೆಂಕಿ ಹಚ್ಚುವ, ಜೀವ ಉಳಿಸಲು ಬಂದ ವೈದ್ಯರು ಮತ್ತು ಆಶಾ ಕಾರ್ಯಕರ್ತರನ್ನೇ ಅಟ್ಟಾಡಿಸಿಕೊಂಡು ಹೋಗುವ, ನ್ಯಾಯಾ ಲಯದ ಆದೇಶಗಳನ್ನೇ ಧಿಕ್ಕರಿಸುವ ಆತಂಕವಾದ ಸಮಾಜಗೇಡಿ ಸಂಘಟನೆಯಲ್ಲ.

ಆದರೂ ಕಾಂಗ್ರೆಸ್‌ಗೆ ಇವೆಲ್ಲವೂ ಶಾಂತಿಯ ತೋಟದಂತೆ ಕಂಡಿತು. ಅವರೆಲ್ಲರೂ ಅಮಾಯಕರಂತೆ ಬ್ರದರ್ಸ್‌ಗಳಂತೆ ಕಂಡರು. ಅಧರ್ಮ ಅಸತ್ಯ ಅನೀತಿ ಭಯಭೀತಿ ಸಂಕಷ್ಟಗಳಿಗೆ ಬಹು ಬೇಗ ಸ್ಪಂದಿಸುವ ಹನುಮದೇವರು ಹಿಂದೂ ಧರ್ಮದ ಬುಡಕಟ್ಟು ಜನರಿಂದ ಹಿಡಿದು ಬ್ರಾಹ್ಮಣ ರವರೆಗೂ ಜಾತಿಭೇದಗಳಿಲ್ಲದೇ ನಾಡುಕಾಡು ಗಡಿಕೋಟೆಗಳಿಲ್ಲದೇ ಆರಾಧಿಸುವ ಸ್ನೇಹಮಯಿ ದೈವ. ಅಂಥ ಹನುಮದೇವರ ಭಕ್ತರು ಮತ್ತು ಸಾಮಾಜಿಕ ಧಾರ್ಮಿಕ ಸೇವಕರಾದ ಬಜರಂಗ ದಳವನ್ನು ಪಿಎಫ್ಐನಂಥ ಭಯೋತ್ಪಾದನೆಯ ಸಂಘಟನೆಯೊಂದಿಗೆ ಹೋಲಿಸುವುದಿದೆಯಲ್ಲಾ ಅದು ಅವಿವೇಕತನದ ಪರಮಾವಧಿ.

ಇನ್ನು ಬಿಜೆಪಿ ಜಾರಿಗೆ ತಂದಿರುವ ಬಹುಸಂಖ್ಯಾತ ಹಿಂದೂಗಳ ಹಿತರಕ್ಷಣೆಯ ಎಲ್ಲಾ ಯೋಜನೆಗಳನ್ನು ಕಿತ್ತೆಸೆಯುತ್ತೇವೆ ಎನ್ನುತ್ತಿದೆ ಕಾಂಗ್ರೆಸ್. ಮೊದಲಿಗೆ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಯನ್ನು ಕಿತ್ತೆಸೆಯುವುದೆಂದರೆ ಅದು ಹಿಂದೂಗಳ ಮಕ್ಕಳು ಈ ಬರಗೆಟ್ಟೂರಿನ ಬಕೇಟು ಸಾಹಿತಿಗಳು ಗಂಜಿಕೇಂದ್ರಿತ ಲದ್ದಿಜೀವಿಗಳು ನೀಡುವ ಪಠ್ಯ ಪುಸ್ತಕದಲ್ಲಿನ ಅಕ್ಬರ್ ಔರಂಗಜೇಬ್ ಘಜ್ನಿ ಘೋರಿ ಖಿಲ್ಜಿ ಟಿಪ್ಪುವಿನ ಇತಿಹಾಸವನ್ನೇ ಓದಬೇಕು ವಿನಃ ರಾಮಾಯಣ ಭಗವದ್ಗೀತೆ ಕೇಳಲೇಬಾರದು.

ಇನ್ನು ಗೋಹತ್ಯೆ ನಿಷೇಧ ನೆಗೆದುಬಿದ್ದು ಗೋವುಗಳು ನಿರಂತರವಾಗಿ ಕಸಾಯಿಖಾನೆಯಲ್ಲಿ ನೇತಾಡಬೇಕು. ಮತಾಂತರ ನಿಷೇಧ ರದ್ದುಮಾಡಿ ಮಿಷನರಿಗಳು ಜಾತ್ಯತೀತವಾಗಿ ಹಿಂದೂಗಳನ್ನು ಮತಾಂತರಿಸುವ ಕಾರ್ಯಗಳು ನಿರ್ಭಯವಾಗಿ
ನಡೆಯುತ್ತಿರಬೇಕು. ಹಿಂದೂಗಳ ಸಂತತಿಯನ್ನೇ ನಾಶಗೊಳಿಸಲು ಮೊದಲು ಹಿಂದೂ ಹೆಣ್ಣನ್ನು ಸರ್ವನಾಶ ಮಾಡುವ ಲವ್‌ಜಿಹಾದ್‌ಗೆ ಹಿಂದೂ ಮನೆಯ ಹೆಣ್ಣುಮಕ್ಕಳು ಬಲಿಯಾಗುತ್ತಲೇ ಇರಬೇಕು.

೨೦೧೩ ರಲ್ಲಿ ಕಾಂಗ್ರೆಸ್ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದು ಯಾರ ಆಸ್ತಿಯನ್ನು ಬೇಕಾದರೂ ಕಸಿದುಕೊಳ್ಳಲು ಅನಿಯಮಿತ ಅಧಿಕಾರವನ್ನು ವಕ್ಫ್ ಮಂಡಳಿಗಳಿಗೆ ನೀಡಿದ್ದಲ್ಲದೇ ಇದನ್ನು ಯಾವುದೇ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗದಂತೆ ಮಾಡಿ ದೇಶಾದ್ಯಂತ ಲಕ್ಷಾಂತರ ಎಕರೆ ಸಾರ್ವಜನಿಕ-ಹಿಂದೂಗಳ ಭೂಮಿಯನ್ನು ಆಕ್ರಮಿಸಿಕೊಂಡಿರುವ ವಕ್ಫ್ ಮಂಡಳಿ ವಿವಾದದಲ್ಲಿರುವಾಗ ಕರ್ನಾಟಕದ ವಕ್ಫ್ ಬೋರ್ಡ್‌ನ ಆಸ್ತಿ ಕಾಯುವ ಭರವಸೆ ನೀಡಲಾಗಿದೆ. ಹೀಗೆ ಅನೇಕ ಭರವಸೆಗಳು
ಹಿಂದೂಗಳ ವಿರುದ್ಧವಾಗಿರುವುದು ಮತದಾರರಿಗೆ ಈಗಾಗಲೇ ‘ಗ್ಯಾರಂಟಿ’ಯಾಗಿದೆ.

ಭಾರತ ಮಾತೆಗೆ ಜೈ, ವಂದೇ ಮಾತರಂ ಘೋಷಣೆಯನ್ನೇ ಮಾಡದ ಹಣೆಗೆ ಕುಂಕುಮ ತಿಲಕ, ತಲೆಗೆ ಕೇಸರಿ ಪೇಟವನ್ನು
ವಿರೋಽಸುವ ಮನಸ್ಥಿತಿ ಎಂದರೆ ಅದು ಕಾಂಗ್ರೆಸ್ ಎನ್ನುವುದು ಎಲ್ಲರಿಗೂ ಮನವರಿಕೆಯಾಗಿದೆ. ಹಿಂದೂಗಳ ಹಿತ ಕಾಪಾಡುವ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಕೂಡಲೇ ರಿವರ್ಸ್ ಮಾಡುತ್ತೇವೆ ಎನ್ನುವ ಕಾಂಗ್ರೆಸ್ ಹತ್ತು ವರ್ಷದ ಹಿಂದಿದ್ದ ಗ್ಯಾಸ್-ಪೆಟ್ರೊಲ್ ಬೆಲೆಗಳನ್ನು ಹೇಳುವ ಜಾಹೀರಾತನ್ನು ತೋರಿಸಿ ಈಗಿನ ಬೆಲೆ ಏರಿಕೆಯನ್ನು ಖಂಡಿಸುತ್ತದೆ. ಯೋಜನೆಗಳನ್ನು ರಿವರ್ಸ್ ಮಾಡುವಂತೆ ಗ್ಯಾಸ್-ಪೆಟ್ರೋಲ್ ಬೆಲೆಗಳನ್ನೂ ಹತ್ತು ವರ್ಷದ ಹಿಂದಿನ ಬೆಲೆಗೆ ರಿವರ್ಸ್ ಮಾಡುವ ಗ್ಯಾರಂಟಿಯನ್ನೇ ಮೊದಲ ಗ್ಯಾರಂಟಿಯಾಗಿ ನೀಡಬಹುದಿತ್ತಲ್ಲವೇ? ಜಿಎಸ್‌ಟಿ ಸಂಗ್ರಹಣೆಯಿಂದ ದೇಶದ ಸೇನೆಯ
ಬಲವರ್ಧನೆ ಯುದ್ಧ ಸಾಮರ್ಥ್ಯ ಬಲಿಷ್ಠಗೊಳಿಸುವುದು ದೇಶಕ್ಕೆ ಅನಿವಾರ್ಯ.

ಈ ಕ್ಷೇತ್ರದಲ್ಲಿ ನಾವು ಬಲಿಷ್ಠವಾಗಿಲ್ಲದಿದ್ದರೆ ನರಿನಾಯಿಗಳು ಮೊಲವನ್ನು ಆಕ್ರಮಿಸುವಂತೆ ದೇಶಕ್ಕೆ ಗಂಡಾಂತರ ತಪ್ಪಿದ್ದಲ್ಲ.
ಒಪ್ಪತ್ತು ಗಂಜಿ ಕುಡಿದು ಬದುಕಿದರೂ ಗೌರವ ಮರ್ಯಾದೆಯಿಂದ ಬಾಳಬೇಕೆನ್ನುತ್ತಾನೆ ಸ್ವಾಭಿಮಾನಿ ಭಾರತೀಯ. ಕಿತ್ತುಹೋಗಿರುವ ಮನೆಯೊಳಗೆ ಕೂತು ಬಿಟ್ಟಿ ಬಿರಿಯಾನಿ ತಿನ್ನುವುದು ಜೀವನವಲ್ಲ. ಮನೆಯ ಬಾಗಿಲು ಗೋಡೆ ನೆಲ
ಚಾವಣಿ ಇವುಗಳನ್ನು ಮೊದಲು ಭ ದ್ರಗೊಳಿಸಿಕೊಳ್ಳಬೇಕು. ಜತೆಗೆ ಮನೆಯೊಳಗಿರುವ ದ್ರೋಹಿಗಳನ್ನೂ ಸೆದೆಬಡಿಯಬೇಕು. ಆದ್ದರಿಂದ ಗುಲಾಮಗಿರಿಯಿಂದ ಬದುಕುವುದಕ್ಕಿಂತ ಸ್ವಾಭಿಮಾನದಿಂದ ಬದುಕಲು ದೇಶಾಭಿಮಾನಿಗಳಿಗೆ ಮತನೀಡಿ, ದೇಶದ್ರೋಹಿಗಳ ಕೈಬಿಡಿ!