ಅಭಿಮತ
ಸಿಂಚನ ಎಂ.ಕೆ
2021ರ ಜೂನ್ 21 ಮಹತ್ವದ ದಿನ. 85 ಲಕ್ಷಕ್ಕಿಂತ ಅಧಿಕ ಭಾರತದ ಪ್ರಜೆಗಳಿಗೆ ಲಸಿಕೆ ನೀಡುವುದರ ಮೂಲಕ ದಾಖಲೆ ಬರೆದ ಐತಿಹಾಸಿಕ ದಿನ.
ಮುಂದಿನ ದಿನಗಳಲ್ಲೂ ಸಹ ಕ್ರಮವಾಗಿ 54 ಲಕ್ಷ, 62 ಲಕ್ಷ, 60 ಲಕ್ಷ, 61 ಲಕ್ಷ, 59ಲಕ್ಷದಷ್ಟು ಜನರಿಗೆ ಲಸಿಕೆಯನ್ನು ಕೊಡುವುದರ ಮೂಲಕ ಅತಿ ದೊಡ್ಡ ಲಸಿಕಾ ಅಭಿಯಾನವನ್ನು ಮುಂದುವರಿಸುತ್ತಿರುವ ಶ್ರೇಯಸ್ಸು ಭಾರತ ಸರಕಾರ ಹಾಗೂ ಅದರೊಂದಿಗೆ ಕೈ ಜೋಡಿಸಿರುವ ಎಲ್ಲಾ ಕರೋನಾ ವಾರಿಯರ್ಸ್‌ಗೆ ಸಲ್ಲುತ್ತದೆ.
45 ವರ್ಷಕ್ಕಿಂತ ಅಧಿಕ ವಯಸ್ಸಿನವರಿಗೆ ಲಸಿಕೆ ನೀಡಿದ ನಂತರ ಆರಂಭವಾದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ವಿಶ್ವದ ದೊಡ್ಡ ಲಸಿಕಾ ಅಭಿಯಾನಕ್ಕೆ ಚಾಲ್ತಿ ನೀಡಿದಾಗ ಕೋ – ವಿನ್ ಡಿಜಿಟಲ್ ಪ್ಲಾಟ್ ಫಾರ್ಮ್‌ನಿಂದ 100 ಕೋಟಿಯಷ್ಟು ಜನರ ನೋಂದಣಿ ಪ್ರಕ್ರಿಯೆಯನ್ನು ನಿಭಾಯಿಸುವುದು ಅತಿ ದೊಡ್ಡ ಸವಾಲಾಗಿತ್ತು. ಆದರೆ, 31 ಕೋಟಿಗಿಂತಲೂ ಅಧಿಕ ನೋಂದಣಿಯಾಗಿ, 28 ಕೋಟಿಗಿಂತಲೂ ಅಧಿಕ ಲಸಿಕೆ ವಿತರಣೆಯಾಗಿರುವುದು ಹಾಗೂ
ಇದರಿಂದ 20 ರಾಷ್ಟ್ರಗಳು ಭಾರತದ ಈ ತಂತ್ರಜ್ಞಾನದ ಬಗೆಗೆ ಆಸಕ್ತಿ ತೋರಿ ಮುಂದೆ ಬಂದಿರುವುದು ಅತಿ ವೇಗದ ಟೆಕ್ ಪ್ಲಾಟ್ ಫಾರ್ಮ್ ಆಗಿ ಹೊರ ಹೊಮ್ಮಿರುವ ಕೋವ್ಯಾವಿನ್‌ನ ಸಾಧನೆಯನ್ನು ಮತ್ತಷ್ಟು ಎತ್ತರಕ್ಕೇರಿಸಿದೆ.
ಪ್ರಧಾನಿ ಮೋದಿಯವರು ಲಸಿಕಾ ಅಭಿಯಾನದ ಪ್ರಕ್ರಿಯೆಯ ಮಾಹಿತಿಗಾಗಿ ಏರ್ಪಡಿಸಿದ್ದ ಸಭೆಯಲ್ಲಿ ತಜ್ಞರು ಕಳೆದ 6 ದಿನಗಳಲ್ಲಿ ನೀಡಲಾಗಿರುವ 3.77 ಕೋಟಿ ಡೋಸ್ ಗಳ ಸಂಖ್ಯೆಯು ಮಲೇಷಿಯಾ, ಸೌದಿ ಅರೇಬಿಯಾ ಮತ್ತು ಕೆನಡಾ ದೇಶಗಳ ಒಟ್ಟು ಜನಸಂಖ್ಯೆಗಿಂತ ಹೆಚ್ಚಿದೆ ಎಂದು ತಿಳಿಸಿದ್ದಾರೆ. ನ್ಯೂಜಿಲೆಂಡ್ ನಂತಹ ಕೇವಲ 48 ಲಕ್ಷ ಜನಸಂಖ್ಯೆಯ ರಾಷ್ಟ್ರದ ಲಸಿಕಾ ಅಭಿಯಾನದ ವೇಗದ ಶೇಕಡವಾರು ಪ್ರಮಾಣದೊಂದಿಗೆ ಭಾರತದಂತಹ 135 ಕೋಟಿ ಜನ ಸಂಖ್ಯೆಯ ರಾಷ್ಟ್ರವನ್ನು ಹೋಲಿಕೆ ಮಾಡಿ ಕೆಲವು ಅeನಿಗಳು ನ್ಯೂಜಿಲೆಂಡ್ ಸರ್ಕಾರವನ್ನು ನಮಗೆ ಮಾರ್ಗದರ್ಶಿಸುವಂತೆ ಟ್ವೀಟ್ ಮಾಡಿ ತಮ್ಮ ಅವಿವೇಕದ ಪರಾಕಾಷ್ಠತೆಯನ್ನು ಪ್ರದರ್ಶಿಸಿದ್ದರು. ಈಗ ಭಾರತವು ಒಂದೇ ದಿನದಲ್ಲಿ ನ್ಯೂಜಿಲೆಂಡ್ ನ ಜನಸಂಖ್ಯೆಯ ಎರಡು ಪಟ್ಟು ಜನಸಂಖ್ಯೆಗೆ ಲಸಿಕೆ ನೀಡಿರುವುದು ಅವರ ನಿಜವಾದ ಮುಖವನ್ನು ದೇಶದ ಮುಂದೆ ಬಹಿರಂಗ ಪಡಿಸಿದೆ.
ಯೂರೋಪ್ ಮತ್ತು ಉತ್ತರ ಅಮೆರಿಕಾಗಳು ಅಂದರೆ ಒಟ್ಟು 87 ದೇಶಗಳು, 134 ಕೋಟಿ ಜನಸಂಖ್ಯೆಯ ಕೊರೊನಾ ಸಮಸ್ಯೆಯನ್ನು 87 ಪ್ರಧಾನಿಗಳು ನಿರ್ವಹಿಸುತ್ತಿದ್ದರೂ, ಭಾರತವೆಂಬ ಒಂದೇ ಒಂದು ರಾಷ್ಟ್ರದ 135 ಕೋಟಿ ಜನಸಂಖ್ಯೆಯನ್ನು ನಮ್ಮ ಒಬ್ಬರು ಪ್ರಧಾನಿ ಮೋದಿಯವರ ಸಮರ್ಥ ನಿರ್ವಹಣೆಯ ಮುಂದೆ ಯಶಸ್ವಿಯಾಗಿಸಲು ಸಾಧ್ಯವಾಗಲಿಲ್ಲ. ಆದರೆ, ಭಾರತೀಯರಲ್ಲಿರುವ ಸಂಸ್ಕಾರವು ಪಾಶ್ಚಿಮಾತ್ಯರಂತೆ ಅನ್ಯ ದೇಶದ ಸಾವುಗಳನ್ನು ವೈಭವೀಕರಿಸದೆ,
ಮಾನವೀಯತೆಯನ್ನು ಮೆರೆಯುವುದರಿಂದ ಅವರ ಸಂಕಷ್ಟಗಳನ್ನು ನಾವೆಂದೂ ಅಪಹಾಸ್ಯ ಮಾಡಲಿಲ್ಲ. ಇಂಗ್ಲೆಂಡ್ ಸರಕಾರವು ಸರಿ ಸುಮಾರು 4 ಕೋಟಿ ಜನರಿಗೆ ಲಸಿಕೆ ನೀಡಲು 6 ತಿಂಗಳುಗಳ ಕಾಲ ಸಮಯ ತೆಗೆದುಕೊಂಡರೆ, ಭಾರತ ಸರ್ಕಾರವು ಕೇವಲ 6 ದಿನಗಳ ಸಮಯವನ್ನು ಮಾತ್ರ ತೆಗೆದುಕೊಂಡಿದೆ.
ತಮ್ಮದೇ ದೊಡ್ಡ ವೈಫಲ್ಯವಿದ್ದಾಗ್ಯು ಭಾರತಕ್ಕಾಗಿ ವೈಫಲ್ಯವನ್ನು ಚಿತ್ರಿಸುತ್ತಿದ್ದ ಬಿಬಿಸಿ, ನ್ಯೂಯಾರ್ಕ್ ಟೈಮ್ಸ್ ಮಾಧ್ಯಮಗಳು ಈಗ ಭಾರತವು ಮಾಡಿರುವ ಸಾಧನೆಯನ್ನು ತಮ್ಮ ಪತ್ರಿಕೆಯ ಮುಂದಿನ ಪುಟದಲ್ಲಿ ಪ್ರಕಟಿಸುವುದೇ?