Friday, 13th December 2024

ಹಾಲು ಮನುಷ್ಯದಲ್ಲಿ ಒಗ್ಗಿಕೊಂಡ ರೋಚಕ ಇತಿಹಾಸ

ವೈದ್ಯ ವೈವಿಧ್ಯ

drhsmohan@gmail.com

ಎಲ್ಲರಿಗೂ ಗೊತ್ತಿರುವಂತೆ ಹಾಲು ಒಂದು ರೀತಿಯಲ್ಲಿ ಪರಿಪೂರ್ಣ ಆಹಾರ. ಏಕೆಂದರೆ ಇದರಲ್ಲಿ ನಮ್ಮ ಆರೋಗ್ಯಕ್ಕೆ ಅವಶ್ಯಕವಿರುವ ಹಾಗೂ ಪುಷ್ಟಿ ಕೊಡುವ ಪೋಷಕಾಂಶಗಳಿರುತ್ತವೆ.

ಸಣ್ಣ ಮಕ್ಕಳಿಗಂತೂ ತೀರಾ ಅವಶ್ಯಕ ಹಾಗೂ ಅನಿವಾರ್ಯ. ವಯಸ್ಕರು ಇದನ್ನು ವಿವಿಧ ರೀತಿಯಲ್ಲಿ, ಬೇರೆ ಬೇರೆ ಪ್ರಮಾಣದಲ್ಲಿ ಸೇವಿಸುತ್ತಾರೆ. ಆದರೆ ಈ ಹಾಲು ಮೊದಲು ವಯಸ್ಕರಲ್ಲಿ ಜೀರ್ಣಿಸಿಕೊಳ್ಳಲಾಗದ ಹಂತದಲ್ಲಿ ಇದ್ದದ್ದು ಈಗ ಹೇಗೆ ಈ ಹಂತಕ್ಕೆ ಬಂದಿದೆ ಎಂಬುದು ವಿಜ್ಞಾನಿಗಳ ಪಾಲಿಗೆ ಒಂದು ಅಚ್ಚರಿಯ ವಿಚಾರ. ಹಾಗೆಯೇ ಆ ಇತಿಹಾಸ ರೋಚಕವಾಗಿದೆ.

ಹಲವು ಅಧ್ಯಯನಗಳ ರೀತ್ಯ, ಜಗತ್ತಿನ ಜನಸಂಖ್ಯೆಯ ಶೇಕಡ 65 ಜನರಿಗೆ ಹಾಲನ್ನು ಸೇವಿಸಿದರೆ ದೇಹಕ್ಕೆ ಆಗುವುದಿಲ್ಲ (Lactose intolerance). ಅಂದರೆ ಹಾಲಿನಲ್ಲಿರುವ ಲ್ಯಾಕ್ಟೋಸ್ ಎಂಬ ಸಕ್ಕರೆಯ ಅಂಶವನ್ನು ವಿಭಜಿ ಸಲು ಅಗತ್ಯ ವಿರುವ ಜೀನ್ ಇವರು ಹೊಂದಿರುವುದಿಲ್ಲ. ಸಾಮಾನ್ಯವಾಗಿ ಐದು ವರ್ಷದ ಮಗುವಿನ ವಯಸ್ಸಿನ ನಂತರ ಹಾಲಿನಲ್ಲಿರುವ ಸಕ್ಕರೆಯ ಅಂಶ ಲ್ಯಾಕ್ಟೋಸ್ ಅನ್ನು ಜಠರದಲ್ಲಿ ಜೀರ್ಣಿಸಲು ಸಾಧ್ಯವಿಲ್ಲ. ಆಗ ಅದು ಕರುಳಿನ ಭಾಗಕ್ಕೆ ಚಲಿಸಿ ಅಲ್ಲಿ ಆಮ್ಲೀಯತೆ, ಹೊಟ್ಟೆ ಉಬ್ಬರಿಸಿಕೊಳ್ಳುವುದು ಮತ್ತು ಬೇಽ ಈ ರೀತಿಯ ಲಕ್ಷಣಗಳಿಗೆ ಕಾರಣವಾಗುತ್ತದೆ.

ಜಗತ್ತಿನ ಎಲ್ಲ ದೇಶಗಳಿಗಿಂತ ಭಾರತದಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆಯಾಗುತ್ತದೆ ಹಾಗೂ ಅದನ್ನು ಜಾಸ್ತಿ ಪ್ರಮಾಣದಲ್ಲಿ ಸೇವಿಸಲಾಗುತ್ತದೆ. ಹಾಗೆಯೇ ನಮ್ಮ ದೇಶದಲ್ಲಿ ಎಲ್ಲರೂ ಇದನ್ನು ಸುಲಭವಾಗಿ ಜೀರ್ಣಿಸಿಕೊಳ್ಳ ಬಹುದು ಎಂಬುದು ಒಂದು ಸಾಮಾನ್ಯ ಭಾವನೆ. ಹಲವಾರು ಅಧ್ಯಯನಗಳ ಪ್ರಕಾರ ಶೇಕಡ 18-25 ಜನರು ಮಾತ್ರ ಹಾಲನ್ನು ಜೀರ್ಣಿಸಿಕೊಳ್ಳುವ ಜೀನ್ ಹೊಂದಿದ್ದಾರೆ.

ಹಿಂದಿನ ಇತಿಹಾಸ
ಮಾನವ ಜೀವನದ ೩ ಲಕ್ಷ ವರ್ಷಗಳ ಮೊದಲು ಹಾಲು ಕುಡಿಯುವುದು ಜನಜನಿತವಾಗಿರಲಿಲ್ಲ. ಈಚಿನ ೫೦೦೦ ವರ್ಷಗಳಲ್ಲಿ ಯುರೋಪಿನ ಜನತೆ ಯಲ್ಲಿ ಒಂದು ಜೆನೆಟಿಕ್ ಮ್ಯುಟೇಷನ್ (ಮಾರ್ಪಾಡು) ಆಯಿತು. ಪರಿಣಾಮ ಎಂದರೆ ಈ
ಜನರಿಗೆ ಲ್ಯಾಕ್ಟೋಸ್ ಅನ್ನು ವಿಭಜಿಸುವ ಎನ್ ಜೈಮ್ ಲ್ಯಾಕ್ಟೇಸ್ ಅನ್ನು ಉತ್ಪಾದಿಸಲು ಸಾಧ್ಯವಾಯಿತು. ಸಾಮಾನ್ಯ ವಾಗಿ ೫ ವರ್ಷದೊಳಗಿನ ಮಕ್ಕಳಲ್ಲಿ ಮಾತ್ರ ಈ ಎನ್‌ಜೈಮ್ ಸಕ್ರಿಯವಾಗಿ ಲಭ್ಯವಿರುತ್ತದೆ. ಆದರೆ ನಂತರ ಅದು ಲಭ್ಯವಿರುವುದಿಲ್ಲ.

ಯುರೋಪಿನ ನಾಗರಿಕರಲ್ಲಿ ಇರುವ ಜೆನೆಟಿಕ್ ವೇರಿಯಂಟ್ ರೀತಿಯದೇ ವೇರಿಯಂಟ್ ಭಾರತದ ಜನರಲ್ಲಿಯೂ ಕಂಡುಬರುತ್ತದೆ. ಯುರೋಪಿನ ಜನತೆ ಇಲ್ಲಿಗೆ ವಲಸೆ ಬಂದುದರಿಂದ ನಿಧಾನವಾಗಿ ಭಾರತದ ಜನತೆಗೂ ಇದು ಪ್ರಸರಣ
ಗೊಂಡಿತು ಎಂದು ವಿeನಿಗಳ ಅಭಿಮತ. ಹಾಗಾಗಿ ಯುರೋಪಿನ ಜನತೆಯಲ್ಲಿ ಮೊದಲು ಕಂಡುಬಂದ ಈ ಜೆನೆಟಿಕ್ ವೇರಿಯಂಟ್ ಕ್ರಮೇಣ ಜಗತ್ತಿನ ಇತರ ಖಂಡಗಳ ನಾಗರಿಕರಲ್ಲಿಯೂ ಕಂಡುಬಂದಿತು ಎಂದು ಊಹಿಸಲಾಗಿದೆ.

ಮಾನವ ವಿಕಾಸವಾದದ ರೀತ್ಯಾ, ನಮಗೆ ಅನುಕೂಲವಾಗುವ ವಿಶಿಷ್ಟ ಗುಣಗಳನ್ನು ಇಟ್ಟುಕೊಳ್ಳುತ್ತೇವೆ, ಅನುಕೂಲಕರ ಅಲ್ಲದ ಗುಣಗಳನ್ನು ತ್ಯಜಿಸುತ್ತೇವೆ. ಮ್ಯುಟೇಷನ್ ಹೊಂದಿದ ಲ್ಯಾಕ್ಟೋಸ್ ಜೀನ್ ಏಕೆ ಜನಪ್ರಿಯವಾಯಿತು ಎಂಬುದನ್ನು ನಿಖರವಾಗಿ ವಿವರಿಸಲು ವಿಜ್ಞಾನಿಗಳು ಬಹಳ ಕಾಲದಿಂದ ಪ್ರಯತ್ನಿಸುತ್ತಿದ್ದಾರೆ. ಹಸುಗಳನ್ನು ಸಾಕಿ ಹಾಲು ಕುಡಿಯುವುದು ಅವರಿಗೆ ಒಂದು ರೀತಿಯಲ್ಲಿ ತೊಂದರೆ ಎನಿಸಿದರೂ ಯುರೋಪಿನ ಮೂಲ ನಾಗರಿಕರು ಅದನ್ನು ಮುಂದುವರಿಸಿದ್ದರಿಂದ ಅದೇ ಪ್ರಚಲಿತವಾಯಿತೇ ಅಥವಾ ಬೇರೆ ಕಾರಣಗಳಿರಬಹುದೇ? ಈ ಬಗೆಗೆ ವೈಜ್ಞಾನಿಕ ನಿಯತಕಾಲಿಕ ‘ನೇಚರ್’ನಲ್ಲಿ ಮೌಲ್ಯ ಯುತವಾದ ಅಧ್ಯಯನವೊಂದು ಇತ್ತೀಚೆಗೆ ಪ್ರಕಟವಾಗಿದೆ.

ಈ ನಿರ್ದಿಷ್ಟ ಜೀನ್ ವೆರಿಯಂಟ್ ಹೊಂದಿಲ್ಲದ ವ್ಯಕ್ತಿಗಳಿಗೆ ಹಾಲು ಸೇವಿಸುವುದರಿಂದ ನಿಜವಾಗಿಯೂ ತೊಂದರೆಯಾಗುತ್ತಿತ್ತು. ಆದರೆ ಬರ (drought) ಅಥವಾ ವಿಪರೀತ ಕಾಯಿಲೆ- ಆ ರೀತಿಯ ಸಂದರ್ಭಗಳಲ್ಲಿ ಹಾಲು ಸೇವಿಸಿದಾಗ ಮಾತ್ರ ಅಂತಹ ವ್ಯಕ್ತಿಗೆ ತೊಂದರೆಯಾಗುತ್ತಿರಲಿಲ್ಲ. ಹಾಗಾಗಿ ಆ ತರಹ ಜೀನ್ ಇಲ್ಲದ ವ್ಯಕ್ತಿಗಳು ಯುರೋಪಿನಲ್ಲಿ ಕ್ರಮೇಣ ಮರಣ ಹೊಂದಿ ದರು. ಹಾಗಾಗಿ ಆ ಜೀನ್ ಇರುವ ವ್ಯಕ್ತಿಗಳ ಸಂಖ್ಯೆ ಮುಂದುವರಿಯಿತು, ವಿಜೃಂಭಿಸಿತು.

ಬ್ರಿಸ್ಟಲ್ ವಿಶ್ವವಿದ್ಯಾಲಯದ ರಸಾಯನಶಾಸದ ಪ್ರಾಧ್ಯಾಪಕ ಪ್ರೊ. ರಿಚರ್ಡ್, ಎವರ್ ಶೆಡ್ ಮತ್ತು ಸಂಗಡಿಗರು ಒಂದು ಅಪರೂಪದ ಅಧ್ಯಯನ ಕೈಗೊಂಡು ‘ನೇಚರ್’ನಲ್ಲಿ ಪ್ರಕಟಿಸಿದ್ದಾರೆ (ಮೇಲೆ ತಿಳಿಸಿದ ಅಧ್ಯಯನ). ಇವರು ಪುರಾತನ ಶೋಧದ ಉತ್ಖನನದ ೫೫೪ ಬೇರೆ ಬೇರೆ ಸ್ಥಳಗಳ 13181 ಮಣ್ಣಿನ ಮಡಕೆಯ ಚೂರುಗಳಲ್ಲಿನ 7000 ಪ್ರಾಣಿಗಳ ಕೊಬ್ಬಿನ ಅಂಶಗಳನ್ನು ಕಲೆಹಾಕಿ ಅಪರೂಪದ ಮಾಹಿತಿಯ ಕಣಜವನ್ನು ಸಂಗ್ರಹಿಸಿದರು. ಎಲ್ಲಿ ಮತ್ತು ಯಾವಾಗ ಹಾಲು ಸೇವಿಸು ತ್ತಿದ್ದರು ಎಂಬುದನ್ನು ಪರಿಶೀಲಿಸುವುದು ಅವರ ಉದ್ದೇಶವಾಗಿತ್ತು. ಸುಮಾರು 9000 ವರ್ಷಗಳಿಗೂ ಮೊದಲೇ ಹಾಲನ್ನು ಯಥೇಚ್ಛವಾಗಿ ಉಪಯೋಗಿಸುತ್ತಿದ್ದರು. ಆದರೆ ಇದು ಕಾಲಕಾಲಕ್ಕೆ ಬೇರೆ ಬೇರೆ ಪ್ರದೇಶಗಳಲ್ಲಿ ಆಗಾಗ ಹೆಚ್ಚಾಗು ತ್ತಿತ್ತು ಮತ್ತು ಕೆಲವೊಮ್ಮೆ ಕಡಿಮೆಯಾಗುತ್ತಿತ್ತು.

ಲಂಡನ್ನಿನ ವಿಶ್ವವಿದ್ಯಾಲಯ ಕಾಲೇಜಿನ ಪ್ರೊ. ಮಾರ್ಕ್ ಥಾಮಸ್ ಬೇರೆ ರೀತಿಯಲ್ಲಿ ಇನ್ನೊಂದು ಅಧ್ಯಯನ ಕೈಗೊಂಡರು. ಇವರು ಪ್ರಾಚೀನ ಯುರೋಪ್ ಮತ್ತು ಏಷ್ಯಾದ 1700 ಜನರಲ್ಲಿ ಹಳೆಯ ಡಿಎನ್‌ಎ ಸರಣಿಗಳ ಮಾದರಿಯನ್ನು ಉಪಯೋಗಿಸಿ ಲ್ಯಾಕ್ಟೇಸ್ ಎನ್‌ಜೈಮ್ ಬಗ್ಗೆ ಸಂಖ್ಯಾಶಾಸದ ಮಾದರಿ ರೂಪಿಸಿ ಅಧ್ಯಯನ ನಡೆಸಿದರು. ಲ್ಯಾಕ್ಟೇಸ್ ಎನ್
ಜೈಮ್ ಬೆಳವಣಿಗೆಯ ಬಗೆಗಿನ ಈವರೆಗಿನ ಮಾಹಿತಿ ತಪ್ಪು ಎಂದು ಅವರಿಗೆ ಕಂಡುಬಂದಿಲ್ಲ.

ಅಂದರೆ ಹಾಲನ್ನು ಹೆಚ್ಚು ಉಪಯೋಗಿಸಿ, ಹಿಂದಿನ ಜನತೆ ಆ ಆಹಾರ ಕ್ರಮವನ್ನು ಕ್ರಮೇಣ ರೂಢಿಸಿಕೊಂಡರು. ಇನ್ನೊಂದು ಮಾಹಿತಿ ಗಮನಿಸಿ. ಪ್ರಸ್ತುತ ಜೀವಂತವಿರುವ 3 ಲಕ್ಷ ಇಂಗ್ಲೆಂಡಿನ ಜನರ ಜೆನೆಟಿಕ್ ಮತ್ತು ವೈದ್ಯಕೀಯ ಮಾಹಿತಿಯು ‘ಯು.ಕೆ. ಬಯೋ ಬ್ಯಾಂಕ್’ ಎಂಬ ಮಾಹಿತಿಯ ಕಣಜದಲ್ಲಿದೆ. ಅದನ್ನು ವಿeನಿಗಳು ವಿವರವಾಗಿ ವಿಶ್ಲೇಷಿಸಿದಾಗ, ಲ್ಯಾಕ್ಟೇಸ್ ಹೊಂದಿದ್ದರೂ ಅಥವಾ ಹೊಂದಿಲ್ಲದಿದ್ದರೂ ಜೀನ್ ಮಟ್ಟದಲ್ಲಿ ಬಹಳ ವ್ಯತ್ಯಾಸ ಕಂಡುಬರಲಿಲ್ಲ.

ತಮ್ಮ ಜೀನ್‌ನಲ್ಲಿ ಲ್ಯಾಕ್ಟೇಸ್ ಹೊಂದಿಲ್ಲದ ವ್ಯಕ್ತಿಗಳು ಸಹಿತ ದೀರ್ಘಕಾಲದ ಆರೋಗ್ಯ ಸಮಸ್ಯೆ ಹೊಂದಿರುವುದು ಈ
ಸಂಶೋಧಕರಿಗೆ ಕಂಡುಬರಲಿಲ್ಲ. ಲ್ಯಾಕ್ಟೋಸ್ ವಿಭಜಿಸುವ ಜೀನ್ ಹೊಂದಿರದಿದ್ದರೂ ಆ ವ್ಯಕ್ತಿ ಆರೋಗ್ಯವಂತನಾಗಿದ್ದರೆ ಆತ
ಬಹಳ ಜಾಸ್ತಿ ಪ್ರಮಾಣದಲ್ಲಿ ಹಾಲು ಸೇವಿಸಿದರೂ ಹೊಟ್ಟೆಯಲ್ಲಿ ಸ್ವಲ್ಪ ಅಸಹಜತೆ ಕಾಣಿಸಿಕೊಳ್ಳಬಹುದು.

ಆದರೆ ಅದೇ ವ್ಯಕ್ತಿ ತೀವ್ರ ಪ್ರಮಾಣದಲ್ಲಿ ಅನಾರೋಗ್ಯ ಪೀಡಿತನಾಗಿದ್ದು ಸರಿಯಾಗಿ ಆಹಾರ ಸೇವಿಸದೆ ಕೃಶಕಾಯದ ವನಾಗಿದ್ದರೆ (malnourished) ಜತೆಯಲ್ಲಿ ಬೇಽಯ ಲಕ್ಷಣ ಇದ್ದರೆ ಅಂತಹ ವ್ಯಕ್ತಿ ಜಾಸ್ತಿ ಹಾಲು ಸೇವಿಸಿದರೆ ಮಾರಣಾಂತಿಕ ಸನ್ನಿವೇಶ ಎದುರಿಸಬೇಕಾಗಬಹುದು. ಬಹುಶಃ ಬಹಳ ಹಿಂದಿನ ವ್ಯಕ್ತಿಗಳು ಅವರು ಬೆಳೆಸಿದ ಬೆಳೆಗಳು
ಸರಿಯಾಗಿ ಬೆಳೆಯದಿದ್ದಾಗ ಹುದುಗು ಬಂದಿರದ, ಲ್ಯಾಕ್ಟೋಸ್ ಪ್ರಮಾಣ ತೀರಾ ಜಾಸ್ತಿ ಇರುವ ಹಾಲನ್ನು ಸೇವಿಸಿರಬೇಕು. ಅಂತಹ ಸಂದರ್ಭದಲ್ಲಿ ಆರೋಗ್ಯ ದೃಷ್ಟಿಯಿಂದ ಅವರು ಅದನ್ನು ಮಾಡಬಾರದಿತ್ತು.

ಜನಸಂಖ್ಯೆ ಕ್ರಮೇಣ ಜಾಸ್ತಿ ಆಗುತ್ತಾ ಬಂದ ಹಾಗೆ ಕಲುಷಿತ ವಾತಾವರಣ ಮತ್ತು ವಸ್ತುಗಳ ಕಾರಣಗಳಿಂದ ಬೇಽಯ ರೀತಿಯ ಕಾಯಿಲೆ ಹೆಚ್ಚಾಗುತ್ತಾ ಬಂದಿತು. ಅಂತಹ ಸಂದರ್ಭಗಳಲ್ಲಿ ಜೀರ್ಣಿಸಿಕೊಳ್ಳಲು ಅಗತ್ಯವಿರುವ ಜೀನ್ ಹೊಂದಿಲ್ಲದ ವ್ಯಕ್ತಿಗಳಲ್ಲಿ ಹಾಲು ಸೇವಿಸಿದರೆ ಅವರಿಗೆ ಅಪಾಯವಾಗುತ್ತಿತ್ತು. ಅಂದರೆ ಅವರ ಆರೋಗ್ಯ ಹದಗೆಡುತ್ತಿತ್ತು. ಹಾಗಾಗಿ ಲ್ಯಾಕ್ಟೇಸ್ ಪರ್ಸಿಸ್ಟೆಂಟ್ ಹೊಂದಿಲ್ಲದ ವ್ಯಕ್ತಿಗಳು ವಿವಾಹವಾಗಿ ಮಕ್ಕಳನ್ನು ಪಡೆಯುವ ಮೊದಲೇ ಮರಣ ಹೊಂದಿದರು.

ಹಾಗಾಗಿ ಆ ರೀತಿಯ ವ್ಯಕ್ತಿಗಳು ಬಹಳಷ್ಟು ಮರಣ ಹೊಂದಿದ ನಂತರ ಲ್ಯಾಕ್ಟೇಸ್ ವಿಭಜಿಸುವ ಜೀನ್ ಹೊಂದಿರುವ ವ್ಯಕ್ತಿಗಳ ಸಂಖ್ಯೆ ಕ್ರಮೇಣ ಜಾಸ್ತಿ ಆಗಿ ಅವರೆಲ್ಲ ಹಾಲನ್ನು ಸೇವಿಸುತ್ತಾ ಬಂದರು. ಪರಿಣಾಮ ಎಂದರೆ ಹಾಲು ಉತ್ತಮ ಪೌಷ್ಟಿಕತೆ
ಹೊಂದಿದ ಆಹಾರವಾಗಿ ರೂಪುಗೊಂಡಿತು.

ಭವಿಷ್ಯದಲ್ಲಿ ನಮ್ಮ ಆಹಾರ ಕ್ರಮ ಹೇಗಿರಬಹುದು? ಸುಮಾರು ಅರವತ್ತು ವರ್ಷಗಳ ಮೊದಲು ಜೆಟ್ಸನ್ಸ್ ಎಂಬ ಆಹಾರ ವಿeನಿ ಭವಿಷ್ಯದಲ್ಲಿ ನಮ್ಮ ಆಹಾರವು ಗುಳಿಗೆಯ ಅಥವಾ ಮಾತ್ರೆಯ ರೂಪಕ್ಕೆ ಸೀಮಿತವಾಗಬಹುದು ಎಂದು ಭವಿಷ್ಯ ನುಡಿದಿದ್ದ.
ಆದರೆ ಆ ಪರಿಸ್ಥಿತಿ ಇನ್ನೂ ಬಂದಿಲ್ಲ. ಮುಂದಿನ 30-40-50 ವರ್ಷಗಳಲ್ಲಿ ನಮ್ಮ ಆಹಾರ ಹೇಗಿರಬಹುದು? ಈ ವಿಷಯದಲ್ಲಿ ತಜ್ಞರ ಅಭಿಪ್ರಾಯಗಳು ಹೇಗಿವೆ? ಕಳೆದ ಆರು ದಶಕಗಳಲ್ಲಿ ವ್ಯವಸಾಯ ಮತ್ತು ಆಹಾರ ಸಂಸ್ಕರಣ ವಿಭಾಗಗಳಲ್ಲಿ ಬಹಳಷ್ಟು
ಕ್ರಾಂತಿಕಾರಕ ಬದಲಾವಣೆಗಳಾಗಿವೆ.

1960ರ ನಂತರ ಪ್ರಪಂಚದ ಜನಸಂಖ್ಯೆ ದುಪ್ಪಟ್ಟಿಗಿಂತ ಜಾಸ್ತಿಯಾಗಿದೆ. ಆಹಾರದ ಉತ್ಪಾದನೆ ಮೂರು ಪಟ್ಟು ಜಾಸ್ತಿ ಯಾಗಿದೆ. ಇದಕ್ಕೆ ಶೇಕಡ ೧೫ರಷ್ಟು ಜಾಸ್ತಿ ಭೂಮಿಯನ್ನು ಮಾತ್ರ ಉಪಯೋಗಿಸಲಾಗಿದೆ. ಇದು ಮೇಲ್ನೋಟಕ್ಕೆ ಬಹಳ ಪ್ರಗತಿದಾಯಕ, ಆಶಾದಾಯಕ ಬೆಳವಣಿಗೆ ಎನಿಸುತ್ತದೆ. ಆದರೆ ಈ ಮಧ್ಯೆ ಭೂಮಿಯ ವಾತಾವರಣ ಮತ್ತು ಪರಿಸರ
ಕೆಟ್ಟಿದೆ. ಜನರ ಆರೋಗ್ಯ ತೊಂದರೆಗೆ ಒಳಗಾಗಿದೆ.

ಜಗತ್ತಿನಾದ್ಯಂತ 300 ಮಿಲಿಯನ್‌ಗಿಂತ ಜಾಸ್ತಿ ಜನರು ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆಗೆ ಒಳಗಾಗಿದ್ದಾರೆ. ಇದು ಮನುಷ್ಯರ ದೈಹಿಕ ಆರೋಗ್ಯದ ಮೇಲೆ ತುಂಬಾ ಪ್ರಭಾವ ಬೀರುವ ಅಂಶ. 1990ರಿಂದ ಈಚೆಗೆ ಕ್ಯಾನ್ಸರ್‌ನಿಂದ ಮರಣ
ಹೊಂದುವರ ಸಂಖ್ಯೆ ಶೇಕಡ 17ರಷ್ಟು ಜಾಸ್ತಿಯಾಗಿದೆ. ಆಹಾರ ಬೆಳೆಯುವ, ಸಂಸ್ಕರಿಸುವ ಮತ್ತು ಸಾಗಿಸುವ ಕ್ರಮಗಳು ಭೂಮಿಯ ವಾತಾವರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ. ಜಗತ್ತಿನ ಹೆಚ್ಚಿನ ದೇಶಗಳ ಜನತೆ ಕಡಿಮೆ ಖರ್ಚಿನ ಜಾಸ್ತಿ ಕ್ಯಾಲೋರಿ ಇರುವ ಆಹಾರ ಸೇವಿಸುತ್ತಿದ್ದಾರೆ.

ಪರಿಣಾಮ ಎಂದರೆ ಮನುಷ್ಯನ ಆರೋಗ್ಯ ವಿವಿಧ ರೀತಿಯಲ್ಲಿ ಹಾಳಾಗುತ್ತಿದೆ. ಮನುಷ್ಯ ಮತ್ತು ಭೂಮಿಯ ಆರೋಗ್ಯವನ್ನು
ಸೂಕ್ತವಾಗಿ ಸರಿಪಡಿಸಲು ತಜ್ಞರು ಮೂರು ವಿಷಯಗಳನ್ನು ಪ್ರತಿಪಾದಿಸುತ್ತಾರೆ: ೧) ಎಲ್ಲ ನಾಗರಿಕರಿಗೂ ನಿರಂತರವಾಗಿ ಒಳ್ಳೆಯ ಗುಣಮಟ್ಟದ ಆಹಾರ ದೊರಕಬೇಕು.
೨) ಆಹಾರ ತಾಂತ್ರಿಕತೆಯ ಆಧುನೀಕರಣ ವಾಗಬೇಕು.
೩) ಆಹಾರವನ್ನು ಔಷಧವಾಗಿ ಉಪಯೋಗಿಸಬೇಕು.

ಈ ಪೈಕಿ, ಆಹಾರವನ್ನು ಔಷಧವಾಗಿ ಉಪಯೋಗಿಸಬೇಕು ಎಂಬ ಅಂಶದ ಬಗ್ಗೆ ಗಮನ ಹರಿಸೋಣ. ನಮ್ಮ ಆಹಾರವು
ಔಷಽಯ ಗುಣ ಹೊಂದಿರಬೇಕು ಎಂಬುದು ಹಳೆಯ ವಿಚಾರ. ಆದರೆ ನಮ್ಮ ಆಧುನಿಕ ಜೀವನದಲ್ಲಿ ಔಷಧವಾಗಬೇಕಾದ
ಆಹಾರ ವಿಷವಾಗಿಯೂ ಪರಿವರ್ತಿತವಾಗುತ್ತಿರುವುದು ದೌರ್ಭಾಗ್ಯ. ರೆಫ್ರಿಜಿರೇಟರ್ ಗಳಲ್ಲಿ ಸಂರಕ್ಷಿಸಿಟ್ಟ/ಸಂಸ್ಕರಿಸಿದ ಆಹಾರ ಸೇವಿಸಿ ತೊಂದರೆಯಾಗುವ ವಿಚಾರವಲ್ಲ ಇದು.

2019ರಲ್ಲಿ ಕೈಗೊಂಡ ಒಂದು ದೊಡ್ಡ ಅಧ್ಯಯನದಲ್ಲಿ ಸರಿಯಾದ ಆಹಾರವಿಲ್ಲದೆ ಜಗತ್ತಿನಲ್ಲಿ ೫ ಜನರಲ್ಲಿ ಒಬ್ಬರ ಮರಣ
ಸಂಭವಿಸುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಅಂದರೆ ಆಹಾರದಲ್ಲಿ ಗುಣಮಟ್ಟದ ಪೋಷಕಾಂಶಗಳು ಇಲ್ಲದಿರುವುದರಿಂದ
ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತಿವೆ. ಅದರ ಪರಿಹಾರವಾಗಿ ಕೊಬ್ಬಿನ ಅಂಶ ಕಡಿಮೆ ಇರುವ, ಪ್ರೋಟೀನ್ ಜಾಸ್ತಿ ಇರುವ ಸರಳ-ಸುಲಭ ಆಹಾರಗಳ ಸೇವನೆಗೆ ತಜ್ಞರು ಶಿಫಾರಸು ಮಾಡುತ್ತಿದ್ದಾರೆ.

ಭಾರತೀಯ ಆಹಾರ ಪದ್ಧತಿ, ಅದರಲ್ಲೂ ಸಾವಯವ ಬೆಳೆಗಳಿಂದ ಕೂಡಿದ ಸಸ್ಯಾಹಾರ, ಬಹಳಷ್ಟು ಪ್ರಮಾಣದ ಉತ್ತಮ ಗುಣಮಟ್ಟದ ಹಣ್ಣುಗಳು ದೇಹವನ್ನು ಆರೋಗ್ಯವಾಗಿಡುತ್ತವೆ ಎಂಬ ಅಂಶವನ್ನು ಪಾಶ್ಚಿಮಾತ್ಯ ಆರೋಗ್ಯ ತಜ್ಞರೂ ಒಪ್ಪುತ್ತಾರೆ.
ಜತೆಯಲ್ಲಿ ಸೂಕ್ತ ರೀತಿಯ ವ್ಯಾಯಾಮ, ದೈಹಿಕ ಶ್ರಮ, ಯೋಗ, ಪ್ರಾಣಾಯಾಮ, ನಿಯಮಿತ ವಾಯುವಿಹಾರ ಅಥವಾ ಜಾಗಿಂಗ್ ಅಥವಾ ಸೈಕಲ್ ಸವಾರಿ- ಇವೆ ಆರೋಗ್ಯ ಮತ್ತು ಸಶಕ್ತ ಶ್ರಮತೆ ಹೊಂದಲು ಅವಶ್ಯಕ ಎಂಬುದು ತಜ್ಞರ
ಅನಿಸಿಕೆ.