Ganesh Bhat Column: ಆರ್ಥಿಕತೆಯ ನಿರ್ಮಾತೃಗಳನ್ನು ಗುರಿಯಾಗಿಸುವುದು ಎಷ್ಟು ಸರಿ ?
ಭಾರತದಲ್ಲಿ ರಾಜಕೀಯ ಕಾರಣಗಳಿಂದ ಆಯ್ದ ಉದ್ಯಮಿಗಳನ್ನು ಗುರಿಯಾಗಿಸುವ ಪರಿಪಾಠ 2014ರಲ್ಲಿ ಆರಂಭ ವಾಯಿತು. ಗೌತಮ್ ಅದಾನಿ ಹಾಗೂ ಮುಖೇಶ್ ಅಂಬಾನಿ ಕಾಂಗ್ರೆಸ್, ಕಮ್ಯುನಿಸ್ಟ್, ಟಿಎಂಸಿ ಮೊದಲಾದ ವಿರೋಧ ಪಕ್ಷಗಳ ದಾಳಿಗೆ ಗುರಿಯಾದ ಪ್ರಮುಖ ಉದ್ಯಮಿ ಗಳು. ಇದಕ್ಕೆ ಕಾರಣ ಇವರುಗಳು ಬಿಜೆಪಿಗೆ ನೆರವು ನೀಡುತ್ತಿದ್ದಾರೆ ಎನ್ನುವ ನಿರಾಧಾರ ನಂಬಿಕೆ.
-
ಯಕ್ಷಪ್ರಶ್ನೆ
ಗಣೇಶ್ ಭಟ್, ವಾರಣಾಸಿ
ಭಾರತದ ಉದ್ಯಮಿ, ಭಾರ್ತಿ ಏರ್‌ಟೆಲ್ ಕಂಪನಿಯ ಮುಖ್ಯಸ್ಥ ಸುನಿಲ್ ಭಾರ್ತಿ ಮಿತ್ತಲ್ ಅವರಿಗೆ, ಯುನೈಟೆಡ್ ಕಿಂಗ್‌ಡಮ್ ನ ಅತ್ಯುನ್ನತ ಪುರಸ್ಕಾರವಾದ ‘ನೈಡ್ ಹುಡ್’ ಪ್ರಶಸ್ತಿ ಯನ್ನು ಅಲ್ಲಿನ ರಾಜ ೩ನೇ ಚಾರ್ಲ್ಸ್ ಇತ್ತೀಚೆಗೆ ನೀಡಿ ಗೌರವಿಸಿದರು.
ಸುನಿಲ್ ಭಾರ್ತಿ ಬ್ರಿಟಿಷ್ ಪ್ರಜೆಯಲ್ಲದಿದ್ದರೂ, ಭಾರತ ಮತ್ತು ಬ್ರಿಟನ್ ನಡುವಿನ ವ್ಯಾಪಾರ ಸಂಬಂಧವನ್ನು ಉತ್ತಮಗೊಳಿಸುವಲ್ಲಿ ಅವರು ವಹಿಸಿದ ಪಾತ್ರವನ್ನು ಗುರುತಿಸಿ, ಈ ಪ್ರಶಸ್ತಿಯೊಂದಿಗೆ ಗೌರವಿಸಲಾಯಿತು. ‘ನೈಡ್ ಹುಡ್’ ಪ್ರಶಸ್ತಿಯನ್ನು 2014ರಲ್ಲಿ ರತನ್ ಟಾಟಾ ಅವರಿಗೂ ನೀಡಲಾಗಿತ್ತು. ಬ್ರಿಟನ್ ತನ್ನ ನೆಲದ ಉದ್ಯಮಿಗಳನ್ನ ಲ್ಲದೆ, ಅನ್ಯದೇಶಗಳ ಉದ್ಯಮಿಗಳನ್ನೂ ಗೌರವಿಸುತ್ತದೆ.
ಅಮೆರಿಕ ಸರಕಾರವೂ ತನ್ನ ಉದ್ಯಮಿಗಳನ್ನು ಬಹುವಾಗಿ ಆದರಿಸುತ್ತದೆ. ಮೈಕ್ರೋಸಾಫ್ಟ್-ನ ಸಂಸ್ಥಾಪಕ ಬಿಲ್ ಗೇಟ್ಸ್‌ಗೆ ಅಲ್ಲಿನ ಅತ್ಯುನ್ನತ ಪ್ರಶಸ್ತಿಯಾದ ‘ಅಮೆರಿಕನ್ ಪ್ರೆಸಿಡೆಂಟ್ ಮೆಡಲ್’ ದಕ್ಕಿರುವುದು ಇದಕ್ಕೆ ಸಾಕ್ಷಿ. ಒಟ್ಟಿನಲ್ಲಿ, ವಿಶ್ವದ ಬಹುತೇಕ ದೇಶಗಳು ಆರ್ಥಿಕತೆ ಯ ನಿರ್ಮಾತೃಗಳಾದ ಉದ್ಯಮಪತಿಗಳನ್ನು ಗೌರವಿಸುತ್ತವೆ.
ಏಕೆಂದರೆ, ಅವರ ಸಾರಥ್ಯದ ಉದ್ಯಮಗಳು ದೇಶದ ಆರ್ಥಿಕತೆಯನ್ನು ಉತ್ತಮ ಗೊಳಿಸು ತ್ತವೆ, ಹೊಸ ತಂತ್ರಜ್ಞಾನವನ್ನು ಒದಗಿಸುತ್ತವೆ, ಜತೆಗೆ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತವೆ. ಆದರೆ ಭಾರತದಲ್ಲಿ ಉದ್ಯಮಿಗಳ ಬಗ್ಗೆ ಮೊದಲಿನಿಂದಲೂ ಒಂದು ರೀತಿಯ ನಕಾರಾತ್ಮಕ ಭಾವನೆಯೇ ಇದೆ!
ಇದನ್ನೂ ಓದಿ: Ganesh Bhat Column: ಅದೃಷ್ಟದ ಆಟದಲ್ಲಿ ಪಾತಾಳಕ್ಕೆ ಕುಸಿದವರು
ನೆಹರು ಕಾಲದಿಂದಲೂ ಭಾರತದ ಸರಕಾರಗಳು ಸಮಾಜವಾದಕ್ಕೆ ಜೋತು ಬಿದ್ದು ಖಾಸಗಿ ಕಂಪನಿಗಳನ್ನು ರಾಷ್ಟ್ರೀಕರಣಗೊಳಿಸುತ್ತಲೇ ಹೋದವು. ಬ್ಯಾಂಕಿಂಗ್, ಇನ್ಷೂರೆನ್ಸ್, ತೈಲ, ಕಲ್ಲಿದ್ದಲು ಗಣಿಗಾರಿಕೆ, ವಿಮಾನಯಾನ ಹೀಗೆ ಒಂದರ ಹಿಂದೆ ಒಂದರಂತೆ ಖಾಸಗಿ ಉದ್ಯಮ ಕ್ಷೇತ್ರಗಳು ‘ಸರಕಾರೀಕರಣ’ಗೊಂಡವು. ಉದ್ಯಮಿಗಳನ್ನು ಉತ್ತೇಜಿಸುವುದರ ಬದಲಿಗೆ ಅವರನ್ನು ಸಂಶಯದಿಂದ ನೋಡಲಾಗುತ್ತಿತ್ತು.
ಲೈಸೆನ್ಸ್‌ರಾಜ್ ವ್ಯವಸ್ಥೆಯನ್ನು ಬಲಗೊಳಿಸಿ ಪ್ರತಿಯೊಂದು ಆರ್ಥಿಕ ಚಟುವಟಿಕೆಯ ಮೇಲೂ ನಿರ್ಬಂಧಗಳನ್ನು ಹೇರಲಾಯಿತು. ಸರಕಾರವು ಶೇ.97.5ರಷ್ಟು ಕಾರ್ಪೊರೇಟ್ ಟ್ಯಾಕ್ಸ್ ಹಾಗೂ ಆದಾಯ ತೆರಿಗೆಗಳನ್ನು ಹೇರಿತ್ತು. ಬಂಡವಾಳ ಹೂಡಿಕೆಯನ್ನು ಅಪರಾಧ ದಂತೆ ಕಾಣಲಾಗುತ್ತಿತ್ತು. ಇಂಥ ಪರಿಸ್ಥಿತಿಯಲ್ಲಿ ಉದ್ಯಮಗಳು ಅಥವಾ ಉದ್ಯಮಶೀಲತೆ ಯು ಬೆಳೆಯುವುದಾದರೂ ಹೇಗೆ? ನಂತರದ ದಿನಗಳಲ್ಲಿ ದೇಶದಲ್ಲಿ ಆರ್ಥಿಕ ಸುಧಾರಣೆಯ ಶಕೆ ಆರಂಭವಾದರೂ ಕೇರಳ ಹಾಗೂ ಪಶ್ಚಿಮ ಬಂಗಾಳಗಳಂಥ ರಾಜ್ಯಗಳಲ್ಲಿ ಇಂದಿಗೂ ಉದ್ಯಮ ವಿರೋಧಿ ವಾತಾವರಣವು ಮುಂದುವರಿದಿದೆ.
ಭಾರತದಲ್ಲಿ ರಾಜಕೀಯ ಕಾರಣಗಳಿಂದ ಆಯ್ದ ಉದ್ಯಮಿಗಳನ್ನು ಗುರಿಯಾಗಿಸುವ ಪರಿಪಾಠ 2014ರಲ್ಲಿ ಆರಂಭ ವಾಯಿತು. ಗೌತಮ್ ಅದಾನಿ ಹಾಗೂ ಮುಖೇಶ್ ಅಂಬಾನಿ ಕಾಂಗ್ರೆಸ್, ಕಮ್ಯುನಿಸ್ಟ್, ಟಿಎಂಸಿ ಮೊದಲಾದ ವಿರೋಧ ಪಕ್ಷಗಳ ದಾಳಿಗೆ ಗುರಿಯಾದ ಪ್ರಮುಖ ಉದ್ಯಮಿಗಳು. ಇದಕ್ಕೆ ಕಾರಣ ಇವರುಗಳು ಬಿಜೆಪಿಗೆ ನೆರವು ನೀಡುತ್ತಿದ್ದಾರೆ ಎನ್ನುವ ನಿರಾಧಾರ ನಂಬಿಕೆ.
ನರೇಂದ್ರ ಮೋದಿ ಹಾಗೂ ಬಿಜೆಪಿಯ ಹೆಸರನ್ನು ಕೆಡಿಸಲು ಈ ಎರಡು ಉದ್ಯಮಿಗಳನ್ನು ಮುಂದಿಟ್ಟುಕೊಂಡು ಇಲ್ಲಸಲ್ಲದ ಆರೋಪವನ್ನು ಮಾಡುತ್ತಿವೆ ವಿರೋಧ ಪಕ್ಷಗಳು. 2023ರಲ್ಲಿ, ಭಾರತ ವಿರೋಧಿ ಜಾರ್ಜ್ ಸೋರೋಸ್‌ನಿಂದ ಬೆಂಬಲಿತ ‘ಹಿಂಡೆನ್ಬರ್ಗ್’ ಹೆಸರಿನ ಅಮೆರಿಕದ ಶಾರ್ಟ್ ಸೆಲ್ಲಿಂಗ್ ಸಂಸ್ಥೆಯು, ‘ಅದಾನಿ ಸಮೂಹವು ವಿದೇಶ ದಲ್ಲಿರುವ ತನ್ನ ನಕಲಿ ಸಂಸ್ಥೆಯ ಮೂಲಕ, ಅದಾನಿ ಸಮೂಹದ ಷೇರುಗಳ ಬೆಲೆಯನ್ನು ಕೃತಕವಾಗಿ ಹೆಚ್ಚಿಸಿದೆ’ ಎಂದು ಸುಳ್ಳು ಆರೋಪವನ್ನು ಮಾಡಿತು.
ವಿಪಕ್ಷಗಳು ಈ ವಿಷಯವನ್ನು ಹಿಡಿದು ಪಾರ್ಲಿಮೆಂಟಿನ ಒಳಗೂ ಹೊರಗೂ ಮೋದಿ ಸರಕಾರದ ಮೇಲೆ ಇನ್ನಿಲ್ಲದ ದಾಳಿಯನ್ನು ನಡೆಸಿದವು. ಈ ವಿಷಯವಾಗಿ ಸುಪ್ರೀಂ ಕೋರ್ಟ್ ಹಾಗೂ ‘ಸೆಬಿ’ ತನಿಖೆ ನಡೆಸಿ ಹಿಂಡೆನ್ಬರ್ಗ್ ವರದಿಯು ಸತ್ಯಕ್ಕೆ ದೂರಾದುದು ಎಂದು ತೀರ್ಪು ಕೊಟ್ಟರೂ ವಿಪಕ್ಷಗಳ ಅರೋಪವು ನಿಲ್ಲಲಿಲ್ಲ.
2024ರಲ್ಲಿ ನ್ಯೂಯಾರ್ಕಿನ ನ್ಯಾಯಾಲಯವೊಂದು ಅದಾನಿ ಸಮೂಹವು ಭಾರತದ ಕೆಲವು ರಾಜ್ಯಗಳ ಅಿಕಾರಿಗಳಿಗೆ ಸುಮಾರು 2000 ಕೋಟಿ ರುಪಾಯಿಗಳಷ್ಟು ಲಂಚ ಕೊಟ್ಟು ಸೋಲಾರ್ ಪ್ರಾಜೆP ಅನ್ನು ಪಡೆದುಕೊಂಡಿದೆ ಎಂದು ಆರೋಪವನ್ನು ಮಾಡಿ ಗೌತಮ್ ಅದಾನಿ, ಅವರ ತಮ್ಮನ ಮಗ ಸಾಗರ್ ಅದಾನಿ ಹಾಗೂ ಇತರ ೬ ಮಂದಿಯ ಮೇಲೆ ಅರೆ ವಾರಂಟ್ ಹೊರಡಿಸಿದಾಗ ಭಾರತದಲ್ಲಿ ವಿರೋಧ ಪಕ್ಷಗಳ ಗಲಾಟೆ ಮತ್ತೊಮ್ಮೆ ಮುಗಿಲು ಮುಟ್ಟಿತ್ತು. ಆದರೆ ಆರೋಪವನ್ನು ಸಾಬೀತುಪಡಿಸುವ ಯಾವುದೇ ಸಾಕ್ಷಿಯನ್ನು ಕೊಡಲು ಇದುವರೆಗೆ ಅಮೆರಿಕಕ್ಕೆ ಸಾಧ್ಯವಾಗಿಲ್ಲ.
ಜಾರ್ಜ್ ಸೋರೊಸ್‌ಗೆ ಅಮೆರಿಕದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಜೋ ಬೈಡೆನ್ ಸರಕಾರದ ಮೇಲೆ ಸಾಕಷ್ಟು ಹಿಡಿತವಿತ್ತು. ಜೋ ಬೈಡೆನ್ ಅವರು ಜಾರ್ಜ್ ಸೋರೋಸ್‌ಗೆ ಆ ವರ್ಷದ ಜನವರಿ ತಿಂಗಳಲ್ಲಿ ಅಮೆರಿಕದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ‘ಪ್ರೆಸಿಡೆನ್ಷಿ ಯಲ್ ಮೆಡಲ್ ಆಫ್ ಫ್ರೀಡಂ ಅವಾರ್ಡ್’ ಅನ್ನು ಪ್ರದಾನ ಮಾಡಿದ್ದರು.
ಹೀಗಾಗಿ ಜೋ ಭೈಡೆನ್‌ರಿಂದ ನೇರವಾಗಿ ನಿಯುಕ್ತರಾದ ನ್ಯೂಯಾರ್ಕಿನ ಜಡ್ಜ್ ಅದಾನಿ ಯವರ ವಿರುದ್ಧ ಅರೆ ವಾರೆಂಟ್ ಹೊರಡಿಸಿರುವುದರಲ್ಲಿ ವಿಶೇಷವೇನೂ ಇರಲಿಲ್ಲ. ಇತ್ತೀಚೆಗೆ ಅಮೆರಿಕದ ‘ವಾಷಿಂಗ್ಟನ್ ಪೋ’ ಪತ್ರಿಕೆಯಲ್ಲಿ ‘ಅದಾನಿ ಸಮೂಹದ ಕುಸಿತ ವನ್ನು ತಡೆಗಟ್ಟಲು ಅದರ ಮೇಲೆ ೩.೯ ಬಿಲಿಯನ್ ಡಾಲರ್‌ಗಳಷ್ಟು ಹೂಡಿಕೆ ಮಾಡಲು ಭಾರತ ಸರಕಾರವು ಎಲ್‌ಐಸಿಗೆ ಸೂಚನೆ ನೀಡಿತ್ತು’ ಎಂಬ ಲೇಖನವು ಪ್ರಕಟವಾಗಿತ್ತು.
ಮತ್ತೊಮ್ಮೆ ಶುರುವಾಯಿತು ವಿಪಕ್ಷಗಳ ಕಲರವ. ಸುಮಾರು 41 ಲಕ್ಷ ಕೋಟಿ ರುಪಾಯಿ ಮೌಲ್ಯದ ಎಲ್ಐಸಿಯು ಅದಾನಿಯಲ್ಲಿ ಹೂಡಿಕೆ ಮಾಡಿದ ಮೊತ್ತ 33000 ಕೋಟಿ ರುಪಾಯಿಗಳು. ಈ ಮೊತ್ತವು ಎಲ್‌ಐಸಿಯ ಮೌಲ್ಯದ ಶೇ.೧ರಷ್ಟು ಹೂಡಿಕೆಗಿಂತಲೂ ಕಡಿಮೆ. ಆದರೂ ಎಲ್ಐಸಿಯು ತಾನು ಅದಾನಿಯಲ್ಲಿ ಮಾಡಿದ ಹೂಡಿಕೆಯ ಎರಡು ಪಟ್ಟು ಆದಾಯವನ್ನು ಗಳಿಸಿದೆ.
ಇತ್ತೀಚೆಗೆ ಕೇಂದ್ರ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯುನಿಕೇಶನ್ ಮಂತ್ರಿ ಅಶ್ವಿನಿ ವೈಷ್ಣವ್ ಅವರು ‘ಆತ್ಮನಿರ್ಭರ್ ಭಾರತ್’ ಯೋಜನೆಯ ಭಾಗವಾಗಿ ವಿದೇಶಿ ಮೂಲದ ಮೈಕ್ರೋ ಸಾಫ್ಟ್, ವರ್ಡ್, ಎಕ್ಸೆಲ್, ಪವರ್ ಪಾಯಿಂಟ್‌ಗಳ ಬದಲು ಭಾರತದ ಕಂಪನಿಯಾದ ‘ಝೋಹೋ ಸಾಫ್ಟ್ ವೇರ್’ನ ಉತ್ಪನ್ನಗಳನ್ನು ಬಳಸುವ ತೀರ್ಮಾನವನ್ನು ಕೈಗೊಂಡರು. ಗೃಹ ಸಚಿವ ಅಮಿತ್ ಶಾ ಅವರು, ಇನ್ನು ಮುಂದೆ ‘ಝೊಹೋ ಇ-ಮೇಲ್’ ಅನ್ನು ಬಳಸುವುದಾಗಿ ಘೋಷಿಸಿದರು.
ಜತೆಗೆ ಕೇಂದ್ರ ಸರಕಾರದ ಎಲ್ಲಾ ಕಚೇರಿಗಳಲ್ಲಿ ಗೂಗಲ್ ಕಂಪನಿಯ ಇ-ಮೇಲ್ ಬದಲು ‘ಝೋಹೋ ಇ-ಮೇಲ್’ ಅನ್ನು ಬಳಸಲು ಸೂಚನೆ ನೀಡಲಾಯಿತು. ಕೇಂದ್ರ ಸಚಿವ ರೆಲ್ಲರೂ ವಾಟ್ಸಾಪ್‌ನಿನಿಂದ ಆರಾಟ್ಟೈಗೆ ಬದಲಾಗುತ್ತಿದ್ದೇವೆ ಎಂದು ಘೋಷಿಸಿದರು ಆಗ ಶುರುವಾಯಿತು ನೋಡಿ ವಿಪಕ್ಷ ಬೆಂಬಲಿತ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳ ಗೋಳಾಟ.
‘ಝೋಹೋದಲ್ಲಿ ಮಾಹಿತಿಗಳು ಸುರಕ್ಷವಾಗಿರುತ್ತವೆ ಎಂಬುದಕ್ಕೆ ಏನು ಖಾತರಿಯಿದೆ? ಇದು ಡಿಜಿಟಲ್ ಸಾರ್ವಭೌಮತೆಯೋ ಅಥವಾ ಶರಣಾಗತಿಯೋ?’ ಇಂಥ ಪ್ರಶ್ನೆಗಳು ಬಂದವು. ಆದರೆ ಇಂದು ಝೋಹೋದ ಬಗ್ಗೆ ಪ್ರಶ್ನಿಸುತ್ತಿರುವ ಇವರಾರೂ ಗೂಗಲ್, ಮೈಕ್ರೋಸಾಫ್ಟ್ ಗಳನ್ನು ಅಳವಡಿಸಿಕೊಳ್ಳುವಾಗ ಮಾಹಿತಿ ಸುರಕ್ಷತೆಯ ಬಗ್ಗೆ, ಡಿಜಿಟಲ್ ಸಾರ್ವಭೌಮತೆಯ ಬಗ್ಗೆ ಪ್ರಶ್ನೆಗಳನ್ನೆತ್ತಿರಲಿಲ್ಲ.
ಝೋಹೋದ ಸ್ಥಾಪಕರಾದ ಶ್ರೀಧರ್ ವೆಂಬು ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಿದ್ಧಾಂತದ ಬಗ್ಗೆ ಒಲವನ್ನು ವ್ಯಕ್ತಪಡಿಸಿರುವುದರಿಂದ ಝೋಹೋ ಇಂದು ವಿಪಕ್ಷಗಳಿಗೆ ಸಹ್ಯವಾಗಿಲ್ಲ ಎಂಬ ವಿಷಯವು ಗುಟ್ಟಾಗಿ ಉಳಿದಿಲ್ಲ. ಅಂಬಾನಿ-ಅದಾನಿಯವರಂಥ ಉದ್ಯಮಿಗಳು ಜನರ ರಕ್ತವನ್ನು ಹೀರುತ್ತಿzರೆ ಎಂಬಂತೆ ವಿಪಕ್ಷಗಳು ಹಾಗೂ ಅವರ ಬೆಂಬಲಿಗರು ಬಿಂಬಿಸುತ್ತಿದ್ದಾರೆ.
ಆದರೆ ಉದ್ಯಮಗಳು ದೇಶವನ್ನು ತಾಂತ್ರಿಕವಾಗಿ ಸ್ವಾಯತ್ತಗೊಳಿಸುತ್ತಿವೆ, ದೇಶದ ಮೂಲ ಭೂತ ಸೌಕರ್ಯವನ್ನು ಹೆಚ್ಚಿಸುತ್ತಿವೆ, ದೇಶದ ಆರ್ಥಿಕತೆಯ ಅಭಿವೃದ್ಧಿಗೆ ಕೊಡುಗೆ ಯನ್ನು ನೀಡುತ್ತಿವೆ, ಜನರಿಗೆ ಉದ್ಯೋಗಗಳನ್ನು ಕೊಡುತ್ತಿವೆ. ರಿಲಾಯ ಕಂಪನಿಯು ಜಿಯೋ ಫೋನ್ ನೆಟ್‌ವರ್ಕ್ ಅನ್ನು ಆರಂಭಿಸಿ ಜನರಿಗೆ ಅಗ್ಗದ ಇಂಟರ್ನೆಟ್ ಒದಗಿಸಿತು.
ದೇಶೀಯವಾಗಿ ೪ ಹಾಗೂ ೫ ಜಿ ತಂತ್ರಜ್ಞಾನವನ್ನು ಅಭಿವೃದ್ಧಿಗೊಳಿಸಿತು. ಇದೀಗ ‘೬ ಜಿ’ಯನ್ನೂ ಅಭಿವೃದ್ಧಿ ಪಡಿಸುತ್ತಿದೆ. ಅದಾನಿ ಸಂಸ್ಥೆಯು ದೇಶೀಯವಾಗಿ ಸೋಲಾರ್ ಪ್ಯಾನಲ್‌ಗಳನ್ನು ಅಭಿವೃದ್ಧಿಗೊಳಿಸಿ ಚೀನಾದ ಮೇಲಿನ ಅವಲಂಬನೆಯನ್ನು ತಗ್ಗಿಸಿದೆ.
ಉತ್ತಮ ಗುಣಮಟ್ಟದ ವಿಮಾನ ನಿಲ್ದಾಣಗಳು ಹಾಗೂ ಬಂದರುಗಳನ್ನು ನಿರ್ಮಿಸಿ ದೇಶದ ವ್ಯಾಪಾರ-ವಹಿವಾಟು, ಆಯಾತ-ನಿರ್ಯಾತಗಳಿಗೆ ಪೂರಕವಾದ ವಾತಾವರಣವನ್ನು ಕಲ್ಪಿಸಿದೆ. ಅದಾನಿ ಸಮೂಹವು ಕೇರಳದಲ್ಲಿ ನಿರ್ಮಿಸಿದ ವಿಳಿಂಜಂ ಬಂದರು ಜಗತ್ತಿನ ಅತೀ ದೊಡ್ಡ ಕಂಟೈನರ್ ಹಡಗುಗಳನ್ನು ನಿರ್ವಹಿಸುವಷ್ಟು ಸಮರ್ಥವಾಗಿದೆ.
ಅದಾನಿ ಸಂಸ್ಥೆಯೊಂದೇ ಕಳೆದ ವರ್ಷ ದೇಶದ ಮೂಲಭೂತ ಸೌಕರ್ಯಗಳಲ್ಲಿ ಶೇ.೯ ರಷ್ಟನ್ನು ನಿರ್ಮಿಸಿದೆ ಎಂದರೆ ದೇಶದ ಅಭಿವೃದ್ಧಿಯಲ್ಲಿ ಆ ಸಂಸ್ಥೆಯು ವಹಿಸುತ್ತಿರುವ ಪಾತ್ರವನ್ನು ನಾವು ಅರ್ಥಮಾಡಿಕೊಳ್ಳಬಹುದು.
ಟಾಟಾ, ಅಂಬಾನಿ, ಅದಾನಿ, ಝೋಹೋ, ಬಯೋಕಾನ್ ನಂಥ ಕಂಪನಿಗಳು ದೇಶದ ಅಭಿವೃದ್ಧಿಗೆ ಕೊಡುತ್ತಿರುವ ಕೊಡುಗೆ ಮಹತ್ತರವಾದುದು. ಇಂಥವರನ್ನು ರಾಜಕೀಯ ಕಾರಣಕ್ಕೋಸ್ಕರ ಗುರಿಯಾಗಿಸುವ ಕೆಲಸವನ್ನು ವಿಪಕ್ಷಗಳು ಮಾಡಬಾರದು. ಕರ್ನಾಟಕದ ಒಟ್ಟು ಜಿಡಿಪಿಯ ಶೇ.44ರಷ್ಟು ಬರುವುದು ಬೆಂಗಳೂರಿನಿಂದಲೇ ಎಂದರೆ ಉದ್ಯಮಗಳು ರಾಜ್ಯಗಳ ಹಾಗೂ ದೇಶದ ಅಭಿವೃದ್ಧಿಯಲ್ಲಿ ವಹಿಸುತ್ತಿರುವ ಪಾತ್ರವನ್ನು ಅರ್ಥ ಮಾಡಿ ಕೊಳ್ಳಬಹುದು.
ಹೀಗಾಗಿ ಸರಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಒಂದಿಷ್ಟು ಸೂಕ್ಷ್ಮ ಪ್ರಜ್ಞೆ ಯನ್ನು ಬೆಳೆಸಿಕೊಂಡು ಉದ್ಯಮಗಳ ಹಾಗೂ ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕ ವಾದ ವಾತಾವರಣ, ಮೂಲಭೂತ ಸೌಕರ್ಯಗಳನ್ನು ನಿರ್ಮಿಸಿ ಕೊಡಬೇಕು. ದೇಶದ ಸಂಪತ್ತಿನ ನಿರ್ಮಾಪಕರಾದ ಔದ್ಯಮಿಕ ನಾಯಕರು ವ್ಯಕ್ತಪಡಿಸುವ ಕಳಕಳಿಯನ್ನು ಅರ್ಥಮಾಡಿ ಕೊಂಡು ಅದಕ್ಕೆ ಸ್ಪಂದಿಸಬೇಕೇ ವಿನಾ, ಅವರನ್ನು ಬೆದರಿಸಿ, ಗದರಿಸಿ, ಸುಮ್ಮನೆ ಕೂರಿಸುವ ಮಟ್ಟಕ್ಕೆ ಸರಕಾರದ ಪ್ರತಿನಿಧಿಗಳು ಇಳಿಯಬಾರದು...
(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)