Tuesday, 10th September 2024

ನೀರೆಂಬ ಅಮೃತವನ್ನು ಬಳಸುವ ಕಲೆ

ನೀರು ಮತ್ತು ನಾವು

ನಾಗರಾಜ ಜಿ.ನಾಗಸಂದ್ರ

ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಜೀವಿಗೂ ಗಾಳಿ, ನೀರು ಮತ್ತು ಆಹಾರ ಅತ್ಯಗತ್ಯ. ಗಾಳಿ ಇಲ್ಲದೆ ಜೀವಿಯೂ ಕೆಲ ನಿಮಿಷಗಳ ಕಾಲವೂ ಬದುಕಲು
ಸಾಧ್ಯವಾಗುವುದಿಲ್ಲ. ಇನ್ನು ಜೀವಿಗಳ ಅಗತ್ಯಗಳಲ್ಲೊಂದಾದ ನೀರು ಇಲ್ಲದೆ ಒಂದೆರೆಡು ದಿನಗಳಷ್ಟೇ ಬದುಕಲು ಸಾಧ್ಯ.

ಮತ್ತೊಂದು ಅಗತ್ಯವಾದ ಆಹಾರವಿಲ್ಲದೆ ಜೀವಿಯೂ ಕೆಲ ದಿನಗಳಷ್ಟ ಬದುಕಬಹುದಷ್ಟೆ. ಆದ್ದರಿಂದಲೆ ಇವುಗಳನ್ನು ಜೀವಿಗಳ ಪ್ರಾಥಮಿಕ ಅಗತ್ಯಗಳೆನ್ನುವುದು. ಇವುಗಳಲ್ಲಿ ಯಾವುದಾದರು ಒಂದು ಸಿಗಲಿಲ್ಲವೆಂದರೂ ಆ ಜೀವಿ ಅವಸಾನವಾಗುತ್ತದೆ. ಎಲ್ಲ ಜೀವಿಗಳಿಗೂ ಅಗತ್ಯವಾದ ಇವುಗಳನ್ನು ಮನುಷ್ಯ ತನ್ನ ದುರಾಸೆಯ ಫಲವಾಗಿ ತನಗಿಷ್ಟ ಬಂದಂತೆ ಬಳಸಿಕೊಳ್ಳುತ್ತಾ ಪರಿಸರದ ಮೇಲೆ ತನ್ನ ಕರಾಳ ಹಸ್ತ ಚಾಚಿದ್ದಾನೆ. ಇದರಿಂದ ಎಲ್ಲವನ್ನು ತನ್ನಿಷ್ಟದಂತೆ ಬಳಸುವ
ಮೂಲಕ ಕಲುಷಿತಗೊಳಿಸಿ ಎಲ್ಲ ಜೀವಿಗಳಿಗೂ ಸಂಕಷ್ಟ ತಂದೊಡ್ಡುತ್ತಿದ್ದಾನೆ.

ಜೀವಿಗಳ ಅಗತ್ಯಗಳಲ್ಲೊಂದಾದ ನೀರು ಭೂಮಿಯಲ್ಲಿ ಶೇಕಡ ೭೧ರಷ್ಟು ಇದ್ದರೂ ಅದರಲ್ಲಿ ಉಪಯೋಗ ಯೋಗ್ಯವದದ್ದು ಶೇಕಡ ೧.೨ರಷ್ಟು ಮಾತ್ರ. ಉಳಿದ ಅಗಾಧವಾದ ಜಲ ರಾಶಿ ಸಮುದ್ರಗಳಲ್ಲಿ ಶೇಖರಿಸಲ್ಪಟ್ಟಿರುತ್ತದೆ. ಅದು ಅಽಕ ಪ್ರಮಾಣದ ಲವಣಗಳಿಂದ ಕೂಡಿರುವುದರಿಂದ ನಿತ್ಯ ಬಳಕೆಗೆ ಉಪಯುಕ್ತವಾಗಿಲ್ಲ. ಇನ್ನು ಇಂದು ವಿಶ್ವಾದ್ಯಂತ ೭೮೮.೮೪ ಕೋಟಿ ಜನಸಂಖ್ಯೆ ಹರಡಿದೆ. ಇಷ್ಟು ದೊಡ್ಡ ಗಾತ್ರದ ಜನಸಂಖ್ಯೆಗೆ ಅಷ್ಟೇ ನೀರಿನ ಅಗತ್ಯವಿರುತ್ತದೆ. ನೀರು ಕೇವಲ
ಮನುಷ್ಯ ಜೀವಿಗೆ ಮಾತ್ರವಲ್ಲದೆ ಭೂಮಿಯಲ್ಲಿ ಜೀವಿಸುತ್ತಿ ರುವ ಪ್ರತಿಯೊಂದು ಜೀವಿಗೂ ಅತ್ಯಗತ್ಯ. ಇಷ್ಟು ದೊಡ್ಡ ಪ್ರಮಾಣದ ಜೀವ ರಾಶಿಗೆ ದೊರೆಯುತ್ತಿರು ವುದು ಅತ್ಯಲ್ಪ ನೀರು ಮಾತ್ರ.

ಇಂತಹ ಅಮೂಲ್ಯವಾದ ನೀರನ್ನು ಮೂಂದಿನ ಪೀಳಿಗೆಗೂ ದೊರೆಯುವಂತೆ ರಕ್ಷಿಸಬೇಕಾದದ್ದು ನಮ್ಮೇಲ್ಲರ ಕರ್ತವ್ಯ. ಜೀವರಾಶಿಗೆ ಅಮೂಲ್ಯವಾದ ನೀರನ್ನು ಸಂರಕ್ಷಿಸಬೇಕಾದ ನಾವೇ ಹಾಳುಮಾಡುತ್ತಿರುವುದು ವಿಪರ್ಯಾಸ. ಇಂದು ಜಲ ಮೂಲಗಳಾದ ಸಾಗರ, ಸಮುದ್ರ, ಸರೋವರ, ಕೆರೆ, ಕಟ್ಟೆ, ನದಿ ಮತ್ತು ಬಾವಿಗಳಲ್ಲಿನ ನೀರನ್ನು ನಮ್ಮ ಬೇಜವಬ್ದಾರಿತನದಿಂದ ನಾವೇ ಹಾಳು ಮಾಡುತ್ತಿದ್ದೇವೆ. ಅದರಲ್ಲೂ ಪ್ರವಾಸ ಮೋಜು ಮಸ್ತಿಗಳ ಹೆಸರಲ್ಲಿ ನೀರಿನ ಮೂಲಗಳ
ಮೇಲೆ ಮಾಡುತ್ತಿರುವ ದೌರ್ಜನ್ಯ ಅಷ್ಟಿಷ್ಟಲ್ಲ. ಕೆಲವೇ ವರ್ಷಗಳ ಹಿಂದೆ ಭಾರತದ ಬಹುತೇಕ ಹಳ್ಳಿಗಳಲ್ಲಿ ಕೆರೆ ಮತ್ತು ನದಿ ನೀರನ್ನು ತಮ್ಮ ನಿತ್ಯ ಬಳಕೆಗೆ ಬಳಸುತ್ತಿದ್ದರು.

ಆದರೆ ಇಂದು ಅದೇ ಕೆರೆ ಮತ್ತು ನದಿಗಳ ನೀರು ಅಡುಗೆ ಯಂತಹ ಕಾರ್ಯಕ್ಕಿರಲಿ ನಿತ್ಯ ಕರ್ಮಗಳಿಗೂ ಬಳಸಲು ಆಗದಷ್ಟು ಕೆಡಿಸಿದ್ದೇವೆ. ಇದೇಲ್ಲೂ ಬುದ್ದಿಜೀವಿ ಅನಿಸಿಕೊಂಡಿರುವ ಮಾನವ ಪಕೃತಿಯ ಮೇಲೆ ಮಾಡುತ್ತಿರುವ ಹಲ್ಲೆ. ಪುಣ್ಯ ಕ್ಷೇತ್ರಗಳಿಗೆ ಬೇಟಿ ನೀಡಿದಾಗ ನದಿಗಳಲ್ಲಿ ಸ್ನಾನ ಮಾಡುವುದು ಹಿಂದೂಗಳ ಸಂಪ್ರದಾಯ. ಇದನ್ನು ಯಾರೊಬ್ಬರೂ ವಿರೋಽಸಲಾರರು. ಆದರೆ ಸ್ನಾನದ ಹೆಸರಿನಲ್ಲಿ ಮಾಡುವ ಕೃತ್ಯಗಳಿಂದ ಬಹುತೇಕ ನದಿಗಳು ಬಳಕೆ ಯೋಗ್ಯವಲ್ಲದ ಸ್ಥಿತಿ ತಲುಪುತ್ತಿರುವುದು ಮಾತ್ರ ವಿಷಾಧನೀಯ. ಪವಿತ್ರ ಸ್ನಾನಕ್ಕೆಂದು ನದಿಗೆ ಇಳಿಯುವ ಬಹುತೇಕ ಭಕ್ತಾಽಗಳು ಸೋಪು ಮತ್ತು ಶಾಂಪುಗಳನ್ನು ಬಳಸುತ್ತಾರೆ. ಆ ಮೂಲಕ ಶುದ್ಧವಾಗಿ ಹರಿಯುತ್ತಿರುವ ನೀರಿಗೆ ಒಂದಷ್ಟು ರಾಸಾಯನಿಕಗಳನ್ನು ಸೇರಿಸುವ ಮೂಲಕ ಆ ನೀರನ್ನು ಉಪಯೋಗ ಯೋಗ್ಯವಲ್ಲದ ಹಂತಕ್ಕೆ ತರು
ತ್ತಾರೆ. ಅಲ್ಲಿಗೆ ನಿಲ್ಲದ ಇವರ ದೌರ್ಜನ್ಯ ಶಾಂಪೂವಿನ ಪ್ಲಾಸ್ಟಿಕ್ ಕವರ್‌ಗಳನ್ನು ಅದೇ ನೀರಿನಲ್ಲಿ ಎಸೆಯುತ್ತಾರೆ.

ಇದರಿಂದ ಕಾಣದ ರಾಸಾಯಿನಿಕ ತ್ಯಾಜ್ಯಕ್ಕಿಂತ ಹೆಚ್ಚು ಮಲಿನ ಮಾಡುತ್ತದೆ. ಇಂತಹ ಘನತ್ಯಜ್ಯ ನೀರು ಕಲುಷಿತವಾಗುವುದು ಮಾತ್ರವಲ್ಲದೆ ಜಲವಾಸಿಗಳಾದ ಮೀನು, ಕಪ್ಪೆ, ಏಡಿ, ಹಾವು ಗಳಂತಹ ಜೀವಿಗಳಿಗೆ ಮೃತ್ಯುಕೂಪಗಳಾಗಿ ಪರಿಣಮಿಸುತ್ತವೆ. ಇನ್ನು ಕೆಲವೆಡೆ ಉಡುಪುಗಳನ್ನು ನದಿಗೆ ಎಸೆಯುವ ಮೂಲಕ
ನದಿಗಳನ್ನು ಮತ್ತಷ್ಟು ವಿರೂಪಗೊಳಿಸುತ್ತಿದ್ದೇವೆ. ಆದ್ದರಿಂದಲೇ ಇಂದು ಬಹುತೇಕ ನದಿಗಳು ವಿಷಮಯ ವಾಗುತ್ತಿವೆ.

ಮನುಷ್ಯ ತನ್ನ ನಿತ್ಯ ಬಳಕೆಯ ಮೂಲಕ ಮಾತ್ರ ನೀರನ್ನು ಕಲುಷಿತ ಮಾಡುತ್ತಿಲ್ಲ. ಬದಲಿಗೆ ನೀರಿ ಮೂಲಗಳ ಬಳಿ ಕಾರ್ಖಾನೆಗಳನ್ನು ಸ್ಥಾಪಿಸುವ ಮೂಲಕ ಅದರಲ್ಲಿ ಉತ್ಪತ್ತಿಯಾಗುವ ಮಲಿನಕಾರಕ ರಾಸಾಯನಿಕ ಹಾಗೂ ಘನ ತ್ಯಾಜ್ಯಗಳನ್ನು ನೀರಿಗೆ ಬಿಡುವರು. ಆ ಮೂಲಕ ಸಂಪೂರ್ಣ ನೀರನ್ನು ವಿಷಮಯ ವಾಗಿಸುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಎಂದರೆ ಬೆಂಗಳೂರಿನ ಬೆಳ್ಳಂದೂರು ಕೆರೆ. ಸುತ್ತಲಿನ ಕೈಗಾರಿಕೆಗಳಿಂದ ಬರುವ ರಾಸಾಯನಿಕ ತ್ಯಾಜ್ಯಗಳು ಕೆರೆಯನ್ನು ಸೇರಿ ಮಳೆಗಾಲದಲ್ಲಿ ದೊಡ್ಡ ಪ್ರಮಾಣದ ನೊರೆ ಉಂಟಾಗುತ್ತದೆ. ಆ ನೊರೆ ಕರೆಯ ನೀರಿನ ಹೊರಗಿನ ರಸ್ತೆಯವರೆಗೂ ಹರಡುತ್ತದೆ. ಇದು ಆ ಭಾಗದ ಜನರಲ್ಲಿ ಆತಂಕ ಮೂಡಿಸುವಷ್ಟು ದೊಡ್ಡ ಪ್ರಮಾಣದಲ್ಲಿ ಉಂಟಾಗುತ್ತದೆ.

ಇದು ಉದಾಹರಣೆ ಮಾತ್ರ. ಪ್ರತಿ ವರ್ಷ ನಗರ ಪ್ರದೇಶಗಳ ಕೆರೆಗಳಲ್ಲಿ ಲಕ್ಷಾಂತರ ಮೀನುಗಳ ಮಾರಣಹೋಮ ನಡೆಯುತ್ತಿರುವುದು ನಮ್ಮ ಕಣ್ಣ ಮುಂದಿದವೆ.
ಬಹುತೇಕ ನಗರಗಳು ಹಾಗೂ ಪುಣ್ಯಕ್ಷೇತ್ರಗಳು ನದಿಗಳ ದಡಗಳಲ್ಲೇ ಇರುವುದರಿಂದ ಅಲ್ಲಿನ ನಿತ್ಯ ಬಳಕೆಯ ಮಲಿನವೂ ನದಿಗಳಿಗೆ ಸೇರುತ್ತದೆ. ಇದರಿಂದ ನದಿ ತನ್ನ ಸಹಜತೆಯನ್ನೇ ಕಳೆದುಕೊಳ್ಳುತ್ತದೆ. ಅಂತಹ ನದಿಗಳು ವಿಷಕಾರಿಯಾಗಿ ಬದಲಾಗುತ್ತವೆ. ೧೯೬೮ ರಲ್ಲಿ ಜಪಾನಿನ ಅಗನೊ ನದಿಯ ವಿಷಯುಕ್ತ ನೀರಿನಿಂದ ಆ ಪ್ರದೇಶದಲ್ಲಿ ಕಾಣಿಸಿಕೊಂಡ ಮಿನಿಮಾಟ ರೋಗ ಇದಕ್ಕೊಂದು ಉದಾಹರಣೆ. ನೀರಿನ ಮಾಲಿನ್ಯವೆಂಬುದು ಯುದ್ಧಗಳಿಗಿಂತ ಘೋರ ಪರಿಣಾಮ ಬೀರುತ್ತದೆ. ಈ ಹಿಂದೆ ಭಾರತ ಮಾತ್ರವಲ್ಲದೆ ಜಗತ್ತಿನ ಹಲವು ದೇಶಗಳನ್ನು ಕಾಲರಾ ಕಾಡಿತ್ತು. ಇವೇಲ್ಲವೂ ಮನುಷ್ಯ ಮಾಡಿದ ತಪ್ಪುಗಳಿಂದಲೇ ಕಾಣಿಸಿಕೊಂಡ ಕಾಯಿಲೆಗಳು.

ಪ್ರಪಂಚಾದ್ಯಂತ ೨೫ ಕ್ಕೂ ಹೆಚ್ಚು ದೇಶಗಳು ಇಂದು ನೀರಿನ ಗಂಬೀರ ಸಮಸ್ಯೆ ಎದುರಿಸುತ್ತಿವೆ. ಮೆಕ್ಸಿಕೊ, ಆಸ್ಟ್ರೇಲಿಯಾ, ಆಫ್ಘಾನಿಸ್ಥಾನ, ಇಸ್ರೇಲ್ ಮುಂತಾದ ದೇಶಗಳು ನೀರಿನ ತೀವ್ರ ಅಭಾವ ಎದುರಿಸುತ್ತಿವೆ. ಇದರಿಂದ ಭಾರವೂ ಹೊರತಲ್ಲ. ಅದರಲ್ಲೂ ದಕ್ಷಿಣದ ಪ್ರಸ್ಥಭೂಮಿಯ ಬಹುತೇಕ ಪ್ರದೇಶ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿದೆ. ಈ ಭಾಗದ ನದಿಗಳ ಉಗಮಸ್ಥಾನವಾದ ಪಶ್ಚಿಮ ಘಟ್ಟಗಳಲ್ಲೆ ಕಳೆದ ಕೆಲ ವರ್ಷಗಳಿಂದ ನೀರಿನ ಸಮಸ್ಯೆ ತಲೆದೋರಿದೆ. ಕಳೆದ ಐದಾರು ವರ್ಷಗಳಿಂದ ಸಹ್ಯಾದ್ರಿ ಪರ್ವತ ಶ್ರೇಣಿಯ ಸೆರಗಿನಲ್ಲಿರುವ ಕೊಡಗು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ನೀರಿನ ಅಭಾವ ತಲೆದೋರಿದೆ.

ದಕ್ಷಿಣ ಭಾರತಕ್ಕೆ ನೀರುಣಿಸುವ ಜಿಲ್ಲೆಗಳಲ್ಲೆ ಈ ಪರಿಸ್ಥಿತಿ ಎದುರಾದರೆ ಇನ್ನು ಅಲ್ಲಿಂದ ಬರುವ ನೀರನ್ನೆ ನಂಬಿರುವ ಬಯಲು ಸೀಮೆಯ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಗುವು ದರಲ್ಲಿ ಸಂದೇಹವಿಲ್ಲ. ಈಗಾಗಲೆ ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಸಾವಿರಕ್ಕೂ ಹೆಚ್ಚು ಅಡಿಗಳ ಒಳಗಿನಿಂದ ನೀರನ್ನು ತೆಗೆಯು
ತ್ತಿದ್ದೇವೆ. ಆಳ ಭೂಮಿಯಿಂದ ಹೊರಬರುವ ನೀರಿನಲ್ಲಿ ಪ್ರೋರೊಸಿಸ್ ನಂತಹ ರಾಸಾಯನಿಕಗಳಿರುವುದರಿಂದ ಮೂಳೆ ಸವೆತಗಳಂತಹ ಖಾಯಿಲೆಗಳು ಖಾಣಿಸಿಕೊಳ್ಳುತ್ತಿವೆ. ಅದು ಮಾತ್ರವಲ್ಲದೆ. ಅಂತಹ ನೀರನ್ನು ಬಳಸುವವರು ಚಿಕ್ಕ ವಯಸ್ಸಿನಲ್ಲೆ ಮುದುಕರಾಗುತ್ತಾರೆ. ಬುದ್ದಿಜೀವಿಯಾದ ಮನುಷ್ಯ ಇನ್ನಾದರೂ ಎಚ್ಚೆತ್ತು ಕೊಂಡು ನಮಗೆ ದೊರೆ ಯುವ ಅಲ್ಪ ಪ್ರಮಾಣದ ನೀರನ್ನು ಅಗತ್ಯಕ್ಕನುಸಾರವಾಗಿ ಬಳಸುವ ಮೂಲ ಹಾಗೂ ನೀರಿನ ಮೂಲಗಳನ್ನು ಮಲಿನ
ಗೊಳಿಸದೆ ಮುಂದಿನ ಪೀಳಿಗೆಗೆ ಉಳಿಸ ಬೇಕಾಗಿದೆ. ಅಂತಹ ಗುರುತರವಾದ ಜವಬ್ದಾರಿ ಸರ್ಕಾರಗಳು ಮಾತ್ರವಲ್ಲದೆ. ದೇಶದ ಪ್ರತಿಯೊಬ್ಬ ನಾಗರೀಕರದ್ದೂ ಆಗಿರುತ್ತದೆ.

Leave a Reply

Your email address will not be published. Required fields are marked *