ದಾಸ್ ಕ್ಯಾಪಿಟಲ್
ಟಿ.ದೇವಿದಾಸ್, ಬರಹಗಾರ, ಶಿಕ್ಷಕ
dascapital1205@gmail.com
ಮೋದಿ ಹಾದಿ ತಪ್ಪಿದರೆ? ಯಾಕೆಂದರೆ, ದೇಶವಿಭಜನೆಗೆ ಮೋದಿ ಮುಂದಾಗಲಿಲ್ಲ. ಯಾರ ವಿರುದ್ಧವೂ ಪಿತೂರಿ ಮಸೆಯಲಿಲ್ಲ, ಭಾರತದ ನೆಲವನ್ನು ಬಿಟ್ಟು ಕೊಡಲಿಲ್ಲ, ಆರ್ಮಿಯನ್ನು ನಿವೀರ್ಯ ಗೊಳಿಸಲಿಲ್ಲ, ವಿಚಿತ್ರ ನೀತಿಯನ್ನು ಹೇರಲಿಲ್ಲ, ವಿಶ್ವಸಂಸ್ಥೆಗೋ ಅಥವಾ ಇನ್ಯಾವುದೋ ದೇಶದ ಮುಂದೆ ಭಾರತದ ಸಮಸ್ಯೆಯನ್ನು ಕೊಂಡೊಯ್ಯಲಿಲ್ಲ, ಯಾವ ಸಮುದಾಯದ ಬದುಕನ್ನೂ ನಾಶ ಮಾಡಲೆತ್ನಿಸಲಿಲ್ಲ, ಶೋಷಿತ ರಾಷ್ಟ್ರಗಳಿಗೆ ಸಹಕಾರವನ್ನು ನೀಡದೇ ಇರಲಿಲ್ಲ, ಹಿಂದೂಗಳನ್ನು ಬೆಳೆಯಲು ಬಿಡದೆ ಬಲಿಗೊಡಲಿಲ್ಲ.
ವಂಶಪಾರಂಪರ್ಯ ರಾಜಕಾರಣಕ್ಕೆ ಅಡಿಯಿಡಲಿಲ್ಲ, ತಮ್ಮ ಪ್ರಭಾವದಿಂದ ಕುಟುಂಬ ದವರನ್ನು ರಾಜಕೀಯದಲ್ಲಿ ಬೆಳೆಸಲಿಲ್ಲ, ತನಗೇ ತಾನು ಭಾರತ ರತ್ನ ಕೊಟ್ಟುಕೊಳ್ಳಲಿಲ್ಲ, ತನ್ನ ಹೆಸರಿನಲ್ಲಿ ಯೋಜನೆಗಳನ್ನು ಜಾರಿಗೊಳಿಸಲಿಲ್ಲ, ಯಾವ ಪಂಚಶೀಲ ಒಪ್ಪಂದವನ್ನೂ ಮಾಡಿಕೊಳ್ಳಲಿಲ್ಲ, ಮದವೇರಿ, ಕಳ್ಳಮಾರ್ಗದಲ್ಲಿ ಬಂದ ರಾಷ್ಟ್ರಗಳ ವಿರುದ್ಧವೂ ಯುದ್ಧಕ್ಕೆ ಮುಂದಾಗಲಿಲ್ಲ, ದೇಶಹಿತಕ್ಕೆ ಮಾರಕವಾದ ಯಾವ ಒಪ್ಪಂದವನ್ನೂ ಮಾಡಿಕೊಳ್ಳಲಿಲ್ಲ, ಅಂಗನೆಯರಲ್ಲಿ ಅತಿಯಾಗಿ ಅಭಿಮಾನವಿಡಲಿಲ್ಲ, ವೈಯಕ್ತಿಕ ಬದುಕಿಗೆ ಸರಕಾರದ ಹಣ ಬಳಸಲಿಲ್ಲ, ಭಯೋತ್ಪಾದಕರನ್ನು ಬೆಂಬಲಿಸಲಿಲ್ಲ ಮತ್ತು ಬೆಂಬಲಿಸುವ ರಾಷ್ಟ್ರಗಳೊಂದಿಗೆ
ಮೈತ್ರಿ ಮಾಡಿಕೊಳ್ಳಲಿಲ್ಲ, ಅಂತಾರಾಷ್ಟ್ರೀಯ ಭಯೋತ್ಪಾದಕ ನನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮರ್ಥಿಸಿಕೊಳ್ಳಲಿಲ್ಲ, ಉದಾರವಾದದ ಹೆಸರಲ್ಲಿ ಮಾಡಬಾರದ್ದನ್ನು ಮಾಡಲಿಲ್ಲ, ಜಾತ್ಯತೀತತೆಯ ಸೋಗಿನಲ್ಲಿ ಯಾವುದಾದರೂ ಒಂದು ಸಮುದಾಯದ ಹಿತರಕ್ಷಣೆಗೆ ನಿಲ್ಲಲಿಲ್ಲ, ಆ ಹಗರಣ ಈ ಹಗರಣ ಅಂತ ಯಾವ ಹಗರಣವನ್ನೂ ಮಾಡಿ ದುಡ್ಡು ತಿನ್ನಲಿಲ್ಲ, ಯಾರಿಗೋ ಸಿಕ್ಕಿದ ಪದವಿಯನ್ನು ಬ್ಲಾಕ್‌ಮೇಲ್ ಮಾಡಿ ತಾನು ಗಿಟ್ಟಿಸಿಕೊಳ್ಳಲಿಲ್ಲ, ಮೋಸದ ರಾಜಕಾರಣ
ಮಾಡಲಿಲ್ಲ. ಸ್ವಾರ್ಥಕ್ಕೆ ತುರ್ತುಪರಿಸ್ಥಿಯನ್ನು ಹೇರಲಿಲ್ಲ.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನ ಮಾಡಲಿಲ್ಲ. ಒಂದು ಸಮುದಾಯದ ಪರ ತುಷ್ಟೀಕರಣದ ರಾಜಕೀಯ ಮಾಡಿ ಬೆಳೆಯಲಿಲ್ಲ, ಜನ ಬೊಟ್ಟುಮಾಡುವ ಯಾವ ಭ್ರಷ್ಟಾಚಾರವನ್ನೂ ಮಾಡಲಿಲ್ಲ. ಕೊನೆಯಲ್ಲಿ, ಚುನಾವಣೆಗೆ ನಿಂತು ಜನರಿಂದ ಓಟು ಪಡೆಯದೇ ಸೀದಾ ಬಂದು ಪ್ರಧಾನಿ ಯಾಗಲಿಲ್ಲಮೋದಿ ಹಾದಿ ತಪ್ಪಿದರು ಎನಿಸುವುದಿಲ್ಲವೆ..? ಖಂಡಿತವಾಗಿಯೂ ಮೋದಿ ಹಾದಿ ತಪ್ಪಿದೆ!
ಒಂದು ವೇಳೆ, ಮೋದಿ ಹಾದಿ ತಪ್ಪಿಲ್ಲವೆಂದಾದರೆ ಯಾಕೆ ಈ ಪರಿಯ ವಿರೋಧಗಳು? ಅವಲೋಕನ ಮಾಡಿ; ಮೋದಿ ಅಧಿಕಾರಕ್ಕೆ ಬಂದ ದಿನದಿಂದಲೂ ಕೆಲವು ಮಾಧ್ಯಮಗಳು, ಮುಸ್ಲಿಂ ನಾಯಕರು, ಎಡಪಂಥೀಯ ಚಿಂತನೆಯ ರಾಜಕೀಯ ಪಕ್ಷಗಳು, ಕಮ್ಯೂನಿಸ್ಟರು, ಎಡಪಂಥೀಯ ಲೇಖಕರು, ಚಿಂತಕರು, ಸೋಕಾಲ್ಡ ಬುದ್ಧಿಜೀವಿಗಳು, ಬರಹಗಾರರು, ಕಾಂಗ್ರೆಸ್ ಪ್ರೇರಿತ ಇತಿಹಾಸಕಾರರು, ಸುಖಾಸುಮ್ಮನೆ ವಿರೋಧಿಸುವವರು, ಬಿಜೆಪಿ ವಿರೋಧಿಗಳೇ ಮುಂತಾದವರು ರೈತರನ್ನು, ದಲಿತರನ್ನು, ಮುಸ್ಲಿಮರನ್ನು ಒಂದುಗೂಡಿಸಿ ದೇಶವ್ಯಾಪಿ ಒಂದಲ್ಲ ಒಂದು ಬಗೆಯಲ್ಲಿ ಗಲಾಟೆ, ನಿಂದನೆ, ದೋಷಾರೋಪಣೆ, ಅವಮಾನ,
ಬಹಿರಂಗ ಗದ್ದಲ, ಅಸಹನೆ, ದೊಂಬಿ, ಸಂಘರ್ಷಗಳನ್ನೆಬ್ಬಿಸಿ ಮೋದಿ ವಿರುದ್ಧ ಯಾವ್ಯಾವ ನೆಲೆಯಲ್ಲಿ ಸಾಧ್ಯವೋ ಅಷ್ಟೂ ನೆಲೆಯಲ್ಲಿ ವಿರೋಧವನ್ನು ನಿರಂತರ ವಾಗಿ ನಡೆಸುತ್ತಿದ್ದಾರೆ.
ಯುಪಿ, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಪ.ಬಂಗಾಳದಲ್ಲೂ ನಾಗರಿಕ ಸಮುದಾಯವೇ ಅಸಹ್ಯ ಪಡುವಷ್ಟು ಮಿತಿಮೀರಿತು. ಕಾರಣವೇನು? ಮೋದಿ
ಮೇಲಿನ ಭಯವೇ? ದ್ವೇಷವೇ? ಅಧಿಕಾರವಿಹೀನ ಹತಾಶೆಯೇ? ಅಸ್ತಿತ್ವಕ್ಕೆ ಆದ ಮರ್ಮಾಘಾತವೇ? ಪುಂಡಾಟಕ್ಕೆ ಅವಕಾಶವಿಲ್ಲವಾಯಿತೆಂಬ ಅಸೂಯೆಯೇ?
ಹುಚ್ಚೇ? ಭಯವೇ? ವೈಚಾರಿಕ ಕಾಯಿಲೆಯೇ? ಬೌದ್ಧಿಕ ದಿವಾಳಿತನವೇ? ಮುಪ್ಪಿನಲ್ಲಿ ಅಡರಿದ ಮರುಳುತನವೇ!
ಪ್ರಚೋದಿತ ಆಂತರಿಕ ಗಲಭೆಗಳು ಬೇರೆಬೇರೆ ವಿನ್ಯಾಸಗಳಲ್ಲಿ ಗೋಚರಿಸುತ್ತಿವೆ. ಸಂವಿಧಾನವನ್ನು ಬದಲಾಯಿಸುತ್ತೇವೆ, ಅದಕ್ಕಾಗಿ ನಾವು ಬಂದಿದ್ದೇವೆ ಎಂದು
ಅನಂತಕುಮಾರ ಹೆಗಡೆಯವರು ಆಡಿದ ಮಾತಿಗೆ ಅನೇಕ ಬಗೆಯಲ್ಲಿ ಪ್ರತಿರೋಧವೆದ್ದಿದ್ದವು. ಆದರೆ, ಈವರೆಗಾದ ತಿದ್ದುಪಡಿಗಳಿಗೆ ಯಾರನ್ನು ವಿರೋಧಿಸ ಬೇಕಿತ್ತು? ಹಿಂದೆ ಆದ ತಿದ್ದುಪಡಿಗಳಿಗೆ ಹುಟ್ಟದ ಸಂವಿಧಾನದ ಮೇಲಿನ ಪೂಜ್ಯಭಾವ ಒಮ್ಮೆಲೇ ಹುಟ್ಟಿದ್ದಂತೂ ಬಹುದೊಡ್ದ ಅಚ್ಚರಿ! ಅಂದು ನೆನಪಾಗದ ಅಂಬೇಡ್ಕರ್ ಶಿಖರಪ್ರಾಯ ಆದರ್ಶವಾಗುತ್ತಿರುವುದು ಬಹುಸೋಜಿಗ!
ನೆನಪು ಮಾಡಿಕೊಳ್ಳಿ: ಆರಂಭದಲ್ಲಿ ಗೋಹತ್ಯಾ ನಿಷೇಧದ ಕಾಯಿದೆ ಜಾರಿಗೆ ಬಂದಾಗಲಂತೂ ಅಸಹನೆಯೇ ಕಟ್ಟೆಯೊಡೆದಿತ್ತು. ಇಷ್ಟು ವರ್ಷ ಈ ದೇಶದಲ್ಲಿ ಬದುಕಿದ್ದೇ ಸುಳ್ಳು ಎಂಬಂತೆ ಅನೇಕ ಅಮೀರ್ ಖಾನ್‌ಗಳು ಹುಯಿಲಿಟ್ಟರು. ಗೋಹತ್ಯೆ ನಿಷೇಧ, ನೋಟು ಬಂಧಿ, ಜಿಎಸ್‌ಟಿ, ಇವಿಎಂ ವಿರೋಧ, ಸಂಸತ್ತು ಗಲಾಟೆ, ಸಂವಿಧಾನ ವಿಮರ್ಶೆ, ಗುಜರಾತ್ ಚುನಾವಣೆ, ಜಿಎಸ್ ಟಿ, ಸರ್ಜಿಕಲ್ ಸ್ಟ್ರ ಕ್, ಡೋಕ್ಲಾಂ ವಿವಾದ, ಮೋದಿ ವಿದೇಶ ಪ್ರವಾಸ, ಅಲ್ಪಸಂಖ್ಯಾತರ
ವಿರುದ್ಧದ ಅಸಹಿಷ್ಣುತೆ, ದಲಿತ ಸಂಘರ್ಷ, ಸುಪ್ರೀಂ ಕೋರ್ಟಿನ ಐವರು ನ್ಯಾಯಾಧೀಶರ ಆರೋಪ, ರಾಜ್ಯಸಭಾ ಚುನಾವಣೆ, ಜಿಡಿಪಿ ಇಳಿಕೆ, ಇಸ್ರೇಲ್ ಬಾಂಧವ್ಯ ವೃದ್ಧಿ, ಜಪಾನಿನೊಂದಿಗೆ ಸೌಹಾರ್ದತೆ, ರೈತರ ಆತ್ಮಹತ್ಯೆ, ಮಹಾಭಿಯೋಗ, ಕೃಷಿಕಾಯಿದೆ ತಿದ್ದುಪಡಿ…ಒಂದೇ ಎರಡೇ! ಹೀಗೆ ವಿರೋಧ ಮಾಡಿದವರೆಲ್ಲ ಬೇರೆ ಯಾರೋ ಅಲ್ಲ, ಇ ಹುಟ್ಟಿಬೆಳೆದವರು, ಇ ಬದುಕು ಕಟ್ಟಿಕೊಂಡವರು!
ಅದಿನ್ನೆಂಥ ರೀತಿಯಲ್ಲಿ ಕೇಂದ್ರ ಸರಕಾರವನ್ನು ಕೆಡಿಸಲು ಸಂಚು ನಡೆಸಲಾಗಿತ್ತೆಂದರೆ ನೋಟುಬಂಧಿ ಸಂದರ್ಭದಲ್ಲಿ ಕರೆನ್ಸಿ ಕೊರತೆಯನ್ನು ಉಂಟುಮಾಡಲು ಎಟಿಎಂಗಳಲ್ಲಿರುವ ಹಣವನ್ನೇ ತೆಗೆದು ಸಂಗ್ರಹಿಸಿ ಜನಸಾಮಾನ್ಯರಿಗೆ ಹಣ ಸಿಗದೆ ಪರದಾಡುವಂತೆ ಮಾಡಿ ಸರಕಾರದ ವಿರುದ್ಧ ಜನ ದಂಗೆಯೇಳುವಂತೆ ಮಾಡುವ ಮಟ್ಟಕ್ಕೆ ಇಳಿಯಲಾಗಿತ್ತು!
ಒಂದೇ ತಿಂಗಳಲ್ಲಿ ಆಂಧ್ರ, ತೆಲಂಗಾಣ, ಕರ್ನಾಟಕದಲ್ಲಿ 45 ಸಾವಿರ ಕೋಟಿ ಹಣ ಡ್ರಾ ಮಾಡಲಾಗಿತ್ತು. ಅದರಲ್ಲೂ ೨ ಸಾವಿರ ಮುಖಬೆಲೆಯ ನೋಟನ್ನೇ ಸಂಗ್ರಹಿಸಲಾಗಿತ್ತು. ಹೀಗೆ ಮಾಡಿ ಸರಕಾರದ ಮೇಲೆ ಒತ್ತಡ ತರುವ ಹುನ್ನಾರ ಮತ್ತು 2019ರ ಮಹಾಚುನಾವಣೆಯಲ್ಲಿ ಹಣ ಹಂಚುವುದಕ್ಕೆ ಪೂರ್ವ ತಯಾರಿಯೂ ಆಗಿತ್ತು. Of course ಸರಕಾರ ಇದಕ್ಕೆ ಪರಿಹಾರವನ್ನು ಕಂಡುಕೊಂಡು ಬಿಟ್ಟಿತು. ಅದೇ ವರ್ಷ ಮಾರ್ಚ್ 13ರಂದು ಸೋನಿಯಾ ಗಾಂಧಿ
ಮನೆಯಲ್ಲಿ ನಡೆದ ಭೋಜನಕೂಟದ ಉದ್ದೇಶವನ್ನು ವಿವರಿಸುವ ಅಗತ್ಯವೇ ಇಲ್ಲ!
ಸುಪ್ರೀಂಕೋರ್ಟಿನ ಬಂಡುಕೋರ ನ್ಯಾಯಾಧೀಶರ ಪ್ರೆಸ್ ಕಾನರೆನ್ಸ್ ಮರ್ಮವೇನು? ಯಾವ ಅಜೆಂಡಾ ಹಾವಿನ ಹುನ್ನಾರವಿದು? ಬಿಡಿಸಿ ಹೇಳಬೇಕಾಗಿಲ್ಲ. ದಲಿತ ಸಂಘಟನೆಗಳ ಗುಟ್ಟು ಬಯಲಾಗಿ ಬೆತ್ತಲಾಗಿದ್ದೂ, ಗುಜರಾತಲ್ಲಿ ಕಾಂಗ್ರೆಸ್ಸಿನ ಮಾನ ಹರಾಜಾಗಿದ್ದೂ ಈಗ ಇತಿಹಾಸ. ಪದ್ಮಾವತ್ ಸಿನೆಮಾ ವಿವಾದವೂ, ಅದನ್ನು ವಾಕ್ ಸ್ವಾತಂತ್ರ್ಯದ ದಮನವೆಂದೂ, ಆ ಸಂದರ್ಭದದ ಶಾಲಾ ಬಸ್ ದುರಂತವೂ, ಅದನ್ನು ಹಿಂದೂ ಸಂಘಟನೆಗಳ ಮೇಲೆ ಹೊರಿಸುವ ಸಂಚೂ, ಅಸಿಫ್ ಪ್ರಕರಣವೂ, ಉನ್ನಾವೋ ಪ್ರಕರಣವೂ ಇತ್ಯಾದಿಗಳೆಲ್ಲದರ ಹಿಂದಿನ ಮರ್ಮವನ್ನು ಅರ್ಥೈಸದೇ ಹೋದರೆ ಮುಂದೆ ನಮಗೆ ಕಾದಿದೆ ಮಹಾ ಗಂಡಾಂತರ! ಯೋಚಿಸಬೇಕಿದೆ ನಮ್ಮ ಭಾರತದ ಭವಿಷ್ಯದ ಬಗ್ಗೆ.
ಅಷ್ಟಕ್ಕೂ ಮೋದಿ ಯಾವ ಬಗೆಯಲ್ಲೂ ದೇಶ ವಿರೋಧಿ ರಾಜಕಾರಣ ಮಾಡಿದರೋ? ಅದನ್ನು ಸ್ವಾತಂತ್ರ್ಯ ಪ್ರಾಪ್ತಿಯ ಅನಂತರದಲ್ಲಿ ಹುಟ್ಟುಹಾಕಿ, ಈಗಲೂ
ನಡೆಸುತ್ತಿರುವವರು ಯಾರು? ಸ್ವಾತಂತ್ರ್ಯಾ ನಂತರದಲ್ಲಿ ದಲಿತರು, ಅಲ್ಪಸಂಖ್ಯಾತರನ್ನು ಓಟಿಗಾಗಿ ಮಿತಿಮೀರಿ ಓಲೈಸಿ ದಾರಿತಪ್ಪಿಸಿದವರು ಯಾರು ಎಂಬು ದರ ಬಗ್ಗೆ ಉಪಗ್ರಹಗಳನ್ನು ಬಿಟ್ಟು ಸಂಶೋಧನೆ ಮಾಡಬೇಕಾಗಿಲ್ಲ. ಅದು ಪಬ್ಲಿಕ್ ಸೀಕ್ರೆಟ್! ಮೋದಿ ಆಡಳಿತದದ ತೊಂದರೆಯೇನು ಎಂದರೆ ಬೆಲೆಯೇರಿಕೆ ಅದು ಇದು ಅಂತ ಹೇಳಬಹುದು.
ಆದರೆ, ಸಾರ್ವಕಾಲಿಕ ಸಂದರ್ಭವಾಗಿ ಒಪ್ಪಲು ಸಾಧ್ಯವಿಲ್ಲ. ಸಂಬಳ ಪ್ರತಿವರ್ಷವೂ ಏರಿಕೆ ಯಾಗಬೇಕು. ಕೋವಿಡ್ ಕಾರಣ ಕೊಡೋ ಹಾಗಿಲ್ಲ. ಆದರೆ
ವಸ್ತುಗಳ ಬೆಲೆಯೇರಬಾರದು. ಪುಕ್ಕಟೆಯಾಗೇ ಸರಕಾರ ಕೊಡಬೇಕು. ಇದೆಂಥಾ ವಿಚಿತ್ರ ಮನೋಧರ್ಮ ಜನರದ್ದು! 370ನೆಯ ವಿಧಿ ತೆಗೆದ ಎರಡು ವರ್ಷಗಳ ಕಾಶ್ಮೀರ ನಿಯಂತ್ರಣಕ್ಕೆ ಬಂದು ಪ್ರತ್ಯೇಕತಾವಾದಿಗಳ ಹುಟ್ಟಡಗಿತು. ಪಾಕಿಸ್ತಾನದ ಮುಖ ವಿಕಾರವಾಯಿತು. ಜಾಗತಿಕ ಭಯೋತ್ಪಾದಕ ನೆಂದು ಮಜೂರ ನಂಥವರನ್ನು ನಿಲ್ಲಿಸಲಾಯಿತು. ವಿಶ್ವಮಟ್ಟದಲ್ಲಿ ಪಾಕ್ ಸಂಬಂಧವನ್ನು ಕಳಚಿಕೊಂಡಿತು. ತಾನು ಹರಡಿಸಿದ ವೈರಾಣಿನಿಂದ ಚೀನಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಲನ್ ಆಯ್ತು. ತನ್ನ ಪುಂಡಾಟಗಳಿಗೂ ಭಾರತ ಆಡುಂಬೊಲವಾಗದು ಎಂದರಿತ ಚೀನಾ ಬಾಲ ಸುಟ್ಟಿದ ನಾಯಿಯಂತಾಗಿದೆ. ಆದರೂ ಭಾರತದ ಮೇಲೆ ಯುದ್ಧದ ವಾಂಛೆ ಇಂಗಿದಂತಿಲ್ಲ. ಪಾಕಿಗೆ ಆರ್ಥಿಕ ಬಲವನ್ನು ಹಿಂತೆಗೆದುಕೊಂಡು ಭಾರತದ ಸಾರ್ವಕಾಲಿಕ ಮೌಲ್ಯಗಳನ್ನು ವಿಶ್ವದ ಮುಂದೆ ಹೊಗಳಿತು.
ಮೋದಿ ಆಡಳಿತವನ್ನು ಜಗತ್ತಿನ ರಾಷ್ಟ್ರಗಳು ಮೆಚ್ವಿವೆ.
ನೋಟ್ ಬ್ಯಾನ್, ಜಿಎಸ್ ಟಿ, ಸರ್ಜಿಕಲ್ ಸ್ಟ್ರ ಕ್, ಬಾಲ್ ಕೋಟ್ ದಾಳಿಗಳಿಗೆ ವಿಶ್ವಾದ್ಯಂತ ಮೆಚ್ಚುಗೆ ಸಿಕ್ಕಿತು. ಭಾರತ ಇಸ್ರೇಲು ಸಂಬಂಧ ವೃದ್ಧಿಯಾಯಿತು. ಭಾರತ ಮೂಲದ ವಿದೇಶಿಯರಿಗೆ ದೇಶಪ್ರೇಮ ಹೆಚ್ಚಿತು. ನಮ್ಮ ಸೈನಿಕರ ಸಾಹಸವನ್ನು ಜಗತ್ತು ಮೆಚ್ಚಿತು. ರಷ್ಯಾ ಸೇರಿದಂತೆ ದೊಡ್ಡ, ಸಣ್ಣ ರಾಷ್ಟ್ರಗಳು ಭಾರತ ದೊಂದಿಗೆ ರಾಜತಾಂತ್ರಿಕ ಮೈತ್ರಿ ಮಾಡಿಕೊಂಡವು. ಕಳ್ಳನೋಟುಗಳು ಭಾರತದೊಳಗೆ ನುಸುಳಿ ಇಲ್ಲಿನ ಆರ್ಥಿಕ ಅಸಮತೋಲನಕ್ಕೆ ಎರವಾಗುವ ಬಾಹ್ಯ ದಂಧೆಗಳಿಗೆ ಕಡಿವಾಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಿತ್ತು. ಫಂಡ್ ನೆಪದಲ್ಲಿ ಚರ್ಚುಗಳಿಗೆ, ಮಸೀದಿಗಳಿಗೆ ಬರುವ ವಿದೇಶೀ ಕಪ್ಪುಹಣಕ್ಕೆ ಸಂಚಕಾರ ಬಂತು. ಆದರೂ, ವಿದೇಶೀ ವಾಣಿಜ್ಯದಲ್ಲಿ ನಾವು ಸಾಧಿಸುವುದು ಅಗಾಧವಿದೆ.
ಅಮೆರಿಕ, ಚೀನಾ, ಸ್ವಿಟ್ಜರ್ಲೆಂಡ್, ಯುರೋಪಿಯನ್ ರಾಷ್ಟ್ರಗಳಿಗೆ ಹೋಲಿಸಿದರೆ ನಮ್ಮ ತಲಾದಾಯ ತೀರಾ ಕಡಿಮೆಯೇ ಇದೆ. ವಿಶ್ವಸಂಸ್ಥೆಯ ಆರ್ಥಿಕ ಸಮೀಕ್ಷೆಯ ಪ್ರಕಾರ ಇನ್ನೂ 35 ಕೋಟಿಗಿಂತ ಹೆಚ್ಚಿನವರು ಬಡತನ ರೇಖೆಯ ಕೆಳಗಿದ್ದಾರೆ. ಶಿಕ್ಷಣದ ದೃಷ್ಟಿಯಿಂದ ಚೇತರಿಕೆಯಾಗಿದೆ. ಆದರೆ, ಅಮೆರಿಕ, ಚೀನಾ, ರಷ್ಯಾ, ಜಪಾನ್ ಬಿಟ್ಟರೆ ಜಗತ್ತಿನ ದೊಡ್ಡ ಆರ್ಥಿಕತೆ ನಮ್ಮದೇ. ಯಾವಾಗ ಆರ್ಥಿಕತೆಯಲ್ಲಿ ರಾಜಕಾರಣ ಬೆರೆಯುತ್ತದೋ ಆಗ ಆರ್ಥಿಕತೆಗೆ ಪೆಟ್ಟುಬೀಳುತ್ತದೆ. ರಾಜಕಾರಣ ವಿಲ್ಲದೆಯೂ Economy ಇದ್ದೇ ಇರುತ್ತದೆ. ಆದರೆ Economy ಇಲ್ಲದೆ Politic ಇರಲಾರದು. Political Economy ಬೇರೆ, Economy Politics ಬೇರೆ. ಈ ಹಿನ್ನೆಲೆಯಲ್ಲಿ ನೋಡುವುದಾದರೆ ವಿದೇಶೀ ಬಹುರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಬಂದು ಉದ್ಯೋಗ ಸೃಷ್ಟಿ ಮಾಡಲು ಅವಕಾಶ ನೀಡಿ ಭಾರತದ ಮೂಲ ಉತ್ಪಾದನೆ ಪ್ರಗತಿಯನ್ನು ಕಾಣತೊಡಗಿತು.
ಆದರೆ, ಚೀನಾದೊಂದಿಗೆ ಸದ್ಯ ಮತ್ತು ಶಾಶ್ವತ ನೆಲೆಯಲ್ಲೂ ವಿದೇಶೀ ರಾಜತಾಂತ್ರಿಕ ಸಂಬಂಧಗಳನ್ನು ಇರಿಸಿಕೊಳ್ಳುವುದು ರಾಷ್ಟ್ರೀಯ ಹಿತಾಸಕ್ತಿಗೆ ಮಾರಕ
ವೆಂದು ಸ್ಥಗಿತಗೊಳಿಸಿ ಚೀನಾದೊಂದಿಗಿನ ಸಂಬಂಧವನ್ನು ಕಳೆದುಕೊಳ್ಳುವ ಎಚ್ಚರವನ್ನು ಮೋದಿ ರವಾನಿಸಿದರು. ಮೋದಿಯ ಬೆಂಬಲಕ್ಕೆ ಜಗತ್ತಿನ ಕೆಲವು ರಾಷ್ಟ್ರಗಳು ನಿಂತಿದೆ. ಮೋದಿಯ ವಿದೇಶಿ ರಾಜತಾಂತ್ರಿಕ ನಡೆಯನ್ನು ಜಗತ್ತು ಮೆಚ್ಚಿದೆ. ಬೆಚ್ಚಿದೆ. ಮೋದಿಯ ಆಡಳಿತವನ್ನು ಮೆಚ್ಚಿದ ವಿಶ್ವಸಂಸ್ಥೆ ಉತ್ತಮ ಪ್ರಧಾನಿಯೆಂದು ಗೌರವಿಸಿದೆ. ಇವೆ ಮೋದಿ ವಿರೋಽಗಳಿಗೆ ಅಪಥ್ಯವೇ ಸರಿ!
ದೇಶದೊಳಗೂ ಅನೇಕ ಸ್ಥಿತ್ಯಂತರಗಳು ಈ ಏಳು ವರ್ಷದಲ್ಲಿ ನಡೆದಿವೆ. ಅಭಿವೃದ್ಧಿಯ ಮಾತಾಡುವ ಮೋದಿ ನಿಷ್ಠುರವಾಗೇ ಆರ್ಥಿಕತೆಯನ್ನು ನಿರ್ವಹಿಸಿದರು. ಇಷ್ಟು ವರ್ಷದ ಅಶಿಸ್ತಿನ ಆರ್ಥಿಕತೆಯನ್ನೇ ಕಂಡ ನಮಗೆ ಶಿಸ್ತಿನ ಪ್ರಜ್ಞೆಯ ಆರ್ಥಿಕತೆ ಕಷ್ಟವೆನಿಸಿತು. ಏಕರೂಪದ ತೆರಿಗೆ ನೀತಿಯನ್ನು ಜಾರಿಗೆ ತಂದು ತೆರಿಗೆ ಯಿಂದ ವಂಚಿತರಾಗಲು ಯಾರಿಗೂ ಸಾಧ್ಯವಿಲ್ಲ ವೆಂಬುದನ್ನು ಎಚ್ಚರಿಸಿ ಭಾರತೀಯರಲ್ಲಿ ಭರವಸೆಯನ್ನು ಮೂಡಿಸಿದ್ದೇ ಈ ನೀತಿ ಕಠಿಣವಾದದ್ದರಿಂದ! ಕಾಂಗ್ರೆಸ್ ನಡೆಸಿಕೊಂಡು ಬಂದ ರೀತಿಯ ಒಕ್ಕೂಟ ರಚನೆಯ ರಾಜ್ಯಗಳ ಸಂಬಂಧದಲ್ಲಿ ಬದಲಾವಣೆ ತಂದರು.
ರಾಷ್ಟ್ರೀಯತೆಯ ಪ್ರಜ್ಞೆ ಜಾಗೃತವಾಗಿದೆ. ಜನರು ರಾಷ್ಟ್ರೀಯ ಹಿತಾಸಕ್ತಿಯ ವಿಷಯಗಳಲ್ಲಿ ಮಾತಾಡುತ್ತಿದ್ದಾರೆ. ಇದನ್ನೇ ತಪ್ಪು ಅಂತ ಕೆಲವರು ಹುಯಿಲೆಬ್ಬಿಸಿzರೆ.
ಕಪ್ಪುಹಣದ ದಂಧೆಗೆ ಕಡಿವಾಣ ಬಿದ್ದಿರುವುದರಿಂದ ದೇಶದೊಳಗೆ ಭ್ರಷ್ಟಾಚಾರದ ಸೌಂಡು ಕೇಳದಂತಾಯಿತು.
ರಾಜಕೀಯದಲ್ಲಿ ಪಳಗಿದ ದಕ್ಷಿಣೋತ್ತರದ ಘಟಾನುಘಟಿಗಳು ಕೈಸೋತು ಎಲ್ಲವನ್ನೂ ಕಳಕೊಂಡ ದುರ್ಯೋಧನನಂತೆ ಏಕಾಂಗಿಯಾಗಿದ್ದಾರೆ. ದಲಿತರಿಗೆ
ಮತ್ತು ಅಲ್ಪಸಂಖ್ಯಾತರಿಗೆ ತಮ್ಮನ್ನು ಉದ್ಧರಿಸುವ, ಎತ್ತರಿಸುವ, ಸ್ವಾಭಿಮಾನವನ್ನು ತುಂಬುವ, ಸ್ವಾವಲಂಬಿ ಬದುಕನ್ನು ಬಾಳಲು ಆಧಾರವಾಗಿ ನಿಂತು ಬೆಂಬಲಿಸುವ ಮೋದಿಗಿಂತ ಕಾಂಗ್ರೆಸ್ಸಿನ ಒಲವು ತೀರಿದಂತಿಲ್ಲ!
ವಿಕಾಸವಾದದ ಮಾತಾಡುವ ಮೋದಿ ದೇಶವನ್ನು ಸದೃಢವಾಗಿ ಕಟ್ಟಲುಬೇಕಾದ ಎಲ್ಲ ತಾಕತ್ತನ್ನು ಹೊಂದಿದ್ದೂ, ಅದಿನ್ನೂ ಅರ್ಥವಾಗಿಲ್ಲವೆಂದರೆ ನಮ್ಮಂಥ ಮುಠ್ಠಾಲರು ಬೇರೆ ಯಾರೂ ಇರಲಾರರು! ವೈಯಕ್ತಿಕವಾಗಿ ಮೋದಿ ಯಾವುದೇ ಕಪ್ಪುಚುಕ್ಕೆಯಿಲ್ಲದ ಪಾರದರ್ಶಕವಾದ ಆಡಳಿತವನ್ನು ನೀಡಿ ತನ್ನ ಕ್ಯಾಬಿ ನೆಟ್ಟನ್ನು ಇದೇ ಮಾರ್ಗದಲ್ಲಿ ಮುನ್ನಡೆಸುತ್ತಿರುವುದು ವಿರೋಽಗಳಿಗೆ ನುಂಗಲಾರದ, ದಕ್ಕಿಸಿಕೊಳ್ಳಲಾಗದ ತುತ್ತಾಗಿರುವುದರಿಂದ ದೇಶದಲ್ಲಿ ಏನೇ ಆದರೂ ಮೋದಿಯೇ ಕಾರಣವೆಂದು ಪ್ರಚೋದಿಸಿ ದೊಂಬಿಯೆಬ್ಬಿಸುವ ಹರಸಾಹಸಕ್ಕೆ ಕೈಹಾಕಿದಲ್ಲ ಸುಟ್ಟುಕೊಳ್ಳುತ್ತಿದ್ದಾರೆ.
ದೇಶವನ್ನಾಳುವವ ಆ ನೆಲದ ಚರಿತ್ರೆಯ ಅರಿವುಳ್ಳ ಪ್ರಜೆಯಾಗಿರಬೇಕು. ಮೋದಿಯನ್ನು ವಿರೋಧಿಸುವುದಕ್ಕಾದರೂ ಸಕಾರಣ ಬೇಕಲ್ಲವೆ? ತಮಗೆ ಅಧಿಕಾರ
ಸಿಗಲಿಲ್ಲವೆಂದು ಜನತೆ ಆರಿಸಿದ ಸರಕಾರಕ್ಕೆ ಆಡಳಿತ ಮಾಡಲು ಕೊಡದೆ ನೇರ – ಅನೇರವಾಗಿಯೂ ಪ್ರಚೋದಿಸಿ ವಿರೋಧಿಸಿ ತೊಂದರೆ ಕೊಡುವುದನ್ನೇ ನಿತ್ಯ ಕಾಯಕವನ್ನಾಗಿ ಮಾಡಿಕೊಂಡವರೆಲ್ಲ ಮೋದಿ ಭಯದಿಂದ ಚುನಾವಣೆಗೆ ಒಂದಾಗುತ್ತಿದ್ದಾರೆ. ದುಷ್ಟಶಕ್ತಿಗಳು ಸಂಘಟಿತವಾಗುವ ಬಗೆ ಹೀಗೆಯೇ ಅಲ್ಲವೆ? ಮೋದಿ ಸಾರಥ್ಯದ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿ ಅಧಿಕಾರದಿಂದ ಕೆಳಗಿಳಿಸುವ ಅಜೆಂಡಾ ಬಿಟ್ಟರೆ ಬೇರೆ ಯಾವ ಕೆಲಸವೂ ಇವರಿಗಿಲ್ಲವೇನೋ! ರಹಸ್ಯ ವಾಗೇ ನಡೆಯುತ್ತಿದ್ದ ರಾಷ್ಟ್ರೀಯತೆಯನ್ನು ದಮನಿಸುವ ಪ್ರಯತ್ನ ದಿನನಿತ್ಯ ನಿಚ್ಚಳವಾಗಿ ಮೋದಿಗೆ ಆಂತರಿಕ ಶತ್ರುಕೂಟವೇ ಹೆಚ್ಚುತ್ತಿದೆ.
ರಾಷ್ಟ್ರಾಭಿವೃದ್ಧಿಯಲ್ಲಿ ಅಡ್ಡಿಪಡಿಸುವವರು ಯಾರೆಂಬುದು ಸ್ಪಷ್ಟವಾಗುತ್ತಿದೆ. ಶತ್ರು ಕಹಾಂ ಹೈ ಅಂದರೆ ಬಗಲ್ ಮೆ ಹೈ ಅಂತಾರಲ್ಲ ಹಾಗೆ. ತನ್ನ ಆಡಳಿತ ದಿಂದಲೇ ಜನಮಾನಸ ವನ್ನು ಗೆಲ್ಲುತ್ತಿರುವುದು ಮೋದಿಯ ವಿರೋಧಿಗಳಿಗೆ ಸಹಿಸಲಾಗದೆ ಹೇಗಾದರೂ ಮಾಡಿ ಜನರಲ್ಲಿ ಮೋದಿಯ ಬಗೆಗೆ ನಂಬಿಕೆ ಕೆಡಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ದಲಿತ ಮತ್ತು ಅಲ್ಪಸಂಖ್ಯಾತರ ಗಲಾಟೆಗಳನ್ನು ಮೋದಿ ನೀತಿಗೆ ಸಮೀಕರಿಸಿ ದೇಶವ್ಯಾಪಿ ಅಲ್ಲಲ್ಲಿ ಕೂಗುತ್ತಿರುವುದಕ್ಕೂ ತಲೆಬಿಸಿ ಮಾಡಿಕೊಳ್ಳದೆ ಮೋದಿ ದಿನದ ೧೮ ಗಂಟೆಗಳ ಕಾಲ ದೇಶಹಿತದ ಚಿಂತನೆ ಮಾಡುತ್ತಿದ್ದಾರೆ.
ಜಗತ್ತನ್ನೇ ಹಿಂಜಿಹಿಪ್ಪೆ ಮಾಡುತ್ತಿರುವ ಕರೋನಾ ಸಂಕಷ್ಟ ಕಾಲದಲ್ಲೂ ದೇಶ ನಿಯಂತ್ರಣದಲ್ಲಿದೆ ಎಂದರೆ ಮೋದಿಯ ಆಡಳಿತದ ಫಲಸ್ವರೂಪವಲ್ಲದೆ
ಇನ್ನೇನು? ಎಲ್ಲ ಬಗೆಯ ಪ್ರಶ್ನೆಗೆ ನಿರುತ್ತರವೇ ಉತ್ತರವಾಗಿಸಬಲ್ಲ ಸಾಮರ್ಥ್ಯ ಮೋದಿಗೆ ಮಾತ್ರ ಸಾಧ್ಯ! ಹೀಗಿದ್ದೂ ಮೋದಿ ಹಾದಿ ತಪ್ಪಿದರು ಎನ್ನಲಾದಿತೇ?