Thursday, 25th July 2024

ಆಯ್ಕೆಯ ಕ್ಷೇತ್ರದ ತತ್ತ್ವ-ಗುರಿಗೆ ಅಂಟಿಕೊಂಡರೆ ಆ ರಂಗದ ದೇವರಾಗುತ್ತೇವೆ!

1980ರ ದಶಕದಲ್ಲಿ ಉದ್ಯೋೋಗಕ್ಕಾಾಗಿ ಪರದಾಡಿದ್ದು ನೆನೆಸಿಕೊಂಡರೆ ಈಗಲೂ ಭಯವಾಗುತ್ತದೆ. ಆ ನಮ್ಮ ಪರದಾಟ, ಹಂಬಲಿಸುವಿಕೆ, ಅಸಹಾಯಕತೆಗಳಿಗೆ ಕರಗಿಯೇ ಏನೋ ಆ ದೇವರು, ಕರುಣೆ ತೋರಿದ ಎನಿಸುತ್ತದೆಯಾಗಲಿ, ಈ ಹೆಸರು, ಕೀರ್ತಿ, ಹಣ, ಮಾನ ಸನ್ಮಾಾನಗಳು, ನಮ್ಮ ವೈಯಕ್ತಿಿಕ ಸಾಮರ್ಥ್ಯವಲ್ಲ, ಭಗವದ್ ಕೃಪೆಯೇ ಎಂಬುದು ನನಗೆ ದಿನ ದಿನಕ್ಕೂ ನಿಚ್ಚಳವಾಗುತ್ತಿಿದೆ. ಬೆಂದು ಬಸವಳಿಯದ ಹೊರತು ಬಾಳಿಗೊಂದು ದಿಕ್ಕು ದೊರಕುವದಿಲ್ಲ ಎಂಬುದು ಈಗ ಅರಿವಾಗುತ್ತಿಿದೆ.
ಹೇಳಿಕೇಳಿ ಬ್ರಾಾಹ್ಮಣ ಕುಲದಲ್ಲಿ ಹುಟ್ಟಿಿಬಿಟ್ಟೆೆ, ಅದೇ ಪರಿಸರದಲ್ಲಿ ಬೆಳೆದೆ.

ಬಡತನವೋ, ಸಿರಿತನವೋ, ದೈವಕೃಪೆಯೋ, ಬ್ರಾಾಹ್ಮಣರು ಎಂಥ ಬಡವರಾಗಿದ್ದಾಾರೆಂದರೂ, ಬಡತನದಲ್ಲಿ ಬಾಳುತ್ತಿಿದ್ದಾಾರೆಂದರೂ ಕಾಲಕಾಲಕ್ಕೆೆ ಊಟ, ತಿಂಡಿ, ಚಹಾ, ವಿಶ್ರಾಾಂತಿ, ಗುಡಿ, ಗುಂಡಾರ, ಆರಾಧನೆ, ಸಮಾರಾಧನೆ, ಬಂಧುಗಳ ಜವಳ, ಮುಂಜಿ, ಲಗ್ನ, ಹಬ್ಬಗಳು, ಉತ್ಸವಗಳು, ಹೀಗೆ ಬಾಲ್ಯದ ಬದುಕು ಹಿರಿಯರು ಪಡುವ ಬವಣೆಗಳ ಅರಿವಿಲ್ಲದೇ ಕಳೆದು ಹೋಗುತ್ತದೆ. ಎಂಥ ಬಡತನವೆಂದರೂ, ‘ಒಂದು ತುತ್ತು ಉಂಡು ಮಲಗು’ ಎನ್ನುವ ತಂದೆ, ತಾಯಿ ಇರುತ್ತಾಾರೆ. ತಂದೆ ಏನೋ ಮಾಡಿ ಮಂತ್ರ ಹೇಳಿ, ಗಂಟೆ ಬಾರಿಸಿ, ತಂಟೆ, ತಕರಾರಿಲ್ಲದೆ ದವಸ ಧಾನ್ಯಗಳನ್ನು ಮದುವೆ ಮನೆಯಿಂದಲೋ, ಮಸಣಕ್ಕೆೆ ಹೋದವರ ಮನೆಯವರಿಗೆ ಸಾಂತ್ವನ ಹೇಳಿಯೋ ತಂದಿರುತ್ತಾಾನೆ, ಇಂದಿಗೂ ತರುವವರು ಇದ್ದಾಾರೆ ಕೂಡಾ. ಇಷ್ಟು ಮಾತ್ರ ನಿಜ, ಯಾರಿಗೋ ಮೋಸ ಮಾಡಿ, ತಲೆ ಹೊಡೆದು, ಯಾಮಾರಿಸಿ, ದೋಚಿ, ತಂದ ಉದಾಹರಣೆಗಳು ತೀರಾ ತೀರಾ ಕಮ್ಮಿಿ. ಇನ್ನೊೊಬ್ಬರದು ಕಸಿದು ತಿಂದು ಬದುಕುವ ಪರಿಸರದಲ್ಲಿ ನಾನಿರಲಿಲ್ಲ.

ನಮ್ಮ ತಂದೆ ಶಿಕ್ಷಕ ವೃತ್ತಿಿಯಿಂದ ತರುತ್ತಿಿದ್ದ ಎರಡು ನೂರಾ ಐವತ್ತು ರುಪಾಯಿಯಲ್ಲಿ ಎರಡು ಹೊತ್ತು ಊಟ, ಒಂದು ಹೊತ್ತು ತಿಂಡಿ, ಆಗಾಗ ಬಿಸಿ ನೀರಿನಂಥ ಚಹಾ ಕುಡಿದು, ಸಣಕಲ, ಪ್ರೇತಗಳಂತೆಯೇ ನಾವು ಬಾಳಿ, ಬದುಕಿ, ಬೆಳೆದೂ ಬಿಟ್ಟೆೆವು. ದೇಹದಾರ್ಢ್ಯ ಇರದಿದ್ದರೂ ಸಣ್ಣ ಪುಟ್ಟ ಕೆಲಸ, ಸೇವೆ ಮಾಡುತ್ತಾಾ ಅರ್ಧ ಜೀವನ ಮುಗಿಸಿಯೇ ಬಿಟ್ಟೆೆವು. ಅವರಿವರು ಕೊಟ್ಟ, ಬಿಟ್ಟ ಬಟ್ಟೆೆ ತೊಟ್ಟು, ಪಾಸಾದವರು ಕೊಟ್ಟ ಹಿಂದಿನ ವರ್ಷದ ಪುಸ್ತಕಗಳನ್ನು ಓದಿ, ಅವರಿವರ ಮನೆ ಕಟ್ಟೆೆ, ಪಡಸಾಲೆಗಳಲ್ಲಿ ಮಲಗಿ ರಾತ್ರಿಿಗಳನ್ನು ಕಳದೇ ಬಿಟ್ಟೆೆವು.

ಕಿತ್ತು ತಿನ್ನುವ ಬಡತನವಿದ್ದರೂ ಮುಂದುವರಿದವರು ಎಂಬ ಹಣೆಪಟ್ಟಿಿಯಿಂದಾಗಿ ಸರಕಾರಿ ಸೌಲಭ್ಯಗಳಿಲ್ಲದೇ, ರಾಜಕೀಯ ನಾಯಕರ ಕೃಪೆಯೂ ಇಲ್ಲ, ಹಂಗೂ ಇಲ್ಲ. ಅವರ ಪರವಾಗಿ ಘೋಷಣೆಯೂ ಕೂಗದೇ, ವಿರೋಧವನ್ನೂ ತೋರಿಸದೇ ಅವರ ಬಿರಿಯಾನಿಗೆ ಬೆನ್ನು ತೋರಿಸಿ, ಮನೆಯ ತಿಳಿಸಾರು ಅನ್ನಕ್ಕೆೆ ಮುಖ ತೋರಿಸುವದರಿಂದಲೇ ಇಂದಿಗೂ ಬದುಕುತ್ತಿಿದ್ದೇವೆ. ಇಂದಿಗೂ ಲಕ್ಷ ರುಪಾಯಿಗಳ ನೋಟಿನ ಕಟ್ಟು ಹೇಗಿರುತ್ತದೆಂದು ಟಿ.ವಿ.ಯಲಿ ಲೋಕಾಯುಕ್ತರು ಹಿಡಿದ ‘ದೇಶಭಕ್ತರ, ಸಮಾಜ ಸೇವಕರ, ಧೂಳಿನಿಂದ ಎದ್ದು ಬಂದವರ’ ಮನೆಗಳಲ್ಲಿ ಪೇರಿಸಿಟ್ಟ, ಡಬ್ಬಗಳಲ್ಲಿ ತುಂಬಿಟ್ಟಿಿದ್ದನ್ನು ನೋಡಿದ್ದೆೆಷ್ಟೋೋ ಅಷ್ಟೆೆ.

ಅವನ್ನು ನೋಡುತ್ತಾಾ ‘ಅಯ್ಯೋ ಇವರನ್ನ ಸುಡ್ಲಿಿ, ಕಾಳಲ್ಲ, ಹಿಟ್ಟಲ್ಲ ಇದನಾಕ ಇಷ್ಟಿಿಷ್ಟು ಪೇರಿಸಿಟ್ಟಾಾವೋ ಕಾಣೆ, ಏನು, ಹಸಿವ್ಯಾಾದಾಗ ಈ ನೋಟನ್ನೇ ತಿಂತಾವೇನೋ, ಇಲ್ಲದವರಿಗೆ ಕೊಡದೇ ತಾವೊಂದೇ ತಿನಬೇಕು ಅಂತ ಇಟ್ಟರ ಕಾಳು ಕಡಿಗೆ ಹುಳ ಹತ್ತತ್ತಾಾವ, ರೊಕ್ಕಕ್ಕ ಪೊಲೀಸರು ಬೆನ್ನು ಹತ್ತುತ್ತಾಾರ ಅನ್ನೋೋದು ಸುಳ್ಳಲ್ಲ ನೋಡು’ ಎಂದೇ ಮರುಗುತ್ತಾಾರೆ. ‘ತಿನ್ನೋೋದು ತುತ್ತು ಅನ್ನ, ಅದಕ್ಕ ಇಷ್ಟು ಕೂಡಿಡೋದೆ?’ ಎಂದೂ ಕನಿಕರಿಸುತ್ತಾಾರೆ. ‘ಉಪವಾಸ ಇದ್ರೂ ಚಿಂತಿಲ್ಲ ತಾಯಿ, ಈ ಅಪಮಾನ ಬ್ಯಾಾಡ, ಹರಿದಾಡೋ ಲಕ್ಷ್ಮಿಿನ್ನ ಹಿಡಿದಿಟ್ಟರ ಹಾವಾಗಿ ಕಚ್ಚುತ್ತಾಾಳ ಅನ್ನೋೋದು ಸುಳ್ಳಲ್ಲ ನೋಡು’ ಎನ್ನುತ್ತಾಾರೆ.

ಕೊಡೋ ದೇವ್ರು ಎಲ್ಲಿದ್ರೂ ಕೊಡ್ತಾಾನ, ಆತ ಕೊಡದಿದ್ದರೆ ಅಂತ ಕೂಡಿ ಇಟ್ಟರ ಆ ದುಡ್ಡು ಕಾಡೋ ದೆವ್ವ ಆಗ್ತದ ಎಂದೆಲ್ಲ ನುಡಿಯುತ್ತಾಾರೆ. ಸತ್ಯವೂ ಇದೆ ಎನಿಸುತ್ತದೆ. ಅಲ್ಪತೃಪ್ತಿಿಗೆ ಹೆಸರಾದವರು ನಾವು. ಶೌರ್ಯ, ಸಾಹಸ ಸ್ವಲ್ಪ ಕಮ್ಮಿಿ, ದೇಹಕ್ಕೆೆ ದಣಿವಾದರೆ, ಹಸಿವಾದರೆ, ಅಪಮಾನವಾದರೆ ಕ್ರೋೋಧಾಗ್ನಿಿ ಜ್ವಾಾಲೆ ಉರಿದುರಿದು ಏಳುತ್ತದೆ. ಸೇಫರ್ ಸೈಡ್ ನೋಡಿಕೊಳ್ಳುವದು ನಮ್ಮ ಜಾಯಮಾನ. ‘ಸರ್ವೇಜನಾಃ ಸುಖಿನೋ ಭವಂತು’ ಎನ್ನುವದು ನಾವು ಬಾಲ್ಯಕ್ಕೆೆ ಕಲಿತ ಮಂತ್ರ, ರಕ್ತದಲ್ಲೇ ಸೇರಿಹೋಗಿದೆ.

‘ನಮ್ಮ ಜನ ಮಾತ್ರ ಸುಖಿನೋ ಭವ’ಎಂಬ ಹೋರಾಟವಾಗಲಿ ಹಠವಾಗಲಿ ನಮ್ಮಲ್ಲಿ ಇಲ್ಲದೇ ಇರುವುದೇ ನಮ್ಮ ಕಷ್ಟಗಳಿಗೆ ಕಾರಣವಾಗುತ್ತಿಿದೆ. ಅದನ್ನು ಕಂಡು ಇತ್ತೀಚಿನ ಯುವ ಪೀಳಿಗೆ ಜಾಗೃವಾಗುತ್ತಿಿದೆ. ಸಂಘಟಿತರಾಗುತ್ತಿಿದ್ದಾಾರೆ. ಭೇದ ಭಾವಗಳು ಕಮ್ಮಿಿಯಾಗುತ್ತಿಿವೆ. ಪರಿಸ್ಥಿಿತಿಗೆ ಹೊಂದಿಕೊಂಡು ಬಿಜಿನೆಸ್‌ಗೆ ಇಳಿಯುತ್ತಾಾರೆ. ನೌಕರಿಗೆ ಜೋತು ಬೀಳದೇ ಎಲ್ಲ ತರಹದ ಬದುಕಿಗೆ ತಮ್ಮನ್ನು ಒಡ್ಡಿಿಕೊಳ್ಳುತ್ತಿಿದ್ದಾಾರೆ. ಆದರೆ, ಮೂವತ್ತು ವರ್ಷದ ಹಿಂದೆ, ನನ್ನ ಗೆಳೆಯ ಗುಂಡಣ್ಣ ಒಂದು ಅಂಗಡಿಯನ್ನು ತೆರೆದು ಅದನ್ನು ನಡೆಸಿಕೊಂಡು ಹೋದ ಪರಿ ಇಂದಿಗೂ ನನಗೆ ಅಂಗಡಿಗಳನ್ನು ನೋಡಿದಾಗೆಲ್ಲ ನೆನಪಾಗುತ್ತದೆ, ಗುಂಡಣ್ಣನಿಗೆ ಒಂದೇ ಕಡೆ ಕುಳಿತಲ್ಲೇ ಕೂಡಲು ಬೇಸರ, ಗಿರಾಕಿಗಳು ಬಂದರೂ ಸಿಟ್ಟು, ಬರದಿದ್ದರೂ ಸಿಟ್ಟು. ಗಂಟೆ ಬಾರಿಸಬೇಕಾದ ಕೈ ತಕ್ಕಡಿ ಹಿಡಿತಕ್ಕೆೆ ಸಿಕ್ಕ ತಳಮಳ, ಮಂತ್ರ ಹೇಳಬೇಕಾದ ಬಾಯಿಯಲ್ಲಿ ಸಾಮಾನುಗಳ ರೇಟ್ ಹೇಳಬೇಕಾದ ಅನಿವಾರ್ಯ, ಚೆಂದ ಎಲೆ ಹಾಕಿಕೊಂಡು ಉಂಡು ಅಭ್ಯಾಾಸವಾದ ದೇಹಕ್ಕೆೆ, ಚಿಕ್ಕ ಡಬ್ಬಿಿಯಲ್ಲಿ ಬರುತ್ತಿಿದ್ದ ಕಲೆಸಿದ ಅನ್ನ ತಿನ್ನಬೇಕಾದ, ಉಂಡು ಒಂದು ಗಂಟೆ ಮಲಗಬೇಕಾದ ಸಮಯದಲ್ಲಿ ಕಣ್ಣು ತೆರೆದೇ ಕೂಡಬೇಕಾದ ಸ್ಥಿಿತಿ. ಅಂಗಡಿ ಮುಂದೆ ಅಡ್ಡಾಾಡುವವರಿಗೆಲ್ಲ ಅವ ಬೈಯುತ್ತಿಿದ್ದ ಆ ಪರಿ ಬರೆದರೆ ದೊಡ್ಡ ಗ್ರಂಥವೇ ಆದೀತೆಂದು ಹೆದರಿ ಸೂಕ್ಷ್ಮ ರೂಪದಲ್ಲಿ ಅಂದರೆ ‘ಕರಿಯಂ ಕನ್ನಡಿಯಲ್ಲಿ ತೋರ್ಪಂತೆ’ ಹೇಳುತ್ತಿಿದ್ದೇನೆ.

ಗುಂಡಣ್ಣ ಬೆಳಗ್ಗೆೆ ಏಳಕ್ಕೆೆ ಬಂದು ಅಂಗಡಿ ತೆಗೆದು-ಅಂದರೆ ಒಂದೇ ಬಾಗಿಲಲ್ಲ ಶಟರ್ ಅಲ್ಲ,ಒಂದೊಂದೇ ಉದ್ದನೆಯ ಹಲಗೆಗಳ ಬಾಗಿಲು ಅದು-ಒಟ್ಟು ಹತ್ತು ಹಲಗೆಗಳನ್ನು ತೆಗೆ ತೆಗೆದು ಒಳಗೆ ಜೋಡಿಸಿ, ಆ ಮೇಲೆ ಕಸ ಹೊಡೆದುಕೊಂಡು, ಅಂಗಳಕ್ಕೆೆ ನೀರು ಚಿಮುಕಿಸಿ, ತಕ್ಕಡಿ ಒರೆಸಿ, ಅಲ್ಲೇ ಒಂದು ಕಪಾಟಿನಲ್ಲಿ ಫೋಟೋದೊಳಗಿದ್ದ ರಾಘವೇಂದ್ರ ಸ್ವಾಾಮಿ, ಲಕ್ಷ್ಮೀ, ಸರಸ್ವತಿ, ವೆಂಕಟೇಶ್ವರ, ಮನೆ ದೇವರು ಯಲಗೂರು ಹನುಮಪ್ಪ, ತಾಯಿ ತವರು ಮನಿ ದೇವರು ಸನ್ನತಿ ಚಂದಮ್ಮ ಮತ್ತು ಈತನ ಪರ್ಸನಲ್ ದೇವರಾದ ಶಿರಡಿ ಸಾಯಿಬಾಬಾ, ಹೆಂಡತಿ ಮನೆ ದೇವರಾದ ಕೊಲ್ಲಾಾಪುರ ಮಹಾಲಕ್ಷ್ಮೀ- ಇಷ್ಟು ಮಂದಿಗೆ ಊದಿನ ಕಡ್ಡಿಿ ಬೆಳಗಿ, ಗಲ್ಲಗಲ್ಲ ಬಡಿದುಕೊಂಡು ನಮಸ್ಕರಿಸಿ, ಗಲ್ಲಾಾ ಪಟ್ಟಿಿಗೆ ಮುಂದಿನ ಕುರ್ಚಿಗೆ ಕೂತ ಮೇಲೆಯೇ-ಗಿರಾಕಿ ಬಂದರೆ-ವ್ಯಾಾಪಾರ ಆರಂಭಿಸುತ್ತಿಿದ್ದ.

ಇಷ್ಟು ಕೆಲಸಗಳ ಮಧ್ಯದಲ್ಲಿಯೇ ಯಾವನಾದರೂ ಗಿರಾಕಿ ಅಂಗಡಿ ತೆರೆಯುತ್ತಿಿದೆ ಎಂದು ತಿಳಿದು ‘ಅರ್ಜಂಟ್ ಇದನ್ನ ಕೊಡ್ರಿಿ ಅಂತ ಬಂದನೋ, ಅವನು ಸತ್ತನೆಂದೇ ಲೆಕ್ಕ. ಸರಕ್ಕನೆ ‘ಬಂದ್ಯಾಾ ಅಪ್ಪಾಾ ಬಾ, ಈಗ ಇನ್ನ ಅಂಗಡಿ ತೆಗೆಯಲಿಕ್ಕೆೆ ಹತ್ತೀನಿ ಕಾಣವಲ್ದೇನು? ಎಲ್ಲ ಕೆಲಸ ಆಗೋತನ ನಾ ಏನೂ ಕೊಡಾಂವ ಅಲ್ಲ ತಿಳಕೋ, ನಂದೊಂದ ಅಂಗಡಿ ಇಲ್ಲ, ಅಲ್ಲಿ ಎದುರಿನ ಶೆಟ್ಟಿಿ ಅಂಗಡಿ ತೆಗೆದದ ನೋಡು, ಅಲ್ಲಿ ತಗೋ, ಅವ ಬಾಗಿಲಾ ತೆಗಿಯೋದ ತಡ ಪೂಜೆ ಇಲ್ಲ, ಪುನಸ್ಕಾಾರ ಇಲ್ಲ, ಮಂತ್ರ ಇಲ್ಲ , ತಂತ್ರ ಇಲ್ಲ, ವ್ಯಾಾಪಾರಾನ ಶುರುಮಾಡ್ತಾಾನ, ಅಲ್ಲಿ ತಗೋ’ ಎಂದು ಬೈದು ಬಂದ ಗಿರಾಕಿಯನ್ನ ಅಟ್ಟಿಿಬಿಡುತ್ತಿಿದ್ದ.

ಎಲ್ಲ ಮುಗಿಸಿ ಕೂತು ತಾಸಾದರೂ ಯಾವ ಗಿರಾಕಿನೂ ಬಾರದಿದ್ದರೆ ‘ತಾಸಾತು ಅಂಗಡಿ ತೆಗೆದು ಯಾವ ಒಬ್ಬ ನನ ಮಗಾನೂ ಬರವಲ್ಲ, ಇದ್ದಾಾರೋ ಏನು ಸತ್ತಾಾರೋ’ ಎಂದು ಬೈಯುತ್ತಿಿದ್ದ. ಇವನ ಅಂಗಡಿಯಲ್ಲಿ ಇದ್ದದ್ದನ್ನೆೆ ಕೇಳಬೇಕು, ಒಯ್ಯಬೇಕು, ಅದು ಬಿಟ್ಟು ಬೇರೆ ಅವರಿಗಿಷ್ಟವಾದ ಬ್ರ್ಯಾಾಂಡ್ , ಬೇರೆ ಏನೋ ಕೇಳಿದರೆ, ‘ಇಷ್ಟು ಸಾಮಾನು ಅವ ಇಲ್ಲಿ, ಕಣ್ಣಿಿಗೆ ಕಾಣವಲ್ದು ಏನು? ಯಾವದೂ ಒಂದು ಒಯ್ಯಬೇಕಪಾ. ಆರಿಸಿ ತಗೊಳ್ಳಿಿಕ್ಕೆೆ ಇದು ಮಾವನ ಮನಿ ಅಲ್ಲ, ಅಂಗಡಿ ಅದ ಅಂಗಡಿ’ ಎಂದು ಗದರುತ್ತಿಿದ್ದ, ಅಂಗಡಿಯಂತೂ ವಾರದಲ್ಲಿ ನಾಲ್ಕೈದು ದಿನ ಬಂದ್.

ಅಮವಾಸಿ, ಹುಣ್ಣಿಿವಿ ದಿನ ವಿಶೇಷ ಪೂಜಾ ಅಂತ ರಜ. ಏಕಾದಶಿ ಉಪವಾಸ ಅಂತ ರಜ, ಇನ್ನು ಸೋಮವಾರ ಈಶ್ವರನ ವಾರ, ಮಂಗಳವಾರ ಕಟಿಂಗ್ ಶಾಪ್‌ಗಳು ರಜ, ಅವುಗಳಿಗೆ ಬೆಂಬಲ ಕೋರಲು ಇವನದೂ ರಜ, ಬುಧವಾರ ಬೇಕುಬೇಕು, ಬೇಡಾಬೇಡಾ ತೆಗೆಯುತ್ತಿಿದ್ದ, ಗುರುವಾರ ರಾಘವೇಂದ್ರ ಸ್ವಾಾಮಿಗಳ ವಾರ, ಶುಕ್ರವಾರ ಅಂಗಡಿಯಲ್ಲೆೆ ಲಕ್ಷ್ಮೀಪೂಜಾ…ಹೀಗಾಗಿ ಅಂಗಡಿ ತೆರೆದರೂ ವ್ಯಾಾಪಾರ ಮಾಡುತ್ತಿಿದ್ದಿಲ್ಲ. ‘ಪೂಜಾ ಅದ, ಹೊರಗೇನೂ ಕೊಡಂಗಿಲ್ಲ, ರೊಕ್ಕ ಕೊಟ್ಟು ಹೋಗು, ನಾಳೆ ಬಂದು ಒಯ್ಯೋ’ ಅನ್ನುತ್ತಿಿದ್ದ. ಯಾರೂ ಈ ಸಾಹಸಕ್ಕೆೆ ಮುಂದಾಗುತ್ತಿಿದ್ದಿಲ್ಲ, ಶನಿವಾರ ಹನುಮಪ್ಪನ ವಾರ ರಜ, ಇನ್ನು ಭಾನುವಾರವಂತೂ ಎಲ್ಲರಿಗೂ ರಜೆ, ಹೊರಗೆ ಯಾರೂ ಬರೋದಿಲ್ಲ ಯಾರೂ ಅಂಗಡಿ ತೆಗೆಯೋದಿಲ್ಲ ನಾ ಒಬ್ನೆೆ ತೆಗೆದು ಮಂಗ ಆಗಲೇನು ಎಂದು ಅಂದೂ ಬಂದ್.

ಹೀಗಾಗಿ ವ್ಯಾಾಪಾರ ಹೇಗಾಗಬೇಕು? ಅದಕ್ಕಾಾಗಿ ನನ್ನ ಅಂಗಡಿ ವ್ಯವಹಾರ ಲಾಭ ತರಲಿ ಎಂದು ರಾಯರಲ್ಲಿ ಮೊರೆ ಹೊಕ್ಕು ಅಂಗಡಿಗೆ ಬೀಗ ಜಡಿದು ಮಂತ್ರಾಾಲಯಕ್ಕೆೆ ಪಾದಯಾತ್ರೆೆ ಹೊರಟ. ಹನ್ನೊೊಂದು ದಿನ ಇದರಲ್ಲಿ ಕಳೆದುಹೋಯಿತು, ಮತ್ತೆೆ ಚಿಂತಿತನಾದ ಗುಂಡಣ್ಣ ಇಪ್ಪತ್ತೊೊಂದು ದಿನ ವಾದಿರಾಜರ ಸೋಂದಾ ಕ್ಷೇತ್ರದಲ್ಲಿ ಸೇವಾ ಹಿಡಿದು ಅಲ್ಲಿ ಕಳೆದ. ಬಂದಮೇಲೆ ಸುಧಾರಿಸಿಕೊಳ್ಳಲು ಮೂರು-ನಾಲ್ಕು ದಿನ ಅಂಗಡಿ ರಜೆ ಘೋಷಿಸಿದ. ಅಂತೂ ಒಂದು-ಒಂದೂವರೆ ತಿಂಗಳಾದ ಮೇಲೆ ಒಂದು ದಿನ ಅಂಗಡಿ ತೆರೆದರೆ ಎಲ್ಲ ಸಾಮಾನುಗಳ ಮೇಲೂ ಧೂಳು, ಮಸಿ, ಹುಳ ಹುಪ್ಪಡಿ. ಎಲ್ಲ ಕಡೆ ಜೇಡರ ಬಲೆಗಳಿಂದ ಅಂಗಡಿ ಹೊಲಸಾಗಿ ಹೋಗಿತ್ತು. ಮತ್ತೆೆ ಅದರ ಸ್ವಚ್ಛತೆಗೆ ಎರಡು ಮೂರು ದಿನ ಹಿಡಿಯಿತು.

ಅಂತೂ ಒಂದು ದಿನ ಮತ್ತೆೆ ತೆಗೆದು ಕೂರಬೇಕೆಂದರೆ ಶ್ರಾಾವಣ ಬಂತು, ಅದಾದನಂತರ ಭಾದ್ರಪದ. ಮನೆಯಲ್ಲಿ ಗಣೇಶನನ್ನು ಕೂರಿಸುವದು, ಅದೂ ಹನ್ನೊೊಂದು ದಿನ. ನಿತ್ಯ ಕಡುಬಿನ ನೈವೇದ್ಯ, ಮಡಿ ಅಡಿಗಿ, ಪೂಜಾ, 11 ದಿನ ಗಣಪತಿಯನ್ನು ಕಳಿಸಿದ ಮೇಲೆ ಬರುವುದೇ ಪಕ್ಷಮಾಸ. ಎಲ್ಲ ಹಿರಿಯರ ಶ್ರಾಾದ್ಧಗಳು ಮನೆಯಲ್ಲಿ. ಏಕೆಂದರೆ ಗುಂಡಣ್ಣ ಮನೆಗೊಬ್ಬನೇ ಗಂಡಸುಮಗ, ಎಲ್ಲರಿಗೂ ಎಳ್ಳು-ನೀರು ಈತನೇ ಬಿಡಬೇಕು. ಹೀಗಾಗಿ ವ್ಯಾಾಪಾರಕ್ಕೂ, ಅಂಗಡಿಗೂ ತಾನೇ ತಾನಾಗಿ ಎಳ್ಳು ನೀರು ಹರಿದು ಹೋಯಿತು.

ಪಕ್ಷಮಾಸ ಮುಗೀತಿದ್ದಂತೆಯೇ ನವರಾತ್ರಿಿ ಒಂಬತ್ತು ದಿನ ಮನೆಯಲ್ಲಿ ದೀಪ ಹಾಕುವದು, ಘಟ ಸ್ಥಾಾಪನೆ ಎಂದು ಅಂಗಡಿ ಸಾಮಾನುಗಳನ್ನೆೆಲ್ಲ ಮನೆಗೇ ಬಳಸಿಬಿಟ್ಟ. ಮನೆಗೆ ಬೇಕಾದ ಸಾಮಾನು ತರಲು ಮಾತ್ರ ತನ್ನ ಅಂಗಡಿಗೆ ಬರುತ್ತಿಿದ್ದ. ಗುಂಡಣ್ಣ ಅಂಗಡಿಯ ಒಂದೇ ಹಲಗೆ ತೆಗೆದು ಒಳತೂರಿ ಸಾಮಾನು ಕಟ್ಟಿಿಕೊಂಡು ಹೊರಬರುತ್ತಿಿದ್ದ, ಆ ಒಂದು ಹಲಗೆ ತೆಗೆದದ್ದು ನೋಡಿ ಯಾವನೋ ಗಿರಾಕಿ ಬಂದರೆ, ಗುಂಡಣ್ಣ ‘ಬೋಳಿಮಗನೆ, ಪೂರ್ತಿ ಅಂಗಡಿ ತಕ್ಕೊೊಂಡು ಕೂತಾಗ ಬರ್ರೋೋ ಅಂತ ಹೊಯ್ಕೊೊಂಡ್ರು ಬರಲಾರದವ ಈಗ ಬಂದೇನು? ಹೋಗು ಬ್ಯಾಾರೆ ಕಡೆ’ ಎಂದು ಗದರಿಸುತ್ತಿಿದ್ದ.

‘ಏನ್ರಿಿ ಗುಂಡಣ್ಣ ಎಷ್ಟು ದಿನ ಆತು ನಿಮ್ಮ ಅಂಗಡಿ ಬಂದ್ ಬಿದ್ದು, ಅಂಗಡಿ ತೆಗೆಯುವದು ಅಂದ್ರ ಸಣ್ಣ ಮಾತಲ್ರಿಿ, ಇಪತ್ನಾಾಲ್ಕು ಗಂಟೆ ಕಾಲು ಮುರದವರ‌್ಹಂಗ, ಬಿದ್ದಿರಬೇಕರಿ ಅಂಗಡ್ಯಾಾಗ ಅಂದ್ರ ನಡೀತಾವರಿ, ಬಿಜೆನೆಸ್ಸು’ ಅಂದ್ರ, ಬರೋಬ್ಬರಿ ಬಾಳುವೀನ ಬಿಡಬೇಕಾಗ್ತದರಿ, ಗುಡಿಗೆ ಬಂದು ಹೋದಂಗ ಅಂಗಡಿಗೆ ಬಂದ್ರ ಅದು ಪೂಜಾರಿತನ ಅಲ್ಲರಿ, ಅಂಗಡಿ ಅಂದ್ರ ಅದು ಅಲ್ಲಿ ಕುಂದ್ರೊೊ ದೇವರ ನೀವಾಗಬೇಕರಿ, ನೀವು ಗಟ್ಟಿಿಯಾಗಿ ಕುಂತ್ರ, ಗಿರಾಕಿಗಳೆಂಬೋ ಭಕ್ತರು ತಮಗ ಬೇಕಾದಾಗ ಬಂದು ತಮಗ ಬೇಕಾದ್ದು ತಗೊಂಡು ಹೋಗ್ತಾಾರ್ರಿಿ. ಅವ ಏನ ಸಣ್ಣ ಅಂಗಡಿ ಇಟ್ಟಾಾನ ಅಂತ ಕೆಲವರು ಹಗುರ ಮಾತಾಡ್ತಾಾರ್ರಿಿ ಆದರ, ಅವ ಅಲ್ಲಿ ಕುಂತ್ರ ಮಾತ್ರ ದೇವರಾಗ್ತಾಾನಾರಿ’ ಅಂತ ಮಂದಿ ಹೇಳಿದರೆ ಉಭ ಇಲ್ಲ ಶುಭ ಇಲ್ಲ.

ಈ ಮಾತು ಎಲ್ಲ ಇಲ್ಲ ದಂಧೆಗಳಿಗೂ ಇದು ಅನ್ವಯಿಸುತ್ತದೆ ಅಲ್ಲವೆ? ನೀವು ಪಟ್ಟಾಾಗಿ ಕುಳಿತು ಕೊಳ್ಳದಿದ್ದರೆ, ಸಮಯ ಕೊಡದಿದ್ದರೆ, ಶ್ರದ್ಧೆೆ ಇರದಿದ್ದರೆ ಯಾವ ಉದ್ಯೋೋಗವೂ ನಿಮ್ಮ ಕೈ ಹಿಡಿಯವದಿಲ್ಲ. ಬರೀ ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬುದಲ್ಲ, ‘ಸಮಯೋ ರಕ್ಷತಿ ರಕ್ಷಿತಃ’ ಕೂಡಾ ನಿಜ. ಬಹಳ ಜನ ಸಮಯ ಕೊಡುವದು ಎಂದರೆ ಸ್ವಂತದ ಮೋಜು, ಮಜಾ, ಮಾಡುವದು ಎಂದು ಕೊಂಡಿದ್ದಾಾರೆ. ನಂಬಿದ ತತ್ತ್ವ, ಸಿದ್ಧಾಾಂತಗಳಿಗೂ ಸಮಯಕೊಟ್ಟರೆ ಮಾತ್ರ ಅವನು ಆ ರಂಗದ ದೇವರಾಗುತ್ತಾಾನೆ. ಕ್ರಿಿಕೆಟ್‌ನ ಸಚಿನ್ ತೆಂಡೂಲ್ಕರ್, ಅಂಬಾನಿ, ಇನ್ಫೋೋಸಿಸ್ ನಾರಾಯಣ ಮೂರ್ತಿ, ಪ್ರಧಾನಿ ಮೋದಿ, ನಟ ರಾಜಕುಮಾರ್ ಇವರೆಲ್ಲ ಹಿಡಿದ ಕೆಲಸವನ್ನೆೆ ದೇವರೆಂದುಕೊಂಡರು, ದೇವರೇ ಆಗಿಹೋದರು. ಇದು ನಮ್ಮ ಮುಂದಿರುವ ನಿಚ್ಚಳ ಸತ್ಯ.

Leave a Reply

Your email address will not be published. Required fields are marked *

error: Content is protected !!