Friday, 13th December 2024

ಇಳಯರಾಜ; ಇಳೆಯೇ ಹೆಮ್ಮೆಪಡುವ ಗೀತರಚನೆಕಾರ

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ಎ.ಆರ್.ರೆಹಮಾನ್. ಆದರೆ ಆತನೇನು ಇಸ್ಲಾಂ ರಾಷ್ಟ್ರದಿಂದ ವಲಸೆ ಬಂದ ಹುಟ್ಟು ಮುಸಲ್ಮಾನನೇನಲ್ಲ. ತಮಿಳುನಾಡಿನ ಪ್ರಬಲವರ್ಗ ಮೊದಲಿಯಾರ್ ಮನೆತನದ ಆರ್.ಕೆ.ಶೇಖರ್-ಕಸ್ತೂರಿಯ ಪುತ್ರ ದಿಲೀಪ್ ಕುಮಾರ್. ತಂದೆ ತೀರಿಕೊಂಡ ಮೇಲೆ
ಅದೇನು ಮೌಢ್ಯವೋ ಸ್ವಯಂಪ್ರೇರಣೆಯೋ ಆಮಿಷವೋ ವೈಯಕ್ತಿಕ ಅನುಕೂಲಕ್ಕಾಗಿ ಹಿಂದೂ ಧರ್ಮ ತೊರೆದು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡ ದಿಲೀಪ್ ಕುಮಾರ್ ಅಲಿಯಾಸ್ ಎ.ಆರ್.ರೆಹಮಾನ್.

ಆದರೆ ಆತನ ಕುಟುಂಬ ಅದೆಷ್ಟು ವಿಪರೀತವಾಗಿ ಇಸ್ಲಾಂ ಧರ್ಮ ಪಾಲಿಸುತ್ತಾರೆಂದರೆ ರೆಹಮನ್ ಬೆಳೆಯಲು  ಕಾರಣಕರ್ತ ರಬ್ಬರಾದ ತಮಿಳಿನ ಖ್ಯಾತ ಕವಿ, ಗೀತರಚನೆಕಾರ ಪೆರೈಸೂದನ್ ಅವರು ಒಮ್ಮೆ ರೆಹಮಾನ್ ಮನೆಗೆ ತೆರಳಿದಾಗ ಆತನ ತಾಯಿ ಯಾವ ಮಟ್ಟದ ಅಸಹಿಷ್ಣುತೆ ತೋರಿದರೆಂದರೆ ಪೆರೈಸೂದನ್ ಅವರನ್ನು ತಡೆದು ‘ನಮ್ಮ ಮನೆಯೊಳಗೆ ಬರಬೇಕಿದ್ದರೆ ನಿಮ್ಮ ಹಣೆಯಲ್ಲಿನ ವಿಭೂತಿ ಕುಂಕುಮವನ್ನು ಅಳಿಸಿ ಬನ್ನಿ’ ಎಂದಿದ್ದಳು.

ಸ್ವಾಮಿ ವಿವೇಕಾನಂದರು ಹೇಳಿದ್ದು ಇದನ್ನೇ ‘ಹಿಂದೂ ಒಬ್ಬ ಮತಾಂತರಗೊಂಡು ಹೋದರೆ ಒಬ್ಬ ಹಿಂದೂವಿನ ಸಂಖ್ಯೆ ಮಾತ್ರ ಕಡಿಮೆಯಾಗುವುದಿಲ್ಲ ಜತೆಗೆ ಒಬ್ಬ ಶತ್ರುವೂ ಹೆಚ್ಚಾಗುತ್ತಾನೆ’ ಎಂದು. ಇಂಥ ರೆಹಮಾನ್‌ಗಳಿಗೆ ನಮ್ಮ ದೇಶದಲ್ಲಿ ಆಸ್ಕರ್ರೂ ಸಿಗುತ್ತೇ ನೊಬೆಲ್ಲೂ ಸಿಗುತ್ತೆ ಬಿಡಿ. ಆದರೆ ಸ್ವಾಭಿಮಾನಗೇಡಿ ಹಿಂದೂಗಳು ಮಾತ್ರ ಸಹಿಷ್ಣುಗಳಾಗಿ ಆತನನ್ನು ಆರಾಧಿಸುತ್ತಲೇ ಇರುತ್ತಾರೆ.

ಆದರೆ, ಅವರೊಬ್ಬರಿದ್ದಾರೆ ಸಂಗೀತ ಕ್ಷೇತ್ರದಲ್ಲಿ. ಅವರು ಮಿಲ್ಟ್ರೀ ಹೋಟೆಲ್ ನಿಪುಣ ನಾದಬ್ರಹ್ಮನಂತಲ್ಲ. ಕತ್ತೆಯಂತಾದ ರಾಯರ ಕುದುರೆಯೂ ಅಲ್ಲ. ಇವರು ಸಾಕ್ಷಾತ್ ಸಂಗೀತ ಸರಸ್ವತಿ. ಅವರೇ ಆರ್. ಜ್ಞಾನದೇಶಿಕನ್ ಅರ್ಥಾತ್ ಇಳಯರಾಜ. ದಲಿತ ಕುಟುಂಬದಲ್ಲಿ ಜನಿಸಿದವರು. ಆಧುನಿಕ ಸಂಗೀತ ಕ್ಷೇತ್ರದ ಪುರಂದರದಾಸ. ಹದಿನೆಂಟು ವರ್ಷಗಳ ಹಿಂದೆ ಒಂದು ಚಿತ್ರಕ್ಕೆ ಸಂಗೀತ ನೀಡಲು ಒಪ್ಪದೇ ನಿರಾಕರಿಸಿಬಿಟ್ಟಿದ್ದರು.

ಕಾರಣ ಇಷ್ಟೇ, ಆ ಚಿತ್ರ ಹಿಂದುತ್ವವವನ್ನು ಧಿಕ್ಕರಿಸುತ್ತ ಆರ್ಯ-ದ್ರಾವಿಡ ಎಂಬ ಭೇದ ಹರಡುತ್ತ ಹಿಂದೂ ದೈವಗಳನ್ನು ಅವ ಹೇಳನ ಮಾಡಿಕೊಂಡೇ ಬದುಕು ಮುಗಿಸಿದ ಪೆರಿಯಾರ್ ಜೀವನಾಧಾರಿತವಾಗಿತ್ತು. ಆ ಚಿತ್ರಕ್ಕೆ ಸಂಗೀತ ಒದಗಿಸಲು ನಿರ್ಮಾಪಕ, ನಿರ್ದೇಶಕರು ಇಳಯರಾಜ ಅವರನ್ನು ಕೋರಿದಾಗ ರಾಜಾ ಅವರು ಹೇಳಿದ್ದೇನು ಗೊತ್ತೇ? ‘ನನ್ನ ಸಂಗೀತದಲ್ಲಿ ತಾಯಿ ಸರಸ್ವತಿದೇವಿ ವಿಜೃಂಭಿಸುತ್ತಿದ್ದಾಳೆ.

ಆದರೆ ದೇವರನ್ನೇ ನಂಬದ ನಾಸ್ತಿಕ ಪೆರಿಯಾರ್ ಚಿತ್ರಕ್ಕೆ ನಾನು ಹೇಗೆ ಸಂಗೀತ ಸಂಯೋಜಿಸಲು ಸಾಧ್ಯ? ನೆವರ್’ ಎಂದುಬಿಟ್ಟರು. ಆಗಲೇ ನೋಡಿ ಚಿತ್ರರಂಗ ಮತ್ತು ರಾಜಕೀಯ ಎರಡೂ ಕಡೆಗಳಿಂದ ಧರ್ಮ ಸಂಘರ್ಷವನ್ನು ಎದುರಿಸುವಂತಾಗಿದ್ದು. ಇನ್ನೊಮ್ಮೆ ಮಾಧ್ಯಮದವರು ಇಳಯರಾಜ ಅವರನ್ನು ಕೆಣಕುವಂತೆ ಏಸುಕ್ರಿಸ್ತನ ಪುನರುತ್ಥಾನದ ವಿಚಾರವಾಗಿ ಪ್ರಶ್ನಿಸುತ್ತಾರೆ. ಆಗ ರಾಜಾ ಅವರು ಕೊಟ್ಟ ಉತ್ತರ ‘ಏಸುಕ್ರಿಸ್ತನ ಪುನರುತ್ಥಾನ ಆಗಿತ್ತೊ ಇಲ್ಲವೋ ಗೊತ್ತಿಲ್ಲ ಆದರೆ, ರಮಣ ಮಹರ್ಷಿಗಳ
ಪುನರುತ್ಥಾನ ಆಗಿದ್ದು ಖಂಡಿತಾ ಹೌದು’ ಎನ್ನುತ್ತಾರೆ.

ಇಷ್ಟಕ್ಕೇ ಮತಾಂತರ ಮಿಷನರಿಗಳು ಬೆಂಗಳೂರಿನ ಮ್ಯಾಜಿಸ್ಟ್ರೇಟ್ ಕೋರ್ಟ್‌ವೊಂದರಲ್ಲಿ ಇಳಯರಾಜರ ವಿರುದ್ಧ ದೂರು ನೀಡಿ ಮಂಡಿಯೂರಿ ಕ್ಷಮೆ ಕೋರಬೇಕೆಂದು ಒತ್ತಾಯಿಸಿದ್ದರು. ಮೊನ್ನೆಯಷ್ಟೇ ರಾಜ್ಯಸಭೆಗೆ ನಾಮನಿರ್ದೇಶನ ಗೊಂಡಿರುವ ಪೈಕಿ ಇಳಯರಾಜರೂ ಒಬ್ಬರಾಗಿದ್ದಾರೆ. ನಮ್ಮ ಧರ್ಮನೆಲದ ಪೂಜ್ಯ ಡಾ.ವೀರೇಂದ್ರ ಹೆಗ್ಗಡೆಯವರು, ಕಥೆ-ಚಿತ್ರಕಥೆಯ ಪಂಡಿತ ವಿ. ವಿಜಯೇಂದ್ರಪ್ರಸಾದ್, ಚಿನ್ನದ ಜಿಂಕೆ ಪಿ.ಟಿ. ಉಷಾ ಅವರೊಂದಿಗೆ ಇವರೀಗೂ ಆ ಗೌರವ ದಕ್ಕಿದೆ.

ಹಾಗೆಂದು ಈ ಪೈಕಿ ಯಾರೊಬ್ಬರು ತಮಗೆ ಇಂಥದೊಂದು ಗೌರವ-ಸ್ಥಾನ ಲಭಿಸುತ್ತದೆಂದು ನಿರೀಕ್ಷಿಸಿರಲಿಲ್ಲ ಮತ್ತು ಅಂಥ ಸ್ಥಾನಕ್ಕಾಗಿಯೇ ಕೆಲಸ ಮಾಡಿದವರೂ ಅಲ್ಲ. ಇಂಥವರ ಆಯ್ಕೆಯಿಂದಾಗಿ ರಾಜ್ಯಸಭೆಯ ಗೌರವ ಹೆಚ್ಚಿದೆ. ಆದರೆ, ಅದರಲ್ಲಿ
ಇಳಯರಾಜ ಅವರ ಆಯ್ಕೆಯನ್ನು ಕೆಲ ಹೊಟ್ಟಿಕಿಚ್ಚಿನ ಆಕೃತಿಗಳು ವಿರೋಽಸಿವೆ. ಇದಕ್ಕೆ ಕಾರಣ ಇಳಯರಾಜ ಅವರು ಪ್ರಧಾನಿ ಮೋದಿಯವರನ್ನು ಹೊಗಳಿದ್ದು.

ಕಳೆದ ಏಪ್ರಿಲ್‌ನಲ್ಲಿ ದಿಲ್ಲಿ ಮೂಲದ ಬ್ಲೂಕಾರ್ಟ್ ಡಿಜಿಟಲ್ ಫೌಂಡೇಷನ್ ‘ಅಂಬೇಡ್ಕರ್ ಅಂಡ್ ಮೋದಿ- ರಿಫಾರ್ಮರ್ಸ್ ಐಡಿಯಾಸ್, ಪರ್ಫಾಮರ್ಸ್ ಇಂಪ್ಲಿಮೆಂಟೇಷನ್ಸ್’ (Ambedkar Modi- Reformer’s Ideas, Performer’s Implementations) ಎಂಬ ಕೃತಿಯನ್ನು ಪ್ರಕಟಿಸಿತ್ತು. ಈ ಕೃತಿಗೆ ಇಳಯರಾಜ ಅವರದ್ದೇ ಮುನ್ನುಡಿ. ಆ ಮುನ್ನುಡಿ ಯಲ್ಲಿ ಪ್ರಧಾನಿ ಮೋದಿಯವರು ಮತ್ತು ಬಾಬಾಸಾಹೇಬರು ಬೆಳೆದು ಬಂದ ಹಾದಿ, ಅವರು ದೇಶಕ್ಕೆ ಸಮರ್ಪಿಸಿದ ಜೀವನ, ಅವರು ಸಾಧಿಸಿದ ಘಟ್ಟ ಇವುಗಳ ಕುರಿತು ಇಬ್ಬರನ್ನೂ ಪರಸ್ಪರ ಹೋಲಿಸಿ ಇಬ್ಬರೂ ಮಹಾನ್ ದೇಶಭಕ್ತರು ಎಂಬಂತೆ ಸಹಜ ವೈಯಕ್ತಿಕ ಅಭಿಪ್ರಾಯ ದಾಖಲಿಸಿ ದ್ದರು.

ಆದರೆ ಅದರ ತರ್ಕವನ್ನು ಅರ್ಥೈಸಿಕೊಳ್ಳದ ಮಂದಿ ಇಳಯರಾಜರನ್ನು ಅವಮಾನಿಸಿ ‘ಮೋದಿ ಭಕ್ತರು ಬಿಜೆಪಿ ಸೇರುತ್ತಾರೆ’ ಎಂದೆಲ್ಲ ಮೂದಲಿಸಲಾಗಿತ್ತು. ಆದರೆ ಇಳಯರಾಜ ಎಂದಿಗೂ ಇಂಥದಕ್ಕೆಲ್ಲ ಕೆಳಕ್ಕೆ ಇಳಿದವರಲ್ಲ. ಈಗಲೂ ಅವರು ಮುಂದಿನ ಐದು ವರ್ಷಕ್ಕಾಗುವಷ್ಟು ಸಂಗೀತದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶಕ್ಕೆ ಎಂಥವರು ಬೇಕು ಎಂಥವರು ನಾಲಾ ಯಕ್ಕು ಎಂಬುದನ್ನು ನಿರ್ಧರಿಸುವ, ಸೂಚಿಸುವ ಪಾಂಡಿತ್ಯ ಇಳಯರಾಜ ಅವರಿಗಿದೆ. ಅವರನ್ನು ವಿರೋಧಿಸುತ್ತಿರುವ ರಾಜ ಕಾರಣಿಗಳು, ಲದ್ದಿಜೀವಿಗಳು ಯಾರೇ ಇರಲಿ, ಅವರಲ್ಲಿ ಯಾರೊಬ್ಬರಿಗೂ ಇಳಯರಾಜರ ನೆರಳನ್ನೂ ಸೋಕಿಸಿಕೊಳ್ಳವ ಯೋಗ್ಯತೆಗಳಿಲ್ಲ.

ಒಬ್ಬ ದಲಿತ ಇಳಯರಾಜ ಹಿಂದುತ್ವದ ನಾಯಕ ಮೋದಿಯವರನ್ನು ಹೊಗಳುವುದು ಮಾತ್ರ ಈ ದರಿದ್ರರಿಗೆ ಸಹಿಸಿಕೊಳ್ಳ ಲಾಗುತ್ತಿಲ್ಲ. ಅವರಿಗೆ ರಾಜ್ಯಸಭೆಯ ಸ್ಥಾನ ಲಭಿಸಿರಬಹುದು. ನಾಲ್ಕೈದು ವರ್ಷಗಳಲ್ಲಿ ನಿವೃತ್ತಿಯೂ ಆಗಬಹುದು. ಆದರೆ ದೇಶದ ಸಂಗೀತ ಕ್ಷೇತ್ರದಲ್ಲಿ ನಿಂತಿರುವ ಅವರ ಆಕೃತಿ ಮಾತ್ರ ಆನೆಯಂತೆ. ದೇಶಕ್ಕೆ ಎಸ್. ಪಿ.ಬಾಲಸುಬ್ರಹ್ಮಣ್ಯಂ ಅವರು ಹೇಗೋ ಹಾಗೆಯೇ ಇಳಯರಾಜರೂ ಸಹ. ಕಡುಬಡತನದಿಂದ ಬಂದು ಹಾರ್ಮೋನಿಯಂ ಕಂಕುಳಲ್ಲಿ ಇಟ್ಟುಕೊಂಡು ಬೆಂಗಳೂರು, ಮದ್ರಾಸು ಸುತ್ತಿ ಈ ಮಟ್ಟದ ದೈತ್ಯ ಸಾಧಕನಾಗಿ ನಿಂತಿರುವ ಅವರು ಜೀವಂತ ದಂತಕಥೆಯೇ.

ತಾನೆಷ್ಟೇ ಎತ್ತರಕ್ಕೆ ಬೆಳೆದರೂ ಈಗಲೂ ಅವರು ಸಾಧಾರಣ ಜುಬ್ಬ, ಪಂಚೆ ಧರಿಸಿ ಸದಾ ಹಣೆತುಂಬ ಕುಂಕುಮವಿರಿಸಿ
ಉತ್ಸಾಹ ಭರಿತರಾಗಿ ಕೆಲಸ ಮಾಡುತ್ತಾರೆ. ಸರಸ್ವತಿದೇವಿಯ ಮಹಾನ್ ಆರಾಧಕರಾದ ಇಳಯರಾಜ ಅವರು ಇದುವರೆಗೂ ನೀರಸವಾದ, ಪೇಲವ ಸಂಗೀತವನ್ನು ನೀಡಿದವರಲ್ಲ. ಒಂದು ಕಾಲದಲ್ಲಿ ಸಿಂಗೀತಂ ಶ್ರೀನಿವಾಸ್ ರಾವ್, ಕೆ. ವಿಶ್ವನಾಥ್, ಕೆ.
ರಾಘವೇಂದ್ರರಾವ್, ಕೆ.ಬಾಲಚಂದರ್, ಮಣಿರತ್ನ, ರಾಮಗೋಪಾಲ್ ವರ್ಮಾ, ಶಂಕರ್‌ನಾಗ್‌ರಂಥ ಅನೇಕ ನಿರ್ದೇಶಕರು ಇಳಯರಾಜ ಅವರನ್ನು ಕಾಯಂ ಆಗಿಸಿಕೊಂಡಿದ್ದರು.

ಹಾಗೆಯೇ ಭಾರತದ ಅನೇಕ ಕಲಾವಿದರಿಗೂ ಇಳಯರಾಜ ಅವರ ಸಂಗೀತವೇ ಪ್ರಧಾನವಾಗಿತ್ತು. ಕನ್ನಡದಲ್ಲಿ ರಾಜಣ್ಣನವರ ‘ನೀ ನನ್ನ ಗೆಲ್ಲಲಾರೆ’ ಒಂದು ಚಿತ್ರಕ್ಕೆ ಸಂಗೀತ ನೀಡಿರುವ ರಾಜಾ ಅವರು ಇದುವರೆಗೂ ಸುಮಾರು ಏಳು ಸಾವಿರಕ್ಕೂ ಮೀರಿ
ಗೀತೆಗಳನ್ನು ಸಂಯೋಜಿಸಿ 1400ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿzರೆಂದರೆ ಅವರಲ್ಲಿರುವ ಸಂಗೀತದ ಶಕ್ತಿ ಶಾರದಾಂಬೆಯದ್ದೇ ಅಲ್ಲವೇ? ಭಾರತ ದಲ್ಲಿ ಮೊಟ್ಟಮೊದಲ ಬಾರಿಗೆ ಕಂಪ್ಯೂಟರ್‌ನಲ್ಲಿ ರೆಕಾರ್ಡ್ ಮಾಡಿಕೊಂಡ ಮೊದಲ ಸಂಗೀತ ಸಂಯೋಜಕನೆಂಬ, 45 ನಿಮಿಷದಲ್ಲಿ ಬರೋಬ್ಬರಿ 9 ಗೀತೆಗಳಿಗೆ ರಾಗಸಂಯೋಜಿಸಿದ, ಕೇವಲ ಅರ್ಧ ದಿನದಲ್ಲಿ ಚಿತ್ರವೊಂದರ ಸಂಪೂರ್ಣ ಸಂಗೀತ ಸಂಯೋಜನೆಯನ್ನು ಪೂರ್ಣಗೊಳಿಸಿದ ದಾಖಲೆ.

ಇಂಥ ವಿಶೇಷತೆಗಳಿಗೆ ಲೆಕ್ಕವೇ ಇಲ್ಲ. ಇಳಯರಾಜರ ಸಂಗೀತ ಬರಿಯ ಗೀತೆಗಳಿಗೆ ಸೀಮಿತವಾಗಿಲ್ಲ. ಅವರು ಚಿತ್ರಗಳಿಗೆ ನೀಡುತ್ತಿದ್ದ ಹಿನ್ನೆಲೆ ಸಂಗೀತವಿದೆಯಲ್ಲ, ಅದೂ ಸಹ ಪ್ರೇಕ್ಷಕರ ಮನದಲ್ಲಿ ಮಿಡಿಯುತ್ತಲೇ ಇರುತ್ತದೆ. ತಮಿಳಿನಲ್ಲಿ ಸಾಹಿತ್ಯ
ರಚಿಸುವ ಇಳಯರಾಜ ಅವರಿಗೆ ಕನ್ನಡದ ಮೇಲೆ ಅಪಾರವಾದ ಮಮಕಾರವಿದೆ. ಕನ್ನಡದಿಂದ ಅವಕಾಶಗಳು ಬಂದಾಗ ಬಹಳ ಖುಷಿಪಟ್ಟು ಸಂಗೀತ ಸಂಯೋಜಸಿದ್ದಾರೆ.

ಕನ್ನಡದ ಒಂದು ಹಾಡನ್ನು ಬರೆದು ರಾಗಸಂಯೋಜಿಸಬೇಕೆಂಬ ಛಲದಿಂದ ಶಿವಣ್ಣನ ‘ಶಿವಸೈನ್ಯ’ ಚಿತ್ರದಲ್ಲಿ ‘ಜೈಲಲಿ ಹುಟ್ಟಿ ಬಯಲಿಗೆ ಬಂದೆ ಕೃಷ್ಣ ಕೃಷ್ಣ ’ ಎಂಬ ಒಂದು ಹಾಡನ್ನು ಬರೆದರು. ಅನೇಕ ಗೀತೆಗಳನ್ನು ಸ್ವತಃ ತಾವೇ ಗಾಯಕನಾಗಿ ಹಾಡಿ ದ್ದಾರೆ. ಭರ್ಜರಿ ಬೇಟೆಯ ‘ಹಕ್ಕಿಗೂಡು ಒಂದು ಮುದ್ದುಮರಿ ಎರಡು’ ಗೀತೆಯ ಜನಪ್ರಿಯತೆಯೇ ಸಾಕ್ಷಿ. ಕನ್ನಡದ ಮೇರು
ಸಂಗೀತ ಸಂಯೋಜಕರಾದ ಜಿ.ಕೆ.ವೆಂಕಟೇಶ್ ಅವರ ಗರಡಿಯಲ್ಲಿ ಪಳಗಿದ ಇಳಯರಾಜ ಅವರ ಒಂದು ‘ರಾಜಮುದ್ರೆ’ ಎಂದರೆ ಕಸ್ತೂರಿ ನಿವಾಸ ಚಿತ್ರದಲ್ಲಿನ ಆಡಿಸಿ ನೋಡು ಗೀತೆಯ ಆರಂಭದಲ್ಲಿ ಬರುವ ವಾದ್ಯ ಸಂಗೀತವನ್ನು ನುಡಿಸಿದವರು ಸಾಕ್ಷಾತ್ ಇಳಯರಾಜಾ ಅವರೇ.

ಮೊನ್ನೆ ಅಪ್ಪು ತೀರಿಕೊಂಡಾಗ ಅವರಿಗೆ ಮೋಕ್ಷ ಸಿಗಲಿ ಎಂದು ಕೂಡಲೇ ಅರುಣಾಚಲ ಕ್ಷೇತ್ರದ ಶ್ರೀರಮಣ ಭಗವಾನ್ ಸನ್ನಿಽಗೆ ತೆರಳಿ ಮೋಕ್ಷ ದೀಪವನ್ನು ಬೆಳಗಿಸಿದರಲ್ಲ, ಅಷ್ಟು ಸಾಕು ಕನ್ನಡಿಗರಿಗೆ ಇಳಯರಾಜರನ್ನು ಅರಿಯಲು. ಅವರ ಸ್ವಯಂಸಾಧನೆಗೆ ದೇಶವಿದೇಶಗಳಲ್ಲಿ ದೊರೆ ತಂಥ ಅಭಿಮಾನಿಗಳ ವರ್ಗ ದೇಶವಿದೇಶಗಳ ವಿಶ್ವವಿದ್ಯಾಲಯಗಳಿಂದ ಹರಿದುಬಂದ ಗೌರವ ಪ್ರಶಸ್ತಿ
ಪುರಸ್ಕಾರ ಮಾನ್ಯತೆಗಳು ಬಹುಶಃ ಅದೇ ಒಂದು ಗ್ರಂಥ. ಹಾಗೆಯೇ ಎಲ್ಲರ ಬದುಕಿನಲ್ಲೂ ಜರುಗುವ ಅನಿರೀಕ್ಷಿತಗಳಂತೆ ಇಳಯ ರಾಜ ಅವರ ಬದುಕಿನಲ್ಲೂ ಜರುಗಿ ಬಿಟ್ಟಿತು.

ಒಳ್ಳೆಯ ತಂದೆಗೆ ಒಳ್ಳೆಯ ಮಕ್ಕಳಾಗಿ ಬೆಳೆಯುವುದಿಲ್ಲವೆಂಬಂತ್ತೆ ಮಗ ಯುವನ ಶಂಕರರಾಜ ಸಂಗೀತ ಕ್ಷೇತ್ರದಲ್ಲಿ ಸಾಧಿಸುವು ದನ್ನು ಬಿಟ್ಟು ಮೂರು ವಿವಾಹಗಳನ್ನಾಗಿ ಕೊನೆಗೆ ಹಿಂದೂ ಧರ್ಮವನ್ನೇ ತೊರೆದು ಇಸ್ಲಾಂ(ರೆಹಮಾನ್ ಪ್ರಭಾವ?) ಮತಕ್ಕೆ ಮತಾಂತರಗೊಳ್ಳುತ್ತಾನೆ. ವೈಯಕ್ತಿಕ ವಿಚಾರಗಳೇನೇ ಇರಲಿ ಇಂದು ಇಳಯರಾಜ ಅವರು ಕಳೆದ ಅರವತ್ತು ವರ್ಷಗಳ ಪಯಣ ದಲ್ಲಿ ದೇಶವನ್ನು ಸಂಪೂರ್ಣ ಅರ್ಥ ಮಾಡಿಕೊಂಡಿದ್ದಾರೆ. ದೇಶದ ಭವಿಷ್ಯ ಹೇಗೆ ಯಾರಿಂದ ಎಂಬ ಅನುಭೂತಿ ಯನ್ನು ಪಡೆದಿದ್ದಾರೆ.

ತಮ್ಮ ಕ್ಷೇತ್ರದ ಮೂಲಕ ಸಮಾಜಕ್ಕೆ ಅನನ್ಯ ಸೇವೆ ನೀಡಿದ್ದಾರೆ. ಇನ್ನು ರಾಜ್ಯಸಭಾ ಸದಸ್ಯರಾಗಿ ಸಂಸತ್ ಸದಸ್ಯರಿಗೆ ಒಂದೊಳ್ಳೆ
ಮಾರ್ಗದರ್ಶನ ನೀಡಿ ಸಂಸತ್ ಭವನಕ್ಕೆ ಒಟ್ಟಾರೆ ದೇಶಕ್ಕೆ ವೈಚಾರಿಕ ವ್ಯಕ್ತಿಯಾಗಿ ಬೆಳಗಲಿ. ವಿಶ್ವವೇ ಒಪ್ಪಿಕೊಂಡಿರುವ ಇಳಯರಾಜರನ್ನು ಮೊದಲಿಗೆ ದಲಿತರೆಂದುಕೊಂಡು ನಿರಾಶರಾಗುವಯುವ ಸಮೂಹ ದಿಕ್ಕುತಪ್ಪಿಸುವ ಸಮಯಸಾಧಕ ಡೋಂಗಿಗಳನ್ನು ಸ್ವಾರ್ಥಿಗಳನ್ನು ದೂರವಿಟ್ಟು ಇಳಯರಾಜರನ್ನು ಆದರ್ಶ ವ್ಯಕ್ತಿಯಾಗಿ ಪರಿಗಣಿಸುವಂತಾಗಲಿ.