ಡಾ. ಪ್ರಮೀಳಾ ಮಾಧವ್, ಬೆಂಗಳೂರು
ಇತ್ತೀಚೆಗೆ, ಆಗಸ್‌ಟ್ 11, 2019ರಂದು, ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಶಿಕ್ಷಣದ ಭಾಷಾ ಮಾಧ್ಯಮವನ್ನು ಕುರಿತು ನಾಡಿನ ವಿದ್ವಾಾಂಸರ ಅಭಿಪ್ರಾಾಯ ಸಂಕಲನವಾದ ‘ನೆಲದ ನುಡಿಯ ನಂಟು’ (ಸಂಪಾದಕರಾದ ಜಿ.ಎಸ್.ಜಯದೇವ ಮತ್ತು ಎಚ್.ಎನ್. ಮುರಳೀಧರ) ಎಂಬ ಕೃತಿಯ ಬಿಡುಗಡೆ ಸಮಾರಂಭ ನಡೆಯಿತು. ಆ ಸಮಾರಂಭದಲ್ಲಿ ಅನೇಕರು ಕನ್ನಡ ಪರವಾಗಿ ಮಾತನಾಡಿದರು. ಸರಕಾರ ಕನ್ನಡ ಶಾಲೆಗಳಲ್ಲಿ ಇಂಗ್ಲಿಿಷ್ ಮಾಧ್ಯಮವನ್ನು ಆರಂಭಿಸಿದುದನ್ನು ಖಂಡಿಸಿ ತಕ್ಷಣವೇ ಅದನ್ನು ಹಿಂತೆಗೆದುಕೊಳ್ಳುವಂತೆ ಮಾಡುವ ನಿರ್ಣಯವನ್ನೂ ತೆಗೆದುಕೊಂಡರು. ಇದರ ಬಗ್ಗೆೆ ಚರ್ಚೆ, ಸಂವಾದಗಳನ್ನು ನಡೆಸುವ ಮಾತುಗಳನ್ನೂ ಆಡಿದರು. ಮುಂದೇನಾಯ್ತೋ ಗೊತ್ತಾಾಗಲಿಲ್ಲ.
ಮಣ್ಣಿಿನಲ್ಲಿ ಆಳವಾಗಿ ಬೇರುಬಿಟ್ಟ ಒಂದು ಮರದ ಸತ್ವ, ಶಕ್ತಿಿಗಳನ್ನು ಅರಿಯಬೇಕಿದ್ದರೆ ಅದರ ತಾಯಿಬೇರಿನ ಆರೋಗ್ಯವನ್ನರಿಯುವುದು ಎಷ್ಟು ಅಗತ್ಯವೋ ಹಾಗೆಯೇ ಒಂದು ದೇಶದ ಹಿರಿಮೆ ಗರಿಮೆಗಳು ಅರ್ಥವಾಗಬೇಕಿದ್ದರೆ ಆ ಮಣ್ಣಿಿನ ಸಂಸ್ಕೃತಿಯ ಮೂಲಸತ್ವವನ್ನು ಅರಿಯಬೇಕು. ಬದುಕಿನ ಆಚಾರ ವಿಚಾರಗಳು, ನಡೆನುಡಿಗಳು, ಸಂಪ್ರದಾಯನಂಬಿಕೆಗಳು, ಹಬ್ಬಹರಿದಿನಗಳು ಇವು ಆಯಾ ದೇಶದ ಸಾಂಸ್ಕೃತಿಕ ಮಟ್ಟವನ್ನು ದಿಗ್ದರ್ಶಿಸುವ ಮಾರ್ಗದರ್ಶಿಗಳು. ಕನ್ನಡ ಸಾಹಿತ್ಯ, ಸಂಸ್ಕೃತಿ ಅತ್ಯಂತ ಉನ್ನತವಾದುದು, ವಿಶಾಲವಾದುದು. ಕನ್ನಡ ಇತರ ಎಲ್ಲ ಭಾಷೆಗಳಿಗಿಂತ ಅಧಿಕವಾದ ಪ್ರಶಸ್ತಿಿಗಳನ್ನು ಪಡೆದಿದೆ. ಶಾಸ್ತ್ರೀಯ ಭಾಷೆಯ ಮನ್ನಣೆಗೆ ಪಾತ್ರವಾಗಿದೆ. ಒಂದು ಭಾಷೆ ಸಂಪನ್ನವಾಗುವುದು ಅದರ ಸಾಹಿತ್ಯ, ಸಂಸ್ಕೃತಿ ಮತ್ತು ವಿದ್ವತ್ ಪರಂಪರೆಯಿಂದ. 2000 ವರ್ಷಗಳ ಹಿನ್ನೆೆಲೆಯುಳ್ಳ ಈ ಸಂಪತ್ತನ್ನು ಉಳಿಸಿ, ಬೆಳೆಸುವುದು ಕನ್ನಡನೆಲದಲ್ಲಿ ಬದುಕುವ ಪ್ರತಿಯೊಬ್ಬರ ಜವಾಬ್ದಾಾರಿಯಾಗಿದೆ. ಈ ನಿಟ್ಟಿಿನಲ್ಲಿ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಇತರ ಕೆಲವು ಸಂಘ, ಸಂಸ್ಥೆೆಗಳು ಪ್ರಶಂಸಾರ್ಹ ಕಾರ್ಯಕ್ರಮಗಳನ್ನು ನಡೆಸುತ್ತಿಿರುವುದು ನಿಜವಾದರೂ ಈ ದಿಸೆಯಲ್ಲಿ ಸರಕಾರದ ಹೊಣೆಯೇ ಎಲ್ಲಕ್ಕಿಿಂತ ಅಧಿಕವಾಗಿದೆ. ಸಮ್ಮೇಳನ, ರಾಜ್ಯೋೋತ್ಸವಗಳ ಹೆಸರಲ್ಲಿ ಯಾರ್ಯಾಾರನ್ನೋೋ ಮೆಚ್ಚಿಿಸಲು, ಪ್ರದರ್ಶಿಸಲು ಕೋಟ್ಯಂತರ ಹಣ ಖರ್ಚು ಮಾಡಿದರೆ ಮುಗಿಯಲಿಲ್ಲ. ಕರ್ನಾಟಕದಾದ್ಯಂತ ಕನ್ನಡವನ್ನೇ ವ್ಯವಹಾರ ಭಾಷೆಯಾಗಿ, ಆಡಳಿತ ಭಾಷೆಯಾಗಿ ಕಡ್ಡಾಾಯಮಾಡಿ ಕನ್ನಡ ಸಾಹಿತ್ಯ, ಸಂಸ್ಕೃತಿಯ ಬಲಸಂವರ್ಧನೆಗೆ ನಿರಂತರ ಪ್ರಾಾತಿನಿಧ್ಯ, ಪ್ರಾಾಶಸ್ತ್ಯ ಕೊಡಬೇಕು. ಭಾಷಾಕೀಳರಿಮೆ ಬರದಂತೆ ಎಲ್ಲ ಹಂತಗಳಲ್ಲೂ ಕನ್ನಡ ಕಲಿಕೆಗೆ ಪ್ರೋೋತ್ಸಾಾಹ ಸಿಗಬೇಕು. ಕನ್ನಡ ಕಲಿತವರು ಕೂಪಮಂಡೂಕಗಳಾಗದಿರಲು ಎಲ್ಲ ಜ್ಞಾಾನಶಾಖೆಗಳನ್ನೂ ತಲಪಬಲ್ಲ ಪ್ರಬುದ್ಧವಾದ ಪಠ್ಯಗಳಿರಬೇಕು.
ಕನ್ನಡ ಮಾಧ್ಯಮದಲ್ಲಿ ಓದಿದ ಪ್ರತಿಯೊಬ್ಬ ವಿದ್ಯಾಾರ್ಥಿಯಲ್ಲೂ ‘ನಾನು ಕನ್ನಡ ಕಲಿತುದು ಸಾರ್ಥಕವಾಗಿದೆ. ನನ್ನ ಬದುಕು, ಭವಿಷ್ಯವನ್ನು ರೂಪಿಸಲು ಪೂರಕವಾಗಬಲ್ಲ ಜ್ಞಾಾನ, ಮೌಲ್ಯಗಳನ್ನು ಪಡೆದಿದ್ದೇನೆ. ನನ್ನ ಯೋಗ್ಯತೆ, ಅರ್ಹತೆಗಳಿಗೆ ಪುರಸ್ಕಾಾರ ಸಿಗುತ್ತದೆ.’ ಎಂಬ ಆತ್ಮವಿಶ್ವಾಾಸ ಮೂಡಿಸುವ ಶಿಕ್ಷಣವಿರಬೇಕು. ವೃತ್ತಿಿ ಯಾವುದೇ ಇರಲಿ ಕರ್ನಾಟಕದಲ್ಲಿ ವಾಸಿಸುವ ಪ್ರತಿಯೊಬ್ಬರಲ್ಲೂ ‘ಕನ್ನಡ ನಮ್ಮ ಭಾಷೆ, ನಮ್ಮ ಅಂತರಂಗದ ಭಾಷೆ’ ಎನ್ನುವ ಮನೋಭಾವ ಮೂಡುವಂತೆ ಕಾರ್ಯಕ್ರಮಗಳನ್ನು ರೂಪಿಸಬೇಕು. ತಮಿಳುನಾಡುನಲ್ಲಿ ತಮಿಳಿಗೆ, ಕೇರಳದಲ್ಲಿ ಮಲಯಾಳಕ್ಕೆೆ ಸಾಧ್ಯವಾದುದು ಕರ್ನಾಟಕದಲ್ಲಿ ಕನ್ನಡಕ್ಕೆೆ ಏಕೆ ಸಾಧ್ಯವಾಗುವುದಿಲ್ಲ? ಕನ್ನಡ ನಾಡಿನಲ್ಲಿ ಮಾತ್ರ ಕನ್ನಡ ಶಾಲೆಗಳಲ್ಲಿ ಓದಿದ ಮಕ್ಕಳು ಕೀಳರಿಮೆಯಿಂದ ಬಳಲುವುದೇಕೆ? ಕನ್ನಡನಾಡಿನಲ್ಲಿ ಮಾತ್ರ ಕನ್ನಡವನ್ನು ಉಳಿಸಿಕೊಳ್ಳಲು ಹೋರಾಟಕ್ಕಿಿಳಿಯಬೇಕಾದ ದುರವಸ್ಥೆೆಯೇಕೆ? ದಶಕಗಳ ಹಿಂದೆಯೇ ‘ಸಾಯುತಿದೆ ನಮ್ಮ ನುಡಿ ಓ ಕನ್ನಡದ ಕಂದರಿರಾ..’ ಎಂದು ‘ಕುವೆಂಪು, ‘ಬೆಂಕಿಬಿದ್ದಿದೆ ಮನೆಗೆ ಓ ಬೇಗ ಬನ್ನಿಿ..’ ಎಂದು ಕಯ್ಯಾಾರ ಕಿಞ್ಞಣ್ಣ ರೈಯವರು ಕೂಗಿ ಕಣ್ಣೀರಿಡುವ ಪ್ರಸಂಗ ಏಕೆ ಬಂತು? ಕನ್ನಡನಾಡಿನಲ್ಲಿ ಕನ್ನಡಿಗರು ನೆಲೆಯಿಲ್ಲದವರಾಗಿ ಕಳೆದುಹೋಗ್ತಿಿರುವುದೇಕೆ? ಈ ಪ್ರಶ್ನೆೆಗಳಿಗೆ ನ್ಯಾಾಯವಾದ ಉತ್ತರವನ್ನು ಕೊಡುವ ಜವಾಬ್ದಾಾರಿ ಸರಕಾರಕ್ಕಿಿದೆ. ಪರವಿಚಾರ, ಪರಧರ್ಮಗಳನ್ನು ಸಹಿಸಬೇಕೆಂದರೆ ಅದರರ್ಥ ನಮ್ಮ ಸ್ವಂತಿಕೆ, ಸ್ವಾಾಭಿಮಾನವನ್ನು ಕಡೆಗಣಿಸಬೇಕೆಂದಲ್ಲ.
ಜಾಗತೀಕರಣದ ದಾಳಿಯಲ್ಲೋೋ ಮತ್ತಾಾವ ಕಾರಣದಿಂದಲೋ ದೂರವಾಗುತ್ತಿಿರುವ ಕನ್ನಡಭಾಷೆ, ಸಂಸ್ಕೃತಿಯ ಸತ್ವ, ಶಕ್ತಿಿ, ಗುಣಮಟ್ಟವನ್ನು ಸರ್ವತ್ರ ಎಚ್ಚರಿಸುವ ದಿಸೆಯಲ್ಲಿ ಸರಕಾರ ಕ್ರಿಿಯಾಶೀಲವಾಗಬೇಕು. ಸಭೆ, ಸಮಾರಂಭ, ಉತ್ಸವ, ಸಮ್ಮೇಳನಗಳಲ್ಲಿ ಮಂಡಿತವಾಗುವ ಕನ್ನಡಪರ ನಿರ್ಣಯಗಳು ಪತ್ರಿಿಕೆಯ ಹಾಳೆಗಳಲ್ಲಿ ಕೊಳೆತುಹೋಗದೆ ಅನುಷ್ಠಾಾನಕ್ಕೆೆ ಬರಬೇಕು. ಆಗ ಕನ್ನಡ ವಿದ್ವತ್ಪರಂಪರೆಯ ಧ್ವನಿಯೊಂದಿಗೆ ಈ ವಿಚಾರಸಂಕಿರಣ, ಅಧ್ಯಯನ ಗೋಷ್ಠಿಿ, ಸಾಹಿತ್ಯಸಂವಾದಗಳೆಲ್ಲ ಮಹತ್ವದ ದಾಖಲೆಗಳಾಗಿ, ಪೂರಕ ಸಾಮಗ್ರಿಿಗಳಾಗಿ, ಪ್ರಚೋದಕ ಶಕ್ತಿಿಯಾಗಿ ಅರ್ಥಪೂರ್ಣವಾಗುತ್ತವೆ.