Wednesday, 11th December 2024

ಕೊನೆಯಲ್ಲಿ ನಾವೆಲ್ಲರೂ ಒಂಥರಾ ಕತೆಗಳೇ!

‘ಜಗತ್ತಿನ ಅತಿ ಸಣ್ಣ ಕತೆ ಯಾವುದು ಗೊತ್ತಾ?’

ಒಮ್ಮೆೆ ಪತ್ರಕರ್ತ ವೈಎನ್ಕೆೆ ಈ ಪ್ರಶ್ನೆೆ ಕೇಳಿದರು. ನಾನು ಏನೋ ಹೇಳಲು ಆರಂಭಿಸುತ್ತಿಿದ್ದಂತೆ, ‘ನೋ..ನೋ.. ನೀವು ಹೇಳುತ್ತಿಿರುವುದು ಜಗತ್ತಿಿನ ಅತ್ಯಂತ ದೊಡ್ಡ ಕತೆ. ನಾನು ಕೇಳಿದ್ದು ಜಗತ್ತಿಿನ ಅತಿ ಸಣ್ಣ ಕತೆ ಯಾವುದು ಅಂತ?’ ಎಂದು ಹೇಳಿ ಕಾಲೆಳೆದಿದ್ದರು. ‘ಇಲ್ಲ, ನನಗೆ ಗೊತ್ತಿಿಲ್ಲ, ನೀವೇ ಹೇಳಿ?’ ಎಂದಾಗ, ಅವರು ಹೇಳಿದ್ದರು. ‘ಕನಸಿನಲ್ಲಿ ಡೈನೋಸಾರಸ್ ಕಂಡೆ, ಕಣ್ ಬಿಟ್ಟಾಾಗ ಎದುರಿಗಿತ್ತು.’ ಈ ಕತೆ ಕೇಳಿ, ‘ಹೌದಲ್ಲ, ಹತ್ತಾಾರು ಪುಟಗಳಲ್ಲಿ ಹೇಳಬಹುದಾದ್ದನ್ನು ಐದಾರು ಪದಗಳಲ್ಲಿ ಹೇಳಬಹುದಲ್ಲಾ?’ ಎಂದು ವಿಸ್ಮಯವಾಗಿತ್ತು.

ಅನಂತರ ವೈಎನ್ಕೆೆ ‘ಇನ್ನೂ ಚಿಕ್ಕದಾದ ಕತೆ ಇದೆ. ಅದು ಯಾವುದು ಗೊತ್ತಾಾ?’ ಎಂದು ಕೇಳಿದ್ದರು. ನಾನು ಇಲ್ಲ ಎಂದು ತಲೆ ಅಲ್ಲಾಡಿಸಿದಾಗ ಹೇಳಿದ್ದರು.‘ಅವನ ಮದುವೆಯಾಯಿತು. ಅಲ್ಲಿಗೆ ಕತೆ ಮುಗಿಯಿತು.’
ಅಂದಿನಿಂದ ನಾನು ಈ ಸಣ್ಣ ಕತೆಗಳ ಗೀಳಿಗೆ, ಸಹವಾಸಕ್ಕೆೆ ಬಿದ್ದೆ. ‘ಒಂದು ಕತೆ, ನೀಳ್ಗತೆ ಹೇಳುವ ಭಾವನೆಗಳನ್ನು ಇಂಥ ಸಣ್ಣ ಕತೆಗಳು ಹೇಳಬೇಕು. ಆ ಎರಡು-ಮೂರು ಸಾಲುಗಳು ನಮ್ಮ ಭಾವನೆಗಳ ಜತೆ ಸದಾ ದಾಳಿ ಮಾಡುತ್ತಿಿರಬೇಕು. ಈ ಭಾವನೆಗಳೇ ನಮ್ಮನ್ನು ಆಗಾಗ ತೋಯಿಸುತ್ತಿಿರಬೇಕು. ಅವು ನಮ್ಮಲ್ಲಿರುವ ಭಾವ ತರಂಗಗಳನ್ನು ಮೀಟುತ್ತಿಿರಬೇಕು. ಆಗ ನಾವು ಹೆಚ್ಚು ಮಾನವಂತರಾಗುತ್ತೇವೆ.’ ಎಂದು ವೈಎನ್ಕೆೆ ಹೇಳುತ್ತಿಿದ್ದ ಮಾತುಗಳು ಈಗಲೂ ಕಿವಿಯ ಬಾಗಿಲಲ್ಲಿ ಕುಳಿತಿವೆ.

ಇತ್ತೀಚೆಗೆ ನಾನೊಂದು ಸಣ್ಣ ಕತೆಯನ್ನು ಓದಿದೆ. ಬಹಳ ಸಂಕಟವಾಯಿತು. ಮುಂದೆ ಓದಲಾಗದೇ ಕೆಲ ಹೊತ್ತು ಅಲ್ಲಿಯೇ ನಿಂತು ಬಿಟ್ಟಿಿದ್ದೆ. ಆ ಕತೆಯನ್ನು ನನ್ನ ಹತ್ತಾಾರು ಸ್ನೇಹಿತರಿಗೆ ಕಳಿಸಿಕೊಟ್ಟೆೆ. ಅವರೂ ಸಹ ಅಂಥದೇ ಅಭಿಪ್ರಾಾಯ ಕಳಿಸಿಕೊಟ್ಟರು. ಇನ್ನು ಕೆಲವರು ಪ್ರತಿಕ್ರಿಿಯೆಯಾಗಿ ಅಳುಮುಖದ ಇಮೊಜಿ ಕಳಿಸಿದರು. ಈಗಲೂ ಆ ಸಣ್ಣ ಕತೆ ನೆನಪಾದರೆ ಒಂದು ಕ್ಷಣ ಆರ್ದ್ರನಾಗುತ್ತೇನೆ. ಅಂದ ಹಾಗೆ ಆ ಕತೆ- ‘ಶವಪೆಟ್ಟಿಿಗೆ ಚಿಕ್ಕದಾದಷ್ಟೂ ಹೊರಲಾಗದಷ್ಟು ಭಾರ!’ ಚಿಕ್ಕ ಮಕ್ಕಳ ಅಕಾಲಿಕ ನಿಧನವನ್ನು ಅತ್ಯಂತ ಹೃದಯಸ್ಪರ್ಶಿಯಾಗಿ ಹೇಳುವ ಸಣ್ಣ ಕತೆಯಿದು. ಈ ಕತೆಯನ್ನು ಓದಿದ ಕವಿ ಡಾ.ಚಂದ್ರಶೇಖರ ಕಂಬಾರರು, ‘ದಿನವೆಲ್ಲಾ ಚಡಪಡಿಸಿದೆ’ ಎಂದು ಹೇಳಿದ್ದರು. ಸಣ್ಣ ಕತೆಗಳು ಬೀರುವ ಪರಿಣಾಮ ಅಂಥದ್ದು.

ಅನೇಕರಲ್ಲಿ ಸಣ್ಣ ಕತೆಯೆಂದರೆ ಕಡಿಮೆ ಪದಗಳಲ್ಲಿ ಬರೆದದ್ದು ಎಂಬ ಭಾವನೆಯಿದೆ. ಕತೆಯ ಗಾತ್ರದ ದೃಷ್ಟಿಿಯಿಂದ ಅದು ನಿಜವಿರಬಹುದು. ಆದರೆ, ಅದು ಬೀರುವ ಪ್ರಭಾವ, ಪರಿಣಾಮ ಮಾತ್ರ ಅಗಾಧ. ಅದು ಹತ್ತಾಾರು ಸಾವಿರ ಪದಗಳಲ್ಲಿ ಹೇಳುವ ಕತೆಗಳಿಗೆ ಸಮಾನ. ಸಣ್ಣಕತೆಗಳಲ್ಲಿ ಪದಗಳ ಚುಟುಕುತನಕ್ಕಿಿಂತ ಭಾವನೆಗಳ ಮೇಲೆ ಅದು ಉಂಟು ಮಾಡುವ ಕುಟುಕುತನವೇ ಮುಖ್ಯ. ಸ್ವರೂಪದಲ್ಲಿ ಅದು ಚಿಕ್ಕದಿರಬಹುದು, ಆದರೆ, ಅದು ಭಾವಭಾರ! ಓದುತ್ತಿಿದ್ದಂತೆ ಮನಸ್ಸು ಹಗುರ! ಸಣ್ಣಕತೆಗಳು ಭಾವಸಾಂದ್ರವಾದಾಗಲೇ ಅದು ಪದಗಳ ಮಿತಿಯ ವ್ಯಾಾಪ್ತಿಿಯನ್ನು ದಾಟಿ ಬೆಳೆಯುತ್ತವೆ.

‘ಅವಳನ್ನು ಒಂದೇ ಪದದಲ್ಲಿ ಬಣ್ಣಿಿಸು’‘ಅಸಾಧ್ಯ!’

ಈ ಒಂದು ಸಣ್ಣಕತೆ ನಮ್ಮ ಮನಸ್ಸಿಿನಲ್ಲಿ ಹುಟ್ಟಿಿಸುವ ಯೋಚನೆಗಳು ನೂರಾರು. ಅವರವರ ಭಾವಕ್ಕೆೆ ತಕ್ಕ ಹಾಗೆ ಈ ಕತೆಯನ್ನು ಲಂಬಿಸುತ್ತಾಾ ಹೋಗಬಹುದು. ಲಂಬಿಸಿ ಲಂಬಿಸಿ ಕೊನೆಯಲ್ಲಿ ನಿಂತಾಗಲೂ ಅದಕ್ಕೆೆ ಪೂರ್ಣವಿರಾಮ ಎಂಬುದಿಲ್ಲ. ಅದು ಇನ್ನೂ ಮುಂದುವರಿಯುತ್ತಲೇ ಇರುತ್ತದೆ. ಒಂದು ಕತೆಯ ಅಪರಿಮಿತ ಸಾಧ್ಯತೆಯೇ ಅದು. ಅದು ಹೇಳಿದ್ದನ್ನು ದಾಟಿ ತನ್ನ ಪಾತಳಿಯನ್ನು ವಿಸ್ತರಿಸುತ್ತಾಾ ಹೋಗಬೇಕು. ಓದುಗನಲ್ಲಿ ಒಂಥರದ ಚಡಪಡಿಕೆ *(್ಟಛಿಠ್ಝಿಿಛ್ಞಿಛಿ) ಹುಟ್ಟಿಿಸಬೇಕು. ಕೊನೆಯಲ್ಲಿ ಒಂದು ನಿರ್ಧಾರಕ್ಕೆೆ ಬರುವಂತೆ ಓದುಗನನ್ನು ಕುಳ್ಳರಿಸಲು ಬಿಡಬಾರದು. ಅದನ್ನು ಕಡಿಮೆ ಪದಗಳಲ್ಲಿ ಹೇಳುವುದು ಸಾಧ್ಯವಾದರೆ ಅದು ಭಾವನೆಯ ಜತೆಗೆ ಭಾಷೆಯ ಗೆಲುವು, ಅಷ್ಟೇ. ಕೊನೆಗೂ ಕತೆ ನಮ್ಮಲ್ಲಿ ಉಳಿಯುವುದು ಭಾವಗಟ್ಟಿಿಗಳಾಗಿಯೇ.

‘ಅವಳು ಸಿಕ್ಕಳು. ಆದರೂ ಹುಡುಕುತ್ತಿಿದ್ದೇನೆ’ ಎಂಬ ಕತೆ ನೂರು ಜನರಲ್ಲಿ ನೂರು ರೀತಿಯ ಭಾವ ಸ್ಪುರಣಕ್ಕೆೆ ಕಾರಣವಾಗಬಹುದು. ಇಲ್ಲಿ ಕತೆ ಮುಗಿದರೂ ಅದು ಸಾಗುತ್ತಲೇ ಇರುತ್ತದೆ. ತಾಣ ತಲುಪಿದ ನಂತರವೂ ಪಯಣ ಮುಂದುವರಿದಿರುತ್ತದೆ. ಕತೆ ಮುಗಿದ ನಂತರವೂ ಕತೆಯ ಸಾಧ್ಯತೆಗಳು ಬೆಳೆಯುತ್ತಲೇ ಇರುತ್ತವೆ. ಹೊಸ ಹೊಸ ರೂಪು ಪಡೆಯುತ್ತಲೇ ಇರುತ್ತವೆ.

ನನ್ನ ದೃಷ್ಟಿಿಯಲ್ಲಿ ಜಗತ್ತಿಿನ ಅತಿ ಸಣ್ಣ ಕತೆ ಅಂದರೆ, ಕೊನೆಯಲ್ಲಿ ಎಲ್ಲರೂ ಕತೆಗಳೇ!
ಸಣ್ಣ ಕತೆಗಳ ವೈಶಿಷ್ಟ್ಯವಿರುವುದು ಅವು ಮುಗಿಯದಿರುವುದರಲ್ಲಿ. ಕೊನೆಯಾದರೂ ಅಂತ್ಯವಾಗುವುದಿಲ್ಲ. ಇದು ಕತೆಯ ಕ್ರಿಿಯಾಶೀಲತೆಯನ್ನು ತೋರಿಸುತ್ತದೆ. ಉದಾಹರಣೆಗೆ, ಈ ಕತೆ:
ನನ್ನ ನೋಡಿ ಸುಮ್ಮನಾದಳು.
ಮೌನಕ್ಕೂ ಪದಗಳಿವೆ ಎಂದು ತಿಳಿಯಿತು.
ಸಣ್ಣ ಕತೆಯ ಇನ್ನೊೊಂದು ವೈಶಿಷ್ಟ್ಯವೆಂದರೆ, ಅದಕ್ಕೆೆ ಪಾತ್ರಧಾರಿಗಳೇ ಬೇಕಿಲ್ಲ. ಅಮೂರ್ತತೆಯೂ ಅದರ ಮುಖ್ಯ ಧಾತುವೇ. ಈ ಸಾಧ್ಯತೆಯೇ ಅದರ ಹಂದರವನ್ನು ವಿಸ್ತರಿಸುತ್ತದೆ. ಸಣ್ಣ ಕತೆ ಒಂಥರಾ ನಿಂತು ನಿಂತು ಹೊರಡುವ ಬಸ್ ಇದ್ದಂತೆ. ಆದರೂ ಪಯಣ ಮಾತ್ರ ವೇಗ ಮತ್ತು ಸರಾಗ.

ಟ್ಯಾಾಕ್ಸಿಿಯಲ್ಲಿ ನನ್ನ ಪಕ್ಕ ಕುಳಿತ
ಅಪರಿಚಿತ ತನ್ನಷ್ಟಕ್ಕೆೆ ಬಿಕ್ಕುತ್ತಿಿದ್ದ.
ನಾನು ಒಂಟಿ ಅಲ್ಲ ಎನಿಸಿತು.

ಈ ಸಣ್ಣಕತೆ ಭಾವದಲ್ಲಿ ಹದವಾಗಿ ಅದ್ದಿದ ಮೊಸರನ್ನ. ವಿಷಾದ, ಹತಾಶೆ, ಸಂತಸ, ವ್ಯಂಗ್ಯ, ಹುಯ್ದಾಾಟ, ತೀವ್ರತೆ.. ಮುಂತಾದ ಮಾನವ ಸಹಜ ಒಗ್ಗರಣೆ ಇದ್ದರೆ ಅದರ ಮಜಾವೇ ಬೇರೆ. ‘ನನ್ನೊೊಳಗೆ ಎಷ್ಟೊೊಂದು ಸಣ್ಣಕತೆಗಳಿದ್ದವು ಎಂಬುದು ಗೊತ್ತೇ ಇರಲಿಲ್ಲ’ ಎಂಬುದು ಸಣ್ಣಕತೆಗಳೇ ಪಾತ್ರಧಾರಿಯಾದ ಒಂದು ಕತೆ.
ನನ್ನೊೊಳಗೆ ಹೀಗೆ ಆಗಾಗ ಹುಟ್ಟಿಿದ ಸಣ್ಣಕತೆಗಳಿಗೆ ಈಗ ಬಿಡುಗಡೆ ಸಮಯ. ಕಳೆದ ಹಲವಾರು ವರ್ಷಗಳಲ್ಲಿ ಹುಟ್ಟಿಿದ ಈ ‘ಪಾತರಗಿತ್ತಿಿ’ಗಳನ್ನೆೆಲ್ಲ ಸೇರಿಸಿ ಒಂದು ಉದ್ಯಾಾನ ಮಾಡಬೇಕು ಎಂದು ಅಂದುಕೊಳ್ಳುತ್ತಲೇ ಇದ್ದೆ. ಇವುಗಳನ್ನೆೆಲ್ಲ ಸೇರಿಸಿ ಒಂದು ಪುಸ್ತಕ ಮಾಡಬೇಕು ಅಂದುಕೊಳ್ಳುತ್ತಿಿರುವಾಗ ಅದಕ್ಕೆೆ ಮುಹೂರ್ತ ಫಿಕ್‌ಸ್‌ ಆಗಿದೆ. ಈ ಸಣ್ಣಕತೆಗಳನ್ನೆೆಲ್ಲಾ ಸೇರಿಸಿ ಒಂದು ಪುಟ್ಟ ಪುಸ್ತಕ ನಿಮ್ಮ ಕೈಗಿಡಬೇಕೆಂಬ ಆಸೆ ಈಡೇರುವ ದಿನ ಹತ್ತಿಿರ ಬರುತ್ತಿಿದೆ. ‘ಪಾತರಗಿತ್ತಿಿ’ಗಳು ಹಾರುತ್ತಿಿದ್ದರೇ ಚೆಂದ! ಆ ಕೃತಿಯಲ್ಲಿರುವ ಕೆಲವು ಸಣ್ಣಕತೆಗಳನ್ನು ಇಲ್ಲಿ ಹಾರಿಬಿಡುತ್ತಿಿದ್ದೇನೆ.

ಆತ ಆಕೆಯನ್ನು ಪ್ರೀತಿಸಿದ.
ಆಕೆಯೂ ಆತನನ್ನು ಪ್ರೀತಿಸಿದಳು.
ಅವರ ಪ್ರೀತಿ ಗಟ್ಟಿಿಯಾಗಿತ್ತು.
ಕಾರಣ ಆತನ ಕಣ್ಣು ಅದನ್ನು ನೋಡಲಿಲ್ಲ.
ಆಕೆಯ ಕಿವಿ ಅದನ್ನು ಕೇಳಲಿಲ್ಲ.
*
ಅವಳಿಗಾಗಿ ತಂದ ಉಂಗುರವನ್ನು
ಜೇಬಿನಲ್ಲಿಟ್ಟುಕೊಂಡು
ಅವಳನ್ನ ಭೇಟಿ ಮಾಡದೇ
ಆತ ಹೊರಟುಹೋದ
*
ಕೊನೆಗೂ ನಾನು ಅಷ್ಟು ವರ್ಷಗಳಿಂದ
ಹುಡುಕುತ್ತಿಿದ್ದ ಅನುರೂಪ ಸಂಗಾತಿ
ಸಿಕ್ಕಳು. ಆದರೆ ಅವಳಿಗೆ ಸಿಗಲಿಲ್ಲ.
*
ತಂದೆ ಯುದ್ಧಭೂಮಿಗೆ
ಹೋದರು.
ರಾಷ್ಟ್ರಧ್ವಜ ಮನೆಗೆ
ಬಂದಿತು.
*
‘ನೀನು ಹಿಂದುವಾ, ಮುಸ್ಲಿಿಮನಾ?’
ಎಂದು ಕೇಳಿದೆ.
‘ನನಗೆ ನೀರು ಕೊಡಿ.
ವಿಪರೀತ ಬಾಯಾರಿಕೆ ಆಗಿದೆ’ ಎಂದ.
*
ಇಪ್ಪತ್ತು ವರ್ಷಗಳ ನಂತರ
ಆಕೆಗೆ ಫೋನ್ ಮಾಡಿದೆ.
ಹಲೋ ಎಂದೆ.
ರಾಂಗ್ ನಂಬರ್ ಎಂದು ಫೋನಿಟ್ಟಳು.
*
ಮೊದಲ ಬಾರಿಗೆ ಅವನ ಬ್ಯಾಾಂಕ್
ಅಕೌಂಟಿಗೆ ಕೋಟಿ ರುಪಾಯಿ
ಬಂದು ಜಮೆ ಆಯಿತು.
ತಾನು ಗಣಿತದಲ್ಲಿ ಫೇಲ್
ಆಗಿದ್ದೆೆ ಎಂಬುದನ್ನು ನೆನೆದು
ಸಣ್ಣಗೆ ನಕ್ಕ.
*
ಒಂದು ವರ್ಷದ ನಂತರ
ಅವರಿಬ್ಬರೂ ಭೇಟಿಯಾದರು.
ಆ ಅವಧಿಯಲ್ಲಿ ಕಳಿಸಿದ
ಚಾಟ್ ಮೆಸೇಜ್‌ಗಳನ್ನು
ಓದಿದರು.
*
ಭಯ, ನೋವು, ವಿಷಾದ,
ಹತಾಶೆ, ಕ್ರೌೌರ್ಯ ಇಲ್ಲದಿರುವ
ಜಾಗವನ್ನು ಹುಡುಕುತ್ತಿಿದ್ದೇನೆ.
ಇನ್ನೂ ಸಿಕ್ಕಿಿಲ್ಲ.
ಭೂಮಿ ಮೇಲೆ
ಇವ್ಯಾಾವೂ ಇಲ್ಲದಿರುವ
ತಾಣವೆಂದರೆ ತಾಯಿ ಗರ್ಭ ಮಾತ್ರ!
*
ಅವನು ಒಂದು ಕತೆ ಬರೆದ.
ಅದರಲ್ಲಿನ ಪಾತ್ರಧಾರಿಗಳಿಗೆ
ಅದು ಇಷ್ಟವಾಗಲಿಲ್ಲ.
*
‘ಯಾರಾರೂ ಸೌಂಡ್‌ಸಿಸ್ಟಂ
ವಾಲ್ಯೂಮ್ ಕಡಿಮೆ ಮಾಡ್ತೀರಾ?’
ಆತ ಹೇಳಿದ್ದು ಯಾರಿಗೂ
ಕೇಳಲಿಲ್ಲ.
*
ಆತ ನಿಜ ಹೇಳಿದ
ಯಾರೂ ನಂಬಲಿಲ್ಲ.
ಸುಳ್ಳು ಹೇಳಿದ
‘ಈಗ ನಿಜ ಹೇಳಿದ’
ಎಂದರು.
*
ಆತನಿಗೆ ಮಾತಾಡಲು ಬಹಳ
ವಿಷಯಗಳಿದ್ದವು.
ಆದರೆ ಕೇಳುವವರು
ಯಾರೂ ಇರಲಿಲ್ಲ.
*
ಕಳೆದ ಮೂವತ್ತು ವರ್ಷಗಳಿಂದ ಆತ
ಅದೇ ಊರಿನಲ್ಲಿ ಭಿಕ್ಷುಕನಾಗಿ
ಜೀವನ ಸಾಗಿಸಿಕೊಂಡು ಹೋಗುತ್ತಿಿದ್ದ.
ಎರಡು ಜನ್ಮಕ್ಕಾಾಗುವಷ್ಟು ಗಳಿಸಿದ್ದ.
ಆದರೆ ಬಿಕ್ಷುಕ ಪಟ್ಟ ಮಾತ್ರತಪ್ಪಿಿರಲಿಲ್ಲ
*
ಬೇರೆ ವಸ್ತುಗಳಂತಲ್ಲ, ಪ್ರೀತಿಯನ್ನು
ಎಲ್ಲಿ ಕಳೆದುಕೊಂಡಿದ್ದೇವೋ, ಅಲ್ಲಿ
ಅದಕ್ಕಾಾಗಿ ಹುಡುಕಿದರೆ ಸಿಗುವುದಿಲ್ಲ
*
ಆತ ಆಕೆಗೆ ಎರಡು ಮಿಸ್‌ಡ್‌‌ಕಾಲ್ ಕೊಟ್ಟ,
ಅವಳೂ ಮೂರು ಮಿಸ್‌ಡ್‌‌ಕಾಲ್ ಕೊಟ್ಟಳು,
ಹೇಳಬೇಕಾದುದನ್ನು
ಇಬ್ಬರೂ ಹೇಳಿದ್ದರು.
*
ಆತ ತಂದೆಯನ್ನು ವೃದ್ಧಾಾಶ್ರಮಕ್ಕೆೆ
ಹೋಗಿ ಬಿಟ್ಟು ಬಂದ.
‘ಬೇಸರಿಸಿಕೊಳ್ಳಬೇಡಿ ಡ್ಯಾಾಡಿ,
ನಾನೂ ನಿಮ್ಮ ಮುಪ್ಪಿಿನಲ್ಲಿ ಅಲ್ಲಿಯೇ
ಬಿಡುತ್ತೇನೆ, ಪ್ರಾಾಮಿಸ್’ ಎಂದ
ಅವನ ಮಗ.
*
ಯಾರೋ ಬಾಗಿಲು ಬಡಿದರು.
ಹೋಗಿ ತೆಗೆದರೆ, ಬಿಕ್ಷುಕ.
‘ಊಟ ಮಾಡಿ ಬಂದಿದ್ದೇನೆ. ಅಡುಗೆ ಮಾಡುವ
ತೊಂದರೆ ತೆಗೆದುಕೊಳ್ಳಬೇಡಿ’ ಎಂದು ಹೇಳಿ ಹೋದ.
*
ಕೊನೆಯಲ್ಲಿ ನಾವೆಲ್ಲರೂ
ಯಾರದ್ದೋೋ ಆತ್ಮಕಥೆಯಲ್ಲಿ
ಪಾತ್ರಗಳಾಗುತ್ತೇವೆ.
ಇಲ್ಲವೇ ನೆನಪುಗಳಾಗುತ್ತೇವೆ.
*
ನೀವು ಎಷ್ಟೇ ಮಹತ್ವದ, ಮಹಾನ್
ವ್ಯಕ್ತಿಿಯೇ ಆಗಿರಬಹುದು,
ನೀವಿಲ್ಲದಿದ್ದರೂ ಈ ಜಗತ್ತು
ಸಾಗುತ್ತದೆ.
*
ಅಂಬೆಗಾಲಿನಿಂದ ಮಗು ಹೆಜ್ಜೆೆ ಹಾಕಲು
ಪ್ರಯತ್ನಿಿಸುತ್ತಿಿತ್ತು. ಮನೆಮಂದಿಯೆಲ್ಲ
ಸುತ್ತಲೂ ಇದ್ದರು. ಆಗ ತಾತ ಹೇಳಿದ:
ನಡೆಯಲು ಕಲಿಯುವಾಗ ನೀವ್ಯಾಾರೂ ಬೀಳೋಕೆ
ಬಿಡೊಲ್ಲ. ನಡೆಯಲು ಕಲಿತ ನಂತರ ಎಲ್ಲರೂ
ಬೀಳಿಸೋಕೆ ಪ್ರಯತ್ನಿಿಸುತ್ತಾಾರೆ.
*
ನಾನು ಯಾರೇ ಬರಲಿ, ಅವರನ್ನು
ಭೇಟಿಮಾಡಲು ಬಯಸುತ್ತೇನೆ.
ಕಾರಣ ಪ್ರತಿಯೊಬ್ಬರಿಂದಲೂ
ಕಲಿಯುವುದು ಏನಾದರೂ
ಇದ್ದೇ ಇರುತ್ತದೆ.
*
ವೃದ್ಧಾಾಶ್ರಮದಿಂದ ಮಗನಿಗೆ ಫೋನ್ ಬಂತು.
‘ನಿಮ್ಮ ನಾಯಿ ಕಳೆದು ಹೋಗಿದೆ
ಎಂಬ ಜಾಹೀರಾತನ್ನು ಪತ್ರಿಿಕೆಯಲ್ಲಿ
ನೋಡಿದೆವು. ಆ ನಾಯಿ ಸಿಕ್ಕಿಿದೆ.
ಅದು ಇಲ್ಲಿ ನಿಮ್ಮ ತಾಯಿ
ಜತೆ ಆಡುತ್ತಿಿದೆ’.
*
ಸಕ್ಕರೆ ಹೇಳಿತು
ನೀನು ನನ್ನಂತೆ ಇದ್ದೀಯಾ
ಹೆಸರು ಮಾತ್ರ ಬೇರೆ.
ಉಪ್ಪುು ಹೇಳಿತು
ಹೆಸರು ತಗೊಂಡು ಏನ್ ಮಾಡ್ತಿಿಯಾ?
*
ಆತ ಐನೂರು ವರ್ಷಗಳ ಕುರ್ಚಿಯನ್ನು
ಖರೀದಿಸಿ ತಂದ. ಆತನ ಪಾಲಿಗೆ ಅದು
ಅದೃಷ್ಟದ ಕುರ್ಚಿ. ಆದರೆ ಕುರ್ಚಿ ಅಂದಿಕೊಂಡಿತು:
‘ಮತ್ತೊೊಬ್ಬ ಬಕರ ಬಿದ್ದ!’
*
‘ನಿಮಗೆ ನೆನಪಿರುವ ಕೊನೆಯ
ಸಂಗತಿಯೇನು?’ ಡಾಕ್ಟರರು ಕೇಳಿದರು.
ತುಸು ಆಲೋಚಿಸಿ ಅವಳು ಹೇಳಿದಳು:
‘ನನಗೆ ಸರಿಯಾಗಿ ಗೊತ್ತಿಿಲ್ಲ. ಪ್ರಾಾಯಶಃ
ಪ್ರಶ್ನಾಾರ್ಥಕ ಚಿಹ್ನೆೆ ಇರಬೇಕು.’
*
ಅದೆಷ್ಟೋೋ ವರ್ಷಗಳು ಕಳೆದರೂ
ಅವಳು ಅವನಿಗೆ ಇನ್ನೂ
ಪತ್ರ ಬರೆಯುತ್ತಿಿದ್ದಾಾಳೆ.
ಅವಳ ಪ್ರಕಾರ,
ಪ್ರೀತಿ ಈಗಷ್ಟೇ
ಆರಂಭವಾಗಿದೆ.
*
ಜಗತ್ತಿಿನ ಎರಡು ಮೂಲೆಗಳು
ಹಾಗೂ ಬೇರೆ ಬೇರೆ ಟೈಮ್‌ರೆನ್‌ಗಳು
ಕೆಲವು ಸಲ ಎರಡೆರಡು
ಸೆಲಬ್ರೇಷನ್‌ಗಳಾಗುತ್ತವೆ.
*
ಹಳೆಯ ಸ್ಕ್ರೀನ್ ಶಾಟ್‌ಗಳು
ನೆನಪಿನಲ್ಲಿರಲಿ ಎಂದು
ಹೊಸೆದು ಕೊಂಡಂಥವು
ಈಗ ಅದನ್ನೇ ಕೆಲವರು
ಸಾಕ್ಷಿಿಗಳಂತೆ ಬಳಸುತ್ತಾಾರೆ.
*
ಯಾಕೋ ತುಂಬಾ ಖಿನ್ನನಾಗಿದ್ದೆೆ.
ಮನೆಗೆ ಬಂದುಬಿಟ್ಟೆೆ.
ಆತ ಓಡೋಡಿ ಬಂದು ಜೋರಾಗಿ
ತಬ್ಬಿಿಕೊಂಡ. ನಾನೂ ಅವನನ್ನು
ತಬ್ಬಿಿಕೊಂಡೆ.
ನನ್ನ ನಾಯಿಯಂಥ ಸಂಗಾತಿ
ಬೇರೊಬ್ಬರಿಲ್ಲ
*
ಕ್ಲಾಾಸಿಗೆ ಫಸ್‌ಟ್‌, ಆಫೀಸಿನಲ್ಲಿ ಬೆಸ್‌ಟ್‌.
ಆದರೆ ನನ್ನ ತಂಗಿ ಪಾಲಿಗೆ ನಾನು
ಮುಠ್ಠಾಾಳ. ಎರಡನೆಯದೇ ನಂಗೆ ಇಷ್ಟ.
*
ಎರಡು ಕಣ್ಣುಗಳು
ಎರಡು ಕಿವಿಗಳು
ಒಂದು ಮೂಗು
ಹತ್ತು ಬೆರಳು, ಉಗುರು
ತನ್ನ ಮಗು ಸಹ ಹೀಗೇ ಇದೆಯಲ್ಲ
ಎಂದು ಅವಳು ದಿಟ್ಟಿಿಸುತ್ತಲೇ ಇದ್ದಳು
*
ತನ್ನ ಪತಿಯನ್ನು ಕೊಂದದ್ದಕ್ಕಾಾಗಿ ಅವಳಿಗೆ
ನೋವಾಗಲಿ, ಅಪರಾಧಿ ಭಾವವಾಗಲಿ
ಕಾಡುತ್ತಿಿರಲಿಲ್ಲ. ಆದರೆ ಆ ಸಂಭ್ರಮವನ್ನು
ಎಲ್ಲರ ಮುಂದೆ ಹೇಳಿಕೊಳ್ಳಲು
ಆಗುತ್ತಿಿರಲಿಲ್ಲವಲ್ಲ ಎಂದು
ಪೇಚಾಡುತ್ತಿಿದ್ದಳು
*
ಆ ಸಣ್ಣ ಊರಲ್ಲಿ ಅವರು ಮರಗಳಿಂದ
ವಿಗ್ರಹ ತಯಾರು ಮಾಡುತ್ತಿಿದ್ದರು.
ಮರಗಳ ಎಲೆಗಳಿಂದ ಕಲಾಕೃತಿ
ಮಾಡುತ್ತಿಿದ್ದರು.
ಆಜನಾಂಗವನ್ನು ಪ್ರಕೃತಿ ತನ್ನವರೆಂದು
ಸ್ವೀಕರಿಸಿತ್ತು.
ಆದರೆ ಸಮಾಜ ಸ್ವೀಕರಿಸಿರಲಿಲ್ಲ.