ಯಶೋ ಬೆಳಗು
yashomathy@gmail.com
ಕುಂಬಾರನಿಗೆ ವರುಷ. ದೊಣ್ಣೆಗೆ ನಿಮಿಷ ಅನ್ನುವಂತೆ ನಿರ್ದಾಕ್ಷಿಣ್ಯವಾಗಿ ಹೀಗೆ ಒಂದು ಜೀವವನ್ನು ಧರ್ಮಾಂಧತೆಯ ಹೆಸರಿನಲ್ಲಿ ಕೊಂದು ಹಾಕಿ ಜನರಲ್ಲಿ ಭೀತಿ ಮೂಡಿಸುವಂತೆ ಮಾಡಿದರೆ ಅದರ ಅಟ್ಟಹಾಸವನ್ನಡಗಿಸುವ ಶಕ್ತಿಗಳೂ ಅಷ್ಟೇ ಪ್ರಮಾಣದಲ್ಲಿ ಬೆಳೆದು ನಿಲ್ಲುತ್ತವೆ ಅನ್ನುವುದನ್ನೂ ಮರೆಯುವಂತಿಲ್ಲ. ಎಲ್ಲ ಸಿದ್ಧಾಂತಗಳೂ ಬೆಳವಣಿಗಗೆ ಪೂರಕವಾಗಿಬೇಕೇ ಹೊರತು ಮಾರಕವಲ್ಲ.
ಹುಟ್ಟು ಒಂದೇ ವಿಧ. ಆದರೆ ಸಾವು ನಾನಾ ವಿಧ! ಹುಟ್ಟಿದ ಮೇಲೆ ಎಲ್ಲರೂ ಒಂದು ದಿನ ಸಾಯಲೇಬೇಕು. ಭೂ ಕುಸಿತದಿಂದ, ನೆರೆ ಪ್ರವಾಹದಿಂದ, ಹಿಮ ಪ್ರಪಾತದಿಂದ, ಶತ್ರುಗಳ ದಾಳಿಯಿಂದ, ಯುದ್ಧಗಳಲ್ಲಿ ಹೋರಾಡುವುದರಿಂದ, ರಸ್ತೆ ಅಪಘಾತದಿಂದ, ದ್ವೇಷ ದಿಂದ, ಸೇಡಿನಿಂದ, ಅಸೂಯೆಯಿಂದ, ಅನಾರೋಗ್ಯದಿಂದ… ಆದರೆ ಕೇವಲ ತನ್ನ ಸಹಮತದ ಮಾತಿನಿಂದಾಗಿ ಅಸಹಾಯಕ ಜೀವವೊಂದು ಬಲಿಯಾದದ್ದು ಮಾತ್ರ ಅಸಹನೀಯ! ಇದರ ಹಿಂದಿರುವ ಉದ್ದೇಶ ಅಕ್ಷಮ್ಯ! ಜವಾಬ್ದಾರಿಯುತ ನಾಗರಿಕ ರ್ಯಾರೂ ಸಮರ್ಥಿಸಿಕೊಳ್ಳಬಾರದಂಥ ಅನಾಗರಿಕ ಘಟನೆಯದು.
ಮೊನಚಾದ ಮಾತುಗಳಿಗೆ ಪ್ರತಿಯಾಗಿ ಮೊನಚಾಗುತ್ತಿವೆ ಆಯುಧಗಳು! ನಿನ್ನೆ ಉದಯ ಪುರದಗಿದ್ದು, ಎಂದೋ ಅಮರಾವತಿ ಯಲ್ಲಿ ನಡೆದದ್ದು, ನೆರೆಹೊರೆ ಗಳಲ್ಲಿ ನುಸುಳಿ, ನಮ್ಮ-ನಿಮ್ಮ ಮನೆ ಬಾಗಿಲುಗಳವರೆಗೂ ನಡೆದುಬರುವ ಕಾಲ ದೂರವೇನಿಲ್ಲ ಅನ್ನುವ ಸೂಚನೆ ಸ್ಪಷ್ಟವಾಗಿದೆ. ನಂಬಿಕೆಯೆನ್ನುವುದು ತಲೆಮರೆಸಿಕೊಳ್ಳುವ ಕಾಲ ಸನ್ನಿಹಿತ ವಾಗಿ ಹೋಯ್ತಾ? ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆಯುವಂತೆ ಯಾರೋ ಮಾಡಿದ ತಪ್ಪಿಗೆ ಮತ್ಯಾರೋ ಶಿಕ್ಷೆ ಅನುಭವಿಸುವಂತಾಗುತ್ತದಾ? ಎಲ್ಲವನ್ನೂ ಕಾಲವೇ ನಿರ್ಣಯಿಸಬೇಕು.
ಆದರೆ ಈ ಬೆಳವಣಿಗೆಯಿಂದ ಮಾತ್ರ ಯಾರಿಗೂ ಉಳಿಗಾಲವಿಲ್ಲ ಅನ್ನುವುದಂತೂ ಸ್ಪಷ್ಟ. ಕೋಮುದಳ್ಳುರಿ ಭುಗಿಲೆದ್ದು, ಸರ್ವಜನಾಂಗದ ಶಾಂತಿಯ ತೋಟವಾದ ಭಾರತದಲ್ಲಿ ತಾಲಿಬಾನೀ ಸಂಸ್ಕೃತಿಯ ಅಟ್ಟಹಾಸದ ಮೆರವಣಿಗೆಗೆ ದೂರವಿಲ್ಲ. ಭಗವಂತನಾಗಿದ್ದ ಶ್ರೀಕೃಷ್ಣನೇ ಯಾದವ ಕಲ ಹದೆ ದರು ಅಸಹಾಯಕನಾಗಿ ನಿಂತಾಗ ಇನ್ನು ನಮ್ಮ- ನಿಮ್ಮೆಲ್ಲರದ್ದು ಯಾವ ಲೆಕ್ಕ? ಅದೆ ಉದಯಪುರದಲ್ಲಿ ಕ್ಷುಲ್ಲಕ ಕಾರಣಕ್ಕೆ ದರ್ಜಿಯೊಬ್ಬನ ಜೀವಹರಣವಾಗುತ್ತಿದ್ದರೆ ನಾವಿಲ್ಲಿ ಹೋಳಿಗೆ ತಿಂದು ಬಂದೆವಾ? ಎಂದು ನಮ್ಮೊಡನಿರುವ ಹಿರಿಯ ಜೀವ ಕನಲುತ್ತಿದ್ದರೆ, ತಿಂದಿದ್ದು ಅರಗಿಸಿಕೊಳ್ಳಲಾಗದಂತಹ ತೊಳಲಾಟ. ಛೆ! ಎಲ್ಲಿಗೆ ಬಂತು ನಮ್ಮೆಲ್ಲರ ಸ್ವಾತಂತ್ರ್ಯ? ಇದಕ್ಕೇನಾ ಅಷ್ಟೆಲ್ಲ ಜೀವ ಒತ್ತೆ ಇಟ್ಟು ಮನೆ-ಮಠಗಳನ್ನು ಕಳೆದುಕೊಂಡು, ಬದುಕಿನ ರಸಘಳಿಗೆಗಳನ್ನೆಲ್ಲ ನಿರ್ಮಮವಾಗಿ ಧಿಕ್ಕರಿಸಿ, ತಮ್ಮ ಮಕ್ಕಳು-ಮರಿಗಳೊಡನೆ, ವಡವೆ ವಸ್ತುವಿನ ಜತೆಗೆ ಮಾಂಗಲ್ಯವನ್ನೂ ತಮ್ಮ ಸೆರಗಲ್ಲಿ ಕಟ್ಟಿಕೊಂಡು ಬಂದು ಸ್ವಾತಂತ್ರ್ಯದ ಹೋರಾಟಕ್ಕಾಗಿ ನಮ್ಮದೂ ಅಳಿಲ ಸೇವೆಯಿರಲಿ ಎಂದು ಕೈಮುಗಿದ ಆ
ಮಹಾತಾಯಿಯರ ಆತ್ಮ ಘೋರಿಯೊಳಗೇ ಅದೆಷ್ಟು ನರಳುತ್ತಿದೆಯೋ ಇಂದು? ಅದಕ್ಕಾಗಿ ಮಾಡಿದ ಪಾದ ಯಾತ್ರೆ, ಸತ್ಯಾಗ್ರಹ ಗಳದೆಷ್ಟೋ? ಇರಿವ ಕತ್ತಿಗೆ, ನೇಣು ಕುಣಿಕೆಗೆ ಕೊರಳನೊಡ್ಡಿದ ಜೀವಗಳಿಗೂ ಲೆಕ್ಕವಿಲ್ಲ.
ಸುಟ್ಟು ಭಸ್ಮವಾದ ದೇಹಗಳದೆಷ್ಟೋ? ಸಿಗುವವರೆಗೂ ಜೀವದ ಹಂಗು ತೊರೆದು ಹೋರಾಡುವ ನಾವು. ಸಿಕ್ಕ ಮೇಲೆ ಅದನ್ನು ಜತನದಿಂದ ಕಾಪಾಡಿಕೊಳ್ಳುವಲ್ಲಿ ಸೋಲುತ್ತೇವೆ. ಭ್ರಷ್ಟಾಚಾರದ ಕಬಂಧ ಬಾಹುಗಳು ಅಸಹಾಯಕರನ್ನು ಉಸಿರೆತ್ತದಂತೆ ದಮನಿಸುತ್ತಿದೆ. ಜಾತಿ, ಧರ್ಮಗಳ ಹೆಸರಲ್ಲಿ ಚೂರು ಚೂರಾಗಿ ಹೋಗುತ್ತಿದೆ ನಮ್ಮ-ನಿಮ್ಮೆಲ್ಲರ ತಾಯ್ನಾಡು. ಕರೋನಾ ದಂತಹ ಸೂಕ್ಷ್ಮಾಣುವಿನಿಂದ ಮನುಕುಲ ಸಾಕಷ್ಟು ಪಾಠ ಕಲಿಯಿತೆಂದೇ ಭಾಸವಾಯಿತು. ಆದರೆ ಅದೆಲ್ಲ ಆ ಕ್ಷಣಕ್ಕಷ್ಟೆ. ಎಲ್ಲ ಮರೆತು ತನ್ನ ಅಟ್ಟಹಾಸ ಮೆರೆಯುವುದರಲ್ಲಿ ಮಾನವ ನಿಸ್ಸೀಮರಲ್ಲಿ ಅತಿ ನಿಸ್ಸೀಮ ಎಂದು ಮತ್ತೊಮ್ಮೆ ಸಾಬೀತು ಪಡಿಸಿಬಿಟ್ಟ.
ಸಮಸ್ಯೆಯಿಂದ ಸಮಸ್ಯೆಗೆ ದಾಪುಗಾಲಿಡುತ್ತಾ ಮುನ್ನುಗ್ಗುವ ಗುಣವಿರುವ ಮನುಷ್ಯ ಮೂಲತಃ ಸ್ವಾತಂತ್ರ್ಯ ಪ್ರಿಯ. ಅವನದು ಸ್ವಚ್ಛಂದ ಹಕ್ಕಿಯಂಥಾ ಮನಸ್ಸು. ಮಂಗನಿಂದ ಮಾನವನಾಗುವುದಕ್ಕೆ ಆ ಕಾಲಘಟ್ಟದಲ್ಲಿ ಉಂಟಾದ ಪ್ರಬಲವಾದ ಯಾವುದೋ ವೈರಾಣುವಿನ ದಾಳಿಯೇ ಮುಖ್ಯ ಕಾರಣವಿರಬಹುದು ಎಂದು ಯುವ ಸಂಶೋಧಕನಾದ ಪವನ್ ಹೇಳುತ್ತಿದ್ದರೆ ನಮ್ಮೆಲ್ಲರ ನಿರ್ಲಕ್ಷ್ಯದ ಹಿಂದೆ ಅದೆಷ್ಟು ಅದ್ಭುತವಾದ ಇತಿಹಾಸದ ವಿವರಗಳು ಅಡಕವಾಗಿವೆ ಎಂಬುದು ಕಂಡು ಸೋಜಿಗ ವಾಯ್ತು. ಅದೆ ದೂರದ ದೇಶದಲ್ಲಿ ಅಷ್ಟು ಜನ ಸತ್ತರಂತೆ, ಇಷ್ಟು ಜನ ಸತ್ತರಂತೆ ಯಾರz ಮೂಲಕ ಭಾರತಕ್ಕೂ ಅಡಿಯಿಟ್ಟಿದೆ ಯಂತೆ ಅನ್ನುವ ವಿವರಗಳೆಲ್ಲವನ್ನೂ ಕ್ಷಣಕ್ಷಣಕ್ಕೂ ನೋಡುತ್ತಿದ್ದರೂ ನಾವು ಎಚ್ಚೆತ್ತುಕೊಳ್ಳಲಿಲ್ಲ.
ಕಾರಣ ಅದು ಎ, ಯಾರಿಗೋ ಬಂದದ್ದು. ನಮಗಲ್ಲವಲ್ಲ ಎಂಬ ನಿರ್ಲಕ್ಷ್ಯ. ಕೆಮ್ಮಿದರೆ, ಸೀನಿದರೆ ಗಾಳಿ ಯಲ್ಲಿ ತೇಲುತ್ತ ನಮ್ಮ ದೇಹವನ್ನು ಪ್ರವೇಶಿಸಿ ಕೊನೆಗೆ ನಮ್ಮನ್ನೇ ಸಾವಿನಂಚಿಗೆ ತಳ್ಳುತ್ತಿದ್ದ ಕರೋನವೆಂಬ ವೈರಾಣುವಿಗೆ ಹೆಚ್ಚು ದಿನ ಉಳಿಗಾಲವಿಲ್ಲ ಎನ್ನುವುದು ಬಹಳ ಸ್ಪಷ್ಟವಾಗಿ ವಿeನಿಗಳಿಗೆ ತಿಳಿದಿತ್ತು. ಆಸರೆ ಕೊಟ್ಟವರನ್ನೇ ಬಲಿ ತೆಗೆದುಕೊಳ್ಳುತ್ತಾ ಅದರೊಡನೆ ತಾನೂ ನಾಶವಾಗುತ್ತ ಹೋದರೆ ಅದಕ್ಕೆ ಭವಿಷ್ಯವೆಲ್ಲಿ? ಆದರೆ ಪರಕಾಯದ ಆಶ್ರಯವಿಲ್ಲದೆ ಜೀವಂತವಾಗಿ ಉಳಿಯುವ ಸಾಧ್ಯತೆಯೇ ಇಲ್ಲದ, ಸಾಬೂನು, ಸ್ಯಾನಿಟೈಸರ್‌ಗಳಿಂದಲೇ ನಾಶವಾಗಿ ಹೋಗುವಂತಹ ಸ್ವಂತದ ಅಸ್ತಿತ್ವವೇ ಇಲ್ಲದಂಥ ಅತ್ಯಂತ ಬಲಹೀನ ವೈರಾಣು, ದೇಹ ಪ್ರವೇಶಿಸಿದ ಕೂಡಲೇ ಹೇಗೆ ವಾಮನನಂತೆ ಬೆಳೆಯುತ್ತಾ, ಆಸರೆಯಾದ ಆರೋಗ್ಯವಂತ ದೇಹವನ್ನು ಆಕ್ರಮಿಸಿ ಕೊಳ್ಳುತ್ತಾ ಅದರ ಶಕ್ತಿಯನ್ನೆಲ್ಲ ನಾಶ ಮಾಡುತ್ತಾ, ಅದರ ಜೊತೆಗೆ ತಾನೂ ಸಾಯುತ್ತಾ ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಅಸಂಖ್ಯಾತ ಜನರನ್ನು ಬಲಿ ತೆಗೆದುಕೊಂಡು ಬಿಟ್ಟಿತು? ಅದರ ನಡುವೆಯೇ ಕೆಲವರು ಅದು ಹೇಗೆ ಅದರಿಂದ ಬಚಾವಾಗಿ ಉಳಿದು ಬಿಟ್ಟರು? ಮೊದಲ ಅಲೆಯಲ್ಲಿ ಹೆಚ್ಚಾಗಿ ವಯೋವೃದ್ಧರೇ ಯಾಕೆ ಬಲಿಯಾದರು? ಎಂದರೆ… ಅವರ ದೇಹದಲ್ಲಿದ್ದ ಕ್ಷೀಣಗೊಂಡ ಪ್ರತಿರೋಧಕ ಶಕ್ತಿ.
ಎರಡನೇ ಅಲೆಯಲ್ಲಿ ಹೆಚ್ಚಾಗಿ ದೃಢಕಾಯರಾಗಿದ್ದ ನಡುವಯಸ್ಕರು ಬಲಿಯಾಗಿದ್ದು ನಿರ್ಲಕ್ಷ್ಯದಿಂದಾಗಿ. ಆದರೆ ಅದು ಮಕ್ಕಳಿಗೆ ಹೆಚ್ಚು ತೊಂದರೆ ಮಾಡಲಿಲ್ಲ. ಏಕೆಂದರೆ ಮಕ್ಕಳಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಾಗಿರುತ್ತದೆ. ನಡುವೆ ಕಾಣಿಸಿಕೊಂಡ ಕಪ್ಪು ಶಿಲೀಂಧ್ರದಂತಹ ರೋಗಗಳು ಉಲ್ಬಣಗೊಳ್ಳಲಿಲ್ಲ. ಅದಕ್ಕೆ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಹೆಚ್ಚು ಉಲ್ಬಣಗೊಳ್ಳಲಿಲ್ಲವಾದ್ದರಿಂದ ಅದರ ಬಗ್ಗೆ ಹೆಚ್ಚು ಸಂಶೋಧನೆಯಾಗದೆ ಅದಕ್ಕೆ ಸಂಬಂಧಿಸಿದ ದಾಖಲೆಗಳೆಲ್ಲ ಜತನವಾಗಿ ಎತ್ತಿಟ್ಟಿದ್ದಾರೆ.
ಮುಂದೆ ಸಮಸ್ಯೆ ಎದುರಾದರೆ ಅದಕ್ಕೆ ಕಾರಣಗಳನ್ನು ಕಂಡುಹಿಡಿಯುವಲ್ಲಿ ಇದು ಸಹಾಯಕ್ಕೆ ಬರುತ್ತದೆ. ಹೀಗೆ ಪೋಲಿಯೋ, ಪ್ಲೇಗ್, ನೆಬೊಲಾ, ಕರೋನಾದಂತಹ ಮಾರಣಾಂತಿಕ ವೈರಾಣುಗಳು ಸಂಪೂರ್ಣವಾಗಿ ನಮ್ಮನ್ನು ತೊರೆದುಹೋಗುವುದಿಲ್ಲ. ನಮ್ಮಲ್ಲಿ ಪ್ರತಿರೋಧಕ ಶಕ್ತಿ ಹೆಚ್ಚಾದಂತೆಲ್ಲ ಅದರ ಕಾರ್ಯಕ್ಷಮತೆ ಕ್ಷೀಣ ಗೊಂಡು ಸಾಯದೆ, ದೇಹದಿಂದ ಹೊರಹೋಗಲೂ
ಆಗದೆ ಅದು ಅ ನೆಲೆಸುತ್ತಾ ಕ್ರಮೇಣ ವೈರಾಣುವಿನ ಈಘೆಅ ಹಾಗೂ ನಮ್ಮ ದೇಹದ ಈಘೆಅ ಎರಡೂ ಒಂದೇ ಆಗಿ ಅದು ನಮ್ಮ ದೇಹದ ಒಂದು ಭಾಗವೇ ಆಗಿಹೋಗುತ್ತದೆ.
ಇದರಿಂದಾಗಿ ಕಾಲಾಂತರದಲ್ಲಿ ನಮ್ಮ ದೇಹವು ನಮ್ಮರಿವಿಗೇ ಬಾರದಂತೆ ಕೆಲವು ಬದಲಾವಣೆಗೆ ಒಳಪಡುತ್ತದೆ. ಎಂಥಾ ಅದ್ಭುತ ವಾದ mechanism ಇದೆ ನೋಡಿ. ನಾವು ನೀಡಿದ ಕಮ್ಯಾಂಡಿಗಷ್ಟೆ ಸೀಮಿತವಾಗಿರುವ ಯಂತ್ರಗಳ ಮುಂದೆ ಯಾವ ಆದೇಶವೂ ಇಲ್ಲದೆ ತನ್ನ ಉಳಿವಿಗಾಗಿ ನಿರಂತರ ಹೋರಾಡುವ ಜೀವಾಣುಗಳಿಂದಾದ ಜೀವಸಂಕುಲ ಅದೆಷ್ಟು ಗ್ರೇಟ್ ಅಲ್ವಾ? ಅದನ್ನು ಸರಿಯಾಗಿ ಅರಿತುಕೊಳ್ಳದೆ, ಉಳಿಸಿಕೊಳ್ಳದೆ ವಿನಾಶದಂಚಿಗೆ ತಲುಪಿ ಬಿಡುತ್ತಿದೆ ಇಂದು. ಇದರಿಂದೆಲ್ಲ ಪ್ರಭಾವಿತ ನಾಗಿಯೇ ನಾನು ಪುರಾತನ ವೈರಾಣುಗಳ ಬಗ್ಗೆ ಸಂಶೋಧನೆಯಲ್ಲಿ ಇನ್ನಷ್ಟು ಹೆಚ್ಚಿನ ಅಧ್ಯಯನ ಮಾಡಲು ಉತ್ಸುಕ ನಾಗಿದ್ದೇನೆ ಎಂದು ಹೇಳುವಾಗ ನನ್ನ ಇರುವಿಕೆಯ ಬಗ್ಗೆ ನನಗೆ ಹೆಮ್ಮೆಯೆನಿಸಿತು.
ಹೀಗೆ ಶಿಲಾಯುಗಕ್ಕೂ ಹಿಂದೆ ಅಂದರೆ, ಮಾನವನ ಹುಟ್ಟಿಗೂ ಮೊದಲು ಇದ್ದ ಮಂಗಗಳಿಗೂ ಇದೇ ರೀತಿ ಯಾವುದೋ ಬಲವಾದ ವೈರಾಣುವಿನ ದಾಳಿಯಾಗಿರಬೇಕು. ಅದರ ಕೆಲವು ಸಂತತಿಗಳಲ್ಲಿ ಪ್ರತಿರೋಧಕ ಶಕ್ತಿ ಉತ್ಪತ್ತಿಯಾಗಿ ದಾಳಿಯಿಟ್ಟ ವೈರಾಣು ಬಲಹೀನವಾಗಿ, ಸಾಯದೇ ಅದರ ದೇಹಗಳ ಉಳಿದು ಹೋಗಿ, ಅದು ವರ್ಷಾನುಗಟ್ಟಲೆ ದೇಹದ ಭಾಗವೇ ಆದ ಈಘೆಅ ಆಗಿ ಮುಂದುವರೆಯುತ್ತಾ ಅದರಿಂದಾಗಿ ಮೆದುಳಿನ ವಿಕಾಸ ಸಾಧ್ಯವಾಗಿ ಯುಗ ಯುಗಾಂತರಗಳಲ್ಲಿ ಹಂತಹಂತವಾಗಿ ಬೆಳವಣಿಗೆಗೊಳ್ಳುತ್ತಾ ತಮ್ಮ ತಮ್ಮ ವಿಂಗಡನೆಗೊಳ್ಳುತ್ತಾ ರೀತಿ ನೀತಿ ಕ್ರಮಗಳನ್ನನುಸರಿಸುತ್ತಾ ಪ್ರತ್ಯೇಕ ಗುಂಪುಗಳಾಗಿ ವಿಭಜನೆಗೊಂಡಿರಬಹುದು.
ಇಂದಿಗೂ ನಮ್ಮೆಲ್ಲರ ದೇಹದೊಳಗೂ ಎಂಟು ಪ್ರತಿಶತ ವೈರಾಣುವಿನ ಮೂಲವಿದ್ದೇ ಇದೆ. ಯಾವುದೇ ಅಣುಗಳು ದೇಹದೊಳಗೆ ಪ್ರವೇಶಿಸುತ್ತಿರುವ ಸೂಚನೆ ಸಿಕ್ಕ ಕೂಡಲೇ ನಮ್ಮ ದೇಹದಲ್ಲಿರುವ ಪ್ರತಿರೋಧಕ ಶಕ್ತಿಯ ಅದನ್ನು ಹೊರ ದೋಡಿಸಲು ಸರ್ವ ಪ್ರಯತ್ನಗಳನ್ನೂ ಮಾಡುತ್ತದೆ. ಹಾಗೆಯೇ ಒಂದು ದೇಹವನ್ನು ಪ್ರವೇಶಿಸುವ ಅನ್ಯ ದೇಹದ ವೀರ್ಯಾಣುವನ್ನು ಹೊಡೆ ದೋಡಿಸಲು ಸಹ ಇದೇ ಪ್ರತಿರೋಧಕ ಶಕ್ತಿ ತನ್ನ ತಂತ್ರವನ್ನು ಉಪಯೋಗಿಸುತ್ತದೆ.
ವೀರ್ಯಾಣು ಸಹ ಎಲ್ಲ ಪ್ರತಿರೋಧಗಳನ್ನೂ ಎದುರಿಸಿ ಗರ್ಭದಲ್ಲಿ ಸ್ಥಾಪಿತವಾಗಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿ ಭ್ರೂಣವಾಗಿ ಬೆಳವಣಿಗೆ ಹೊಂದುತ್ತದೆ. ನಂತರ ವಿಕಸನಗೊಳ್ಳುತ್ತ ಎರಡೂ ಜೀವಾಣುಗಳ ಮಿಲನದೊಂದಿಗೆ ಬೆಳೆಯುತ್ತ ಹೊಸರೂಪ ಪಡೆಯುತ್ತದೆ. ಹೀಗಾಗಿ ಒಂದೇ ಅಪ್ಪ-ಅಮ್ಮನ ರಕ್ತ ಹಂಚಿಕೊಂಡು ಹುಟ್ಟಿದ್ದ ಮಕ್ಕಳ ಅಜಗಜಾಂತರದ ವ್ಯತ್ಯಾಸವಿರುವು
ದನ್ನು ನಾವೆಲ್ಲರೂ ಕಾಣಬಹುದು.
ಇಂಥಾ ಜೀವಾಣುಗಳನ್ನು ಕೃತಕವಾಗಿ ಬೆಳೆಸಲು ಅದೆಷ್ಟು ಕೋಟಿ ರುಪಾಯಿಗಳನ್ನು ವ್ಯಯಿಸಬೇಕಾಗುತ್ತದೆ. ಕುಂಬಾರನಿಗೆ ವರುಷ. ದೊಣ್ಣೆಗೆ ನಿಮಿಷ ಅನ್ನು ವಂತೆ ನಿರ್ದಾಕ್ಷಿಣ್ಯವಾಗಿ ಹೀಗೆ ಒಂದು ಜೀವವನ್ನು ಧರ್ಮಾಂಧತೆಯ ಹೆಸರಿನಲ್ಲಿ ಕೊಂದು ಹಾಕಿ ಜನರಲ್ಲಿ ಭೀತಿ ಮೂಡಿಸುವಂತೆ ಮಾಡಿದರೆ ಅದರ ಅಟ್ಟಹಾಸವನ್ನಡಗಿಸುವ ಶಕ್ತಿಗಳೂ ಅಷ್ಟೇ ಪ್ರಮಾಣದಲ್ಲಿ ಬೆಳೆದು ನಿಲ್ಲುತ್ತವೆ ಅನ್ನುವುದನ್ನೂ ಮರೆಯುವಂತಿಲ್ಲ. ಎಲ್ಲ ಸಿದ್ಧಾಂತಗಳೂ ಬೆಳವಣಿಗಗೆ ಪೂರಕವಾಗಿಬೇಕೇ ಹೊರತು ಮಾರಕ ವಲ್ಲ. ದೇಶದ ಗಡಿ ದಾಟಿ ಹೊರಹೋದರೆ ನಾವೆಲ್ಲರೂ ಭಾರತೀಯರೇ ಅನ್ನುವುದನ್ನು ಮರೆಯಬಾರದು ಅಷ್ಟೆ.