Saturday, 30th September 2023

ಇಂಡಿಯಾ VS ಮೀಡಿಯಾ

ತುಂಟರಗಾಳಿ

ಸಿನಿಗನ್ನಡ

ಇಂಡಿಯಾ ವರ್ಸಸ್ ಮೀಡಿಯಾ ಇದು ಸದ್ಯಕ್ಕೆ ಸಿನಿಮಾ ಮಾಡೋರಿಗೆ ಹೊಳಿತಾ ಇರೋ ಹೊಸ ಟೈಟಲ್ ಅಂದ್ರೆ ತಪ್ಪಿಲ್ಲ ಬಿಡಿ. ಅದರಲ್ಲೂ ಕನ್ನಡ ಚಿತ್ರರಂಗ ದಲ್ಲಿ ಯಾವುದಾದರೂ ಒಂದು ವಿಷಯ ಸದ್ದು ಮಾಡಿದರೆ ಸಾಕು, ಚೇಂಬರ್ ಬಾಗಿಲಲ್ಲಿ ‘ನಾಮ್ ಕೇ ವಾಸ್ತೇ’ ಸಿನಿಮಾ ಮಾಡೋರೆಲ್ಲ ಸಿನಿಮಾಗೆ ‘ಹೆಸರಿಟ್ಟು’ ಟೈಟಲ್ ಹಿಡ್ಕೊಂಡು ಕ್ಯೂ ನಿಂತ್ಕೊಂಡಿರ್ತಾರೆ. ಅಂಥವರು ಈಗಾಗಲೇ ಈ ಟೈಟಲ್ ಅನ್ನು ರಿಜಿಸ್ಟರ್ ಮಾಡಿಸಿರಲೂಬಹುದು. ಹಾಗೆ ನೋಡಿದರೆ
ಚಿತ್ರರಂಗಕ್ಕೂ ಮೀಡಿಯಾಗೂ ಅಷ್ಟೇನೂ ದೂರ ಇಲ್ಲ.

ಹಳೆಯ ಸಿನಿಮಾಗಳಲ್ಲಿ ಮೀಡಿಯಾದವರಿಗೆ ಭಾರಿ ಗೌರವ ಕೊಡಲಾಗುತ್ತಿತ್ತು. ಆದರೆ ಈಗೀಗ ಮೀಡಿಯಾ ಗಳನ್ನು ಗೇಲಿ ಮಾಡುವ ದೃಶ್ಯಗಳು ಸಿನಿಮಾಗಳಲ್ಲಿ ಬೇಕಾದಷ್ಟು ಕಾಣಸಿಗುತ್ತವೆ. ವಿಮರ್ಶೆ ಬರೆದು ತಮ್ಮನ್ನು ಕಾಲೆಳೆಯುವ ಮೀಡಿಯಾದವರ ಕಾಲು ಎಳೆಯುವ ಅವಕಾಶ ಸಿಕ್ರೆ ಸಿನಿಮಾ ಮಂದಿ ಹೇಗೆ ಬಿಟ್ಟಾರು? ಅನಿಲ್ ಕಪೂರ್ ಅವರ ‘ನಾಯಕ್’ ಸಿನಿಮಾದಲ್ಲಿ ರಾಜಕಾರಣಿಗಳನ್ನು ಮೀಡಿಯಾದವನು ಮಟ್ಟಹಾಕುವ ಕೆಲಸವನ್ನು ತೋರಿಸಲಾಗಿತ್ತು. ಈಗ ರಾಜಕಾರಣಿಗಳು ಮೀಡಿಯಾದವರನ್ನು ಮಟ್ಟ ಹಾಕುತ್ತಿರುವ ಇಂಡಿಯಾ ವರ್ಸಸ್ ಮೀಡಿಯಾ ಈ ಕಥೆ ಇಟ್ಕೊಂಡು ಹೆಂಗೆ ಸಿನಿಮಾ ಮಾಡಬಹುದು ಅಂತ ಈಗಾಗಲೇ ಕಾನಿಷ್ಕ ಹೋಟೆಲ್‌ನಲ್ಲಿ ರೂಮ್ ಹಾಕಿಕೊಂಡು ಅನೇಕರು ಕಥೆ ಬರೆಯಲು ಆರಂಭಿಸಿದ್ದರೆ ಅಚ್ಚರಿ ಏನಿಲ್ಲ.

ಹಾಗೆ ನೋಡಿದರೆ ಈ ವಿಷಯದಲ್ಲಿ ಬರೆಯೋಕೆ ಅಂತ ಹೆಚ್ಚಿನ ಕಥೆ ಏನೂ ಇರಲ್ಲ. ಇರೋ ಕಥೆಯನ್ನೇ ನೀಟಾಗಿ ಹೇಳಿದ್ರೆ ಸಾಕು. ಅದಕ್ಕೆ ಇನ್ನೂ ಒಂದಿಷ್ಟು ಮಸಾಲಾ ಹಾಕಿದರಂತೂ ಮಜಬೂತಾದ ಮನರಂಜನೆ ರೆಡಿ. ಇಂಡಿಯಾ ಅನ್ನೋ ಹಸರು ಭಾರತ್ ಅಂತ ಬದಲಾಗುವುದರೊಳಗೆ ಸಿನಿಮಾ ಮಾಡಿದರೆ ಲಾಭ. ಆದರೆ, ಟೈಟಲ್ ರಿಜಿಸ್ಟರ್ ಮಾಡಿಸೋಕೆ ಮಾತ್ರ ಉತ್ಸಾಹ ತೋರಿಸುವವರಿಂದ ಸಿನಿಮಾ ನಿರೀಕ್ಷೆ ಮಾಡಲು ಸಾಧ್ಯ ಇಲ್ಲ ಅನ್ನೋದೂ ಸತ್ಯ.

ಲೂಸ್ ಟಾಕ್ – ಚೈತ್ರಾ ಕುಂದಾಪುರ

ನಮಸ್ಕಾರ ಚೈನ್ ಚೈತ್ರಾ ಅವರಿಗೆ..
– ಓ, ಬಂದ್ ಬಿಟ್ರಾ, ಕಾಯ್ತಾ ಇದ್ರಿ ಅಲ್ವಾ?

ಅಯ್ಯೋ, ಮತ್ತಿನ್ನೇನು, ನಮಗೆ ಕಾಮಿಡಿ ಮಾಡೋಕೆ ಗಿರಾಕಿ ಸಿಕ್ರೆ ಸಾಕು ಅಂತ ಕಾಯ್ತಾ ಇರ್ತೀವಿ. ಅಂಥದ್ರಲ್ಲಿ ನಿಮ್ಮಂಥೋರು ಸಿಕ್ರೆ ಬಿಡೋಕಾಗುತ್ತಾ? ಸರಿ, ಇನ್ನೂ ಈಗೀಗ ಹೆಸರು ಮಾಡ್ತಾ ಇದ್ರಿ. ಜೈಲಿಗೆ ಹೋಗೋಕೆ ಏನ್ ಅವಸರ ಆಗಿತ್ತು?
– ನನ್ ಬಗ್ಗೆ ಎಲ್ರೂ ಚೈನ್ ಚೈತ್ರಾ ಅಂತಾರೆ, ನಂಗೆ ಅದು ಇರಿಟೇಟ್ ಆಗುತ್ತೆ. ನೀವು ಕೂಡಾ ನೋಡಿ, ಈಗ ಸರ ಅಂತಿದ್ದೀರಾ..

ರೀ, ನಾನ್ ಹೇಳಿದ್ದು ಸರ, ಅಲ್ಲ ಅವಸರ. ಸರಿ, ಮತ್ತೆ ಜೈಲಲ್ಲಿ ಹೆಂಗ್ ನಡೀತಿದೆ ಜೀವನ?
– ಮುಝೆ ನೀಂದ್ ನ ಆಯೇ, ಮುಝೆ ಚೈನ್ ನ ಆಯೇ ಅಂತ ಹಾಡು ಕೇಳ್ಕೊಂಡು ಕಾಲ ಕಳೀತಾ ಇದ್ದೀನಿ

ನೋಡಿ ಮತ್ತೆ, ನೀವೇ ಮತ್ತೆ ಚೈನ್ ಅಂತೀರ. ಹೋಗ್ಲಿ, ಜೈಲಿಂದ ಬಿಡುಗಡೆ ಆಗೋ ದಿನ ನಿಮ್ಮ ಬೆಂಬಲಿಗರು ಜೈಲತ್ರ ಬಂದು ನಿಮಗೆ ಹಾರ ಹಾಕಿ ಭರ್ಜರಿ ಸ್ವಾಗತ ಮಾಡ್ತಾರಂತೆ ಹೌದಾ?
– ಹಾರ ಹಾಕಿದ್ರೆ ಓಕೆ. ಆದ್ರೆ ಚೈನ್ ಮಾತ್ರ ಬೇಡ

ಚೈನ್ ವಿಷ್ಯ ಇಟ್ಕೊಂಡು ತುಂಬಾ ಬೇಚೈನ್ ಆಗಿದ್ದೀರ ನೀವು. ಅದ್ಸರಿ, ಮೊನ್ನೆ ಅರೆಸ್ಟ್ ಆದಾಗ ನೀವು ಮಾತಾಡಿದ್ದು ನೋಡಿದ್ರೆ, ದೊಡ್ಡ ದೊಡ್ಡವರನ್ನೆಲ್ಲಾ
ಹಾಕಿಕೊಡೋ ಥರ ಕಾಣ್ತಾ ಇದೆಯಲ್ಲ?
– ಖಾಕಿ ಪಡೆ ಫೀಲ್ಡಿಗೆ ಇಳೀಲಿ, ನನ್ ಜತೆ ಇದ್ದ ಎಲ್ಲಾರೂ ಕಕಿಬಕ, ಕಕ್ಕಾಬಿಕ್ಕಿ ಆಗೋ ಥರ ಮಾಡ್ತಾರೆ.
(ಕಾಲ್ಪನಿಕ ಸಂದರ್ಶನ)

ನೆಟ್ ಪಿಕ್ಸ್
ಕ್ರಿಶ್ಚಿಯನ್ನರೇ ಹೆಚ್ಚಾಗಿರುವ ಊರೊಂದರ ಚರ್ಚ್‌ನಲ್ಲಿ ಖೇಮು ಫಾದರ್ ಆಗಿದ್ದ. ಆ ಏರಿಯಾದ ಬಹುತೇಕ ಎಲ್ಲ ಜನರ ಪರಿಚಯ ಅವನಿಗಿತ್ತು. ಆದರೆ, ಕೆಲವೊಂದು ದಿನಗಳಿಂದ ಚರ್ಚಿನ ಮುಂದೆ ಇರುವ ಕ್ರಾಸ್ ರೋಡ್‌ನಲ್ಲಿ ಇಬ್ಬರು ಭಿಕ್ಷುಕರು ಕೂರುತ್ತಾ ಇದ್ದಿದ್ದು ಖೇಮು ಗಮನಕ್ಕೆ ಬಂತು. ಆದರೆ ಅವರನ್ನು ಗಮನಿಸಿದರೂ ಗಮನಿಸದ ಹಾಗೆ ಹೋಗುತ್ತಿದ್ದ ಖೇಮು. ಆ ಇಬ್ಬರಲ್ಲೂ ಒಂದು ವಿಶೇಷ ಇತ್ತು. ಒಬ್ಬ ತನ್ನ ಕೊರಳಿಗೆ ‘ಓಂ’ ಅನ್ನೋ ಪದಕ ಇರೋ ಸರವನ್ನು ನೇತು ಹಾಕಿಕೊಂಡು, ಹಿಂದೂ ದೇವರ -ಟೋ ಹಿಡಿದುಕೊಂಡು ಭಿಕ್ಷೆ ಬೇಡುತ್ತಿದ್ದ.

ಇನ್ನೊಬ್ಬ ಶಿಲುಬೆಯನ್ನು ಕೊರಳಿಗೆ ಹಾಕಿಕೊಂಡು ಯೇಸು ಹೆಸರಲ್ಲಿ ಭಿಕ್ಷೆ ಬೇಡುತ್ತಿದ್ದ. ಅದು ಕ್ರಿಶ್ಚಿಯನ್ನರು ಹೆಚ್ಚಿರುವ ಪ್ರದೇಶ ಆದ್ದರಿಂದ ಸಹಜವಾಗಿ ಎಲ್ಲರೂ ಶಿಲುಬೆ ಹಾಕಿಕೊಂಡವನಿಗೆ ಭಿಕ್ಷೆ ಹಾಕುತ್ತಿದ್ದರು. ಅಲ್ಲದೆ ತಮ್ಮ ಧರ್ಮದ ಮೇಲಿನ ಪ್ರೀತಿ ತೋರಿಸಿಕೊಳ್ಳುವವರು ಹಿಂದೂ ಭಿಕ್ಷುಕನನ್ನು ನೋಡಿ ಬೇಕಂತಲೇ ಶಿಲುಬೆ ಹಾಕಿಕೊಂಡವನಿಗೆ ಹಣ ನೀಡುತ್ತಿದ್ದರು. ಇದನ್ನೆಲ್ಲಾ ಗಮನಿಸಿದ ಖೇಮು ಒಂದು ದಿನ ಹಿಂದೂ ಭಿಕ್ಷುಕನ ಹತ್ತಿರ ಬಂದು, ‘ಮಗೂ, ಇದು ಕ್ರಿಶ್ಚಿಯನ್ನರು ಹೆಚ್ಚಾಗಿರುವ ಊರು, ಇಲ್ಲಿ ನಿನಗೆ ಯಾರೂ ಹಣ ಕೊಡೋದಿಲ್ಲ.

ಹಾಗೆ ನೋಡಿದರೆ ನಿನ್ನಿಂದಾಗಿ ನಿನ್ನ ಪಕ್ಕದಲ್ಲಿ ಶಿಲುಬೆ ಹಾಕಿಕೊಂಡವನಿಗೆ ಲಾಭ ಆಗ್ತಾ ಇದೆ. ಅವನ ಮೇಲೆ ಕರುಣೆ ಇಲ್ಲದಿದ್ದರೂ, ಅವನ ಪಕ್ಕದಲ್ಲಿ ನೀನು ಹಿಂದೂ ದೇವರ ಹೆಸರಲ್ಲಿ ಭಿಕ್ಷೆ ಬೇಡ್ತಾ ಇದ್ದೀಯ ಅನ್ನೋ ಕಾರಣಕ್ಕೆ ತಮ್ಮ ಧರ್ಮ ಪ್ರೇಮವನ್ನ ಸಾಬೀತು ಮಾಡೋಕೋಸ್ಕರ ಜನ ಅವನಿಗೆ ದುಡ್ಡು ಹಾಕ್ತಾ ಇದ್ದಾರೆ. ನೀನು ಬೇರೆ ಎಲ್ಲಾದ್ರೂ ಭಿಕ್ಷೆ ಬೇಡೋದು ಒಳ್ಳೇದು ಅನ್ನಿಸ್ತಿದೆ’ ಎಂದು ಹೇಳಿದ. ಅದಕ್ಕೆ ‘ಸರಿ ಫಾದರ್’ ಅಂದ ಆ ಭಿಕ್ಷುಕ. ಖೇಮು ಆ ಕಡೆ ಹೋದ ಮೇಲೆ, ಈ ಭಿಕ್ಷುಕ ಪಕ್ಕಕ್ಕೆ ತಿರುಗಿ ‘ಜಿಗ್ನೇಶ್ ಭಾಯ್’ ಅಂದ. ಅದಕ್ಕೆ ಆ ಕಡೆ ಭಿಕ್ಷುಕ ‘ಹೇಳು, ಮನ್‌ಸುಖ್ ಭಾಯ್’ ಅಂದ. ಅದಕ್ಕೆ ಜಿಗ್ನೇಶ್ ನಗುತ್ತಾ ಹೇಳಿದ, ‘ನೋಡಿದ್ಯಾ ಈ ಫಾದರ್‌ನ, ನಮ್ಮಂಥ ಗುಜರಾತಿಗಳಿಗೇ ದುಡ್ಡು ಮಾಡೋದ್ ಹೇಗೆ ಅಂತ ಹೇಳಿಕೊಡ್ತಾ ಇದ್ದಾನೆ’.

ಲೈನ್ ಮ್ಯಾನ್

ಪ್ರೀತಿ ಮಾಡೋರಿಗೂ ಎಂಜಿನಿಯರ್‌ಗಳಿಗೂ ಇರೋ ಹೋಲಿಕೆ

– ಇವರು ಯಾರನ್ನೋ ಪ್ರೀತಿ ಮಾಡಿ ಇನ್ಯಾರನ್ನೋ ಮದ್ವೆ ಆಗ್ತಾರೆ, ಅವ್ರು ಎಂಜಿನಿಯರಿಂಗ್ ಓದಿ ಇನ್ನೇನೋ ಕೆಲಸ ಮಾಡ್ತಾರೆ.

ಕ್ಲೀನ್ ಹ್ಯಾಂಡ್ ಪೊಲಿಟಿಷಿಯನ್ ಅಂದ್ರೆ ಯಾರು?
– ದೇಶದ ಆಸ್ತಿಯನ್ನೆಲ್ಲಾ ಮಾರಿ ‘ಕೈ ತೊಳ್ಕೊಂಡವನು’.

‘೪೦ ಪಸೆಂಟ್’ ಕಮಿಷನ್ ಆರೋಪದಿಂದ ಮುಕ್ತ ಆಗೋಕೆ ಏನು ಮಾಡಬೇಕು?
– ಹನುಮಾನ್ ‘ಚಾಳೀಸ’ ಓದಬೇಕು.

ಪ್ರಪಂಚದ ಅತಿ ದೊಡ್ಡ ಕುಡುಕ ಯಾರು?
– ಬಾರಿಗೂ ಕುಡ್ಕೊಂಡೇ ಹೋಗುವವನು.

ಸೋಡಾ ಕುಡಿಯೋಕೆ ಕಂಪನಿ ಕೊಡೋ ಗೆಳೆಯ
– ಸೋಡಾ ಚ್ಠಿbbqs

ಕೆಲವರು ಸ್ವಿಮ್ಮಿಂಗ್ ಪೂಲ್‌ನಲ್ಲಿ ರಬ್ಬರ್ ಟ್ಯೂಬ್‌ನಲ್ಲಿ ಕುಳಿತು ಕುಡಿಯೋದು ಯಾಕೆ?
– ತೇಲುತ್ತಾ ತೇಲೋಕೆ.

ಇಬ್ಬನಿ ಬಿದ್ದ ಕಾರಣಕ್ಕೆ ಕ್ರಿಕೆಟ್ ಮ್ಯಾಚ್ ಸೋತ ಕ್ಯಾಪ್ಟನ್ ಏನು ಹೇಳ್ತಾನೆ?
– Uಛಿ ಟ್ಠ್ಝbೞಠಿ ಡಿಜ್ಞಿ bಛಿ ಠಿಟ bಛಿಡಿ

ಸಣ್ಣ ಮಕ್ಕಳೂ ಕೋಡಿಂಗ್ ಕಲಿಯುತ್ತಿರೋ ಈ ಸಮಯದಲ್ಲಿ ಅತಿಬುದ್ಧಿವಂತರಂತೆ ಮಾತಾಡೋರನ್ನ ಏನಂತ ಬಯ್ತಾರೆ?
– ನಿಂಗೇನ್ ಎರಡ್ ಕೋಡಿದೆಯಾ?

ಬಹಳ ವರ್ಷಗಳವರೆಗೆ ರಸ್ತೆಯಲ್ಲಿ ಓಡಾಡಿ ಸವೆದುಹೋಗಿರುವ ಕಾರಿನ ಟೈರ್
– ಟೈರ್ಡ್

Leave a Reply

Your email address will not be published. Required fields are marked *

error: Content is protected !!