Friday, 13th December 2024

ಸಂಕಷ್ಟಗಳ ನಡುವೆಯೂ ಭಾರತದ ಯಶೋಗಾಥೆ

ಅಭಿವ್ಯಕ್ತಿ

ಗಣೇಶ್ ಭಟ್‌, ವಾರಣಾಸಿ

ಹೌದು. ೨೦೨೦ ಹಾಗೂ ೨೦೨೧ನೇ ಇಸವಿಗಳು ಭಾರತದ ಪಾಲಿಗೆ ಅಷ್ಟಾಗಿ ಶುಭಕರವಾಗಿಲ್ಲ. ೨೦೨೦ರಲ್ಲಿ ಕರೋನಾದ ಮೊದಲ ಅಲೆಯ ಹೊಡೆತಕ್ಕೆ ಸಿಕ್ಕಿದ ಭಾರತದಲ್ಲಿ ತಿಂಗಳುಗಳ ಕಾಲ ಲಾಕ್‌ಡೌನ್ ಮಾಡಬೇಕಾಯಿತು. ಕೋಟ್ಯಂತರ ಜನರು ಉದ್ಯೋಗವನ್ನು ಕಳೆದುಕೊಂಡರು, ಉದ್ದಿಮೆಗಳು ನೆಲಕಚ್ಚಿದವು ಹಾಗೂ ಇವುಗಳ ಪರಿಣಾಮವಾಗಿ ದೇಶದ ಆರ್ಥಿಕತೆ ನೆಲಕಚ್ಚಿತು.

೨೦೨೦-೨೧ರ ಜಿಡಿಪಿ ಶೇ.೭.೩ಗೆ ಕುಸಿಯಿತು. ೨೦೨೧ರ ಜನವರಿ – ಫೆಬ್ರವರಿ ತಿಂಗಳಿಗಾಗುವಾಗ ಭಾರತದಲ್ಲಿ ಕರೋನಾ ನಿಯಂತ್ರಣಕ್ಕೆ ಬಂದು ಆರ್ಥಿಕತೆ ಇನ್ನೇನು ಚೇತರಿಕೆ ಆಗಲಿದೆ ಎನ್ನುವಾಗ ಕರೋನಾ ಎರಡನೇ ಅಲೆಯ ದಾಳಿಯಾಯಿತು. ಕರೋನಾ ಎರಡನೇ ಅಲೆಯು ಮೊದಲ ಅಲೆಗಿಂತ ನಾಲ್ಕು ಪಟ್ಟು ವೇಗವಾಗಿ ಹಬ್ಬುತ್ತಾ ಮೇ ರಂದು ದೇಶದಲ್ಲಿ ದಿನವೊಂದರ ಅತೀ ಹೆಚ್ಚು ೪,೧೪,೧೮೩ ಹೊಸ ಕರೋನಾ ಪ್ರಕರಣಗಳು ದಾಖಲಾದವು.

ದಿನನಿತ್ಯ ಸಾವಿರಾರು ಸೋಂಕಿತರು ಸಾವಿಗೀಡಾದರು. ದೇಶಾದ್ಯಂತ ಆಸ್ಪತ್ರೆಗಳಲ್ಲಿ ಬೆಡ್‌ಗಳ ಕೊರತೆ, ಆಕ್ಸಿಜನ್ ಕೊರತೆ ಹಾಗೂ ತೀವ್ರ ನಿಗಾ ಕೇಂದ್ರಗಳ ಕೊರತೆ ಎದುರಾಯಿತು. ಕರೋನಾದ ಹಬ್ಬುವಿಕೆಯ ವೇಗವನ್ನು ತಡೆಗಟ್ಟಲು ದೇಶದ ವಿವಿಧ ರಾಜ್ಯಗಳು
ಸಂಪೂರ್ಣ ಲಾಕ್‌ಡೌನ್ ಅಥವಾ ಆಂಶಿಕ ಲಾಕ್‌ಡೌನ್ ಅನ್ನು ಜಾರಿ ಮಾಡಬೇಕಾಯಿತು. ನ್ಯೂಯಾರ್ಕ್ ಟೈಮ್ಸ್, ವಾಲ್
ಸ್ಟ್ರೀಟ್ ಜರ್ನಲ್‌, ಗಾರ್ಡಿಯನ್ ಮೊದಲಾದ ವಿದೇಶಿ ಪತ್ರಿಕೆಗಳ ಮುಖ ಪುಟಗಳಲ್ಲಿ ಭಾರತದ ಸ್ಮಶಾನಗಳಲ್ಲಿ ಸಾಲುಸಾಲಾಗಿ
ಉರಿಯುತ್ತಿರುವ ಚಿತೆಗಳ ಫೊಟೋಗಳನ್ನು ಪ್ರಕಟಿಸಲಾಯಿತು.

ಎರಡನೇ ಅಲೆಗೆ ಸಿಲುಕಿದ ಭಾರತದ ಕಥೆ ಮುಗಿಯಿತು ಎಂದು ಅಂತಾರಾಷ್ಟ್ರೀಯ ಮಾಧ್ಯಮ ಪಂಡಿತರು ವರದಿ ಮಾಡಿದರು.
ಆದರೆ ಕರೋನಾ ಒಂದನೇ ಅಲೆಯನ್ನು ನಿಯಂತ್ರಣ ಮಾಡಿ ಅನುಭವವಿದ್ದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕರೋನಾದ
ಹಬ್ಬುವಿಕೆಯನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದವು. ಈಗ ದಿನವೊಂದರ ಕರೋನಾ ಹೊಸ ಕೇಸ್‌ಗಳ ಸಂಖ್ಯೆ ೫೦ ಸಾವಿರದ
ಆಸುಪಾಸಿಗೆ ಇಳಿದಿದೆ. ಡಿಸೆಂಬರ್ ೨೦೨೧ರ ಒಳಗೆ ದೇಶದ ೧೮ ವಯಸ್ಸಿಗಿಂತ ಮೇಲ್ಪಟ್ಟ ಎಲ್ಲಾ ಪ್ರಜೆಗಳಿಗೆ ವ್ಯಾಕ್ಸಿನೇಷನ್
ಲಭಿಸಲಿದೆ ಎಂದು ಅಂದಾಜಿಸಲಾಗುತ್ತಿದೆ.

ಭಾರತದ ಕೆಲವು ಛಿದ್ರಾನ್ವೇಷೀ ಮಾಧ್ಯಮಗಳು ಭಾರತವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಬಹಳ ಕೆಟ್ಟದಾಗಿ ಬಿಂಬಿಸುವು ದರಲ್ಲಿ ಎಲ್ಲಿಲ್ಲದ ಹುಮ್ಮಸ್ಸು. ಇವರು ಭಾರತವನ್ನು ಕೀಳಾಗಿ ಚಿತ್ರಿಸಲು ಪ್ರಯತ್ನಿಸಿದರೂ ಕಳೆದ ಕೆಲವು ವರ್ಷಗಳಲ್ಲಿ ಭಾರತ ದಲ್ಲಿ ಜನರ ಸಾಮಾಜಿಕ ಹಾಗೂ ಆರ್ಥಿಕ ಮಟ್ಟದಲ್ಲಿ ಬಹಳ ಸುಧಾರಣೆಯಾಗಿದೆ ಹಾಗೂ ದೇಶದ ಆರ್ಥಿಕತೆ ಹೊಸ ಮಜಲನ್ನು ಮುಟ್ಟುತ್ತಿದೆ ಎನ್ನುವ ಸತ್ಯವನ್ನು ಮುಚ್ಚಿಡಲು ಸಾಧ್ಯವಿಲ್ಲ.

ದೇಶಿ ಹೂಡಿಕೆದಾರರಿಗೆ ಭಾರತದ ಮೇಲೆ ನಂಬಿಕೆ ಬರುತ್ತಿದೆ. ಇಲ್ಲಿ ಸುಧಾರಿಸಿದ ವಿದ್ಯುತ್, ರಸ್ತೆ, ನೀರಾವರಿ ಮೊದಲಾದ
ಮೂಲಭೂತ ಸೌಕರ್ಯಗಳು ಹಾಗೂ ಕೇಂದ್ರ ಮಟ್ಟದಲ್ಲಿ ಇಳಿಕೆಯಾದ ಭ್ರಷ್ಟಾಚಾರವು ವಿದೇಶೀ ಹೂಡಿಕೆ ಸಂಸ್ಥೆಗಳನ್ನು ಆಕರ್ಷಿಸುತ್ತಿವೆ. ಭಾರತದಲ್ಲಿ ಸುಧಾರಿಸುತ್ತಿರುವ ವ್ಯವಸ್ಥೆಯ ಸೂಚಕವಾಗಿ ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ (ಉದ್ಯಮ
ಸ್ನೇಹೀ ದೇಶಗಳು) ಪಟ್ಟಿಯಲ್ಲಿ ಭಾರತವು ಗಮನೀಯ ಸುಧಾರಣೆಯನ್ನು ಕಂಡಿದೆ.

೨೦೧೪ ರಲ್ಲಿ ಉದ್ಯಮ ಸ್ನೇಹೀ ದೇಶಗಳ ಪಟ್ಟಿಯಲ್ಲಿ ೧೪೨ನೇ ಸ್ಥಾನದಲ್ಲಿದ್ದ ಭಾರತವು ೨೦೨೦ ರಲ್ಲಿ ೭೯ ಸ್ಥಾನಗಳ ಏರಿಕೆ ಯನ್ನು ಕಂಡು ೬೩ನೇ ಸ್ಥಾನಕ್ಕೆ ಏರಿದೆ. ಇವುಗಳ ಪರಿಣಾಮವಾಗಿ ಭಾರತದಲ್ಲಾಗುತ್ತಿರುವ ನೇರ ವಿದೇಶಿ ಹೂಡಿಕೆಯಲ್ಲಿ ಗಮನಾರ್ಹ ಹೆಚ್ಚಳವಾಗುತ್ತಿದೆ. ೨೦೧೩-೧೪ ರಲ್ಲಿಭಾರತದಗಿದ್ದ ಒಟ್ಟು ವಾರ್ಷಿಕ ನೇರ ವಿದೇಶಿ ಹೂಡಿಕೆ ೨೪.೨೯ ಶತಕೋಟಿ ಡಾಲರ್‌ಗಳಾಗಿದ್ದರೆ, ಜಾಗತಿಕ ಕರೋನಾ ಬಿಕ್ಕಟ್ಟಿನ ಎಡೆಯಲ್ಲೂ ೨೦೨೦-೨೧ರಲ್ಲಿ ಭಾರತದದ ನೇರ ವಿದೇಶಿ ಹೂಡಿಕೆ ೮೧.೭೨ ಶತಕೋಟಿ ಡಾಲರ್‌ಗಳು. ಈ ವರ್ಷ ಜಾಗತಿಕವಾಗಿ ೫ನೇ ಅತೀ ಹೆಚ್ಚು ನೇರ ವಿದೇಶಿ ಹೂಡಿಕೆಯನ್ನು ಪಡೆದ ದೇಶ ಭಾರತ.

೧೯೪೭ರಿಂದ ೨೦೧೩ರ ವರೆಗಿನ ೬೩ ವರ್ಷಗಳಲ್ಲಿ ಭಾರತದದ ಒಟ್ಟು ನೇರ ವಿದೇಶೀ ಹೂಡಿಕೆ ೨೯೨ ಶತಕೋಟಿ ಡಾಲರ್ ಗಳಾಗಿದ್ದರೆ ೨೦೧೪-೧೫ ರಿಂದ ೨೦೨೦-೨೧ ರ ವರೆಗಿನ ಒಟ್ಟು ವರ್ಷಗಳ ಅವಧಿಯಲ್ಲಿ ಭಾರತದ ನೇರ ವಿದೇಶಿ ಹೂಡಿಕೆ ೪೪೦ ಶತಕೋಟಿ ಡಾಲರ್ ಗಳು! ಇದು ಭಾರತದ ಬಗ್ಗೆ ವಿದೇಶಿ ಹೂಡಿಕೆದಾರರಲ್ಲಿ ವಿಶ್ವಾಸವು ಹೆಚ್ಚಿರುವುದನ್ನು ಸೂಚಿಸುತ್ತದೆ.

ನವೋದ್ಯಮಗಳ ಉಗಮತಾಣ: ೨೦೨೦ರ ಡಿಸೆಂಬರ್ ಅಂತ್ಯದವರೆಗೆ ಭಾರತದಲ್ಲಿ ೪೧ ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ
ಸ್ಟಾರ್ಟ್ ಅಪ್‌ಗಳು ರೂಪುಗೊಂಡಿದ್ದವು. ಈ ನವೋದ್ಯಮಗಳು ೪,೭೦,೦೦೦ ಗಳಷ್ಟು ನೇರ ಉದ್ಯೋಗಗಳನ್ನು ಸೃಷ್ಟಿಸಿದ್ದರೆ
ಇದರ ನಾಲ್ಕು ಪಟ್ಟು ಪರೋಕ್ಷ ಉದ್ಯೋಗಗಳನ್ನು ನಿರ್ಮಿಸಿವೆ.

ಇವುಗಳಲ್ಲಿ ೫೧ ನವೋದ್ಯಮಗಳು ಯುನಿಕಾರ್ನ್ ಸ್ಟಾರ್ಟ್ ಅಪ್ ಗಳಾಗಿ ಬೆಳೆದಿವೆ. ಶತಕೋಟಿ ಡಾಲರ್ (ಸುಮಾರು ೭೩೦೦ ಕೋಟಿ ರುಪಾಯಿಗಳು) ನಿಂದ ಹೆಚ್ಚು ಮೌಲ್ಯದ ನವೋದ್ಯಮಗಳನ್ನು ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳೆಂದು ಕರೆಯ ಲಾಗುತ್ತದೆ. ಈಗಿನ ೫೧ ಯುನಿಕಾರ್ನ್ ಸ್ಟಾರ್ಟ್‌ಅಪ್‌ಗಳಲ್ಲಿ ೪೭ ಸ್ಟಾರ್ಟ್‌ಅಪ್ ಗಳು ಯುನಿಕಾರ್ನ್ ಗಳಾಗಿ ರೂಪುಗೊಂಡದ್ದು ೨೦೧೪ರ ನಂತರವೇ. ೨೦೧೪ರವರೆಗೆ ಭಾರತದಲ್ಲಿ ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳು ಮಾತ್ರ ಇದ್ದವು.

೨೦೧೫ರಲ್ಲಿ ೫, ೨೦೧೬ರಲ್ಲಿ ೨,೨೦೧೮ರಲ್ಲಿ ೮, ೨೦೧೯ರಲ್ಲಿ ೯, ೨೦೨೦ರಲ್ಲಿ ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳು ರೂಪುಗೊಂಡಿವೆ. ೨೦೨೧ ರ ಜನವರಿಯಿಂದ ಮೇ ತಿಂಗಳವರೆಗಿನ ತಿಂಗಳಲ್ಲಿ ೧೫ ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳು ಭಾರತದಲ್ಲಿ ರೂಪುಗೊಂಡಿವೆ. ಈ ಅವಧಿಯಲ್ಲಿ ಚೀನಾದಲ್ಲಿ ರೂಪುಗೊಂಡ ಯುನಿಕಾರ್ನ್ ಸ್ಟಾರ್ಟ್ ಅಪ್‌ಗಳ ಸಂಖ್ಯೆ ಕೇವಲ .

ಜಾಗತಿಕವಾಗಿ ಯುನಿಕಾರ್ನ್ ಸ್ಟಾರ್ಟ್ ಅಪ್ ಗಳ ಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕದಲ್ಲಿ ೧೨೪, ನೇ ಸ್ಥಾನದಲ್ಲಿರುವ ಚೀನಾದಲ್ಲಿ ೧೦೪ ಹಾಗೂ ಮೂರನೇ ಸ್ಥಾನದಲ್ಲಿರುವ ಭಾರತದಲ್ಲಿ ೫೧ ಯುನಿಕಾರ್ನ್ ಸ್ಟಾರ್ಟ್ ಅಪ್
ಗಳು ಇವೆ. ನಾಲ್ಕನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ನಲ್ಲಿ ೧೬ ಯುನಿಕಾರ್ನ್ ನವೋದ್ಯಮಗಳಿವೆ. ಜಾಗತಿಕ ಉತ್ಪಾದನಾ ಕೇಂದ್ರ: ಭಾರತವಿಂದು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಬೆಳೆಯುತ್ತಿದೆ.

ಕ್ಸಿಯೋಮಿ, ರಿಯಲ್ ಮಿ, ಒಪ್ಪೋ, ವನ್ ಪ್ಲಸ್, ವಿವೋ, ಲೆನೋವೋ ಸಹಿತ ಚೀನಾ ಮೂಲದ ಮೊಬೈಲ್ ಉತ್ಪಾದನಾ ಸಂಸ್ಥೆಗಳು ಭಾರತದಲ್ಲಿ ದೊಡ್ಡ ಪ್ರಮಾಣದ ಉತ್ಪಾದನಾ ಘಟಕಗಳನ್ನು ಹೊಂದಿವೆ. ಕೊರಿಯಾ ಮೂಲದ ಸ್ಯಾಂಮ್ಸಂಗ್ ಸಂಸ್ಥೆಗೆ ನೋಯಿಡಾದಲ್ಲಿ ಅತೀ ದೊಡ್ಡ ಸ್ಮಾರ್ಟ್ಫೋನ್ ಉತ್ಪಾದನಾ ಘಟಕವಿದೆ.

ಸ್ಯಾಂಮ್ಸಂಗ್ ತನ್ನ ಮೊಬೈಲ್ ಡಿಸ್ ಪ್ಲೇಯನ್ನು ತಯಾರಿಸುವ ಚೀನಾದ ಘಟಕವನ್ನು ಮುಚ್ಚಿ ಸಂಪೂರ್ಣವಾಗಿ ಭಾರತದ
ನೋಯಿಡಾ ಘಟಕಕ್ಕೆ ಸ್ಥಳಾಂತರಗೊಂಡಿದೆ. ಅಮೆರಿಕದ ಆಪಲ್ ಮೊಬೈಲ್ ಫೋನ್ ಸಂಸ್ಥೆಗೆ ಕರ್ನಾಟಕ ಹಾಗೂ
ತಮಿಳುನಾಡುಗಳಲ್ಲಿ ಉತ್ಪಾದನಾ ಘಟಕಗಳಿವೆ. ಆಪಲ್, ನೋಕಿಯಾ, ಕ್ಸಿಯೋಮಿ ಮೊದಲಾದ ಕಂಪನಿಗಳಿಗೆ ಸ್ಮಾರ್ಟ್
ಫೋನ್ ತಯಾರಿಸಿ ಪೂರೈಸುತ್ತಿರುವ ತೈವಾನ್ ಮೂಲದ -ಕ್ಸ್ ಕಾನ್ ಭಾರತದಲ್ಲಿ ಹಲವೆಡೆ ಉತ್ಪಾದನಾ ಘಟಕಗಳನ್ನು
ಹೊಂದಿದೆ.

೨೦೧೪ರಲ್ಲಿ ಭಾರತದಲ್ಲಿ ಮೊಬೈಲ್ ಪೋನ್ ಉತ್ಪಾದನಾ ಘಟಕಗಳಿದ್ದರೆ ೨೦೨೦ರಲ್ಲಿ ಈ ಸಂಖ್ಯೆ ೨೦೦ಕ್ಕೆ ಏರಿದೆ. ಚೀನಾದ ಹೊರತಾಗಿ ಜಾಗತಿಕವಾಗಿ ೨ನೇ ಅತೀ ಹೆಚ್ಚು ಮೊಬೈಲ್ ಫೋನ್‌ಗಳನ್ನು ಉತ್ಪಾದಿಸಿದ ದೇಶ ಭಾರತವೇ. ಭಾರತದಿಂದ
೨೦೨೦ನೇ ಇಸವಿಯಲ್ಲಿ ೮೮೦೬ ಕೋಟಿ ರುಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳನ್ನು ರಫ್ತು ಮಾಡಲಾಗಿದೆ. ಇದರಲ್ಲಿ ಸ್ಮಾರ್ಟ್ ಫೋನ್‌ಗಳ ನಿರ್ಯಾತದ ಮೌಲ್ಯ ೩೦೬೧ ಕೋಟಿ ರುಪಾಯಿಗಳು. ಕರೋನಾ ನಿಮಿತ್ತದ ಜಾಗತಿಕ ಆರ್ಥಿಕ ಕುಸಿತದ ನಡುವೆಯೂ ೨೦೨೦ರಲ್ಲಿ ೬,೭೭,೩೧೦ ಪ್ರಯಾಣಿಕ ವಾಹನಗಳು ಹಾಗೂ ೩೫,೨೦,೩೭೦ ದ್ವಿಚಕ್ರ ವಾಹನಗಳು ಭಾರತದಿಂದ
ನಿರ್ಯಾತ ವಾಗಿವೆ. ವಿದೇಶಗಳ ಅಟೋಮೊಬೈಲ್ ಉತ್ಪಾದಕರು ಭಾರತದಲ್ಲಿ ಉತ್ಪಾದನಾ ಘಟಕಗಳನ್ನು ತೆರೆದಿದ್ದಾರೆ.

ಜಪಾನ್‌ನ ಆಟೋ ಮೊಬೈಲ್ ಉತ್ಪಾದನಾ ಸಂಸ್ಥೆಗಳಾದ ಟೊಯೋಟೋ, ಸುಶೋ ಹಾಗೂ ಸುಮಿದಾಗಳು ಚೀನಾದಲ್ಲಿರುವ ಉತ್ಪಾದನಾ ಘಟಕಗಳನ್ನು ಮುಚ್ಚಿ ಭಾರತಕ್ಕೆ ಸ್ಥಳಾಂತರಗೊಂಡಿದ್ದಾರೆ. ಮುಂದಿನ ವರ್ಷಗಳಲ್ಲಿ ಭಾರತವು ಅಟೋ ಮೊಬೈಲ್ ಕ್ಷೇತ್ರದ ಜಾಗತಿಕ ಉತ್ಪಾದನಾ ಘಟಕವಾಗಿ ಹೊಮ್ಮಲಿದೆ.

ಬಲಗೊಳ್ಳುತ್ತಿರುವ ದೇಶದ ಆಂತರಿಕ ಆರ್ಥಿಕತೆ: ಭಾರತದ ಆಂತರಿಕ ಆರ್ಥಿಕತೆಯೂ ಬಲಿಷ್ಠವಾಗುತ್ತಿದೆ. ಒಟ್ಟು ದೇಶೀಯ
ಉತ್ಪಾದನೆಯ (ಜಿಡಿಪಿ) ಆಧಾರದಲ್ಲಿ ಭಾರತವಿಂದು ಜಾಗತಿಕವಾಗಿ ನೇ ಸ್ಥಾನದಲ್ಲಿದೆ. ೨೦೧೪ರಲ್ಲಿ ಭಾರತವು ೧೦ನೆಯ
ಸ್ಥಾನದಲ್ಲಿತ್ತು.

೨೦೨೫ರ ಒಳಗಡೆ ಭಾರತವು ೫೦೦೦ ಶತಕೋಟಿ ಡಾಲರ್‌ಗಳ ಜಿಡಿಪಿಯನ್ನು ಹೊಂದಿ ಜಾಗತಿಕವಾಗಿ ನೆಯ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಕರೋನಾದ ಮೊದಲ ಅಲೆಯ ಲಾಕ್‌ಡೌನ್‌ನಿಂದ ಚೇತರಿಸಿಕೊಂಡ ನಂತರ ಅಕ್ಟೋಬರ್ ೨೦೨೦ರಿಂದ ಮೇ ೨೦೨೧ರ ವರೆಗೆ ಎಲ್ಲಾ ತಿಂಗಳುಗಳಲ್ಲಿ ಲಕ್ಷ ಕೋಟಿ ರುಪಾಯಿ ಗಳಿಗಿಂತ
ಹೆಚ್ಚು ಜಿ ಎಸ್ ಟಿ ಭಾರತದಲ್ಲಿ ಸಂಗ್ರಹವಾಗಿದೆ.

ಏಪ್ರಿಲ್ ೨೦೨೧ ರಲ್ಲಿ ಅತೀ ಹೆಚ್ಚು ೧.೪೧ ಲಕ್ಷ ಕೋಟಿ ರುಪಾಯಿಗಳ ಜಿಎಸ್‌ಟಿ ಸಂಗ್ರಹ ಆಗಿದೆ. ೨೦೧೯-೨೦ರಲ್ಲಿ ಆದಾಯ
ತೆರಿಗೆಯೂ ಸೇರಿದಂತೆ ೧೧,೧೯,೨೪೭ ಕೋಟಿ ರುಪಾಯಿಗಳ ನೇರ ತೆರಿಗೆ ಸಂಗ್ರಹ ಆಗಿತ್ತು. ೨೦೨೦-೨೧ರ ಮಹಾ ಆರ್ಥಿಕ
ಹಿಂಜರಿತದ ನಡುವೆಯೂ ೯.೪೫,೦೦೦ ಕೋಟಿ ರುಪಾಯಿಗಳಷ್ಟು ನೇರ ತೆರಿಗೆ ಸಂಗ್ರಹವಾಗಿತ್ತು. ೨೦೧೩ – ೧೪ರಲ್ಲಿ ಸಂಗ್ರಹವಾದ ನೇರ ತೆರಿಗೆಯ ಪ್ರಮಾಣ ೬,೪೧,೮೩೫ ಕೋಟಿಗಳಾಗಿತ್ತು.

ಭಾರತದ ವಿದೇಶಿ ವಿನಿಮಯ ಸಂಗ್ರಹದಲ್ಲೂ ಭಾರೀ ಏರಿಕೆಯಾಗಿದ್ದು ಇದೀಗ ೬೦೦ ಶತಕೋಟಿ ಡಾಲರ್‌ಗಳಿಗೆ ಏರಿ ಅತೀ ಹೆಚ್ಚು ವಿದೇಶಿ ವಿನಿಮಯ ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ನೇ ಸ್ಥಾನಕ್ಕೇರಿದೆ. ಕಳೆದ ೧೨ ತಿಂಗಳುಗಳಲ್ಲಿ
೧೨೫ ಶತಕೋಟಿ ಡಾಲರ್‌ಗಳಷ್ಟು ವಿದೇಶಿ ವಿನಿಮಯ ಭಾರತದ ಬೊಕ್ಕಸಕ್ಕೆ ಸೇರಿದೆ. ೨೦೧೪ರಲ್ಲಿ ಭಾರತದಲ್ಲಿ ಸಂಗ್ರಹವಿದ್ದ ವಿದೇಶಿ ವಿನಿಮಯ ಪ್ರಮಾಣವು ೩೦೩.೬೭ ಶತಕೋಟಿ ಡಾಲರ್ ಗಳಾಗಿದ್ದವು.

ಮೂಲ ಸೌಕರ್ಯಗಳ ಅಭಿವೃದ್ಧಿ ಮತ್ತು ಸಾಮಾಜಿಕ ಅಭಿವೃದ್ಧಿ: ೨೦೧೪ರಲ್ಲಿ ಭಾರತದ ಶೇ.೭೫ರಷ್ಟು ಮನೆಗಳಿಗೆ
ಮಾತ್ರ ವಿದ್ಯುತ್ ಸಂಪರ್ಕವಿತ್ತು. ೧೮೪೫೨ ಹಳ್ಳಿಗಳು ಹಾಗೂ ೩.೫ ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕವಿರಲಿಲ್ಲ. ಪ್ರಧಾನ್
ಮಂತ್ರಿ ಹರ್ ಘರ್ ಬಿಜಲೀ ಯೋಜನಾದ ಅಡಿಯಲ್ಲಿ ಈ ಎಲ್ಲಾ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕವನ್ನು ಒದಗಿಸಲಾಯಿತು ಹಾಗೂ ೩.೫ ಕೋಟಿ ಬಡವರ ಮನೆಗಳಿಗೆ ಉಚಿತವಾಗಿ ವಯರಿಂಗ್ ಮಾಡಿಸಿ ವಿದ್ಯುತ್ ಸಂಪರ್ಕವನ್ನು ಕೊಡಲಾಯಿತು.

೨೦೨೦ನೇ ಇಸವಿಯಲ್ಲಿ ದೇಶದ ಎಲ್ಲಾ ಮನೆಗಳಿಗೆ ವಿದ್ಯುತ್ ಸಂಪರ್ಕ ಲಭಿಸಿ ದೇಶದ ಶೇ.೧೦೦ ಮನೆಗಳು ವಿದ್ಯುದೀಕರಣ ಗೊಂಡವು. ೨೦೧೪ರಲ್ಲಿ ದೇಶದ ಶೇ.೪೩ ಮನೆಗಳಿಗೆ ಮಾತ್ರ ಶೌಚಾಲಯಗಳು ಲಭ್ಯವಿದ್ದವು. ಶೇ.೫೭ ಭಾರತೀಯರು ಶೌಚಕ್ಕೆ ಬಯಲನ್ನೇ ಆಶ್ರಯಿಸುತ್ತಿದ್ದರು. ಸ್ವಚ್ಛ ಭಾರತ್ ಅಭಿಯಾನ ಯೋಜನೆಯಡಿಯಲ್ಲಿ ೧೧ ಕೋಟಿಗೂ ಅಧಿಕ ಮನೆಗಳಿಗೆ ಶೌಚಾಲಯಗಳನ್ನು ಕಟ್ಟಿಸಿಕೊಡಲಾಯಿತು. ಈಗ ದೇಶದ ಬಹುತೇಕ ಶೇ.೧೦೦ ಮನೆಗಳಿಗೆ ಶೌಚಾಲಯವು ಉಪಲಬ್ಧವಿದೆ.

೨೦೧೫ರಲ್ಲಿ ಭಾರತದ ಶೇ.೪೫ರಷ್ಟು ಮನೆಗಳಲ್ಲಿ ಮಾತ್ರ ಅಡುಗೆ ಅನಿಲದ ಲಭ್ಯತೆಯಿತ್ತು. ಗ್ರಾಮೀಣ ಪ್ರದೇಶದಲ್ಲಂತೂ ಈ ಪ್ರಮಾಣ ಶೇ.೩೦ಕ್ಕಿಂತಲೂ ಕಡಿಮೆ ಇತ್ತು. ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ ದೇಶದ ೧೧ ಕೋಟಿ ಬಡ ಮಹಿಳೆಯರ ಮನೆಗಳಿಗೆ ಉಚಿತ ಗ್ಯಾಸ್ ಸಂಪರ್ಕ ಕೊಡಲಾಗಿದೆ. ಈಗ ದೇಶದ ಶೇ.೯೭.೫ ಮನೆಗಳಿಗೆ ಅಡುಗೆ ಅನಿಲ ಸಂಪರ್ಕವಿದೆ.

೨೦೧೯ರಲ್ಲಿ ದೇಶದ ೩.೩ ಕೋಟಿ ಗ್ರಾಮೀಣ ಮನೆಗಳಿಗೆ ಮಾತ್ರ ನಲ್ಲಿಯ ಮೂಲಕ ಕುಡಿಯುವ ನೀರಿನ ಸಂಪರ್ಕವಿದ್ದಿದ್ದು ಕಳೆದೊಂದು ವರ್ಷದಲ್ಲಿ ಪ್ರಧಾನ ಮಂತ್ರಿ ಜಲ್ ಜೀವನ್ ಯೋಜನೆಯಡಿಯಲ್ಲಿ ೪.೨೫ ಕೋಟಿ ಮನೆಗಳಿಗೆ ಹೊಸದಾಗಿ ನಲ್ಲಿ ನೀರಿನ ಸಂಪರ್ಕವನ್ನು ನೀಡಲಾಗಿದೆ. ೨೦೨೪ನೇ ಇಸವಿಯೊಳಗಾಗಿ ದೇಶದ ಎಲ್ಲ ೧೯ ಕೋಟಿ ಗ್ರಾಮೀಣ ಮನೆಗಳಿಗೆ ನಲ್ಲಿಯ ಮೂಲಕ ಕುಡಿಯುವ ನೀರಿನ ಸಂಪರ್ಕವನ್ನು ಒದಗಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ.

ಈ ಹಿಂದೆ ೨೦,೦೦,೦೦೦ ಕಿಲೋ ಮೀಟರ್‌ಗಳಷ್ಟಿದ್ದ ಗ್ರಾಮೀಣ ರಸ್ತೆಗಳು ದುಪ್ಪಟ್ಟಾಗಿ ಈಗ ೪೧,೬೭,೦೦೦ ಕಿಲೋ ಮೀಟರ್‌ ಗಳಿಗೆ ಏರಿದೆ. ದಿನವೊಂದಕ್ಕೆ ಕಿಲೋ ಮೀಟರ್‌ನಷ್ಟು ವೇಗದಲ್ಲಿ ತಯಾರಾಗುತ್ತಿದ್ದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ
ವೇಗ ವೃದ್ಧಿಯಾಗಿದ್ದು ಈಗ ದಿನವೊಂದಕ್ಕೆ ೩೭ ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ರೂಪೀಕರಣಗೊಳ್ಳುತ್ತಿದೆ. ದೇಶದ ಜನರಿಂದು ಡಿಜಿಟಲ್ ಜಗತ್ತಿಗೆ ತೆರೆದುಕೊಂಡಿದ್ದಾರೆ, ಸರಕಾರದ ಯೋಜನೆಗಳು ಡಿಜಿಟಲ್ ಮಾಧ್ಯಮದ ಮೂಲಕ ಜನರಿಗೆ ತಲುಪುತ್ತಿವೆ.

ಸರಕಾರದ ಸಬ್ಸಿಡಿ, ಪೆನ್ಷನ್‌ಗಳು ಸೋರಿಕೆಯಾಗದೆ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಿವೆ. ದೇಶದಲ್ಲಿ ಸೋಲಾರ್ ಕ್ರಾಂತಿಯಾಗಿದೆ. ೨೦೧೪ರಲ್ಲಿ ಗಿಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪತ್ತಿಯಾಗುತ್ತಿದ್ದ ಭಾರತಲ್ಲಿ ಇದೀಗ ೪೦ ಗಿಗಾವ್ಯಾಟ್ ಸೋಲಾರ್ ಉತ್ಪತ್ತಿಯಾಗುತ್ತಿದೆ. ಸೋಲಾರ್, ಪವನ ಯಂತ್ರಗಳು ಸೇರಿದಂತೆ, ಅಸಾಂಪ್ರದಾಯಿಕ ಮೂಲಗಳಿಂದ ಭಾರತದಲ್ಲಿಂದು ೯೩ ಗಿಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ.

ರಷ್ಟು ಇದ್ದ ಏಮ್ಸ ಆಸ್ಪತ್ರೆಗಳನ್ನು ೨೫ಕ್ಕೆ ಏರಿಸಲಾಗಿದೆ, ೧೫ರಷ್ಟು ಇದ್ದ ಐಐಟಿಗಳು ೨೩ಕ್ಕೆ ಏರಿವೆ, ರಷ್ಟು ಇದ್ದ ಐಐಟಿಗಳನ್ನು ೨೫ಕ್ಕೆ ಏರಿಸಲಾಗಿದೆ. ಹಿಂದೆ ದೇಶಾದ್ಯಂತ ೩೯೮  ಮೆಡಿಕಲ್ ಕಾಲೇಜುಗಳು ಇದ್ದಿದ್ದು ಈಗ ಆ ಸಂಖ್ಯೆ ೫೬೨ಕ್ಕೆ ಏರಿದೆ. ಹೀಗೆ ಲೆಕ್ಕ ಹೇಳುತ್ತಾ ಹೋದರೆ ಕಳೆದ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಆದ ಧನಾತ್ಮಕ ಬದಲಾವಣೆಗಳಿಗೆ ಲೆಕ್ಕವಿಲ್ಲ.
ಸಾಮಾಜಿಕ ಅಭಿವೃದ್ಧಿ ಹಾಗೂ ಪರಿಸರದ ಸಂರಕ್ಷಣೆಯೊಂದಿಗೆ ಆರ್ಥಿಕ ಅಭಿವೃದ್ಧಿಯಾಗುತ್ತಿದೆ. ಇದುವೇ ಸುಸ್ಥಿರ ಅಭಿವೃದ್ಧಿ.