ವೀಕೆಂಡ್ ವಿಥ್ ಮೋಹನ್
ಮೋಹನ್ ವಿಶ್ವ
ಬಾಲಿವುಡ್ ಸಿನಿಮಾಗಳನ್ನು ಪ್ರೇಕ್ಷಕರು ಎಷ್ಟು ಆಳವಾಗಿ ವೀಕ್ಷಿಸುತ್ತಾರೋ ಅಷ್ಟೇ ಆಳವಾದ ವಿಚಾರಗಳು ಚರ್ಚೆಗೆ ಸಿಗುತ್ತವೆ.
ಹಿಂದಿ ಸಿನಿಮಾಗಳನ್ನು ಕೇವಲ ಸಿನಿಮಾದ ರೀತಿಯಲ್ಲಿ ನೋಡಿದರೆ ನಿಜದ ಅರಿವಾಗುವುದಿಲ್ಲ. ಕೊಂಚ ಆಳಕ್ಕೆ ಹೊಕ್ಕು ನೋಡಿದರೆ ಬಾಲಿವುಡ್ ನಲ್ಲಿರುವ ಮುಸಲ್ಮಾನ್ ಹೀರೋಗಳು, ನಿರ್ದೇಶಕರು, ನಿರ್ಮಾಪಕರು, ಭೂಗತ ಪಾತಕಿಗಳ ನಂಟು ಹೊಂದಿರುವವರು ಎಷ್ಟರ ಮಟ್ಟಿಗೆ ಹಿಂದಿ ಸಿನಿಮಾಗಳಲ್ಲಿ ಹಿಂದೂ ಧರ್ಮವನ್ನು ಅವಹೇಳನ ಮಾಡಿದ್ದಾರೆಂಬ ಸತ್ಯ ತಿಳಿಯುತ್ತದೆ.
1960ರ ದಶಕದಲ್ಲಿ ಬಾಲಿವುಡ್ ನಲ್ಲಿ ಮುಸ್ಲಿಂ ಹೀರೋಗಳಾಗಲಿ ಅಥವಾ ನಿರ್ದೇಶಕರಾಗಲಿ ಅಥವಾ ನಿರ್ಮಾಪಕರಾಗಲಿ ಅಷ್ಟಾಗಿ ಇರಲಿಲ್ಲ. ಕಿಶೋರ್ ಕುಮಾರ್, ರಾಜೇಶ್ ಖನ್ನಾ, ಶಮ್ಮಿ ಕಪೂರ್, ಧರ್ಮೇಂದ್ರ, ಗುಲ್ ಶನ್ ಕುಮಾರ್, ಸಂಜೀವ್
ಕುಮಾರ್ ತರಹದ ಹಿಂದೂ ಕಲಾವಿದರಿದ್ದರು. ಇವರ ಸಿನಿಮಾಗಳನ್ನು ನೋಡಿದರೆ ಎಂದೂ ಸಹ ಹಿಂದೂ ಧರ್ಮದ
ಅವಹೇಳನ ಅಥವಾ ಹಿಂದೂ ಧರ್ಮದ ದೇವರುಗಳ ಅವಹೇಳನಗಳು ಕಾಣಿಸುವುದಿಲ್ಲ, ಅಷ್ಟೇ ಯಾಕೆ ಮುಸ್ಲಿಂ ಧರ್ಮದ ಬಗ್ಗೆಯೂ ಅವಹೇಳನಕಾರಿ ಯಾದ ಚಿತ್ರಗಳಾಗಲಿ ಅಥವಾ ದೃಶ್ಯಗಳಾಗಲಿ ಕಾಣ ಸಿಗುವುದಿಲ್ಲ.
ಧರ್ಮವನ್ನು ಮೀರಿ ಬಾಲಿವುಡ್ ಸಿನಿಮಾ ಗಳು ತೆರೆಯ ಮೇಲೆ ಬಿಡುಗಡೆಗೊಳ್ಳುತ್ತಿದ್ದವು. ಪ್ರೇಕ್ಷಕನ ಮನಸಿನಲ್ಲಿ ಯಾವ
ಧರ್ಮದ ಅವಹೇಳನಕಾರಿ ವಿಚಾರ ಗಳು ಬರುತ್ತಿರಲಿಲ್ಲ, ಹಳೆಯ ಹಾಡುಗಳನ್ನು ಒಮ್ಮೆ ಕೇಳಿದರೆ ಎಂದೂ ಸಹ ಧರ್ಮಗಳ ಅವಹೇಳನಕಾರಿಯಾದ ಸಾಹಿತ್ಯ ಕಾಣುವುದಿಲ್ಲ. ಅಂದಿನ ಕಾಲದ ನಿರ್ದೇಶಕರುಗಳು ಅಷ್ಟು ಅಚ್ಚುಕಟ್ಟಾಗಿ ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದರು. ಅವರ ಸಿನಿಮಾಗಳಲ್ಲಿನ ಪಾತ್ರದ ಹೆಸರು, ಪಾತ್ರದಾರಿಯ ನಡೆ ನುಡಿ, ಪಾತ್ರದಾರಿಯ ಉಡುಗೆಗಳು, ಪಾತ್ರದಾರಿಯ ನೋಟ, ಹಾವ, ಭಾವ ಎಂದೂ ಸಹ ಒಂದು ಧರ್ಮಕ್ಕೆ ಅವಮಾನವಾಗದಂತೆ ಹುಷಾರಾಗಿ ನಿರ್ವಹಿಸಲಾಗು ತ್ತಿತ್ತು.
ಸಾಹಿತಿಗಳು, ನಿರ್ದೇಶಕರುಗಳು , ನಿರ್ಮಾಪಕರು ಈ ವಿಚಾರದ ಬಗ್ಗೆೆ ಹೆಚ್ಚಾಗಿ ತಲೆ ಕೆಡಿಸಿಕೊಳ್ಳುತ್ತಿದ್ದರು. ಅಂತಹ ಪ್ರಸಂಗಗಳು ಸಿನಿಮಾದಲ್ಲಿ ಬರದಂತೆ ನೋಡಿಕೊಳ್ಳುತ್ತಿದ್ದರು. ಒಟ್ಟಿನಲ್ಲಿ ಎಲ್ಲ ಧರ್ಮದವರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕೆಂಬ ಹಂಬಲ ಅವರಲ್ಲಿತ್ತು. ಜನರು ಅಷ್ಟೇ ಚಿತ್ರಗಳನ್ನು ಎಂದೂ ಸಹ ಹೆಚ್ಚಾಗಿ ವಿರೋಧಿಸಿದವರಲ್ಲ, ಜನರ ಭಾವನೆಗಳಿಗೆ ಧಕ್ಕೆ ಬರದಂತೆ ಸಿನಿಮಾ ನಿರ್ಮಾಣ ಮಾಡಲಾಗುತ್ತಿತ್ತು.
ಆದರೆ ಕಾಲ ಬದಲಾದಂತೆ ಬಾಲಿವುಡ್ ಕೂಡ ಬದಲಾಗುತ್ತಾ ಹೋಯಿತು. ಯಾವಾಗ ಭೂಗತ ಲೋಕದ ಹಣವು ಬಾಲಿವುಡ್ ಸಿನಿಮಾಗಳ ಮೇಲೆ ಹೂಡಿಕೆಯಾಗಲು ಶುರುವಾಯಿತೋ ಹಿಂದಿ ಸಿನಿಮಾಗಳ ಕಥೆಯೇ ಬದಲಾಯಿತು. ಮುಂಬೈ ಕತ್ತಲ ಲೋಕದ ಭೂಗತ ದೊರೆಯಾಗಿದ್ದ ಹಾಜಿ ಮಸ್ತಾನ್ ತನ್ನ ಪಾಪದ ಹಣವನ್ನು ಬಾಲಿವುಡ್ ಸಿನಿಮಾಗಳ ಮೇಲೆ ಹೂಡಿಕೆ ಮಾಡಲು ಶುರು ಮಾಡಿದ್ದ. ನಿಧಾನವಾಗಿ ಬಾಲಿವುಡ್ ಬದಲಾಯಿತು, ಮುಸಲ್ಮಾನ್ ಭೂಗತ ದೊರೆಗಳು ತೆರೆಯ ಮೇಲೆ ಹಿಂದೂ ಧರ್ಮವನ್ನು ಅವಹೇಳನಕಾರಿಯಾಗಿ ತೋರಿಸುವ ಪ್ರಯತ್ನಕ್ಕೆ ಕೈ ಹಾಕಿದ್ದರು.
ಅಮಿತಾಬ್ ಬಚ್ಚನ್ ಅಭಿನಯದ ದೀವಾರ್ ಸಿನಿಮಾವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಒಬ್ಬ ಹಿಂದೂ ನಾಸ್ತಿಕನಾಗಿ ನಾಯಕ ನನ್ನು ತೋರಿಸಲಾಗಿದೆ. ಶಿವನ ವಿಗ್ರಹದ ಮುಂದೆ ನಿಂತು ಆತನು ದೇವರನ್ನು ಬಯ್ಯುವ ಪರಿಯನ್ನು ನೋಡಿದರೆ ಹೇಗೆ ಬಾಲಿವುಡ್‌ನಲ್ಲಿ ಮುಸ್ಲಿಂ ಭೂಗತ ದೊರೆಗಳ ಆಡಳಿತ ಶುರುವಾಯಿತೆಂಬುದು ತಿಳಿಯುತ್ತದೆ. ಹಾಗಾದರೆ ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ನಾಸ್ತಿಕರಿರುವುದೇ? ಬೇರೆ ಧರ್ಮ ದಲ್ಲಿರುವವರನ್ನೂ ತೋರಿಸಬಹುದಿತ್ತಲ್ಲ? ಶಿವ ಹಾಗೂ ಅಲ್ಲಾ ಒಂದೇ ಎನ್ನುವವರು, ಶಿವನ ಮುಂದೆ ನಿಂತು ದೇವರನ್ನು ಬಯ್ಯುವ ಬದಲು ಮಸೀದಿಯೊಳಗಿನ ಅಲ್ಲಾ ನನ್ನು ತೋರಿಸಿ ಚಿತ್ರ ತೆಗೆಯ ಬಹುದಿತ್ತಲ್ಲವೇ? ಇಲ್ಲ ಅದರ ಹಿಂದೆ ಇದ್ದದ್ದು ಸಿನಿಮಾಗಳ ಮೂಲಕ ಹಿಂದೂ ಧರ್ಮದ ದೇವರ ಬಗ್ಗೆ ಒಂದು ರೀತಿಯ ಕೆಟ್ಟ ಭಾವನೆಯೊಂದನ್ನು ಸೃಷ್ಟಿಸುವ ಹುನ್ನಾರ.
ಇನ್ನು 1990ರ ದಶಕದಲ್ಲಿ ಬಾಲಿವುಡ್‌ನಲ್ಲಿ ದಾವೂದ್ ಇಬ್ರಾಹಿಂ ಹಾಗೂ ಅಬು ಸಲೀಮ್ರ ಪ್ರವೇಶವಾಯಿತು, ತಮ್ಮ ಭೂಗತ
ಚಟುವಟಿಕೆಯ ಹಣವನ್ನು ಈ ಇಬ್ಬರು ಡಾನ್ ಗಳು ಸಿನಿಮಾಗಳಲ್ಲಿ ಹೂಡಲು ಶುರು ಮಾಡಿದರು. ಇವರಿಗೆ ಆಗ ಹೀರೋಗಳಾಗಿ ಸಾಥ್ ಕೊಟ್ಟವರು ಅಮೀರ್ ಖಾನ್, ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್. 1990ರ ದಶಕದಲ್ಲಿ ಬಂದಂಥ ಹಲವು ಚಿತ್ರಗಳು ನಮಗೆ ಇಂದಿಗೂ ಒಂದು ರೀತಿಯ ರೋಮಾಂಚನವನ್ನುಂಟು ಮಾಡುತ್ತವೆಯಾದರೂ, ಅದರ ಹಿಂದಿನ ಉದ್ದೇಶವೇ ಬೇರೆಯ ದಾಗಿತ್ತು. ಕೇವಲ ಮುಸ್ಲಿಂ ನಾಯಕರನ್ನು ಬಾಲಿವುಡ್‌ನಲ್ಲಿ ಬೆಳೆಸಬೇಕೆಂದು ಪಣ ತೊಟ್ಟಿದ್ದ ಮುಂಬೈ ಭೂಗತ ಲೋಕದ ಡಾನ್‌ಗಳು, ಕೇವಲ ಮೂರು ಖಾನ್‌ಗಳನ್ನು ಬಾಲಿವುಡ್‌ನಲ್ಲಿ ಮುಗಿಲೆತ್ತರಕ್ಕೆೆ ಬೆಳೆಯಲು ಸಹಕರಿಸಿದರು.
ಇದರ ನಡುವೆ ಬಂದಂಥ ಅಕ್ಷಯ್ ಕುಮಾರ್ ಒಂದು ಮಟ್ಟದ ಸದ್ದು ಮಾಡಿದರೂ ಸಹ ಅಂದಿನ ಕಾಲದಲ್ಲಿ ಖಾನ್‌ಗಳ ಮಟ್ಟಕ್ಕೆ ಬೆಳೆಯಲು ಆಗಲಿಲ್ಲ. ಸಂಜಯ್ ದತ್‌ನಂಥ ನಾಯಕರು ಮುಸ್ಲಿಂ ಭಯೋತ್ಪಾದಕರ ಜತೆಗೆ ಕೈ ಜೋಡಿಸಿ ಮುಂಬೈನಲ್ಲಿ
ಸರಣಿ ಬಾಂಬ್ ಸ್ಪೋಟಕ್ಕೆ ಕಾರಣನಾದರು. ಹಾಗಾಗಿ ಆತನೂ ಸಹ ಮುಂಬೈ ಭೂಗತರಿಗೆ ಸಹಾಯ ಮಾಡಿದ್ದ. ಹಾಜಿ ಮಸ್ತಾನ್ ಜೀವನ ಚರಿತ್ರೆಯನ್ನೊಳಗೊಂಡ ಒನ್‌ಸ್ ಅಪಾನ್ ಎ ಟೈಮ್ ಇನ್ ಮುಂಬೈ ಸಿನಿಮಾದಲ್ಲಿ , ಅಜಯ್ ದೇವಗನ್ ಪಾತ್ರದಾರಿ ಯನ್ನು ತುಂಬಾ ದೊಡ್ಡ ಮಟ್ಟದಲ್ಲಿ ವೈಭವೀಕರಿಸಲಾಯಿತು. ಒಬ್ಬ ಭೂಗತ ಪಾತಕಿಯನ್ನು ಅಷ್ಟೊಂದು ವೈಭವೀ ಕರಿಸುವ ಅಗತ್ಯವೇ ಇರಲಿಲ್ಲ, ತನ್ನ ಮಾತು ಕೇಳದವರನ್ನು ಅಬು ಸಲೀಂನಂಥ ಭೂಗತ ರೌಡಿ ಕೊಲ್ಲಿಸಿದ ಹಲವು ಉದಾಹರಣೆ ಯುಂಟು, ಗುಲ್ಶನ್ ಕುಮಾರ್ ಸಾವನ್ನು ಈತನೇ ಮಾಡಿಸಿದ್ದಾನೆಂಬ ಗುಮಾನಿಯು ಇಂದಿಗೂ ಇದೆ. ನಂತರ ಬಂದಂಥ ಸಂಜಯ್ ದತ್ ಅಭಿನಯದ ವಾಸ್ತವ್ ಸಿನಿಮಾದಲ್ಲಿಯೂ ಅಷ್ಟೇ ಭೂಗತ ಪಾತಕಿಯೊಬ್ಬನನ್ನು ಹಿಂದೂ ಧರ್ಮದವನ ರೀತಿಯಲ್ಲಿ ತೋರಿಸಲಾಯಿತು. ಹಣೆಯ ಮೇಲೆ ಕೆಂಪನೆಯ ಉದ್ದದ ನಾಮವನ್ನು ಹಾಕಿ ಹಿಂದೂಗಳು ಮಾತ್ರ ಭೂಗತ ರೆಂಬಂತೆ ಬಿಂಬಿಸಲಾಯಿತು. ಪ್ರಸ್ತುತದಲ್ಲಿ ಮುಂಬೈ ಭೂಗತ ಲೋಕವನ್ನು ಆಳಿದ್ದು ಮುಸ್ಲಿಂ ಡಾನ್‌ಗಳು, ಆದರೆ ಬಾಲಿವುಡ್ ಸಿನಿಮಾಗಳಲ್ಲಿ ತೋರಿಸಿದ್ದು ಹಿಂದೂ ಸಂಸ್ಕೃತಿಯ ಉಡುಗೆ, ಹಿಂದೂ ದೇವರುಗಳು, ಕುಂಕುಮ, ಅರಿಸಿನ ಇತ್ಯಾದಿ.
ಇದು ಇಷ್ಟಕ್ಕೆ ನಿಲ್ಲಲಿಲ್ಲ ಹಿಂದಿ ಸಿನಿಮಾಗಳಲ್ಲಿ ಹಿಂದೂ ಧರ್ಮದ ಅರ್ಚಕರನ್ನು ಹಲವು ಬಾರಿ ನಗೆಪಾಟಲಿಗೆ ಗುರಿಯಾಗಿಸ ಲಾಗಿದೆ. ಅವರನ್ನು ಒಂದು ನಗುವ ವಸ್ತುವನ್ನಾಗಿ ಬಳಸಲಾಗಿದೆ. ನಗೆಪಾಟಲಿನ ಜತೆಗೆ ಅವರನ್ನು ಮಾಟ ಮಂತ್ರ ಮಾಡಿಸುವ
ಮಂತ್ರವಾದಿಗಳಂತೆ ತೋರಿಸಲಾಗಿದೆ. ಅರ್ಚಕರನ್ನು ಸಹ ವಿಲನ್‌ಗಳ ರೀತಿಯಲ್ಲಿ ತೋರಿಸುವ ಮೂಲಕ ಹಿಂದೂ ಧರ್ಮಕ್ಕೆ ಹಲವು ಬಾರಿ ಅವಮಾನ ಮಾಡಲಾಗಿದೆ. ಹಣೆಯ ಮೇಲೆ ಕೆಂಪನೆಯ ದೊಡ್ಡ ಕುಂಕುಮವನ್ನು ಹಾಕಿಕೊಂಡು ಕುಳಿತಿರುವ ಮಂತ್ರವಾದಿಯೊಬ್ಬ ನಾಯಕನಿಗೆ ತೊಂದರೆ ಕೊಡುವುದು, ನಾಯಕಿಯನ್ನು ಅತ್ಯಾಚಾರ ಮಾಡುವುದು, ಕೇವಲ ಈ ರೀತಿಯ ದೃಶ್ಯಗಳನ್ನೇ ಚಿತ್ರಿಸಲಾಗಿದೆ.
ಇವರಿಗ್ಯಾರಿಗೂ ಮಸೀದಿಯ ಮೌಲ್ವಿಯ ಪಾತ್ರದಾರಿಯನ್ನು ತೋರಿಸಲಾಗಲಿಲ್ಲ? ಚರ್ಚಿನ ಪಾದ್ರಿಯನ್ನು ತೋರಿಸಲಾಗಲಿಲ್ಲ? ನೀವು ನೋಡಿರುವ ಎಷ್ಟು ಸಿನಿಮಾಗಳಲ್ಲಿ ಪಾದ್ರಿ ಅಥವಾ ಮೌಲ್ವಿಯನ್ನು ಅವಹೇಳನಮಾಡಲಾಗಿದೆ? ನೋ ಚಾನ್ಸ್ ಕೇವಲ
ಬೆರಳೆಣಿಕೆಯಷ್ಟಿರಬಹುದು. ಅಪ್ಪಿ ತಪ್ಪಿ ಏನಾದರು ಅಂತಹ ಪಾತ್ರವನ್ನು ತೆರೆಯ ಮೇಲೆ ಸೃಷ್ಟಿಸಿದರೆ ಮುಸಲ್ಮಾನರು ಬೀದಿ ಗಿಳಿದು ಜಗಳ ಮಾಡುತ್ತಾರೆ, ನಾವು ಹಿಂದೂಗಳು ಮಾತ್ರ ಚಪ್ಪಾಳೆ, ಶೀಟಿ ಹೊಡೆದುಕೊಂಡು ನಗುತ್ತೇವೆ.
ಶೋಲೆ ಸಿನಿಮಾದಲ್ಲಿ ಕಂಡುಬರುವ ಮೌಲ್ವಿಯ ಪಾತ್ರದಾರಿಯನ್ನು ಒಬ್ಬ ಅಮಾಯಕನನ್ನಾಗಿ ತೋರಿಸಲಾಗಿದೆ, ಅಮರ್ ಅಕ್ಬರ್ ಅಂತೋನಿ ಸಿನಿಮಾದಲ್ಲಿ ಬರುವ ಪಾದ್ರಿಯನ್ನು ಒಬ್ಬ ಒಳ್ಳೆಯ ಮನುಷ್ಯನನ್ನಾಗಿ ತೋರಿಸಲಾಗಿದೆ. ವಾಸ್ತವ್ ಚಿತ್ರ ದಲ್ಲಿರುವ ಪರೇಶ್ ರಾವಲ್ ಪಾತ್ರದಾರಿಯ ಮುಸಲ್ಮಾಾನನನ್ನು ಸಂಜಯ್ ದತ್ ಎದುರು ಒಳ್ಳೆಯ ಮನುಷ್ಯನ್ನಾಗಿ ತೋರಿಸಲಾಗಿದೆ. ಇಷ್ಟೆಲ್ಲಾ ಹೇಳಿದ ಮೇಲೆ ಅಮೀರ್ ಖಾನ್ ಅಭಿನಯದ ಪಿ.ಕೆ ಸಿನಿಮಾ ಬಗ್ಗೆ ಮಾತನಾಡಲೇ ಬೇಕು. ನಾನು ಸಹ ಈ ಸಿನಿಮಾವನ್ನು ವೀಕ್ಷಿಸಿದ್ದೆ. ನಾನೂ ಸಹ ಒಬ್ಬ ಪ್ರೇಕ್ಷಕನಾಗಿ ಸಿನಿಮಾವನ್ನು ಆನಂದಿಸಿದ್ದೆ. ಆದರೆ ಆಳವಾಗಿ ಅಧ್ಯಯನ ಮಾಡಿರಲಿಲ್ಲ. ಆದರೆ ಈ ಸಿನಿಮಾ ಬಗ್ಗೆೆ ಯಾವಾಗ ಅಲ್ಲಲ್ಲಿ ಮಾತುಗಳು ಕೇಳಿಬಂದವೊ ಆಗ ಸ್ವಲ್ಪ ಯೋಚಿಸಲು ಶುರು ಮಾಡಿದೆ. ಈ ಸಿನಿಮಾದಲ್ಲಿ ಅನುಷ್ಕಾ ಶರ್ಮ ಪಾಕಿಸ್ತಾನದ ಮುಸಲ್ಮಾನ್ ಹುಡುಗನೊಬ್ಬನನ್ನ ಪ್ರೀತಿಸುತ್ತಿರುತ್ತಾಳೆ.
ಪಾಕಿಸ್ತಾನದ ಮುಸಲ್ಮಾನ್ ಹುಡುಗನ ಪಾತ್ರದಲ್ಲಿ ಸುಶಾಂತ್ ಸಿಂಗ್ ರಜಪೂತ ಅಭಿನಯಿಸಿದ್ದರು. ಲವ್ ಜಿಹಾದ್ ಅನ್ನು
ಅನುಕಂಪದ ರೀತಿಯಲ್ಲಿ ಈ ಸಿನಿಮಾದಲ್ಲಿ ತೋರಿಸುವ ಸಲುವಾಗಿ, ಪಾಕಿಸ್ತಾನದ ಮುಸಲ್ಮಾನ್ ಹುಡುಗನ ಮನೆಯವರನ್ನು ಅಮಾಯಕರನ್ನಾಗಿ ತೋರಿಸಲಾಗಿತ್ತು. ಇವರ ಪ್ರೀತಿಗೆ ಹಿಂದೂ ಧರ್ಮದಲ್ಲಿ ಮಾತ್ರ ಅಡ್ಡಿಯಿದೆಯೆಂದು ತೋರಿಸಿ ಪಾಕಿಸ್ತಾನ ದಲ್ಲಿ ಯಾವ ರೀತಿಯ ಅಡೆತಡೆಗಳಿಲ್ಲವೆಂಬಂತೆ ಬಿಂಬಿಸಲಾಗಿತ್ತು. ನಿಜ ಹೇಳಬೇಕಂದರೆ ಪಾಕಿಸ್ತಾನದಲ್ಲಿ ನಡೆಯುವ ಮರ್ಯಾದಾ ಹತ್ಯೆಗಳು ಜಗತ್ತಿನಲ್ಲಿ ಎಲ್ಲೂ ನಡೆಯುವುದಿಲ್ಲ. ಹಿಂದೂ ಧರ್ಮದಲ್ಲಿನ ಸ್ವಾಮೀಜಿಯೊಬ್ಬರನ್ನು ಕಳ್ಳನೆಂಬಂತೆ ಈ ಸಿನಿಮಾದಲ್ಲಿ ಅಮೀರ್ ಖಾನ್ ತೋರಿಸಿದ್ದ, ಬೋಳುಮಂಡೆಯ ಸ್ವಾಮೀಜಿಯನ್ನು ಒಬ್ಬ ವಿಲನ್ ರೀತಿಯಲ್ಲಿ ತೋರಿಸಿ ಜನರ ಮುಂದಿಟ್ಟಿದ್ದ.
ಒಂದು ದೃಶ್ಯದಲ್ಲಿ ಶಿವನ ವೇಷದಾರಿಯನ್ನು ನಗೆಪಾಟಲಿಗೆ ಗುರಿಯಾಗಿಸುವಂತೆ ತೋರಿಸಿದ್ದನ್ನು ಯಾರು ತಾನೇ ಮರೆತಿದ್ದಾರೆ ಹೇಳಿ ? ಈ ಚಿತ್ರದಲ್ಲಿ ಎಲ್ಲಿಯಾದರೂ ಪಾದ್ರಿಯನ್ನೋ ಅಥವಾ ಮೌಲ್ವಿಯನ್ನೋ ನಗೆಪಾಟಲಿಗೆ ಗುರಿಯಾಗಿಸುವಂತೆ ತೋರಿ ಸುವ ಕೆಲಸವನ್ನು ಅರ್ಮಿ ಖಾನ್ ಮಾಡಲೇ ಇಲ್ಲ, ನಾವುಗಳು ನಮ್ಮವರಿಗೆ ಆದ ಅವಮಾನವನ್ನು ನೋಡಿ ನಕ್ಕು ಸಿನಿಮಾ ನೋಡಿ ಹೊರ ಬಂದಿದ್ದೆವು.
ಒಮ್ಮೆಯಾದರೂ ಯೇಸು ಕ್ರೈಸ್ತನನ್ನು ನಗೆಪಾಟಲಿಗೆ ಗುರಿಯಾಗಿಸುವ ಧೈರ್ಯ ಅಮೀರ್ ಖಾನ್‌ಗೆ ಇದೆಯೇ? ಅಷ್ಟೇ ಯಾಕೆ ತನ್ನದೇ ಧರ್ಮದ ದೇವರನ್ನು ನಗೆಪಾಟಲಿಗೆ ಗುರಿಯಾಗಿಸುವ ಧೈರ್ಯ ಇವನಿಗಿಲ್ಲ, ಅಪ್ಪಿ ತಪ್ಪಿ ಮಾಡಿದ್ದರೆ ಇವರನ್ನು ಮುಸಲ್ಮಾನರು ಸುಮ್ಮನೆ ಬಿಡುತ್ತಿರಲಿಲ್ಲ. ಯೇಸು ಕ್ರೈಸ್ತನನ್ನು ಅವಮಾನಿಸುವ ಹಲವು ಇಂಗ್ಲಿಷ್ ಸಿನಿಮಾಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಕ್ರಿಶ್ಚಿಯನ್ ಸಂಘಟನೆಗಳು ಬಿಡುವುದಿಲ್ಲ. ಅಕ್ಷಯ್ ಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ಒಹ್ ಮೈ ಗಾಡ್‌ನಲ್ಲಿ ಹಿಂದೂ ಧರ್ಮದ ಸ್ವಾಮೀಜಿಗಳನ್ನು ಕಳ್ಳರನ್ನಾಗಿ ತೋರಿಸಲಾಗಿದೆ. ಸಮಾಜಕ್ಕೆೆ ಮಾರಕರನ್ನಾಗಿ ತೋರಿಸ ಲಾಗಿದೆ.
ಹಾಗಾದರೆ ಪಾದ್ರಿಗಳು, ಮೌಲ್ವಿಗಳು ತಪ್ಪು ಮಾಡಿದನ್ನು ತೋರಿಸುವ ಧೈರ್ಯವಿಲ್ಲವೇ ಅಥವಾ ಬೇಕೂ ಅಂತಲೇ ಹಿಂದೂ ಧರ್ಮಾವನ್ನು ಅವಮಾನ ಮಾಡಲಾಗಿದೆಯೇ? ಕಾಶ್ಮೀರದಲ್ಲಿ ಸಹಸ್ರಾರು ಹಿಂದೂ ಪಂಡಿತರುಗಳ ಹತ್ಯೆಯನ್ನು ತೋರಿಸುವ ಚಿತ್ರವನ್ನು ಯಾರೂ ಸಹ ಮಾಡಿಲ್ಲ, ಆದರೆ ಇತ್ತೀಚಿಗೆ ಚಿತ್ರವೊಂದು ತೆರೆ ಕಂಡಿತು. ಅದರ ಟ್ರೈಲರ್ ನೋಡಲು ಪಂಡಿತರ
ಪರವಾಗಿತ್ತು. ಆದರೆ ಸಿನಿಮಾ ಮಾತ್ರ ಅದರ ತದ್ವಿರುದ್ದವಾಗಿತ್ತು. ಆದರೆ 2000ನೇ ಇಸವಿಯಲ್ಲಿ ತೆರೆಕಂಡ ಮಿಷನ್ ಕಾಶ್ಮೀರ್ ಚಿತ್ರದಲ್ಲಿ ಹೃತಿಕ್ ರೋಷನ್ ಒಬ್ಬ ಮುಸ್ಲಿಂ ಹುಡುಗನ ಪಾತ್ರ ಮಾಡಿದ್ದರು. ಪೊಲೀಸರ ಗುಂಡಿಗೆ ಬಲಿಯಾದ ಕುಟುಂಬದ ಬಲಿಪಶುವನ್ನಾಗಿ ನಾಯಕನನ್ನು ತೋರಿಸಲಾಗಿತ್ತು. ಸಂಜಯ್ ದತ್ ಆತನನ್ನು ದತ್ತು ಪಡೆದ ನಂತರ ನಡೆಯುವ ಕಥೆಯಿದು. ಕಾಶ್ಮೀರದಲ್ಲಿ ಅದೆಷ್ಟೋ ಪಂಡಿತರ ಕುಟುಂಬದ ಮಕ್ಕಳು ಇಂದೂ ಸಹ ಬೀದಿಯಲ್ಲಿದ್ದಾರೆ. ಅವರ ಹತ್ಯೆೆಗೆ ಕಾರಣವಾದವರ ಬಗ್ಗೆ ಒಂದು ಸಿನಿಮಾವನ್ನೂ ಮಾಡದೇ, ಕೇವಲ ಮುಸಲ್ಮಾನ್ ಹುಡುಗರ ಬಗ್ಗೆೆ ಸಿನಿಮಾ ಮಾಡಿದ್ದಾರೆ.
ಇವೆಲ್ಲದರ ಹಿಂದೆ ಇರುವುದು ಮತ್ತದೇ ಮುಂಬೈ ಭೂಗತ ಲೋಕದ ಮುಸ್ಲಿಂ ದೊರೆಗಳ ಹಣ ಹೂಡಿಕೆ ಹಾಗೂ ಪಾಕಿಸ್ತಾನಿ ಪ್ರಾಯೋಜಿತ ಸಿನಿಮಾಗಳಲ್ಲಿನ ಹೂಡಿಕೆ. ಇಡೀ ಬಾಲಿವುಡ್ ಸಿನಿಮಾಗಳನ್ನು ಇಂದು ನಿಯಂತ್ರಣ ಮಾಡುತ್ತಿರುವುದು ಇದೆ ಖಾನ್‌ಗಳು. ಮುಂಬೈ ಭೂಗತ ಲೋಕವು ಇಡೀ ಬಾಲಿವುಡ್ ಅಂಗಳವನ್ನೇ ಆವರಿಸಿಕೊಂಡು ಸಿನಿಮಾಗಳಲ್ಲಿ ಹೂಡಿಕೆ ಮಾಡುವ
ಮೂಲಕ ತಮ್ಮ ಧರ್ಮದ ಮೇಲೆ ಹಿಡಿತ ಸಾಧಿಸುತ್ತಿರುವುದು ಸುಳ್ಳಲ್ಲ. ನಾವುಗಳು ನಮ್ಮದೇ ದೇವರುಗಳನ್ನು ನಗೆಪಾಟಲಿಗೆ
ಗುರಿಯಾಗಿಸುವ ಸಿನಿಮಾಗಳನ್ನು ನೋಡಿ ಶಿಳ್ಳೆ, ಚಪ್ಪಾಳೆ ಹೊಡೆಯುತ್ತೇವೆ. ಇದನೆಲ್ಲ ಸಮಾಜದ ಮುಂದೆ ಹೇಳಿದರೆ
ಕಮ್ಯುನಿಸ್ಟ್ ಬುದ್ಧಿಜೀವಿಗಳು, ಖಾನ್‌ಗಳ ಪರವಾಗಿ ನಿಲ್ಲುತ್ತಾರೆ.
ಸುಶಾಂತ್ ಸಿಂಗ್ ರಜಪೂತ್ ಕೊಲೆಯಲ್ಲಿ ನಡೆದಿರುವುದು ಸಹ ಇದೇ, ಖಾನ್‌ಗಳ ಮಧ್ಯೆೆ ಬೆಳೆಯಲು ಆಗದೆ ತನ್ನ ಜೀವ ಕಳೆದು ಕೊಂಡಿದ್ದಾನೆ. 2015ರಲ್ಲಿ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಚಿತ್ರ ನಿಮಗೆಲ್ಲ ನೆನಪಿರಬಹುದು, ಆ
ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದರೆ ಪಾಕಿಸ್ತಾನದವರವನ್ನು ಮುಕ್ತ ಮನಸ್ಸಿನವರಂತೆ ತೋರಿಸಿ, ಭಾರತೀಯರನ್ನು ಕಟ್ಟು ಪಾಡಿಗೆ ಬೆಲೆಕೊಡುವ ಮುಚ್ಚಿದ ಮನಸ್ಸಿನವರಂತೆ ತೋರಿಸಲಾಗಿದೆ.
ಪಾಕಿಸ್ತಾನದಲ್ಲಿ ಸಲ್ಮಾನ್ ಖಾನ್‌ಗೆ ಸಿಗುವ ಸ್ನೇಹಿತನು ಮಗುವನ್ನು ಬಿಟ್ಟು ವಾಪಾಸ್ ಬರುವಾಗ ನಾಯಕನಿಗೆ ಮಾಡುವ ಸಹಾಯವನ್ನು ಯಾರಾದರೂ ಒಪ್ಪಲಾದೀತೇ? ಅಪ್ಪಿ ತಪ್ಪಿ ಯಾರಾದರೂ ಪಾಕಿಸ್ತಾನಿ ಯುವಕ, ಅಕ್ರಮವಾಗಿ ಗಡಿ ದಾಟಿಬಂದ ಹಿಂದೂ ಧರ್ಮದ ಭಾರತೀಯನಿಗೆ ಅಷ್ಟು ಸುಲಭವಾಗಿ ಸಹಾಯ ಮಾಡುತ್ತಾನೆಯೇ? ಕಾಂಗ್ರೆಸ್ಸಿನ ರಮ್ಯಾ ದಿವ್ಯ ಸ್ಪಂದನ
ಬಹುಷ್ಯ ಈ ಸಿನಿಮಾ ನೋಡಿಯೇ ಪಾಕಿಸ್ತಾನವನ್ನು ಸ್ವರ್ಗವೆಂದು ಹೇಳಿರಬೇಕು. ದುರಂತವೆಂದರೆ ಈ ಸಿನಿಮಾದ
ನಿರ್ಮಾಪಕರ ಪಟ್ಟಿಯಲ್ಲಿ, ಕನ್ನಡದ ಖ್ಯಾತ ನಿರ್ಮಾಪಕನ ಹೆಸರಿದೆ. ಈ ಸಿನಿಮಾ ಬಿಡುಗಡೆಯಾದ ಮೇಲೆ ಇಂಡಿಯನ್
ಇನ್ಸ್ಟಿಟ್ಯೂಟ್ ಆ ಮ್ಯಾನೇಜ್’ಮೆಂಟ್ನ ಪ್ರಾಧ್ಯಾಪಕರೊಬ್ಬರು ಒಂದು ಸಂಶೋಧನೆ ನಡೆಸಿದ್ದರು. ಈ ಸಂಶೋಧನೆಯ
ಪ್ರಕಾರ ಇದುವರೆವಿಗೂ ಬಾಲಿವುಡ್‌ನಲ್ಲಿ ತೆರೆಕಂಡಿರುವ ಸಿನಿಮಾಗಳಲ್ಲಿ ಶೇ.74ರಷ್ಟು ಸಿನಿಮಾಗಳಲ್ಲಿ ಸಿಖ್ಖರನ್ನು
ಹಾಸ್ಯನಟ ರನ್ನಾಗಿ ತೋರಿಸಲಾಗಿದೆ.
ಎಂತ ವಿಪರ್ಯಾಸ ನೋಡಿ. ಭಾರತೀಯ ಸೈನ್ಯವೆಂದರೆ ಮೊದಲು ನೆನಪಾಗುವುದು ಸಿಖ್ಖರು. ಅವರಿಲ್ಲದ ಸೈನ್ಯವನ್ನು
ಊಹಿಸಲೂ ಸಾಧ್ಯವಿಲ್ಲ. ವೀರ ಕ್ರಾಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್‌ರನ್ನು ಹೇಗೆ ಮರೆಯಲು ಸಾಧ್ಯ. ಅಪ್ರತಿಮ ಸಾಹಸಿಗರಾದ ಸಿಖ್ಖರನ್ನು ಹಾಸ್ಯನಟರನ್ನಾಗಿ ತೋರಿಸಿ ಜನರ ತಲೆ ಹಾಳುಮಾಡಿದ ಕೀರ್ತಿ ಬಾಲಿವುಡ್‌ನ ಮುಸ್ಲಿಂ ಲೋಕಕ್ಕೆ ಸಲ್ಲಬೇಕು. ಈ ಅಧ್ಯಯನ ಇಲ್ಲಿಗೇ ನಿಲ್ಲಲಿಲ್ಲ ಶೇ.58ರಷ್ಟು ಭ್ರಷ್ಟ ರಾಜಕೀಯ ನಾಯಕರುಗಳ ಹೆಸರು ಬ್ರಾಹ್ಮಣರದ್ದಾಗಿತ್ತು.
ಶೇ.62ರಷ್ಟು ವೈಶ್ಯರನ್ನು ಭ್ರಷ್ಟ ವ್ಯವಹಾರಸ್ಥರನ್ನಾಗಿ ತೋರಿಸಲಾಗಿತ್ತು. ಮಜಾ ಎಂದರೆ ಶೇ.84ರಷ್ಟು ಮುಸಲ್ಮಾನರನ್ನು ಪ್ರಾಮಾಣಿಕ ಹಾಗೂ ಬಲವಾದ ಧಾರ್ಮಿಕ ನಂಬಿಕೆಯಿರುವವರ ಹಾಗೆ ತೋರಿಸಲಾಗಿತ್ತು. ಅಪ್ಪಿ ತಪ್ಪಿ ಮುಸ್ಲಿಂ ಭೂಗತ ನಾಯಕರನ್ನು ಸಿನಿಮಾದಲ್ಲಿ ತೋರಿಸಿದರೂ ಕೂಡ, ಅವರು ಹೃದಯ ಶ್ರೀಮಂತಿಕೆಯುಳ್ಳವರೆಂದು ತೋರಿಸಲಾಗಿತ್ತು. ಮುಸ್ಲಿಂ ಡಾನ್‌ಗಳನ್ನು ಹೃದಯ ವಿಶಾಲವಂತಿಕೆಯವರ ರೀತಿ ಯಲ್ಲಿಯೇ ತೋರಿಸಲಾಗುತ್ತಿತ್ತು.
ನಮಗೆಲ್ಲ ಅನಿಸಬಹುದು ಸಿನಿಮಾವನ್ನು ಸಿನಿಮಾದ ರೀತಿಯಲ್ಲಿ ನೋಡಬೇಕು. ಇಷ್ಟೊಂದು ವಿಶ್ಲೇಷಣೆ ಯಾಕೆ ಬೇಕು? ಹೌದು ಬುದ್ಧಿವಂತರಿಗೆ ಇದೆಲ್ಲ ಅರ್ಥವಾಗುತ್ತದೆ. ಆದರೆ ಶಾಲಾ ಮಕ್ಕಳಿಗೆ ಇದೆಲ್ಲ ಅರ್ಥವಾಗುತ್ತದೆಯೇ? ಕಾಲೇಜಿಗೆ ಹೋಗುವ ಮಕ್ಕಳಿಗೆ ಇದೆಲ್ಲ ಅರ್ಥವಾಗುತ್ತದೆಯೇ? ಒಂದು ಸರ್ವೆಯ ಪ್ರಕಾರ ಶೇ.94ರಷ್ಟು ಶಾಲಾ ಮಕ್ಕಳಿಗೆ ಬಾಲಿವುಡ್‌ನಲ್ಲಿ ತೋರಿಸುವ ಕಥೆಗಳು, ಪಾತ್ರದಾರಿಗಳು, ಸಣ್ಣ ಸಣ್ಣ ಕಥೆಗಳು ತಮ್ಮ ನಿತ್ಯ ಜೀವನದ ಮೇಲೆ ಬಹುದೊಡ್ಡ ಪ್ರಭಾವ ಬೀರಿವೆಯಂತೆ. ಅಲ್ಲಿ
ತೋರಿಸುವುದನ್ನೆಲ್ಲ ನಿಜವೆಂದು ಭಾವಿಸುತ್ತಾರಂತೆ. ಪ್ರಿಯಾಂಕಾ ಚೋಪ್ರಾ ಅಮೆರಿಕ ದೇಶದಲ್ಲಿ ಒಂದು ವೆಬ್ ಸೀರೀಸ್ ನಿರ್ಮಾಣ ಮಾಡಿದ್ದಳು.
ಆ ಸೀರೀಸ್‌ನಲ್ಲಿ ಪೊಲೀಸರ ಗುಂಡಿಗೆ ಬಲಿಯಾಗುವ ಭಯೋತ್ಪಾದಕನ ಕತ್ತಿನಲ್ಲಿ ರುದ್ರಾಕ್ಷಿಯನ್ನು ತೋರಿಸಲಾಗಿತ್ತು. ಯೋಚಿಸಿ ನೋಡಿ ಜಗತ್ತಿನಲ್ಲಿ ಎಲ್ಲಾದರೂ ಸರಿ, ಇದುವರೆಗೂ ಸಿಕ್ಕಿರುವ ಭಯೋತ್ಪಾದಕರ ಕತ್ತಿನಲ್ಲಿ ರುದ್ರಾಕ್ಷಿ ಮಾಲೆಯಿರಲು ಸಾಧ್ಯವೇ? ಒಬ್ಬೇ ಒಬ್ಬ ಹಿಂದೂ ಭಯೋತ್ಪಾದಕನನ್ನು ತೋರಿಸಿ ನೋಡೋಣ? ಯೂರೋಪಿನ ದೇಶಗಳ ಮೇಲೆ ದಾಳಿ ಮಾಡಿದವರ್ಯಾರು? ಅಮೆರಿಕ ದೇಶದ ಅವಳಿ ಕಟ್ಟಡಗಳ ಮೇಲೆ ದಾಳಿ ಮಾಡಿದವರ್ಯಾರು? ಇರಾಕ್, ಇರಾನ್, ಪಾಕಿಸ್ತಾನ, ಅಫಘಾನಿಸ್ತಾನ, ಸಿರಿಯಾ ದೇಶಗಳಲ್ಲಿ ಪ್ರತಿನಿತ್ಯ ನಡೆಯುವ ಭಯೋತ್ಪಾದಕತೆಯ ಕೃತ್ಯವನ್ನು ನಡೆಸುತ್ತಿರುವವರ್ಯಾರು? ಮುಸ್ಲಿಂ ಧರ್ಮದ ಹೆಸರಿನಲ್ಲಿ ಮಾಡುತ್ತಿರುವ ಕೃತ್ಯಗಳನ್ನು ತೋರಿಸಲು ಬಾಲಿವುಡ್ ತಯಾರಿಲ್ಲ. ಯಾಕೆಂದರೆ ಅದನ್ನು ಅಳುತ್ತಿರುವುದು ದುಬೈನಲ್ಲಿರುವ ಮುಂಬೈ ಮುಸ್ಲಿಂ ಡಾನ್‌ಗಳು. ಅವರ ತಾಳಕ್ಕೆ ತಕ್ಕಂತೆ ಶಾರುಖ್ ಖಾನ್, ಸಲ್ಮಾನ್ ಖಾನ್, ಅಮೀರ್ ಖಾನ್ ಕುಣಿಯಲೇ ಬೇಕು. ಅವರಿಲ್ಲವೆಂದರೆ ಬಾಲಿವುಡ್ ಸಿನಿಮಾಗಳಿಗೆ ಹಣವೇ ಬರುವುದಿಲ್ಲ. ಬಾಲಿವುಡ್‌ನಲ್ಲಿರುವ
ಖಾನ್‌ಗಳ ಅಂದ ದರ್ಬಾರ್ ಮುಗಿಸಲಿಲ್ಲವೆಂದರೆ, ಹಿಂದೂ ಧರ್ಮಕ್ಕೆ ಮತ್ತಷ್ಟು ಹೊಡೆತ ಬೀಳುವುದು ಗ್ಯಾರಂಟಿ.
ಕೇಂದ್ರ ಸರಕಾರವು ಸುಶಾಂತ್ ಸಿಂಗ್ ರಜಪೂತ ಪ್ರಕರಣವನ್ನು ಅಷ್ಟು ಗಂಭೀರವಾಗಿ ತೆಗೆದುಕೊಳ್ಳಲು ಕಾರಣ ಬಾಲಿವುಡ್ ನಲ್ಲಿರುವ ಮುಸ್ಲಿಂ ಭೂಗತ ದೊರೆಗಳ ಅಂದ ದರ್ಬಾರ್ ಹಾಗೂ ಇಷ್ಟು ದಶಕಗಳಿಂದ ಹಿಂದೂ ಧರ್ಮಕ್ಕೆ ಮಾಡಿಕೊಂಡು ಬಂದಂಥ ಅವಮಾನಗಳು.