ವಿಶ್ಲೇಷಣೆ
ರಮಾನಂದ ಶರ್ಮಾ
ಹೂಡಿಕೆಗೆ ಸಾಕಷ್ಟು ಹಣವಿದ್ದರೆ ಮತ್ತು ನಷ್ಟವನ್ನು ಭರಿಸುವ ಸಾಮರ್ಥ್ಯ ವಿದ್ದರೆ ಸರಿ, ಇಲ್ಲವಾದರೆ ಅಳೆದು ತೂಗಿ ತೀರ್ಮಾನ ತೆಗೆದು ಕೊಳ್ಳುವುದು ಅಗತ್ಯ
ಇಂದು ಮನುಷ್ಯ ಕೃತ್ರಿಮ ಬುದ್ದಿಮತ್ತೆ ಯನ್ನು ಸೃಷ್ಟಿಸುವಷ್ಟು ಮುಂದುವರಿದಿದ್ದಾನೆ. ಅದರೆ ನಾಳೆಯನ್ನು ಮುಂಗಡವಾಗಿ ತಿಳಿ ಯುವ ವಿಷಯದಲ್ಲಿ ಇನ್ನೂ ಹೆಜ್ಜೆ ಇರಿಸಬೇಕಾಗಿದೆ. ನಾಳೆಗೂ ಮತ್ತು ಅನಿಶ್ಚಿತತೆಗೂ ಒಂದು ರೀತಿಯ ಅವಿನಾಭಾವ ಸಂಬಂಧ ಇದ್ದು, ಈ ನಿಟ್ಟಿನಲ್ಲಿ ಮನುಷ್ಯ ಸದಾ ಪ್ರಶ್ನೆಯಲ್ಲಿಯೇ ಇರುತ್ತಾನೆ. ಹಣದುಬ್ಬರಗಳ ದಿನಗಳಲ್ಲಿ ಮತ್ತು ಬದುಕು ಅನಿಶ್ಚಿತತೆಯ ಗೂಡಾದಾಗ ಮುಂದಿನ ದಿನಗಳ ಹಣಕಾಸು ಬೇಡಿಕೆ ಮತ್ತು ಲಭ್ಯತೆಗಳ ಬಗೆಗೆ ವಿಶೇಷ ಗಮನ ನೀಡಬೇಕಾಗುತ್ತದೆ.
ಬದುಕಿನ ವಿಶೇಷತೆ ಎಂದರೆ, ಕೈಯಲ್ಲಿ ಹಣವಿದ್ದಾಗ ಬಂಧು ಗಳು ಮತ್ತು ಸ್ನೇಹಿತರು ದೊಡ್ಡ ಸಂಖ್ಯೆಯಲ್ಲಿ ಇರುತ್ತಾರೆ. ಖಾಲಿಯಾದಾಗ, ಸ್ನೇಹಿತರು ಮತ್ತು ಬಂಧುಗಳು ಕೂಡಾ ಖಾಲಿಯಾಗುತ್ತಿದ್ದು, ಬೇಡಿಕೆ ಮತ್ತು ಲಭ್ಯತೆಗಳ ಸಮೀಕರಣದ ಸಿಕ್ಕನ್ನು ಸ್ವತಃ ಬಿಡಿಸಿಕೊಳ್ಳಬೇಕಾಗುತ್ತದೆ. ಇಂಥ ಸಂದರ್ಭ ದಲ್ಲಿ ಲಾಗಾಯ್ತನಿಂದ ನಾಲ್ಕು ಕಾಸನ್ನು ಕೂಡಿಟ್ಟಿದ್ದರೆ ಎಂದು ಅನಿಸುತ್ತದೆ. ಈ ಪರಿಕಲ್ಪನೆಯ ಮಗುವೇ ಉಳಿತಾಯ ಮತ್ತು ಹೂಡಿಕೆ ಎನ್ನಬಹುದು. ಉಳಿತಾಯ ಮತ್ತು ಹೂಡಿಕೆ ಹೊಸ ಪರಿಕಲ್ಪನೆಯಲ್ಲ.
ಲಾಗಾಯ್ತನಿಂದ ಜನರು ಕಷ್ಟದ ದಿನಗಳಿಗಾಗಿ, ಮುಂದಿನ ದಿನಗಳಿಗಾಗಿ ಒಂದಿಷ್ಟು ಹಣವನ್ನು ಕೊಡದ, ತಂಬಿಗೆಯಲ್ಲಿಯೋ ಹಾಕಿ ಎಲ್ಲಾ ಗೌಪ್ಯವಾಗಿ ಹೂತಿಡುತ್ತಿದ್ದರು. ಮಹಿಳೆಯರು ಅಡುಗೆ ಮನೆಯ ಸಾಸಿವೆ ಡಬ್ಬದಲ್ಲಿ ಚಿಕ್ಕ ಕಾಸುಗಳನ್ನು ಶೇಖರಿಸಿ ಇಡುತ್ತಿದ್ದರು. ಈ ವ್ಯವಸ್ಥೆಯಲ್ಲಿ ಇಟ್ಟಿದ್ದನ್ನು ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಬಳಸಿಕೊಳ್ಳುತ್ತಿದ್ದರು. ಇದರಲ್ಲಿ ಮುಂದೆ ಬರಬಹುದಾದ ಸಂಕಷ್ಟದ ದಿನಗಳ ಭಯ ಮುಖ್ಯವಾಗಿರುತ್ತಿತ್ತೇ ವಿನಾ ಉಳಿತಾಯದ ಕಲ್ಪನೆ ಇರುತ್ತಿರಲಿಲ್ಲ.
ಆ ದಿನಗಳಲ್ಲಿ ಈ ವ್ಯವಸ್ಥೆ ಜನರು ತಮ್ಮಮಿಗತೆ ಹಣವನ್ನು ಮುಂದಿನ ದಿನಗಳಿಗಾಗಿ ಉಳಿಸಿಕೊಳ್ಳುವುದಕ್ಕೆ ಮಾತ್ರ ಸೀಮಿತವಾಗಿತ್ತು. ಅದು ಸುರಕ್ಷಿತ
ವಾಗಿರಬೇಕು ಮತ್ತು ಯಾವುದೇ ಕಾರಣಕ್ಕೂ ಕೈತಪ್ಪಿ ಹೋಗಬಾರದು ಎನ್ನುವ ಮುನ್ನೆಚ್ಚರಿಕೆ ಇದರ ಹಿಂದೆ ಇರುತ್ತಿತ್ತು. ಈ ರೀತಿ ಉಳಿಸಿ ಕೊಂಡಿರುವು ದಕ್ಕೆ ಯಾವುದೇ ರೀತಿಯ ಕೂಡಿಕೆ (Zbbಜಿಠಿಜಿಟ್ಞ) ಅಗುತ್ತಿರಲಿಲ್ಲ. ಕಾಲಘಟ್ಟದಲ್ಲಿ ಈ ಪದ್ದತಿ ರೂಪಾಂತರವಾಗುತ್ತಾ ಜನರು ಈ ಮಿಗತೆ ಹಣವನ್ನು ಬೇರೆಯವರ ಬಳಿ ಇಟ್ಟು ಅಥವಾ ಅವರಿಗೆ ನೀಡಿ, ಅದನ್ನು ಬಳಸಿಕೊಂಡಿದ್ದಕ್ಕೆ ಬಾಡಿಗೆ ಪಡೆಯತೊಡಗಿದರು. ಈ ಬಾಡಿಗೆ ಮುಂದಿನ ದಿನಗಳಲ್ಲಿ ಬಡ್ಡಿ ಎನ್ನುವ ಹೆಸರು ಪಡೆದುಕೊಂಡಿದ್ದು ಈಗ ಇತಿಹಾಸ.
ತೀರಾ ವೈಯಕ್ತಿವಾಗಿ ಅಲ್ಲಲ್ಲಿ ನಡೆದು ಬರುತ್ತಿದ್ದ ಈ ವ್ಯವಸ್ಥೆಗೆ ಕಾಲ ಕ್ರಮೇಣ ಅನೇಕ ರೀತಿಯ ಸಂಘ-ಸಂಸ್ಥೆಗಳು ಸೇರಿಕೊಂಡಿದ್ದು, ಬ್ಯಾಂಕುಗಳು ಅನಾವರಣಗೊಂಡಿದ್ದು, ಅದಾಯಕ್ಕಾಗಿ ಅಥವಾ ಬಡ್ಡಿಗಾಗಿ ಹಣ ನೀಡುವ ಮತ್ತು ಪಡೆಯುವ ನಿರ್ದಿಷ್ಟ ವ್ಯವಸ್ಥೆ ಜಾರಿಗೆ ಬಂದಿತು. ಈ ವ್ಯವಸ್ಥೆಯಲ್ಲಿ ಅಗತ್ಯ ಇರುವವರು ಬಡ್ಡಿ ನೀಡಿ ಸಾಲ ಪಡೆಯುತ್ತಾರೆ, ಮಿಗತೆ ಹಣ ಇರುವವರು ಇವುಗಳಲ್ಲಿ ಇಟ್ಟು ಬಡ್ಡಿ ಅಥವಾ ಬೇರೆ ರೂಪದ ಆದಾಯವನ್ನು ಪಡೆಯುತ್ತಾರೆ. ಇದರಲ್ಲಿ ಹಣ ಇಡುವವರನ್ನು ಹೂಡಿಕೆದಾರರು ಎನ್ನುತ್ತಾರೆ. ಇಂಥಹ ಹೂಡಿಕೆ ಮಾಡುವವರಿಗಾಗಿ ಇಂದು ದೇಶದಲ್ಲಿ ಸಾವಿರಾರು, ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಇವೆ. ಇಲ್ಲಿ ಹೂಡುವವರಿಗೆ ಮಾರ್ಗದರ್ಶನ ಮಾಡಲು ಸಲಹೆಗಾರರು ಇರುತ್ತಾರೆ.
ಕೆಲವರಿಗೆ ಈ ರೀತಿ ಹೂಡಿಕೆ ಮಾಡುವುದು ಮತ್ತು ಈ ನಿಟ್ಟಿನಲ್ಲಿ ಸಲಹೆ ನೀಡುವುದು ಒಂದು ವೃತ್ತಿಯೂ ಹೌದು ಮತ್ತು ಹಣ ಮಾಡುವ ಹವ್ಯಾಸ
ವೂ ಹೌದು. ಬಹುತೇಕರು ತಮ್ಮಲ್ಲಿರುವ ಮಿಗತೆ ಹಣವನ್ನು ಹೂಡಿಕೆಮಾಡುತ್ತಾರೆ. ಹಾಗೆಯೇ ಸಾಲ ಮಾಡಿ ಹೂಡುವವರೂ ಇಲ್ಲದಿಲ್ಲ. ಇಂಥಹ
ಪ್ರಕರಣಗಳಲ್ಲಿ ಸಾಲದ ವೆಚ್ಚ ಮತ್ತು ಹೂಡಿಕೆಯಿಂದ ಬರಬಹುದಾದ ಹೆಚ್ಚುವರಿ ಆದಾಯದ ಲೆಕ್ಕಾಚಾರ ಇರುತ್ತದೆ.
ಹೂಡಿಕೆ ಸಾಮಾನ್ಯವಾಗಿ ತಿಳಿದಂತೆ ಮಕ್ಕಳಾಟವಲ್ಲ ಮತ್ತು ಅಷ್ಟು ಸುಗಮವೂ ಅಲ್ಲ. ಇದರಲ್ಲಿಯೂ ಕಂದಕಗಳು, ಹೊಂಡಗಳು ಮತ್ತು ತಿರುವುಗಳು
ಸಾಕಷ್ಟು ಇರುತ್ತವೆ. ಹೂಡಿಕೆ ಮಾಡುವವರಿಗೆ ಸಲಹೆಗಾರರರು ಇದ್ದರೂ, ಸ್ವತಹ ಕೆಲವು ಕನಿಷ್ಟ ಸಾಮಾನ್ಯ ತಿಳುವಳಿಕೆಗಳ ಅವಷ್ಯಕತೆ ಇರುತ್ತದೆ. ಈ ಹೂಡಿಕೆ ವಿಚಾರದಲ್ಲಿ ಅಕಾಶವನ್ನು ತೋರಿಸಿ ಪಾತಾಳಕ್ಕೆ ದೂಡಿ ಕೈಎತ್ತುವವರು ಇರುತ್ತಾರೆ. ಹೂಡಿಕೆಯಲ್ಲಿ ಮನೆಮಾಡಿದವರು ಇದ್ದಂತೆ ಮನೆಮಾರಿಕೊಂಡವರೂ ಇzರೆ. ಇಡಬೇಕಾಗುತ್ತದೆ ಮತ್ತು ಹಲವು ಆಯಾಮಗಳಲ್ಲಿ ಚಿಂತಿಸಬೇಕಾಗುತ್ತದೆ.
ಅಕಸ್ಮಾತ್ ಕಳೆದುಕೊಂಡರೆ ಪುನಾಗಳಿಸುವುದು ದುಸ್ತರವಾಗಿರುವುದರಿಂದ ಹೂಡಿಕೆದಾರರು ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗುತ್ತದೆ.
ಇವುಗಳಲ್ಲಿ ಮುಖ್ಯ ವಾದವುಗಳನ್ನು ಹೀಗೆ ಪಟ್ಟಿ ಮಾಡಬಹುದು. ಸುರಕ್ಷಿತತೆ ಮತ್ತು ಭದ್ರತೆ: ಹೂಡಿಕೆ ಮಾಡಿದ ಹಣ ಸುರಕ್ಷಿತವಾಗಿರಬೇಕು, ಭದ್ರವಾಗಿರಬೇಕು ಮತ್ತು ಹಿಂತಿರುಗಿ ಪಡೆಯವಾಗ ಮೋಸವಾಗಬಾರದು, ಎನ್ನುವುದು ಹೂಡಿಕೆ ದಾರರ ಮೊದಲ ಅಧ್ಯತೆಯಾಗಿರುತ್ತದೆ. ಹೂಡಿಕೆ ಮೇಲೆ ರಿಟರ್ನ ಕಡಿಮೆಯಾದರೂ, ಅಥವಾ ಇಲ್ಲದಿದ್ದ ರೂ ಪರವಾಯಿಲ್ಲ, ಹೂಡಿದ ಹಣವಾದರೂ ವಾಪಸ್ಸು ಬರಬೇಕು ಎನ್ನುವುದು ಮೂಲ ಮಂತ್ರವಾಗಿರುತ್ತದೆ.
ಸಾಮಾನ್ಯವಾಗಿ ಹೂಡಿಕೆದಾರರು ಕಷ್ಟಪಟ್ಟು ಉಳಿಸಿದ ಹಣವನ್ನು ಅಥವಾ ಕೆಲವು ಸಂದರ್ಭದಲ್ಲಿ ರಿಟರ್ನ ಹೆಚ್ಚು ದೊರಕುವ ನಿರೀಕ್ಷೆಯಲ್ಲಿ ಸಾಲಮಾಡಿ ಹೂಡಿಕೆ ಮಾಡಿರುತ್ತಾರೆ. ಅಂತೆಯೇ ಈ ನಿಟ್ಟಿನಲ್ಲಿ ಹೂಡಿಕೆದಾರ ಹೆಚ್ಚು ಮುತುವರ್ಜಿ ವಹಿಸುವ ಅವಶ್ಯಕತೆ ಇರುತ್ತದೆ.
ಅದಾಯ: ಹೂಡಿಕೆಯ ಹಿಂದೆ ಹಣ ಸುರಕ್ಷಿತವಾಗಿರಬೇಕು ಮತ್ತು ಭದ್ರವಾಗಿರಬೇಕು ಎನ್ನುವುದು ಆದ್ಯತೆ ಯಾದರೆ ಅದು ಅದರೊಂದಿಗೆ ಅದಾಯ
ವನ್ನೂ ತಂದು ಕೊಡಬೇಕು ಎನ್ನುವುದು ಹೂಡಿಕೆ ದಾರನ ಮುಂದಿನ ಚಿಂತನೆಯಾಗಿರುತ್ತದೆ. ಅಂತೆಯೇ ಹೆಚ್ಚು ಬಡ್ಡಿ ನೀಡುವ ಅಥವಾ ಡಿವಿ ಡೆಂಡ್ ನೀಡುವ ಸ್ಥಳದಲ್ಲಿ ಹೂಡಿಕೆದಾರ ಗಮನ ಇರುತ್ತದೆ. ಯಾರಾದರೂ ಹೆಚ್ಚು ಆದಾಯದ ಆಮಿಷ ತೋರಿಸಿದರೆ, ಅವರ ಹಣಕಾಸು ವ್ಯವಹಾರ, ಅದನ್ನು ನಿಭಾಯಸಿಸುವವರ ಹಿನ್ನೆಲೆ, ಅವರ ಹಿಂದಿನ ಇತಿಹಾಸ, ಸಾದನೆ ಮ ತ್ತು ಲೋಪ – ದೋಷಗಳ ಮೇಲೆ ಕಣ್ಣಿಡಬೇಕಾಗುತ್ತದೆ. ಹೆಚ್ಚಿನ ಆಮಿಷ ತೋರಿಸಿ, ಉಚಿತ ಕೊಡುಗೆಗಳನ್ನು ನೀಡಿ ಆಕಾಶ ವನ್ನೇ ನೀಡುವ ಭರವಸೆ ನೀಡಿ ಕೊನೆಗೆ ಎಂದೂ ಮೇಲೆ ಬರಲಾಗದ ಪಾತಾಳಕ್ಕೆ ದೂಡಿದ ಲಕ್ಷಾಂತರ ಉದಾಹರಣೆ ಮತ್ತು ಅವರ ಮಾತಿಗೆ ಮರುಳಾಗಿ ಅವರ ಬಾಯಲ್ಲಿ ನೀರೂರಿಸುವ ಸ್ಕೀಮ್ ಗಳಿಗೆ ಬೌಲ್ಡ್ ಆಗಿ ಕಳೆದುಕೊಂಡವರ ಕರುಣಾಜನಕ ಕಥೆಗಳು ಹೂಡಿಕೆಯ ಹಿಂದಿನ ಮಾನದಂಡವಾಗಿರಬೇಕು.
ದೀರ್ಘಾವಧಿ ಮತ್ತು ಅಲ್ಪಾವಧಿ ಹೂಡಿಕೆಗಳು: ಹೂಡಿಕೆಯಲ್ಲಿ ಅಲ್ಪಾವಧಿ ಮತ್ತು ದೀರ್ಘಾವದಿ ಎನ್ನುವ ಎರಡು ರೀತಿ ಇರುತ್ತವೆ. ಅಲ್ಪಾವಧಿ
ಹೂಡಿಕೆಯು ಒಂದು ವರ್ಷ ಅಥವಾ ಅದಕ್ಕೂ ಕಡಿಮೆ ಅವಧಿಗೆ ಇದ್ದರೆ, ದೀರ್ಘಾವಽ ಹೂಡಿಕೆಗಳು ವರ್ಷಕಿಂತ ಹೆಚ್ಚು ಅವಧಿಗೆ ಇರುತ್ತವೆ. ಹೆಚ್ಚು
ಹೂಡಿಕೆಯನ್ನು ಆಕರ್ಷಿಸಲು ಹೂಡಿಕೆ ಸ್ವೀಕರಿಸುವವರು ಹೆಚ್ಚು ಅದಾಯ ಬರುವ ಸ್ಕೀಮ್ ನ್ನು ರೂಪಿಸುತ್ತಾರೆ. ಇದು ಒಂದು ರೀತಿಯಲ್ಲಿ ಹೂಡಿಕೆ
ದಾರರಿಗೆ ಅಕರ್ಷಕವಾದರೂ, ಅಕಸ್ಮಾತ್ ಹೂಡಿಕೆ ಯನ್ನು ಹಿಂಪಡೆಯುವ ಅನಿವಾರ್ಯತೆ ಎರಗಿದರೆ, ಅವಧಿಪೂರ್ವ ಹಿಂಪಡೆತಕ್ಕೆ ಅವಕಾಶ ಇರದಿದ್ದರೆ, ಹೂಡಿಕೆದಾರರಿಗೆ ಅನನುಕೂಲವಾಗುತ್ತದೆ ಅಥವಾ ಹಿಂಪಡೆಯುವ ಹಣ ದಲ್ಲಿ ಕಡಿತವಾಗುತ್ತದೆ.
ಅದಕ್ಕೂ ಮೇಲಾಗಿ ದೀರ್ಘಾವದಿ ಹೂಡಿಕೆಯ ಕಾಲಘಟ್ಟದಲ್ಲಿ ಸಂಬಂಽತ ಸಂಸ್ಥೆಯ ಹಣಕಾಸು ಪರಿಸ್ಥಿತಿಯಲ್ಲಿ ಏರು ಪೇರು ಅಗುವದನ್ನು ಅಲ್ಲಗೆಳೆ
ಯಲಾಗದು. ಹಾಗೆಯೇ ಸುದೀರ್ಘ ಅವಧಿಯಲ್ಲಿ ಹೂಡಿಕೆಯ ಸ್ಥಿತಿಗತಿಗಳನ್ನು ವಾಚ್ ಮಾಡಲು ಸಾಧ್ಯವಾಗುವದಿಲ್ಲ. ಬಡ್ಡಿ ದರ ಏರಿಕೆಯಲ್ಲಿರುವಾಗ
ಅಲ್ಪಾವಽ ಹೂಡಿಕೆ (ಮುಖ್ಯವಾಗಿ ಬ್ಯಾಂಕ ಠೇವಣಿ) ಮಾಡಿ, ಬಡ್ಡಿ ದರ ಏರಿಕೆಯ ಲಾಭ ಪಡೆಯಬಹುದು. ದೀರ್ಘಾವಽಯಲ್ಲಿ ಇಟ್ಟರೆ ಠೇವಣಿ
ಅವಽ ಮುಗಿಯುವವರೆಗೆ ಬಡ್ಡಿದರ ಏರಿಕೆಯನ್ನು ಪಡೆಯಲಾಗುವುದಿಲ್ಲ.
ಲಿಕ್ವಿಡಿಟಿ ಅಥವಾ ದೃವ್ಯತೆ: ಕೆಲವು ಹೂಡಿಕೆಗಳನ್ನು ಸಾಮಾನ್ಯವಾಗಿ ಒಂದುನಿರ್ದಿಷ್ಟ ಅವಧಿಗೆ ಮಾಡಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಹಣದ ಅರ್ಜೆನ್ಸಿಇzಗ ಅವುಗಳನ್ನು ನಗದು ಮಾಡಿಕೊಳ್ಳಲು ಕಷ್ಟವಾಗುತ್ತದೆ. ಬ್ಯಾಂಕ್ ಠೇವಣಿ, ನ್ಯಾಷನಲ್ ಸೇವಿಂಗ್ಸ ಸರ್ಟಿ ಫಿಕೇಟ್ ನಂಥಹ ಹೂಡಿಕೆಯಾದರೆ ಅವುಗಳ ಮೇಲೆ ಸಾಲವನ್ನು ಪಡೆದು ತುರ್ತು ಅಗತ್ಯಗಳನ್ನು ಪೂರೈಸಿಕೊಳ್ಳಬಹುದು. ಎಲ್ಲಾ ಹೂಡಿಕೆಯಲ್ಲಿ ಇದು ಸಾಧ್ಯವಿಲ್ಲ.
ಯಾವುದರಲ್ಲಿ ಹೂಡಿಕೆ? ಸರಕಾರಿ ಅಥವಾ ಖಾಸಗಿ?: ಎಲ್ಲಾ ಖಾಸಗಿ ಹೂಡಿಕೆ ಕೇಂದ್ರಗಳನ್ನು ಒಂದೇ ಬ್ರಾಕೆಟ್‌ನಲ್ಲಿ ತೂಗಲು ಸಾದ್ಯವಿಲ್ಲ. ಸಾಕಷ್ಟು ಖಾಸಗಿ ಕ್ಷೇತ್ರಗಳಲ್ಲೂ ಹೂಡಿಕೆ ಲಾಭದಾಯಕವಿದೆ. ಸರಕಾರಿ ಕ್ಷೇತ್ರಗಳಲ್ಲೂ ಹೂಡಿಕೆ ವೈ-ಲ್ಯ ಕಂಡ ಉದಾಹರಣೆಗಳು ಅಲಲ್ಲಿ ಕಾಣುತ್ತವೆ. ಹಲವು ಖಾಸಗಿ ಕಂಪನಿಗಳ ವೈಫಲ್ಯ ಮತ್ತು ಸರ್ಕಾರಿ ಕ್ಷೇತ್ರದಲ್ಲಿ ಹೂಡಿಕೆ ಸುರಕ್ಷ ಎನ್ನುವ ಭಾವನೆ ಮಾರುಕಟ್ಟೆಯಲ್ಲಿ ಇರುವುದರಿಂದ , ಸರಕಾರಿ ಕ್ಷೇತ್ರದತ್ತ ಒಲವು ಹೆಚ್ಚು ಕಾಣುತ್ತದೆ.
ತೆರಿಗೆ ವಿನಾಯಿತಿ: ಜನರಲ್ಲಿ ಉಳಿತಾಯ ಪೃವೃತ್ತಿಯನ್ನು ಜಾಗೃತಗೊಳಿಸಲು ಸರಕಾರ ಹೂಡಿಕೆಯ ಮೇಲೆ ಆದಾಯಕರ ವಿನಾಯಿತಿಯನ್ನು ನೀಡುತ್ತಿದೆ. ಜೀವ ವಿಮಾ, ಅರೋಗ್ಯ ವಿಮಾ ಪ್ರೀಮಿಯಂ ಮೇಲೆ ಹಲವು ಹಂತದ ವರೆಗೆ ತೆರಿಗೆ ವಿನಾಯಿತಿ ಇದೆ. ಕೆಲವು ಕ ಟ್ಟು ಪಾಡುಗಳಿಗೆ ಸೀಮಿತವಾಗಿ ಈ ಪ್ರೀಮಿಯಂ ತೆರಿಗೆ ವಿನಾಯಿತಿಗೆ ಒಳಪಡುತ್ತದೆ. ಹಾಗೆಯೇ ಪ್ರಾವಿಡೆಂಟ್ ಫಂಡ್ ಕಂಟ್ರಿ ಬೂಷನ್ ಮೇಲೂ ಕೆಲವು ವಿನಾಯಿತಿ ಇದೆ. ಇದೂ ಕೂಡಾ ಕೆಲವು ಗರಿಷ್ಟ ಮೊತ್ತಕ್ಕೆ ಸೀಮಿತವಾಗಿದೆ. ಈ ವಿನಾಯಿತಿ ಈಗ ಯಾವ ಅದಾಯ ತೆರಿಗೆ ಪದ್ದತಿಯನ್ನು ಬಳಸಿಕೊಳ್ಳಲಾಗುತ್ತಿದೆ ಎನ್ನುವುದರ ಮೇಲೆ ಇದೆ.
ಬ್ಯಾಂಕ್ ಠೇವಣಿ ನಂತರ ಅತಿ ಸುರಕ್ಷಿತ ಹೂಡಿಕೆ ಎಂದರೆ ಚಿನ್ನ ಮತ್ತು ರಿಯಲಎಸ್ಟೇಟ್ ಎನ್ನುವುದು ಸರ್ವಸಮ್ಮತ ಆಭಿ ಪ್ರಾಯ. ಚಿನ್ನ ಖರೀದಿಸು ವುದು ಎಂದೂ ನಷ್ಟದಾಯಕವಲ್ಲ ಎನ್ನುವುದು ಲಾಗಾಯ್ತನಿಂದ ಕೇಳಿ ಬರುತ್ತಿರುವ ಮಾತು. ಅದು ಸ ತ್ಯವೂ ಹೌದು. ಚಿನ್ನದ ಬೆಲೆ ಎಂದೂ ಉತ್ತರಮುಖಿಯೇ, ಆದಾಯದ ಶೇ.೧೦ ರಷ್ಟನ್ನು ಚಿನ್ನದಲ್ಲಿ ತೊಡಗಿಸಿದರೂ ಅದು ಲಾಭ ದಾಯಕ ಎಂದು ತಜ್ಞರು ಹೇಳುತ್ತಾರಂತೆ. ಹಾಗೆಯೇ ರಿಯಲ್ ಎಸ್ಟೇಟ್ ಕೂಡಾ. ಭೂಮಿ ತಾಯ ಮೇಲೆ ಹಾಕಿದ ಹಣ ಸದಾ ಬೆಳೆಯುತ್ತದೆ ಮಾತು ಎಂದೆಂದಿಗೂ ಪ್ರಸ್ತುತ. ಈ ಮಾತು ಹಳ್ಳಿಯಲ್ಲಿ ಹೇಗೋ? ಆದರೆ, ಪಟ್ಟಣ ನಗರ ಗಳಲ್ಲಿ ನಿತ್ಯ ಸತ್ಯ ಎನ್ನಬಹುದು. ಇದರಲ್ಲಿ ಒಂದೇ ಸಮಸ್ಯೆ ಎಂದರೆ ದೃವ್ಯತೆ ಇಲ್ಲದಿರುವುದು ಅಥವಾ ದೃವ್ಯತೆ ಪಡೆಯಲು ವಿಳಂಬ ವಾಗುವುದು. ಅಕಸ್ಮಾತ್ ಹಣದ ಅನಿವಾರ್ಯತೆ ಬಂದರೆ ಅದನ್ನು ನಗದೀಕರಿಸಿ ಕೊಳ್ಳುವುದು ತುಂಬಾ ವಿಳಂಬ ಪ್ರಕ್ರಿಯೆ. ಹಾಗೆಯೇ ಖಾಲಿ ನಿವೇಶನಗಳು ಇದ್ದರೆ ಅದನ್ನು ರಕ್ಷಿಸಿಕೊಳ್ಳುವುದೂ ತಲೆ ನೋವಿನ ಕೆಲಸ.
ಷೇರು ಮಾರುಕಟ್ಟೆ ಹೂಡಿಕೆಗೆ ಅಲ್ಪಾವಧಿ ಮತ್ತು ದೀರ್ಘಾವಧಿ ಎರಡೂ ರೀತಿಯ ಹೂಡಿಕೆಗೆ ಪ್ರಶಸ್ತವಾದ ಅಯ್ಕೆ. ಅದರೆ, ಇದು ಪ್ರತಿಯೊಬ್ಬರೂ
ಆಡುವ ಅಟವಲ್ಲ. ಇದರಲ್ಲಿ ಅಡುವವರಿಗೆ ಜಾಣ್ಮೆ ಮತ್ತು ಸ್ಕಿಲ್ ಎರಡೂ ಬೇಕು. ಷೇರು ಮಾರುಕಟ್ಟೆ ಬಗೆಗೆ ಅಪಾರ ಜ್ಞಾನ ಇರಬೇಕು. ಷೇರು ಮಾರು ಕಟ್ಟೆ ಅಗೋಚರ ಮಾನದಂಡದ ಮೇಲೆ ಏಳು ಬೀಳುಗಳನ್ನು ಕಾಣುತ್ತಿದ್ದು, ಯಾವುದೇ ನಿರ್ದಿಷ್ಟವಾದ ಮಾನದಂಡ ಇರುವುದಿಲ್ಲ. ಇಂದು ನೂರಕ್ಕೆ ಏರಿದ್ದು ನಾಳೆ ಹತ್ತಕ್ಕೆ ಇಳಿಯಬಹುದು. ಷೇರು ಮಾರುಕಟ್ಟೆಯಲ್ಲಿ ಗಳಿಸಿದವರಷ್ಟೇ ಕಳೆದುಕೊಂಡ ವರು ಇzರಂತೆ. ಷೇರು ಮಾರುಕಟ್ಟೆಯಲ್ಲಿ
ಆಟವಾಡಿ ಮನೆ ಕಟ್ಟಿಸಿ ದವರ ಸಂಖ್ಯೆತಿಳಿಯದು. ಅದರೆ ಮನೆಮಾರಿದವರ ಸಂಖ್ಯೆ ಸಾಕಷ್ಟು ಇದೆಯಂತೆ.
ಮತಗಟ್ಟೆ ಸಮೀಕ್ಷೆ ಮಾರರನೆ ದಿನ ಷೇರು ಮಾರುಕಟ್ಟೆ ೨೫೦೦ ಪಾಯಿಂಟ್ ಏರಿದರೆ ಚುನಾವಣಾ ಪರಿಣಾಮದ ದಿನ ೪೫೦೦ ಪಾಯಿಂಟ್ ಇಳಿದಿತ್ತು. ಹೂಡಿಕೆದಾರರಿಗೆ ಈ ಏರಿಕೆ ಮತ್ತು ಇಳಿಕೆ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ ಮಾರ್ಗದರ್ಶಿಯಾಗಬೇಕು. ಹೂಡಿಕೆ ಸಾಮಾನ್ಯ ಜನರು ತಿಳಿದಷ್ಟು ಸುಲಭವಲ್ಲ. ಹೂಡಿಕೆಗೆ ಸಾಕಷ್ಟು ಹಣವಿದ್ದರೆ ಮತ್ತು ನಷ್ಟವನ್ನು ಭರಿಸುವ ಸಾಮರ್ಥ್ಯ ವಿದ್ದರೆ ಸರಿ. ಹೂಡಿಕೆಗೆ ಹಣದ ಲಭ್ಯತೆ ಮಿತವಾಗಿದ್ದರೆ, ಹೂಡಿಕೆಯ ಮೊದಲು ಸಾಕಷ್ಟು ಸಮೀಕರಣವನ್ನು ಬಿಡಿಸಬೇ ಕಾಗುತ್ತದೆ.
(ಲೇಖಕರು : ಅರ್ಥಿಕ ಮತ್ತು ರಾಜಕೀಯ
ವಿಶ್ಲೇಷಕರು)