ವಿಶ್ಲೇಷಣೆ
ಗೊರೂರು ಶಿವೇಕ್
ವಿಶ್ವದ ಅತ್ಯಂತ ನಾಲ್ಕನೇ ಅತ್ಯಂತ ಶ್ರೀಮಂತ ಕ್ರೀಡಾಕೂಟವಾದ ಮತ್ತು ಭಾರತ ಕ್ರಿಕೆಟ್‌ನಲ್ಲಿ ವಿಶ್ವಗುರು ವಾಗಲು ಕಾರಣವಾದ ಐಪಿಎಲ್ ಪಂದ್ಯಾವಳಿಗಳು ಮತ್ತೆ ಗರಿಗೆದರ ತೊಡಗಿವೆ . ೧೯೮೩ ರಲ್ಲಿ ಅಂಡರ್ ಡಾಗ್‌ಗಳಾಗಿ ಹೋಗಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ವರ್ಲ್ಡ್ ಕಪ್ ನ ಗೆದ್ದು ತಂದ ಕಪಿಲ್ ದೇವ್ ಪಡೆಯ ಸಾಹಸಗಾಥೆಯನ್ನು ತಿಳಿಸುವ ೮೩ ಸಿನಿಮಾ, ೪೦ ವರ್ಷಗಳ ಹಿಂದೆ ವಿಶ್ವ ಕ್ರಿಕೆಟ್ ನಲ್ಲಿ ಭಾರತ ದ ಸ್ಥಾನಮಾನ
ಭಾರತೀಯ ಕ್ರಿಕೆಟ್‌ವರಿಗೆ ದೊರೆಯುತ್ತಿದ್ದ ಸಂಬಳ ಸವಲತ್ತುಗಳು ಅವರು ಎದುರಿಸಬೇಕಾಗಿದ್ದ ಅವಮಾನ, ತವಕ-ತಲ್ಲಣಗಳನ್ನು ಚಿತ್ರ ಸ್ವಲ್ಪಮಟ್ಟಿ ಗಾದರೂ ತೆರೆದಿರುತ್ತದೆ.
ಇಡೀ ಪಂದ್ಯಾವಳಿಗೆ ಅವರಿಗೆ ಸಿಗುತ್ತಿದ್ದ ಹಣ ೨೫,೦೦೦. ತಮ್ಮ ಸ್ನೇಹಿತರಿಗೆ ಟಿಕೆಟ್ ದೊರಕಿಸಲು ಹಣ ಉಳಿಸುವುದಕ್ಕಾಗಿ ತಮ್ಮ ಬಟ್ಟೆಗಳನ್ನು ಲ್ಯಾಂಡ್ರಿಗೆ ನೀಡದೆ ತಾವೇ ಬಟ್ಟೆ ಒಗೆಯುವ ಕಪಿಲದೇವರ ಸನ್ನಿವೇಶವು ಕೂಡ ಚಿತ್ರದಲ್ಲಿದೆ. ಭಾರತೀಯ ಆಟಗಾರರನ್ನು ಕಡೆಗಣ್ಣಿನಿಂದ ನೋಡುತ್ತಿದ್ದ ಅಂದಿನ ಪರಿಸ್ಥಿತಿಯೂ ಕೂಡ ಚಿತ್ರದಲ್ಲಿ ಹಾಜರಾಗಿದೆ.
40 ವರ್ಷಗಳ ನಂತರ ಕರ್ನಾಟಕದ ಆಟಗಾರ ಕೆಎಲ್ ರಾಹುಲ್ 17 ಕೋಟಿಗೆ ಸೇಲ್ ಆಗಿರುವುದು, ಟೆಸ್ಟ್, ಒಂದು ದಿನ, 20/20 ಪಂದ್ಯಗಳಲ್ಲಿ ಆಟ ಗಾರರಿಗೆ ಸಿಗುವ ಕೋಟ್ಯಂತರ ರುಪಾಯಿ ಹಣವನ್ನು ಗಮನಿಸಿದರೆ ಭಾರತೀಯ ಕ್ರಿಕೆಟ್ ಸಂಸ್ಥೆ ಬಿಸಿಸಿಐ ಎಷ್ಟು ಶ್ರೀಮಂತ ಸಂಸ್ಥೆಯಾಗಿದೆ ಎಂದು ಈಗ ಜಗಜ್ಜಾಹೀರಾಗಿದೆ. ವೆಸ್ಟ್ ಇಂಡೀಸ್ ಅ-ನಿಸ್ತಾನ್ ತಂಡಗಳಷ್ಟೇ ಅಲ್ಲದೆ ದಕ್ಷಿಣ ಆಫ್ರಿಕಾ ಆಟಗಾರರು ತಮ್ಮ ತಂಡದೊಂದಿಗೆ ದೇಶಕ್ಕಾಗಿ ಆಡದೆ ಐಪಿಎಲ್‌ನಲ್ಲಿ ಭಾಗವಹಿಸಿರುವುದು, ಅದಕ್ಕೆ ಅಲ್ಲಿನ ಸ್ಥಳೀಯ ಕ್ರಿಕೆಟ್ ಸಂಸ್ಥೆಗಳು ಒಪ್ಪಿಗೆ ನೀಡಿರುವುದು ಐಪಿಎಲ್‌ಗೆ ಹರಿದುಬರುತ್ತಿರುವ ಹಣಕ್ಕೆ ಸಾಕ್ಷಿಯಾಗಿದೆ.
ಒಂದು ಲಕ್ಷ ಕೋಟಿಗೂ ಮೀರಿದ ಹಣದ ಈ ವ್ಯವಹಾರ ಇಡೀ ಜಗತ್ತಿನ ಕ್ರಿಕೆಟ್ ರಂಗದಲ್ಲಿ ಭಾರತೀಯರು ತಮ್ಮ ಆಧಿಪತ್ಯ ಸ್ಥಾಪಿಸಲು ನೆರವಾಗಿ ರುವುದಲ್ಲದೆ, ಉಳಿದ ದೇಶಗಳು ಇದೇ ರೀತಿಯ ಮಾದರಿಯಲ್ಲಿ ಟೂರ್ನಮೆಂಟನ್ನು ನಡೆಸಲು ಸ್ಫೂರ್ತಿಯಾಗಿದೆ. ಆದರೆ ಯಾವುದೇ ಪಂದ್ಯಾವಳಿಗಳು ಐಪಿಎಲ್‌ನ ಸಮೀಪಕ್ಕೂ ಬಾರದಿರುವುದು ಇಡೀ ವಿಶ್ವ ಕ್ರಿಕೆಟ್ ರಂಗ ಭಾರತ ಭಾರತೀಯರ ತಿರುಗಿ ನೋಡುವಂತೆ ಮಾಡಿದೆ ಮತ್ತು ಭಾರತೀಯರ
ಘನತೆಯನ್ನು ಹೆಚ್ಚಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಈಗ ಐಪಿಎನ ೧೬ನೇ ಆವೃತ್ತಿ ಗರಿಗೆದರಲು ಆರಂಭವಾಗಿದೆ. ಇದುವರೆಗಿನ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸುತ್ತಿದ್ದ ಎಂಟು ತಂಡಗಳಿಗೆ ಕಳೆದ ಬಾರಿಯಿಂದ ಮತ್ತೆರಡು ತಂಡಗಳು ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಸೇರ್ಪಡೆಗೊಂಡು ಮತ್ತು ಎಲ್ಲಾ ತಂಡಗಳು ಅನೇಕ ಹಳೆ ಆಟಗಾರರನ್ನು ಕೈಬಿಟ್ಟು ಹೊಸ ಆಟಗಾರರನ್ನು ಸೇರ್ಪಡೆಗೊಳಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ.
ಈ ಬಾರಿಯ ಪಂದ್ಯಾವಳಿಯ ನಿಯಮಗಳನ್ನು ಕೂಡ ಬದಲಾಯಿಸಲಾಗಿದ್ದು ೧೦ ತಂಡಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಪ್ರತಿ ತಂಡಗಳು ತಮ್ಮ ಗುಂಪಿನ ನಾಲ್ಕು ತಂಡಗಳ ಜೊತೆಗೆ ಎರಡು ಪಂದ್ಯಗಳನ್ನು ಆಡುವುದರ ಜೊತೆಗೆ ಮತ್ತೊಂದು ಗುಂಪಿನ ತನ್ನದೇ ಸ್ಥಾನದಲ್ಲಿರುವ ತಂಡದೊಂದಿಗೆ ಎರಡು ಪಂದ್ಯಗಳನ್ನು ಮತ್ತು ಉಳಿದ ತಂಡಗಳೊಂದಿಗೆ ಒಂದು ಪಂದ್ಯದ ರೀತಿ ಒಟ್ಟಾರೆ ೧೪ ಪಂದ್ಯಗಳನ್ನು ಆಡಲಿವೆ. ೭೪ ಪಂದ್ಯ ಗಳು ಕಳೆದ ಎರಡು ವರ್ಷಗಳ ಅಂತಲ್ಲದೆ ಮನೆ ಅಂಗಳದಲ್ಲಿ ಸರಿಸುಮಾರು ಎರಡು ತಿಂಗಳುಗಳ ಕಾಲ ನಡೆಯಲಿದೆ.
ಇದುವರೆಗಿನ ಟೂರ್ನಮೆಂಟ್‌ನಲ್ಲಿ ಎರಡು-ಎರಡಕ್ಕೂ ಹೆಚ್ಚು ಬಾರಿ ಬಾರಿ ಕಪ್ ಎತ್ತಿದ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ಇಂಡಿಯನ್ಸ್ ಕೊಲ್ಕೊತ್ತಾ ನೈಟ್ ರೈಡರ್ಸ್ ಮತ್ತು ಅನೇಕ ಬಾರಿ ಫೈನಲ್ ಹಂತಕ್ಕೇರಿ ನಿರಾಶೆ ಅನುಭವಿಸಿದ ಬೆಂಗಳೂರು ರಾಯಲ್ ಚಾಲೆಂಜರ್ಸ್ ಸೆಮಿ ಫೈನಲ್‌ಗೇರಲು ಮೆಚ್ಚಿನ ತಂಡಗಳಾಗಿವೆ. ಸನ್ ರೈಸರ್ಸ್ ಹೈದ್ರಾಬಾದ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ಈ ಬಾರಿ ತುಂಬಾ ಲೆಕ್ಕಾಚಾರ ಮಾಡಿ ಆಟಗಾರರನ್ನು ಆಯ್ಕೆ
ಮಾಡಿಕೊಂಡಿದ್ದು ತಮ್ಮ ಸುಧಾರಿತ ಆಟದಿಂದ ಸೆಮಿಫೈನಲ್‌ಗೇರುವ ಭರವಸೆಯನ್ನು ಮೂಡಿಸಿವೆ. ಕಳೆದ ಬಾರಿಯ ಚಾಂಪಿಯನ್ಸ್ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟಾನ್ಸ್, ವಿರಾಟ್ ಕೊಯ್ಲಿ ಮಾರ್ಗದರ್ಶನ ದಲ್ಲಿ ಡುಪ್ಲೆಸಿಸ್ ನಾಯಕತ್ವದ ರಾಯಲ್ ಚಾಲೆಂಜರ್ಸ್ ಮತ್ತು ದೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರೋಹಿತ್ ಶರ್ಮ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡಗಳು ಪ್ರೇಕ್ಷಕರ ಫೇವರಿಟ್ ತಂಡಗಳು.
ಈ ತಂಡಗಳು ಮೈದಾನಕ್ಕಿಳಿದಾಗ ಟಿಆರ್‌ಪಿ ಸರ್ರನೆ ಮೇಲೇರುತ್ತದೆ. ಕಾರಣ ಮೂವರು ನಾಯಕ, ಮಾಜಿ ನಾಯಕರು ತಮ್ಮ ಹೊಡಿಬಡಿ ಆಟದಿಂದಾಗಿ ಪ್ರೇಕ್ಷಕರ ಕಣ್ಮಣಿಗಳಾಗಿದ್ದವರು. ಕ್ರಿಕಟ್ ಸಂಘಟಿತ ಆಟವೆಂಬುದನ್ನು ಹಾಗೂ ಅತ್ಯುತ್ತಮ ಆಟಗಾರ ಒಂದೆರಡು ಪಂದ್ಯಗಳನ್ನು ಬದಲಾಯಿಸಬಲ್ಲನೆ ಹೊರತು ಸಂಪೂರ್ಣ ಯಶಸ್ಸು ಸಂಘಟಿತ ಆಟದಿಂದ ಮಾತ್ರ ಸಾಧ್ಯ ಎಂಬು ದನ್ನು ಕಳೆದ ಬಾರಿಯ ಟೂರ್ನ ಮೆಂಟ್ ದೃಢಪಡಿಸಿದೆ. ಆ ತಂಡದ ನಾಯಕರ ವೈಪಲ್ಯ ಇಡೀ ತಂಡದ ಮೇಲೆ ಪರಿಣಾಮ ಉಂಟು ಮಾಡುತ್ತಿದೆ.
ಆರ್‌ಸಿಬಿ ಭಾಗವಹಿಸುವ ಪಂದ್ಯಗಳಿಗೆ ಕಿಕ್ಕಿರಿದ ಜನಸಂದಣಿ ಮತ್ತು ಹೆಚ್ಚಿನ ಕುತೂಹಲ ಸಾಮಾನ್ಯ. ಹಿಂದಿನ ಟೂರ್ನಮೆಂಟ್‌ಗಳಲ್ಲಿ ಪಂದ್ಯ ವೀಕ್ಷಿಸಲು ಕನಿಷ್ಠ ೪ ರಿಂದ ೪೨ ಸಾವಿರದವರೆಗೆ ಶುಲ್ಕವಿದ್ದರೂ ಟಿಕೆಟ್ ಪಡೆಯಲು ಹರಸಾಹಸ ಪಡಬೇಕಾಗಿತ್ತು. ಈ ಬಾರಿಯೂ ಟಿಕೆಟ್ ಬಿಡುಗಡೆ ಯಾದ ಅರ್ಧ ಗಂಟೆಯೊಳಗೆ ಪ್ರಮುಖ ಪಂದ್ಯಗಳ ಅದರಲ್ಲೂ ಆರ್‌ಸಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ , ಮುಂಬೈ ಇಂಡಿಯನ್ಸ್ ಭಾಗವಹಿಸಿರುವ ತಂಡಗಳ ಟಿಕೆಟ್ ಗಳು ಖರ್ಚಾಗಿ ಹೋಗಿರುವುದು ಐಪಿಎಲ್ ಒಂದು ಕಾರ್ಪೊರೇಟ್ ಮಾರ್ಕೆಟ್ ಆಗಿ ಮಾರುಪಟ್ಟು ಭಾರತ ತಂಡ ಭಾಗವಹಿಸುವ ಒಂದು ದಿನ ಹಾಗೂ ೨೦/೨೦ ಪಂದ್ಯಗಳಿಗಿಂತ ಈ ಪಂದ್ಯಗಳನ್ನು ವೀಕ್ಷಿಸುವುದೇ ಘನತೆಯ ವಿಷಯವಾಗಿ ಮಾರ್ಪಟ್ಟಿರುವುದನ್ನು ಗಮನಿಸಬಹುದು.
ಆರ್‌ಸಿಬಿ ತಂಡವನ್ನು ಕರ್ನಾಟಕದ ಬೆಂಗಳೂರಿನ ತಂಡ ವೆಂದು ಇಲ್ಲಿನ ಜನ ಅದನ್ನು ಇಷ್ಟಪಟ್ಟರೂ ಅದರ ಮಾಲೀಕರಿಗೆ ಅದರ ಅರಿವಿಲ್ಲವೋ ಅಥವಾ ಉಡಾಫೆಯೋ ಕರ್ನಾಟಕದ ಯಾವುದೇ ಮಹತ್ವದ ಆಟಗಾರರನ್ನು ಅದು ಈ ಬಾರಿಯೂ ಖರೀದಿಸಿಲ್ಲ. ಇದು ಕರ್ನಾಟಕದ ಕ್ರಿಕೆಟ್
ಅಭಿಮಾನಿಗಳನ್ನು ಹಾಗೂ ವೆಂಕಟೇಶ್ ಪ್ರಸಾದ್, ವಿಜಯ ಭಾರದ್ವಾಜ್ ಅವರಿಂದ ಹೆಚ್ಚು ಟೀಕೆಗೆ ಒಳಗಾಯಿತು. ಪ್ರತಿ ವರ್ಷಕ್ಕಿಂತಲೂ ಈ ವರ್ಷ ಕರ್ನಾಟಕದ ಆಟಗಾರರು ಅತ್ಯಂತ ಕನಿಷ್ಠ ಹಣಕ್ಕೆ ಮಾರಾಟವಾಗಿದ್ದಾರೆ. ಕೆಎಲ್ ರಾಹುಲ್೧೭ ಕೋಟಿಗೆ ಲಕ್ನೋ ಸೂಪರ್ ಜೈಂಟ್ಸ್ , ಮನೋಜ್ ಭಾಂಡಗೆ ೨೦ ಲಕ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು, ವಿಧ್ವತ್ ಕಾವೇರಪ್ಪ ೨೦ ಲಕ್ಷ ಪಂಜಾಬ್ ಕಿಂಗ್ಸ್, ಕೆ ಸಿ ಕಾರಿಯಪ್ಪ ೩೦ ಲಕ್ಷ ರಾಜಸ್ಥಾನ್
ರಾಯಲ್ಸ್, ಪ್ರವೀಣ್ ದುಬೆ, ೫೦ ಲಕ್ಷ ದೆಹಲಿ ಕ್ಯಾಪಿಟಲ್ ತಂಡಕ್ಕೆ, ಕೃಷ್ಣಪ್ಪ ಗೌತಮ್ ೯೦ ಲಕ್ಷ ಲಕ್ನೋ ಸೂಪರ್ ಜೈಂಟ್ಸ್ ಗೆ, ಮನೀಶ್ ಪಾಂಡೆ ೨ ಕೋಟಿ ದೆಹಲಿ ಕ್ಯಾಪಿಟಲ್ ಗೆ, ಅಭಿನವ್ ಮನೋಹರ್ ೨.೬ ಕೋಟಿ ಗುಜರಾತ್ ಟೈಟಾನ್ಸ್, ದೇವದತ್ ಪಡಿಕ್ಕಲ್ ೭.೭೫ ಕೋಟಿ ಕೋಲ್ಕತ್ತಾ ನೈಟ್ ರೈಡರ್ಸ್, ಮಯಾಂಕ್ ಅಗರ್ವಾಲ್ ೮.೨೫ ಕೋಟಿ ಸನ್ ರೈಸರ್ಸ್, ಹೈದರಾಬಾದ್ ಪ್ರಸಿದ್ಧ್ ಕೃಷ್ಣ ೧೦ ಕೋಟಿ. ರಾಜಸ್ಥಾನ್ ರಾಯಲ್ಸ್‌ಗೆ ಮಾರಾಟವಾದ ಆಟಗಾರರು.
ಕರ್ನಾಟಕದ ಪ್ರಮುಖ ಆಟಗಾರರಾಗಿ ಇಂದಿನ ಪಂದ್ಯಾವಳಿಗಳಲ್ಲಿ ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗಿದ್ದ ಮನೀಶ್ ಪಾಂಡೆ, ಮತ್ತು ಕೆ. ಗೌತಮ್, ಅಭಿನವ್ ಮನೋಹರ್ ದೇವದತ್ ಪಡಿಕ್ಕಲ್ ಅಂತ ದೊಡ್ಡ ಮೊತ್ತಕ್ಕೆ ಮಾರಾಟವಾಗದೆ ಬೇರೆ ತಂಡಕ್ಕೆ ಆಡುತ್ತಿದ್ದಾರೆ. ಇದರಿಂದಾಗಿ ಅವರು ಆಡುವ ರಾಜಸ್ಥಾನ್ ರಾಯಲ್ಸ್ ಇಲ್ಲವೇ ಲಕ್ನೋ ಸೂಪರ್ ಜೈಂಟ್ಸ್, ಹೈದರಾಬಾದ್‌ನ ಸನ್ ರೈಸರ್ಸ್ ತಂಡದ ಬೆಂಬಲಕ್ಕೆ ನಿಲ್ಲಲು ಕೆಲ ಕ್ರಿಕೆಟ್ ಪ್ರೇಮಿಗಳು ಯೋಚಿಸುತ್ತಿದ್ದಾರೆ.
ಭಾರತ ಇಲ್ಲವೆ ಕರ್ನಾಟಕ ತಂಡ ಆಡುವಾಗ ನೋಡುಗರ ಬಳಗಕ್ಕೆ ಅಭಿಮಾನ ಮೂಡಲು ತಂಡ ಸ್ಥಳೀಯವಾಗಿರಬೇಕು. ಉಳಿದ ತಂಡಗಳು ಕ್ಕಮಟ್ಟಿಗೆ ಸ್ಥಳೀಯ ಆಟಗಾರರನ್ನು ಆಡಿಸುತ್ತಿವೆಯಾದರೂ ಬೆಂಗಳೂರಿನ ತಂಡದಲ್ಲಿ ಇದು ಮಾಯವಾಗಿದೆ. ಆದರೂ ಇಷ್ಟೊಂದು ಜನರನ್ನೂ ಸೆಳೆಯುತ್ತಿರುವ ಕಾರಣ ಬೆಂಗಳೂರಿನ ಕಾಸ್ಮೋ ಪಾಲಿಟನ್ ಗುಣ ಕಾರಣವಾಗಿದೆ. ಕ್ರಿಕೆನ ಪ್ರಸಾರದ ಹಕ್ಕು ದೊರೆಯದ ಕಾರಣಕ್ಕೆ ಜಿ ಟೀವಿಯ ಸುಭಾಷ್ ಚಂದ್ರ ಜಿ ಸ್ಪೋರ್ಟ್ಸ್ ಅನ್ನು ಆರಂ ಭಿಸಿದ ಸಂದರ್ಭದಲ್ಲಿ ಐಸಿಎಲ್ ಅನ್ನು (ಇಂಡಿಯನ್ ಕ್ರಿಕೆಟ್ ಲೀಗ್) ಆರಂಭಿಸಿದರು. ಅದಕ್ಕೆ ದೊರೆತ ಅಭೂತಪೂರ್ವ
ಬೆಂಬಲ ಪರಿಣಾಮವಾಗಿ ಬಿಸಿಸಿಐ ಆರಂಭಿಸಿದ ಈ ಐಪಿಎಲ್, ಬಿಸಿಸಿಐ ಪಾಲಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ರಾಷ್ಟ್ರಕ್ಕಾಗಿ ಆಡುತ್ತಿದ್ದ ಆಟಗಾರರು ಈಗ ಕಾರ್ಪೊರೇಟ್ ಮಾಲೀಕರ ಇಚ್ಛೆಗನುಗುಣವಾಗಿ ಆಡಬೇಕಾಗಿದೆ.
ಹರಾಜಿಗಿಟ್ಟ ವಸ್ತುವಾದ ಆಟಗಾರರು ಇದರಿಂದಾಗಿ ಕೋಟಿ ಕೋಟಿ ಹಣ ನೋಡುವಂತಾಗಿದೆ. ೧೦ ತಂಡಗಳು ಖರೀದಿಸುವ ಆಟಗಾರರ ಸಂಖ್ಯೆ ಹತ್ತಿರಹತ್ತಿರ ೩೦೦ ತಲುಪುವುದರಿಂದ ವಿದೇಶಿ ಆಟಗಾರರನ್ನು ಹೊರತು ಪಡಿಸಿ ನೂರಕ್ಕೂ ಹೆಚ್ಚು ಆಟಗಾರರಿಗೆ ಅವಕಾಶ ದೊರತಿದೆ. ತಮ್ಮ ಪ್ರತಿಭೆ ಯನ್ನು ಒರೆ ಹಚ್ಚಲು ತನ್ಮೂಲಕ ರಾಷ್ಟ್ರೀಯ ಆಯ್ಕೆದಾರರನ್ನು ಸೆಳೆಯಲು ಸಹಕಾರಿಯಾಗುತ್ತದೆ. ಇವು ಧನಾತ್ಮಕ ಅಂಶಗಳಾದರೆ ೨ ತಿಂಗಳು ಗಳ ಕಾಲ ನಡೆಯುವ ಆಟವೂ ಯುವಜನರ ಪಾಲಿಗೆ ಜೂಜಿನ ತಾಣಗಳಾಗಿ ಮಾರ್ಪಟ್ಟು, ಪಂದ್ಯ ಗೆಲ್ಲುವ, ಸೋಲುವುದಕ್ಕೆ ಪಣ ತೊಡುವುದಿರಲಿ, ಪ್ರತಿ ಬಾಲಿಗೂ ಬರುವ ರನ್‌ಗಳ ಮೇಲೆ ಪಣ ವೊಡ್ಡುವ ಅಂದರ್-ಬಾಹರ್ ಆಟವಾಗಿ ಮಾರ್ಪಟ್ಟು ಅನೇಕರು ಇದರ ಬೆಟ್ಟಿಂಗ್ ಸುಳಿಗೆ ಸಿಲುಕಿ ಪ್ರಾಣವನ್ನು
ಹಾಗೂ ಕೆಲವರು ಊರನ್ನೂ ತೊರೆದಿದ್ದಾರೆ.
ಕ್ರಿಕೆಟ್ ಆಟಗಾರರ ಮೇಲೂ ಈ ಬೆಟ್ಟಿಂಗ್ ದಂಧೆಯ ಕಪ್ಪುಚುಕ್ಕಿಯಿದೆ. ಐಪಿಎಲ್‌ನ ಮೇಲೆ ವಿವಾದ ಕರಿಮೋಡಗಳು ಈಗಾಗಲೇ ಹಾದುಹೋಗಿದ್ದು ಕೆಲವೊಮ್ಮೆ ಪಂದ್ಯಗಳ ಫಲಿತಾಂಶವನ್ನು ಅನುಮಾನದ ಕಣ್ಣುಗಳಿಂದ ನೋಡುವಂತಾಗಿದೆ. ಐಪಿಎಲ್‌ನ ಮತ್ತೊಂದು ವಿಶೇಷವೆಂದರೆ ಈ ಬಾರಿ
ಜಿಯೋ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗುತ್ತಿರುವುದು. ಹಿಂದಿನ ಬಾರಿಯಂತೆ ಕನ್ನಡದಲ್ಲಿ ವೀಕ್ಷಕ ವಿವರಣೆ ದೊರೆ ಯುತ್ತಿರುವುದು. ಪ್ರಾದೇಶಿಕ ವೀಕ್ಷಕ ರನ್ನು ಸೆಳೆಯಲು ಕೈಗೊಂಡ ಸ್ಟಾರ್ ಟಿವಿಯ ಯೋಜನೆ ಸ-ಲವಾದಂತಿದೆ.
ವಿಜಯ ಭಾರದ್ವಾಜ್, ಸುನೀಲ್ ಜೋಷಿ , ವೆಂಕಟೇಶ್ ಪ್ರಸಾದ್, ಜಾನಿ, ಭರತ್ ಚಿಪ್ಲಿ, ಕಣವಿ, ನಿಖಿಲ್ ಮುಂತಾದವರ ವೀಕ್ಷಕ ವಿವರಣೆ, ಅವರು ಬಳಸುವ ಕವಡೆಶಾಸ, ಕಾಲ್ಮುರಿ ಚೆಂಡು, ಆಟಗಾರರ ಕ್ಷಮತೆ… ಮುಂತಾದ ಪದಗಳನ್ನು ಕೇಳಲು ಮುದ ನೀಡುವುದರ ಜೊತೆಗೆ ಕ್ರೀಡೆಯನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು ಸಹಾಯಕವಾಗಿದೆ.
Read E-Paper click here