Saturday, 14th December 2024

ನಿಮ್ಮ ಅಕೌಂಟಿಂದ ದುಡ್ಡು ಕಟ್‌ ಆಯ್ತಾ ?

ತುಂಟರಗಾಳಿ

ಹರಿ ಪರಾಕ್

ಸಿನಿಗನ್ನಡ
ರಾಬರ್ಟ್ ಸಿನಿಮಾ ಬಿಡುಗಡೆ ಆಗಿದೆ. ಅದರ ಜತೆಗೆ ನಿರೀಕ್ಷೆಯಂತೆ ಅದರ ಪೈರೆಸಿ  ಅವತಾರಗಳು ಕೂಡ ಬಿಡುಗಡೆ ಆಗಿವೆ. ಚಿತ್ರದ ನಿರ್ಮಾಪಕ ಉಮಾಪತಿ, ಚಿತ್ರದ ಬಿಡುಗಡೆಗೆ ಮುನ್ನ ಹಲವಾರು ಕಥೆಗಳನ್ನು ಹೇಳಿ ಪೈರೆಸಿ ತಡೆದುಬಿಡುತ್ತೇನೆ ಎಂಬ ಹುಮ್ಮಸ್ಸಿನಲ್ಲಿ ಇದ್ದರು.

ಯಾರಾದರೂ ಪೈರೆಸಿ ಮಾಡಿದರೆ ಅವರನ್ನು ಜೀವನ ಪೂರ್ತಿ ಜೈಲಲ್ಲಿ ಕೊಳೆಯುವಂತೆ ಮಾಡುತ್ತೇನೆ ಎಂದೆ ಹೆದರಿಸಲು ಪ್ರಯತ್ನ ಪಟ್ಟಿದ್ದರು. ಪೈರೆಸಿ ಮಾಡಿದವರಿಗೆ ಜೀವಾವಧಿ ಶಿಕ್ಷೆ ಕೊಡಿಸುವ ಮೂಲಕ ಕಾನೂನನ್ನೇ ಬದಲಾಯಿಸುವ ಸಾಹಸಕ್ಕೆ ಕೈ ಹಾಕಿದ್ದರು. ಆದರೆ ಇದುವರೆಗೂ ಎಂಥ ನ್ಯಾಷನಲ್, ಇಂಟರ್ ನ್ಯಾಷನಲ್ ಸಿನಿಮಾ ಮೇಕರ್‌ಗಳಿಗೇ ಈ ಪೈರೆಸಿ ಮಾಡು ವವರು ಕೈಗೆ ಸಿಕ್ಕಿಲ್ಲ, ಇನ್ನು ಅವರ ಕೈಗೆ ಕೋಳ ತೊಡಿಸಿ ಜೀವಾವಽ ಶಿಕ್ಷೆ ಕೊಡಿಸೋಕೆ ಆಗುತ್ತಾ ಅಂತ ಜನ ನಕ್ಕಿದ್ದರು. ಅದರ ಜತೆಗೆ ಉಮಾಪತಿ ರಾಬರ್ಟ್ ಸಿನಿಮಾದ ಲಿಂಕ್ ಬಂದರೆ ಡಿಲೀಟ್ ಮಾಡಿ, ಯಾಕಂದ್ರೆ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು ನಿಮ್ಮ ಅಕೌಂಟಿನಿಂದ ದುಡ್ಡು ಕಟ್ ಆಗುತ್ತದೆ ಎಂದು ಕಾಗೆ ಹಾರಿಸಲೂ ಪ್ರಯತ್ನ ಪಟ್ಟಿದ್ದರು.

ಈಗ ಅದ್ಯಾವುದೂ ವರ್ಕ್ ಆಗದೆ ಕೊನೆಗೂ ರಾಬರ್ಟ್ ಪೈರೆಸಿಯ ಹಾದಿಯಲ್ಲಿದ್ದಾನೆ. ಉಮಾಪತಿ ಅಂಡ್ ಟೀಮ್ ಈಗ ಹಗಲು ರಾತ್ರಿ, ಹೀಗೆ ಅಪ್ ಲೋಡ್ ಆಗುತ್ತಿರುವ ಲಿಂಕ್ ಗಳನ್ನು ಡಿಲೀಟ್ ಮಾಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಇದುವರೆಗೂ ಯಾರಅಕೌಂಟಿನಿಂದ ಹಣ ಕಟ್ ಆದ ಬಗ್ಗೆಯೂ ಮಾಹಿತಿ ಬಂದಿಲ್ಲ. ಮತ್ತು ಪೈರೆಸಿ ಮಾಡಿದವರು ಉಮಾಪತಿ ಅವರ ಕೈಗೆ ಸಿಕ್ಕಿರುವ ಬಗ್ಗೆಯೂ ವರದಿ ಬಂದಿಲ್ಲ. ಅವರಿಗೆ ಜೀವಾವಧಿ ಶಿಕ್ಷೆ ಕೊಡಿಸುವ ಮಾತಂತೂ ದೂರವೇ ಉಳಿಯಿತು. ಒಟ್ಟಿನಲ್ಲಿ ಉಮಾಪತಿ ಅವರ ಧಮ್ಕಿ ಯಾವ ರೀತಿಯಲ್ಲೂ ವರ್ಕ್ ಔಟ್ ಆಗಿಲ್ಲ. ಇಂಥ ಮಾತುಗಳಿಂದ ಅದು ವರ್ಕ್ ಔಟ್ ಆಗುವುದೂ ಇಲ್ಲ. ಇದು ಒಬ್ಬನ ಬಾಯಿ ಮಾತಿನಿಂದ ಆಗುವ ಕೆಲಸವಲ್ಲ.

ಚಿತ್ರರಂಗ ಒಂದಾಗಿ ಸರಕಾರದ ಬಳಿ ಹೋಗಬೇಕು. ಚೀನಾದವರ ಆಪ್‌ಗಳನ್ನು ಬ್ಯಾನ್ ಮಾಡುವುದು ಅಸಾಧ್ಯ. ಆದಮೇಲೆ,
ಇಂಥ ವೆಬ್ ಸೈಟ್‌ಗಳನ್ನು ಬ್ಯಾನ್ ಮಾಡಿ ಮತ್ತು ಅಲ್ಲಿ ಪೈರೆಸಿ ಚಿತ್ರಗಳನ್ನು ಅಪ್ ಲೋಡ್ ಮಾಡುವವರನ್ನು ಟ್ರೇಸ್ ಮಾಡಿ ಅವರಿಗೆ ಶಿಕ್ಷೆ ಕೊಡಿಸುವ ಕೆಲಸವೂ ಆಗುತ್ತದೆ. ಆದರೆ ಇದು ದೊಡ್ಡ ಮಟ್ಟದ ಆಗಬೇಕಿದೆ. ಅದಕ್ಕೆ ಸಾಂಕ ಪ್ರಯತ್ನ ಮುಖ್ಯ.
ನೆಟ್ ಪಿಕ್ಸ್ ಖೇಮು ಮೊದಲ ಬಾರಿಗೆ ಫ್ಲೈಟ್ ಹತ್ತಿದ್ದ. ಅವನಿಗೆ ಫ್ಲೈಟ್ ಪ್ರಯಾಣ ಅಂದ್ರೆ ಸಿಕ್ಕಾಪಟ್ಟೆ ಭಯ ಇತ್ತು. ಮನೆಯಲ್ಲಿ ಖೇಮು ಶ್ರೀಗೆ ಎಷ್ಟೋ ಸಲ ಹೇಳಿದ, ಇಲ್ಲಾ ಕಣೇ ನಂಗೆ ಭಯ ಆಗುತ್ತೆ, – ಟ್ ಬೇಡ ತಡ ಆದ್ರೂ ಪರವಾಗಿಲ್ಲ, ಟ್ರೈನ್‌ನ ಹೋಗ್ತೀನಿ ಅಂತ ಹೇಳಿದ.

ಆದ್ರೆ ಖೇಮು ಶ್ರೀ, ಅ ರೀ, ಹಿಂಗೇ ಭಯ ಪಟ್ಕೊಂಡ್ರೆ ಜೀವನ ಪೂರ್ತಿ ಹೆದರಿಕೊಂಡೇ ಇರ್ತೀರಿ, ಒಂದ್ಸಲ ಹೋಗಿ ಬನ್ನಿ , ಎಲ್ಲಾ ಅಭ್ಯಾಸ ಆಗುತ್ತೆ ಅಂತ ಬಲವಂತ ಮಾಡಿ ಕಳಿಸಿದಳು. ಅವಳ ಒತ್ತಾಯಕ್ಕೆ ಹೊರಟ ಖೇಮುಗೆ – ಟ್‌ನಲ್ಲಿ ಕೂತಾಗಲೇ ಭಯ ಶುರುವಾಯ್ತು. ಇನ್ನೂ ಫ್ಲೈಟ್ ಜರ್ನಿ ಯಾವಾಗ ಮುಗಿಯುತ್ತೋ ಅನ್ನೋ ಭಯದ ಅಷ್ಟೂ ಹೊತ್ತು ಕೂತಿದ್ದ. ಕೊನೆಗೂ
ಲ್ಯಾಂಡಿಂಗ್ ಸಮಯ ಬಂತು. ಆಗ ಪೈಲಟ್ ಅನೌನ್ಸ್‌ಮೆಂಟ್ ಶುರು ಮಾಡಿದ, ಪ್ರಯಾಣಿಕರೇ ನಾವು ನಮ್ಮ ಪ್ರಯಾಣವನ್ನು ಮುಗಿಸುವ ಹಂತಕ್ಕೆ ಬಂದಿದ್ದೇವೆ, ಇನ್ನೇನು ಕೆಲವೇ ಸಮಯದಲ್ಲಿ ನಾನು ಫ್ಲೈಟ್ ಅನ್ನು ಲ್ಯಾಂಡ್ ಮಾಡುತ್ತೇನೆ, ನಿಮ್ಮ ಸೀಟ್ ಬೆಲ್ಟ ಗಳನ್ನು ಬಿಗಿಗೊಳಿಸಿ.

ಹಾಗೂ…ಎಂದು ಹೇಳುತ್ತಿದ್ದಂತೆ, ಓ ಮೈ ಗಾಡ್…. ಓ ಮೈ ಗಾಡ್ ಎಂಬ ಉದ್ಗಾರ ಬಂದು ಪೈಲೆಟ್ ವಾಯ್ಸ ಕಟ್ ಆಯ್ತು. – ಟ್‌ನಲ್ಲಿದ್ದ ಎಲ್ಲರಿಗೂ ಗಾಬರಿ ಆಯ್ತು. ಇನ್ನು ಖೇಮು ಪರಿಸ್ಥಿತಿ ಕೇಳಬೇಕೆ. ಆದರೆ ಕೆಲವು ಸಮಯದ ನಂತರ ಫ್ಲೈಟ್ ಸೇಫ್ ಆಗಿ ಲ್ಯಾಂಡ್ ಆಯ್ತು.

ಆಗ ಕಾಕ್ ಪಿಟ್‌ನಿಂದ ಹೊರಬಂದ ಪೈಲಟ್, ಪ್ರಯಾಣಿಕರಲ್ಲಿ ಕ್ಷಮೆ ಕೋರುತ್ತೇನೆ, ನನ್ನ ಮಾತು ಕೇಳಿ ನಿಮಗೆ ಗಾಬರಿ ಆಗಿರಬೇಕು. ಆಕ್ಚುವಲಿ, ನಾನು ಮಾತನಾಡುವಾಗ – ಟ್ ಅಟೆಂಡೆಂಟ್ ಒಬ್ಬಳು ನನ್ನ ಪ್ಯಾಂಟ್ ಮೇಲೆ ಬಿಸಿ ಬಿಸಿ ಕಾಫಿ ಚೆಲ್ಲಿ ಬಿಟ್ಟಳು. ನೀವು ನನ್ನ ಪ್ಯಾಂಟ್ ನ ಮುಂಭಾಗ ನೋಡಬೇಕಿತ್ತು ಅಂತ ನಕ್ಕ. ಅದಕ್ಕೆ ಖೇಮು ಹೇಳಿದ ನಿನ್ನ ಪ್ಯಾಂಟ್‌ನ
ಮುಂಭಾಗದ ವಿಷ್ಯ ಬಿಡು, ನನ್ನ ಪ್ಯಾಂಟ್‌ನ ಹಿಂಭಾಗ ನೋಡಬೇಕಿತ್ತು ನೀನು.

ಲೈನ್ ಮ್ಯಾನ್
ಶಿವ ಅರ್ಧನಾರೀಶ್ವರ ಅನ್ನೋದನ್ನ ಹೇಳೋದನ್ನ ಹೇಗೆ?
SHEÊವ
ಯಾರ ಮುಡಿ ಸೇರುತ್ತೆ ಅನ್ನೋದು ಗೊತ್ತಿಲ್ಲದ ಪುಷ್ಪ
Whoವು
ಆಲ್ಕೋಹಾಲ್‌ಗೆ ಮಿಕ್ಸ್ ಮಾಡೋ ಸೋಡಾ
ಉಪ – ದ್ರವ
ಇಂಗ್ಲಿಷ್‌ಗೂ ಕನ್ನಡಕ್ಕೂ ಅಂಥ ವ್ಯತ್ಯಾಸ ಏನಿಲ್ಲ
ಕನ್ನಡದ ಹಟ್ಟಿಯಲ್ಲಿ ಇಂಗ್ಲಿಷಿನ ಹಟ್‌ಗಳು ಇರುತ್ತವೆ.
ದೇವಸ್ಥಾನದಲ್ಲಿ ತಾಯಿತ ಕಟ್ಟೋನು
ಯಂತ್ರಮಾನವ
ಆಗ ತಾನೇ ಹುಟ್ಟಿದ ಕರು
ಹಸುಗೂಸು
ಐ ಫೋನ್ ಅಸಿಸ್ಟೆಂಟ್ ಕನ್ನಡದಲ್ಲಿ ಉತ್ತರ ಕೊಟ್ರೆ ಅದು

ಸಿರಿ – ಗನ್ನಡ
ಎಣ್ಣೆ ಹೊಡೆದು ಯಾರಿಗಾದರೂ ಕಾಲ್ ಮಾಡಿದರೆ ಆ ಕಡೆಯಿಂದ ಬರಬೇಕಾದ ಹಲೋ ಟ್ಯೂನ್
ಯುವರ್ ಬ್ಯಾಲೆನ್ಸ್ ಈಸ್ ಟೂ ಲೋ ಟು ಮೇಕ್ ಎ ಕಾಲ್
ಕ್ಲಾಸ್ ರೂಮ್ ಡೆಸ್ಕಿನ ಮೇಲೆ ಸಾಹಿತ್ಯ ಬರೆಯುವವರು
ಡೆಸ್ಕ್ ಟಾಪ್ ಐಕಾನ್ಸ್
ಅಂಥವರಿಗೆ ಇರಬೇಕಾದ ಸ್ಟಾಂಡರ್ಡ್
ಬೆಂಚ್ ಮಾರ್ಕ್

ಲೂಸ್ ಟಾಕ್
ಯಡಿಯೂರಪ್ಪ (ಕಾಲ್ಪನಿಕ ಸಂದರ್ಶನ)
ಏನ್ ಮುಖ್ಯಮಂತ್ರಿಗಳೇ, ಈ ಸಲ ಬಜೆಟ್‌ನಲ್ಲಿ ಯಾವುದರ ರೇಟ್ ಅನ್ನೂ ಜಾಸ್ತಿ ಮಾಡ್ಲಿಲ್ಲವಲ್ಲ, ಏನ್ ಸಮಾಚಾರ
ಏನ್ ಮಾಡೋದಪ್ಪ, ಎಲ್ಲದರ ರೇಟ್ ಜಾಸ್ತಿ ಮಾಡಿನೂ ಅಧಿಕಾರ ಉಳಿಸ್ಕೊಳ್ಳೋಕೆ ನಾನು ಮೋದಿ ಅಲ್ಲವಲ್ಲ
ಸರಿ, ಅದೇನು, ಇರೋ ಬರೋ ಜಾತಿಗಳಿಗೆಲ್ಲ ಫಂಡ್ ರಿಲೀಸ್ ಮಾಡಿಬಿಟ್ಟಿದ್ದೀರ, ಏನ್ ಸಮಾಚಾರ 

ಇಲ್ಲಾಂದ್ರೆ ರಾಜಕಾರಣ ನಡೀಬೇಕಲ್ಲ, ಅದಕ್ಕೆ ದಾನಗಳಲ್ಲಿ ಶ್ರೇಷ್ಠದಾನ ಅನುದಾನ ಅಂತ ಡಿಸೈಡ್ ಮಾಡಿಬಿಟ್ಟಿದ್ದೀನಿ.
ಅಂದಂಗೆ ನಿಮ್ಮ ಸರಕಾರ ಬೀಳ್ಸೋಕೆ ತುಂಬಾ ಜನ ಪಿತೂರಿ ಮಾಡ್ತಾ ಇದ್ದಾರಂತೆ
ಏನ್ ಮಾಡೋದು ಕರ್ನಾಟಕದ ಮುಖ್ಯಮಂತ್ರಿಗಳ ಹಣೆಬರಹನೇ ಇಷ್ಟು, ಅವರಿಗೆ
ಆಡಳಿತ ನಡೆಸೋಕಿಂತ ಅಧಿಕಾರ ಉಳಿಸಿಕೊಳ್ಳೋದೇ ದೊಡ್ಡ ಕೆಲಸ
ನಿಮ್ಮವರೇ ನಿಮ್ಮನ್ನ ಕೆಳಗಿಳಿಸಬೇಕು ಅಂತ ನೋಡ್ತಾ ಇದ್ದಾರಂತೆ
ಹೌದು, ಏನ್ ಮಾಡೋಕಾಗುತ್ತೆ. ಶತ್ರುಗಳು ವಿರೋಧ್ ಪಕ್ಷಕ್ಕಿಂತ ನಮ್ಮ ಇರೋದ್ ಜಾಸ್ತಿ. ಪಾರ್ಟಿ ಒಳಗೇ ಪಾರ್ಟಿಷನ್ ಜಾಸ್ತಿ.
ಈ ರಾಜಕೀಯ ಹೋಗ್ಲಿ ಬಿಡಿ, ಐಪಿಎಲ್ ಬರ್ತಾ ಇದೆ. ಈ ಸಲನಾದ್ರೂ ಆರ್‌ಸಿಬಿ ಕಪ್ ಗೆಲ್ಲುತ್ತಾ
ಖಂಡಿತಾ ಗೆಲ್ಲಲೇಬೇಕು. ಇಲ್ಲಾ ಅಂದ್ರೆ ಟೂರ್ನಮೆಂಟ್ ಅರ್ಧ ಮುಗಿದ ಮೇಲೆ ಬೇರೆ ಟೀಮಲ್ಲಿ ಯಾರ‍್ಯಾರು ಚೆನ್ನಾಗಿ ಆಡ್ತಾ ಇದ್ದಾರೋ ಅವರನ್ನೆ ಆಪರೇಷನ್ ಕಮಲ ಮಾಡಿಸಿ ಆರ್‌ಸಿಬಿಗೆ ಸೇರಿಸಿಕೊಳ್ಳಿ ಅಂತ ಅಮಿತ್ ಶಾ ಹೇಳಿದ್ದಾರೆ.